Thursday, June 10, 2010

ಕನಕ ವಿದ್ಯಾಭಿವೃದ್ದಿ ನಿಧಿಯಿಂದ ವಿದ್ಯಾಥರ್ಿಗಳಿಗೆ ವಿವಿಧ ಸವಲತ್ತು ವಿತರಣೆ
ಚಿಕ್ಕನಾಯಕನಹಳ್ಳಿ,ಜೂ.10: ಕನಕ ವಿದ್ಯಾಭಿವೃದ್ದಿ ನಿಧಿ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ, ಉಚಿತ ನೋಟ್ ಬುಕ್ ವಿತರಣೆ, ಕಾಲೇಜು ಶುಲ್ಕ ಪಾವತಿ, ಸಹಾಯ ಧನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಕಾರ್ಯದಶರ್ಿ ಕಣ್ಣಯ್ಯ ತಿಳಿಸಿದ್ದಾರೆ.
ಸಮಾರಂಭವನ್ನು ಇದೇ 11ರ ಶುಕ್ರವಾರ ಕನಕ ಭವನದಲ್ಲಿ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಂಡಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ತಹಸೀಲ್ದಾರ್ ಟಿ.ಸಿ.ಕಾಂತರಾಜು, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಪುರಸಭಾ ಸದಸ್ಯ ಸಿ.ಬಸವರಾಜು, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆಗಮಿಸಲಿದ್ದಾರೆ.
ಕುಪ್ಪೂರು ಮಠದಲ್ಲಿ 505ನೇ ಶಿವನೊಲುಮೆಯ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.10: ಗುರು ಮರುಳ ಸಿದ್ದೇಶ್ವರ ಸ್ವಾಮಿಯವರ ಪುರಾಣ ಪ್ರವಚನ ಮತ್ತು 505ನೇ ಶಿವನೊಲುಮೆಗಾಗಿ ಸತ್ಚಿಂತನೆ ಕಾರ್ಯಕ್ರಮವನ್ನು ಇದೇ 11ಮತ್ತು 12ರಂದು ಏರ್ಪಡಿಸಲಾಗಿದೆ.
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ 11ರ ಶುಕ್ರವಾರ ರಾತ್ರಿ 8-30ಕ್ಕೆ ಪುರಾಣ ಪ್ರವಚನ ಮತ್ತು 12ಶನಿವಾರ ಪ್ರಾತಂ ಕಾಲದಲ್ಲಿ ಶ್ರೀಮರುಳಸಿದ್ದೇಶ್ವರ ಸ್ವಾಮಿಯವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ತ್ರ ಬಿಲ್ವಾರ್ಚನೆ, ಗುರುಗಳ ಪಾದಪೂಜೆ ಹಾಗೂ ಮಹಾಮಂಗಳಾರತಿ, ಗಂಗಾಮಾತೆಗೆ ಕುಂಕುಮಾರ್ಚನೆ, ಬಾದಾಮಿ ಅಮಾವಾಸ್ಯೆ ಮತ್ತು ಶನೀಶ್ವರ ಜಯಂತಿ ಪ್ರಯುಕ್ತ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಡಾ.ಯತೀಶ್ವರ ಶಿವಚಾರ್ಯ ಸ್ವಾಮಿ ಸಮಾರಂಭದ ಸಾನಿದ್ಯ ವಹಿಸಲಿದ್ದು, ಅನ್ನದಾನಿ ಮಲ್ಲೇಗೌಡರು ಅಧ್ಯಕ್ಷತೆ ವಹಿಸುವರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ ಮತ್ತು ಬಿ.ಎಮ್.ಚನ್ನಭಸಪ್ಪರಿಗೆ ಸನ್ಮಾನಿಸಲಾಗುವುದು.
ಮಾತೆಯರಿಗೆ ಯೋಗ ಥೆರಪಿ, ಪ್ರಾಣಾಯಾಮ ಶಿಬಿರ
ಚಿಕ್ಕನಾಯಕನಹಳ್ಳಿ,ಜೂ.10 ಉಚಿತ ಯೋಗ ಥೆರಫಿ ಹಾಗೂ ಪ್ರಾಣಾಯಾಮ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 18ರ ಭಾನುವಾರ ಏರ್ಪಡಿಸಲಾಗಿದೆ.
30ದಿನಗಳ ಕಾಲ ಬೆಳಗ್ಗೆ 6.30 ರಿಂದ 7-30ರವರಗೆ ನಡೆಯುವ ಶಿಬಿರವನ್ನು ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಏರ್ಪಡಿಸಲಾಗಿದೆ, ಈ ಸಂಬಂಧ ಉದ್ಘಾಟನಾ ಸಮಾರಂಭವನ್ನು ಬೆಳಿಗ್ಗೆ 6.30ಕ್ಕೆ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ ಮತ್ತು ಬ್ರಹ್ಮ ವಿದ್ಯಾ ಸಮಾಜದ ಅಧಕ್ಷೆ ಭುವನೇಶ್ವರಿ ನೆರವೇರಿಸಲಿದ್ದು ರೋಟರಿ ಕ್ಷಬ್ ಅಧ್ಯಕ್ಷ ಕೆ.ವಿ.ಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಟಿ.ಸಿ.ಕಾಂತರಾಜು, ಸಾಹಿತಿ ಎಂ.ವಿ.ನಾಗರಾಜ್ರಾವ್, ಸತ್ಯಗಣಪತಿ ತರುಣರ ಸಂಘದ ಕಾರ್ಯದಶರ್ಿ ಸಿ.ಕೆ.ವಿಶ್ವೇಶ್ವರಯ್ಯ, ಇನ್ನರ್ವೀಲ್ ಕ್ಲಬ್ ಅಧ್ಯಕ್ಷ ಚಂದ್ರಿಕಾಮೂತರ್ಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ನರಸಿಂಹಯ್ಯ, ಸಿ.ಡಿ.ಪಿ.ಒ ಅನೀಸ್ ಖೈಸರ್ ಆಗಮಿಸಲಿದ್ದಾರೆ ಎಂದು ಯೋಗ ಶಿಕ್ಷಕ ಭುವನ ಸುಂದರ್ ತಿಳಿಸಿದ್ದಾರೆ.