Monday, August 8, 2011ತಾತಯ್ಯನ ಗೋರಿಯನ್ನು ಅಭಿವೃದ್ದಿಗೊಳಿಸುವ ಮೂಲಕ ಪ್ರವಾಸಿ ತಾಣವನ್ನಾಗಿಸಿಚಿಕ್ಕನಾಯಕನಹಳ್ಳಿ,ಆ.08 : ಕೋಮು ಸೌಹಾರ್ಧತೆಗೆ ಹೆಸರುವಾಸಿಯಾಗಿರುವ ನಮ್ಮ ತಾಲೂಕಿನಲ್ಲಿ ಶಾದಿ ಮಹಲ್ ಕಾಮಗಾರಿಗೆ ಅಲ್ಪಸಂಖ್ಯಾತರ ಇಲಾಖೆ ನೀಡಿರುವ ಇಪ್ಪತ್ತು ಲಕ್ಷ ಅನುದಾನದ ಜೊತೆಗೆ ಶಾಸಕರ ನಿಧಿಯಿಂದಲೂ ಅನುದಾನ ನೀಡಲಿದ್ದು, ಇಲ್ಲೊಂದು ಸುಂದರ ಕಲ್ಯಾಣ ಭವನ ನಿಮರ್ಾಣವಾಗಬೇಕೆಂದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು. ಪಟ್ಟಣದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿ ದಗರ್ಾ(ತಾತಯ್ಯನ ಗೋರಿ) ಕಮಿಟಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶಾದಿ ಮಹಲ್ ಕಟ್ಟಡದ ಶಂಖುಸ್ಥಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನವು ತಾಲ್ಲೂಕಿನ ಅಲ್ಪಸಂಖ್ಯಾತ ಜನತೆಯ ಅಲ್ಪ ಭಾಗದ ಆಸೆ ಮಾತ್ರ ನೆರವೇರಿದಂತಾಗಿದೆ ಎಂದರಲ್ಲದೆ, ಸಾರ್ವಜನಿಕರು ಈ ಭವನವನ್ನು ಉತ್ತಮ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಿ ಎಂದರಲ್ಲದೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಲವು ಅನುದಾನಗಳು ಬಿಡುಗಡೆಯಾಗಲಿವೆ, ನಾನೂ ಸಹ ಈ ಇಲಾಖೆ ಸಮಿತಿಯ ಸದಸ್ಯನಾಗಿರುವುದರಿಂದ ತಾಲ್ಲೂಕಿನ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದರು. ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಶಂಖುಸ್ಥಾಪನೆಗೊಂಡ ಶಾದಿಮಹಲ್ ಸರ್ವಧಮರ್ಿಯರು ಕೋಮುಸೌಹಾರ್ಧತೆಯಿಂದ ಬಳಸಿಕೊಳ್ಳಿ ಎಂದರಲ್ಲದೆ, ಇದೊಂದು ಪುಣ್ಯಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ತಾತಯ್ಯನವರ ಕ್ಷೇತ್ರವನ್ನು ಪ್ರವಾಸಿ ತಾಣವನ್ನಾಗಿ ಮಾಪರ್ಾಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು, ಶಾದಿ ಮಹಲ್ಗೆ 20ಲಕ್ಷರೂ ಇಲಾಖೆಯಿಂದ ಬಿಡುಗಡೆಯಾಗಿದ್ದು 5ಲಕ್ಷರೂಗಳ ಚೆಕ್ಕನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇವೆ ಎಂದರು.ಜಿಲ್ಲಾ ವಕ್ಪ್ ಬೋಡರ್್ ಮಾಜಿ ಅಧ್ಯಕ್ಷ ಮುಸ್ತಾಕ ಅಹಮದ್ ಮಾತನಾಡಿ ವಿಭಿನ್ನತೆಯಲ್ಲಿ ಐಕ್ಯತೆ ಹೊಂದಿರುವ ತಾಲ್ಲೂಕಿನಲ್ಲಿ ಹಲವು ಧರ್ಮದವರು ಸಮಾನತೆಯಿಂದ ಕಾರ್ಯನಿರ್ವಹಿಸುತ್ತಿರುವುದು ತಾಲ್ಲೂಕಿನ ಹೆಮ್ಮೆಯ ವಿಷಯವಾಗಿದೆ ಎಂದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಕನ್ನಡ ಸಂಘದ ವೇದಿಕೆಯ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯರಾದ ಸಿ.ಬಸವರಾಜು, ಬಾಬುಸಾಹೇಬ್, ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಉಪಾಧ್ಯಕ್ಷ ರವಿ(ಮೈನ್ಸ್), ಗೋರಿ ಕಮಿಟಿ ಕಾಯರ್ಾಧ್ಯಕ್ಷ ಟಿ.ರಾಮಯ್ಯ, ಗೋರಿ ಕೆಲಸಗಳ ಉಸ್ತುವಾರಿ ಸಿ.ಕೆ.ಘನ್ನಿಸಾಬ್, ಮಹಮದ್ ಖಲಂದರ್, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.
ಮರ ಕಡಿಯುವುದನ್ನು ನಿಲ್ಲಿಸಿ,ಸಸಿ ಬೆಳೆಸಲು ಪ್ರೋತ್ಸಾಹಿಸಿಚಿಕ್ಕನಾಯಕನಹಳ್ಳಿ,ಆ.08 : ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಗೂ ಆಹಾರ, ನೀರು ಮುಖ್ಯವಾಗಿದ್ದು ಆಹಾರ ನೀರು ಇಲ್ಲದೆ ವಾರಗಟ್ಟಲೆ ಬದುಕಿರುವವರಿದ್ದಾರೆ ಆದರೆ ಗಾಳಿ ಇಲ್ಲದೆ ಯಾರೊಬ್ಬರು ಬದುಕಲಾರರು ಎಂದು ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಿಳಿಸಿದರು. ಪಟ್ಟಣದ ಕನ್ನಡ ಸಂಘದ ವದಿಕೆಯ ಮುಂಭಾಗದಲ್ಲಿ ಸವರ್ೋದಯ ಪೈನ್ಸಾನ್ಸ್ ಪ್ರಾರೋಂಭೋತ್ಸವ ಹಾಗೂ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವಿಗೆ ಆಮ್ಲಜನಕ ಅವಶ್ಯವಾಗಿದ್ದು ಉಸಿರಾಡುವುದಕ್ಕಾಗಿಯಾದರೂ ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಿಬೇಕಿದೆ ಮರಗಳನ್ನು ಕಡಿಯುತ್ತಿರುವುದು ಇತ್ತೀಚಿಗೆ ಹೆಚ್ಚಿದ್ದು ಮರಗಳ ರಕ್ಷಣೆಗಾಗಿ ನಾವು ಮುಂದಾಗಬೇಕು ಎಂದರಲ್ಲದೆ ಗಣಿಗಾರಿಕೆಯಿಂದ ಗಿಡಮರಗಳು ನಾಶವಾಗುತ್ತಿದ್ದು ಪ್ರತಿಯೊಬ್ಬರು ಗಿಡನೆಟ್ಟುಬೆಳೆಸಬೇಕಾಗಿದೆ ಎಂದ ಅವರು ಈ ಸಂಘವು ಯಶಸ್ವಿಯಾಗಿ ಬೆಳೆಯಲಿ ಬಡವರಿಗೆ ಅನೂಕೂಲವಾಗಿರಲಿ ಯಾರೇ ಆಗಿರಲಿ ನಮಗೆ ಸಹಾಯಮಾಡಿದವರನ್ನು ಕೊನೆಯವರೆಗೆ ಮರೆಯಾಬಾರದು ಎಂದರು. ಪುರಸಭೆಯ ಸದಸ್ಯರಾದ ರೇಣುಕಾ ಗುರುಮೂತರ್ಿ ಮಾತನಾಡುತ್ತಾ ಅತಿ ಹೆಚ್ಚು ಮಹಿಳೆಯರೆ ಸಂಘ ಸಂಸ್ಥೆಗಳಲ್ಲಿ ಹೆಚ್ಚಾಗಿದ್ದಾರೆ, ಸಂಘವು ಮೊದಲು ಸ್ವಸಹಾಯ ಸಂಘದಿಂದ ನೆಡೆದುಕೊಂಡು ಬಂದು ಮೂರನೇ ವರ್ಷದ ನಂತರ ಸವರ್ೋದಯ ಪೈನ್ಸಾನ್ಸ್ ಮಾಡಿರುವುದು ಬಡವರಿಗೆ ಅನೂಕೂಲವಾಗಬೇಕಾಗಿದೆ ಎಂದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಧ್ಯಕ್ಷ ರವಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್ ನಟರಾಜು, ಸಹಕಾರಭಿವೃದ್ದಿ ಅಧಿಕಾರಿ ಮುಕುಂದಯ್ಯ ರಾಮಕೃಷ್ಣಯ್ಯ, ಮಹಲಿಂಗಯ್ಯ ,ಮಂಜುನಾಥ್ ಉಪಸ್ಥಿತರಿದ್ದರು.