Friday, October 1, 2010


ಆಯುವರ್ೇದ ಔಷದಿ ರೋಗನಿರೋದಕ ಶಕ್ತಿಯನ್ನು ಹೊಂದಿದೆ: ನ್ಯಾಯಾದೀಶೆ ಎನ್.ಶೀಲಾ
ಚಿಕ್ಕನಾಯಕನಹಳ್ಳಿ,ಅ.01: ಅನೈರ್ಮಲ್ಯದಿಂದ ದೂರವಿದ್ದು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿತ್ಚದಿಂದ ಕಾಪಾಡಿಕೊಂಡರೆ ಚಿಕೂನ್ಗುನ್ಯ, ಡೆಂಗೆ, ಎಚ್1ಎನ್1ನಂತಹ ಭಯಾನಕಾರಕ ರೋಗಗಳು ಸುಳಿಯುವುದಿಲ್ಲ ಎಂದು ಸಿವಿಲ್ ನ್ಯಾಯಾಧೀಶೆ ಎನ್.ಶೀಲಾ ಹೇಳಿದರು.
ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾ ಆಯುಷ್ ಇಲಾಖೆ, ಸಕರ್ಾರಿ ಆಯುವರ್ೇದ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ನಡೆದ ಆಯುಷ್ ಜಾಗೃತಿ ಶಿಬಿರ ಹಾಗೂ ಔಷದಿ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಆಯುವರ್ೇದ ಔಷದಿಗಳಲ್ಲಿ ರೋಗನಿರೋಧಕ ಶಕ್ತಿಯಿದ್ದು ಹಲವು ಕಾಯಿಲೆಗಳನ್ನು ಆಯುವರ್ೇದ ಔಷದಿಗಳಿಂದ ಪರಿಹರಿಸಬಹುದು ಎಂದ ಅವರು ಜಿಲ್ಲಾ ಆಯುಷ್ ಇಲಾಖೆಯವರು ನಡೆಸುತ್ತಿರುವ ಈ ರೀತಿಯ ಸಮಾರಂಭವನ್ನು ಪ್ರತಿ ಹಳ್ಳಿಯಲ್ಲೂ ನಡೆಸಿ ಗ್ರಾಮಸ್ಥರೇ ಬೆಳಸುವ ಗಿಡಮೂಲಿಕೆಗಳಿಂದ ರೋಗವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂದು ತಿಳಿಸಬೇಕು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಹೊನ್ನತ್ತಿ ಡಿ.ರಾಮರಾವ್ ಮಾತನಾಡಿ ಅಮೃತಬಳ್ಳಿ, ತುಳಸಿಯಂತಹ ಎಲೆ ಸೇವಿಸುವುದರಿಂದ ಪ್ರಾಣವಾಯು ಮತ್ತು ಹಲವು ಕಾಯಿಲೆಗಳಿಂದ ನರಳುತ್ತಿರುವ ಜನರನ್ನು ಕಾಯಿಲೆಗಳಿಂದ ಪರಿಹರಿಸುವುದೇ ಆಯುಷ್ ಇಲಾಖೆ ಉದ್ದೇಶ ಎಂದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್.ಗೋಪಾಲಕೃಷ್ಣ, ಸಕರ್ಾರಿ ಅಭಿಯೋಜಕ ಆರ್.ಟಿ.ಆಶಾ, ವಕೀಲರಾದ ಸೀತಾರಾಮಯ್ಯ, ಸಿ.ರಾಜಶೇಖರ್. ವೈದ್ಯಾಧಿಕಾರಿಗಳಾದ ಹೆಚ್.ಸಂಜೀವಮೂತರ್ಿ, ಶ್ರೀಧರ್, ಸಿ.ದೇವೇಂದ್ರಪ್ಪ ಯೋಗ ಶಿಕ್ಷಕ ಭುವನಸುಂದರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಕೀಲ ದಿಲೀಪ್ ಸ್ವಾಗತಿಸಿ, ಹನುಮಂತಯ್ಯ ನಿರೂಪಿಸಿದರು.

ಶಿಕ್ಷಕರ ಬೇಡಿಕೆ ದಿನಾಚರಣೆ ಆಚರಿಸಲು ಕರೆ
ಚಿಕ್ಕನಾಯಕನಹಳ್ಳಿ,ಅ.01: ಪ್ರಾಥಮಿಕ ಶಾಲಾ ಶಿಕ್ಷಕರು ಶಾಲಾ ಹಂತದಲ್ಲಿ 10 ಅಂಶಗಳ ಪಟ್ಟಿಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಿ ಅಕ್ಟೋಬರ್ 5ರಂದು ಶಿಕ್ಷಕರ ಬೇಡಿಕೆ ದಿನಾಚರಣೆಯಾಗಿ ಆಚರಿಸಲು ತಾ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಕರ್ಾರದ ಗಮನ ಸೆಳೆಯಲು ಶಿಕ್ಷಕರ ರಚಿಸಿರುವ ಬೇಡಿಕೆಳೆಂದರೆ 200ರೂ ವಿಶೇಷ ವೇತನವನ್ನು ವಿಲೀನಗೊಳಿಸಿಬೇಕು, ಮುಖ್ಯೋಪಾಧ್ಯಾಯರಿಗೆ ಆಯ್ಕೆ ದಜರ್ೆಯ ವೇತನ ಶ್ರೇಣಿ ನೀಡಬೇಕು. ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಾಗಿ ಬಂದ ಶಿಕ್ಷಕರಿಗೆ 10.15.20 ವರ್ಷದ ಆಥರ್ಿಕ ಸೌಲಭ್ಯ ನೀಡಬೇಕು, ಸಿ.ಆರ್.ಪಿ, ಬಿ.ಆರ್.ಪಿ ಹುದ್ದೆಗಳನ್ನು ಮುಖ್ಯೋಪಾಧ್ಯಾಯರ ಹುದ್ದೆಗಳನ್ನಾಗಿ ಪರಿಗಣಿಸಿ, ಬಿ.ಎ, ಬಿ.ಇಡಿ, ಆದ ಶಿಕ್ಷಕರಿಗೆ ಈಗ ನೀಡುವ ಬಡ್ತಿ ಪ್ರಮಾಣವನ್ನು 50ರಿಂದ 75ಕ್ಕೆ ಹೆಚ್ಚಿಸಿ ಮತ್ತು ಪ್ರೌಡಶಾಲಾ ಮುಖ್ಯೋಪಾಧ್ಯಾಯರ ಹುದ್ದೆಗೆ ಬಡ್ತಿ ನೀಡವಾಗ ಶೇ.10ರಷ್ಟು ಮೀಸಲಾತಿ ನೀಡಬೇಕು, ಸಮಾನ ಶಾಲಾ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕು.
ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಅವಧಿಯನ್ನು ಗುತ್ತಿಗೆ ಶಿಕ್ಷಕರ ಗುತ್ತಿಗೆ ಅವಧಿಯನ್ನು ನಿರಂತರ ಸೇವೆ ಎಂದು ಪರಿಗಣಿಸಿ ಆಥರ್ಿಕ ಸೌಲಭ್ಯವನ್ನು ಒಳಗೊಂಡು ಎಲ್ಲಾ ಸೌಲಭ್ಯ ನೀಡಬೇಕು, ನಲಿ ಕಲಿ ಯೋಜನೆಯನ್ನು 3ಮತ್ತು 4ನೇ ತರಗತಿಗೆ ವಿಸ್ತರಿಸಬಾರದು. ಸೇವಾ ಜೇಷ್ಠತೆಯನ್ನು ದೈಹಿಕ ಶಿಕ್ಷಕರಿಗೆ, ಉದರ್ು ಶಿಕ್ಷಕರಿಗೆ ಶಿಕ್ಷಣ ಸಂಯೋಜಕ ಹುದ್ದೆಗಳನ್ನು ನೀಡಬೇಕು ಮತ್ತು ಎಲ್ಲಾ ರೀತಿಯ ಬಡ್ತಿ ಅವಕಾಶಗಳನ್ನು ನೀಡಬೇಕು. ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಹಕ್ಕು ನೀಡಿ, ಸಕರ್ಾರದ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಈ ಹಿಂದಿನ ಪಿಂಚಣಿ ಯೋಜನೆಯನ್ನು ಮುಂದುವರಿಸಬೇಕು. ಎಂದು ತಿಳಿಸಿದ ಅವರು ತಾಲೂಕಿನಲ್ಲಿ ಹೊಸದಾಗಿ ರಚಿತವಾದ ಸಂಘಗಳು ಯಾವುದೇ ದೇಯೋದ್ದೇಶಗಳನ್ನು ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಶಿಕ್ಷಕರ ಸಮಸ್ಯಗಳ ಬಗ್ಗೆ ಹೆಚ್ಚಿನ ಸಲಹೆ ಮರ್ಗದರ್ಶನ ಪಡೆಯಲು, ಚಚರ್ಿಸಲು ಶ್ರೀ ದುಗರ್ಾದೇವಿ ಬೆಟ್ಟ ಹರೇನಹಳ್ಳಿ ಗೇಟ್ಹತ್ತಿರ ಬೆಳಗ್ಗೆ 10ಕ್ಕೆ ತಾಲೂಕಿನ ಎಲ್ಲಾ ಶಿಕ್ಷಕರನ್ನು ಆಹ್ವಾನಿಸಲಾಗಿದೆ ಎಂದು ತಾ.ಪ್ರಾ.ಶಾ.ಶಿ.ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ ಕೋರಿದ್ದಾರೆ.