Tuesday, December 4, 2012


ಸಂಸ್ಕೃತಿ ಕಾಣಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾದ್ಯ  : ಸಾ.ಶಿ.ಮರುಳಯ್ಯ

ಚಿಕ್ಕನಾಯಕನಹಳ್ಳಿ,ಡಿ.4 : ಸಂಸ್ಕೃತಿ ವ್ಯಕ್ತಿಯ ಆಂತರಿಕ ಶೋಭೆ, ನಾಗರೀಕತೆ ವ್ಯಕ್ತಿಯ ಬಹಿರಂಗ ಶೋಭೆಯಾಗಿ ಸಮಾಜ ಗುರುತಿಸಿದೆ, ನಮ್ಮ ಸಂಸ್ಕೃತಿ ಕಾಣಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾದ್ಯ ಎಂದು ಖ್ಯಾತ ಸಾಹಿತಿ ಸಾ.ಶಿ.ಮರುಳಯ್ಯನವರು ಅಭಿಪ್ರಾಯಪಟ್ಟರು.
ಪಟ್ಟಣದ ಬಲಿಜ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಡಶಾಲಾ ಕನ್ನಡ ಭಾಷಾ ಬೋದಕರ ಐದನೆಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವದ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಯು ಶ್ರೇಷ್ಠವಾದದ್ದು ಈ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ, ಕುವೆಂಪು ರಚಿಸಿರುವ ನಾಡಗೀತೆ  ಕೊಡುವ ಭಾವಾರ್ಥ ಭರತ ಖಂಡದ ಯಾವ ಭಾಷೆಯಲ್ಲಿಯೂ ಹೊಹೊಮ್ಮಿಲ್ಲ, ಈ ನಾಡಗೀತೆ ದೇಶದ ಸಂಸ್ಕೃತಿಯನ್ನು ಬೆಳಗುತ್ತದೆ ಎಂದರು. ಕ ುವೆಂಪು ರಚಿಸಿರುವ ನಾಟಕಗಳು ಷೇಕ್ಸ್ಪಿಯರ್ ರಚಿಸಿರುವ ನಾಟಕಗಳಿಗಿಂತ ಉತ್ತಮವಾಗಿದೆ ಎಂದರಲ್ಲದೆ ಶಿಕ್ಷಕರು ತಮ್ಮ ವಿದ್ಯಾಥರ್ಿಗಳಿಗೆ ತಿಳುವಳಿಕೆ ನೀಡುವಾಗ ಪ್ರೀತಿಯಿಂದ ತಿಳಿಸಿ, ಶಿಕ್ಷಿಸುವುದರಿಂದ ಸಾದ್ಯವಿಲ್ಲ, ಶಿಷ್ಯರು ಏನೇ ತಪ್ಪು ಮಾಡಿದರು ಆ ಅಪವಾದ ಬರುವುದು ಗುರುವಿನ ಮೇಲೆ ಅದಕ್ಕಾಗಿ ಗುರುಗಳು ಶಿಷ್ಯರಿಗೆ ತಮ್ಮ ಬೋಧನೆಯಲ್ಲಿ ಸನ್ಮಾರ್ಗದತ್ತ ಸಾಗುವ ದಾರಿ ತೋರಬೇಕು ಎಂದರು.
ಯುವಕರು ಸಮಾಜದ ಆಗು ಹೋಗುಗಳನ್ನು ತಿಳಿದುಕೊಂಡು ದೇಶಾಭಿಮಾನವನ್ನು ಉತ್ತುಂಗಕ್ಕೆ ಏರಿಸಬೇಕು, ಯುವಶಕ್ತಿ ಹಾಳಾದರೆ ಇಡೀ ದೇಶ ಹಾಳಾಗುತ್ತದೆ, ಶಿಕ್ಷಕರು ಮಕ್ಕಳಲ್ಲಿ ಈಗಿನಿಂದಲೇ ರಾಷ್ಟ್ರಪ್ರೇಮವನ್ನು ಮೂಡಿಸಬೇಕು ಎಂದು ತಿಳಿಸಿದ ಅವರು ಪುಸ್ತಕವನ್ನು ಪ್ರತಿನಿತ್ಯ ಓದಿ ಅದರಲ್ಲಿನ ಹೊಸ ಹೊಸ ವಿಷಯಗಳನ್ನು ಮಕ್ಕಳಿಗೆ ತಿಳಿಸಿಬೇಕು ಎಂದರು.
ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಮೋಹನ್ಕುಮಾರ್ ಮಾತನಾಡಿ ಕನ್ನಡ ಭಾಷಾ ಶಿಕ್ಷಕರು ಸಾಹಿತ್ಯ ಮತ್ತು ಸಾಹಿತಿಗಳ ಪರಿಚಯ ವಿದ್ಯಾಥರ್ಿಗಳಿಗೆ ಮಾಡಿಕೊಡಿ ಭಾಷೆಯ ಇತಿಹಾಸ ಪರಂಪರೆ ಸಂಸ್ಕೃತಿ ಎಂದು ತಿಳಿಸಿ, ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಈಗಿನ ಯುವಶಕ್ತಿ ಮುಂದಾಗಬೇಕು, ತಮ್ಮ ಕಾರ್ಯದಲ್ಲಿ ಕ್ರಿಯಾಶೀಲವಾಗುವುದರ ಜೊತೆಗೆ ಸಾಹಿತ್ಯದ ಕಡೆಗೂ ಗಮನ ನೀಡಿ ಎಂದರಲ್ಲದೆ ಶಿಕ್ಷಕರು ಕನ್ನಡ ಸಾಹಿತ್ಯ ಹಾಗೂ ಪರಂಪರೆಯನ್ನು ಮಕ್ಕಳಿಗೆ ತಿಳಿಸಿದರೆ ಕನ್ನಡದ ಬಗ್ಗೆ ಒಲವು ಹೆಚ್ಚುತ್ತದೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿದರು.
  ಸಮಾರಂಭದಲ್ಲಿ ಸಾಹಿತಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ತಾ.ಪ್ರೌ.ಕ.ಭಾ.ಬೋ.ಸಂಘದ ಅಧ್ಯಕ್ಷ ಗೋವಿಂದರಾಜು, ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮರ್, ಜಿಲ್ಲಾ ಕನ್ನಡ ಭಾಷ ಭೋದಕರ ಅಧ್ಯಕ್ಷ ಮಾದಾಪುರ ಶಿವಪ್ಪ, ಜಿಲ್ಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷೆ ರೇಣುಕಮ್ಮ, ಕನ್ನಡ ವಿಷಯ ಪರಿವೀಕ್ಷಕ ನರಸಿಂಹಯ್ಯ ಉಪಸ್ಥಿತರಿದ್ದರು.