Friday, December 14, 2012ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪ್ರತಿಭಾ ಕಾರಂಜಿ  ಕಾರ್ಯಕ್ರಮ ಉತ್ತಮ ವೇದಿಕೆ
                             
ಚಿಕ್ಕನಾಯಕನಹಳ್ಳಿ,ಡಿ.14 : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಶಿಕ್ಷಣ ಇಲಾಖೆ ಆಯೋಜಿಸಿರುವ ಪ್ರತಿಭಾ ಕಾರಂಜಿ ಸ್ಪಧರ್ಾ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದ್ದು, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ  ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ತಾಲ್ಲೂಕು ಮಟ್ದದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯ ಮಾಡದಂತೆ ತೀಪರ್ುಗಾರರು ಉತ್ತಮ ರೀತಿಯ ಫಲಿತಾಂಶ ನೀಡಬೇಕು ಎಂದರು. ಈ ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಯಶಸ್ವಿಯಾಗುವ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ರೀತಿಯ ಪ್ರದರ್ಶನ ನೀಡುವಂತೆ ಹೆಚ್ಚಿನ ತರಬೇತಿಯನ್ನು ಶಿಕ್ಷಕರು ನೀಡಬೇಕೆಂದರು.
 ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ  ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ, ಆ ಪ್ರತಿಭೆ ಹೊರ ತರಲು ಶಿಕ್ಷಕರೊಂದಿಗೆ ಪೋಷಕರು ಮುಂದಾಗಬೇಕು ಎಂದರು.
ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ ಮಾತನಾಡಿ ಮಕ್ಕಳು ಓದುವುದರ ಜೊತೆಗೆ ಇತರೆ ಸ್ಪಧರ್ೆಗಳಲ್ಲಿ ಭಾಗವಹಿಸುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗಲಿದೆ ಎಂದರಲ್ಲದೆ, ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು ಮುಂದಿನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಂತೆ ಮಕ್ಕಳಿಗೆ ಹಾರೈಸಿದರು.
 ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಸಕರ್ಾರ ಹಮ್ಮಿಕೊಂಡಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪಠ್ಯೇತರ ಪಾಠದೊಂದಿಗೆ ಸಾಹಿತ್ಯ, ಕಲೆ, ಕ್ರೀಡೆ ಇತ್ಯಾದಿ ಸ್ಪಧರ್ಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸ ಬೇಕು  ಎಂದರು.
ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯೂ ತಾಲ್ಲೂಕಿನಲ್ಲಿ ನಡೆಯಬೇಕು ಅದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಸಮಾರಂಭದಲ್ಲಿ ತಾ.ಪ್ರೌ.ಶಾ.ಮು.ಶ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ,  ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಡಿ.ನಾಗರಾಜು, ಕಾರ್ಯದಶರ್ಿ ರಾಜಶೇಖರ್, ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ತಾ.ಪ್ರತಿಭಾ ಕಾರಂಜಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಮೂತರ್ಿ, ಮುಂತಾದವರಿದ್ದರು.


ಕಂದಿಕೆರೆ ಸಾಹಿತ್ಯ ಸಮ್ಮೇಳನದಲ್ಲಿ ಅಸ್ಪೃಶ್ಯತೆ ಆಚರಣೆ: ಕಪ್ಪುಬಾವುಟ ಪ್ರದರ್ಶನ ಆರೋಪ
ಚಿಕ್ಕನಾಯಕನಹಳ್ಳಿ,ಡಿ.14 : ಕಂದಿಕೆರೆಯಲ್ಲಿ ನಡೆಯುತ್ತಿರುವ ಹೋಬಳಿ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಸಂಘಟಕರು ಅಸೃಶ್ಯತೆ ಆಚರಣೆ ಮಾಡುತ್ತಿದ್ದಾರೆಂದು ಆರೋಪಿಸಿ ಸಮ್ಮೇಳನದಲ್ಲಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಸುವುದಾಗಿ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಸಾದರಹಳ್ಳಿ ಜಯಣ್ಣ ಆರೋಪಿಸಿದ್ದಾರೆ.
ತಾಲ್ಲೂಕು ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಹಾಗೂ ಮಾದಿಗ ದಂಡೋರ ಸಮಿತಿಯ ಮುಖಂಡನಾದ ನನ್ನನ್ನು ಉದ್ದೇಶ ಪೂರ್ವಕವಾಗಿ ಸಮ್ಮೇಳನಕ್ಕೆ ಆಹ್ವಾನಿಸದೆ ಅಸ್ಪೃಶ್ಯತೆ  ಆಚರಿಸುತ್ತಿದ್ದಾರೆ ಎಂದರಲ್ಲದೆ ನಮ್ಮ ಪಂಚಾಯ್ತಿಯ ಉಳಿದ ಎಲ್ಲರನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಪತ್ರಿಕೆಗೆ ಹೆಸರು ಹಾಕಿಸಿದ್ದಾರೆ ನಾನು ಅಸ್ಪೃಶ್ಯ ಎಂಬ ಕಾರಣಕ್ಕೆ ನನ್ನ ಹೆಸರನ್ನು ಸಮ್ಮೇಳನದ ಆಹ್ವಾನ ಪತ್ರಿಕೆಗೆ ಹಾಕಿಸಿಲ್ಲ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತಿರುವುದಲ್ಲದೆ ಸಮ್ಮೇಳನದ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದಶರ್ಿಸಿ ಪ್ರತಿಭಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.