Friday, May 17, 2013

ಬಿಸಿಎಂ ವಿದ್ಯಾಥರ್ಿ ನಿಲಯಕ್ಕೆ ಪ್ರವೇಶವಕಾಶ
ಚಿಕ್ಕನಾಯಕನಹಳ್ಳಿ,ಮೇ.17 : 2013-14ನೇ ಸಾಲಿಗೆ ಸಕರ್ಾರಿ ಹಾಗೂ ಅನುದಾನಿತ ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕನಾಯಕನಹಳ್ಳಿ, ಕಂದಿಕೆರೆ, ಹುಳಿಯಾರು, ತಿಮ್ಮನಹಳ್ಳಿ, ಹೊಯ್ಸಳಕಟ್ಟೆಯ ಸಕರ್ಾರಿ ಬಿ.ಸಿ.ಎಂ. ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿನಿಲಯಗಳಲ್ಲಿ ಅಜರ್ಿ ಆಹ್ವಾನಿಸಿದ್ದು ನಿಗದಿತ ಅಜರ್ಿನಮೂನೆಗಳನ್ನು ಉಚಿತವಾಗಿ ಬಿ.ಸಿ.ಎಂ ಇಲಾಖೆಯ ವಿಸ್ತರಣಾಧಿಕಾರಿಗಳು ಇವರಿಂದ ಪಡೆಯಬಹುದಾಗಿದ್ದು ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 5ರ ಸಂಜೆ 5.30ರೊಳಗಾಗಿ ಕಛೇರಿಗೆ ಸಂಬಂಧಿಸಿದ ನಿಲಯ ಮೇಲ್ವಿಚಾರಕರಿಗೆ ದಾಖಲಾತಿಗಳೊಂದಿಗೆ ಸಲ್ಲಿಸಬೇಕು, ಅಪೂರ್ಣವಾದ ಹಾಗೂ ತಡವಾಗಿ ಬಂದಂತಹ ಅಜರ್ಿಗಳನ್ನು ತಿರಸ್ಕರಿಸಲಾಗುವುದು, ನವೀಕರಣ ವಿದ್ಯಾಥರ್ಿಗಳು ಮೇ 29ರೊಳಗೆ ಅಜರ್ಿಯನ್ನು ಸಲ್ಲಿಸಲುಬೇಕು.
ಪ್ರವೇಶ ಬಯಸುವ ವಿದ್ಯಾಥರ್ಿ ತಹಶೀಲ್ದಾರ್ರವರಿಂದ ಪಡೆದ ಜಾತಿ/ಆದಾಯ ಪ್ರಮಾಣ ಪತ್ರ, ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರವೇಶ ದೃಢೀಕರಣ ಪತ್ರ, ಗ್ರಾಮ ಪಂಚಾಯಿತಿ ಕಾರ್ಯದಶರ್ಿಯಿಂದ ಪಡೆದ ವಸತಿ ನಿಲಯಕ್ಕೂ ವಿದ್ಯಾಥರ್ಿಯ ಸ್ವಂತ ಸ್ಥಳಕ್ಕೂ ಇರುವ ಅಂತರದ ಸಟರ್ಿಫಿಕೇಟ್, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ ಪ್ರತಿ, ವಿದ್ಯಾಥರ್ಿಯ ಪಾಸ್ಪೋಟರ್್ ಅಳತೆಯ ಇತ್ತೀಚಿನ ಎರಡು ಭಾವಚಿತ್ರಗಳು ಸಲ್ಲಿಸಬೇಕು.
ಅಜರ್ಿ ಸಲ್ಲಿಸ ಬಯಸುವ ವಿದ್ಯಾಥರ್ಿಗಳು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತೀರ್ಣರಾಗಿರತಕ್ಕದ್ದು, ಅಭ್ಯಥರ್ಿಯ ಪೋಷಕರ ವಾಷರ್ಿಕ ವರಮಾನ 2ಎ, 2ಬಿ, 3ಎ, 3ಬಿ ವರ್ಗದವರು 44500/-ರೊಳಗೆ, ಪ್ರವರ್ಗ-1ರ ವಿದ್ಯಾಥರ್ಿಗಳಿಗೆ 100000/-ರೊಳಗೆ ಹಾಗೂ ಪರಿಶಿಷ್ಠ ಜಾತಿ/ ಪರಿಶಿಷ್ಟವರ್ಗಕ್ಕೆ ಸೇರಿದ ವಿದ್ಯಾಥರ್ಿಗಳಿಗೆ ರೂ.200000/-ರೊಳಗೆ ವರಮಾನ ಇರಬೇಕು, ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪ್ರವೇಶಕ್ಕೆ ಅರ್ಹರಾಗಿದ್ದು ಶೈಕ್ಷಣಿಕ ಸಂಸ್ಥೆಯಿಂದ 5.ಕಿ.ಮೀ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಪ್ರವೇಶವನ್ನು ನೀಡಲಾಗುವುದು, ವಿದ್ಯಾಥರ್ಿನಿಲಯಗಳಲ್ಲಿ ಪ್ರವೇಶ ಪಡೆದವರು ಯಾವುದೇ ರೀತಿಯ ವಿದ್ಯಾಥರ್ಿ ವೇತನ ಪಡೆಯಲು ಅರ್ಹರಿರುವುದಿಲ್ಲ, ನವೀಕರಣ ವಿದ್ಯಾಥರ್ಿಗಳು ಪೇಲ್ ಆಗಿದ್ದಲ್ಲಿ ಅಂತಹ ವಿದ್ಯಾಥರ್ಿಗಳನ್ನು ವಿದ್ಯಾಥರ್ಿ ನಿಲಯದಲ್ಲಿ ಮುಂದುವರೆಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.