Thursday, December 30, 2010

Sunday, December 26, 2010


ಕೃಷಿ ಅಭಿವೃದ್ದಿಗೆ ಬ್ಯಾಂಕ್ಗಳು ಹೆಚ್ಚು ಆಥರ್ಿಕ ಸೌಲಭ್ಯ ನೀಡಲು ಬದ್ದ
ಚಿಕ್ಕನಾಯಕನಹಳ್ಳಿ,ಡಿ.26: ಕೃಷಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಒಂದು ಉದ್ಯಮವೆಂದು ತಿಳಿದು ಉಳುಮೆ ಮಾಡಿದರೆ ಉತ್ತಮ ಫಸಲು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಕೆನರಾ ಬ್ಯಾಂಕ್ ಉಪಪ್ರಬಂಧಕ ರವೀಂದ್ರ ಭಂಡಾರಿ ಹೇಳಿದರು.
ತಾಲೂಕಿನ ಅಣೇಕಟ್ಟೆಯಲ್ಲಿ ನಡೆದ ಧರಿತ್ರಿ ಕೃಷಿಕರ ಕೂಟ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಾಹಿತಿ ಸಂಗ್ರಹಣೆ, ತರಬೇತಿ, ಮಾರುಕಟ್ಟೆಯು ಬ್ಯಾಂಕ್ನೊಂದಿಗಿನ ಸಂಬಂಧವಾಗಿದ್ದು, ಕೃಷಿಕರ ಒಕ್ಕೂಟ, ಕೇಂದ್ರವಾಗಿ ಪರಿವರ್ತನೆಯಾಗಿ ಸಂಘಟನೆಯ ಮುಖೇನ ಕೆಲಸ ನಿರ್ವಹಿಸಿದರ ಯಶಸ್ವಿಯಾಗುತ್ತದೆ ಎಂದ ಅವರು ಜನಪರ ಕಾರ್ಯಗಳಿಗೆ ಕೆನರಾ ಬ್ಯಾಂಕ್ ಸದಾ ಸಹಕಾರ ನೀಡುವುದೆಂದು ತಿಳಿಸಿದರು.
ನಬಾಡರ್್ ಸಹಾಯಕ ಪ್ರಬಂಧಕ ಅನಂತಕೃಷ್ಣ ಮಾತನಾಡಿ ಕೃಷಿಕರ ಕೂಟಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು, ಮಾಸಿಕ ಸಭೆಗಳನ್ನು ನಡೆಸಲು, ನಬಾಡರ್್ನಿಂದ ಹತ್ತು ಸಾವಿರ ರೂಗಳನ್ನು ಪ್ರತಿವರ್ಷ ನೀಡಲಾಗುವುದು ಮತ್ತು ನಬಾಡರ್್ ಸಂಸ್ಥೆಯು ರೈತರ ಏಳ್ಗೆಗಾಗಿಯೇ ಇರುವ ಒಂದು ಸಕರ್ಾರಿ ಸಂಸ್ಥೆಯಾಗಿದ್ದು ಯಾವುದೇ ಸಹಾಯ ಬೇಕಾದಲ್ಲಿ ತಮ್ಮನ್ನು ಸಂಪಕರ್ಿಸಲು ಕೋರಿದರು.
ಅಕ್ಷಯ ಕಲ್ಪ ಸಂಸ್ಥೆ ನಿದರ್ೇಶಕ ಡಾ.ಜಿ.ಎನ್.ಎಸ್.ರೆಡ್ಡಿ ಮಾತನಾಡಿ ರೈತರು ಮಾರುಕಟ್ಟೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಬಾಡರ್್ನಿಂದ ದೊರಕುವ ಉಗ್ರಾಣ ಸಹಾಯಧನವನ್ನು ಉಪಯೋಗಿಸಿಕೊಳ್ಳಬೇಕು ಎಂದ ಅವರು ಕೇವಲ ಸೆಮಿನಾರ್ ರೈತರಾಗದೆ ಕ್ರಿಯೆಯ ರೈತರಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಧರಿತ್ರಿ ಕೃಷಿಕರ ಕೂಟದ ಮುಖ್ಯ ಸಂಚಾಲಕ ನಂಜಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ್, ವೀರಣ್ಣ ಉಪಸ್ಥಿತರಿದ್ದರು.
ಕೃಷಿ ವಿಸ್ತರಣಾಧಿಕಾರಿ ಮನೋಜ್ನಾಯಕ್ ಸ್ವಾಗತಿಸಿದರೆ, ಸಂಚಾಲಕ ರಘುರಾಂ ನಿರೂಪಿಸಿ, ನವಿಲೆರಘು ವಂದಿಸಿದರು.

ವಿಕಲಚೇತನಿರಿಗೆ ಉಚಿತ ಕೃತಕ ಉಪಕರಣಗಳ ಜೊಡಣೆ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.26: ಮುಂಗೈ ಮತ್ತು ಕಾಲಿಲ್ಲದವರಿಗಾಗಿ ಕೃತಕವಾಗಿ ಕಾಲುಗಳು, ಪೋಲಿಯೋ ಪೀಡಿತರಿಗೆ ಕ್ಯಾಲಿಪರ್ಸಗಳನ್ನು ರೋಟರಿ ಸಂಸ್ಥೆ ಉಚಿತವಾಗಿ ಇದೇ ಜನವರಿ 3 ರಿಂದ 9ರವರಗೆ ನೀಡುವುದು ಎಂದು ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ತಿಳಿಸಿದ್ದಾರೆ.
ರೋಟರಿ ಬೆಂಗಳೂರು ಪೀಣ್ಯಾ ಮತ್ತು ಜೈಪುರ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿ ಪೋಲಿಯೋ ಕರೆಕ್ಟಿವ್ ಸರ್ಜರಿಗೆ ನೋಂದಾವಣೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ 9886732338ಗೆ ಸಂಪಕರ್ಿಸಲು ಕೋರಿದ್ದಾರೆ.


Saturday, December 25, 2010

ಜೆ.ಡಿ.ಎಸ್, ಬಿ.ಜೆ.ಪಿ. ಸಿಂಹಪಾಲಿಗಾಗಿ ಹೋರಾಟ. ಜೆ.ಡಿ.ಯು, ಕಾಂಗ್ರೆಸ್ ಸ್ಥಾನ
ಹೆಚ್ಚಿಸಿಕೊಳ್ಳುವ ಹಠ.

(ಕೆ.ಎನ್.ಎನ್)
ಚಿಕ್ಕನಾಯಕನಹಳ್ಳಿ,ಡಿ.25: ಜಿ.ಪಂ. ಮತ್ತು ತಾ.ಪಂ. ಚುನಾವಣೆಯಲ್ಲಿ ಮತದಾರನನ್ನು ಓಲೈಸುವ ಅಂತಿಮ ಪ್ರಯತ್ನವಾಗಿ ಆಮೀಷಕ್ಕೆ ಇಡು ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ. ಇದರಿಂದಾಗಿ ಕ್ಷಣ ಕ್ಷಣಕ್ಕೂ ಅಬ್ಯಾಥರ್ಿಗಳ ಪರವಾದ ವಾತಾವರಣ ಬದಲಾಗುತ್ತಿದೆ.
ನಾಮಪತ್ರ ಅಂತಿಮಗೊಂಡು ನಿಜವಾದ ಅಬ್ಯಾಥರ್ಿಗಳು ಯಾರೆಂಬುದು ಸ್ಪಷ್ಟವಾದ ಐದಾರು ದಿನಗಳ ತನಕ ಒಂದು ರೀತಿಯ ಅಲೆ ನಿಮರ್ಾಣವಾಗಿದ್ದರೆ, ಶುಕ್ರವಾರದಿಂದ ಅದರ ಸ್ವರೂಪವೇ ಬದಲಾಗುತ್ತಿದೆ. ಕೊನೆಯ ಎರಡು ದಿನಗಳಲ್ಲಿ ಚುನಾವಣೆಯ ತಂತ್ರಗಳು ವಿಭಿನ್ನರೀತಿಯಾಗಿರುವುದರಿಂದ ಮತದಾರರ ಒಲವು ಯಾವ ಕಡೆ ಎಂಬುದನ್ನು ಸುಲಭವಾಗಿ ಅಥರ್ೈಸುವುದು ಕಷ್ಟ ಸಾಧ್ಯವೇ ಸರಿ.
ಅಬ್ಯಾಥರ್ಿಗಳ ಹಾಗೂ ಅವರ ಬೆಂಬಲಿಗರ ಹಲವಾರು ತಂತ್ರಗಾರಿಕೆಗಳ ನಡುವೆಯೂ, ಮತದಾರ ತಾನು ಯಾರಿಗೆ ಓಟು ನೀಡಬೇಕೆಂಬ ಗುಟ್ಟನ್ನು ಆತ್ಮೀಯವಾಗಿ ಮಾತಿಗೆಳೆದಾಗ ಮಾತ್ರ ಸೂಕ್ಷ್ಮವಾಗಿ ತಿಳಿಸ ಬಲ್ಲ. ಕೆಲಸಕ್ಕಾಗಿ ಪತ್ರಿಕೆ ಗ್ರಾಮಸ್ಥರಿಂದ ಪಡೆದ ವಿವರಣೆಗಳನ್ನು ವಿಶ್ಲೇಷಿಸಿದಾಗ ದೊರೆತ ಮಾಹಿತಿ ಇಂತಿದೆ.
ತಾಲೂಕಿನಲ್ಲಿನ ಐದು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪೈಕಿ ಬಿ.ಜೆ.ಪಿ ಹಾಗೂ ಜೆ.ಡಿ.ಎಸ್. ಸಿಂಹಪಾಲನ್ನು ಪಡೆಯುವುದಾಕ್ಕಾಗಿ ಶತಾಯಗಥಾಯ ಹೋರಾಡುತ್ತಿದ್ದರೆ, ಕಾಂಗ್ರೆಸ್ ಹಾಗೂ ಜೆ.ಡಿ.ಯು ತಲಾ ಎರಡು ಕ್ಷೇತ್ರಗಳನ್ನು ಪಡೆಯಲೇ ಬೇಕೆಂದು ಹಠ ಹಿಡಿದಿವೆ. ನಡುವೆ ಜೆ.ಡಿ.ಯು ಹಾಗೂ ಬಂಡಾಯ ಅಬ್ಯಾಥರ್ಿ ಬಲ ಮೇಲುಗೈ ಆದರೆ ಇದರಿಂದ ಬಿ.ಜೆ.ಪಿ.ಗೆ ಸಹಿಸಿಕೊಳ್ಳುವುದು ಕಷ್ಟವಾದರೆ, ಕಾಂಗ್ರೆಸ್ ಬಲಿಷ್ಟವಾದಷ್ಟು ಜೆ.ಡಿ.ಎಸ್.ಗೆ ಪೆಟ್ಟು ಗ್ಯಾರಂಟಿ.
ಮಾಜಿ ಸಿ.ಎಂ. ಕುಮಾರಸ್ವಾಮಿ ಗರಡಿಯಲ್ಲಿ ಚೆನ್ನಾಗಿ ಪಳಗಿರುವ ಶಾಸಕ ಸಿ.ಬಿ.ಸುರೇಶ್ ಬಾಬು, ಇತ್ತೀಚೆಗಂತೂ ತಂತ್ರಗಾರಿಕೆ ರೂಪಿಸುವಲ್ಲಿ ಸಿದ್ದ ಹಸ್ತರಾಗಿರುವಂತಿದೆ. ತಮ್ಮ ಯಾವುದೇ ನಡೆಯನ್ನು ಬಿಟ್ಟುಕೊಡದೆ ಚುನಾವಣಾ ತಂತ್ರಗಳನ್ನು ರಾತ್ರಿ ಕಾಯರ್ಾಚರಣೆಗೆ ಮೀಸಲಿಟ್ಟಿದ್ದಾರೆ. ಬಿ.ಜೆ.ಪಿ. ಕಿರಣ್ಕುಮಾರ್ ರವರು ತಮ್ಮ ಅನುಭವದ ಜೊತೆಗೆ ಸಂಸದ ಜಿ.ಎಸ್.ಬಸವರಾಜು ರವರೊಂದಿಗೆ ಒಂದು ರೌಂಡ್ ಬಂದಿದ್ದಾರೆ ಮತದಾರರ ಆಸೆ ಆಮೀಷಗಳನ್ನು ಪೂರೈಸಲು ಸನ್ನದ್ದರಾಗಿದ್ದಾರೆ ಹಣವನ್ನು ಸ್ಪಲ್ಪ ಧಾರಳವಾಗಿಯೇ ಕೈ ಬಿಡುತ್ತಿದ್ದಾರೆಂಬ ಮಾತು ಕೇಳಿ ಬರುತ್ತಿದೆ. ಜೆ.ಡಿ.ಯು. ಜೆ.ಸಿ.ಮಾಧುಸ್ವಾಮಿ ಪಕ್ಷಕ್ಕಿಂತ ನಾಯಕತ್ವಕ್ಕೆ ಬೆಲೆ ಕೊಡಿ, ಬೆಂಗಳೂರಿನಲ್ಲಿರುವ ಜನರು ಬೇಕೇ, ಕ್ಷೇತ್ರದಲ್ಲಿ ವಾಸ್ತವ್ಯ ಇರುವ ನಾಯಕರು ಬೇಕೊ ಆರಿಸಿಕೊಳ್ಳಿ ಎಂಬ ಭಾವನಾತ್ಮಕ ಮಾತುಗಳಿಂದ ಜನರನ್ನು ತಮ್ಮ ಪರವಾಗಿ ಎಳೆದುಕೊಳ್ಳುವ ಜೊತೆಗೆ ತಮ್ಮ ಕೈಲಾದ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಿದ್ದರೆ. ಕಾಂಗ್ರೆಸ್ನಲ್ಲಿ ಈಗ ಒಂದಿಷ್ಟು ಚೇತರಿಕೆಯ ವಾತಾವರಣ ಮೂಡಿದೆ, ಹೊಯ್ಸಳಕಟ್ಟೆ, ಹುಳಿಯಾರು, ಕಂದಿಕೆರೆ ಜಿ..ಕ್ಷೇತ್ರಗಳಲ್ಲಿ ಪದೇ ಪದೇ ಕಾಣಸಿಗುತ್ತಿರುವ ಜಯಚಂದ್ರ ರವರ ಮಗ ಸಂತೋಷ ಇಲ್ಲಿಯೇ ಗಿರಿಕಿ ಹೊಡೆಯುತ್ತಿದ್ದಾರೆ. ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ ತಮ್ಮ ಕೈಲಾದಷ್ಟು ಕಾರ್ಯಕರ್ತರನ್ನು ಹುರುದುಂಬಿಸುತ್ತಿದ್ದಾರೆ.
ಜಿ.ಪಂ. ಕ್ಷೇತ್ರಗಳ ಪೈಕಿ ಶೆಟ್ಟೀಕೆರೆ ಕ್ಷೇತ್ರಕ್ಕೆ ಎಲ್ಲಿಲ್ಲದ ಮಹತ್ವ ಯಾಕೆಂದರೆ ತಾಲೂಕಿನ ಗಣಿ ಪ್ರದೇಶದಲ್ಲಿನ ಶೇ.80ರಷ್ಟು ಖನಿಜ ಇರುವುದು ಪ್ರದೇಶದ ವ್ಯಾಪ್ತಿಯಲ್ಲಿಯೇ, ಈಗಾಗಿ ಇಲ್ಲಿ ಐದು ಜನ ಅಬ್ಯಾಥರ್ಿಗಳು. ಕ್ಷೇತ್ರವನ್ನು ತಮ್ಮ ವಶಕ್ಕೆ ಪಡೆಯಲು ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಯು, ಜೆ,ಡಿ.ಎಸ್ ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ. ಇಲ್ಲಿ ಬಿ.ಜೆ.ಪಿ.ಯವರ ಕಾಲನ್ನು ಜೆ.ಡಿ.ಯು ಹಾಗೂ ಬಂಡಾಯ ಬಿ.ಜೆ.ಪಿ. ಅಬ್ಯಾಥರ್ಿ ಎಳೆಯುತ್ತಿದ್ದರೆ, ಕಾಂಗ್ರೆಸ್ನವರ ಕಾಲನ್ನು ಜೆ.ಡಿ.ಎಸ್.ನವರು ಎಳೆಯುತ್ತಿದ್ದಾರೆ.
ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಆರಂಭದಿಂದ ಇಲ್ಲಿಯವರೆಗೂ ಗೆದ್ದಿರುವವರು ಲಿಂಗಾಯಿತರೇ ಹೆಚ್ಚು, ಇಲ್ಲಿ ಹಿಂದುಳಿದ ವರ್ಗಗಳ ಮತಗಳೂ ನಿಣರ್ಾಯಕವಾದವು ಎಂಬುದನ್ನು ಇತ್ತೀಚಗಷ್ಟೇ ಅರಿತಿರುವುದರಿಂದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಹಿಂದುಳಿದವರನ್ನು ಕಣಕ್ಕಿಳಿಸಿದ್ದಾರೆ. ಜೆ.ಡಿ.ಎಸ್. ಸಾಸಲು ಸತೀಶ್ ಇಲ್ಲಿ ಕಾಂಗ್ರೆಸ್ನ ಮಾಜಿ ಶಾಸಕ ಬಿ.ಲಕ್ಕಪ್ಪನವರಿಗೆ ತೊಡರಗಾಲು ಆಗುತ್ತಾರೆಯೇ ಹೊರತು ಗೆಲ್ಲುವ ಅವಕಾಶಗಳು ಕಡಿಮೆ. ಜೆ.ಡಿ.ಯುನ ಶಂಕರಲಿಂಗಯ್ಯನಿಗೆ ಹಿಂದೆ ಸೋತಿದ್ದಾರೆಂಬ ಅನುಕಂಪ ಹಾಗೂ ಜೆ.ಸಿ.ಎಂ. ಪ್ರಭಾವಳಿ ಕೆಲಸ ಮಾಡಬೇಕಿದೆ. ಸದ್ಯಕ್ಕೆ ಇಲ್ಲಿ ಕಾಂಗ್ರೆಸ್ನ ಬಿ.ಲಕ್ಕಪ್ಪ ಹಾಗೂ ಪಕ್ಷೇತರ ಅಬ್ಯಾಥರ್ಿ ಬಿ.ಎನ್.ಶಿವಪ್ರಕಾಶ್ಗೆ ನೇರ ಹಣಾಹಣಿ ಇದ್ದರೂ, ಬಿ.ಜೆ.ಪಿ. ಅಬ್ಯಾಥರ್ಿ ಪಂಚಾಕ್ಷರಯ್ಯ ಪ್ರಬಲ ಅಬ್ಯಾಥರ್ಿಯೇ, ಮೂವರು ಲಿಂಗಾಯಿತರು ಓಟಗಳನ್ನು ಹಂಚಿಕೊಳ್ಳಲಿದ್ದು, ಹಿಂದುಳಿದವರ ಪೈಕಿ ಇಬ್ಬರಿದ್ದು ಉಳಿದ ಜಾತಿಯವರು ಯಾರ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ. ಯಾರೇ ಗೆದ್ದರೂ ಅಲ್ಪ ಮತಗಳ ಅಂತರದಲ್ಲೇ. ಚುನಾವಣೆಯ ದಿನ ಯಾರ್ಯಾರ ಬೆಂಬಲಕ್ಕೆ ಯಾರ್ಯಾರು ಪಾಂಪ್ಲೇಟ್ ಹಿಡಿದು ನಿಲ್ಲುತ್ತಾರೆ ಎಂಬುದರ ಮೇಲೂ ಒಂದು ಕಣ್ಣಿದೆ.
ಕಂದಿಕೆರೆ ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳು ಸ್ಪಧರ್ಿಸಿವೆ ಇಲ್ಲಿ ಪಕ್ಷೇತರರಿಲ್ಲ, ಬಂಡಾಯದ ಬಿಸಿಯೂ ಕಡಿಮೆ. ಇಲ್ಲಿ ಆರಂಭದಲ್ಲಿ ಕಾಂಗ್ರೆಸ್ನ ಪರಮೇಶ್ವರಯ್ಯ ವೀಕ್ ಎಂಬಂತೆಯೇ ಇತ್ತು, ಆದರೆ ಸಂತೋಷ ಜಯಚಂದ್ರ ಅಖಾಡಕ್ಕಿಣದ ಮೇಲೆ ಸ್ವಲ್ಪ ಚೇತರಿಕೆ ಕಂಡಿದೆ, ಬಿ.ಜೆ.ಪಿ.ಪಕ್ಷದ ಆಲದಕಟ್ಟೆ ಸಿ.ರಂಗನಾಯ್ಕ ಬೆಂಗಳೂರಿನಿಂದ ಧುತ್ತನೆ ಬಂದು ನಿಂತಿರುವದರಿಂದ ಸ್ಥಳೀಯರೇ ಆದರೂ ಇವರು ಕ್ಷೇತ್ರದ ಜನರಿಗೆ ಹೊರಗಿನಂತೆ ಕಾಣುತ್ತಿದ್ದಾರೆ. ಇಲ್ಲಿ ಜೆ.ಡಿ.ಯು ಹಾಗೂ ಜೆ.ಡಿ.ಎಸ್.ಗೆ ನೇರ ಸ್ಪಧರ್ೆ. ಜೆ.ಡಿ.ಎಸ್. ಹೀರಯ್ಯ ಕ್ಷೇತ್ರಕ್ಕೆ ಹೊಸಬ, ಶಾಸಕ ಸಿ.ಬಿ.ಸುರೇಶ್ ಬಾಬು ರವರ ಬೆಂಬಲ ಪ್ರಬಲವಾಗಿ ಕೆಲಸ ಮಾಡಿದರೆ ಉಂಟು ಇಲ್ಲದಿದ್ದರೆ, ಜೆ.ಡಿ.ಯು. ಅಬ್ಯಾಥರ್ಿ ಲೋಹಿತಾ ಬಾಯಿಗೆ ಅವಕಾಶ ಹೆಚ್ಚು. ಲೋಹಿತಾ ಇಷ್ಟು ಪ್ರಬಲವಾಗಲು ಕಾರಣ ಅಬ್ಯಾಥರ್ಿಯ ಭಾವ ಸಿಂಗದಹಳ್ಳಿ ರಾಜ್ಕುಮಾರ್ಗೆ ಕ್ಷೇತ್ರದಲ್ಲಿರುವ ನೆಟ್ ವಕರ್್ ಹಾಗೂ ಕಳೆದ ಜಿ.ಪಂ.ಗಳಲ್ಲಿ ಸೋತಿದ್ದಾರೆಂಬ ಸಿಂಪತಿ ಚೆನ್ನಾಗಿ ಕೆಲಸ ಮಾಡಿತ್ತಿರುವುದರಿಂದ ಲೋಹಿತಾ ಬಾಯಿಯ ಗೆಲುವನ್ನು ತಡೆಯುವುದು ಬೇರೆ ಅಬ್ಯಾಥರ್ಿಗಳಿಗೆ ಕಷ್ಟ ಸಾಧ್ಯ.
ಹಂದನಕೆರೆ ಜಿ.ಪಂ. ಕ್ಷೇತ್ರದಲ್ಲಿ ಆರು ಜನ ಸ್ಪಧರ್ೆಯಲ್ಲಿದ್ದು, ಜೆ.ಡಿ.ಎಸ್, ಬಿ.ಜೆ.ಪಿ. ಹಾಗೂ ಜೆ.ಡಿ.ಯು ತ್ರಿಕೋನ ಸ್ಪಧರ್ೆ ಇದೆ. 40 ಮತಗಟ್ಟೆಗಳ ಪೈಕಿ 25 ಮತಗಟ್ಟೆಗಳಲ್ಲಿ ಜೆ.ಡಿ.ಎಸ್. ಜಾನಮ್ಮ ರಾಮಚಂದ್ರಯ್ಯ, ಯಶೋಧ ಬಸವರಾಜು ನೇರ ಹಣಾಹಣಿಯಲ್ಲಿದ್ದಾರೆ, ಉಳಿದ 15 ರಲ್ಲಿ ಜೆ.ಡಿ.ಯು. .ಎಸ್. ಅನುಸೂಯಮ್ಮ ಪ್ರಬಲರಾಗಿದ್ದಾರೆ. ಯಾವ್ಯಾವ ಮತಗಟ್ಟೆಗಳಲ್ಲಿ ಯಾರ್ಯಾರು ಯಾರ್ಯಾರ ಸೀರೆಯ ಸೆರಗು ಹಿಡಿದು ಎಳೆದಾಡುತ್ತಾರೊ ಹೇಳುವುದು ಕಷ್ಟ.
ಹೊಯ್ಸಳಕಟ್ಟೆ ಜಿ.ಪಂ.ಕ್ಷೇತ್ರದಲ್ಲಿ ನಾಲ್ಕು ಪಕ್ಷಗಳಿಂದ ನಾಲ್ಕು ಅಬ್ಯಾಥರ್ಿಗಳು ಸ್ಪಧರ್ೆಯಲ್ಲಿದ್ದಾರೆ ಇದರಲ್ಲಿ ಆರಂಭದಲ್ಲಿ ಜೆ.ಡಿ.ಎಸ್ನ ಜಯಲಕ್ಷ್ಮಿ, ಬಿ.ಜೆ.ಪಿ. ನಿಂಗಮ್ಮ ನವರ ಬೆಂಬಲಿಗರುಗಳು ನಮ್ಮಿಬ್ಬರಲ್ಲಿ ಯಾರು ಬೇಕಾದರೂ ಗೆಲ್ಲ ಬಹುದೆಂದು ಅಂದುಕೊಂಡಿದ್ದರು, ಆದರೆ ಈಗ ಕಾಂಗ್ರೆಸ್ನ ಸಂತೋಷ ಜಯಚಂದ್ರ ಲವಲವಿಕೆಯಿಂದ ಓಡಾಡುತ್ತಿರುವುದು ಜೆ.ಡಿ.ಯು. ವರಿಷ್ಠ ಮಾಧುಸ್ವಾಮಿ ಜನರನ್ನು ತಮ್ಮ ಮಾತಿನ ಮೋಡಿಗೆ ಎಳೆದುಕೊಂಡಿರುವುದರಿಂದ ಜಯಲಕ್ಷ್ಮಿ ಮತ್ತು ನಿಂಗಮ್ಮ ಹೆಚ್ಚು ತ್ರಾಸು ಪಡಬೇಕಿದೆ.
ಹುಳಿಯಾರು ಜಿ.ಪಂ. ಕ್ಷೇತ್ರದಲ್ಲಿ 5 ಜನ ಮಹಿಳೆಯರಲ್ಲಿ ಹೊರೆ ಹೊತ್ತಿರುವ ಎನ್.ಜಿ. ಮಂಜುಳ ನಾನು ಮುಂದು ಎಂದರೆ, ಕಮಲ ಹಿಡಿದಿರುವ ಮಹಿಳೆ ಎಸ್.ಎಚ್.ಲತಾ ನಾನೇನು ಕಮ್ಮಿ ಇಲ್ಲ ಎನ್ನುತ್ತಿದ್ದಾರೆ, ರೇಣುಕಾದೇವಿ ಬಾಣ ಹಿಡಿದು ಯಾರಿಗೆ ಹೊಡೆಯಲಿ ಎನ್ನುತ್ತಿದ್ದಾರೆ, ರಮಾದೇವಿ ಓಟದಲ್ಲಿ ಸ್ವಲ್ಪ ಮುಂದಿರುವ ಇಬ್ಬರ ಪೈಕಿ ಯಾರಿಗೆ ಕೈ ಕೊಡಲಿ ಎನ್ನುತ್ತಿದ್ದಾರೆ. ಬಾಣದ ಹೊಡೆತದಿಂದ ಹಾಗೂ ಕೈ ಕೆಲಸದವರಿಂದ ಮಂಜುಳ ಹಾಗೂ ಲತಾ ಇಬ್ಬರಲ್ಲಿ ಜಯಲಕ್ಷ್ಮಿ ಯಾರ ಕೈ ಹಿಡಿಯುತ್ತಾರೆ ನೋಡಬೇಕಿದೆ.
ತಾ.ಪಂ. ಕ್ಷೇತ್ರಗಳ ಪಕ್ಷವಾರು ವಿಶ್ಲೇಷಣೆ: 19 ತಾ.ಪಂ. ಕ್ಷೇತ್ರಗಳ ಪೈಕಿ ಜೆ.ಡಿ.ಎಸ್. ಏಳು ಕ್ಷೇತ್ರಗಗಳಲ್ಲಿ, ಜೆ.ಡಿ.ಯು. ಐದು ಕ್ಷೇತ್ರಗಳಲ್ಲಿ, ಬಿ.ಜೆ.ಪಿ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನಗಳಲ್ಲಿ ಮುಂದಿವೆ.
ಶುಕ್ರವಾರ ರಾತ್ರಿ ಹಾಗೂ ಶನಿವಾರ ನಡೆಯುವ ಚುನಾವಣಾ ತಂತ್ರಗಳನ್ನು ಯಾವ್ಯಾವ ಪಕ್ಷಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದರ ಮೇಲೂ ಫಲಿತಾಂಶ ನಿಂತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ

Thursday, December 23, 2010





ಬೆರಳ ತುದಿಯಲ್ಲಿ ಜ್ಞಾನ ಹೊಂದಿರುವವರ ಜೊತೆ ಗ್ರಾಮೀಣ ವಿದ್ಯಾಥರ್ಿಗಳು ಸ್ಪಧರ್ಿಸಬೇಕಿದೆ.
ಚಿಕ್ಕನಾಯಕನಹಳ್ಳಿ,ಡಿ.19: ಅಕ್ಷರ ಜ್ಞಾನ ಅಹಂಕಾರವಾಗಬಾರದು, ಅಂತಃಕರಣ, ಆತ್ಮವಿಶ್ವಾಸ, ತಿಳುವಳಿಕೆಯನ್ನು ಹೆಚ್ಚಿಸುವಂತಹದಾಗಬೇಕು ಎಂದು ಸಾಹಿತಿ ಪ್ರೊ.ಮ.ಲ.ನ.ಮೂತರ್ಿ ಅಭಿಪ್ರಾಯಪಟ್ಟರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ವಾಷರ್ಿಕೋತ್ಸವದಲ್ಲಿ ಸಮಾರೋಪ ಭಾಷಣ ಮಾಡಿದರು. ಜ್ಞಾನದೊಂದಿಗೆ ವಿಧೇಯತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳಸಿಕೊಂಡಾಗ ಅಕ್ಷರ ಸಂಸ್ಕೃತಿಗೆ ಶ್ರೇಷ್ಠತೆ ಬರುತ್ತದೆ ಎಂದರು.
ಗ್ರಾಮೀಣ ವಿದ್ಯಾಥರ್ಿಗಳು ನಗರಗಳ ವಿದ್ಯಾಥರ್ಿಗಳೊಂದಿಗೆ ಸ್ಪಧರ್ೆ ಮಾಡುವಂತಹ ಸ್ಥಿತಿ ಇರುವ ಈ ಹೊತ್ತಿನೊಳಗೆ ನಗರದವರು ಬೆರಳ ತುದಿಯಲ್ಲಿ ಜ್ಞಾನ ಕೋಶವನ್ನು ಕಂಪ್ಯೂಟರ್ಗಳ ಮೂಲಕ ಕ್ಷಣಾರ್ಧದಲ್ಲಿ ಪಡೆಯುತ್ತಾರೆ, ಅದೇ ಗ್ರಾಮೀಣ ವಿದ್ಯಾಥರ್ಿಗಳು ಹತ್ತಾರು ಪುಸ್ತಕಗಳನ್ನು ಹುಡುಕಿ ಗುರುಗಳ ಕೃಪೆಗೆ ಒಳಗಾಗಿ ಪಡೆಯುವಂತಹ ಸ್ಥಿತಿ ಇದೆ, ಇದರಿಂದ ಗ್ರಾಮೀಣ ವಿದ್ಯಾಥರ್ಿಗಳು ದೃತಿಗೆಡದೆ ಇಂಟರ್ನೆಟ್ ಲೋಕವನ್ನು ತಾವು ಪರಿಚಯಿಸಿಕೊಂಡು ಜ್ಞಾನದ ದೀವಿಗೆ ನಮ್ಮ ವಿದ್ಯಾಥರ್ಿಗಳ ಕೈಬೆರಳಿಗೂ ಬರುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಪೋಷಕರು ಹಾಗೂ ಶಾಲೆಯ ಆಡಳಿತ ವರ್ಗ ಹೊಂದುವುದು ಅವಶ್ಯವಾಗಿದೆ ಎಂದರು.
ಗ್ರಾಮೀಣ ಶಿಕ್ಷಕರು ಇನ್ನು ಬೆತ್ತ ಹಿಡಿದು ಬೋಧಿಸುವದನ್ನು ಬಿಟ್ಟು ಚಿತ್ತಹಿಡಿದು ಕಲಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶಾಸಕ ಹಾಗೂ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಬಿ.ಸುರೇಶ್ ಬಾಬು ಮಾತನಾಡಿ, ಪೋಷಕರು ಮಕ್ಕಳ ಓದಿನ ಕಡೆ ಹೆಚ್ಚು ಒತ್ತು ಕೊಟ್ಟಾಗ ಮಕ್ಕಳಿಗೆ ವಿದ್ಯಾಭ್ಯಾಸದ ಪ್ರಾಮುಖ್ಯತೆ ಅರಿವಾಗುತ್ತದೆ, ಆದ್ದರಿಂದ ಪೋಷಕರು ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳ ಬಗ್ಗೆಯೂ ನಿಗಾ ಇಡುವುದು ಅವಶ್ಯ, ವಾಷರ್ಿಕೋತ್ಸವದಂತಹ ಸಂದರ್ಭದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪೋಷಕರು ಆಗಮಿಸಿ ತಮ್ಮ ಮಕ್ಕಳನ್ನು ಉತ್ತೇಜಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉನ್ನತ ದಜರ್ೆಯಲ್ಲಿ ಉತ್ತೀರ್ಣರಾದ ವಿದ್ಯಾಥರ್ಿಗಳಿಗೆ ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು ಬೆಳ್ಳಿ ಪದಕ ವಿತರಿಸಿದರು. ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿವಿಧ ದತ್ತಿ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಕಾರ್ಯದಶರ್ಿ ಸಿ.ಎಸ್.ನಟರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ, ಪ್ರೊ.ಮ.ಲ.ನ.ಮೂತರ್ಿ,ಕೆ.ಜಿ.ಮಲ್ಲಿಕಾರ್ಜನಯ್ಯ, ನಿದರ್ೇಶಕರುಗಳಾದ ಜಿ.ತಿಮ್ಮಯ್ಯ, ಸಿ.ಪಿ.ಚಂದ್ರಶೇಖರ್ ಶೆಟ್ಟಿ, ಸಿ.ಎನ್.ಚಂದ್ರಶೇಖರ್ ಗುಪ್ತ, ಸಿ.ಎಂ.ರಂಗಸ್ವಾಮಿ, ಸಿ.ಬಿ.ರೇಣುಕಸ್ವಾಮಿ, ಕಣ್ಣಯ್ಯ, ರಮೇಶ್ಬಾಬು, ಪರಶಿವಮೂತರ್ಿ ಉಪಸ್ಥಿತರಿದ್ದರು.
ಶಾಲೆಯ ಎಚ್.ಎಂ, ಎಂ.ಎಲ್.ಮಲ್ಲಿಕಾರ್ಜನಯ್ಯ ಸ್ವಾಗತಿಸಿದರು, ಎಂ.ಕೆ.ಗಂಗಾಧರಯ್ಯ, ವೇಣುಗೋಪಾಲ್ ನಿರೂಪಿಸಿದರು.

ಅಳಿಯನನ್ನು ಆರಿಸುವಾಗ ನೀಡುವಷ್ಟೇ ಪ್ರಾಮುಖ್ಯತೆಯನ್ನು ಆಳುವವರನ್ನು ಆರಿಸುವಾಗಲು ನೀಡಿ: ದೊರೆಸ್ವಾಮಿ

ಚಿಕ್ಕನಾಯಕನಹಳ್ಳಿ,ಡಿ.23: ಪ್ರಜಾ ಪ್ರತಿನಿಧಿ ಪ್ರಭುತ್ವ ಎನ್ನುವುದಕ್ಕಿಂತ ಪಕ್ಷ ಪ್ರತಿನಿಧಿ ಪ್ರಭುತ್ವ ಎನ್ನುವುದು ಹೆಚ್ಚು ಸೂಕ್ತ ಎಂದು ಗಾಂಧಿವಾದಿ ಡಾ.ಎಚ್.ಎಸ್.ದೊರೆಸ್ವಾಮಿ ವಿಶ್ಲೇಷಿಸಿದರು.
ತಾಲೂಕಿನ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಗದ್ದಿಗೆ ಮಠದ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಭಾವೈಕ್ಯತಾ ಸಮಾರಂಭದಲ್ಲಿ 'ಶ್ರೀ ಕುಪ್ಪೂರು ಮರುಳಸಿದ್ದ ಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಜನ ಸೇವೆ ಮಾಡುವ ಮೂಲಕ ಚುನಾವಣೆಗೆ ಅವಕಾಶವನ್ನು ಕೋರುವ ಕಾಲ ಒಂದಿತ್ತು ಆಗ ಪ್ರಜಾಪ್ರಭುತ್ವಕ್ಕೆ ಅರ್ಥವಿತ್ತು ಆದರೆ ಇಂದು ಈ ವ್ಯವಸ್ಥೆ ಇಲ್ಲ, ಯಾರ ಬಳಿ ಹೆಚ್ಚು ಹಣವಿದೆ ಅಂತವರಿಗೆ ಪಕ್ಷಗಳು ಮಣೆ ಹಾಕುತ್ತಿವೆ, ಪಕ್ಷಗಳು ಕಳುಹಿಸುವ ಪ್ರತಿನಿಧಿಗೆ ಮತದಾರರು ಓಟು ಹಾಕುವಂತಾಗಿದೆ ಎಂದ ಅವರು, ಕೆಲವು ರಾಜಕೀಯ ಪಕ್ಷಗಳ ನೇತಾರರು ದುಡ್ಡಿನ ಹಿಂದೆ ಬಿದ್ದು ಬಿ ಫಾರಂಗಳನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂದರು.
ಈ ಹಿನ್ನೆಲೆಯಲ್ಲಿ ಮತದಾರರು ಬಹು ದಿನಗಳಿಗೆ ಒಮ್ಮೆ ಸಿಗುವ ಅವಕಾಶವನ್ನು ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳುವುದು ಕರ್ತವ್ಯವಾಗಿರುವುದರಿಂದ ಮತದಾನ ಮಾಡುವ ಮುಂಚೆ ತಮ್ಮ ಮಗಳಿಗೆ ವರನನ್ನು ನೋಡುವಾಗ ಪೂವರ್ಾಪರ ತಿಳಿದುಕೊಂಡು, ಯೋಚಿಸಿ ಮಗಳನ್ನು ಕೋಡುವ ರೀತಿಯಲ್ಲೇ ಮತದಾನ ಮಾಡುವಾಗಲೂ ಸಮರ್ಥವಾದ ಅಬ್ಯಾಥರ್ಿಯನ್ನೇ ಹುಡಕಿ ಮತದಾನ ಮಾಡಿ ಎಂದರು.
ಕಾರ್ಯಕ್ರಮದಲ್ಲಿ ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿ ಮಾತನಾಡಿ ಇಂದಿನ ಸಮಾಜದಲ್ಲಿ ನುಡಿ ವೀರರ ಸಂಖ್ಯೆಯೇ ಹೆಚ್ಚುತ್ತಿದ್ದು ನಡೆ ವೀರರು ಇಲ್ಲವಾಗುತ್ತಿದ್ದರೆ ಎಂದರಲ್ಲದೆ, ಮಠಗಳು ಜಾತಿಯ ಕೇಂದ್ರಗಳಾಗತ್ತಿವೆ ಇದರಿಂದ ಜನರಲ್ಲಿ ಭಾವನಾತ್ಮಕ ಕಂದಕಗಳು ಹೆಚ್ಚುತ್ತಿವೆ ಎಂದರು.
ಗುರು ಸನ್ಮಾರ್ಗ ತೋರ ಬೇಕು, ಭಕ್ತ ಮೋಕ್ಷವನ್ನು ಬೇಡಬೇಕು, ಆದರೆ ಇಂದು ಇದು ತಿರು-ಮುರುವಾಗುತ್ತಿದ್ದು, ಗುರು ಹಣವನ್ನು ಬೇಡುತ್ತಿದ್ದಾನೆ, ಭಕ್ತ ಗುರುವನ್ನು ಅಡ್ಡದಾರಿ ಹಿಡಿಸುತ್ತಿದ್ದಾನೆ ಎಂದರು.
ಸಮಾರಂಭದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಧರ್ಮ ರಕ್ಷಕರಾಗಿರುವ ಗುರುಗಳು ಭಕ್ತನನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೆಪಿಸಬೇಕು, ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರು.
ಸಮಾರಂಭದಲ್ಲಿ ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ, ಕನಕ ಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ, ಯಸಳೂರು ಮಠದ ಚನ್ನಮಲ್ಲಿಕಾರ್ಜನ ಶಿವಾಚಾರ್ಯ ಸ್ವಾಮಿ ಮಾತನಾಡಿದರು. ಶಾಸಕ ಸಿ.ಬಿ.ಸುರೇಶ್ ಬಾಬು ಹಾಜರಿದ್ದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉಪಸ್ಥಿತರಿದ್ದರು.

Wednesday, December 22, 2010

Tuesday, December 21, 2010



ಕೆರೆಗೆ ಹಾರವಾದ ಆಟೋ, ಪ್ರಯಾಣಿಕರು ಪಾರು, ಸ್ಥಳದಲ್ಲಿದ್ದವರ ಸಹಕಾರದಿಂದ ತಪ್ಪಿದ ಭಾರಿ ಅನಾಹುತ:
ಚಿಕ್ಕನಾಯಕನಹಳ್ಳಿ,ಡಿ.21: ತಾಲೂಕಿನ ನವಿಲೆ ಕೆರೆಗೆ ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದ್ದು ಇದರಿಂದ 6 ಜನಕ್ಕೆ ತೀವ್ರತರತರವಾಗಿ ಪೆಟ್ಟು ಬಿದ್ದಿದ್ದು ಇದರಲ್ಲಿ ಇಬ್ಬರು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಿದ್ದಾರೆ. ಆಟೋದಲ್ಲಿ 12 ಜನರಿದ್ದರು ಎಂಬುದಾಗಿ ಪ್ರತ್ಯಕ್ಷ ದಶರ್ಿ ಪತ್ರಿಕೆಗೆ ತಿಳಿಸಿದ್ದಾರೆ.
ಕುಪ್ಪೂರು ಕಡೆಯಿಂದ ಬಂದ ಲಗೇಜ್ ಆಟೋ, ಚಿ.ನಾ.ಹಳ್ಳಿ ಕಡೆಯಿಂದ ಬಂದ ಪ್ಯಾಸೆಂಜರ್ ಆಟೋಕ್ಕೆ ನವಿಲೆ ಏರಿಯ ಮೇಲೆ ಮುಖಾಮುಖಿ ಢಿಕ್ಕಿ ಹೊಡೆದು ಎರಡು ಆಟೋಗಳು ನವಿಲೆ ಕೆರೆಗೆ ಬಿದ್ದಿವೆ. ಇದರಿಂದ ಆಟೋದಲ್ಲಿದ್ದ 12 ಜನರು ನೀರಿನೊಳಗೆ ಬಿದ್ದಿದ್ದು ತಕ್ಷಣವೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದವರು ಹಾಗೂ ಹೋಲದಲ್ಲಿ ಕೆಲಸ ಮಾಡುತ್ತಿದ್ದವರು ತಕ್ಷಣ ಕಾರ್ಯ ಪ್ರವೃತ್ತರಾಗಿ ನೀರಿನಲ್ಲಿ ಬಿದ್ದವರನ್ನು ದಡಕ್ಕೆ ತಂದು ಆಟೋ ಒಂದರಲ್ಲಿ ಕೆಲವರನ್ನು, ನಂತರ ಸಕರ್ಾರಿ ಬಸ್ನಲ್ಲಿ ಉಳಿದವರನ್ನು ತಕ್ಷಣವೇ ಚಿ.ನಾ.ಹಳ್ಳಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದರಲ್ಲಿ ಹಾಸನದಿಂದ ಕಪ್ಪೂರು ಜಾತ್ರೆಗೆಂದು ಬಂದಿದ್ದ ಹೇಮ ಹಾಗೂ ಚಿ.ನಾ.ಹಳ್ಳಿಯ ಸರ್ವಮಂಗಳ ಎಂಬುವವರಿಗೆ ತೀವ್ರವಾದ ಪೆಟ್ಟಾಗಿದ್ದು ಪ್ರಜ್ಞಾಹೀನರಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ನೀಡಿದ ಎರಡು ಗಂಟೆ ಕಳೆದರೂ ಪ್ರಜ್ಞೆ ಬಾರದ ಹಿನ್ನೆಲೆಯಲ್ಲಿ ಇವರನ್ನು ಹೆಚ್ಚನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಲಾಯಿತು. ಅಪಘಾತಕ್ಕೆ ಇಡಾಗಿದ್ದ ಲಗೇಜ್ ಆಟೋ ಮಾಲೀಕರಾದ ಚಟ್ಟಸಂದ್ರದ ಮೈಲಾರಲಿಂಗಾಚಾರ್ ಹಾಗೂ ಅವರ ಮಗ ಹರೀಶ್ ಇಬ್ಬರಿಗೂ ಗಾಯಗಳಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ನವಿಲೆ, ಮಾರಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿಮಾನವೀಯತೆ ಮೆರೆದು ಗಾಯಳುಗಳನ್ನು ಸಾಗಿಸುವುದರಿಂದ ಮೊದಲಗೊಂಡು ಜೆ.ಸಿ.ಬಿ.ಯನ್ನು ತಂದು ಆಟೋಗಳನ್ನು ಎತ್ತುವ ತನಕ ಎಲ್ಲ ಕಾರ್ಯದಲ್ಲೂ ಗ್ರಾಮಸ್ಥರ ಸಹಕಾರದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿತ್ತು.
ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ತಿಪಟೂರು ಉಪವಿಭಾಗಾಧಿಕಾರಿ ಪಾಟೀಲ್, ತಹಶೀಲ್ದರ್ ಟಿ.ಸಿ.ಕಾಂತರಾಜು, ಸ್ಥಳಕ್ಕೆ ಭೇಟಿ ನೀಡಿದ್ದರು. ಚಿ.ನಾ.ಹಳ್ಳಿ ಪಿ.ಎಸ್.ಐ. ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ಖಚಿತತೆಗಿಂತ ರೋಚಕತೆಗೆ ಒತ್ತು ನೀಡಿದ ಟಿ.ವಿ.ಮಾಧ್ಯಮ: ಘಟನೆ ನಡೆದು ಸ್ವಲ್ಪ ಹೊತ್ತಿಗೆ ಸುದ್ದಿ ಚಾನಲ್ಗಳು ಸುದ್ದಿಯನ್ನು ಬ್ರೇಕ್ ಮಾಡುವ ಭಾರಟೆಯಲ್ಲಿ ಬದುಕಿದ್ದಗಾಯಳುಗಳನ್ನು ತಮ್ಮ ಸುದ್ದಿ ಪ್ರಸಾರದ ಮೂಲಕ ಸಾಯಿಸಿದರಲ್ಲದೆ, ಆಸ್ಪತ್ರೆಯಲ್ಲಿದ್ದವರನ್ನು ಕಾಣೆಯನ್ನಾಗಿಸಿದರು. ಇದರಿಂದ ಗಾಬರಿಗೊಂಡ ಜನರ ದಂಡೇ ಘಟನೆಯ ಸ್ಥಳಕ್ಕೆ ಧಾವಿಸಿದ್ದರು. ಸ್ಥಳಕ್ಕೆ ಆಗಮಿಸಿದ ಜನರು ಸಂಪೂರ್ಣ ವಿಷಯವನ್ನು ಗ್ರಹಿಸಿದ ಮೇಲೆ ಸುದ್ದಿಯನ್ನು ಖಚಿತವಾಗಿ ಬಿತ್ತರಿಸದ ಟಿ.ವಿ.ಯವರನ್ನು ಶಪಿಸುತ್ತಿದ್ದರು. ರೋಚಕ ಸುದ್ದಿಯನ್ನು ಕೊಡುವ ಆತುರದಲ್ಲಿ ತಪ್ಪು ಸುದ್ದಿಯನ್ನು ನೀಡುವುದು ಎಷ್ಟು ಸರಿ ಎಂದು ಸ್ಥಳದಲ್ಲಿದ್ದ ಪತ್ರಿಕೆಯ ವರದಿಗಾರರನ್ನು ಪ್ರಶ್ನಿಸುತ್ತಾ ು ವಿಮಶರ್ೆ ಮಾಡುತ್ತಿದ್ದರು.

ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ ಅಂತಿಮವಾಗಿ 26 ಅಭ್ಯಥರ್ಿ ಕಣದಲ್ಲಿದ್ದಾರೆ
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಈ ಪೈಕಿ 26 ಜನರು ಅಂತಿಮವಾಗಿ ಕಣದಲ್ಲಿ ಉಳಿದು 23 ಜನರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಹುಳಿಯಾರು ಕ್ಷೇತ್ರದಲ್ಲಿ 5, ಹೊಯ್ಸಳಕಟ್ಟೆಯಿಂದ 4, ಹಂದನಕೆರೆ 6, ಕಂದೀಕೆರೆ 4 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 7 ಅಬ್ಯಾಥರ್ಿಗಳು ಕಣದಲ್ಲಿ ಉಳಿದಿದ್ದಾರೆ.
ಶೆಟ್ಟೀಕೆರೆ ಕ್ಷೇತ್ರದಿಂದ ಕಾಂಗೈನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಬಿ.ಜೆ.ಪಿಯಿಂದ ಎಚ್.ಬಿ.ಪಂಚಾಕ್ಷರಯ್ಯ, ಜೆ.ಡಿ.ಯು ನಿಂದ ಟಿ.ಶಂಕರಲಿಂಗಪ್ಪ, ಜೆ.ಡಿ.ಎಸ್ನಿಂದ ಎಸ್.ಎನ್.ಸತೀಶ್, ಪಕ್ಷೇತರರಾಗಿ ಬಿ.ಎನ್.ಶಿವಪ್ರಕಾಶ್, ಬಿ.ನಾಗರಾಜು, ಟಿ.ಆರ್.ಮಹೇಶ್ ಅಂತಿಮವಾಗಿ ಕಣದಲ್ಲಿದ್ದಾರೆ.
ಕಂದಿಕೆರೆ ಕ್ಷೇತ್ರದಲ್ಲಿ ಜೆ.ಡಿ.ಯುನ ಜಿ.ಲೋಹಿತಾ ಬಾಯಿ, ಕಾಂಗ್ರೆಸ್ನಿಂದ ಜಿ.ಪರಮೇಶ್ವರಯ್ಯ, ಬಿ.ಜೆ.ಪಿಯಿಂದ ಸಿ.ರಂಗನಾಯ್ಕ, ಜೆ.ಡಿ.ಎಸ್ನಿಂದ ಈರಯ್ಯ, ಅಂತಿಮ ಕಣದಲ್ಲಿದ್ದಾರೆ.
ಹಂದನಕೆರೆ: ಕ್ಷೇತ್ರದಲ್ಲಿ ಬಿ.ಎಸ್.ಪಿಯಿಂದ ಪ್ರೇಮಲತ, ಕಾಂಗ್ರೆಸ್ನಿಂದ ಜಯಲಕ್ಷ್ಮಮ್ಮ, ಜೆ.ಡಿ.ಎಸ್ನಿಂದ ಜಾನಮ್ಮ, ಬಿ.ಜೆ.ಪಿಯಿಂದ ಯಶೋದ ಬಸವರಾಜು, ಜೆ.ಡಿ.ಯು.ನಿಂದ ಎ.ಎಸ್.ಅನುಸೂಯಮ್ಮ, ಪಕ್ಷೇತರರಾಗಿ ಮರುಳಮ್ಮ ಕಣದಲ್ಲಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜ್ಯೋತಿ, ಬಿ.ಜೆ.ಪಿಯಿಂದ ನಿಂಗಮ್ಮ, ಜೆ.ಡಿ.ಎಸ್ನಿಂದ ಜಯಲಕ್ಷ್ಮೀ, ಜೆ.ಡಿ.ಯು ನಿಂದ ಭಾರತಮ್ಮ, ಕಣದಲ್ಲಿದ್ದಾರೆ..
ಹುಳಿಯಾರು: ಕ್ಷೇತ್ರದಲ್ಲಿ ಜೆ.ಡಿ.ಎಸ್ನಿಂದ ಎನ್.ಜಿ.ಮಂಜುಳ, ಬಿ.ಜೆ.ಪಿಯಿಂದ ಎಸ್.ಎಚ್.ಲತಾ, ಕಾಂಗ್ರೆಸ್ನಿಂದ ಎಚ್.ಡಿ.ರಮಾದೇವಿ, ಜೆ.ಡಿ.ಯು ನಿಂದ ವೈ.ಎಮ್.ರೇಣುಕಾದೇವಿ, ಪಕ್ಷೇತರರಾಗಿ ಚಂದ್ರಕಲಾ ಕಣದಲ್ಲಿದ್ದಾರೆ.

ಜನಪದ ಕಲಾವಿದರು ಸಂಘಟಿತರಾದರೆ ಮಾತ್ರ ಕಲೆ ಉಳಿಯಲು ಸಾಧ್ಯ: ಎಂ.ಎಸ್.ಚಂದ್ರಪ್ಪ
ಚಿಕ್ಕನಾಯಕನಹಳ್ಳಿ,ಡಿ.18: ಜಾನಪದ ಕಲಾವಿದರು ಸಂಘಟಿತರಾಗಿ ಜನರಿಂದ ದೂರವಾಗುತ್ತಿರುವ ಜಾನಪದ ಕಲೆಗಳನ್ನು ಬೆಳಸಲು ಸಹಕಾರ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಎಂ.ಎಸ್. ಚಂದ್ರಪ್ಪನವರು ಹೇಳಿದರು.
ಪಟ್ಟಣದ ಬನಶಂಕರಿ ದೇವಾಲಯದ ಶ್ರೀ ರಾಮಮಂದಿರದಲ್ಲಿ ನಡೆದ ಚಿಗುರು ಹಾಗೂ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚಿಕ್ಕವಯಸ್ಸಿನಿಂದಲೇ ಕಲೆಗಳನ್ನು ಮೈಗೂಡಿಸಿಕೊಂಡು. ಪರಂಪರಾನುಗತವಾಗಿ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸಬೇಕು ಮತ್ತು ಶ್ರೀರಂಗ ಕ್ರೀಡಾ ಸಾಂಸ್ಕೃತಿಕ ಯುವ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾಲೂಕು ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಹಾಗೂ ಇಲಾಖಾ ವತಿಯಿಂದ ಸಕರ್ಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷರಾದ ಸಿ.ಎ.ಕುಮಾರಸ್ವಾಮಿ ಮಾತನಾಡಿ ಇಂದಿನ ಸಮಾಜದ ಅವನತಿಗೆ ಜನಪದ ಕಲೆಗಳು ಜನರಿಂದ ದೂರವಾಗುತ್ತಿರುವುದೇ ಕಾರವಾಗಿದ್ದು, ಜನಪದ ಕಲೆಗಳು ಸಮಾಜದ ಕೈಗನ್ನಡಿಯಂತಿದ್ದು ಇದನ್ನು ಬೆಳಸುವುದರಿಂದ ಸಾಮಾಜಿಕ ಮೌಲ್ಯಗಳು ವೃದ್ದಿಯಾಗುತ್ತವೆ ಎಂದು ತಿಳಿಸಿದರು. ಕಲಾವಿದರ ಇಂದಿನ ಸ್ಥಿತಿಗತಿಗಳ ಬಗ್ಗೆ ಚಚರ್ಿಸುತ್ತಾ ಜನಪದ ಕಲಾವಿದರ ಬಗ್ಗೆ ಗೌರವ ಭಾವನೆ ತಾಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ದೇವಾಂಗ ಸಂಘದ ಅಧ್ಯಕ್ಷ ಸಿ.ಜೆ.ಶೇಷಪ್ಪ, ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ಭಾಗವಹಿಸಿದ್ದರು.
ಸಿ.ಎ.ಚಿಕ್ಕನಾರಾಯಣಸ್ವಾಮಿ ನಿರೂಪಿಸಿ ಸಿ.ಟಿ.ಜಯಕೃಷ್ಣ ಸ್ವಾಗತಿಸಿ, ಸಿ.ಎಂ.ರಂಗನಾಥ್ ವಂದಿಸಿದರು.



Thursday, December 16, 2010


ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಸಪ್ತದ್ವಾರ ದರ್ಶನ
ಚಿಕ್ಕನಾಯಕನಹಳ್ಳಿ.ಡಿ.16: 15ನೇ ವರ್ಷದ ವೈಕುಂಠ ಏಕಾದಶಿ ಮಹೋತ್ಸವದ ಪ್ರಯುಕ್ತ ಪಟ್ಟಣದ ಲಕ್ಷ್ಮೀವೆಂಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇದೇ 17, 18, 19 ರಂದು ದೇವಸ್ಥಾನದಲ್ಲಿ ಪುಷ್ಪಾಲಂಕಾರ, ಸಪ್ತದ್ವಾರದ ದರ್ಶನವನ್ನು ಏರ್ಪಡಿಸಲಾಗಿದೆ.
17ರಂದು ಸಪ್ತದ್ವಾರಗಳ ದರ್ಶನ, ಮತ್ತು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, 18ರಂದು ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ, ಸಂಜೆ ದೇವರ ಉಯ್ಯಾಲೆ ಉತ್ಸವ, 19ರಂದು ಊರಿನ ಪ್ರಮುಖ ಬೀದಿಗಳಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಶಿಕ್ಚಕರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಉನ್ನತ ವ್ಯಾಸಾಂಗ
ಚಿಕ್ಕನಾಯಕನಹಳ್ಳಿ,ಡಿ.16: ವಿಜ್ಞಾನ ಗಣಿತ ಮತ್ತು ಆಂಗ್ಲ ಭಾಷಾ ಶಿಕ್ಷಕರ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಉನ್ನತ ವ್ಯಾಸಾಂಗ ನಿಯೋಜಿಸಲು ಶಿಕ್ಷಕರ ತಮ್ಮಾ ಇಚ್ಚಾ ಪತ್ರವನ್ನು ಇದೇ 20ರ ಒಳಗಾಗಿ ಬಿ.ಇ.ಒ ಕಛೇರಿಗೆ ಸಲ್ಲಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ 49 ಉಮೇದುವಾರಿಕೆ, 19 ತಾ.ಪಂ. ಕ್ಷೇತ್ರಗಳಿಗೆ 114 ನಾಮಪತ್ರಗಳು
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು, 19 ತಾ.ಪಂ.ಕ್ಷೇತ್ರಗಳಿಗೆ 114 ಅಬ್ಯಾಥರ್ಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರ ದಿಂದ 7, ಹೊಯ್ಸಳಕಟ್ಟೆಯಿಂದ 10, ಹಂದನಕೆರೆ 7, ಕಂದೀಕೆರೆ ಕ್ಷೇತ್ರದಿಂದ 15 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 10 ಉಮೇದುವಾರಿಕೆ ಅಜರ್ಿಗಳು ಚುನಾವಣಾಧಿಕಾರಿ ರವಿಕುಮಾರ್ ರವರಿಗೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಅಬ್ಯಾಥರ್ಿಗಳು ಉತ್ಸಾಹದಿಂದ ಉಮೇದುವಾರಿಕೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ 6 ಅಜರ್ಿಗಳು, ಬಿ.ಜೆ.ಪಿ. ಹೆಸರಿನಲ್ಲಿ 7, ಜೆ.ಡಿ.ಎಸ್.ಹೆಸರಿನಲ್ಲಿ 9, ಜೆ.ಡಿ.ಯು ಹೆಸರಿನಲ್ಲಿ 7, ಪಕ್ಷೇತರರು 17, ರೈತ ಸಂಘದಿಂದ 1, ಬಿ.ಎಸ್.ಪಿ.ಯಿಂದ 1 ಅಜರ್ಿಗಳು ಜಿ.ಪಂ. ಕ್ಷೇತ್ರಕ್ಕೆ ನೊಂದಾಯಿತವಾಗಿದೆ.
ಶೆಟ್ಟೀಕೆರೆ ಕ್ಷೇತ್ರದಿಂದ ಮಾಜಿ ಶಾಸಕ ಬಿ.ಲಕ್ಕಪ್ಪ , ನಿಜಾನಂದ ಮೂತರ್ಿ, ಬಿ.ನಾಗರಾಜು, ಟಿ.ಆರ್.ಮಹೇಶ್, ಎಚ್.ಬಿ.ಪಂಚಾಕ್ಷರಯ್ಯ, ಟಿ.ಶಂಕರಲಿಂಗಪ್ಪ, ಎಸ್.ಎನ್.ಸತೀಶ್, ಎಸ್.ಸಿ.ದಿನೇಶ್, ಬಿ.ಎನ್.ಶಿವಪ್ರಕಾಶ್ ನಾಮಪತ್ರ ಸಲ್ಲಿಸಿದ್ದಾರೆ.
ಕಂದಿಕೆರೆ ಕ್ಷೇತ್ರದಿಂದ ಜಿ.ಲೋಹಿತಾ ಬಾಯಿ, ಎಸ್.ಡಿ.ಮೂಡ್ಲಯ್ಯ, ಆರ್.ಹನುಮಂತಯ್ಯ, ಜಿ.ರಘುನಾಥ್, ರಾಮಚಂದ್ರನಾಯ್ಕ, ಜಿ.ರೇವಾನಾಯ್ಕ, ಎಸ್.ಟಿ.ಚಂದ್ರಯ್ಯ, ಜಿ.ಪರಮೇಶ್ವರಯ್ಯ, ಕಮಲಾನಾಯ್ಕ, ಸಿ.ರಂಗನಾಯ್ಕ, ಎಮ್.ಎಲ್.ಗಂಗಾಧರಯ್ಯ, ಸಣ್ಣಯ್ಯ, ಈರಯ್ಯ, ಜಿ.ನರಸಿಂಹಮೂತರ್ಿ, ಎಸ್.ಟಿ.ಗಿರಿಯಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ: ಕ್ಷೇತ್ರದಿಂದ ಪ್ರೇಮಲತ, ಜಯಲಕ್ಷ್ಮಮ್ಮ, ಜಾನಮ್ಮ, ಯಶೋದ ಬಸವರಾಜು, ರೇಣುಕಮ್ಮ ಎ.ಎಸ್.ಅನುಸೂಯಮ್ಮ, ಮರುಳಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಲಕ್ಷ್ಮೀದೇವಿ, ತೊಳಸಮ್ಮ, ಜ್ಯೋತಿ, ಎಚ್.ಎನ್.ಗೌರಮ್ಮ, ನಿಂಗಮ್ಮ, ಜಯಲಕ್ಷ್ಮೀ, ಮಹಾಲಕ್ಷ್ಮಿ, ರಾಧಮ್ಮ, ಭಾರತಮ್ಮ, ಚಂದ್ರಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹುಳಿಯಾರು: ಕ್ಷೇತ್ರದಿಂದ ಬಿ.ಎ.ನಾಗವೇಣಿ, ಎನ್.ಜಿ.ಮಂಜುಳ, ನಾಗಮ್ಮ, ಎಸ್.ಎಚ್.ಲತಾ, ಚಂದ್ರಕಲಾ, ಎಚ್.ಡಿ.ರಮಾದೇವಿ, ವೈ.ಎಮ್.ರೇಣುಕಾದೇವಿ ನಾಮಪತ್ರ ಸಲ್ಲಿಸಿದ್ದಾರೆ.
19 ತಾಲೂಕು ಪಂಚಾಯ್ತಿ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿರುವವರು: 114 ಅಬ್ಯಾಥರ್ಿಗಳು ನಾಮಪತ್ರ ಸಲ್ಲಿಸಿದ್ದು ಕ್ಷೇತ್ರವಾರು ವಿವರ ಇಂತಿದೆ. ಹುಳಿಯಾರಿನಲ್ಲಿ 8 ಜನ ನಾಮಪತ್ರ ಸಲ್ಲಿಸಿದ್ದು, ಯಳನಡುವಿನಲ್ಲಿ 6, ತಿಮ್ಲಾಪುರದಲ್ಲಿ 9, ಕೆಂಕೆರೆಯಲ್ಲಿ 9, ಗಾಣಧಾಳು 4, ಹೊಯ್ಸಳಕಟ್ಟೆ 4, ತಿಮ್ಮನಹಳ್ಳಿ 5, ತೀರ್ಥಪುರ 5, ಕಂದಿಕೆರೆ 4, ಮಾಳಿಗೆಹಳ್ಳಿ 5, ಹೊನ್ನೆಬಾಗಿ 5, ಜಯಚಾಮರಾಜ ಪುರ 6, ಶೆಟ್ಟೀಕೆರೆ 7, ಕುಪ್ಪೂರು 5, ಮತ್ತೀಘಟ್ಟ 7, ಬರಗೂರು 6, ಹಂದನಕೆರೆ 5, ದೊಡ್ಡೆಣ್ಣೆಗೆರೆ 8, ದಸೂಡಿ 8 ನಾಮಪತ್ರಗಳನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಹುಳಿಯಾರು ಕ್ಷೇತ್ರದಿಂದ ಪವರ್ಿನ್, ಸಿ.ಎಮ್.ಗಾಯಿತ್ರಿ, ಫಾತಿಮ.ಬಿ.ಬಿ, ಚಂದ್ರಕಲಾ ಎಚ್.ಆರ್, ಹಸೀನಾಬಾನು, ವೀಣಾ, ರುಕ್ಸನಾಭಾನು ನಾಮಪತ್ರ ಸಲ್ಲಿಸಿದ್ದಾರೆ.
ಯಳನಡು ಕ್ಷೇತ್ರದಿಂದ ಸುಮಿತ್ರ, ಲತಾಮಣಿ, ತಾರಾಮಣಿ ಯಾದವ್, ಜಯಲಕ್ಷ್ಮೀ, ಎಂ.ಆರ್.ಜ್ಯೋತಿ, ವಿಜಯಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಲಾಪುರ ಕ್ಷೇತ್ರದಿಂದ ಎಚ್.ಆರ್.ಕೃಷ್ಣಮೂತರ್ಿ, ಎಚ್.ಆರ್.ರಾಜಣ್ಣ, ಟಿ.ಆರ್.ರಮೇಶ್, ಎಚ್.ಎನ್.ರಾಮಯ್ಯ, ಕುಮಾರಸ್ವಾಮಿ, ಚಂದ್ರಶೇಖರಯ್ಯ, ಜಯಣ್ಣ, ಎಮ್.ಮಲ್ಲೇಶಯ್ಯ, ಎಚ್.ಚಂದ್ರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಕೆಂಕೆರೆ ಕ್ಷೇತ್ರದಿಂದ ರಾಜಶೇಖರರೆಡ್ಡಿ, ಕೆ.ಆರ್.ಚನ್ನಬಸವಯ್ಯ, ಕೆ.ಎಂ.ನವೀನ, ನಾಗರಾಜ್, ಶಿವಕುಮಾರ್, ಕೆ.ಸಿ.ಶಿವಮೂತರ್ಿ, ಧನಂಜಯ್ಯ, ಎಮ್,ನಾಗರಾಜು ನಾಮಪತ್ರ ಸಲ್ಲಿಸಿದ್ದಾರೆ.
ಗಾಣದಾಳು ಕ್ಷೇತ್ರದಿಂದ ಎಚ್.ಕೆ.ರಾಮಲಿಂಗಪ್ಪ, ಆರ್.ಉದಯಕುಮಾರ್, ಜಿ.ಆರ್.ಸೀತಾರಾಮಯ್ಯ, ಹೆಚ್.ಜಿ.ವಿಶ್ವನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಿಂದ ಕವಿತ ಎ.ಜಿ, ಚಂದ್ರಪ್ರಭಾ, ಲಕ್ಷ್ಮೀದೇವಿ, ಮೀನಾಕ್ಷಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರದಿಂದ ಕೆ.ಎಸ್.ಸುಮಿತ್ರ, ಪುಟ್ಟಗಂಗಮ್ಮ, ಕರಿಯಮ್ಮ, ಶಿವಮ್ಮ, ಲಲಿತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ತೀರ್ಥಪುರ ಕ್ಷೇತ್ರದಿಂದ ರತ್ನಮ್ಮ, ಕೆ.ಬಿ.ಮಂಜುಳ, ಎಮ್.ಇ.ಲತಾ, ಧನಲಕ್ಷ್ಮೀ, ಎಮ್.ಕೆ.ಲಕ್ಷ್ಮೀದೇವಯ್ಯ ನಾಮಪತ್ರ ಸಲ್ಲಿಸಿದ್ದಾರೆ
ಕಂದಿಕೆರೆ ಕ್ಷೇತ್ರದಿಂದ ಉಮಾದೇವಿ, ಪಾರ್ವತಮ್ಮ, ರೇಣುಕಮ್ಮ, ಕ್ಯಾತಲಿಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ ಎಂ.ಎಸ್. ಚಂದ್ರಕಲಾ, ಮಧು ಎನ್.ಸಿ, ನಿರ್ಮಲ, ಲತಾ, ಶಾರದಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ಹೊನ್ನೆಬಾಗಿ ಕ್ಷೇತ್ರದಿಂದ ನಾಗರಾಜು ಎಚ್.ಟಿ, ಶಶಿಧರ, ವಿವೇಕಾನಂದಸ್ವಾಮಿ, ಎಚ್.ಜಿ.ಪ್ರಸನ್ನಕುಮಾರ್, ಶಂಕರಯ್ಯ ನಾಮಪತ್ರ ಸಲ್ಲಿಸಿದ್ದಾರೆ.
ಜಯಚಾಮರಾಜಾಪುರ ಕ್ಷೇತ್ರದಿಂದ ಜಗದೀಶ್ ಎಮ್.ಎಮ್, ರವೀಶ್, ದಯಾನಂದಮೂತರ್ಿ, ಎಂ.ಪಿ.ಪ್ರಸನ್ನಕುಮಾರ್, ಶೇಖರಯ್ಯ, ಕೆ.ಎಮ್.ಸತೀಶ್ಬಾಬು ನಾಮಪತ್ರ ಸಲ್ಲಿಸಿದ್ದಾರೆ.
ಶೆಟ್ಟಿಕೆರೆ ಕ್ಷೇತ್ರದಿಂದ ಎಸ್.ಎನ್.ನಿಂಗಪ್ಪ, ಎಸ್.ಜಿ.ಮಹೇಶ್, ಜಿ.ಟಿ.ವೆಂಕಟೇಶ್, ಎ.ಬಿ.ರಮೇಶ್ಕುಮಾರ್, ರಾಜಶೇಖರಪ್ಪ, ಎ.ಬಿ.ಮಹೇಶ್, ಎಸ್.ಆರ್. ಉಮೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಕುಪ್ಪೂರು ಕ್ಷೇತ್ರದಿಂದ ಭಾಗ್ಯಮ್ಮ, ಚಿಕ್ಕಮ್ಮ, ಸುಜಾತ, ಪ್ರೇಮಲೀಲ, ಸುವರ್ಣಮ್ಮ ನಾಮಪತ್ರ ಸಲ್ಲಸಿದ್ದಾರೆ.
ಮತಿಘಟ್ಟ ಕ್ಷೇತ್ರದಿಂದ ನಿರಂಜನಮೂತರ್ಿ, ಮಹದೇವಯ್ಯ, ಕರಿಯಪ್ಪ, ತಿಮ್ಮಯ್ಯ, ಪ್ರಭಾಕರ, ಡಿ.ದೇವರತ್ನಯ್ಯ, ರಾಜಣ್ಣ ನಾಮಪತ್ರ ಸಲ್ಲಿಸಿದ್ದಾರೆ.
ಬರಗೂರು ಕ್ಷೇತ್ರದಿಂದ ಚಂದ್ರಬಾಯಿ, ಶ್ರೀದೇವಿ, ಶಾರದಮ್ಮ, ಗುಂಡಮ್ಮ, ಕೆ.ಆರ್.ಚೇತನ, ನೇತ್ರಾವತಿ ನಾಮಪತ್ರ ಸಲ್ಲಿಸಿದ್ದಾರೆ.
ಹಂದನಕೆರೆ ಕ್ಷೇತ್ರದಿಂದ ಸಿದ್ದಪ್ಪ, ಪಾಂಡುರಂಗಯ್ಯ, ಎಮ್.ಲಿಂಗರಾಜು, ಎಚ್.ಎನ್.ರಾಮನಾಥ್, ಡಿ.ಶಿವರಾಜು ನಾಮಪತ್ರ ಸಲ್ಲಿಸಿದ್ದಾರೆ.
ದೊಡ್ಡೆಎಣ್ಣೆಗೆರೆ ಕ್ಷೇತ್ರದಿಂದ ಪುಷ್ಪಾವತಿ, ರೇಣುಕಮ್ಮ, ಚಂದ್ರಮ್ಮ, ಮಂಜಮ್ಮ, ಲಕ್ಷ್ಮೀದೇವಿ, ಲೀಲಾವತಿ, ಗೀತಾ, ಹೇಮಾವತಿ ನಾಮಪತ್ರ ಸಲ್ಲಿಸಿದ್ದಾರೆ.
ದಸೂಡಿ ಕ್ಷೇತ್ರದಿಂದ ಶ್ರೀನಿವಾಸಮೂತರ್ಿ, ಆರ್.ಪಿ.ವಸಂತಯ್ಯ, ರಮೇಶ್ ಡಿ.ಬಿ, ನಿಂಗಪ್ಪ ಎಮ್.ಎಲ್, ಶಾಂತಕುಮಾರ್ ಡಿ.ಎಸ್, ಚಿನ್ನಸ್ವಾಮಿ, ಶಿವಕುಮಾರ್, ಎಮ್.ಎಲ್.ರಾಮಯ್ಯ ನಾಮಪತ್ರ ಸಲ್ಲಿಸಿದ್ದಾರೆ.


ಸ್ಮಾಟರ್್ ಕಾಡರ್್ಗೆ ಶಿಕ್ಷಕ ಶಿಕ್ಷಕಿಯರ ಸಂಘದ ವಿರೋಧ
ಚಿಕ್ಕನಾಯಕನಹಳ್ಳಿ ಡಿ.15 : ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡಲು ಹೊರಟಿರುವುದು ಶಿಕ್ಷಕರ ಸಮೂಹಕ್ಕೆ ಹೊರೆಯೇ ಹೊರತು ಅದರಿಂದ ಯಾವುದೇ ಹೇಳಿಕೊಳ್ಳುವಂತಹ ಅನುಕೂಲಗಳಿಲ್ಲ ಬದಲಾಗಿ ಶಿಕ್ಷಕರ ಸಂಬಳದಲ್ಲೂ ತಲಾ 210 ರೂ.ಗಳನ್ನು ಸಂಬಳದಲ್ಲಿ ಕಟಾವಣೆ ಮಾಡ ಹೊರಟಿರುವುದು ಸರಿಯಲ್ಲ. ಈ ಬಗ್ಗೆ ಶಿಕ್ಷಕ ಸಮೂಹ ಎಚ್ಚರದಿಂದಿರಬೇಕು ಎಂದು ತಾಲ್ಲೂಕು ಸಕರ್ಾರಿ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ಮನವಿ ಮಾಡಿದೆ.
ರಾಜ್ಯ ಶಿಕ್ಷಕರ ಸಂಘ ಈ ಬಗ್ಗೆ ಹಣಕಾಸು ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ ಎಂಬುದು ನಮ್ಮ ಸಂಘದ ಗಮನಕ್ಕೆ ಬಂದಿದೆ. ಶಿಕ್ಷಕರು ತಮ್ಮ ಸೇವಾ ಮಾಹಿತಿಯನ್ನು ತಮ್ಮ ಎಸ್.ಆರ್. ಗಳ ನಕಲು ಪ್ರತಿಯ ಮೂಲಕ ಪಡೆಯಬಹುದು ಅಥವಾ ಹೆಚ್.ಆರ್.ಎಂ.ಎಸ್ ನಲ್ಲಿ ಪಡೆಯಬಹುದು ಎಂದು ಶಿಕ್ಷಕ-ಶಿಕ್ಷಕಿಯರ ಸಂಘವು ತಿಳಿಸಿದೆ.
ಶಿಕ್ಷಕರಿಗೆ ಸ್ಮಾಟರ್್ ಕಾಡರ್್ ನೀಡುವ ಯೋಜನೆ ಶಿಕ್ಷಣ ಇಲಾಖೆಯ ಉದ್ದೇಶವಾಗಿದ್ದರೆ ಶಿಕ್ಷಕರಿಗೆ ಆಥರ್ಿಕ ಹೊರೆಯಾಗದಂತೆ ಇಲಾಖೆಯೇ ನಿರ್ವಹಿಸುವುದಾದರೆ ನಮ್ಮ ಸಂಘ ಸ್ವಾಗತಿಸುತ್ತದೆ.
ಅಭಿನಂದನೆ : 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ನಮ್ಮ ತಾಲ್ಲೂಕಿನ ರೋಟರಿ ಶಾಲೆ ಹಾಗೂ ಜೆ.ಸಿ. ಪುರ ಮೊರಾಜರ್ಿ ವಸತಿ ಶಾಲೆ ಆಯ್ಕೆಯಾಗಿರುವುದಕ್ಕೆ ತಾಲ್ಲೂಕು ಸರ್ಕರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘವು ವಿದ್ಯಾಥರ್ಿಗಳನ್ನು ಹಾಗೂ ಶಾಲಾ ಆಡಳಿತವನ್ನು ಅಭಿನಂದಿಸುತ್ತದೆ.

Tuesday, December 14, 2010

Monday, December 13, 2010

Sunday, December 12, 2010


ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲಾಗದವರೂ ವಿಕಲ ಚೇತನರು: ಅನೀಸ್ ಕೈಸರ್
ಚಿಕ್ಕನಾಯಕನಹಳ್ಳಿ,ಡಿ.9: ವಿಕಲ ಚೇತನರನ್ನು ಸ್ವಾವಲಂಭಿಗಳನ್ನಾಗಿಸಿ ಅವರ ಬದುಕನ್ನು ಹಸನು ಮಾಡಿಕೊಂಡು ಉತ್ತಮ ಜೀವನ ನಡೆಸಲು ಹುರಿದುಂಬಿಸುವುದೇ ವಿಶ್ವ ಅಂಗವಿಕಲ ದಿನಾಚರಣೆಯ ಉದ್ದೇಶವೆಂದು ಸಿ.ಡಿ.ಪಿ.ಓ. ಅನೀಸ್ ಕೈಸರ್ ತಿಳಿಸಿದರು.
ಪಟ್ಟಣದ ಸಿ.ಡಿ.ಪಿ.ಓ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗಗಳು ಊನವಾಗಿದ್ದು ಯಾವುದೇ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ತನ್ನ ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲು ಅಸಮರ್ಥರಾಗುತ್ತಾರೋ ಅಂತಹವರನ್ನು ವಿಕಲಚೇತನರೆಂದು ಕರೆಯುತ್ತೇವೆ ಎಂದರಲ್ಲದೆ, ಅಧಿನಿಯಮ 1995 ರ ಪ್ರಕಾರ ಅಂಗವಿಕಲತೆಯನ್ನು ಚಲನ ದೋಷವುಳ್ಳವರು ಅಥವಾ ದೈಹಿಕ ವಿಕಲ ಚೇತನರು, ದೃಷ್ಟಿ ದೋಷವುಳ್ಳವರು, ವಾಕ್ ಶ್ರವಣ ದೋಷವುಳ್ಳವರು, ಬುದಿಮಾಂದ್ಯತೆ. ಕುಷ್ಠರೋಗ ನಿವಾರಿತ ವಿಕಲ ಚೇತನರು, ಬಹುವಿಧ ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥರು ಈ ರೀತಿ ವಗರ್ಿಕರಿಸಬಹುದಾಗಿದೆ ಎಂದು ತಿಳಿಸಿದರು.
ವಿಕಲ ಚೇತನಕ್ಕೆ ಸಾಮಾನ್ಯ ಕಾರಣಗಳು ತಾಯಿಗೆ ಪೌಷ್ಠಿಕಂಶದ ಕೊರತೆ (ಅಪೌಷ್ಠಿಕತೆ) ಗಭರ್ಾವಸ್ಥೆಯಲ್ಲಿ ಸೋಂಕುಗಳು, ಸೋದರ ಸಂಬಂಧಿ ವಿವಾಹ, ತಂದೆ ತಾಯಿ ರಕ್ತ ಹೊಂದಾಣಿಕೆಯಿಲ್ಲದ ಪ್ರಸಂಗ, ಗಭರ್ಾವಸ್ಥೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ, ಖಾಯಿಲೆಗಳು, ತಾಯಿ ಮಾದಕ ವ್ಯಸನಿಯಾಗಿದ್ದಲ್ಲಿ, ಅಪಘಾತಗಳು, ಅವಧಿ ಪೂರ್ವ ಜನನಗಳು, ಕಾರಣವಾಗಿರುತ್ತದೆ ಎಂದು ತಿಳಿಸಿದರು.
ವಿಕಲ ಚೇತನ್ಯವನ್ನು ತಡೆಗಟ್ಟಲು ಗಭರ್ಾವಸ್ಥೆಯಲ್ಲಿ ಇದ್ದಾಗಲೇ ತಾಯಿ ವೇಳೆಗೆ ಸರಿಯಾಗಿ ಆಹಾರವನ್ನು ಸೇವಿಸಿ ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿದಲ್ಲಿ ವಿಕಲ ಚೇತನ ಮಕ್ಕಳು ಜನಿಸುವುದನ್ನು ತಡೆಗಟ್ಟಬಹುದು, ಮಗು ಹುಟ್ಟಿದ ಕೂಡಲೇ ತಾಯಿ ಮಗುವಿಗೆ ಎದೆಹಾಲನ್ನು ಕುಡಿಸುವುದರಿಂದ ಅದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದಿಂದಾಗಿ 6 ಮಾರಕ ರೋಗಗಳನ್ನು ತಡೆಗಟ್ಟುಲು ಸಾಧ್ಯ, ಆದುದರಿಂದ ಎಲ್ಲ ತಾಯಂದಿರು ಮಕ್ಕಳಿಗೆ ತಪ್ಪದೇ ಎದೆ ಹಾಲನ್ನು ಕುಡಸಬೇಕೆಂದರು.
ವಿಕಲ ಚೈತನ್ಯರನ್ನು ಪ್ರಾರಂಭದಲ್ಲಿ ಗುರುತಿಸಿ ವಿಕಲ ಚೈತನ್ಯತೆಯನ್ನು ತಡೆಗಟ್ಟುವುದು, ಅಂಗವಿಕಲತೆ ತಡೆಗಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ನಿವಾರಣಾತ್ಮಕ ಶಸ್ತ್ರ ಚಿಕಿತ್ಸೆ ಸಾಧನ ಸಲಕರಣೆಗಳನ್ನು ಒದಗಿಸುವುದು, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ತಿಳಿಸಿದರು. ವಿಕಲ ಚೈತನ್ಯರಿಗೆ ವಿಶೇಷ ಶಾಲೆಗಳು, ಸಮನ್ವಯ ಶಿಕ್ಷಣ ವಿದ್ಯಾಥರ್ಿ ವೇತನ ಅಥವಾ ಪ್ರೋತ್ಸಾಹ ಧನವನ್ನು ಶಿಕ್ಷಣದಲ್ಲಿ ನಿಯಮಗಳ ಸಡಿಲಿಕೆ, ಶಬ್ದ, ಗ್ರಂಥಾಲಯ, ವಿಶೇಷ ತರಬೇತಿ ಕೇಂದ್ರಗಳು, ಪುಸ್ತಕಳ ಸರಬರಾಜು, ಸಕರ್ಾರಿ ಹುದ್ದೆಗಳಲ್ಲಿ ಮೀಸಲಾತಿ ಸಾಧನ ಉದ್ಯೋಗಕ್ಕೆ ಪ್ರೋತ್ಸಾಹ ಆಧಾರ, ಓಊಈಆಅ ಯೋಜನೆಗಳು, ಸಾದನ ಸಲಕರಣೆಗಳ ವಿತರಣೆ (ರಿಯಾಯಿತಿ ದರದಲ್ಲಿ) ಪೋಷಣಾ ಭತ್ಯೆ ಯೋಜನೆ, ಗುರುತಿನ ಚೀಟಿ, ಬುದ್ದಿ ಮಾಂಧ್ಯ ಮಕ್ಕಳ ಪೋಷಕರಿಗೆ ವಿಮಾ ಯೋಜನೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹ ಧನ, ರಾಜ್ಯ ಪ್ರಶಸ್ತಿಗಳು, ಸ್ವಯಂ ಸೇವಾ ಸಂಸ್ಥೆಗಳ ನೆರವುಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ ನವರು ಉದ್ಘಾಟನಾ ನುಡಿಗಳನ್ನು ಆಡುತ್ತಾ ತಾಯಿ ತನ್ನ ಮಗುವನ್ನು ಗಭರ್ಾವಸ್ಥೆಯಲ್ಲಿದ್ದಾಗಲೇ ಉತ್ತಮ ಆರೈಕೆ ಮಾಡಿ ವಿಕಲ ಚೈತನ್ಯವನ್ನು ತಡೆಗಟ್ಟುವಂತೆ ಶ್ರಮಿಸಿ ಉತ್ತಮ ಮಕ್ಕಳನ್ನು ಪಡೆದು ಸತ್ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು.
ದೊರೆಮುದ್ದಯ್ಯ ನವರು ಪುರಸಭಾ ಸದಸ್ಯರು ಮಾತನಾಡುತ್ತಾ ವಿಕಲ ಚೈತನ್ಯರು ಎಂದು ದ್ರೃತಿಗೆಡದೆ ಸಕರ್ಾರದ ಸವಲತ್ತುಗಳನ್ನು ಪಡೆದು ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು
ಸಪ್ತಕೋಟಿ ಪಂಚಾಕ್ಷರಿ ಮಂತ್ರದ ಜಪಯಜ್ಞ
ಚಿಕ್ಕನಾಯಕನಹಳ್ಳಿ,ಡಿ.09: ಗುರು ಮರುಳ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ಸಪ್ತಕೋಟಿ ಪಂಚಾಕ್ಷರಿ ಮಹಾ ಮಂತ್ರದ ಜಪಯಜ್ಞ ಕಾರ್ಯಕ್ರಮವನ್ನು ಇದೇ 13ರಿಂದ 19 ರವರಗೆ ಏರ್ಪಡಿಸಲಾಗಿದೆ ಎಂದು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಏಳು ದಿವನಗಳ ಕಾಲ ದಿನದ 24 ಗಂಟೆ ಸತತವಾಗಿ ಭಜನೆ ಮತ್ತು ಪಂಚಾಕ್ಷರಿಯ ಮಂತ್ರದೊಡನೆ ಏಕದಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
75 ವರ್ಷದ ನಿ. ನೌಕರರು ಸಂಘದಲ್ಲಿ ಹೆಸರನ್ನು ನೊಂದಾಯಿಸಿ
ಚಿಕ್ಕನಾಯಕನಹಳ್ಳಿ.ಡಿ.09: ತಾಲ್ಲೂಕು ನಿವೃತ್ತ ನೌಕರರ ಸಂಘದ 26 ನೇ ವರ್ಷದ ವಾಷರ್ಿಕ ಸಮಾರಂಭವನ್ನು ಇದೇ 19 ನೇ ತಾರೀಖಿನ ಭಾನುವಾರದಂದು ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಪ್ರತಿಷ್ಟಾನ ದಲ್ಲಿ ಏರ್ಪಡಿಸಲಾಗಿದ್ದು, 75ವರ್ಷ ತುಂಬಿದ ಸಂಘದ ಸದಸ್ಯರು ತಮ್ಮ ಜನ್ಮ ದಿನಾಂಕವಿರುವ ದಾಖಲೆಗಳನ್ನು ಕೂಡಲೇ ಚಿಕ್ಕನಾಯಕನಹಳ್ಳಿ ನಿವೃತ್ತ ನೌಕರರು ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಸಿ.ಡಿ. ರುದ್ರಮುನಿ ಯವರನ್ನು ಹಾಗೂ ಹುಳಿಯಾರು ಭಾಗದ ನಿವೃತ್ತ ನೌಕರರು ಸಂಘದ ಉಪಾಧ್ಯಕ್ಷರಾದ ಸಿ ರಾಮಯ್ಯ ಇವರನ್ನು 12ರ ಒಳಗೆ ಸಂಪಕರ್ಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಚಿ.ನಾ.ಹಳ್ಳಿ: ಜಾತಿ ಮತ್ತು ದುಡ್ಡಿನ ಲೆಕ್ಕಾಚಾರದಲ್ಲಿ ಟಿಕೇಟ್ ಹಂಚಿಕೆಯ ಕಸರತ್ತು
ಚಿಕ್ಕನಾಯಕನಹಳ್ಳಿ,ಡಿ.10: ಸ್ಥಳೀಯ ಸಂಸ್ಥೆಗಳಾದ ಜಿ.ಪಂ. ಹಾಗೂ ತಾ.ಪಂ.ಗಳ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರು ಮುಖವಾಗಿದೆ.
ಚುನಾವಣಾ ಕಣದಲ್ಲಿ ನೆಲೆ ನಿಲ್ಲಲು ಅವಣಿಸುತ್ತಿರುವ ಉರಿಯಾಳುಗಳು ತಮ್ಮ ಬೆಂಬಲಿಗರನ್ನು ಬೆನ್ನಿಗೆ ಕಟ್ಟಿಕೊಂಡು ಮಿರಿ ಮಿರಿ ಬಟ್ಟೆತೊಟ್ಟು ಓಡಾಡುತ್ತಿದ್ದಾರೆ. ಇದನ್ನು ನಿರ್ಧರಿಸಬೇಕಾದ ಮತದಾರ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಒದ ಕೈಗೆ ತುತ್ತು ಬಾಯಿಗೆ ಬರುವ ಮುನ್ನ ಕೈಚಾರಿತೇನೊ ಎಂಬ ದುಗುಡದಿಂದ ಗೊಂದಲದಲ್ಲಿ ದಲ್ಲಿ ಸಿಕ್ಕಿರುವ ಮಹಾ ಪ್ರಭು ಹೊಲದಲ್ಲಿನ ಬೆಳೆಯಲ್ಲಿ ಸಿಕ್ಕಷ್ಟು ಮನೆಗೆ ತರಲು ಚಳಿಯನ್ನೂ ಲೆಕ್ಕಿಸಿದೆ ಹಗಲಿರುಳು ಶ್ರಮಿಸುತ್ತಿದ್ದಾನೆ,
ತಾಲೂಕಿನಲ್ಲಿ 5 ಜಿ.ಪಂ.ಕ್ಷೇತ್ರಗಳು, 19 ತಾ.ಪಂ. ಕ್ಷೇತ್ರಗಳಿವೆ. ಇವುಗಳಲ್ಲಿ ತಮ್ಮ ಪಕ್ಷ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ತಾಲೂಕಿನ ಹಿಡಿತವನ್ನು ಕೈಗೆತ್ತಿಕೊಳ್ಳಬೇಕೆಂಬ ಹಂಬಲದಿಂದ ಹಲವು ಕಸರತ್ತುಗಳ ಮೂಲಕ ಪ್ರಯತ್ನಿಸುತ್ತಿರುವ ಪಕ್ಷಗಳ ನಾಯಕರು, ಇನ್ನಿಲ್ಲದ ಲೆಕ್ಕಾಚರದಲ್ಲಿ ತೊಡಗಿದ್ದಾರೆ. ಜೆ.ಡಿ.ಯು. ಎನ್ನುವುದಕ್ಕಿಂತ ಜೆ.ಸಿ.ಎಂ. ಬೆಂಬಲಿಗರು ಬಿ.ಜೆ.ಪಿ.ಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂಬ ಪುಕಾರು ದಟ್ಟವಾಗಿದ್ದು, ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಹೊಂದಾಣಿಕೆಯ ಮಾತುಗಳು ರಾಜ್ಯ ಮಟ್ಟದಲ್ಲಿ ಕೇಳಿ ಬರುತ್ತಿರುವುದರಿಂದ ಟಿಕೇಟ್ ಆಕಾಂಕ್ಷಿಗಳು ಸ್ವಲ್ಪ ಮಟ್ಟಿನ ಗೊಂದಲದಲ್ಲಿದ್ದಾರೆ.
ಈ ಚುನಾವಣೆ ವಿಶೇಷವಾಗಿ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ಕುಮಾರ್ಗೆ ಪ್ರತಿಷ್ಠೆಯ ಕಣವಾಗಿದೆ, ಕಾರಣ ಈ ಇಬ್ಬರು ನಾಯಕರಲ್ಲಿ ತಾಲೂಕಿನಲ್ಲಿ ಯಾರು ಹೆಚ್ಚು ಜನಪ್ರಿಯರು ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಬೇಕಾಗಿದೆ. ಈ ಚುನಾವಣೆಯಲ್ಲಿ ಯಾರು ತಮ್ಮ ಬೆಂಬಲಿಗರನ್ನು ಹೆಚ್ಚು ಗೆಲ್ಲಿಸಿಕೊಳ್ಳುತ್ತಾರೊ ಅವರು ಮುಂದಿನ ವಿಧಾನ ಸಭೆಯ ಮೆಟ್ಟಿಲು ಹತ್ತಲು ಸಹಕಾರಿಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ. ಒಟ್ಟನಲ್ಲಿ ಜೆ.ಸಿ.ಎಂ. ಹಾಗೂ ಕೆ.ಎಸ್.ಕೆ.ಗೆ ಜಿದ್ದಾಜಿದ್ದು ಆರಂಭಗೊಂಡಿದೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ದೃಷ್ಠಿಯನ್ನಿಟ್ಟು ಕೊಂಡು ನೋಡುವುದಾದರೆ ಇಬ್ಬರೂ ಸಮ ಬಲರೇ, ಕಾರಣ ಮಾಧುಸ್ವಾಮಿ ಹಂದನಕೆರೆ, ಕಂದೀಕೆರೆ, ಶೆಟ್ಟೀಕೆರೆ ಭಾಗಗಳಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದರೆ, ಕೆ.ಎಸ್.ಕಿರಣ್ಕುಮಾರ್ ಹುಳಿಯಾರು, ಹೊಯ್ಸಲಕಟ್ಟೆ, ಬುಕ್ಕಾಪಟ್ಟಣದ ಕಡೆ ಫೆಮಸ್. ಈಗಾಗಿ ಇವರಿಬ್ಬರ ಬಲವನ್ನು ನಿರ್ಧರಿಸುವಲ್ಲಿ ಈ ಚುನಾವಣೆ ನಿಣರ್ಾಯಕ ಪಾತ್ರ ವಹಿಸಲಿದೆ.
ಸ್ಥಳೀಯ ಜೆ.ಡಿ.ಎಸ್. ನಾಯಕ ಸಿ.ಬಿ.ಸುರೇಶ್ ಬಾಬು ಕ್ಷೇತ್ರದಲ್ಲಿ ಜನರಿಗೆ ನೇರವಾಗಿ ದೊರೆಯದಾದಾಗ ಕ್ಷಪಿಸಿದ್ದು ಬಿಟ್ಟರೆ ಅವರು ಕ್ಷೇತ್ರಕ್ಕೆ ಬಂದು ''ಅಣ್ಣ, ಅಕ್ಕ, ಬರ್ದರ್'' ಎಂದು ಹೆಗಲ ಮೇಲೆ ಕೈ ಹಾಕಿದ ತಕ್ಷಣ ಎಲ್ಲವನ್ನು ಮರೆತು 'ಬಾಬಣ್ಣ' ಎಂದು ಜನ ಗುಂಪು ಗುಂಪಾಗಿ ಹಿಂಬಾಲಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇಲ್ಲಿನ ಕಾಂಗ್ರೆಸಿಗರನ್ನು ಅನಾಥರನ್ನಾಗಿಸಿರುವ ಮೇಲ್ಮಟ್ಟದ ನಾಯಕರು, ಈ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಹಾಗೇ ಉಳಿದಿದೆ. ಹಾಗಂತ ಆಕಾಂಕ್ಷಿಗಳೇನು ಕಡಿಮೆಯಾಗಿಲ್ಲ, ಟಿಕೇಟ್ ಆಕಾಂಕ್ಷಿಗಳು ಅಷ್ಟೇ, ಮೊದಲು ಜೆ.ಡಿ.ಎಸ್.ನಲ್ಲಿ ಟ್ರೈ ಮಾಡೋಣ ಅಲ್ಲಿ ಸಿಗದಿದ್ದರೆ ಕಾಂಗ್ರೇಸ್ ಇದ್ದೇ ಇದೆಯಲ್ಲಾ ಎಂಬ ಮನೋಭಾವನೆಯವರು ಹೆಚ್ಚಾಗಿದ್ದಾರೆ. ಎರಡು ಪಕ್ಷಗಳಲ್ಲಿ ಅಜರ್ಿ ಸಲ್ಲಿಸಿರುವ ಉದಾಹರಣೆ ಇಲ್ಲದಿಲ್ಲ. ಈ ಮಾತನನ್ನು ಕೇಳಿದ ಕೆಲವು ಕಾರ್ಯಕರ್ತರು ಜೆ.ಡಿ.ಎಸ್. ಜೊತೆ ಹೊಂದಾದರೆ ನಮ್ಮ ಕೈ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ಆಸೆಗಣ್ಣಿನಿಂದ ನೋಡುವವರು ಇದ್ದಾರೆ. ಆದರೆ ನಿಷ್ಠಾವಂತ ಬೆರಳೆಣಿಕೆಯಷ್ಟು ಕಾಂಗ್ರೆಸಿಗರು ಇದಕ್ಕೆ ಹೊರತಾದವರೂ ಇದ್ದಾರೆ. ಆದರೆ ರಾಜ್ಯ ನಾಯಕರು ಪಕ್ಷಗಳ ಹೊಂದಾಣಿಕೆಯಲ್ಲಿ ಏನು ನಿಲುವು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಗಮನ ನೆಟ್ಟಿದೆ.
ಜೆ.ಡಿ.ಎಸ್, ಕಾಂಗ್ರೆಸ್ ಈಗಾಗಲೇ ಒಂದೊಂದು ಸುತ್ತಿನ ಕಾರ್ಯಕರ್ತರ ಸಭೆ ಕರೆದು ಅಜರ್ಿಗಳನ್ನು ಪಡೆದಿವೆ, ಜೆ.ಸಿ.ಎಂ.ಬೆಂಬಲಿಗರು ಇದೇ 11ರಂದು ಒಂದೆಡೆ ಸೇರಲಿದ್ದಾರೆ, ಬಿ.ಜೆ.ಪಿ.ಯವರು ಪಟ್ಟಿಯನ್ನೇನು ಸಿದ್ದಗೊಳಿಸಿಕೊಂಡಿದ್ದಾರೆ ಆದರೆ ಎರಡು ಪಟ್ಟಿ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ, ಇದರಲ್ಲಿ ಹೈಕಮಾಂಡ್ ಯಾರ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಾ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ಹಾಗೂ ವ್ಯಕ್ತಿಗತವಾಗಿ ಅಬ್ಯಾಥರ್ಿಗಳೆಷ್ಟು ತೂಗುತ್ತಾರೆ ಎಂಬುದರ ಮೇಲೆ ಟಿಕೇಟ್ ನೀಡಲು ಮುಂದಾಗುತ್ತಿದ್ದಾರೆ.
ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಶೆಟ್ಟೀಕೆರೆ ಕ್ಷೇತ್ರ: ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದು, ಈ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಗೋಡೆಕೆರೆ ನಿಜಾನಂದಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಸಾಸಲು ಸತೀಶ ಅಜರ್ಿ ಸಲ್ಲಿಸಿದ್ದಾರೆ, ಜೆ.ಡಿ.ಎಸ್.ನಿಂದ ತಾ.ಪಂ. ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಭೈರವ ಮೈನ್ಸ್ನ ಸಿ.ಡಿ.ಸುರೇಶ್ ಕೇಳುತ್ತಿದ್ದಾರೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ತಾ.ಪ0.ಮಾಜಿ ಅಧ್ಯಕ್ಷ ಎಚ್.ಎಂ.ಸುರೇಂದ್ರಯ್ಯ, ಟಿ. ಶಂಕರಲಿಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಬಿ.ಜೆ.ಪಿ.ಯಿಂದ ಬಿ.ಎನ್.ಶಿವಪ್ರಕಾಶ್, ಗಣಿ ಉದ್ಯಮಿ ಪಂಚಾಕ್ಷರಿ ಪೈಪೋಟಿಯಲಿದ್ದಾರೆ.
ಕಂದೀಕೆರೆ ಕ್ಷೇತ್ರ: ಅನುಸೂಚಿತ ಜಾತಿಗೆ ಮೀಸಲಿದ್ದು ಜೆ.ಡಿ.ಎಸ್.ನಿಂದ ತೀರ್ಥಪುರದ ಕುಮಾರ್, ನಿವೃತ್ತ ಶಿಕ್ಷಕ ಶಿವಣ್ಣ, ಪೈಪೋಟಿಯಲಿದ್ದು ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್ರವರ ಹೆಸರೂ ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಗುಂಪಿನಲ್ಲಿ ಲೋಹಿತಾ, ಸಾಲ್ಕಟ್ಟೆ ಚಂದ್ರಣ್ಣ, ಹೊಸಕೆರೆ ಮಲ್ಲಿಕಾರ್ಜನ್ ಮುಂಚೂಣಿಯಲಿದ್ದಾರೆ, ಕಾಂಗ್ರೇಸ್ನಲ್ಲಿ ವಕೀಲ ಪರಮೇಶ್ ಅಜರ್ಿ ಹಾಕಿಕೊಂಡಿದ್ದಾರೆ, ಬಿ.ಜೆ.ಪಿ.ಯಿಂದ ಬೇವಿನಹಳ್ಳಿ ಚನ್ನಬಸವಯ್ಯ, ಆಲದಕಟ್ಟೆ ರಂಗನಾಯ್ಕ, ಬೆಳ್ಳಾರದ ಈರಣ್ಣ, ಅಜ್ಜಿಗುಡ್ಡೆ ಸಣ್ಣಯ್ಯನ ಹೆಸರು ಕೇಳಿ ಬರುತ್ತಿದೆ.
ಹಂದನಕೆರೆ ಕ್ಷೇತ್ರ: ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದು, ಈ ಕ್ಷೇತ್ರದಲ್ಲಿನ ಎಲ್ಲಾ ಪಕ್ಷಗಳ ಗಟ್ಟಾನುಗಟಿ ನಾಯಕರುಗಳು ತಮ್ಮ ಧರ್ಮಪತ್ನಿಯನ್ನು ನಿಲ್ಲಿಸಲು ಕಸರತ್ತು ನಡೆಸುತ್ತಿದ್ದು, ಜೆ.ಡಿ.ಎಸ್.ನಿಂದ ಜಿ.ಪಂ. ಮಾಜಿ ಅಧ್ಯಕ್ಷ ರಘುನಾಥ್ರವರ ಪತ್ನಿ ಲಕ್ಷ್ಮಿ, ಕುದುರೆ ರಾಜಣ್ಣನವರ ಪತ್ನಿ, ತಾ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ,ನವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ, ಕಾಂಗ್ರೆಸ್ನಿಂದ ಸೋರಲಮಾವು ಕೃಷ್ಣಮೂತರ್ಿಯವರ ಪತ್ನಿಯ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ಚೆನ್ನಪ್ಪನ ಪಾಳ್ಯದ ಚೆನ್ನಪ್ಪನ ಪತ್ನಿ, ಮಲ್ಲಿಗೆರೆ ರಾಜಣ್ಣನ ಪತ್ನಿ ಪೈಪೋಟಿಯಲ್ಲಿದ್ದಾರೆ. ಬಿ.ಜೆ.ಪಿ.ಯಿಂದ ಬರಗೂರು ಬಸವರಾಜು ಪತ್ನಿ ಶುಭಾ, ಮತ್ತಿಘಟ್ಟ ಆನಂದಕುಮಾರ್ ರವರ ಪತ್ನಿ ವಸಂತಮ್ಮನ ಹೆಸರು ಚಾಲ್ತಿಯಲ್ಲಿದೆ.
ಹುಳಿಯಾರು ಕ್ಷೇತ್ರ: ಕಾಂಗ್ರೆಸ್ನಿಂದ ರಮಾದೇವಿ, ಜೆ.ಡಿ.ಎಸ್.ನ ಮಂಜುಳ ಗವಿರಂಗಯ್ಯ, ಹೊಸಹಳ್ಳಿ ಪಾಳ್ಯದ ರಾಜಮ್ಮ, ಬಿಂದು ರಮೇಶ್ಬಾಬು ಮಧ್ಯೆ ಪೈಪೋಟಿ ಇದೆ, ಬಿ.ಜೆ.ಪಿ.ಯಿಂದ ಕೆ.ಎಸ್.ಕಿರಣ್ಕುಮಾರ್ರವರ ಪತ್ನಿ ಕವಿತಾ ರವರ ಹೆಸರು ಜನ ಸಾಮಾನ್ಯರಲ್ಲಿ ದಟ್ಟವಾಗಿದೆ ಆದರೆ ಕಿರಣ್ ಈ ಬಗ್ಗೆ ಮೌನವಹಿಸಿದ್ದು, ಜಿ.ಪಂ. ಮಾಜಿ ಸದಸ್ಯ ಶಿವರಾಮಯ್ಯನವರ ಪತ್ನಿ ಹೆಸರು ಚಾಲ್ತಿಯಲ್ಲಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಈ ಕ್ಷೇತ್ರದ ಮಟ್ಟಿಗೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು ಉಪ್ಪಾರ ಜಾತಿಗೆ ಆದ್ಯತೆ ಕೊಡತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಹೊಯ್ಸಿಲಕಟ್ಟೆ ಕ್ಷೇತ್ರ: ಬಿ.ಸಿ.ಎಂ.(ಎ) ಮಹಿಳೆಗೆ ಮೀಸಲಿದ್ದು, ಕಾಂಗ್ರೆಸ್ನಿಂದ ಕ್ಯಾತಲಿಂಗಮ್ಮ, ಬಿ.ಜೆ.ಪಿಯಿಂದ ನಿಂಗಮ್ಮನ ಹೆಸರು ಕೇಳಿ ಬರುತ್ತಿದೆ. ಜೆ.ಡಿ.ಎಸ್.ನಿಂದ ಜಯಲಕ್ಷ್ಮಿ ಚಿಕ್ಕಣ್ಣ, ರಾಜಮ್ಮ ರಾಮಣ್ಣನ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಅಬ್ಯಾಥರ್ಿಗಳ ಆಯ್ಕೆ ಕಸರತ್ತು ನಡೆದಿದೆ.

ಚಿಕ್ಕನಾಯಕನಹಳ್ಳಿ,ಡಿ.11: ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದ್ದು ಚುನಾವಣೆ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಟಿಕೇಟ್ ಹಂಚಿಕೆಯಲ್ಲಿ ಮಾದಿಗರಿಗೆ ಹೆಚ್ಚು ಅವಕಾಶ ಕಲ್ಪಿಸಬೇಕೆಂದು ಜೆ.ಸಿ.ಪುರ ಗ್ರಾಪಂ ಸದಸ್ಯೆ ಬಿ.ಎನ್.ಶಶಿಕಲಾ ಮನವಿ ಮಾಡಿದ್ದಾಋಎ.
ರಾಜ್ಯದಲ್ಲಿ 98ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಾದಿಗರಿದ್ದು, ಈ ಮತಗಳ ಆಧಾರದ ಮೇಲೆ ಚುನಾವಣಾ ಕಣಕ್ಕಿಳಿದರೆ ಅರ್ಧ ಬಾಗದಷ್ಟು ಜನಪ್ರತಿನಿಧಿಗಳಾಗಿ ಹೊರಹೊಮ್ಮುಬಹುದು, ಪಕ್ಷ ಯಾವುದೇ ಇರಲಿ ಚುನಾವಣೆಗೆ ನಿಲ್ಲಿ ಅವಕಾಶವಿದ್ದರೆ ಪಕ್ಷೇತರರಾಗಿ ನಿಂತು ಮಾದಿಗರು ಮುಂದೆ ಬರಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ರೀಡೆಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಡಿ.11: ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳಸಿಕೊಂಡು ಜೀವನ ನಿರ್ವಹಣೆಯ ಕೌಶಲ್ಯವನ್ನು ಕಲಿಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ನಡೆಸಿದ ನೆಹರು ಯುವ ಕೇಂದ್ರ ಹಾಗೂ ಶ್ರೀರಂಗ ಯುವ ಸಂಘದ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಣದ ಜೊತೆಗೆ ಕ್ರೀಡೆಯ ಅವಶ್ಯಕತೆ ಇದ್ದು ಗ್ರಾಮೀಣ ಪ್ರದೇಶದ ಯುವಕರು ಹೆಚ್ಚಿನ ರೀತಿಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಮತ್ತು ಮಹಿಳೆಯರು ಕ್ರೀಡೆಗಳಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಡಿಸೋಜಾ, ಮುಖ್ಯ ಶಿಕ್ಷಕ ಸಂತೋಷ್, ಗ್ರಾ.ಪಂ.ಸದಸ್ಯರಾದ ದಿನೇಶ್, ಶಿವಕುಮಾರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈಶ್ವರಯ್ಯ ಸ್ವಾಗತಿಸಿದರೆಎ ಸಿ.ಎ.ಕುಮಾರಸ್ವಾಮಿ ನಿರೂಪಿಸಿ ಲೋಕೇಶ್ ವಂದಿಸಿದರು.
ಮನುಷ್ಯ ಜೀವಿಸುವುದಕ್ಕಾಗಿ ಹಾಕಿಕೊಂಡ ನೀತಿ ನಿಯಮವೇ ಧರ್ಮ
ಚಿಕ್ಕನಾಯಕನಹಳ್ಳಿ,ಡಿ.11: ವ್ಯಕ್ತಿ ತನ್ನ ಚಾರಿತ್ರ್ಯವನ್ನು ಬಿಟ್ಟು ಜೀವನ ನಡೆಸಲು ಮುಂದಾಗಬಾರದು, ತನ್ನ ಚಾರಿತ್ರ್ಯ ಬಿಟ್ಟು ಬಾಳಿದರೆ ಮನುಷ್ಯ ಇದ್ದೂ ಸತ್ತಂತೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಸುಹಾಸಿನಿ ಹೇಳಿದರು.
ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಪ್ರಸಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಮನಸ್ಸಿಗೆ ಶಾಂತಿ ದೊರಕಿದರೆ ವಿಶ್ವದಲ್ಲಿ ಅಶಾಂತಿ ದೂರವಾಗಿ ಶಾಂತಿ ನೆಲಸಲು ಸಹಕಾರಿಯಾಗುತ್ತದೆ ಎಂದ ಅವರು ಸಮಯ ದೊರಕುವುದು ಬಹಳ ಕಡಿಮೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಬಹುದು ಎಂದರು.
ಸಿ.ಡಿ.ಪಿ.ಒ ಅನೀಸ್ ಖೈಸರ್ ಮಾತನಾಡಿ ಧರ್ಮ ಎಂಬುದು ಮನುಷ್ಯನು ಹಾಕಿಕೊಂಡಿರುವ ನೀತಿ ನಿಯಮದ ಜೀವನ ಕ್ರಿಯೆ ಎಂದ ಅವರು ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಕು ಮತ್ತು ಮನುಷ್ಯನು ಶಾಂತಿ ಸಹಬಾಳ್ವೆಗಾಗಿ ಒಬ್ಬರಿಗೊಬ್ಬರೂ ಅರಿತುಕೊಂಡು ಬಾಳಬೇಕು ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶೆ ಶೀಲಾ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಜ್ಞಾನಮೂತರ್ಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ. ಡಿ.12: ಮಕ್ಕಳು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಭಾಗವಹಿಸಿ ಆಸಕ್ತಿಯಿಂದ ಪಾಲ್ಗೊಂಡು ವೇದಿಕೆಗಳನ್ನು ಬಳಸಿಕೊಂಡರೆ ಅವರ ಮುಂದಿನ ಗುರಿ ತಲುಪಲು ಸಹಾಯಕವಾಗಲಿದೆ ಎಂದು ತಹಸೀಲ್ದಾರ್ ಟಿ.ಸಿ. ಕಾಂತರಾಜು ಮಾತನಾಡುತ್ತ
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಮಾತನಾಡುತ್ತಾ ಎಲ್ಲಾ ತೀಪರ್ುಗಾರರು ನಿಷ್ಪಕ್ಷಪಾತವಾಗಿ ಪ್ರತಿಭೆಯನ್ನು ಗುತರ್ಿಸಿ ಯಾವುದೇ ಮಗುವಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಮತ್ತು ಸ್ಪಧರ್ಿಗಳಿಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಿಸುವ ಸಾಮಥ್ರ್ಯ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಪ್ರ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಪರಶಿವಮೂತರ್ಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪಠ್ಯೇತರ ಚಟುವಟಿಕೆಗಳ ವೇದಿಕೆ ಅಗತ್ಯವಾಗಿದೆ. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಧೈರ್ಯದ ಜೊತೆಗೆ ಸವರ್ಾಂಗೀಣ ಮುಖಿಯಾಗಿ ಬೆಳವಣಿಗೆಯಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಇ.ಓ ದಯಾನಂದ್ ತಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ. ಸುರೇಶ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಉಪಧ್ಯಕ್ಷ ನಟರಾಜು, ನಿದರ್ೇಶಕ ರಾಜಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾಜರ್ುನ್ ಪ್ರಾಥರ್ಿಸಿದರೆ, ಎನ್. ಮೂತರ್ಿಸ್ವಾಗತಿಸಿದರು, ಪ್ರಕಾಶ್ ವಂದಿಸಿ, ದುರ್ಗಯ್ಯ ನಿರೂಪಿಸಿದರು.

Wednesday, December 8, 2010



: ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದು ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರರವರು ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಡುಗಾಡು ಸಿದ್ದರಿಗೆ ನಿವೇಶನ ಒದಗಿಸಲು ಶ್ರಮಿಸುವೆ: ಪುರಸಭಾ ಅಧ್ಯಕ್ಷ ರಾಜಣ್ಣ
ಚಿಕ್ಕನಾಯಕನಹಳ್ಳಿ,ಡಿ.8: ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 53ನೇ ಪರಿನಿವರ್ಾಣ ದಿನವನ್ನು ಪಟ್ಟಣದ ಕೇದಿಗೆಹಳ್ಳಿ ಗುಂಡುತೋಪಿನ ಶ್ರಮಿಕ ವರ್ಗದ ಬಿಡಾರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ರವರು ದಲಿತರ ಉದ್ದಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದು, ಅವರ ಪರಿನಿವರ್ಾಣ ದಿನವನ್ನು ಜಾಗೃತಿ ವೇದಿಕೆ ಈ ಬಿಡಾರದಲ್ಲಿ ಹಮ್ಮಿಕೊಂಡಿರುವುದು ಸಮಂಜಸವಾಗಿದ್ದು, ಇಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸಿಕೊಂಡು ಬಂದಿರುವ ಈ ಜನಕ್ಕೆ ಶಾಶ್ವತವಾಗಿ ನಿವೇಶನವನ್ನು ನೀಡುವ ಜವಬ್ದಾರಿ ಪುರಸಭೆಯ ಮೇಲಿದ್ದು, ಶೀಘ್ರ ಇವರಿಗೆ ನಿವೇಶನವನ್ನು ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪುರಸಭಾ ಸದಸ್ಯ ಹಾಗೂ ಜಾಗೃತಿ ವೇದಿಕೆ ಸಂಚಾಲಕ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ದರು ಎಂಬ ಪರಿಶಿಷ್ಟ ಜಾತಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಜನರು ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರು ಚಳಿ, ಮಳೆ, ಬಿಸಲುಗಳಲ್ಲಿ ನೊಂದಿದ್ದಾರೆ, ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ಈ ಸ್ಥಳದಲ್ಲೇ ವಾಸಿಸಿದ್ದು ಸಾವಲಾಗಿತ್ತು. ಕನಿಷ್ಟ ಮಟ್ಟದ ಸವಲತ್ತುಗಳಿಲ್ಲದೆ ಬೇಸತ್ತು ಹೋಗಿರುವ ಈ ಜನಕ್ಕೆ ಪುರಸಭೆಯ ವತಿಯಿಂದ ಶೀಘ್ರ ನಿವೇಶನ ಕೊಡಬೇಕೆಂದು ಒತ್ತಾಯಿಸಿದರು.
ಈ ಭಾಗದ ಪುರಸಭಾ ಸದಸ್ಯೆ ಧರಣಿ ಲಕ್ಕಪ್ಪ ಮಾತನಾಡಿ, ಈ ಜನರಿಗೆ ನಿವೇಶನ ಕೊಡಿಸಲು ಯಾವುದೇ ರೀತಿಯ ರಾಜಕೀಯವನ್ನು ಮಧ್ಯೆ ತರದೆ ಇವರ ಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ ಗುಣ ಎಂದರು.
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಇವರ ಕಷ್ಟಕ್ಕೆ ಪುರಸಭೆಯವರು ಶೀಘ್ರ ಸ್ಪಂದಿಸಬೇಕು, ಕಾನೂನು ಕಟ್ಟಲೆಗಳನ್ನೇ ಮುಂದು ಮಾಡಿಕೊಂಡು ಹೋಗದೆ, ಮಾನವೀಯ ನೆಲಗಟ್ಟಿನಲ್ಲಿ ಯೋಚಿಸಿ ಸುಡುಗಾಡು ಸಿದ್ದರಿಗೆ ಅನುಕೂಲ ಮಾಡಿಕೊಂಡಬೇಕೆಂದರು.
ಸವಿತ ಸಮಾಜದ ಮುಖಂಡ ಸುಬ್ರಹ್ಮಣ್ಯ ಮಾತನಾಡಿ ಈ ಜನರಿಗೆ ವಸತಿಯದೊಂದೆ ಸಮಸ್ಯೆಯಲ್ಲ, ಗುಡಿಸಲಿನಲ್ಲಿ ವಾಸಿಸುತ್ತಿರವುದರಿಂದ ಇವರ ಜೀವಕ್ಕೆ ಸಂಚಾಕರವಿದೆ ಎಂದರಲ್ಲದೆ, ಇತ್ತೀಚೆಗೆ ಇಲ್ಲಿಯ ಹೆಣ್ಣು ಮಕ್ಕಳೊಬ್ಬಳ ಮೇಲೆ ಅತ್ಯಾಚರವೆಸೆಗಿದ ಘಟನೆಯೂ ನಡೆದಿದೆ ಇಂದಿನ ನಾಗರೀಕ ಸಮಾಜದಲ್ಲಿ ಇನ್ನೂ ಈ ರೀತಿಯ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಾಚಿಗೆಗೇಡಿನ ವಿಷಯವೆಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರುಗಳಾದ ರುಕ್ಮಿಣಮ್ಮ, ಎಂ.ಎಸ್.ರವಿಕುಮಾರ್, ಡಿ.ಎಸ್.ಎಸ್.ಮುಖಂಡರುಗಳಾದ ಲಿಂಗದೇವರು, ಹೊಸಕೆರೆ ಮಲ್ಲಿಕಾರ್ಜನಯ್ಯ, ಬೋರವೆಲ್ ತಿಮ್ಮಯ್ಯ, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ.ಡಿ.07: ಕೃಷಿ ಬಗ್ಗೆ ರೈತರು ಹೆಚ್ಚು ಒತ್ತು ನೀಡಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರಗಳನ್ನು ರೈತರು ಉಪಯೋಗಿಸದ ನಂತರ ಒಳ್ಳೆಯ ಇಳುವರಿ ಹಾಗೂ ಸಮೃದ್ಧವಾದ ಬೆಳೆಯಿಂದ ಉತ್ತಮ ಆಹಾರ ದೊರಕುವುದು ಎಂದು ಶಾಸಕ ಸಿ.ಬಿ. ಸುರೇಶ್ಬಾಬು ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಉತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳನ್ನು ಹೊತ್ತು ಬರುವ ರೈತರುಗಳ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ, ಕೃಷಿ ಇಲಾಖೆಯಲ್ಲಿ ಸಲಕರಣೆಗಳನ್ನು ರೈತರಿಗೆ ಕಾಲಕಾಲಕ್ಕೆ ಒದಗಿಸುವುದಲ್ಲದೆ ಸಕರ್ಾರದಿಂದ ಬಂದಂತಹ ಸಾಮಾಗ್ರಿಗಳು ನೇರವಾಗಿ ರೈತರಿಗೆ ಸಿಗುವಂತೆ ಹಾಗೂ ಫಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯವನ್ನು ಅಧಿಕಾರಿಗಳು ದೊರೆಯುವಂತೆ ಮಾಡಬೇಕು ಮತ್ತು ರೈತರ ಅಭಿವೃದ್ಧಿಗೆ ಸಕರ್ಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ|| ಶಶಿಧರ್ ಮಾತನಾಡಿ ಕಾಡುಗಳನ್ನು ಬೆಳೆಸಿ ನಾಡನ್ನು ಉಳಿಸಿ ಕಾಡಿನ ನಾಶದಿಂದ ಪಕ್ಷಿ ಪ್ರಪಂಚ ನಾಶವಾಗುತ್ತಿದೆ ಇದರಿಂದ ಮರಗಳಲ್ಲಿ ಗೂಡು ಕಟ್ಟುವ ಜೇನಿನಗೂಡುಗಳು ಸಹ ಕಡಿಮೆಯಾಗುತ್ತಿದು ಜೇನುಕೃಷಿಯು ಸಹ ನಾಶವಾಗುತ್ತಿದೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿ ಆಹಾರ ಪದಾರ್ಥವನ್ನು ಆಮದು ಮಾಡಿಕೊಳ್ಳುಂತಹ ಪರಿಸ್ಥಿತಿ ಬರುವಂತಾಗಿದೆ. ಕಾಡಿಲ್ಲದೆ ಮಳೆಯಿಲ್ಲ ಮಳೆಯಿಲ್ಲದೇ ಬೆಳೆಯಿಲ್ಲ ಬೆಳೆಯಿಲ್ಲದೆ ರೈತರಿಗೆ ಬದುಕಿಲ್ಲ ಇದರಿಂದಾಗಿ ರೈತರು ಕೃಷಿಯನ್ನು ಬಿಟ್ಟು ಹೊರಗಡೆ ಕೂಲಿ ಕೆಲಸಗಳಿಗಾಗಿ ವಲಸೆ ಹೋಗುತ್ತಿದ್ದಾರೆ ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಕಾಡು ಮುಖ್ಯ, ಕಾಡನ್ನು ಬೆಳೆಸಿ ಕೃಷಿಯನ್ನು ಉಳಿಸಿ ಕೃಷಿಯಿಂದ ರೈತರ ಸುಖವಾದ ಜೀವನ ಮತ್ತೆ ಸಿಗುವಂತಾಗಲಿ ಎಂದ ಅವರು ರೈತರು ಉಳುಮೆ ಮಾಡಬೇಕಾದರೆ ಕಬ್ಬಿಣದ ನೇಗಿಲಿನಿಂದ ಆಳವಾದ ಉಳುಮೆ ಮಾಡಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಯು ಉತ್ತಮವಾಗಿ ಬಂದು ಇಳುವರಿಯು ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಬೆಳೆಸಿಕೊಂಡು ಬಂದಂತಹ ಮರಗಳಿಂದ ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು ಬೆಳೆದಂತಹ ಬೆಳೆಗಳಿಂದ ನಮ್ಮ ಹಿರಿಯರು ಆರೋಗ್ಯವಾಗಿದ್ದರು. ಈಗ ಅವರು ಬೆಳಸಿದಂತಹ ಮರಗಳನ್ನು ನಾಶ ಮಾಡಿ ನಾವು ಉಳಿಸಿದಂತಹ ಪರಿಸರವೆಷ್ಟು ಎಂಬುದನ್ನು ನಾವೆ ಊಹೆ ಮಾಡಬೇಕು. ಕೃಷಿಯಲ್ಲಿ ಹೆಚ್ಚು ಲಾಭ ಮಾಡಬೇಕಾದರೆ ಹೈನುಗಾರಿಕೆ ಬೇಕು.
ವೇದಿಕೆಯಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಶಿವಲಿಂಗಯ್ಯ, ತಾಲ್ಲೂಕು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಚಂದ್ರಶೇಖರ್, ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಲೋಕೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ರಘುನಾಥ್, ಪುರಸಭಾ ಅಧ್ಯಕ್ಷ ರಾಜಣ್ಣ, ಉಪಾಧಕ್ಷೆ ಕವಿತಾಚನ್ನಬಸವಯ್ಯ, ಪುರಸಭಾ ಸದಸ್ಯ ಸಿ.ಎಸ್. ರಮೇಶ್, ತಾ.ಪಂ. ಸದಸ್ಯ ದಾಸೇಗೌಡರು, ಶಿವಕುಮಾರ್, ಕಮಲಾನಾಯಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲಿಂಗದೇವರು ಪ್ರಾಥರ್ಿಸಿದರೆ, ರೈತಗೀತೆಯನ್ನು ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆಯ ಮಕ್ಕಳಿಂದ ನೆರವೇರಿಸಲಾಯಿತು ರಂಗಸ್ವಾಮಿ ಸ್ವಾಗತಿಸಿದರೆ ಶ್ಯಾಮಸುಂದರ್ ನಿರೂಪಿಸಿ ಬಸಪ್ಪ ಭಾಗವತ್ ವಂದಿಸಿದರು.

Tuesday, December 7, 2010






ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದೇನೆ ಹಾಗೂ ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರ ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅನ್ನ ಆಹಾರ ನೀಡುತ್ತಿರುವುದು ಕನರ್ಾಟಕ ಮಣ್ಣು : ಹಿರಣ್ಣಯ್
ಚಿಕ್ಕನಾಯಕನಹಳ್ಳಿ,ಡಿ.07: ಕಳೆದ ಅರವತ್ತು ವರ್ಷಗಳಿಂದ ರಂಗಭೂಮಿಯ ಮೂಲಕ ರಾಜಕಾರಣಿಗಳನ್ನು, ಭ್ರಷ್ಠ ಅಧಿಕಾರಿಗಳನ್ನು ಟೀಕಿಸುತ್ತಾ ಬಂದಿದ್ದರು, ಇದರಿಂದ ಯಾವುದೇ ಸುಧಾರಣೆಯಾಗಲಿಲ್ಲ ಎಂದು ನಟರತ್ನಾಕರ ಮಾಸ್ಟರ್ ಹಿರಣ್ಣಯ್ಯ ವಿಷಾದಿಸಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಟ್ಟಡದ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ರಂಗಭೂಮಿ ಅಂದು-ಇಂದು ಎಂಬ ವಿಷಯದಲ್ಲಿ ಮೇಲ್ಕಂಡಂತೆ ಮಾತನಾಡುತ್ತ ಅಂದು ರಂಗಭೂಮಿಯ ಕಲಾದವಿದರು ಸಮಾಜದ ನೈತಿಕತೆಯ ಅದಃಪತನದಲ್ಲ್ಲಿ ಮುಳುಗಿಹೋಗಿದ್ದಾರೆ ಎಂಬ ಭಾವನೆಯಿಂದ ಯಾರು ರಂಗಭೂಮಿ ಕಲಾವಿದರನ್ನು ಪುರಸ್ಕರಿಸುತ್ತಿರಲಿಲ್ಲ. ರಂಗಕಲಾವಿದರಿಗೆ ಊರುಗಳಲ್ಲಿ ಬಾಡಿಗೆ ಮನೆಯಲ್ಲಾಗಲಿ ಹೆಣ್ಣು ಕೊಡುವಾಗ ಹತ್ತಾರು ಬಾರಿ ಯೋಚಿಸುತ್ತಿದ್ದರು. ನಾಟಕಕಾರರಿರಿಗೆ ಗೌರವ ಮತ್ತು ಸ್ವಾತಂತ್ರ್ಯ ಇವುಗಳಿಂದ ವಂಚಿತರಾಗಿದ್ದರು. ಇಂದಿನ ರಂಗಭೂಮಿಯಲ್ಲಿ ಪ್ರಶಸ್ತಿಗಳು ಚೀಪ್ ರೇಟ್ ಗಳಾಗಿದ್ದು, ಪಾತ್ರಗಳಿಗೆ ಅರ್ಥ ತುಂಬುವಲ್ಲಿ ವಿಫಲವಾಗಿದ್ದರೂ ಎಲ್ಲವೂ ಹತ್ತಿರವಾಗಿದ್ದು ರಂಗ ಭೂಮಿಗೆ ಅಂಟಿರುವ ಗ್ರಹಣ ದೂರವಾಗಬೇಕಾದರೆ ಕಲಾವಿದನಿಂದ ಏಕಾಗ್ರತೆ, ನಿಷ್ಠೆ, ಅರ್ಪಣೆ, ತಪಸ್ಸು, ತ್ಯಾಗ, ಸ್ವಾತಂತ್ರ್ಯ ಎಲ್ಲವನ್ನೂ ಮೈಗೂಡಿಸಿಕೊಂಡರೆ ಮಾತ್ರ ಮೃತ್ಯು ಕೂಪದಿಂದ ರಂಗಭೂಮಿ ಹೊರಬರಲು ಸಾಧ್ಯವಾಗುತ್ತದೆ. ಶಾಸಕಾಂಗ, ಕಾಯರ್ಾಂಗ ಮತ್ತುನ್ಯಾಯಂಗ ಇವುಗಳಲ್ಲಿ ರಾಷ್ಟ್ರ ಪ್ರಜ್ಞೆ ಕಣ್ಣು ತೆರೆಯುವಂತೆ ಮಾಡುವಲ್ಲಿ ಮಾಧ್ಯಮ ಮತ್ತು ರಂಗಭೂಮಿಗಳು ಮಹತ್ತರ ಕೆಲಸ ನಿರ್ವಹಿಸಬೇಕಾಗಿದೆ ಎಂದರು . ಕನ್ನಡ ನಾಡು, ನನಗೆ ಅಕ್ಷರ, ಅನ್ನ, ಆಶ್ರಯ, ಎಲ್ಲವನ್ನು ನೀಡಿರುವಾಗ ಪರಭಾಷೆಯಲ್ಲಿ ಪ್ರದರ್ಶನ ನೀಡುವ ಅವಶ್ಯಕತೆ ನನಗಿಲ್ಲ ಎಂದು ನಟ ರತ್ನಾಕರ ಡಾ|| ಮಾಸ್ಟರ್ ಹಿರಣ್ಣಯ್ಯ ಅವರ ಅಂತರಾಳದ ಮಾತನ್ನು ಬಹಿರಂಗ ಪಡಿಸಿದರು
ತಹಶೀಲ್ದಾರ್ ಟಿ.ಸಿ. ಕಾಂತರಾಜು ಕನ್ನಡ ನಾಡನ್ನರಸಿ ಬರುವ ಪರಭಾಷಿಗರಿಗೆ ಕನ್ನಡ ಭಾಷಾಜ್ಞಾನ ಬೆಳೆಯುವಂತೆ ನಾವುಗಳು ಸಹಕರಿಸುವುದರ ಮೂಲಕ ನಿತ್ಯವೂ ಕನ್ನಡ ರಾಜ್ಯೋತ್ಸವ ಬೆಳಗುವಂತೆ ಆಗಬೇಕು. ಕಪಟ, ವಂಚನೆಯನ್ನರಯದ ಚಿಕ್ಕನಾಯಕನಹಳ್ಳಿ ಜನತೆ ಆಥರ್ಿಕವಾಗಿ ಹಿಂದುಳಿದಿದ್ದು ಇಲ್ಲಿ ಕಬ್ಬಿಣ ಅದಿರು ಕಾಖರ್ಾನೆ ಸ್ಥಾಪನೆ ಕೈಗೊಂಡರೆ ಇಲ್ಲಿನ ಸಾವಿರಾರು ಕುಟುಂಬಗಳು ಆಥರ್ಿಕವಾಗಿ ಸಧೃಡವಾಗಲು ಸಾಧ್ಯವಾಗುತ್ತದೆ ಮತ್ತು ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾದರೆ ಸಕರ್ಾರ ನೀಡುವ ಎಲ್ಲಾ ಸೌಲಭ್ಯ ಸಿಗುವಲ್ಲಿ ಉತ್ಸುಕನಾಗಿ ಕೆಲಸ ನಿರ್ವಹಿಸುವುದಾಗಿ ಹೇಳಿದರು, ಭೃಷ್ಠಾಚಾರ, ಮೂಢನಂಬಿಕೆ ವಿರುದ್ದ ಸಾಮಾಜಿಕ ಕಳಕಳಿಯಿಂದ ನಿದರ್ಾಕ್ಷಿಣ್ಯ ಮನಸ್ಸುಳ್ಳ ನಟ ರತ್ನಾಕರ ಡಾ|| ಮಸ್ಟರ್ ಹಿರಣ್ಣಯ್ಯ ಇವರಿಂದ ಸನ್ಮಾನ ಸ್ವೀಕರಿಸಿರುವುದು ನನ್ನ ಭಾಗ್ಯವಾಗಿದ್ದು ಇದರಿಂದ ನಾನು ನಿಷ್ಠರವಾದರೂ ಪ್ರಾಮಾಣಿಕವಾಗಿ ಪ್ರಗತಿಪರ ಕೆಲಸ ನಿರ್ವಹಿಸುವಂತೆ ನನ್ನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ ಈ ಸನ್ಮಾನ ಎಂದರು.
ಬಾಬು ಹಿರಣ್ಣಯ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ನಾವಿಂದು ಮರೆಯಲಾಗದಂತಹ ಚಿಕ್ಕನಾಯಕನಹಳ್ಳಿ ನನ್ನ ತವರೂರು ನನ್ನ ತಾಯಿ ಇಲ್ಲಿಯವರೆ, ಅವರಿಲ್ಲದಿದ್ದರೆ ನಾವ್ಯಾರು ಇರುತ್ತಿರಲಿಲ್ಲ ನನ್ನ ತಾಯಿ ರಂಗಭೂಮಿ ಹಿಂದೆ ನಿಂತು ಪ್ರೋತ್ಸಾಹಿಸಿ ನಮಗೆ ಹೆಸರು, ಕೀತರ್ಿ ತಂದುಕೊಡುವಲ್ಲಿ ಸಾಹಿತ್ಯ ಹಾಗೂ ರಂಗಭೂಮಿಗೆ ಅವರ ಸೇವೆ ಅನನ್ಯವಾದದ್ದು ನನ್ನ ತಾಯಿಯೇ ಸರ್ವ ಶ್ರೇಷ್ಠರು ಎಂದು ಏಳಿಗೆಯ ಯಶಸ್ಸಿನ ಮಹತ್ವ ಹಾಗೂ ತಾಯಿಯ ಪ್ರೇಮವನ್ನು ಪ್ರದಶರ್ಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ಹಿರಿಯ ಸಾಹಿತಿ ಎಂ. ವಿ. ನಾಗರಾಜ ರಾವ್ ಅವರ 4 ಕಾದಂಬರಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತ ಟಿವಿ, ವೀಡಿಯೋ ಮೊಬೈಲ್ ಗಳು ಮಕ್ಕಳ ಬೆಳವಣಿಗೆಗೆ ಮಾರಕವಾಗಿದ್ದು ಕೆಟ್ಟ ಸಂಸ್ಕೃತಿಯಲ್ಲಿ ಮುಳುಗಿ ಹೋಗಿರುವಂತಹ ಸಮಾಜಕ್ಕೆ ಆತ್ಮ ವಿಮಶರ್ೆ ಅವಶ್ಯಕವಾಗಿದೆ. ಆ ತರಹದ ವಿಮಶರ್ೆಗಳನ್ನು ನಾಟಕ ಕಂಪನಿಗಳು ಸಮಾಜ ತಿದ್ದುವ ಕೆಲಸ ಮಾಡಿಕೊಂಡು ಬರುತ್ತಿರುವ ಕಲಾವಿದರ ಸಹಕಾರಕ್ಕೆ ಸಕರ್ಾರಗಳು ಮಾಶಾಸನ ನೀಡುವಲ್ಲಿ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಂ.ವಿ.ನಾಗರಾಜ್ ರಾವ್ ವಹಿಸಿದ್ದರು. ಕ್ಷೇತ್ರ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನರಾವ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್, ಬೆಂಗಳೂರು ಶಿಕ್ಷಣ ಆಯುಕ್ತ ಕಛೇರಿಯ ಉಪನಿದರ್ೇಶಕ ಪಾಲಾಕ್ಷಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಪ್ರಿಯಾ ಪ್ರಾಥರ್ಿಸಿದರು ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಸಿ.ಎ.ಕುಮಾರ್ಸ್ವಾಮಿ ನಿರೂಪಿಸಿ, ಎಸ್.ಸಿ.ನಟರಾಜ್ ವಂದಿಸಿದರು.

Friday, December 3, 2010


ಗಣಿತದ ಪ್ರಮೇಯಕ್ಕೂ ರಾಗಿ ಬಳಸಿಕೊಂಡ ವಿದ್ಯಾಥರ್ಿಗಳು
ಚಿಕ್ಕನಾಯಕನಹಳ್ಳಿ,ಡಿ.03: ಗಣಿತದ ನಿಯಮಗಳು, ತತ್ವಗಳು ಹಾಗೂ ಸಿದ್ದಾಂತಗಳ ನಿರೂಪಣೆಯಲ್ಲಿ ಪ್ರಮೇಯಗಳನ್ನು ತಾಕರ್ಿಕ ವಿಧಾನಗಳ ಮೂಲಕ ಕಾರ್ಯ ಕಾರಣ ಸಂಬಂದ ಕಲ್ಪಿಸಿ ಸಾಧಿಸುವುದು ವಿದ್ಯಾಥರ್ಿಗಳ ಮೇಧಾ ಶಕ್ತಿಗೊಂದು ಸವಾಲೇ ಸರಿ.
ಆದರೆ ಪ್ರಮೇಯಗಳ ಅತಃ ಸತ್ವವನ್ನು ವಿದ್ಯಾಥರ್ಿಗಳಿಗೆ ಸರಳವಾಗಿ ಅಥರ್ೈಸುವ ನಿಟ್ಟಿನಲ್ಲಿ ಪ್ರಾಯೋಗಿಕ ಸಾಧನಾ ವಿಧಾನಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.
ಚಿಕ್ಕನಾಯಕನಹಳ್ಳಿ ಸಕರ್ಾರಿ ಪ್ರೌಡಶಾಲೆಯ ಗಣಿತ ಶಿಕ್ಷಕ ಎಂ. ಮಂಜುನಾಥಾಚಾರ್ರವರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ವಿಶ್ವ ವಿಖ್ಯಾತ ಪೈಥಾಗೊರಸ್ ಪ್ರಮೇಯವನ್ನು ಸ್ಥಳೀಯ ಮುಖ್ಯ ಬೆಳೆ ಆಹಾರ ಧಾನ್ಯವಾದ ರಾಗಿ ಬಳಸಿ ಪ್ರಾಯೋಗಿಕವಾಗಿ ಸಾಧಿಸುವ ಕ್ರಿಯಾ ಶೀಲ ಮಾದರಿ ತಯಾರಿಸಿದ್ದಾಎ. ಈ ಮಾದರಿಯನ್ನು ವಿದ್ಯಾಥರ್ಿಗಳು ತಿಪಟೂರು ತಾಲೂಕು ಕೆರಗೋಡಿ ರಂಗಾಪುರದಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದಶರ್ಿಸಿ ವೀಕ್ಷಕರ ಗಮನ ಸೆಳೆದಿದ್ದಾರೆ.
ಲಂಭಕೋನ ತ್ರಿಭುಜದ ವಿಕರ್ಣದ ಮೇಲಿನ ವರ್ಗದಳತೆಯ ರಾಗಿ ಪ್ರಮಾಣ ಉಳಿದೆರಡು ಬಾಹುಗಳ ಮೇಲಿನ ವರ್ಗಗಳ ಮೊತ್ತದಳತೆಯ ರಾಗಿ ಪ್ರಮಾಣಕ್ಕೆ ಸರಿ ಸಮಾನಾಗಿ ತಾಳೆಯಾಗುವುದು ಈ ಮಾದರಿಯ ವಿಶೇಷ.
ಡಾ.ಹಿರಣ್ಣಯ್ಯನವರಿಂದ ರಂಗಭೂಮಿ ಅಂದು-ಇಂದು ಉಪನ್ಯಾಸ
ಚಿಕ್ಕನಾಯಕನಹಳ್ಳಿ,ಡಿ.03: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಂಗಭೂಮಿ ಅಂದು -ಇಂದು ವಿಷಯದ ಬಗ್ಗೆ ಡಾ.ಮಾಸ್ಟರ್ ಹಿರಣ್ಣಯ್ಯರವರಿಂದ ಉಪನ್ಯಾಸ ಮತ್ತು ತಹಶೀಲ್ದಾರ್ ಟಿ.ಸಿ.ಕಾಂತರಾಜುರವರಿಗೆ ಗೌರವಾಭಿನಂದನೆಯನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಇದೇ 5ರ ಭಾನುವಾರ ಬೆಳಿಗ್ಗೆ 11ಗಂಟೆಗೆ ಬಿ.ಆರ್.ಸಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನಿವೃತ್ತ ಕೃಷಿ ಅಧಿಕಾರಿ ದಾನಪ್ಪ, ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ಉಪಸ್ಥಿತರಿರುವರು
ಇದೇ ಸಂದರ್ಭದಲ್ಲಿ ಎಂ.ವಿ.ನಾಗರಾಜ್ರಾವ್ರವರ ಪುನರ್ ಮಿಲನ. ನಲ್ಲ ಅಪರಾಧಿ ನಾನಲ್ಲ, ಉಲ್ಲಂಘನ, ಹಸಿರು ಹೊಲದಲ್ಲಿ ಕೆಂಪು ಹೂವು ಎಂಬ ಕಾದಂಬರಿಗಾಳನ್ನು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಮೇಜರ್ ಡಿ.ಚಂದ್ರಪ್ಪ ಮತ್ತು ಬಿ.ಇ.ಓ ಸಾ.ಚಿ.ನಾಗೇಶ್ ಬಿಡುಗಡೆ ಮಾಡಲಿದ್ದಾರೆ ಎಂದು ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

ಶೆಟ್ಟೀಕೆರೆಯಲ್ಲಿ ಜನಸ್ಪಂದನ
ಚಿಕ್ಕನಾಯಕನಹಳ್ಳಿ,ಡಿ.03: ಇದೇ 4ರ ಶನಿವಾರ ಬೆಳಗ್ಗೆ 11ಕ್ಕೆ ಶೆಟ್ಟಿಕೆರ ಹೋಬಳಿಯಲ್ಲಿ ಜನಸ್ಪಂದನ ಸಭೆಯನ್ನು ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಶೆಟ್ಟಿಕೆರೆ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಆವರಣದಲ್ಲಿ ಜನಸ್ಪಂದನ ಸಭೆಯನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡಿಮೆ ದರದಲ್ಲಿ ಅಕ್ಕಿ ಗೋಧಿ ವಿತರಣೆ
ಚಿಕ್ಕನಾಯಕನಹಳ್ಳಿ,ಡಿ.03: ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಸಗಟು ಮಳಿಗೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಜನರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯವನ್ನು ಇದೇ ತಿಂಗಳ 6ಮತ್ತು 7ರಂದು ಪಡೆಯಬಹುದಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ತಾಲೂಕಿನ ಸಕರ್ಾರಿ ನೌಕರರು, ಸಾರ್ವಜನಿಕ ಉದ್ದಿಮೆಗಳ ನೌಕರರು, ಪೌರಾಡಳಿತ ಸಂಸ್ಥೆಯ ಉದ್ಯೋಗಿಗಳು, ಖಾಸಗಿ ಅನುದಾನಿ, ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ಸೈನಿಕ, ಅರೆಸೈನಿಕ, ಪಡೆಯ ಸಿಬ್ಬಂದಿಗಳು, ಗೃಹ ರಕ್ಷಕ ದಳದ ಸಿಬ್ಬಂದಿಗಳು, ಎ.ಪಿ.ಎಲ್ ಪಡಿತರ ಚೀಟಿದಾರರು, ಸ್ವಾತಂತ್ರ ಹೋರಾಟಗಾರರು, ಅಧಿಕೃತ ಪತ್ರಕರ್ತರು, ಕಲಾವಿದರು, ಕ್ರೀಡಾಪಟುಗಳು, ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಅಂಗವಿಕಲರು ತಮ್ಮ ಸಂಸ್ಥೆಯ ಮುಖ್ಯಸ್ಥರು ನೀಡಿರುವ ಭಾವಚಿತ್ರ ಸಹಿತ ಗುರುತಿನ ಪತ್ರದ ದೃಡೀಕೃತ ಪ್ರತಿಯನ್ನು ನೀಡಿ 13ರೂ ನಂತೆ 50 ಕೆ.ಜಿ.ಅಕ್ಕಿಯನ್ನು. 9.50 ರೂ ನಂತೆ 50 ಕೆ.ಜಿ.ಗೋಧಿಯನ್ನು ಆಹಾರ ನಾಗರೀಕ ಸರಬರಾಜು ನಿಗಮ ಸಗಟು ಮಳಿಗೆಯಲ್ಲಿ ಪಡೆಯಬುದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Wednesday, December 1, 2010



ರೋಟರಿ ಶಾಲೆಯಲ್ಲಿ ಜಿಟಲ್ ಕ್ಲಾಸ್ ರೂಂ'' ವ್ಯವಸ್ಥೆ
ಚಿಕ್ಕನಾಯಕನಹಳ್ಳಿ,ಡಿ.01: ರೋಟರಿ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ರೂಂ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುವುದು ಎಂದು ಶಾಲೆಯ ಆಡಳಿತ ಮಂಡಳ ಅಧ್ಕಕ್ಷ ಎಸ್.ಎ.ನಭಿ ತಿಳಿಸಿದ್ದಾರೆ.
ಪಟ್ಟಣದ ರೋಟರಿ ಶಾಲೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಶಿಕ್ಷಣವನ್ನು ಮಕ್ಕಳಿಗೆ ತಲುಪಿಸುವಲ್ಲಿ ನಮ್ಮ ಶಾಲೆ ಮುಂಚೂಣಿಯಲ್ಲಿದ್ದು ನಮ್ಮ ಶಾಲೆಯ ಆಯ್ದ ತರಗತಿಯ ಮಕ್ಕಳು ಇನ್ನು ಮುಂದೆ ಪವರ್ ಪಾಯಿಂಟ್ ಶಿಕ್ಷಣವನ್ನು ಪಡೆಯಲಿದ್ದಾರೆ.
ಈ ವ್ಯವಸ್ಥೆಯನ್ನು 3.60 ಲಕ್ಷರೂಗಳ ಅಂದಾಜಿನಲ್ಲಿ ಜಾರಿಗೆ ತರಲಾಗುತ್ತಿದೆ, ಅನಿಮೇಷಿಯನ್ ತಂತ್ರಜ್ಞಾನದ ಮೂಲಕ ಪಾಠ ಭೋದಿಸುವ ವ್ಯವಸ್ಥೆ ಇದಾಗಿದ್ದು ಈಗಾಗಲೇ ಈ ಬಗ್ಗೆ ತರಬೇತಿಯನ್ನು ನಮ್ಮ ಶಾಲೆಯ ಮುಖೋಪಾಧ್ಯಾಯರು ಪಡೆದಿದ್ದಾರೆ ಎಂದರು.
ಪ್ರತಿಬಾ ಕಾರಂಜಿ, ಮೆಟ್ರಿಕ್ ಮೇಳ ಹಾಗೂ ವಿಜ್ಞಾನ ಸಮಾವೇಶದಲ್ಲಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿರುವ ನಮ್ಮ ಮಕ್ಕಳು, ಶಿಕ್ಷಣ ಇಲಾಖೆ ಏರ್ಪಡಿಸುವ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಸ್ಪಧರ್ೆಯಲ್ಲಿ ನಮ್ಮ ಶಾಲೆ ಮುಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮಂಡಳಿಯ ಕಾರ್ಯದಶರ್ಿ ಡಾ.ಸಿ.ಎಂ.ಸುರೇಶ್, ಸದಸ್ಯರಾದ ಎಂ.ವಿ.ನಾಗರಾಜ್ರಾವ್, ಮರುಳಾರಾದ್ಯ, ಎಂ.ಎಲ್.ಮಲ್ಲಿಕಾಜರ್ುನಯ್ಯ, ಮುಖ್ಯೋಪಾಧ್ಯಾಯಿನಿ ಸೌಮ್ಯ, ಗಣಿತ ಶಿಕ್ಷಕ ಪಾಂಡು ಹಾಜರಿದ್ದರು.
ಮಕ್ಮಲ್ ಟೋಪಿ ನಾಟಕ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಡಿ.01: ಮಾಸ್ಟರ್ ಹಿರಣ್ಣಯ್ಯ ಮಿತ್ರ ಮಂಡಲಿಯವರಿಂದ ನಡೆಯುವ ಮಕ್ಮಲ್ ಟೋಪಿ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭವನ್ನು ಇದೇ 5ರ ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪದವಿ ಪೂರ್ವ ಕಾಲೇಜಿನ ಒಳಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷೆ ಶಶಿಕಲಾ ಜಯದೇವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಪುರಸಭಾಧ್ಯಕ್ಷ ರಾಜಣ್ಣ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ರವಿಪ್ರಸಾದ್, ಸಾಹಿತಿ ಆರ್.ಬಸವರಾಜು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ ಮತ್ತು ಪಿ.ಎಲ್.ಡಿ.ಬ್ಯಾಂಕ್ ಉಪಾಧ್ಯಕ್ಷೆ ಅಹಲ್ಯಾ ಸಾಂಬಮೂತರ್ಿರವರಿಗೆ ಸನ್ಮಾನಿಸಲಾಗುವುದು.
ಅನರ್ಹ ಪಡಿತರ ಚೀಟಿ ಹೊಂದಿರುವವರಿಗೆ ಅಂತಿಮ ಅವಕಾಶ
ಚಿಕ್ಕನಾಯಕನಹಳ್ಳಿ,ಡಿ.01: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಮತ್ತು ಅನರ್ಹ ಪಡಿತರ ಚೀಟಿ ಹೊಂದುವುದು ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ಪಡಿತರ ಚೀಟಿ ಹೊಂದಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬಹುದೆಂದು ನ್ಯಾಯಾಲಯ ಆದೇಶಿಸಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಕಾನೂನು ಬಾಹಿರವಾಗಿ ಎರಡು ಪಡಿತರ ಚೀಟಿಗಳನ್ನು ಹೊಂದಿರುವವರು ಹಾಗೂ ಅನರ್ಹ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿದ್ದರೆ ಈ ವಿಷಯ ಪ್ರಕಟಗೊಂಡ ಎರಡು ವಾರಗಳ ಒಳಗಾಗಿ ಸಂಬಂದಿಸಿದ ತಾಲೂಕು ಅಥವಾ ಉಪನೀದರ್ೇಶಕರ ಕಛೇರಿಗೆ ಹಿಂದಿರುಗಿಸಬೇಕು ತಪ್ಪಿದಲ್ಲಿ ಇದೇ ಅಂತಿಮ ಗಡುವಾಗಿದ್ದು ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಬೋಗಸ್ ಪಡಿತರ ಚೀಟಿ ಹೊಂದಿರುವುದು ಸಾಬೀತಾದಲ್ಲಿ ಅಂತಹ ವ್ಯಕ್ತಿಗೆ ಅಗತ್ಯ ವಸ್ತುಗಳ ಕಾಯ್ದೆಯನ್ವಯ 7 ವರ್ಷಗಳ ತನಕ ಸೆರವಾಸ ವಿಧಿಸಲಾಗುವುದು ಈ ವಿಷಯಕ್ಕೆ ಸಂಬಂದಿಸಿದಂತೆ ಗ್ರಾಹಕರ ಸಹಾಯವಾಣಿ 1800-425-9339ಕ್ಕೆ ದೂರು ನೀಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Monday, November 29, 2010



ಕಸಬ್ನನ್ನು ಶೀಘ್ರ ಗಲ್ಲಿಗೇರಿಸಿ ಎಬಿವಿಪಿ ಒತ್ತಾಯ
ಚಿಕ್ಕನಾಯಕನಹಳ್ಳಿ,ನ,29: ಮುಂಬೈ ಬಾಂಬ್ ಸ್ಪೋಟ ನಡೆದು ಎರಡು ವರ್ಷ ಕಳೆದರೂ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡದಿರುವುದಕ್ಕೆ ವ್ಯವಸ್ಥೆಯ ವಿರುದ್ದ ಬೇಸರ ವ್ಯಕ್ತಪಡಿಸಿರುವ ಅಭಾವಿಪ ತಾಲೂಕು ಘಟಕ ಕಸಬ್ನನ್ನು ಶೀಘ್ರ ಗಲ್ಲಿಗೇರಿಸುವಂತೆ ಆಗ್ರಹಿಸಿದೆ.
ಪಟ್ಟಣದ ನೆಹರು ಸರ್ಕಲ್ನಲ್ಲಿ ನಡೆದ ಮುಂಬೈ ಬಾಂಬ್ ಸ್ಪೋಟದ ಕರಾಳ ದಿನದ ನೆನಪು ಮತ್ತು ವೀರ ಯೋಧರಿಗೆ ನಮನ ಕಾರ್ಯಕ್ರಮದಲ್ಲಿ ನೂರಾರು ದೀಪಗಳನ್ನು ಹಚ್ಚಿ ಮೌನ ಆಚರಣೆಯ ಮೂಲಕ ಅಭಾವಿಪ ಕಾರ್ಯಕರ್ತರು ವೀರರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಮಾತನಾಡಿ ಈ ಕರಾಳ ದಿನ ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಮತ್ತು ಭಯೋತ್ಪಾದನೆಯನ್ನು ದೇಶಾದ್ಯಂತ ಹತ್ತಿಕ್ಕಲು ಯುವಶಕ್ತಿ ಮುಂದಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಗರದ ಮುಖಂಡರಾದ ಸಿ.ಡಿ.ಚಂದ್ರಶೇಖರ್, ಮಿಲ್ಟ್ರಿಶಿವಣ್ಣ ಮಾತನಾಡಿ ಉಗ್ರ ಕಸಬ್ಗೆ ಗಲ್ಲು ಶಿಕ್ಷೆ ನೀಡುವುದಕ್ಕೆ ಮತ್ತು ದೇಶದ ಸೈನಿಕರ ಸೌಕರ್ಯದ ಕೊರತೆಯ ಬಗ್ಗೆ ವಿಷಾದಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ಎ.ಬಿ.ವಿ.ಪಿ ಹಿರಿಯ ಕಾರ್ಯಕರ್ತ ರಾಕೇಶ್, ರಕ್ಷಣಾ ವೇದಿಕೆ ಅಧ್ಯಕ್ಷ ಗುರುಮೂತರ್ಿ, ಎಸ್.ಐ ಶಿವಕುಮಾರ್, ಎ.ಬಿ.ವಿ.ಪಿ ಕಾರ್ಯಕರ್ತರಾದ ಮನು, ದಿಲೀಪ್, ರವಿ. ಮಧು, ದರ್ಶನ್, ನಂದನ್, ಜಗದೀಶ್, ನವೀನ್ ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು

ಹಾಲಿನ ಬೆಲೆ ಹೆಚ್ಚಳಕ್ಕೆ ಗ್ರಾಹಕರು ಸ್ಪಂದಿಸಿ: ಹಳೇಮನೆ
ಚಿಕ್ಕನಾಯಕನಹಳ್ಳಿ,ನ.29: ಹಾಲು ಉತ್ಪಾದಕರ ಮನೆಬಾಗಿಲಿಗೆ ಕೆ.ಎಂ.ಎಫ್ ನೀಡುವ ಸವಲತ್ತುಗಳನ್ನು ಸಂಘಗಳ ಮೂಲಕ ಕೊಂಡೊಯ್ಯುವ ಕೆಲಸಕ್ಕೆ ನಮ್ಮ ತಂಡ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಜಿಲ್ಲಾ ಹಾಲೂ ಒಕ್ಕೂಟದ ಅಧ್ಯಕ್ಷರಾಗಿ ಎರಡನೇಬಾರಿಗೆ ಆಯ್ಕೆಯಾದ ತಮಗೆ ಅಭಿಮಾನಿಗಳು ಹಾಗೂ ಹಿತೈಷಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಮೊದಲ ಬಾರಿ ಅಧ್ಯಕ್ಷನಾಗಿದ್ದಾಗ ಕೇವಲ 470 ಸಂಘಗಳು ಇದ್ದವು ಇದನ್ನು ಅರಿತು ಸಂಘಗಳನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ಹೆಚ್ಚು ಸಂಘಗಳನ್ನು ಸ್ಥಾಪಿಸಲು ಗುರಿಯನ್ನು ಹೊಂದಲಾಯಿತು ಎಂದರು.
ಈಗ ಜಿಲ್ಲೆಯಲ್ಲಿ 856 ಸಂಘಗಳಾಗಿವೆ, ಈ ಎಲ್ಲಾ ಸಂಘಗಳು ಲಾಭದಲ್ಲಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಘಗಳಿಗೆ ಒತ್ತು ನೀಡುತ್ತೇನೆ ಎಂದ ಅವರು ಜಿಲ್ಲೆಯಲ್ಲಿ ಕೇವಲ 3ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 5ಲಕ್ಷ ಲೀಟರ್ ಹಾಲನ್ನು ಹೊಂದಲು ತೀಮರ್ಾನಿಸಿಲಾಗಿದೆ, ಇದಕ್ಕಾಗಿ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದರು. ಹಾಲಿನ ಉತ್ಪಾದನೆಯಿಂದ ಉತ್ಪಾದಕರಿಗೆ ಆಗುತ್ತಿರುವ ಲಾಭ ನಷ್ಟಗಳ ಅರಿವು ಜನರಿಗೆ ತಿಳಿದಿದ್ದು ಹಾಲಿನ ಬೆಲೆಯಲ್ಲಿ ಆಗುವ ಏರುಪೇರುಗಳಿಗೆ ಜನರು ಸಹಕರಿಸಬೇಕು ಎಂದರು.
ರಾಜ್ಯದಲ್ಲೇ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಪ್ರಥಮವಾಗಿ ನಂದಿನಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದ್ದು ಪ್ರತಿಯೊಬ್ಬರು ಸಹಕರಿಸಿ ಬೆಂಬಲಿಸಿದರೆ ಹೆಚ್ಚಿನ ಸಂಘದ ಅಸ್ಥಿತ್ವಕ್ಕೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು.
ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಿ.ಅಶೋಕ್ ಮಾತನಾಡಿ ಹಾಲು ಒಕ್ಕೂಟವು 300ಕೋಟಿ ಲಾಭದಿಂದ ರೈತರಿಗೆ ಹಲವಾರು ಯೋಜನೆ ತಂದಿದ್ದು ಆಥರ್ಿಕವಾಗಿ ಸಹಕಾರಿಯಾಗಿದೆ ಮತ್ತು ಹಾಲಿನ ಹೆಚ್ಚಿನ ಉತ್ಪಾದನೆಗೆ ರೈತರಿಗೆ ಪಶುವೈದ್ಯ ಸೇವೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನಂ.ಹಾ.ಉ, ಉಪಾಧ್ಯಕ್ಷ ಲಕ್ಷ್ಮೀನರಸಿಂಹಯ್ಯ, ತು.ಹಾ.ಒ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಾ.ಒ. ಉಪ ವ್ಯವಸ್ಥಾಪಕ ನಿಜಲಿಂಗಪ್ಪ, ನಿದರ್ೇಶಕ ತ್ರಯಂಬಕ, ಸುಭ್ರಾಯ್ಭಟ್, ಮಹೇಂದ್ರ, ಜಿ.ರಾಜು, ಸೋಮರಾಜ್, ಬಸಪ್ಪ, ಯರಗುಂಟಪ್ಪ, ಬುದ್ದಿಪ್ರಸಾದ್ ಉಪಸ್ಥಿತರಿದ್ದರು.
ಅಪಘಾತ ಒಬ್ಬನ ಸಾವು
ಚಿಕ್ಕನಾಯಕನಹಳ್ಳಿ,ನ.29: ರಸ್ತೆ ಅಪಘಾತದಲ್ಲಿ ಜಾಣೇಹಾರ್ನ ತಿಮ್ಮಯ್ಯ(55) ಎಂಬಾತ ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಲಾರಿಯ ಚಕ್ರಕ್ಕೆ ಸಿಕ್ಕಿ ಜೀವನ್ಮರಣಗಳ ನಡುವೆ ಹೋರಾಡುತ್ತಿದ್ದ ತಿಮ್ಮಯ್ಯ ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳದಿದ್ದಾನೆ. ಪ್ರಕರಣವನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿದ್ದಾರೆ.





Sunday, November 28, 2010



ವಿಜ್ಞಾನ ಸಮಾವೇಶದಲ್ಲಿ ಚಿ.ನಾ.ಹಳ್ಳಿಗೆ ಸಿಂಹಪಾಲ
ಚಿಕ್ಕನಾಯಕನಹಳ್ಳಿ,ನ.28: 18ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ನಡೆದ ಭೂ ಸಂಪನ್ಮೂಲ ಸಮೃದ್ದಿಗಾಗಿ ಬಳಸಿ ಭವಿಷ್ಯಕ್ಕಾಗಿ ಉಳಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ 6ತಂಡಗಳು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪಧರ್ೆಗೆ ಆಯ್ಕೆಯಾಗಿದ್ದಾರೆ ಎಂದು ತಾ.ವಿ.ಕೇಂದ್ರ ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಗ್ರಾಮೀಣ ಕಿರಿಯರ ವಿಭಾಗದಲ್ಲಿ ಚಿಕ್ಕಬಿದರೆ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕುಮಾರಿ ಆಶಾ ತಂಡ, ದಿವ್ಯಪ್ರಭ ಶಾಲೆಯ ದೀಪರಾಜಕುಮಾರ್ ತಂಡ, ನವೋದಯ ಶಾಲೆಯ ಸಿ.ಎಮ್.ಜಯಂತ್ ತಂಡ, ಅಂಭೇಡ್ಕರ್ ಪ್ರೌಡಶಾಲೆಯ ಹೆಚ್.ಎನ್.ಕಾವ್ಯ ತಂಡ, ರೋಟರಿ ಪ್ರೌಡಶಾಲೆಯ ಕುಮಾರಿ ಭವ್ಯ ತಂಡ, ಜೆ.ಸಿ.ಪುರ ಮೊರಾಜರ್ಿ ಶಾಲೆಯ ರಂಗಸ್ವಾಮಿ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಇವರನ್ನೆಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್. ಜಿಲ್ಲಾ ವಿಜ್ಞಾನ ಕೇಂದ್ರ ಕಾರ್ಯದಶರ್ಿ ರಾಮಕೃಷ್ಣ, ತಾಲೂಕು ವಿಜ್ಞಾನ ಕೇಂದ್ರ ಅಧಕ್ಷ್ಷೆ ಎನ್.ಇಂದಿರಮ್ಮ, ಕಾರ್ಯದಶರ್ಿ ಎಂ.ಎಸ್.ಈಶ್ವರಪ್ಪ ಅಭಿನಂದಿಸಿದ್ದಾರೆ.


ಮಹಿಳೆಯರಿಗೆ ವಿಪುಲ ಅವಕಾಶವಿದೆ ಬಳಸಿಕೊಳ್ಳಲು ಮುಂದೆ ಬನ್ನಿ
ಚಿಕ್ಕನಾಯಕನಹಳ್ಳಿನ.28: ಮಹಿಳೆಯರು ವಿದ್ಯಾವಂತರಾಗಿ ಎಲ್ಲಾ ರಂಗಗಳಲ್ಲಿಯೂ ಪ್ರವೇಶಿಸಿ ಜನರ ಕಷ್ಟ ಸುಖಗಳಿಗೆ ಬಾಗಿಯಾಗಿ ಆಥರ್ಿಕವಾಗಿ ಸಬಲರಾಗಬೇಕು ಎಂದು ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಭಸವಯ್ಯ ಕರೆ ನೀಡಿದರು.
ಪಟ್ಟಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರು ಸಂಘಟಿತರಾಗಿ ಸಕರ್ಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಯಲ್ಲಿ ತಮ್ಮ ಇರುವಿಕೆಯನ್ನು ಸಾದರ ಪಡಿಸಿ ಪುರಷರಿಗೆ ಸರಿಸಮನಾಗಿ ಬದುಕುವಂತೆ ತಿಳಿಸಿದ ಅವರ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳು ರಚನೆಯಾಗಿ ಇಂದು ಮಹಿಳೆಯರು ಸಾಕಷ್ಟು ಪ್ರಮಾಣದಲ್ಲಿ ಸಮಾರಂಭಗಳಿಗೆ ಹಾಜರಾಗಿ ಸಮಾಜದ ಹಲವು ವಿಷಯಗಳ ಬಗ್ಗೆ ಚಚರ್ಿಸಿ ಅನ್ಯೂನ್ಯತೆಯಿಂದ ಬಾಳಿ ಸಬಲರಾಗುವಂತೆ ಮತ್ತು ಮಹಿಳೆಯರು ಸ್ವಸಹಾಯ ಸಂಘಗಳಿಗೆ ನೆರವಾಗುವಂತೆ ಬ್ಯಾಂಕಿನ ವ್ಯವಹಾರವನ್ನು ತಿಳಿದುಕೊಂಡು ಆಥರ್ಿಕವಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ತಮ್ಮ ಹಕ್ಕು ಮತ್ತು ರಕ್ಷಣೆಗಾಗಿ ಸಂಘಟಿತರಾಗಲು ಹೋರಾಟ ಕೆಲವೊಮ್ಮೆ ಅನಿವಾರ್ಯವಾಗಬಹುದು ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಮಹಿಳೆಯರು ಸಂಘಟಿತರಾಗಿ ಕೀಳರಿಮೆ ತೊರೆದು ಸಮಾಜದಲ್ಲಿ ಆಥರ್ಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣ ಹೊಂದಬೇಕಾಗುತ್ತದೆ ಎಂದ ಅವರು ಮಹಿಳೆ ಮತ್ತು ಪುರುಷರ ಅನುಪಾತದಲಿ ವ್ಯತ್ಯಾಸದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದು ಮೂಢನಂಬಿಕೆ, ಸ್ತ್ರೀ ಬ್ರೂಣ ಹತ್ಯೆ, ಬಾಲ್ಯ ವಿವಾಹ, ಹೆಣ್ಣುಮಕ್ಕಳ ಶಾಲೆ ಬಿಡುವಿಕೆ, ಇಂತಹ ಸಾಮಾಜಿಕ ಪಿಡುಗು ನಿವಾರಣೆಗಾಗಿ ಮಹಿಳೆಯರು ಹೋರಾಟಕ್ಕೆ ಮುಂದಾಗಬೇಕು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರ್ವತಯ್ಯ ಮಾತನಾಡಿ ತೊಟ್ಟಿಲು ತೂಗುವ ಕೈಗಳು ದೇಶವನ್ನು ಆಳಿದರೆ ಮಾಜಿ ಪ್ರಧಾನಿ ಇಂಧಿರಾಗಾಂಧಿಯಂತೆ ದಿಟ್ಟ ಹೆಜ್ಜೆಗಳನ್ನು ಇಟ್ಟು ದೇಶದ ಅಭಿವೃದ್ದಿಗಾಗಿ ಶ್ರಮಿಸುತ್ತಾರೆ, ಮತ್ತು ಇಂಧಿರಗಾಂಧಿಯವರ 20 ಅಂಶಗಳ ಕಾರ್ಯಕ್ರಮದಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಯು ಒಂದಾಗಿದ್ದು ಮಹಿಳೆಯರು ಅಧಿಕಾರ ಹಿಡಿದರೆ ಸ್ವಾರ್ಥಕ್ಕಾಗಿ ಶ್ರಮಿಸದೆ ಇಂದಿರಾಗಾಂಧಿಯವರಂತೆ ದೇಶದ ಒಳಿತಿಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ತುಳಸಿ ಪ್ರಾಥರ್ಿಸಿದರೆ ನಾಗರತ್ನ ಸ್ವಾಗತಿಸಿ, ಮಹದೇವಮ್ಮ ವಂದಿಸಿದರು.
29ರಂದು ಗೋಡೆಕೆರೆ ಲಕ್ಷ ದಿಪೋತ್ಸವ
ಚಿಕ್ಕನಾಯಕನಹಳ್ಳಿ,ನ.28: ಗುರುಸಿದ್ದರಾಮೇಶ್ವರ ಸ್ವಾಮಿಯವರ ಕಾತರ್ಿಕ ಮಾಸದ ಲಕ್ಷದೀಪೋತ್ಸವ ಅಂಗವಾಗಿ ನಡೆಯುವ ಕಾರ್ಯಕ್ರಮವನ್ನು ಇದೇ 29ರ ಸಂಜೆ 6.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಗೋಡೆಕೆರಯಲ್ಲಿ ಹಮ್ಮಿಕೊಂಡಿದ್ದು ಮೃಂತ್ಯುಂಜಯ ದೇಶೀಕೇಂದ್ರ ಸ್ವಾಮಿ ಮತ್ತು ಸಿದ್ದರಾಮದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅಧ್ಯಕ್ಷತೆ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಕುಶಾಲ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಬಿ.ಜೆ.ಪಿ ಮುಖಂಡ ಅರುಣ್ಸೋಮಣ್ಣ, ಮಾಜಿ ಗ್ರಾ.ಪಂ.ಅಧ್ಯಕ್ಷ ಪಂಚಾಕ್ಷರಿ, ಟೂಡಾ ಆಯುಕ್ತ ಎನ್.ಆರ್.ಆದರ್ಶಕುಮಾರ್, ಜಿ. ಪಂ. ಯೋಜನಾಧಿಕಾರಿ ಜಿ.ಎಂ.ಸಿದ್ದರಾಮಣ್ಣ ಜಿ.ಪಂ.ಸದಸ್ಯೆ ಸುಶೀಲ ಸುರೇಂದ್ರಯ್ಯ ಉಪಸ್ಥಿತರಿರುವರು.

ದೇಶದ ಅಭಿವೃದ್ದಿಗೆ ಪ್ರತಿಯೊಬ್ಬರೂ ಸೇವೆ ಸಲ್ಲಿಸಬೇಕು: ಎಂ.ವಿ.ಎನ್
ಚಿಕ್ಕನಾಯಕನಹಳ್ಳಿ,ನ.26: ಸಂಸ್ಥೆಗಳ ಮುಖ್ಯವಾದ ಕೆಲಸ ಸೇವೆ, ಸಂಸ್ಥೆಗಳ ಸೇವೆಯಿಂದ ದೇಶದ ಹೆಮ್ಮೆ ಮತ್ತು ಕೀತರ್ಿಯನ್ನು ಬೆಳಗಿಸಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಪಟ್ಟಣದ ಬಿ.ಸಿ.ಎಂ ಹಾಸ್ಟಲ್ನಲ್ಲಿ ಬಿ.ಸಿ.ಎಂ ಮತ್ತು ಇನ್ನರ್ವೀಲ್ ಕ್ಲಬ್ವತಿಯಿಂದ ನಡೆದ ಉಚಿತ ಬೆಡ್ಶೀಟ್ ಮತ್ತು ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆಲವರಿಗೆ ಹುಟ್ಟಿನಿಂದಲೇ ಸೇವೆಯ ಗುಣ ಆವರಿಸಿರುತ್ತದೆ ಅಂತವರು ಸೇವೆಯ ಮಹತ್ವವನ್ನು ಇತರರಿಗೆ ತಿಳಿಸಿ ಅವರನ್ನು ಸೇವೆಯ ಕಡೆ ವಾಲುವಂತೆ ನೋಡಿಕೊಳ್ಳಬೇಕು ಮತ್ತು ಶ್ರದ್ದೆಯಿಂದ ಸೇವೆ ಸಲ್ಲಿಸಿ ಉತ್ತಮ ಪ್ರಜೆಗಳಾಗಲು ಕರೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸೇವೆ ಸಲ್ಲಿಸುವ ರೀತಿ ಮಹತ್ವದ್ದು ಆದರೆ ಸೇವೆಗೆ ತಕ್ಕಂತೆ ಪ್ರತಿಫಲ ದೊರಕಿದಾಗ ಸೇವೆ ಸಲ್ಲಿಸುವವರು ಮುಂದೆ ಬರುತ್ತಾರೆ, ಅದೇ ರೀತಿ ಹಾಸ್ಟಲ್ಗೆ ಇನ್ನರ್ವೀಲ್ ಕ್ಲಬ್ ವತಿಯಿಂದ ನೀಡಿರುವ ಕೊಡುಗೆ ಸಾರ್ಥಕವಾಗಲು ವಿದ್ಯಾಥರ್ಿನಿಯರೆಲ್ಲ ಉತ್ತಮ ಅಂಕಗಳನ್ನು ತೆಗೆದು ಒಳ್ಳೆಯ ಕೆಲಸಗಳನ್ನು ಪಡೆದು ಈ ಸಮಾಜ ಸೇವೆ ಸಲ್ಲಿಸಬೇಕು ಎಂದರು.
ಜಿಲ್ಲಾ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಸಮುದಾಯದ ಸಹಭಾಗಿತ್ವವಿದ್ದರೆ ಪ್ರತಿಯೊಬ್ಬರಿಗೂ ಸಹಾಯವಾಗಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಅದಕ್ಕಾಗಿ ಶ್ರದ್ದೆಯಿಂದ ಉತ್ತಮ ಜ್ಞಾನ ಪಡೆದು ಶೈಕ್ಷಣಿಕವಾಗಿ ಹಾಗೂ ಸಮಾಜಿವಕಾಗಿ ಸಮಾಜವನ್ನು ಅಭಿವೃದ್ದಿಪಡಿಸಬೇಕು ಎಂದರು.
ಸಮಾರಂಭದಲ್ಲಿ ಇನ್ನರ್ವೀಲ್ ಅಧ್ಯಕ್ಷೆ ನಾಗರತ್ನರಾವ್, ಕಾರ್ಯದಶರ್ಿ ತೇಜಾವತಿ ನರೇಂದ್ರ, ತಾ.ಪಂ.ಸದಸ್ಯ ಸಿ.ಡಿ.ರುದ್ರೇಶ್, ವನಮೂಲ ಭೂಮ್ಕರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾನಾಮತಿ ನಿರೂಪಿಸಿದರೆ ದೇವರಾಜಪ್ಪ ವಂದಿಸಿದರು.