Thursday, July 31, 2014


ಗಣಿಭಾದಿತ ಪ್ರದೇಶಗಳ ಪುನರ್ವಸತಿ ಹಾಗೂ ಪುನಶ್ಚೇತನಕ್ಕಾಗಿ ಒತ್ತಾಯಿಸಿ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ 

ಚಿಕ್ಕನಾಯಕನಹಳ್ಳಿ : ಜಿಲ್ಲೆಯ ಗಣಿಭಾದಿತ ಪ್ರದೇಶಗಳ ಪುನರ್ವಸತಿ ಹಾಗೂ ಪುನಶ್ಚೇತನಕ್ಕಾಗಿ ಒತ್ತಾಯಿಸಿ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ಯತಿರಾಜು ತಿಳಿಸಿದರು.
ಪಟ್ಟಣದಲ್ಲಿನ ನಿವೃತ್ತ ನೌಕರರ ನೌಕರರ ಸಂಘದಲ್ಲಿ,  ಜಿಲ್ಲಾ ವಿಜ್ಞಾನ ಕೇಂದ್ರ, ತಾಲ್ಲೂಕು ವಿಜ್ಞಾನ ಕೇಂದ್ರ, ರಾಷ್ಟ್ರೀಯ ನೈಸಗರ್ಿಕ ಸಂಪನ್ಮೂಲ ಸಂರಕ್ಷಣಾ ಸಮಿತಿ ತುಮಕೂರು, ಗುಬ್ಬಿ ರಾಷ್ಟ್ರೀಯ ನೈಸಗರ್ಿಕ ಸಂಪನ್ಮೂಲ ಕ್ರಿಯಾ ಸಮಿತಿ, ಆಮ್ ಆದ್ಮಿ ಪಕ್ಷದವರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಗಣಿಭಾದಿತ ಪ್ರದೇಶಗಳಾದ ಗುಬ್ಬಿ, ತಿಪಟೂರು, ಚಿ.ನಾ.ಹಳ್ಳಿ ಗಣಿ ಭಾಗದ ಜನತೆ ಈ ಧರಣಿ ಸತ್ಯಾಗ್ರಹ ಕಾರ್ಯಕ್ರಮಕ್ಕೆ ಹೆಚ್ಚಿನದಾಗಿ ಆಗಮಿಸಲು ಕೋರಿದ ಅವರು, ಗಣಿ ಪ್ರದೇಶಗಳ ಸಮಸ್ಯೆಗಳ ಕುರಿತ ಅಧಿಕಾರಿಗಳು ನಡೆಸಿದ ವರದಿಯು ಗಣಿ ಮಾಲೀಕರು, ಬೇರೆ ಬೇರೆ ಮಂಡಳಿಗಳವರ ಅಭಿಪ್ರಾಯ ಪಡೆದು ವರದಿ ನೀಡಲಾಗಿದೆ, ಬಾಧಿತರ ಅಭಿಪ್ರಾಯ ಕೇಳಿಲ್ಲ ಎಂದ ಅವರು,  ಈ ಬಗ್ಗೆ ಗಣಿಭಾಗದ ಜನರ ಅಭಿಪ್ರಾಯ ಪಡಯುವಂತೆ ಒತ್ತಾಯಿಸಿದರು, ಹಳ್ಳಿಗಳಲ್ಲಿನ ಪುನರ್ವಸತಿ, ಪುನರ್ಶ್ಚೇತನಕ್ಕಾಗಿ  ಈ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದರಲ್ಲದೆ, ಗಣಿ ಭಾಗದಲ್ಲಿ ಬಗರ್ಹುಕುಂ ಸಾಗುವಳಿ ಮಾಡಿರುವ ರೈತರಿಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ರಾಮಕೃಷ್ಣಪ್ಪ, ತಾ.ವಿಜ್ಞಾನ ಕೇಂದ್ರದ ಅಧ್ಯಕ್ಷೆ ಎನ್.ಇಂದಿರಮ್ಮ, ಸಮಾಜ ಪರಿವರ್ತನ ಮುಖಂಡ ನಂಜುಂಡಪ್ಪ, ಗುಬ್ಬಿ ನಾಗರತ್ನಮ್ಮ, ಮರಿಸ್ವಾಮಿ, ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ, ಬಸವರಾಜು, ಪುಟ್ಟರಾಜು, ಚಂದನ್ ಆಮ್ ಆದ್ಮಿ ಪಕ್ಷದ ಪ್ರತಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈಜ್ಞಾಕ ಯುಗದಲ್ಲಿ ಧರ್ಮವು ದೂರ ಹೋದಂತಾಗಿದೆ  : ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ 

                                              
ಚಿಕ್ಕನಾಯಕನಹಳ್ಳಿ,ಜು.31:  ವೈಜ್ಞಾಕ ಯುಗದಲ್ಲಿ ಧರ್ಮವು ದೂರ ಹೋದಂತಾಗಿದೆ. ಅರಿವಿಲ್ಲದ ವ್ಯಕ್ತಿಗಳಿಗೆ ಜ್ಞಾನದ ಮಾರ್ಗವನ್ನು ಸೂಚಿಸುವ ಗುರು ದೇವರಿಗೆ ಸಮಾನ ಎಂದು ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕುಪ್ಪೂರು ಗದ್ದಿಗೆ ಶ್ರೀ ಮರಳಸಿದ್ದೇಶ್ವರ ಪೀಠಾಧ್ಯಕ್ಷ  ಡಾ.ಯತೀಶ್ವ ಶಿವಾಚಾರ್ಯಸ್ವಾಮೀಜಿ ಯವರ 41ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಮಾಜ ಪೂರ್ವದ ಕಾಲದಿಂದಲೂ ಜ್ಞಾನದಲ್ಲಿ ಬುದ್ದಿ ಎಂದು ಕರೆಸಿಕೊಳ್ಳುವ ಗುರುವಿನ ಶಕ್ತಿ ಅಪಾರ.ಅಧಿಕಾರ, ನಡವಳಿಕೆ, ಮತ್ತು ಸಮಾನತೆಯಲ್ಲಿ ಏರುಪೇರು ಉಂಟಾದಾಗ ಗುರು ಸಾಂದಭರ್ಿಕ ವ್ಯಕ್ತಿಗಳನ್ನು ತಿದ್ದಿ ಉತ್ತಮ ದಾರಿ ಕಡೆಗೆ ನೆಡೆಸುತ್ತಾನೆ. ರಾಜರ ಕಾಲದಿಂದಲೂ ವೀರಶೈವ ಪರಂಪರೆಯಲ್ಲಿ ದಾಸೋಹ, ವಿಧ್ಯೆ, ಧರ್ಮಗಳನ್ನು, ಮಠಗಳು ಒಳಗೊಂಡಿವೆ. ನಾನು ನನ್ನದೆಂಬ ಅಹಂಕಾರವನ್ನು ಬಿಟ್ಟು ಧರ್ಮದ ಕಾರ್ಯದಲ್ಲಿ ತೋಡಗಿದರೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.
ಡಾ.ಯತೀಶ್ವ ಶಿವಾಚಾರ್ಯಸ್ವಾಮೀಜಿ ಮಾತನಾಡಿ ಬಾಳಿನಲ್ಲಿ ಪರೋಪಕಾರವನ್ನು ಅಳವಡಿಸಿ ಕೋಳ್ಳಬೇಕು.  ದೀನ ದಲಿತರ ಸೇವೆ ಮಾಡುವುದು ನಿಜವಾದ ಧರ್ಮವಾಗುತ್ತದೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಸಾಧನೆಪ್ರತಿ ನಿತ್ಯ  ಅಲ್ಲಿನ ಸಾವಿರಾರು ಮಕ್ಕಳಿಗೆ ದಾಸೋಹ, ವಿದ್ಯೆ ನೀಡುತ್ತಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಉತ್ತಮ ಕೊಡುಗೆಯಾಗಿದೆ. ನಮ್ಮ ಪಟ್ಟಧಿಕಾರದಿಂದಲೂ ಮುಡುಕುತೋರೆಯ ಮಹಾಲಿಂಗ ಸ್ವಾಮೀಜಿ ಯವರ ಮಾರ್ಗದರ್ಶನದ ಅನುಗುಣವಾಗಿ ಮಠಾಧಿ ಪತಿಯಾಗಿ ಸೇವೆ ಮಾಡಿದ್ದೇನೆ ಎಂದರು.
 ಕುಪ್ಪುರೂ ಗದ್ದಿಗೆ ಮಠದ ಪೀಠಾಧ್ಯಕ್ಷರಾಗಿ 25ನೇ ವರ್ಷ ತುಂಬಿದ್ದು,  ಪಟ್ಟಾಧಿಕಾರದ ರಜತ ಮಹೋತ್ಸವವು ರಾಜ್ಯ ಮಟ್ಟದಲ್ಲಿ ನೆಡೆಸ ಬೇಕೆಂಬ ಭಕ್ತಾದಿಗಳ ಕನಸಾಗಿದೆ, ಈ ಸಂದರ್ಭದಲ್ಲಿ 800ಪುಟವುಳ್ಳ ಗ್ರಂಥವನ್ನು ಲೋಕಾರ್ಪಣೆ ಮಾಡುವ ಸಿದ್ದತೆ ಮಾಡಲಾಗುತ್ತಿದೆ. ಆ.10ರಂದು ಪೂರ್ವ ಭಾವಿ ಸಭೆಯನ್ನು ಕರೆಯಾಲಾಗಿದೆ ಎಂದರು.
ಕೇಕ್ ಕತ್ತರಿಸಿ ಪೂವರ್ಾಶ್ರಮದ ತಾಯಿ ದೇವಿರಮ್ಮರವರಿಗೆ ಮೊದಲು ಕೇಕ್ ನೀಡಿದರು.ಹಿರೇಮಠದ ಉಮಾಶಂಕರ, ಅಂಬಲದೇವರಳ್ಳಿ ಉಜ್ಜನೀಶ್ವರ ಸ್ವಾಮೀಜಿ,ಶಿವಲಿಂಗಪ್ಪ, ವಾಣಿಚಂದ್ರಯ್ಯ, ಸತೀಶ್, ಪುಟ್ಟಸ್ವಾಮಿ, ಹಾಗು ಮಠದ ಭಕ್ತರು ಪಾಲ್ಗೋಂಡಿದ್ದರು.            


ಸೇವೆ ಮಾಡುವ ಸೇವಾ ಮನೋಭಾವ : ಮಾಳವೀಕಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಜು.30 : ಒಂದು ಹಣತೆಯಿಂದ ನೂರಾರು ದೀಪಗಳನ್ನು ಬೆಳಗಿಸುವಂತೆ ಅಭಿವೃದ್ದಿ ಹೊಂದಿರುವ ವ್ಯಕ್ತಿಯು ಇತರರ ಬಾಳಿನ ಬೆಳಕಾಗಿ ಸೇವೆ ಮಾಡುವ ಸೇವಾ ಮನೋಭಾವ ಬೆಳಸಿಕೊಳ್ಳಬೇಕು ಎಂದು ಇನ್ನರ್ವೀಲ್ ಕ್ಲಬ್ನ ಡಿಸ್ಟ್ರಿಕ್ಟ್ ಇಡಬ್ಯೂ 319ರ ಛೇರಮನ್ ಮಾಳವೀಕಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ರೋಟರಿ ಭಾಲಭವನದಲ್ಲಿ ಇನ್ನರ್ವೀಲ್ ಕ್ಲಬ್ನ 2014-15ನೇ ಸಾಲಿನ ನೂತನ ಅಧ್ಯಕ್ಷರಾದ ಡಿ.ಸಿ.ಶಶಿಕಲಾ ಜಯದೇವ್ ಹಾಗೂ ಕಾರ್ಯದಶರ್ಿ ಹೆಚ್.ಎಸ್.ಚಂದ್ರಿಕಾಮೂತರ್ಿರವರಿಗೆ ಅಭಿನಂದಿಸಿ ಮಾತನಾಡಿದ ಅವರು ಆಥರ್ಿಕವಾಗಿ, ಸಾಮಾಜಿಕವಾಗಿ ಸದೃಢರಾಗಿರುವ ವ್ಯಕ್ತಿಗಳು ಬಡವರಿಗೆ, ಅಶಕ್ತರಿಗೆ ನೆರವಾಗಿ ಅವರ ಜೀವನವನ್ನೂ ಉತ್ತಮಗೊಳಿಸಿ, ಮಹಿಳೆಯರಿಗೆ ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಧೈರ್ಯ ತುಂಬಿ, ಮನೆಯಲ್ಲಿಯೇ ಉದ್ಯೋಗ ಸಿಗುವಂತಹ ಕೆಲಸಗಳಿಗೆ ಸಹಾಯ ಮಾಡಿ ಅವರ ಆಥರ್ಿಕತೆಯನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ ಅವರು ಸಮಾಜದಲ್ಲಿ ಪರಿಸರ ಹೆಚ್ಚು ಹದಗೆಡುತ್ತಿದೆ, ನಮ್ಮ ಮುಂದಿನ ಜನಾಂಗಕ್ಕೆ ಅನುಕೂಲವಾಗುಂತೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಅದಕ್ಕಾಗಿ ಪರಿಸರ ಸಂರಕ್ಷಿಸುವ, ಗಿಡ-ಮರಗಳನ್ನು ಬೆಳೆಸುವ ಹವ್ಯಾಸವನ್ನು ತಾವೂ ಬೆಳೆಸಿಕೊಂಡು ಇತರರಿಗೆ ಮಾರ್ಗದರ್ಶನ ನೀಡಬೇಕು, ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯಾವಂತನಾಗಬೇಕು ಸಂಘ-ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯ ಅಂತಹ ನಿಟ್ಟಿನಲ್ಲಿ ತಾಲ್ಲೂಕಿನ ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಕ್ಲಬ್ನ ಕಾರ್ಯ ಶ್ಲಾಘನೀಯವಾದುದು ಎಂದರು.
ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ತಾಲ್ಲೂಕಿನಲ್ಲಿ ಇನ್ನರ್ವೀಲ್ ಕ್ಲಬ್ ಆರಂಭವಾಗಿ ಮೂರು ದಶಕಗಳೇ ಉರುಳಿವೆ, ಅಂದು ಕ್ಲಬ್ ಆರಂಭವಾದ ಸದಸ್ಯರುಗಳು ಇಂದೂ ಸಹ ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಬರುವುದರ ಜೊತೆಗೆ ನೂತನ ಅಧ್ಯಕ್ಷರು, ಸದಸ್ಯರುಗಳು ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ತಾಲ್ಲೂಕಿನ ಜನತೆಗೆ ಅನುಕೂಲ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ನೂತನ ಅಧ್ಯಕ್ಷೆ ಡಿ.ಸಿ.ಶಶಿಕಲಾ ಜಯದೇವ್ ಮಾತನಾಡಿ ಇನ್ನರ್ವೀಲ್ ಸದಸ್ಯರುಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ, ಅವರ ನಿರೀಕ್ಷೆಯಂತೆ ತಾಲ್ಲೂಕಿನ ಜನತೆಗೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ನೂತನ ಕಾರ್ಯದಶರ್ಿ ಹೆಚ್.ಎಸ್.ಚಂದ್ರಿಕಾಮೂತರ್ಿ ಮಾತನಾಡಿ ಇನ್ನರ್ವೀಲ್ ಕ್ಲಬ್ನಿಂದ ಅಂಗವಿಕಲ ಮಕ್ಕಳಿಗೆ ತಟ್ಟೆ-ಲೋಟ ವಿತರಣೆ, ಶಾಲಾ ಮಕ್ಕಳಿಗೆ ಪುಸ್ತಕ, ಬಡವಿದ್ಯಾಥರ್ಿಗಳಿಗೆ ಶಿಕ್ಷಣಕ್ಕೆ ನೆರವು, ಪರಿಸರ ಉಳಿಸಲು ಸಸಿ ನೆಡವುದು ಸೇರಿದಂತೆ ಉತ್ತಮ ಚಿತಾಗಾರ ವ್ಯವಸ್ಥೆಯನ್ನು ನಿಮರ್ಿಸುವುದು ಕ್ಲಬ್ನ ಯೋಜನೆಯಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೋಹಿತಾಕ್ಷ, ರೋಟರಿ ಕ್ಲಬ್ನ ಚಾಂದ್ಪಾಷ, ಇನ್ನರ್ವೀಲ್ ಕ್ಲಬ್ನ ತೇಜಾವತಿ ನರೇಂದ್ರಬಾಬು, ಶಾರದಶಾಸ್ತ್ರಿ, ಪುಷ್ಪವಾಸುದೇವ್ ಉಪಸ್ಥಿತರಿದ್ದರು.



Saturday, July 26, 2014

ಪತ್ರಿಕಾ ಕಛೇರಿಯ ಮೇಲೆ ದಾಳಿ ಖಂಡಿಸಿ ವಿವಿಧ        ಸಂಘಟನೆಗಳಿಂದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.26  : ಪ್ರಜಾಪ್ರಗತಿ ಪತ್ರಿಕಾ ಕಛೇರಿಯ ಮೇಲೆ ಕೆಪಿಸಿಸಿ ಅಧ್ಯಕ್ಷರ ಬೆಂಬಲಿಗರೆನ್ನಲಾದ ಪುಂಡರು ದಾಳಿ ನಡೆಸಿ ಕಛೇರಿಯ ವ್ಯವಸ್ಥಾಪಕರು, ಸಿಬ್ಬಂದಿಗಳಗೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ತಾಲ್ಲೂಕಿನ ಹತ್ತುಕ್ಕೂ ಅಧಿಕ ಸಂಘ-ಸಂಸ್ಥೆಗಳು ನೆಹರು ಸರ್ಕಲ್ನಿಂದ ಬೈಕ್ ರ್ಯಾಲಿ ಹೊರಟು  ತಹಶೀಲ್ದಾರ್ ಕಛೇರಿ ತಲುಪಿ ಕಛೇರಿ  ಮುಂದೆ ಪ್ರತಿಭಟನೆ ನಡೆಸಿ, ಸಕರ್ಾರ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಶಿರಸ್ತೆದಾರ್ರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
     ತಾಲ್ಲೂಕಿನ ಜನಪರ ವೇದಿಕೆ, ಸ್ಪಂದನ ಜನಸೇವಾ ಪ್ರಗತಿಪರರ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಬುಡಕಟ್ಟು ಅಲೆಮಾರಿ ಮಹಾ ಸಭಾ, ಮಡಿವಾಳ ಸಂಘ,  ಕುಂಚಾಂಕುರ ಕಲಾ ಸಂಘ, ವಿಕಲಚೇತನರ ಸಂಘ, ಪತ್ರಕರ್ತರ ಸಂಘ, ದಿವ್ಯ ಜ್ಯೋತಿ ಸಂಘ, ಆಟೋ ಚಾಲಕರ ಸಂಘ, ಜಯ ಕನರ್ಾಟಕ ಸಂಘಟನೆಗಳ ಮುಖಂಡರುಗಳು  ಪ್ರತಿಭಟನೆಯಲ್ಲಿ ಭಾಗವಹಿಸಿ,  ಇದು ಸಾಂಕೇತಿಕ ಪ್ರತಿಭಟನೆಯಾಗಿದ್ದು, ಹಲ್ಲೆ ಮಾಡಿದವರನ್ನು ಶೀಘ್ರ ಬಂಧಿಸದಿದ್ದರೆ ಪ್ರತಿಭಟನೆ ತೀವ್ರಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
    ತಾಲ್ಲೂಕು ಜನಪರ ವೇದಿಕೆ ಸಂಘಟನೆಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಡಾ.ಜಿ.ಪರಮೇಶ್ವರ್ರವರ ಬಗ್ಗೆ ಮಲ್ಲಿಕಾಜರ್ುನ ಖಗರ್ೆ ನೀಡಿರುವ ಹೇಳಿಕೆಯನ್ನು ಪ್ರಜಾಪ್ರಗತಿ ಸೇರಿದಂತೆ ರಾಜ್ಯದ ಹಲವು ಪತ್ರಿಕೆಗಳಲ್ಲಿ ಈ  ವರದಿ ಬಂದಿದೆ, ಆದರೆ ಪರಮೇಶ್ವರ್ ಕಡೆಯವರೆಂದು ಹೇಳಿಕೊಂಡಿರುವ ಕೆಲವರು ಈ ವರದಿಯನ್ನು ಪ್ರಕಟಿಸಿದ್ದೇ ತಪ್ಪು ಎಂಬ ರೀತಿಯಲ್ಲಿ ವತರ್ಿಸಿ ದಾಂಧಲೆ ನಡೆಸಿರುವುದು, ಪತ್ರಿಕಾ ಸ್ವಾತಂತ್ರವನ್ನೇ ಹತ್ತಿಕ್ಕುವ ಕೆಲಸಕ್ಕೆ ಕೈಯಾಕಿದಂತಾಗಿದೆ ಎಂದರು.
  ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಕೆ.ಪಿ.ಸಿ.ಸಿ. ಪಕ್ಷದ ಅಧ್ಯಕ್ಷರ ಬೆಂಬಲಿಗರಿಂದ ಪತ್ರಿಕಾ ಕಛೇರಿಯ ಮೇಲೆ ಗುಂಡಾಗಿರಿಯಾಗುತ್ತಿದ್ದರೂ ಇದನ್ನು ತಡೆಗಟ್ಟುವಲ್ಲಿ ಸಕರ್ಾರ ವಿಫಲವಾಗಿ ರಾಜ್ಯದ ಆಡಳಿತವನ್ನೇ ಪ್ರಶ್ನಿಸುವಂತಾಗಿದೆ, ಸಂವಿಧಾನದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾಯರ್ಾಂಗ ಹಾಗೂ ನಾಲ್ಕನೇ ಅಂಗವಾಗಿ ಪತ್ರಿಕಾರಂಗವಿದೆ ಈ ಮೇಲಿನ ಸಂವಿಧಾನದ ಮೂರು ಅಂಗಗಳ ತಪ್ಪುಗಳನ್ನು ತಿದ್ದುವಲ್ಲಿ ಪತ್ರಿಕಾರಂಗ ಕೆಲಸ ಮಾಡುತ್ತಿದೆ ಎಂದರಲ್ಲದೆ ಕೂಡಲೇ ಹಲ್ಲೆ ನಡೆಸಿದವರನ್ನು ಬಂಧಿಸದಿದ್ದರೆ ಸಂಘ ಸಂಸ್ಥೆಗಳ ಮುಖಂಡರುಗಳು ನಡೆಸುತ್ತಿರುವ ಪ್ರತಿಭಟನೆ ಉಗ್ರ ರೂಪ ಪಡೆದುಕೊಳ್ಳುವುದು ಎಂದರು.
    ದಲಿತ ಸಂಘರ್ಷ ಸಮಿತಿಯ ಮುಖಂಡ ಲಿಂಗದೇವರು ಮಾತನಾಡಿ ಸಮಾಜದ ಆಗು-ಹೋಗುಗಳನ್ನು ನೇರವಾಗಿ ಜನಸಾಮಾನ್ಯರಿಗೆ ತಿಳಿಸುವ ಕಾರ್ಯವನ್ನು ಪತ್ರಿಕೆ ಹಾಗೂ ಮಾಧ್ಯಮ ಮಾಡುತ್ತಿದೆ, ತನ್ನ ಲೇಖನಿಯಿಂದ ಸಮಾಜದಲ್ಲಿ ನಿಭರ್ೀತಿಯಿಂದ ಕೆಲಸ ನಿರ್ವಹಿಸುವ ಪತ್ರಿಕೆಯ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಸಕರ್ಾರ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿದರು.
    ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವಲೋಚನ ಮಾತನಾಡಿ, ಹಿಂದೆ ಪತ್ರಿಕೆ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ಸಕರ್ಾರ ಗಂಭೀರವಾಗಿ ಪರಿಗಣಿಸಿ ಹಲ್ಲೆ ನಡೆಸಿದವರ ಮೇಲೆ ಶೀಘ್ರ ಕಾನೂನು ಕ್ರಮ ತೆಗೆದುಕೊಳ್ಳುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಹಲ್ಲೆ ವಿಷಯವನ್ನು ಕೇವಲವಾಗಿ ತೆಗೆದುಕೊಳ್ಳುತ್ತಿದೆ ಎಂದ ಅವರು ಸಕರ್ಾರ ಹಲ್ಲೆ ನಡೆಸಿದವರ ವಿರುದ್ದ ಶೀಘ್ರ ಬಂಧಿಸಿ, ನ್ಯಾಯ ದೊರಕಿಸಿಕೊಡುವಂತೆ ಹೇಳಿದರು.
    ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದಮನೆ, ಮಾತನಾಡಿ ಸಂವಿಧಾನದ 4ನೇ ಅಂಗವಾಗಿ ಕೆಲಸ ಸಮಾಜದಲ್ಲಿ ತನ್ನ ಕಾರ್ಯ ಮಾಡುತ್ತಿರುವ ಪತ್ರಿಕಾರಂಗದ ಮೇಲೆ ಪದೇ ಪದೇ ದಾಳಿ ನಡೆಯುತ್ತಿದೆ, ರಾಜಕೀಯ ವೈಷಮ್ಯದಿಂದ ಪತ್ರಿಕೆಯ ಮೇಲೆ ನಡೆಯುವ ಹಲ್ಲೆಯಂತಹ  ಘಟನೆಗಳು ಸಮಾಜವನ್ನು ತಲೆತಗ್ಗಿಸುವಂತೆ ಮಾಡುತ್ತಿದೆ ಎಂದರು.
         ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾದ ಜಂಟಿ ಕಾರ್ಯದಶರ್ಿ ಶಾಂತಕುಮಾರ್ ಮಾತನಾಡಿ ಸಮಾಜದ ಕಟ್ಟ-ಕಡೆಯ ವ್ಯಕ್ತಿಗಳನ್ನು ಗುರುತಿಸುವುದು ಹಾಗೂ ಸಮಾಜದ ತಪ್ಪುಗಳನ್ನು ನಿಭರ್ೀತಿಯಿಂದ ತಿಳಿಸಿ ಸರಿಪಡಿಸುವ ಪತ್ರಿಕೆಯ ಮೇಲೆ ನಡೆದಿರುವ ಹಲ್ಲೆಯು ಖಂಡನೀಯವಾದುದು ಎಂದರು.   
    ಪುರಸಭಾ ಸದಸ್ಯ ಅಶೋಕ್ ಮಾತನಾಡಿ ಸಮಾಜದಲ್ಲಿ ನಡೆಯುವ ಮಾಹಿತಿ ಹಾಗೂ ಅರಿವು, ತಿಳುವಳಿಕೆ ನೀಡುವ ಪತ್ರಿಕೆಯ ಮೇಲೆ ಹಲ್ಲೆ ನಡೆಸಿರುವವರನ್ನು ಶೀಘ್ರ ಬಂಧಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.   
    ಪ್ರತಿಭಟನೆಯಲ್ಲಿ ತಾಲ್ಲೂಕು ಮಡಿವಾಳರ ಸಮಜದ ಅಧ್ಯಕ್ಷ ಸಿ.ಎಸ್.ನಟರಾಜು, ಪತ್ರಕರ್ತರ ಸಂಘದ ಸಹ ಕಾರ್ಯದಶರ್ಿ ಸಿ.ಬಿ.ಲೋಕೇಶ್, ಪತ್ರಿಕಾ ವಿತರಕರ ಮುಖಂಡ ಸಿ.ಆರ್. ಚಂದ್ರಶೇಖರ್(ಪುರಿಭಟ್ಟಿ), ಸ್ಪಂದನ ಜನಸೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್, ಉಪಾಧ್ಯಕ್ಷ ಶಿವಣ್ಣ, ಕಾರ್ಯದಶರ್ಿ ತ್ಯಾಗರಾಜು, , ರವಿಕುಮಾರ್(ಲ್ಯಾಬ್), ತಾ.ವಿಕಲಚೇತನರ ಸಂಘದ ಅಧ್ಯಕ್ಷೆ ಶಾಂತಮ್ಮ, ಜಯಕನರ್ಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್, ಕಾರ್ಯದಶರ್ಿ ರಾಜುಬಗ್ಗನಹಳ್ಳಿ,  ಗೋಪಾಲ್, ಸಿದ್ದರಾಮಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.25 : ರಾಜ್ಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಯಾದವ ಯುವ ಸೇನೆ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿತು.
    ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಾಜ್ಯ ಯಾದವ ಯುವಸೇನೆ ಸಂಸ್ಥಾಪಕ ಅಧ್ಯಕ್ಷ ಅಮ್ಮನಹಟ್ಟಿ ಹರೀಶ್ಯಾದವ್ ಮಾತನಾಡಿ 2009ರಿಂದ 2011ರವರೆಗೆ ನಮ್ಮ ದೇಶದಲ್ಲಿ 14989 ಮಹಿಳೆಯರ ಮೇಲೆ ಅತ್ಯಾಚಾರವಾದ್ದು ಪ್ರಪಂಚದಲ್ಲಿ ನಮ್ಮ ದೇಶ ಮೂರನೇ ಸ್ಥಾನ ಪಡೆದಿದೆ ಎಂದರಲ್ಲದೆ  ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ದೌರ್ಜನ್ಯವನ್ನು ತಡೆಯಲು ಸಕರ್ಾರ ಅತ್ಯಾಚಾರಿಗಳಿಗೆ ಉಗ್ರ ರೂಪದ ಕಾನೂನನ್ನು ಜಾರಿಗೆ ತರಬೇಕೆಂದು ತಿಳಿಸಿದರು.
    ಪ್ರತಿಭಟನೆಯಲ್ಲಿ ಯಾದವ ಯುವಸೇನೆ ರಾಜ್ಯ ಪ್ರಧಾನ ಕಾರ್ಯದಶರ್ಿ ಕೊಟ್ರೇಶ್ಯಾದವ್, ಕಾರ್ಯದಶರ್ಿ ನಾಗರಾಜ್ಯಾದವ್, ತಾಲ್ಲೂಕು ಅಧ್ಯಕ್ಷ ಚಂದ್ರು, ತಾ.ಪ್ರಧಾನ ಕಾರ್ಯದಶರ್ಿ ಬಾಲಕೃಷ್ಣ ಯಾದವ್, ಕುಮಾರ್ಯಾದವ್, ಶಂಕರ್ಯಾದವ್, ಅರಸೀಕೆರೆ ತಾ.ಅಧ್ಯಕ್ಷ ಗಂಗಾಧರ್, ಶಂಕರಣ್ಣಅಮ್ಮನಹಟ್ಟಿ, ಶಿವು, ರಂಗನಾಥ್, ಶಶಿಧರ್ಯಾದವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
           

ಬಿಜೆಪಿ ಯುವಮೋಚರ್ಾ ವತಿಯಿಂದ ಸಸಿ ನೆಡುವ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ,ಜು.25 : ತಾಲ್ಲೂಕು ಬಿಜೆಪಿ ಯುವಮೋಚರ್ಾ ವತಿಯಿಂದ ಅಟಲ್ಬಿಹಾರಿ ವಾಜಪೇಯಿ ಹುಟ್ಟಹಬ್ಬ ಹಾಗೂ ಕಾಗರ್ಿಲ್ ವಿಜಯೋತ್ಸವದ ಅಂಗವಾಗಿ ಅರಣ್ಯ ಇಲಾಖೆಯಿಂದ ಪಡೆದ ಸಸಿಗಳನ್ನು ಪಟ್ಟಣದ ಕಾಲೇಜುಗಳಲ್ಲಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
        ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಯುವಮೋಚರ್ಾ ಅಧ್ಯಕ್ಷ ಚೇತನ್ಪ್ರಸಾದ್ ಮಾತನಾಡಿ, ಅಟಲ್ಬಿಹಾರಿ ವಾಜಪೇಯಿರವರ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಬಿಜೆಪಿ ಪಕ್ಷ ಪ್ರತಿ ಮಂಡಲದಲ್ಲೂ ಸಸಿ ನೆಡಲು ಕರೆ ನೀಡಿದ್ದ ಹಿನ್ನಲೆಯಲ್ಲಿ ಹಾಗೂ ಭಾರತ ದೇಶ ಕಾಗರ್ಿಲ್ ಯುದ್ದದಲ್ಲಿ ವಿಜಯೋತ್ಸವ ಆಚರಿಸಿ 15ವರ್ಷವಾದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
 ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಮುಖಂಡ ಮಿಲ್ಟ್ರಿಶಿವಣ್ಣ, ಕಾರ್ಯಕರ್ತರುಗಳಾದ ಸುಧೀಂದ್ರ, ಮಂಜುನಾಥ್, ರೇಣುಕಸ್ವಾಮಿ, ನವಿಲೆ ಮಧು  ಉಪಸ್ಥಿತರಿದ್ದರು.

ಪುರಸಭೆಯ 14.94 ಲಕ್ಷ ರೂಗಳ ಉಳಿತಾಯ ಬಜೆಟ್
ಚಿಕ್ಕನಾಯಕನಹಳ್ಳಿ,ಜು.25 : ಪಟ್ಟಣದ ಪುರಸಭೆಯ 2014-15ನೇ ಸಾಲಿನಲ್ಲಿ ಆಯವ್ಯಯ ಬಜೆಟ್ನಲ್ಲಿ ಒಟ್ಟು ಆದಾಯ 17 ಕೋಟಿ 53 ಲಕ್ಷ ರೂಗಳಾಗಿದ್ದು, ಖಚರ್ು17 ಕೋಟಿ38 ಲಕ್ಷ ರೂಗಳಾಗಲಿದ್ದು, 14.94 ಲಕ್ಷ ರೂಗಳ ಉಳಿತಾಯ ಬಜೆಟ್ನ್ನು ಪುರಸಭಾ ಸದಸ್ಯರು ಸವರ್ಾನುಮತದಿಂದ ಅಂಗೀಕರಿಸಿದರು.
    ಪುರಸಭೆ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಆಯವ್ಯಯ ಸಭೆಯಲ್ಲಿ 2014-15ನೇ ಸಾಲಿನಲ್ಲಿ ಆರಂಭಿಕ ಶಿಲ್ಕು 478.33ಲಕ್ಷ ರೂ ಗಳಿದ್ದು,  ಚಾಲ್ತಿ ಸಾಲಿನ ಆದಾಯ 1274.50ಲಕ್ಷ ಸೇರಿ ಒಟ್ಟು ಪುರಸಭೆಯ ಆದಾಯ 1752.83ಲಕ್ಷ ರೂ ಆದಾಯದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಘನತ್ಯಾಜ್ಯ ವಿಲೇವಾರಿ, ನೌಕರರ ಸಂಬಳ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ವಿವಿಧ ಬಾಬ್ತುಗಳ ಖಚರ್ಿಗೆ ಒಟ್ಟು 1737.89ಲಕ್ಷಕ್ಕೆ ಸಭೆ ಅನುಮತಿ ನೀಡಿ 14.94ಲಕ್ಷ ಉಳಿತಾಯಕ್ಕೆ ಸಭೆಯಲ್ಲಿ ಸದಸ್ಯರು ಅನುಮೋದನೆ ನೀಡಿದರು.
    ಈ ಸಂದರ್ಭದಲ್ಲಿ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ ಹೊಸ ಬಸ್ ನಿಲ್ದಾಣದಲ್ಲಿರುವ ಪುರಸಭೆಯ ಹಳೆ ಮಳಿಗೆಗಳನ್ನು ತೆರವುಗೊಳಿಸಿ ಅಲ್ಲಿ ನೂತನವಾಗಿ ಅಂಗಡಿ ಮಳಿಗೆಗಳನ್ನು ಕಟ್ಟಲು ಒತ್ತಾಯಿಸಿದರು, ಈ ಪ್ರಸ್ತಾಪವನ್ನು   ಸವರ್ಾನುಮತದಿಂದ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು.
    ಪುರಸಭೆವತಿಯಿಂದ ಕಟ್ಟಿಸಲಾಗಿರುವ ಅಂಗಡಿ ಮಳಿಗೆಗಳಲ್ಲಿ ಎಷ್ಟು ಅಂಗಡಿಗಳಿಂದ  ಬಾಡಿಗೆ ಬರುತ್ತಿದೆ ಇದರ ಬಗ್ಗೆ ಮಾಹಿತಿ ನೀಡುವಂತೆ ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಂಗಾಧರ್ ಒಟ್ಟು ಐಡಿಎಸ್ಎಮ್ಟಿ ಯೋಜನೆ ಅಡಿಯಲ್ಲಿ ಹಾಗೂ 10ನೇ ಹಣಕಾಸು ಯೋಜನೆ ಅಡಿಯಲ್ಲಿ ಒಟ್ಟು 106 ಅಂಗಡಿ ಮಳಿಗೆಗಳಿದ್ದು ಇದರಿಂದ 83ಸಾವಿರ ಬಾಡಿಗೆ ಬರುತ್ತದೆ, 106ರ ಪೈಕಿ 14 ಮಳಿಗೆಗಳು ಖಾಲಿ ಇದ್ದು ಇವುಗಳನ್ನು ಹರಾಜು ಮಾಡಬೇಕಿದೆ ಎಂದರು.
    ಐಡಿಎಸ್ಎಮ್ಟಿ ಯೋಜನೆ ಅಡಿಯಲ್ಲಿ ನಿಮರ್ಿಸಿರುವ ಅಂಗಡಿ ಮಳಿಗೆಗಳನ್ನು ಮೂರು ವರ್ಷಕ್ಕೆ ಶೇ5ರಿಂದ ಶೇ.10ರಷ್ಟು ಬಾಡಿಗೆ ಹೆಚ್ಚಿಸಬಹುದು, 10ನೇ ಹಣಕಾಸು ಯೋಜನೆ ಅಡಿಯಲ್ಲಿ ನಿಮರ್ಿಸಿರುವ ಅಂಗಡಿ ಮಳಿಗೆಗಳಿಗೆ ಪಿ.ಡಬ್ಯೂ.ಡಿಯವರು ನಿಗಧಿ ಪಡಿಸಿದ ದರದಲ್ಲಿ ಬಾಡಿಗೆ ವಸೂಲಿ ಮಾಡುವಂತೆ  ಸದಸ್ಯರು ಹೇಳಿದರು.
    ಪುರಸಭೆಯ 22.75ರ ಅನುದಾನದಲ್ಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಮಡುವಂತೆ ಕಳೆದ ವರ್ಷ ಟೆಂಡರ್ ನೀಡಲಾಗಿತ್ತು ಇದುವರೆವಿಗೂ ಏಕೆ ಸರಬರಾಜು ಮಾಡಿಲ್ಲ ಎಂದು ಜೆ.ಎಸ್.ಎ. ಎಂಟರ್ಪ್ರೈಸಸ್ ಮಾಲೀಕರನ್ನು ಸದಸ್ಯರು ಪ್ರಶ್ನಿಸಿದರು.
    ಶೇ.22.75ರ ಅನುದಾನದಲ್ಲಿ ಎಸ್,ಸಿ, ಎಸ್.ಟಿ ಜನಾಂಗಕ್ಕೆ ಮೀಸಲಿಟ್ಟಿರುವ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಬಗ್ಗೆ ಜೆ.ಎಸ್.ಎ ಎಂಟರ್ ಪ್ರೈಸಸ್ ಕಂಪನಿಯವರು ಸಕರ್ಾರ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಿನ ದರ ನಮೂದಿಸಿದ್ದಾರೆ ಎಂದು ಸದಸ್ಯರಾದ ರಾಜಶೇಖರ್ ಹಾಗೂ ದಯಾನಂದ್ ಪ್ರಶ್ನಿಸಿದಾಗ, ಜೆ.ಎಸ್.ಎ. ಎಂಟರ್ ಪ್ರೈಸಸ್ ಮಾಲೀಕ ಸಿ.ಎಲ್.ಜಯದೇವ್ ಮಾತನಾಡಿ ಕಂಪನಿಯ ದರವನ್ನು ನಮೂದಿಸಿದ್ದೇನೆ ಎಂದು ಹೇಳಿದರಲ್ಲದೆ, ಸಕರ್ಾರದ ಆದೇಶದಂತೆ ಠೇವಣಿ ಹಾಗೂ ಉಳಿದ ಪರಿಕರಗಳಿಗೆ 1870ರೂ ನಿಗಧಿಯಾಗಿದೆ, ಸಿಂಗಲ್ ಬರ್ನಲ್ ಸ್ಟೌವ್ಗೆ 900ರೂ ನಿಗಧಿಯಾಗಿದ್ದು ಒಟ್ಟು 2770 ರೂಗಳಾಗುತ್ತದೆ ಆದರೆ ನೀವು 8130 ದರ ನಿಗಧಿ ಪಡಿಸಿದ್ದೀರಿ ಎಂದಾಗ ಅಂದಿನ ದರ ಅಷ್ಟಿತ್ತು ಎಂದರು. ಇದಕ್ಕೆ ತೃಪ್ತರಾಗದ ಸದಸ್ಯರು ಸಕರ್ಾರದ ಆದೇಶದ ದಾಖಲೆಯನ್ನು ಒದಗಿಸುವಂತೆ ಸೂಚಿಸಿದರು.
    ಪಟ್ಟಣದ ವೀರಲಕ್ಕಮ್ಮ ಬಡಾವಣೆಯ ಸ್ಲಂ ನಿವಾಸಿಗಳಿಗೆ ವಾಸಸ್ಥಳ ದೃಢೀಕರಣ ಪತ್ರ ನೀಡುತ್ತಿಲ್ಲ ಆದರೆ ಕಂದಾಯ ಪಟ್ಟಣದಲ್ಲಿರುವ ಮನೆಗಳಿಗೆ ಏಕೆ ವಾಸಸ್ಥಳ ದೃಢೀಕರಣ ಪತ್ರ ನೀಡುವುದಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು.
    ಕಂದಾಯ ಪಟ್ಟಣದಲ್ಲಿ ವಾಸಿಸುತ್ತಿರುವ ಕಂದಾಯಕ್ಕಿಂತ ಸರ್ವೆ ನಂಬರ್ನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಎರಡು ಪಟ್ಟು ಕಂದಾಯ ಕಟ್ಟಿಸಿಕೊಂಡು ವಾಸಸ್ಥಳ ದೃಢೀಕರಣ ಪತ್ರ ನೀಡಲಾಗುವುದು ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ತಿಳಿಸಿದರು.
    ಪುರಸಭೆ ವ್ಯಾಪ್ತಿಯಲ್ಲಿ 8ಸಾವಿರ ಮನೆಗಳ ಪೈಕಿ 2400 ನಲ್ಲಿಗಳಿರುವುದರಿಂದ ಕುಡಿಯುವ ನೀರಿನ ತೊಂದರೆಯಾಗದೆ, 2ವಾಡರ್್ಗಳ ನಲ್ಲಿಗಳಿಗೆ ಮೀಟರ್ ಅಳವಡಿಸುವ ಬಗ್ಗೆ ಕೆಲವು ಸದಸ್ಯರ ವಿರೋಧ, ಎಲ್ಲಾ ವಾಡರ್್ಗಳಿಗೂ ವಿಸ್ತರಿಸಲೂ ಕೆಲವು ಸದಸ್ಯರು ಒತ್ತಾಯಿಸಿದರು, ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣದ ಹತ್ತಿರ ಒತ್ತುವರಿ ಕಟ್ಟಡಗಳಿಂದ ದಂಡದ ರೀತಿಯಲ್ಲಿ ವಸೂಲಾದ 6ಲಕ್ಷರೂಗಳು ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಠೇವಣಿ ಇಟ್ಟಿದ್ದು ಈ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನೂತನ ಆಯ್ಕೆಯಾದ ಅಧ್ಯಕ್ಷರು ಹಾಗೂ 5ಜನ ಸದಸ್ಯರನ್ನು ಒಳಗೊಂಡ ಸಮಿತಿಯಲ್ಲಿ ಠೇವಣಿ ಇಡುವಂತೆ ಸದಸ್ಯ ಸಿ.ಪಿ.ಮಹೇಶ್ ಸಲಹೆ ನೀಡಿದರು, ಪುರಸಭಾ ಸದಸ್ಯ ಹಾಗೂ ಕೋ.ಅಪರೇಟಿವ್ ಬ್ಯಾಂಕ್ನ ಅಧ್ಯಕ್ಷರೂ ಆದ ಸಿ.ಎಸ್.ರಮೇಶ್ ಹಾಗೂ ಸಿ.ಪಿ.ಮಹೇಶ್ ನಡುವೆ ಪರಸ್ಪರ ವಾಕ್ಸ್ಮರ ನಡೆಯಿತು, ಹಿರಿಯ ಸದಸ್ಯ ಸಿ.ಎಮ್.ರಂಗಸ್ವಾಮಿ ಮಧ್ಯೆ ಪ್ರವೇಶಿಸಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಠೇವಣಿ ಮುಂದುವರೆಸಲು ತೀಮರ್ಾನಿಸಲಾಯಿತು.
    ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ರೇಣುಕಮ್ಮ, ರೇಣುಕಾಗುರುಮೂತರ್ಿ, ಪ್ರೇಮಾ, ಧರಣಿಲಕ್ಕಪ್ಪ, ಸಿ.ಆರ್.ತಿಮ್ಮಪ್ಪ, ಮಲ್ಲೇಶ್, ಸಿ.ಎಸ್.ರಮೇಶ್, ಹೆಚ್.ಬಿ.ಪ್ರಕಾಶ್, ಮಹಮದ್ ಖಲಂದರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಟಿ.ದಯಾನಂದ್, ಅಶೋಕ್ ಸೇರಿದಂತೆ  ಉಪಸ್ಥಿತರಿದ್ದರು.
ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.25 : ಕಟ್ಟಡ ಕಾಮರ್ಿಕರ ಅಪಘಾತ ಮರಣ ಅಥವಾ ಶಾಶ್ವತ ಅಂಗವಿಕಲತೆಗೆ ಆಂಧ್ರದ ಮಾದರಿಯಲ್ಲಿ 5ಲಕ್ಷರೂಗಳು ಹಾಗೂ ಸ್ವಾಭಾವಿಕ ಮರಣಕ್ಕೆ 3ಲಕ್ಷರೂ ಪರಿಹಾರ ಧನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು.
    ಪಟ್ಟಣದ ನೆಹರು ಸರ್ಕಲ್ನಿಂದ ತಹಶೀಲ್ದಾರ್ ಕಛೇರಿವರೆಗೆ ಪ್ರತಿಭಟನೆ ನಡೆಸಿದ ಸಂಘ, ಸಕರ್ಾರಕ್ಕೆ  ಮನವಿ ಪತ್ರ ಸಲ್ಲಿಸಲಾಯಿತು,  ಕಾಮರ್ಿಕರ ಬೇಡಿಕೆಗಳಾದ ಮನೆ ಕಟ್ಟುವುದು, ಖರೀದಿಸುವುದಕ್ಕೆ 2ಲಕ್ಷ ಸಾಲ ಇದರಲ್ಲಿ 50ಸಾವಿರ ಸಬ್ಸಿಡಿ ನೀಡುವುದು ಉಳಿದ 1.50ಲಕ್ಷ ಹಣವನ್ನು ವಾಷರ್ಿಕ ಶೇ.5ರ ಬಡ್ಡಿದರದಲ್ಲಿ ಮಂಡಳಿಗೆ ಪಾವತಿಸಲು ಅವಕಾಶವಿದೆ,  ಹಾಗೂ 50ವರ್ಷ ತುಂಬಿದ ಮಹಿಳೆಯರಿಗೆ, 55ವರ್ಷ ತುಂಬಿದ ಪುರುಷರಿಗೆ ಪ್ರತಿಯೊಬ್ಬರಿಗೂ ಮಾಹೆಯಾನ 500ರೂಪಾಯಿ ಪಿಂಚಣಿ ಸೌಲಭ್ಯವಿದೆ ಆದರೆ ಈ ಎರಡು ಬೇಡಿಕೆಗಳನ್ನು 7ವರ್ಷ ಕಳೆದರೂ ನೊಂದಾಯಿತ ಫಲಾನುಭವಿಗೆ ಈ ಸೌಲಭ್ಯವನ್ನು ನೀಡಿರುವುದಿಲ್ಲ, ಹಾಗೂ ಹಲವಾರು ಬೇಡಿಕೆಗಳನ್ನು ಪುರಸ್ಕರಿಸುವಂತೆ ಮಂಡಳಿಗೆ ಸಂಘಟನೆ ವತಿಯಿಂದ ಒತ್ತಾಯಿಸದರೂ ಇದುವರೆವಿಗೂ ಪುರಸ್ಕರಿಸಿಲ್ಲ, ಹಾಗೂ ಈಗಾಗಲೇ ಹಲವಾರು ಸೌಲಭ್ಯಗಳನ್ನು ಪಡೆಯಲೆಂದು ಫಲಾನುಭವಿಗಳು ಅಜರ್ಿ ಹಾಕಿ ವರ್ಷಗಟ್ಟಲೆ ಕಳೆದರೂ ಸೌಲಭ್ಯವನ್ನು ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಅವರು, ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟಡ ಕಾಮರ್ಿಕರಾಗಿ ದುಡಿಯುತ್ತಿರುವ ಕಾಮರ್ಿಕ ವರ್ಗವಾಗಿದ್ದು ತೀರಾ ಕಡುಬಡವರಾಗಿದ್ದು ಹಿಂದುಳಿದ ವರ್ಗ, ದಲಿತವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
    ಪ್ರತಿಭಟನೆಯಲ್ಲಿ ಎ.ಐ.ಟಿ.ಯು.ಸಿ ರಾಜ್ಯ ಪ್ರಧಾನ ಕಾರ್ಯದಶರ್ಿ ಎನ್.ಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್, ಜಿಲ್ಲಾ ಮುಖಂಡ ನಾಗಣ್ಣ, ತಾಲ್ಲೂಕು ಕಟ್ಟಡ ಕಾಮರ್ಿಕರ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷ ಶ್ರೀನಿವಾಸಮೂತರ್ಿ, ರವಿಕುಮಾರ್, ಸಿ.ಎಸ್.ಯುವರಾಜು ಪ್ರಕಾಶ್, ಶ್ರೀನಿವಾಸ್, ಮಂಜುನಾಥ್, ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನಕ್ಕಾಗಿ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜು.25 : ತಾಲ್ಲೂಕಿನ ಮೆಟ್ರಿಕ್-ಪೂರ್ವ ನವೀಕರಣ ಹಾಗೂ ಹೊಸ ವಿದ್ಯಾಥರ್ಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನಕ್ಕಾಗಿ ಅಜರ್ಿ ಆಹ್ವಾನಿಸಲಾಗಿದೆ.
    5 ರಿಂದ 7 ನೇ ತರಗತಿಯ  ಬಾಲಕ ಬಾಲಕಿ ವಿದ್ಯಾಥರ್ಿಗಳಿಗೆ  250ರೂ ಹಾಗೂ 8 ರಿಂದ 10 ನೇ ತರಗತಿಯ ಬಾಲಕರಿಗೆ 500, ಬಾಲಕಿಯರಿಗೆ 600 ವಿದ್ಯಾಥರ್ಿ ವೇತನ ನೀಡಲಾಗುವುದು.
ಅಜರ್ಿ ಸಲ್ಲಿಸುವ ವಿದ್ಯಾಥರ್ಿಗಳು  ಹಿಂದುಳಿದ ವರ್ಗಗಳಿಗೆ ಸೇರಿದ ಪ್ರವರ್ಗ -1, 2ಎ, 3ಎ, ಮತ್ತು 3ಬಿ ಗಳಿಗೆ ಸೇರಿದವರಾಗಿರಬೇಕು, ಪ್ರಸ್ತುತ 5ನೇ ತರಗತಿಯಿಂದ 10 ನೇ ತರಗತಿಯವರಿಗೆ ವ್ಯಾಸಂಗ ಮಾಡುತ್ತಿರಬೇಕು, ಕುಟುಂಬದ ವಾಷರ್ಿಕ ಆದಾಯ ರೂ  44,500/-ರ ಒಳಗಿರಬೇಕು,  ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ. 75 ರಷ್ಟು ಹಾಜರಾತಿ ಇರಬೇಕು , ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು, ಸಕರ್ಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು, ಸಕರ್ಾರದ/ಸಕರ್ಾರ ಅನುದಾನಿತ ವಿದ್ಯಾಥರ್ಿ ನಿಲಯಗಳಲ್ಲಿ ಪ್ರವೇಶ ಪಡೆಯದವರು ವಿದ್ಯಾಥರ್ಿ ವೇತನಕ್ಕೆ ಅರ್ಹತೆ ಹೊಂದಿರುತ್ತಾರೆ.
ವಿದ್ಯಾಥರ್ಿವೇತನಕ್ಕಾಗಿ ವಿದ್ಯಾಥರ್ಿಗಳು ಜಾತಿ ಪ್ರಮಾಣಪತ್ರ ಒಂದು ಬಾರಿ ನೀಡಿದ್ದಲ್ಲಿ ನಂತರದ ತರಗತಿಗಳಲ್ಲಿ ನೀಡುವ ಅವಶ್ಯಕತೆ ಇರುವುದಿಲ್ಲ, ಒಮ್ಮೆ ಪಡೆದ ಆದಾಯ ಪ್ರಮಾಣ ಪತ್ರ 5 ವರ್ಷಗಳವರೆಗೆ ಊಜರ್ಿತವಾಗಿರುತ್ತದೆ,  ವಿದ್ಯಾಥರ್ಿ ವೇತನವನ್ನು ಬ್ಯಾಂಕ್ ಖಾತೆಗೆ ಮಾತ್ರ ಜಮಾ ಮಾಡುವುದರಿಂದ ವಿದ್ಯಾಥರ್ಿಗಳು ತಮ್ಮ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಬೇಕಾಗಿದ್ದು, ಬ್ಯಾಂಕ್ ಖಾತೆ ಸಂಖ್ಯೆ , ಬ್ಯಾಂಕಿನ ಹೆಸರು, ಬ್ಯಾಂಕಿನ ಎನ್ಇಎಪ್ಟಿ/ಐಎಫ್ಎಸ್ಸಿ ಕೋಡನ್ನು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಲ್ಲಿಸಬೇಕಾದೆ,   ಕಛೇರಿಯಿಂದ ದಿನಾಂಕ 20-8-2014 ರೊಳಗಾಗಿ ಅಜರ್ಿಯನ್ನು ಪಡೆದು, ಭತರ್ಿ ಮಾಡಿದ ನವೀಕರಣ ಹಾಗೂ ಹೊಸ ಅಜರ್ಿಗಳನ್ನು ಮುಖ್ಯೋಪಾದ್ಯಾಯರು 25-9-2014 ರೊಳಗೆ ಈ ಕಛೇರಿಗೆ ಸಲ್ಲಿಸತಕ್ಕದ್ದು. ನಂತರ ಬಂದಂತಹ ಅಜರ್ಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿಯಲ್ಲಿ ವಿವಿಧ ಹುದ್ದೆಗಳಿಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಜು.25 :  ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ತಿಮ್ಮನಹಳ್ಳಿ, ದೊಡ್ಡಬಿದರೆ, ಮುದ್ದೇನಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂಗನವಾಡಿ ಸಹಾಯಕಿ ಹುದ್ದೆಗೆ ಹಾಗೂ  ಶೆಟ್ಟಿಕೆರೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕತರ್ೆ ಹುದ್ದೆಗೆ ಕೇಂದ್ರ ವ್ಯಾಪ್ತಿಯ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಸಿಡಿಪಿಓ ಅನೀಸ್ಖೈಸರ್ ತಿಳಿಸಿದ್ದಾರೆ.
    ತಿಮ್ಮನಹಳ್ಳಿ ಪಂಚಾಯ್ತಿಯ ಬಡಕೇಗುಡ್ಲು ಗ್ರಾಮದಲ್ಲಿನ ಹುದ್ದೆ ಸಾಮಾನ್ಯ ಮೀಸಲಾತಿಗಾಗಿ ಮೀಸಲಿರಿಸಿದ್ದರೆ,  ದೊಡ್ಡಬಿದರೆ ಪಂಚಾಯ್ತಿಯ ಭೈರಾಪುರತಾಂಡ್ಯ ಗ್ರಾಮದ ಹುದ್ದೆಯನ್ನು ಎಸ್.ಸಿ ಮೀಸಲಾತಿಗಾಗಿ, ಮುದ್ದೇನಹಳ್ಳಿ ಪಂಚಾಯ್ತಿಯ ಮಾಳಿಗೆಹಳ್ಳಿ ಗ್ರಾಮದ ಹುದ್ದೆಯನ್ನು  ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
 ಶೆಟ್ಟಿಕೆರೆ ಪಂಚಾಯ್ತಿಯ ಯೋಗಾಮಾಧನವಗರ ಗ್ರಾಮದ ಸಾಮಾನ್ಯ ಮೀಸಲಾತಿಗಾಗಿ ಅಂಗನವಾಡಿ ಕಾರ್ಯಕತರ್ೆ ಹುದ್ದೆಗೆ ಅಜರ್ಿ ಆಹ್ವಾನಿಸಲಾಗಿದ್ದು  ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ 13/08/2014 ರ ಸಂಜೆ5:30 ಗಂಟೆಯೊಳಗೆ ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳ ಕಛೇರಿ, ಚಿಕ್ಕನಾಯಕನಹಳ್ಳಿ  ಇವರಿಗೆ ತಲುಪುವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪಕರ್ಿಸಬಹುದಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 

Wednesday, July 23, 2014

ಎಸ್.ಎಫ್.ಸಿ.ಯೋಜನೆಯ ಎರಡು ಕೋಟಿ ಅನುದಾನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ವಿನಿಯೋಗ.

ಚಿಕ್ಕನಾಯಕನಹಳ್ಳಿ,23: ಪಟ್ಟಣದ ಪುರಸಭೆಯ ವಾಡರ್್ಗಳಲ್ಲಿನ ಅಭಿವೃದ್ದಿಗೆ ವಿಶೇಷ ಹಣಕಾಸು ಯೋಜನೆಯ ಎರಡು ಕೋಟಿ ಏಳು ಲಕ್ಷ ರೂಗಳನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲು ವಿಶೇಷ ಸಭೆಯಲ್ಲಿ ತೀಮರ್ಾನಿಸಲಾಯಿತು.
 ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪಾ.ಟಿ.ರಾಮಯ್ಯರವರ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ 2013-14ನೇ ಸಾಲಿನ 13ನೇ ಹಣಕಾಸು ಯೋಜನೆ ಬಾಕಿ ಇದ್ದ 85.87 ಲಕ್ಷ ಅನುದಾನ ಹಾಗೂ 14-15ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯ ಉಳಿಕೆ 44.66ಲಕ್ಷ ಅನುದಾನ ಹಾಗೂ 14-15ನೇ ಸಾಲಿನ 13ನೇ ಹಣಕಾಸು ಯೋಜನೆಯ 77.07 ಲಕ್ಷ ಅನುದಾನದ ವಿಂಗಡಣೆ ಮಾಡಿ ಯೋಜನೆ ರೂಪಿಸಲಾಯಿತು.
 ನೀರು ಲಭ್ಯತೆಗನುಗಣುವಾಗಿ ಕೊಳವೆಬಾವಿ ಕೊರೆಸುವಂತೆ ಹಾಗೂ ಶುದ್ದ ಕುಡಿಯುವ ನೀರು ಘಟಕಗಳ ಸ್ಥಾಪನೆ, ಘನತ್ಯಾಜ್ಯ ವಸ್ತುವಿನಿಂದ ಎರೆಹುಳು ಗೊಬ್ಬರ ತಯಾರಿಸುವ ಘಟಕಗಳಿಗೆ ಆದ್ಯತೆ, 23ವಾಡರ್್ಗಳಲ್ಲಿ ಅಗತ್ಯವಿರುವ ಕಡೆ ಕಂಟೈನರ್ ಇಡುವುದು, ಘನತ್ಯಾಜ್ಯ ಸಾಗಿಸುವ ವಾಹನ ಖರೀದಿಸುವಂತೆ ಹಾಗೂ ನೀರು ಸಂಗ್ರಹಕ್ಕಾಗಿ ಕೆರೆಯ ಹೂಳು ಎತ್ತಲು ಸದಸ್ಯರೆಲ್ಲಿ ಕೇಳಿಬಂದಾಗ ಮತ್ತೋರ್ವ ಸದಸ್ಯ ಮೊದಲು ಪಟ್ಟಣದ ಕೆರೆಯನ್ನು ಪುರಸಭೆಯ ವಶಕ್ಕೆ ಪಡೆದ ಮೇಲೆ ಚಚರ್ಿಸೋಣ ಎಂದರು.
 ಪಟ್ಟಣದಲ್ಲಿರುವ ಮತಿಘಟ್ಟ ಗೇಟ್ ಬಳಿ ಕಳೆದ 6ತಿಂಗಳಿನಿಂದ ಕುಡಿಯುವ ನೀರನ್ನು ಕೊಳಾಯಿ ಮೂಲಕ ಬಿಟ್ಟಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪವಾಗಿ ಆ ಬಗ್ಗೆಯ ಚಚರ್ೆಯಲ್ಲಿ ಗೊಂದಲವಾಯಿತು. ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುಖ್ಯಾಧಿಕಾರಿ ವೆಂಕಟೇಶ್ ಶೆಟ್ಟಿ ಉತ್ತರಿಸಿದರು.
 ಪಟ್ಟಣದ ಹೃದಯ ಭಾಗದಲ್ಲಿ ನಡೆಯುವ ಮಾರುಕಟ್ಟೆಗೆ ಮಹಿಳೆಯರೇ ಹೆಚ್ಚಾಗಿ ವ್ಯಾಪಾರ ಮಾಡಲು ಹಾಗೂ ಖರೀದಿಸಲು ಬರುತ್ತಾರೆ ಅವರಿಗೂ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿಮರ್ಾಣಕ್ಕೆ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು ಎಂದು ಸದಸ್ಯ ಟಿಂಬರ್ ಮಲ್ಲೇಶ್ ಕೋರಿಕೆಗೆ ಪ್ರತಿರೋಧವಾಗಿ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು, ಅಲ್ಲಿಗೆ ಶೌಚಾಲಯ ಬೇಕಿಲ್ಲ, ಬಳಸುವುದಿಲ್ಲ ನನ್ನ ವಾಡರ್್ನಲ್ಲಿ ನಿಮರ್ಿಸಲು ನಾನು ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಮಾತನಾಡಿದರು.
 ಇದಕ್ಕೆ ಸದಸ್ಯರು ಕೂಡಲೇ ಪ್ರತಿಕ್ರಿಯಿಸಿ ಪುರಸಭೆ ಸಾರ್ವಜನಿಕರ ಸ್ವತ್ತು ಅಗತ್ಯ ಅಂಶಗಳನ್ನು ಮನಗಂಡೇ ಪೂರೈಸಬೇಕಾಗಿದ್ದು ಪುರಸಭೆಯ ಜವಬ್ದಾರಿ ನೀವು ಸದಸ್ಯರಾಗಿ ಈ ರೀತಿ ಮಾತನಾಡಬಾರದು ಶೌಚಾಲಯ ನಿಮರ್ಿಸಿವುದು ಸಾರ್ವಜನಿಕರ ಉಪಯೋಗಕ್ಕೆ ಎಂದು ಸದಸ್ಯ ಟಿಂಬರ್ ಮಲ್ಲೇಶ್ ಬೆಂಬಲಕ್ಕೆ ನಿಂತರು. ಅಂತಿಮವಾಗಿ ಶೌಚಾಲಯ ನಿಮರ್ಿಸಲು ಸಭೆ ತೀಮರ್ಾನಿಸಿತು.
 ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಪ್ರಕಾಶ್ ಹೆಚ್.ಬಿ, ಸಿ.ಎಸ್.ರಮೇಶ್, ಮಹಮದ್ಖಲಂದರ್, ಅಶೋಕ್, ಸಿ.ಟಿ.ದಯಾನಂದ್, ರಾಜಶೇಖ
ರ್, ರೇಣುಕಾಗುರುಮೂತರ್ಿ, ಧರಣಿಲಕ್ಕಪ್ಪ, ರೇಣುಕಾಸಣ್ಣಮುದ್ದಯ್ಯ, ರೂಪಾ, ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.
 
ಲೋಕಾಯುಕ್ತರ ಭೇಟಿ

ಚಿಕ್ಕನಾಯಕನಹಳ್ಳಿ,ಜೂ.23: ಜಿಲ್ಲಾ ಲೋಕಾಯುಕ್ತ ಕಛೇರಿಯಿಂದ ಬರುವ ದೂರವಾಣಿ ಕರೆಗಳಿಗೆ ಅಸಡ್ಡೆ ತೋರುವ ಇಲಾಖೆಗಳ ಬಗ್ಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಗೌತಮ್ ಬೇಸರ ವ್ಯಕ್ತಪಡಿಸಿದರು.
 ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಲೋಕಾಯುಕ್ತ ಕಛೇರಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಹಲವು ಮಾಹಿತಿಗಳನ್ನು ಕೇಳಲು ನಾವು ಕಛೇರಿಗಳಿಗೆ ಪೋನ್ ಮಾಡಿದರೆ, ಕಛೇರಿಯ ಅಟೆಂಡರ್ ಅಥವಾ ವಿಷಯಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಪೋನ್ ಎತ್ತಿಕೊಂಡು ಜಾರಿಕೆಯ ಉತ್ತರ ನೀಡುವ ಪರಿಪಾಠ ಹಲವು ಕಛೇರಿಗಳಲ್ಲಿ ಹೆಚ್ಚಾಗಿದೆ. ಇದು ತಪ್ಪಬೇಕು ಎಂದರಲ್ಲದೆ, ಸಾರ್ವಜನಿಕರ ಕರೆಗಳಿಗೂ ಸ್ಪಂದನೆ ನೀಡಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ತಾಕೀತು ಮಾಡಿದರು.
 ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ನೀಡುವ ಅಜರ್ಿಗಳನ್ನು ನಾವು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವಿಲೇ ಮಾಡಲಾಗುವುದು, ಈ ಬಗ್ಗೆ ತಾವು ತೆಗೆದುಕೊಳ್ಳುವ ಕ್ರಮದ ಬಗ್ಗೆ ನಮ್ಮ ಕಛೇರಿಗೆ ಹಾಗೂ ಅಜರ್ಿದಾರರಿಗೆ ಇಬ್ಬರಿಗೂ ಮಾಹಿತಿ ನೀಡುವುದು ಕಡ್ಡಾಯ, ನೀವು ನಮಗೊಬ್ಬರಿಗೆ ಮಾಹಿತಿ ನೀಡಿದರೆ ಅಜರ್ಿದಾರರು ರಾಜ್ಯ ಲೋಕಾಯುಕ್ತ ಕಛೇರಿಗೆ ಮತ್ತೆ ಅಜರ್ಿ ಸಲ್ಲಿಸುತ್ತಾರೆ ಇದರಿಂದ ನಮಗೆ ಹಾಗೂ ಇಲಾಖಾ ಅಧಿಕಾರಿಗಳಾದ ನಿಮಗೆ ಇಬ್ಬರಿಗೂ ಗೊಂದಲ ಉಂಟಾಗುತ್ತದೆ ಎಂದರು.
 ಗಣಿ ಪ್ರದೇಶದಲ್ಲಿನ ಹಳ್ಳಿಗಳ ಕಚ್ಚಾ ರಸ್ತೆಯೂ ಗುಂಡಿ ಗೊಟರುಗಳಿಂದ ಕೂಡಿದ್ದು ರಸ್ತೆಗಳು ಸಂಪೂರ್ಣ ಹಾಳಾಗಿದೆ ಹಾಗೂ ಇಂತಹ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಆ ಭಾಗದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗಿದ್ದು ಆರೋಗ್ಯದ ಮೇಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇಲ್ಲಿನ ಧೂಳಿನಿಂದ ಬೆಳೆಗಳೂ ಹಾಳಾಗುತ್ತಿವೆ ಎಂದು ನಂಜುಂಡಪ್ಪ ಲೋಕಾಯುಕ್ತರ ಬಳಿ ದೂರಿದರು.
 ಜನ ಸಂಪರ್ಕ ಸಭೆ ಮಧ್ಯಾಹ್ನ 3ರಿಂದ 5ರವರಗೆ ನಡೆಯಿತು ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 12 ಅಜರ್ಿಗಳನ್ನು ಸ್ವೀಕರಿಸಿದ್ದು, ಇವುಗಳಲ್ಲಿ 7 ಅಜರ್ಿಗಳಿಗೆ ಹದಿನೈದು ದಿನಗಳೊಳಗೆ ಉತ್ತರಿಸುವಂತೆ, 3 ಅಜರ್ಿಗಳನ್ನು ಉಪ ಲೋಕಾಯುಕ್ತರಿಗೆ ಹಾಗೂ ಎರಡು ಅಜರ್ಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು.
  ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣನಾಯ್ಕ್, ಸಿ.ಡಿ.ಪಿ.ಓ ಅನೀಸ್ಖೈಸರ್, ಸಬ್ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 
 

ಅನಾಥ ನವಜಾತ ಹೆಣ್ಣು ಶಿಶು ಪತ್ತೆ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ

ಚಿಕ್ಕನಾಯಕನಹಳ್ಳಿ,ಜು.23: ತಾಲೂಕಿನ ಹೊಯ್ಸಳಕಟ್ಟೆ ಸಕರ್ಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಶಿಶುವನ್ನು ಸಿ.ಡಿ.ಪಿ.ಓ ವಶಕ್ಕೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
 ವಿಷಯ ತಿಳಿದ ಅಂಗನವಾಡಿ ಸೂಪರ್ವೈಸರ್, 108 ಅಂಬ್ಯೂಲೆನ್ಸ್ ನಲ್ಲಿ ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆ ತಂದಿದ್ದು, ಮಗುವನ್ನು ತಪಾಸಣೆ ಮಾಡಿದ ಮಕ್ಕಳ ತಜ್ಞೆ ಡಾ.ಶಶಿರೇಖಾ, ಮಗು ಅವಧಿ ಪೂರ್ವ ಜನನವಾಗಿರುವುದರಿಂದ ಮಗುವಿನ ತೂಕ ಒಂದುವರೆ ಕೆ.ಜಿ.ಯಷ್ಟು ಇದೆ ಎಂದರು.  ಇಲ್ಲಿ   ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಎ.ಸಿ.ಡಿ.ಪಿ.ಓ. ಪರಮೇಶ್ವರಪ್ಪ ಕೊಂಡ್ಯೊಯ್ದಿದ್ದಾರೆ. ಮಗುವಿನ ಆರೋಗ್ಯ ಸುಸ್ಥಿರವಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ ನೀಡಲಾಗಿದೆ.
 

Monday, July 21, 2014


     ವಿಕಲ ಚೇತನ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ

ಚಿಕ್ಕನಾಯಕನಹಳ್ಳಿ,ಜು.21 : ವಿಕಲ ಚೇತನ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರಿಗೆ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಪ್ರೇರಿಪಿಸುವುದು ಪೋಷಕರ ಹಾಗೂ ಶಿಕ್ಷಕರ ಕರ್ತವ್ಯ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ಲತಾಕೇಶವಮೂತರ್ಿ ಹೇಳಿದರು.
                             
 ಪಟ್ಟಣದ ಬಿ.ಆರ್.ಸಿ. ಕಛೇರಿಯಲ್ಲಿ 2014-15ನೇ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತ ಸಂಬಂಧದಲ್ಲೇ ಮದುವೆಗಳನ್ನು ಪುನರಾವತರ್ಿತವಾಗಿ ಆಗುವುದರಿಂದ ಅಂಗ ವೈಕಲ್ಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಆದ್ದರಿಂದ ಪೋಷಕರು ದುಡುಕದೆ ಸಕರ್ಾರದ ನಿಯಮದಂತೆ ಮದುವೆ ಮಾಡಿದರೆ ಅವರ ಮುಂದಿನ ಜೀವನ ಉತ್ತಮವಾಗಿರುತ್ತದೆ ಎಂದರು.
 ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ತಾಲ್ಲೂಕಿನಲ್ಲಿ 253 ಶಾಲಾ ಮಕ್ಕಳು ನಾನಾ ಕಾರಣಗಳಿಂದ ಶಾಲೆ ಬಿಟ್ಟಿದ್ದು, ಈ ಪೈಕಿ 252 ಶಾಲೆ ಬಿಟ್ಟ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗಿದೆ ಎಂದರಲ್ಲದೆ,  ಕೆಲವು ಕುರಿಗಾಯಿ ಹಾಗೂ ಕೂಲಿ ಕಾಮರ್ಿಕರ ಮಕ್ಕಳು ಪೋಷಕರ ಜೊತೆಯಲ್ಲಿ ಗುಳೇ ಹೋಗಿದ್ದು ಅವರ ಮಕ್ಕಳನ್ನು ಆಯಾ ಭಾಗದ ಶಿಕ್ಷಕರ  ಗಮನಕ್ಕೆ ತರುವ ಮೂಲಕ ಶಾಲೆಗೆ ಕರೆತರಲಾಗಿದೆ. ವಿಕಲಚೇತನ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಬರುವಂತೆ ನೋಡಿಕೊಳ್ಳುವುದು ಸಮಾಜದ ಜನಪ್ರತಿನಿಧಿಗಳು ಹಾಗೂ ಪೋಷಕರ ಕರ್ತವ್ಯ ಎಂದ ಅವರು,  ಮಕ್ಕಳಲ್ಲಿರುವ ದೌರ್ಬಲ್ಯವನ್ನು ಶಿಕ್ಷಕರು ಗುರುತಿಸಿ ಅಂತಹ ಮಕ್ಕಳಿಗೆ ಅಗತ್ಯವಾದ ಚಿಕಿತ್ಸೆ ಹಾಗೂ ಪರಿಕರಗಳನ್ನು ನೀಡಲಾಗುವುದು ಎಂದರು.
 ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್ ಮಾತನಾಡಿದ ಅವರು, ಗಭರ್ಿಣಿ ಸ್ತ್ರೀಯರಲ್ಲಿ ಅಪೌಷ್ಠಿಕ ಆಹಾರ ಸೇವನೆ, ಗಂಡು ಹೆಣ್ಣು ವಯಸ್ಸಿಗೆ ಬರುವ ಮೊದಲೇ ಮದುವೆ ಮಾಡುವುದು, ಸಂಬಂಧಗಳಲ್ಲಿ ಮದುವೆಯಾಗುವುದರಿಂದಲೂ ಮಕ್ಕಳ ವಿಕಲಚೇತನರಾಗಿ ಹುಟ್ಟುವರು ಎಂದರು.
 ಶಿಬಿರದಲ್ಲಿ 30ಬುದ್ದಿಮಾಂದ್ಯ ಮಕ್ಕಳಿಗೆ ಹಾಗೂ 37 ದೈಹಿಕ ನ್ಯೂನ್ಯತೆ ಇರುವ ಮಕ್ಕಳು, 18ಶ್ರವಣ ನ್ಯೂನ್ಯತೆಯ ಹಾಗೂ 10 ದೃಷ್ಠಿದೋಷ ಸೇರಿ ಒಟ್ಟು 101 ವಿಕಲಚೇತನ ಮಕ್ಕಳಿಗೆ ಚಿಕಿತ್ಸೆ ನೀಡಲಾಯಿತು. ನಂತರ ನ್ಯೂನ್ಯತೆಗೆ ತಕ್ಕಂತೆ ಸರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
 ಹುಬ್ಬಳ್ಳಿಯ ಮನೋವಿಕಾಸ ಬುದ್ದಿಮಾಂಧ್ಯ ಕೇಂದ್ರದ ವೈದ್ಯರಾದ ಡಾ.ಸಾವಿತ್ರಿ, ಡಾ.ಅನುಷ, ಡಾ.ವಿರೂಪಾಕ್ಷ, ಡಾ.ಬನ್ಸಿ, ಡಾ.ಕುಮಾರ್ ಹಾಗೂ ಡಾ.ಕರಿಯಪ್ಪ ಮತ್ತಿತರರು ಶಿಬಿರದಲ್ಲಿ ಭಾಗವಹಿಸಿದ್ದರು.
 ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ ಉದ್ಘಾಟಿಸಿದರು. ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸಂಯೋಜಕರಾದ ನಾಗರಾಜು, ರಾಜಶೇಖರ್, ಸಿ.ಆರ್.ಪಿ.ದುರ್ಗಯ್ಯ,ರಾಜಣ್ಣ, ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.
ಸ್ವಾತಂತ್ರ್ಯ ದಿನಾಚಾರಣೆ ವಿಜೃಂಭಣೆಯಿಂದ ಆಚರಿಸಲು ತೀಮರ್ಾನ

ಚಿಕ್ಕನಾಯಕನಹಳ್ಳಿ : ಆಗಸ್ಟ್ 15ರಂದು ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚಾರಣೆಯನ್ನು ವಿಜೃಂಭಣೆಯಿಂದ ನಡೆಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ತೀಮರ್ಾನಿಸಲಾಯಿತು.
 ಸ್ವಾತಂತ್ರ ದಿನಾಚಾರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಾದ ಚಿ.ನಾ.ಹಳ್ಳಿ ದೊಡ್ಡಟ್ಟಿ ಹನುಮಂತಯ್ಯ, ಗಾಣದಾಳುವಿನ ಸೂಲಗಿತ್ತಿ ನೈರೂಭಿ, ಚಿ.ನಾ.ಹಳ್ಳಿ ಮೂಲದವರಾಗಿದ್ದು, ಲಿವರ್ ಕಸಿ ವೈದ್ಯರಾದ ಡಾ.ಸುಶೃತ್ರವರನ್ನು ಸನ್ಮಾನಿಸಲು ಸಭೆ ತೀಮರ್ಾನಿಸಿತು.
 ದಿನಾಚಾರಣೆಯ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ ಧ್ವಜಾರೋಹಣ ಸಂದೇಶ ತಿಳಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ವಿವಿಧ ಗಣ್ಯರು ಉಪಸ್ಥಿತರಿರುವರು.
 ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ, ತಹಶೀಲ್ದಾರ್ ಕಾಮಾಕ್ಷಮ್ಮ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಮಹಮದ್ ಖಲಂದರ್ಸಾಬ್, ಹೆಚ್.ಬಿ.ಪ್ರಕಾಶ್, ಸಿ.ಪಿ.ಮಹೇಶ್, ತಾ.ಪಂ.ಸದಸ್ಯೆ ಚೇತನಗಂಗಾಧರ್, ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. 
 ರಾಷ್ಟ್ರೀಯ ಹಬ್ಬಗಳ ಬಗ್ಗೆ ನಡೆಯುವ ಸಭೆಗೆ ಗೈರುಹಾಜರಾದ ಮೀನುಗಾರಿಕೆ ಇಲಾಖೆ, ಎ.ಪಿ.ಎಂ.ಸಿ ಹಾಗೂ ಜಲಾನಯನ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ತಹಶೀಲ್ದಾರ್ ಕಾಮಾಕ್ಷಮ್ಮರವರಿಗೆ ಸೂಚಿಸಿದರು.

ಚಿ.ನಾ.ಹಳ್ಳಿಗೆ ಲೋಕಾಯುಕ್ತರ ಭೇಟಿ
ಚಿಕ್ಕನಾಯಕನಹಳ್ಳಿ,ಜು.21 : ತುಮಕೂರು ಜಿಲ್ಲಾ ಲೋಕಾಯುಕ್ತ ಪೋಲಿಸ್ ನಿರೀಕ್ಷಕರು ಜುಲೈ 23ರಂದು ಬುಧವಾರ ಮಧ್ಯಾಹ್ನ 3ರಿಂದ 5ರವರೆಗೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರಗೆಗಳ ಬಗ್ಗೆ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಆದ್ದರಿಂದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 

Saturday, July 19, 2014

ಗೊಂದಲ ಗದ್ದಲಗಳ ನಡುವೆ ಸಭೆ


ಚಿಕ್ಕನಾಯಕನಹಳ್ಳಿ,ಜೂ.19 : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ವರ್ಗದವರ ಹಿತರಕ್ಷಣಾ ಸಮಿತಿ ಸಭೆ ಆರಂಭದಲ್ಲಿ ಅನುಪಾಲನಾ ವರದಿಯ ಸಂದರ್ಭದಲ್ಲಿ ಇದ್ದ ಸಭಾ ಶಿಸ್ತು ಮಧ್ಯೆದಲ್ಲೇ ಗೊಂದಲ ಗದ್ದಲಗಳ ನಡುವೆ ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದೆ ಅಂತ್ಯ ಕಂಡಿತು.
 ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಆರಂಭದಲ್ಲಿ ಶಿಸ್ತು ಬದ್ದವಾಗಿ ನಡೆಯುತ್ತಿತ್ತು ಆದರೆ ಕೆಲವು ವಿಷಯಗಳು ಚಚರ್ೆಯ ನಂತರದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ಮನವರಿಕೆಯಾಗದಷ್ಟು ಗೊಂದಲ ಗೊಂಡಿತ್ತು.
ಸಭೆಯ ಆರಂಭದಲ್ಲಿ ನಡೆದ ಪ್ರಮುಖವಾದ ಚಚರ್ೆ ಎಂದರೆ,  ತಾಲ್ಲೂಕಿನಲ್ಲಿ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಲ್ಲಿ ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಗುತ್ತಿಗೆದಾರರು, ಕೂಲಿ ಕಾಮರ್ಿಕರ ಜಾಬ್ಕಾಡರ್್ಗಳನ್ನು ಪಡೆದು ಹಣ ನೀಡದೆ ವಂಚಿಸಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಲಿಂಗದೇವರು ಹಾಗೂ ಕಂಟಲಗೆರೆ ಸತೀಶ್ ಆರೋಪಿಸಿದರು.
 ಮಾತನಾಡಿ, ಎಸ್.ಸಿ, ಎಸ್.ಟಿ ಜನಾಂಗಕ್ಕೆ ನೀಡುವ ಶೇ.22.75ರ ಅನುದಾನದ ಸಕರ್ಾರಿ ಆದೇಶವನ್ನು ಅಧಿಕಾರಿಗಳು ಸರಿಯಾಗಿ ಪಾಲಿಸದೇ ಕರ್ತವ್ಯ ಲೋಪ ಎಸಗಿದ್ದಾರೆ, ವಿವಿಧ ಇಲಾಖೆಗಳ್ಲಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಸಿಗುವ ಸವಲತ್ತುಗಳ ಬಗ್ಗೆ ಕಛೇರಿಗಳ ನಾಮ ಫಲಕವನ್ನು ಹಾಕುವಂತೆ ಒತ್ತಾಯಿಸಿದರು.
 ಪಟ್ಟಣದ ಎಸ್.ಸಿ ಕಾಲೋನಿಯ ಚರಂಡಿ ಕಾಮಗಾರಿ ಮಾಡದೇ 1.60ಲಕ್ಷ ರೂಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ, ಇದರ ಬಗ್ಗೆ ತನಿಖೆ ನಡೆಸುವಂತೆ ಮಲ್ಲಿಕಾಜರ್ುನ ಒತ್ತಾಯಿಸಿದರು.
 ಸಕರ್ಾರ ಬಿಡುಗಡೆ ಮಾಡಿರುವ ಹಣದಲ್ಲಿ ಎಸ್.ಸಿ, ಎಸ್.ಟಿ ಜನಾಂಗಕ್ಕೆ ಮೀಸಲಿರಸಬೇಕಾದ ಹಣದಲ್ಲಿ ತಟ್ಟೆ, ಲೋಟ, ತಮಟೆಯನ್ನು ನೀಡುವ ಬದಲು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಿ ಎಂದು ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
 ತಾಲ್ಲೂಕಿನಲ್ಲಿ ವಿತರಿಸಿರುವ ಸಾವಿರಾರು ಪಡಿತರ ಚೀಟಿಯಲ್ಲಿ ಹಣ ತೆಗೆದುಕೊಂಡು ನೀಡಲಾಗಿದೆ, ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಿ ಮಧ್ಯವತರ್ಿಗಳ ಮುಖಾಂತರ ಪಡಿತರ ಚೀಟಿ ನೀಡಿದಿರಿ ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿದೆ ಎಂದರು. 
 ತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿರುವ ನಾಡ ಕಛೇರಿಗಳಲ್ಲಿ ಅಳವಡಿಸಿರುವ ಪಹಣಿ ಕೇಂದ್ರಗಳಲ್ಲಿ ಸರಿಯಾಗಿ ವಿದ್ಯುತ್ ಇಲ್ಲದೆ ರೈತರು ಸಟರ್ಿಫಿಕೇಟ್ಗಳಿಗಾಗಿ ಪರದಾಡುತ್ತಿದ್ದಾರೆ, ಹಳ್ಳಿಗಳಲ್ಲಿ ಅಂತರ್ಜಲ ಇಲ್ಲದೆ ರೈತರಿಗೆ ಸಮಸ್ಯೆಯಾಗಿದೆ ಆದ್ದರಿಂದ ಬದಲಿ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ಗೆ ಸಭೆಯಲ್ಲಿ ಡಿಎಸ್ಎಸ್ ಮುಖಂಡರು ಒತ್ತಾಯಿಸಿದರು.
 ಈ ಪ್ರಶ್ನೆಗೆ ಉತ್ತರಿಸಿದ ತಹಶೀಲ್ದಾರ್ ಕಾಮಾಕ್ಷಮ್ಮ, ನಾಡಕಛೇರಿಯಲ್ಲಿ ವಿದ್ಯುತ್ ಸಮಸ್ಯೆಯಾದಾಗ ಪಹಣಿ ತೆಗೆಯಲು ಸೋಲಾರ್ ಅಳವಡಿಸಲಾಗುವುದು, ಆಕಸ್ಮಿಕ ಕಂಪ್ಯೂಟರ್ ಕೆಟ್ಟು ಹೋದಾರೆ ತಾಲ್ಲೂಕು ಕಛೇರಿಯಲ್ಲಿ ಪಹಣಿ ನೀಡುವ ವ್ಯವಸ್ಥೆ ಮಾಡಲಾಗುವುದು, ನಾಡ ಕಛೇರಿಯ ನೋಟಿಸ್ ಬೋರ್ಡ್ನಲ್ಲಿ ಹಾಕುವಂತೆ ಕಂದಾಯ ನಿರೀಕ್ಷಕರಿಗೆ ತಿಳಿಸಿರುವುದಾಗಿ ಹೇಳಿದರು.
 ತಾಲ್ಲೂಕಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸುವ ಸೀಮೆಎಣ್ಣೆ ಫಲಾನುಭವಿಗಳಿಗೆ ವಿತರಣೆಯಲ್ಲಿ ಲೋಪದೋಶವಾಗಿದೆ, ತಾಲ್ಲೂಕಿನಲ್ಲಿ ಸಂಚರಿಸುವ ಕೆಲವೊಂದು ಬಸ್ನವರು ಸೀಮೆಎಣ್ಣೆಯಲ್ಲಿ ವಾಹನ ಓಡಿಸುತ್ತಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸಿದರು. ಬರಶಿಡ್ಲಹಳ್ಳಿ ವಿ.ಎಸ್.ಎಸ್.ನಲ್ಲಿ ಆಹಾರ ವಿತರಿಸುವಾಗ ಆಹಾರ ಪದಾರ್ಥಗಳನ್ನು ತೂಕ ಹಾಕದೇ ಡಬ್ಬದಲ್ಲಿ ಹಾಕುತ್ತಾರೆ ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ ಎಂದರು.
 ತಾಲ್ಲೂಕಿನ ದಲಿತ ಕಾಲೋನಿಗಳಲ್ಲಿ ಮಧ್ಯ ಮಾರಾಟ ಅವ್ಯಾಹಿತವಾಗಿ ನಡೆಯುತ್ತಿದೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿತು.
 ಮಧ್ಯದ ಅಂಗಡಿಗಳಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಹುಳುಗಳಿರುವ ನೀರನ್ನು ನೀಡುತ್ತಾರೆ ಹಾಗೂ ಮಧ್ಯದ ಅಂಗಡಿಯಲ್ಲಿ ದರಪಟ್ಟಿ ಪ್ರಕಟಿಸದೆ ಇರುವುದರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
 ಪರಿಶಿಷ್ಟ ಜಾತಿ ಪಂಗಡದ ಜನಾಂಗಕ್ಕೆ ನೀಡುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಅಧಿಕಾರಿ ಪ್ರತಿ ಬುಧವಾರ ಬರಬೇಕು ಆದರೆ ಸರಿಯಾಗಿ ಬಾರದೇ ಫಲಾನುಭವಿಗಳು ಕಾದೂ ಕಾದೂ ವಾಪಾಸ್ ತಮ್ಮ ಊರಿಗೆ ಹಿಂತಿರುಗುತ್ತಾರೆ ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗಿದೆ ಆದ್ದರಿಂದ ಅಧಿಕಾರಿ ಪ್ರತಿವಾರ ಸರಿಯಾಗಿ ಬರುವಂತೆ ಶಾಸಕರು ಸೂಚಿಸುವಂತೆ ಒತ್ತಾಯಿಸಿದರು.
 ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ್, ತಾ.ಪಂ.ಸದಸ್ಯ ಚೇತನಗಂಗಾಧರ್, ಪುರಸಭಾ ಅಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ಸದಸ್ಯ ಅಶೋಕ್, ಡಿಎಸ್ಎಸ್ ಮುಖಂಡರಾದ ಬಿಳಿಗೆಹಳ್ಳಿ ರಾಜು, ಗೋವಿಂದಪ್ಪ, ಹೊಸಕೆರೆ ಶಿವು, ವಸಂತ್, ತೀರ್ಥಪುರ ಕುಮಾರ್, ಕೆಂಪರಾಜು ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಸಿಡಿಪಿಓ ಅನೀಸ್ಖೈಸರ್, ಪಿಡಬ್ಯ್ಯೂಡಿ ಇಂಜನಿಯರ್ ಆನಂದಪ್ಪ ಉಪಸ್ಥಿತರಿದ್ದರು.

ಹೇಮಾವತಿ ನೀರಿಗಾಗಿ ಅಪರ ಜಿಲ್ಲಾಧಿಕಾರಿಗೆ ಮನವಿ
                                    
ಚಿಕ್ಕನಾಯಕನಹಳ್ಳಿ,ಜೂ.19 : ತಾಲ್ಲೂಕಿನ 26 ಕೆರೆಗಳಿಗೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಹಾಗೂ ಚಿ.ನಾ.ಹಳ್ಳಿ ತಿಪಟೂರು ರಸ್ತೆಯ ದುರಸ್ತಿಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿ ಬಿಜೆಪಿ ಘಟಕ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಅನುರಾಧರವರಿಗೆ ಮನವಿ ಅಪರ್ಿಸಿದರು.
 ಹೇಮಾವತಿ ಕುಡಿಯುವ ನೀರಿನ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಚಿ.ನಾ.ಹಳ್ಳಿ ತಾಲ್ಲೂಕಿನ 26 ಕೆರೆಗಳ ಆಯ್ದ ಜಲಸಂಗ್ರಹಗಾರಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಮಂದಗತಿಯಲ್ಲಿ ನಡೆಯುತ್ತಿದ್ದು ಇದುವರೆವಿಗೂ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿಲ್ಲ ಹಾಗೂ ಜೆ.ಎಂ.ಸಿ.ಯು ಅತ್ಯಂತ ಶೀಘ್ರವಾಗಿ ಮಾಡುವ ಅವಶ್ಯಕತೆ ಇದೆ ಎಂದಿದ್ದಾರೆ.
ಭೂ ಸ್ವಾಧೀನಕ್ಕೆ ಒಳಪಡುವ ರೈತರು ಈಗಾಗಲೇ ಸ್ವಯಂ ಪ್ರೇರಿತರಾಗಿ ಕೆಲವು ರೈತರು ತಮ್ಮ ಜಮೀನನ್ನು ಬಿಟ್ಟುಕೊಟ್ಟಿದ್ದರೂ ಸಕರ್ಾರ ರೈತರಿಗೆ ಪರಿಹಾರ ನೀಡಿರುವುದಿಲ್ಲ, 2012ರಲ್ಲೇ ಸಕರ್ಾರ 35 ಕೋಟಿ ನಾಲಾ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿದ್ದರೂ, ಈ ವೇಳೆಗಾಗಲೇ ಶೇ.50ರಷ್ಟು ಕಾಮಗಾರಿ ಪೂರ್ಣಗೊಳ್ಳಬೇಕಿತ್ತು, ಗುತ್ತಿಗೆದಾರರ ಅವಧಿ ಮುಗಿಯುತ್ತಾ ಬಂದಿದ್ದರೂ ಇದುವರೆವಿಗೂ ಭೂ ಸ್ವಾಧೀನ ಪ್ರಕ್ರಿಯೆಯು ಕುಂಟುತ್ತಾ ಸಾಗುತ್ತಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಅಲ್ಲದೆ ಹೇಮಾವತಿ ನಾಲಾ ಇಂಜನಿಯರ್ ಮತ್ತು ಗುತ್ತಿಗೆದಾರರ ಭೂ ಸ್ವಾಧೀನ ಅಧಿಕಾರಿಗಳ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ, ಚಿ.ನಾ.ಹಳಿ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಮಳೆಯಾಗಿರುವುದರಿಂದ ಸಾವಿರಾರು ಅಡಿ ಕೊಳವೆ ಬಾವಿಗಳನ್ನು ಕೊರೆದರು ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದ್ದು, ಆದ್ದರಿಂದ ಸಂಬಂಧಪಟ್ಟ ಇಲಾಖೆ ಕೂಡಲೇ ಭೂ ಸ್ವಾಧೀನ ಪಡಿಸಿಕೊಂಡು ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಒತ್ತಾಯಿಸಿರುವ ಅವರು ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆಯ, ತಿಪಟೂರು ರಸ್ತೆಯು ತೀವ್ರ ಹದಗೆಟ್ಟಿದ್ದು ಈ ಭಾಗದ ಸಾರ್ವಜನಿಕರಿಗೆ ಹಾಗೂ ವಿದ್ಯಾಥರ್ಿಗಳಿಗೆ ಪ್ರಯಾಣಿಸಲು ತೊಂದರೆಯಾಗಿದೆ ಆದ್ದರಿಂದ ರಸ್ತೆಯನ್ನು ಶಿಘ್ರವಾಗಿ ಪ್ರಾರಂಭಿಸುವಂತೆಯೂ ಹಾಗೂ ದುರಸ್ತಿ ಮಾಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾಲ್ಲೂ

Friday, July 18, 2014


ಹೇಮಾವತಿ ಕುಡಿಯುವ ನೀರಿನ ಯೋಜನೆ:

ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಅಂತಿಮಗೊಳ್ಳದಿದ್ದರೆ  ಹೋರಾಟದ ಹಾದಿ ಅನಿವಾರ್ಯ: ಮಾಜಿ ಶಾಸಕ ಕೆ.ಎಸ್.ಕೆ.
ಚಿಕ್ಕನಾಯಕನಹಳ್ಳಿ,ಜು.17 : ತಾಲ್ಲೂಕಿನ 26 ಕೆರೆಗಳಿಗೆ  ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂ ಸಕರ್ಾರದ ನಿರ್ಲಕ್ಷ, ಅಧಿಕಾರಿಗಳ ವಿಳಂಬ ನೀತಿ ಹಾಗೂ  ಗುತ್ತಿಗೆದಾರರ ಬೇಜವಬ್ದಾರಿಯಿಂದ ನೆನೆಗುದಿಗೆ ಬಿದ್ದಿದೆ ಇನ್ನೆರಡು ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಗೊಳ್ಳದಿದ್ದರೆ ಬಿ.ಜೆ.ಪಿ. ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು. 
ತಾಲ್ಲೂಕಿಗೆ 28 ಗ್ರಾಮಗಳ ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಗೆ ಸಂಬಂಧಪಟ್ಟಂತೆ ತಾಲ್ಲೂಕು ಬಿಜೆಪಿ ಘಟಕದೊಂದಿಗೆ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದ ತಂಡ ಕುಂದೂರು, ಕಡಬನಹಳ್ಳಿ, ಬಿಳಿಗೆರೆ, ಗ್ಯಾರೆಹಳ್ಳಿಪಾಳ್ಯ ಸೇರಿದಂತೆ ತಾಲ್ಲೂಕಿನ ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ನಂತರ  ಪಟ್ಟಣದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಬಂಧ ಇದೇ 19ರಂದು ತುಮಕೂರಿಗೆ ಬಿ.ಜೆ.ಪಿ. ನಿಯೋಗ ತೆರಳಲಿದ್ದು, ಅಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅಂತಿಮ ಹಂತಕ್ಕೆ ತರುವಂತೆ ಒತ್ತಾಯಿಸಲಾಗುವುದು ಎಂದರು.
ತಾಲ್ಲೂಕಿನ ಅಂತರ್ಜಲ ಮಟ್ಟ ಕುಸಿದಿದ್ದು, ಮಳೆಯ ಪ್ರಮಾಣವು ಕುಂಠಿತಗೊಂಡಿದೆ,  ಇದರಿಂದ ತಾಲ್ಲೂಕಿನ ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ, ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಯುತ್ತದೆ ಎಂದು ಕೆಲವು ರೈತರು ತಮ್ಮ ಜಮೀನುಗಳನ್ನು ಕೊಟ್ಟು ಕಾಮಗಾರಿ ಆರಂಭಿಸಲು ಸಹಕರಿಸಿದರೂ ಸಕರ್ಾರ ಇದುವರೆವಿಗೂ ಯಾವುದೇ ಪರಿಹಾರ ನೀಡದೆ ರೈತರ ಜೀವನಕ್ಕೆ ತೊಡಕುಂಟು ಮಾಡುತ್ತಿದೆ, ಜಮೀನು ಕೊಟ್ಟು ಸಹಕರಿಸಿದ ರೈತರಿಗೆ ಇದುವರೆವಿಗೂ ಪರಿಹಾರ ನೀಡದೆ ಇರುವುದರಿಂದ ಉಳಿದ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಲು ಜಮೀನು ನೀಡಬೇಕಾದ ರೈತರು ಜಮೀನು ಬಿಟ್ಟುಕೊಡಲು ಯೋಚನೆ ಮಾಡುತ್ತಿದ್ದಾರೆ ಇದರಿಂದಲೂ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಆರು ತಿಂಗಳ ಹಿಂದೆಯೇ ಸಂಬಂಧ ಪಟ್ಟವರಿಗೆ ತಿಳಿಸುತ್ತಿದ್ದೆವು ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಳಂಬಧೋರಣೆ ತೋರಿದ್ದಾರೆ ಎಂದರು,  ಕಾಮಗಾರಿ ಆರಂಭಗೊಂಡು ಒಂದುವರೆ ವರ್ಷ ಕಳೆದರೂ ಇನ್ನೂ ಕಾಮಗಾರಿ ಪ್ರದೇಶದ ರೈತರು ಜಮೀನುಗಳು 6(1)( ಭೂ ಪರಿಹಾರ) ಆಗದೇ ಇರುವುದರಿಂದ ಜಮೀನಿನ ಮಾಲೀಕರು ಕಾಮಗಾರಿ ಆರಂಭಿಸಲು ಬಿಡುತ್ತಿಲ್ಲ ಎಂದು ಹೇಮಾವತಿ ನಾಲಾ ಇಂಜನಿಯರ್ ತಿಳಿಸಿದ್ದಾರೆ ಎಂದರು.
  ಕಳೆದ ವರ್ಷ ಯಾವ ಹಂತದಲ್ಲಿ  ಕಾಮಗಾರಿಗಳ ನಡೆಯುತ್ತಿದ್ದವೂ ಅದೇ ಹಂತದಲ್ಲಿದೆ, ಸ್ವಲ್ಪವೂ ಪ್ರಗತಿ ಕಂಡಿಲ್ಲ,  ಸಕರ್ಾರದ ವಿಳಂಬ ನೀತಿಯಿಂದ ಕಾಮಗಾರಿ ನಡೆಯುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕರ್ಾರಕ್ಕೆ ಮನವಿ ಮಾಡಲಿದ್ದು ಇವರ ಪ್ರತಿಕ್ರಿಯೆ ನೋಡಿಕೊಂಡು ರೈತರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಬಿಜೆಪಿ ಘಟಕ ಮುಂದಿನ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.
ಸಕರ್ಾರ ಯೋಜನೆಗೆ ಮಂಜೂರು ಮಾಡಿರುವ  102 ಕೋಟಿ ರೂ ಹಣದಲ್ಲಿ 35 ಕೋಟಿ ಹಣ ಬಿಡುಗಡೆಯಾಗಿದೆ ಆದರೂ ಕಾಮಗಾರಿ ವಿಳಂಬವಾಗುತ್ತಿದೆ ಅಲ್ಲದೆ 102 ಕೋಟಿ ರೂ ಹಣದಲ್ಲಿ 13 ಕೋಟಿ ರೂ ಹಣ ಜಮೀನು ನೀಡಿರುವ ರೈತರಿಗೆ ಪರಿಹಾರ ನೀಡಲು ಮೀಸಲಿಟ್ಟು ಇದಕ್ಕಿಂತಲೂ ಹೆಚ್ಚಿಗೆ ಪರಿಹಾರ ನೀಡಬೇಕೆಂದಾದರೆ ಅದಕ್ಕೂ ಸಕರ್ಾರ ಬದ್ದವಾಗಬೇಕು  ಎಂದರು.
 ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ರೈತರು ಜಮೀನು ನೀಡಲು ಮುಂದಾದರೂ ಇತರೆ ಜಮೀನು ನೀಡಿರುವ ರೈತರಿಗೆ ಪರಿಹಾರ ಧನ ನೀಡದಿರುವುದರಿಂದ ಮುಂದೆ ಬಂದಿರುವ ರೈತರು ಜಮೀನು ನೀಡಲು ನಿರಾಕರಿಸುತ್ತಿದ್ದಾರೆ ಈ ಬಗ್ಗೆ ಸಕರ್ಾರ ಸೂಕ್ತ ತೀಮರ್ಾನ ಕೈಗೊಳ್ಳದಿದ್ದರೆ ಯೋಜನಾ ಕಾಮಗಾರಿಯೂ ಸ್ಥಗಿತವಾಗುವ ಸಂಭವವಿದೆ ಆದ್ದರಿಂದ ಜಮೀನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ತಿಳಿಸಿದರು.
 ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಹೇಮಾವತಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲು  ಸಕರ್ಾರ ನೀಡಿರುವ 24 ತಿಂಗಳ ಅವಧಿಯಲ್ಲಿ  ಇನ್ನೂ ಕೇವಲ 6 ತಿಂಗಳು ಮಾತ್ರ ಬಾಕಿಯಿದ್ದು ಕಾಮಗಾರಿಯ ವೇಗ ಆಶಾದಾಯಕವಾಗಿಲ್ಲ,  ಹೀಗಾದರೆ ಜಮೀನು ನೀಡಿರುವ ರೈತರ ಪರಿಸ್ಥಿತಿ ಹೇಳತೀರಲಾಗವುದು ಎಂದರು.
 ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ವಸಂತಯ್ಯ, ಸದಸ್ಯರುಗಳಾದ ನವೀನ್ಕೆಂಕೆರೆ, ಎ.ಬಿ.ರಮೇಶ್ಕುಮಾರ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಲಕ್ಷ್ಮಯ್ಯ, ಶೆಟ್ಟಿಕೆರೆ ಅರುಣ್, ಶೆಟ್ಟಿಕೆರೆ ಮಂಡಳ ಕಾರ್ಯದಶರ್ಿ ಪ್ರಭುಲಿಂಗಯ್ಯ, ನೀರಾವರಿ ಹೋರಾಟಗಾರ ಎ.ಬಿ. ಶರತ್ಕುಮಾರ್,  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಜಿ ಶಾಸಕ, ಕೆ.ಎಸ್.ಕಿರಣ್ಕುಮಾರ್
ನೂರಾರು ತೆಂಗಿನ ಮರವಿರುವ ರೈತರು ಹೇಮಾವತಿ ನೀರಿಗಾಗಿ ತಮ್ಮ ಜಮೀನುಗಳನ್ನು ಯೋಜನೆಗೆ ಬಿಟ್ಟುಕೊಟ್ಟಿರು ಆದರೆ ಪರಿಹಾರದ ಹಣ ದೊರಕದೆ ಇತ್ತ ಫಸಲೂ ಇಲ್ಲ, ಹಣವೂ ಇಲ್ಲದಂತಾಗಿದೆ ಈ ಬಗ್ಗೆ ಸಕರ್ಾರ, ಜಿಲ್ಲಾಧಿಕಾರಿಗಳು ಗಮನ ಹರಿಸದಿದ್ದರೆ ಬಿಜೆಪಿ ಘಟಕದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು.     
 
ಸುದ್ದಿ: 2
ಚಿ.ನಾ.ಹಳ್ಳಿ ತಾಲೂಕು ಗಾಂಧಿನಗರದಲ್ಲಿ ಡೆಂಗ್ಯೂ ಶಂಕೆ: ಮೂವರು ಅಪಾಯದ ಸ್ಥಿತಿಯಲ್ಲಿ
ಚಿಕ್ಕನಾಯಕನಹಳ್ಳಿ,ಜು.17: ತಾಲೂಕಿನ ಹಂದನಕೆರೆ ಹೋಬಳಿಯ ಗಾಂಧಿನಗರದಲ್ಲಿ ಮೂವರು ಡೆಂಗ್ಯೂ ಜ್ವರಕ್ಕೆ ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 15ಕ್ಕೂ ಅಧಿಕ ಜನ ಜ್ವರದಿಂದ ನರಳುತ್ತಿದ್ದಾರೆ, ಇಷ್ಟಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ, ಗ್ರಾ.ಪಂ.ಯ ಅಧಿಕಾರಿಗಳಾಗಲಿ ಜ್ವರ ನಿಯಂತ್ರಣಕ್ಕೆ  ಶೀಘ್ರಗತಿಯ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
 ಗಾಂಧಿನಗರದ ರೇಣುಕಯ್ಯ(37), ಕರಿಯಮ್ಮ(49), ಭಾಗ್ಯಮ್ಮ(40) ಡೆಂಗ್ಯೂ ಪಾಸಿಟಿವ್ ಎಂದು ಪ್ರಯೋಗಾಲಯದ ವರದಿ ಬಂದಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅಲ್ಲಿಯವರು ಬೆಂಗಳೂರಿಗೆ ರೆಫರ್ ಮಾಡಿದ್ದರಿಂದಾಗಿ, ಕೂಲಿ ಮಾಡಿ ಬದುಕುತ್ತಿರುವ ಇವರುಗಳು ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಹಣವಿಲ್ಲದ್ದರಿಂದ ಇಬ್ಬರು ಸಿದ್ದಾರ್ಥ ಆಸ್ಪತ್ರೆಯಲ್ಲಿ, ಮೊತ್ತೋರ್ವರು ಶ್ರೀದೇವಿ ಆಸ್ಪತ್ರೆಯಲ್ಲಿ ಉಚಿತ ಔಷದೋಪಚಾರ ಪಡೆಯುತ್ತಿದ್ದಾರೆ.
 ಅಲ್ಲದೆ ಗಾಂಧಿನಗರದ 15ಕ್ಕೂ ಹೆಚ್ಚಿನ ಜನರು ಜ್ವರದಿಂದ ನರಳುತ್ತಿದ್ದರೆ, ಇಲ್ಲಿಗೆ ಇಬ್ಬರು ಆರೋಗ್ಯ ಸಹಾಯಕಿಯರು ಬಿಟ್ಟರೆ ಆರೋಗ್ಯ ಇಲಾಖೆಯ ವೈದ್ಯರಾಗಲಿ, ತಾಲೂಕು ವೈದ್ಯಾಧಿಕಾರಿಗಳಾಗಲಿ ಭೇಟಿ ನೀಡಿ ಹೆಚ್ಚಿನ ಜಾಗ್ರತ ಕ್ರಮಗಳನ್ನು ಕೈಗೊಳ್ಳದೆ, ರೋಗದ ಉಲ್ಬಣಕ್ಕೆ ಕಾರಣರಾಗಿದ್ದಾರೆ, ಗ್ರಾ.ಪಂ.ಅಧಿಕಾರಿಗಳೂ ಈ ಬಗ್ಗೆ ಹೆಚ್ಚಿನ ಮುತುವಜರ್ಿ ವಹಿಸಿಲ್ಲವೆಂಬ ಆರೋಪ ಗ್ರಾಮಸ್ಥರದ್ದಾಗಿದೆ.
ರಸ್ತೆ ಸರಿಯಾಗವವರೆಗೂ ಟ್ರಾನ್ಸ್ಪೋಟರ್್ನ್ನು ಸ್ಥಗಿತ

ಚಿಕ್ಕನಾಯಕನಹಳ್ಳಿ,ಜು.18: ತಾಲ್ಲೂಕಿನ ಗಣಿ ಪ್ರದೇಶವಾದ ಸೊಂಡೇನಹಳ್ಳಿ ಗಣಿ ಭಾಗದಲ್ಲಿನ ಗ್ರಾಮದ ಸುತ್ತಮುತ್ತಲಿನ ರಸ್ತೆಯು ಗುಂಡಿಗಳಿಂದ ಆವೃತವಾಗಿ ಸಂಚರಿಸುವುದೇ ದುಸ್ಥರ ಎನ್ನುವಂತಾಗಿದೆ,  ಕಷ್ಟಪಟ್ಟು ಓಡಾಡುವ ವಾಹನಗಳಿಂದ ಏಳುವ ಧೂಳಿನಿಂದ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಇದು ಆ ಭಾಗದ ಗ್ರಾಮಸ್ಥರ ಸಮಸ್ಯೆ ಮಾತ್ರವಲ್ಲ,  ವಾಹನದ ಲಾರಿ ಚಾಲಕರಿಗೂ ಇದರ ಪರಿಣಾಮ ಬೀರುತ್ತಿದ್ದು ರಸ್ತೆ ಸರಿಯಾಗವವರೆಗೂ ಟ್ರಾನ್ಸ್ಪೋಟರ್್ನ್ನು ಸ್ಥಗಿತಗೊಳಿಸಲಾಗುವುದು ಎಂದು ಲಾರಿ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
  ತಾಲ್ಲೂಕಿನ ಗಣಿಯಿಂದ ಅಧಿರನ್ನು ತೆಗೆದುಕೊಂಡು ಹೋಗಲು ಹಲವಾರು ಲಾರಿಗಳು ಗಣಿ ಭಾಗದ ಗ್ರಾಮಗಳ  ಮೂಲಕ ಹಾದು ಹೋಗುತ್ತವೆ, ಲಾರಿಗಳು ಸಂಚರಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆಗಳು ಇನ್ನಷ್ಟು ಹಾಳಾಗುತ್ತಿವೆ ಅಲ್ಲದೆ ಗುಂಡಿಗಳು ರಸ್ತೆಯಲ್ಲೆಲ್ಲಾ ಉಂಟಾಗಿ ಅದರಿಂದ ಬರುವ ಧೂಳು ಗ್ರಾಮದ ಜನರಿಗೂ ತಗುಲಿತ್ತಿದೆ ಅಲ್ಲದೆ ಗಣಿ ಭಾಗದ ಗ್ರಾಮಗಳಿಗೆ ಸಂಚರಿಸುವ ಪ್ರತಿ ಸವಾರರೂ ಕೂಡ ದಿನನಿತ್ಯ ಆಸ್ಪತ್ರೆಗೆ ಎಡತಾಕುವಂತಾಗಿದೆ.
ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆ ಹಾಗೂ ಗುಂಡಿಗಳಿಂದ ಸವಾರರಿಗೆ ಆರೋಗ್ಯ ಸಮಸ್ಯೆಯೂ ಹಾಗೂ ವಾಹನಗಳು ಕೆಟ್ಟು ನಿಲ್ಲುತ್ತಿವೆ ಇದರ ರಿಪೇರಿಗಾಗಿಯೇ ಅವರು ಪಡೆಯುವ ಸಂಬಳವನ್ನೆಲ್ಲಾ ರಿಪೇರಿಗೆ ಬಳಸಲಾಗುತ್ತಿದೆ ಎಂದು ಪ್ರತಿಭಟನಾ ಲಾರಿ ಚಾಲಕರು ಮಾಧ್ಯಮದೆದರು ತಮ್ಮ ಅಳಲು ತೋಡಿಕೊಂಡರು.
ಸಾಮಾಜಿಕ ಕಾರ್ಯಕರ್ತ ನಂಜುಂಡಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಗಣಿ ಭಾಗದ ಗ್ರಾಮಗಳ ಅಭಿವೃದ್ದಿಗೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ, ಗ್ರಾಮಗಳ ಸಮಸ್ಯೆ ಬಗ್ಗೆ ತಹಶೀಲ್ದಾರ್ರವರೂ ಸೇರಿದಂತೆ ಗಣಿ ಅಭಿವೃದ್ದಿಯ ಜವಬ್ದಾರಿ ಹೊತ್ತ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂದರಲ್ಲದೆ ಗಣಿ ಭಾಗದಲ್ಲಿ ಕೆಲಸಗಾರರು ಹಾಗೂ ಬಿಡ್ಡರ್ಗಳ ನಡುವೆ ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿದೆ, ಕೃಷಿ, ತೋಟಗಾರಿಕೆಗಳ ಮೇಲೆ ಗಣಿಯ ಪರಿಣಾಮ ಹೆಚ್ಚಾಗಿ ಬೀರುತ್ತಿದೆ ಹಾಗೂ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ಜನಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದರು.
 ಗಣಿ ಭಾಗದ ಪರಿಸರ ಅಭಿವೃದ್ದಿಗಾಗಿ 9ಕೋಟಿ ರೂ ಹಣವನ್ನು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕರಿಗಳ ಖಾತೆಯಲ್ಲಿ ಇಡಲಾಗಿತ್ತು ಆದರೂ ಗಣಿ ಭಾಗದ ಗ್ರಾಮಗಳ ಪರಿಸರ ಅಭಿವೃದ್ದಿಗಾಗಿ ಹಣವು ಬಳಕೆಯಾಗುತ್ತಿಲ್ಲ ಈ ಹಣದ ವಿವರವೂ ತಿಳಿಯುತ್ತಿಲ್ಲ, ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ, ತಾಪಮಾನ ಹೆಚ್ಚಾಗಿದೆ ಎಂದರಲ್ಲದೆ ನೀರಾವರಿಗಾಗಿ 5ಕೋಟಿ ಹಣ ಮೀಸಲಿಡಲಾಗಿತ್ತು ಆದರೆ ಸಕರ್ಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ ಈ ಹಣವನ್ನು ಗಣಿ ಭಾಗದ ಗ್ರಾಮಗಳ ಅಭಿವೃಧಿಗಾಗಿ ಬಳಸಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ.ಸದಸ್ಯ ತಿಮ್ಮೇಗೌಡ ಮಾತನಾಡಿ ಗಣಿ ಭಾಗದ ರಸ್ತೆಯ ಸಮಸ್ಯೆಯಿಂದ ಜನರಲ್ಲಿ ಸಂಚಾರರಿಗೆ ಹಾಗೂ ಗ್ರಾಮದವರಿಗೆ ಆರೋಗ್ಯದ ಸಮಸ್ಯೆ ಎದುರಾಗುತ್ತಿದೆ, ರಸ್ತೆ ಸರಿಯಾಗುವವರೆಗೂ ಇಲ್ಲಿನ ಅಧಿರು ಸಾಗಾಣಿಕೆಯ ವಾಹನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.
 ಲಾರಿ ಚಾಲಕ ಸಾದತ್ ಮಾತನಾಡಿ ಈ  ರಸ್ತೆಯಲ್ಲಿ ಲಾರಿಯನ್ನು ಚಲಾಯಿಸಿದರೆ ದಿನನಿತ್ಯ ರಿಪೇರಿಗೆ ಹೋಗುತ್ತದೆ ನಾವು ದುಡಿಯುವ 500ರೂಗೆ 5ಸಾವಿರ ಹಣ ರಿಪೇರಿಗೆ ಖಚರ್ು ಮಾಡಬೇಕಾಗುತ್ತದೆ ಅಲ್ಲದೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಜೊತೆಯಲ್ಲಿ ಶರೀರದ ಮೂಳೆಗಳು ಮುರಿಯುವ ಸಂಭವ ಹೆಚ್ಚಾಗಿದೆ ಎಂದರಲ್ಲದೆ ಈ ಭಾಗದಲ್ಲಿ ಇರುವ 13ಮೈನ್ಸ್ನವರು ಸ್ವಲ್ಪ ಸ್ವಲ್ಪ ಹಣ ಹಾಕಿದರೂ ರಸ್ತೆ ಅಭಿವೃದ್ದಿಯಾಗುತ್ತದೆ ಎಂದರು.
 ಪ್ರತಿಭಟನೆಯಲ್ಲಿ ಲಾರಿ ಚಾಲಕರಾದ ಸಾದತ್, ಶಿವಕುಮಾರ್, ಸಾಧಿಕ್ ರಹಮತ್, ರಚಿತ್, ವೆಂಕಜಮೀರ್ಸೈಯದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟೇಶನಾಯ್ಡು, ಸಲೀಂ, ಚಿಕ್ಕಣ್ಣ, ಕೌಫಿಕ್ಪಾಷ, ಮಂಜುನಾಥ್, ಅಮೀರ್ಜಾನ್,
ಗ್ರಾಮೀಣ ಮಕ್ಕಳಲ್ಲಿ ಕಲಿಕಾ ಕೌಶಲ, ಧಾರಣಶಕಿ ಅಧಿಕ:

ಚಿಕ್ಕನಾಯಕನಹಳ್ಳಿ,ಜು.16: ಗ್ರಾಮೀಣ ಶಾಲೆಯ ಮಕ್ಕಳಲ್ಲಿ ಪಟ್ಟಣದ ಕಾನ್ವೆಂಟ್ ಶಾಲೆಗಳ ಮಕ್ಕಳಿಗಿಂತ ಹೆಚ್ಚಿನ ಧಾರಣಶಕ್ತಿ, ಕಲಿಕ ಕೌಶಲ ವಿರುತ್ತದೆ ಎಂದು ಶಿಕ್ಷಕ ಹಾಗು  ಲೇಖಕ ಸಿ. ಗುರುಮೂತರ್ಿ ಕೊಟಿಗೆಮನೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಳಿಗೆಹಳ್ಳಿಯ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟ ಏರ್ಪಡಿಸಿದ್ದ ನೋಟ್ಪುಸ್ತಕ ಹಾಗು ಲೇಖನ ಸಾಮಾಗ್ರಿಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಶಾಲೆಯ ಮಕ್ಕಳಿಗೆ ಪರಿಸರ ಹಾಗೂ ಗಿಡಮರಗಳನ್ನು ಬೆಳೆಸುವ ಪರಿಚಯದ ಜೊತೆಯಲ್ಲಿ ಕಾಳಜಿ ಇರುತ್ತದೆ.
 ನೈಸಗರ್ಿಕವಾಗಿ ಬೆಳೆಯುವ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಉಪಯೋಗಿಸುವುದರಿಂದ ಧಾರಣಶಕ್ತಿ ಗ್ರಾಮೀಣ ಮಕ್ಕಳಲ್ಲಿ ಬೆಳೆದಿರುತ್ತದೆ, ಸಂಸ್ಕೃತಿ ಹಾಗೂ ಕಲೆಯ ಜೊತೆಗೆ ಸಂಸ್ಕಾರದ ಕೌಶಲ್ಯ ಮೈಗೂಡಿಸಿಕೋಂಡಿರುತ್ತಾರೆ, ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಪ್ರಶ್ನೆಗೆ ಉತ್ತರ ಬಿಟ್ಟರೆ ನೈಸಗರ್ಿಕ ಕೌಶ್ಯಲ್ಯಗಳು ಅಷ್ಟಾಗಿ ತಿಳಿದಿರುವುದಿಲ್ಲ, ಎರಡು ದಶಕಗಳ ಹಿಂದೆ ಸಕರ್ಾರಿ ಶಾಲೆಗಳಲ್ಲಿ ಸವಲತ್ತುಗಳು ಕಡಿಮೆ ಇದ್ದು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದವು. ಪ್ರಸ್ತುತ ಕಾಲದಲ್ಲಿ ಸರಕಾರದಿಂದ ಅನೇಕ ಸೌಲಭ್ಯಗಳು ಇವೆ ಆದರೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದರಲ್ಲದೆ ಪಟ್ಟಣದ ಕಾನ್ವಂಟ್ ಶಾಲೆಗಳಲ್ಲಿ ಬಾಹ್ಯ ಸೌಂದರ್ಯದ ಆಕರ್ಷಣೆಯಿಂದ ಆಂತರಿಕ ಸೌದರ್ಯತೆ ಕಡಿಮೆಯಾಗಿದೆ ಎಂದರು.
 ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯ ಮಾತನಾಡಿ, ಸಕರ್ಾರಿ ಶಾಲೆಯ ವಿದ್ಯಾಥರ್ಿಗಳು ಖಾಸಗಿ ಶಾಲೆಯ ಮಕ್ಕಳಿಗಿಂತ ಪ್ರತಿಯೊಂದು ವಿಷಯದಲ್ಲೂ ಮುಂದಿದ್ದಾರ, ಹಳ್ಳಿ ಭಾಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು  ದನ ಹಾಗೂ ಕುರಿ ಕಾಯಲು ತಮ್ಮ ಮಕ್ಕಳನ್ನು ಕಳುಹಿಸುವುದರಿಂದ ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ತಾವೇ ಹಾಳು ಮಾಡಿದಂತಾಗುತ್ತದೆ ಎಂದರು..
ಸ್ಪಂದನ ಜನವೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್ ಮಾತನಾಡಿ  ಸಕರ್ಾರಿ ಶಾಲೆಯ ಬಡವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೋಟ್ಬುಕ್, ಲೇಖನಿಯನ್ನು ಸಂಘವು ಪ್ರತಿವರ್ಷ ನೀಡುತ್ತಿದೆ ಎಂದು ಹೇಳಿದರು. 
 ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿನೋದಬಾಯಿ, ಎಸ್.ಡಿ.ಎಂ.ಸಿ.ಸದಸ್ಯ ನಿವರ್ಾಣಯ್ಯ, ಸ್ಪಂದನ ಜನಸೇವಾ ಒಕ್ಕೂಟದ ತ್ಯಾಗರಾಜು, ಸಿ.ಮಲ್ಲಿಕಾಜರ್ುನಸ್ವಾಮಿ, ಕಿರಣ್ಕುಮಾರ್, ಶಿವಣ್ಣ, ಜಾಕೀರ್ಹುಸೇನ್, ಶಿಕ್ಷಕಿ ಉಪಸ್ಥಿತರಿದ್ದರು.
 
        ಎಳೆ ಹಲಸಿನ ಮರವೊಂದನ್ನು ಅಕ್ರಮವಾಗಿ ಕಡಿದು ಹಾಕಿರುವ ಘಟನೆ    
                                       
ಚಿಕ್ಕನಾಯಕನಹಳ್ಳಿ,ಜೂ.18 : ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೈದಾನದಲ್ಲಿದ್ದ ಎಳೆ ಹಲಸಿನ ಮರವೊಂದನ್ನು ಅಕ್ರಮವಾಗಿ ಕಡಿದು ಹಾಕಿರುವ ಘಟನೆ ನಡೆದಿದೆ.
ಇಲ್ಲಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ಸೇರಿದ ಮೈದಾನದ ಜಾಗದಲ್ಲಿ ಬೆಳೆಸಿದ್ದ ಹಲಸಿನ ಮರವೊಂದನ್ನು ಬೆಳಗಿನ ಜಾವ ದುಷ್ಕಮರ್ಿಗಳು ಕಡಿದುರುಳಿಸಿದ್ದಾರೆ. ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ ವಿದ್ಯಾಥರ್ಿಗಳು ಈ ಕೃತ್ಯವನ್ನು ಪ್ರಾಂಶುಪಾಲರ ಗಮನಕ್ಕೆ ತಂದರು. ಕಾಲೇಜಿನ ಪೂರ್ವ ಭಾಗದ ಮೈದಾನದ ಅಂಜಿನಲ್ಲಿದ್ದ ಈ ಹಲಸಿನ ಮರವನ್ನು ಕಟಿಂಕ್ ಮಿಷನ್ ನಿಂದ ಕಡಿಯಲಾಗಿದೆ. ಈ ಕೃತ್ಯದ ಹಿಂದೆ ಭೂಗಳ್ಳರ ಕೈವಾಡ ವಿದೆ ಎಂದು ಶಂಕಿಸಲಾಗಿದೆ. ಐದು ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ಈ ಕಾಲೇಜಿನ ಆಟದ ಮೈದಾನದಲ್ಲಿ ನೂರಾರು ಅರಣ್ಯ ಸಸಿಗಳನ್ನು ಜತನವಾಗಿ ಬೆಳಸಲಾಗುತ್ತಿದೆ. ಈ ಹಿಂದೆ ಕಾಲೇಜಿ ಸಿಬ್ಬಂದಿ ತಮ್ಮ ಜಾಗದ ಗಡಿಗಳನ್ನು ಗುರುತಿಸಿ ಕಲ್ಲು ಕಂಬ ನೆಡುತ್ತಿದ್ದಾಗ ಅನಗತ್ಯವಾಗಿ ಸುತ್ತಮುತ್ತಲಿನ ಕೆಲವರು ವಿವಾದ ಎಬ್ಬಿಸಿದ್ದರು. ಈ ಕಾಲೇಜಿನ ಸನಿಹದ  ಮನೆಗಳಿಗೆ ಕಾಲೇಜಿನ ಮೈದಾನದ ಮೂಲಕ ರಸ್ತೆಗೆ ಜಾಗಬಿಡಿ ಎಂದು ತಕರಾರು ಎಬ್ಬಿಸಿದ್ದರು. ಈ ಕೃತ್ಯದ ಬಗ್ಗೆ ಆಗ ತಹಸೀಲ್ದಾರ್ರಿಗೆ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ತಹಸೀಲ್ದಾರ್ರು ನೋಟೀಸು ಜಾರಿ ಮಾಡಿದ್ದರೂ ಈವರೆಗೂ ಯಾರಿಂದಲೂ ತಕರಾರು ಅಜರ್ಿ ಬಂದಿರಲಿಲ್ಲ. ಆದರೆ ಈಗ ಏಕಾಏಕಿ ಅಕ್ರಮವಾಗಿ ಮರವನ್ನು ಕಡಿಯುವುದರ ಮೂಲಕ ದುಷ್ಕಮರ್ಿಗಳು ವಿವಾದ ಎಬ್ಬಿಸಿದ್ದಾರೆ. ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ವಿ.ವರದರಾಜು ಇಲ್ಲಿನ ಪೊಲೀಸ್ ಠಾಣೆಗೆ, ತಹಸೀಲ್ದಾರ್ರಿಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಸುಮಾರು ಒಂದು ಸಾವಿರ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನ ಆಸ್ತಿ ರಕ್ಷಣೆಗಾಗಿ  ಕನಿಷ್ಠ ತಂತಿ ಬೇಲಿಯೂ ಇಲ್ಲದಿರುವುದು ಶೋಚನೀಯವೆನಿಸಿದೆ. ಕಾಂಪೌಂಡ್ಗಾಗಿ ಶಾಸಕರಿಂದ ಹಿಡಿದು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸಲ್ಲಿಸಿದ ಮನವಿಗೆ ಯಾರೂ ಕಿವಿಗೊಟ್ಟಿಲ್ಲ ಎಂದು ಪ್ರಾಂಶುಪಾಲರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.
ತಾಲ್ಲೂಕು ಪ್ರೌಢಶಾಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷರು, ನಿದರ್ೇಶಕರ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.18 : ಚಿಕ್ಕನಾಯಕನಹಳ್ಳಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸಾಸಲು ಸಕರ್ಾರಿ ಪ್ರೌಢಶಾಲೆಯ ಸಿ.ಎ.ಕುಮಾರಸ್ವಾಮಿರವರು ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
 ಉಪಾಧ್ಯಕ್ಷರಾಗಿ ಬರಕನಾಳ್ ವಿಶ್ವಭಾರತಿ ಪ್ರೌಢಶಾಲೆಯ ಸುಧಾಕರ್, ಕಾರ್ಯದಶರ್ಿಯಾಗಿ ಚಿ.ನಾ.ಹಳ್ಳಿ ಡಿವಿಪಿ ಶಾಲೆಯ ಎಂ.ಜಿ.ಗುರುಸ್ವಾಮಿನಾಯ್ಡು, ಸಹಕಾರ್ಯದಶರ್ಿಯಾಗಿ ದಬ್ಬಗುಂಟೆ ಜಿ.ಹೆಚ್.ಎಸ್ ಗಿರೀಶ್, ಖಜಾಂಚಿಯಾಗಿ ಅಣೆಕಟ್ಟೆ ಬಸವೇಶ್ವರ ಪ್ರೌಡಶಾಲೆಯ ಆರ್.ಎಂ.ರಾಜ್ಕುಮಾರ್, ಗೌರವ ಅಧ್ಯಕ್ಷರಾಗಿ ಬೋರನಕಣಿವೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಎಸ್.ಮಂಜಮ್ಮ, ಸಂಚಾಲಕರಾಗಿ ಜೆ.ಸಿ.ಪುರ ಜಿ.ಎಚ್.ಎಸ್ ಅನಿತ, ನಿದರ್ೇಶಕರುಗಳಾಗಿ ಗೋಪಾಲಯ್ಯ, ಕಾಂತರಾಜು, ಬಿ.ಆರ್.ಮಂಜುನಾಥ್, ಆರ್.ರಂಗನಾಯ್ಕ್, ಅರುಣ್ಕುಮಾರ್, ಎಂ.ರಾಜಶೇಖರಪ್ಪ, ವಹೀದಾಬಾನು, ಸೌಭಾಗ್ಯಮ್ಮ, ಮಂಜುಳ, ಪುಟ್ಟಮ್ಮ, ರಮೇಶನಾಯ್ಕ, ರೇಣುಕರಾಧ್ಯ, ಕಮಲ ಆಯ್ಕೆಯಾಗಿದ್ದಾರೆ.

 

Tuesday, July 15, 2014

ಮಕ್ಕಳಿಗೆ ಕೃಷಿಯಲ್ಲಿ ತೊಡಗುವಂತೆ ಸಲಹೆ ನೀಡಿ
ಚಿಕ್ಕನಾಯಕನಹಳ್ಳಿ,ಜು.15 : ನಮ್ಮ ಮಕ್ಕಳಿಗೆ ಕೃಷಿಯಲ್ಲಿ ತೊಡಗುವಂತೆ ಸಲಹೆ ನೀಡಿ ಅವರಿಗೆ ಕೃಷಿ ಬಗ್ಗೆ ಒಲವು ಬರುವಂತೆ ಮಾಡಬೇಕು ಎಂದು ಸಾವಯವ ಕೃಷಿ ಪರಿವಾರದ ಜಿಲ್ಲಾ ಅಧ್ಯಕ್ಷ ಸದಾಶಿವಯ್ಯ ಹೇಳಿದರು.
ತಾಲ್ಲೂಕಿನ ಹಂದನಕೆರೆ ವಲಯದ ದೊಡ್ಡಎಣ್ಣೆಗೆರೆಯ ಗವಿರಂಗನಾಥ ವಿದ್ಯಾಪೀಠ ಪ್ರೌಢಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಆಧುನಿಕ ದಾಳಿಂಬೆ ಕೃಷಿ ವಿಧಾನಗಳು ಮತ್ತು ಮಹತ್ವದ ಕುರಿತು ಮಾತನಾಡಿದ ಅವರು, ರೈತರು ದಾಳಿಂಬೆ ಕೃಷಿಯನ್ನು ಮಾಡುವ ಪೂರ್ವದಲ್ಲಿ ತಳಿಗಳ ಆಯ್ಕೆ ಮಾಡುವುದರ ಮೇಲೆ ಕೃಷಿ ಅವಲಂಬಿತವಾಗಿರುತ್ತದೆ ಆದ್ದರಿಂದ ಟೀಷುಕಲ್ಚರ್ ದಾಳಿಂಬೆ ಕೃಷಿ ಆಯ್ಕೆ ಮಾಡಿದರೆ ಸೂಕ್ತ ಅದರಲ್ಲಿ ರೋಗ ನಿರೋಧಕ ಶಕ್ತಿ ತುಂಬಿರುತ್ತದೆ ಎಂದರಲ್ಲದೆ ರೈತರು ಸಾವಯವ ಕೃಷಿಗೆ ಉತ್ತೇಜನ ನೀಡಿದರೆ ಕಡಿಮೆ ಖಚರ್ಾಗುತ್ತದೆ, ಇಲ್ಲವಾದರೆ ರಸಾಯನಿಕ ಗೊಬ್ಬರ ಹಾಕುವುದರಿಂದ ಖಚರ್ು ಹೆಚ್ಚಾಗುತ್ತದೆ ಇದರಿಂದ ರೈತರು ಕೃಷಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದರು.
ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ತಜ್ಞ ನವೀನ್ಕುಮಾರ್,  ರೈತರು ರಸಾಯನಿಕ ಗೊಬ್ಬರ ಕಡಿಮೆ ಮಾಡಿ ಸಾವಯವಗೊಬ್ಬರಕ್ಕೆ ಒತ್ತು ನೀಡಬೇಕು, ಇದರಿಂದ ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು ಇಲ್ಲವಾದರೆ ಮಣ್ಣು ಸತ್ತು ಹೋಗುತ್ತದೆ ಇದರಿಂದ ಕೃಷಿಯಲ್ಲಿ ಲಾಭ ಇಲ್ಲ ಎಂದು ರೈತರು ವಲಸೆ ಹೋಗುತ್ತಿದ್ದಾರೆ ಆದ್ದರಿಂದ ತೋಟಗಾರಿಕೆ ಬೆಳೆಯಾದ, ತೆಂಗು ಕೃಷಿ ಮಧ್ಯಭಾಗದಲ್ಲಿ ದಾಳಿಂಬೆ ಕೃಷಿ ಮಾಡಬಹುದು ಎಂದರಲ್ಲದೆ ಬಯಲು ಸೀಮೆ ಪ್ರದೇಶದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ದಾಳಿಂಬೆ ಕೃಷಿ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ದಾಳಿಂಬೆ ಕೃಷಿಗೆ ಬೆಲೆ ಏರಿಕೆಯಿಂದ ರೈತರು ದಾಳಿಂಬೆ ಕೃಷಿಗೆ ಒಲವು ತೋರುತ್ತಿದ್ದಾರೆ ಎಂದರು.
ಪ್ರಗತಿಪರ ಕೃಷಿಕ ಯೋಗಿಶ್ ಮಾತನಾಡಿ ದಾಳಿಂಬೆ ಕೃಷಿಗೆ ಹನಿನೀರಾವರಿ ಅಳವಡಿಸುವುದು ಸೂಕ್ತ ಇದರಿಂದ ಜಲ ಸಂರಕ್ಷಣೆ ಮಾಡಬಹುದು, ಈಗಿನ ನೀರಿನ ಅಭಾವದಲ್ಲಿ ಹನಿ ನೀರಾವರಿ ಮಾಡಿದರೆ ತೋಟಗಾರಿಕೆ ಇಲಾಖೆಯಿಂದ ಶೇ.85 ರಷ್ಟು ಸಹಾಯಧನ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಇಂದ್ರಮ್ಮ, ಯೋಜನಾಧಿಕಾರಿಗಳಾದ ರೋಹಿತಾಕ್ಷ, ಶಾಲಾ ಶಿಕ್ಷಕರಾದ ಹೇಮಾವತಿ, ಮಂಜುನಾಥ , ತಾಲೂಕು ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗಪ್ಪ.ಎಚ್.ಎಸ್ ನಿರೂಪಿಸಿದರು. ಕೃಷಿ ಅಧಿಕಾರಿಗಳಾದ ಹರೀಶ್, ಸ್ವಾಗತಿದ್ದರು. ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.

ಪರೀಕ್ಷೆಯಲ್ಲಿ ಫೇಲಾಗಿದ್ದೇನೆಂದು ನೇಣಿಗೆ ಶರಣಾದ ಯುವಕ
ಚಿಕ್ಕನಾಯಕನಹಳ್ಳಿ,ಜು.15 : ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದರಿಂದ ಮನನೊಂದು ಅಕ್ಷಯ್ ಎಂಬ ವಿದ್ಯಾಥರ್ಿ ಮನೆಯಲ್ಲಿನ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಅಕ್ಷಯ್ ಬಿಎಸ್ಸಿ ಪದವಿಯನ್ನು ಮುಗಿಸಿದ್ದನಾದರೂ  ಕೆಲವು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದರಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡರೂ ಪರೀಕ್ಷೆಯಲ್ಲಿ ಅನುತ್ತೀರ್ಣನಾದ್ದರಿಂದ ಮನೆಯಲ್ಲಿನ ರೂಮಿನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾನೆ ಚಿ.ನಾ.ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಕೊಡಿಸಿದ ತಪ್ಪಿಗೆ ಮಾವನಿಂದಲೇ ಹೆಣವಾದ ರವಿಕುಮಾರ್
ಚಿಕ್ಕನಾಯಕನಹಳ್ಳಿ,ಜು.15 : ಕೊಡಿಸಿದ್ದ ಸಾಲವನ್ನು  ವಾಪಸ್ ಕೇಳಿದ್ದಕ್ಕೆ ಅಳಿಯನನ್ನೇ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದರಿಂದ  ಭೈರಲಿಂಗನಹಳ್ಳಿಯ ರವಿಕುಮಾರ್ ಸಾವನ್ನಪ್ಪಿದ್ದಾನೆ ಎಂದು ಚಿ.ನಾ.ಹಳ್ಳಿ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಮೃತ ರವಿಕುಮಾರ್ ತನ್ನ ಹೆಂಡತಿಯ ಚಿಕ್ಕಪ್ಪನ ಮಗಳಾದ ಮಂಜುಳಾ ಎಂಬವವರಿಗೆ ಮನೆ ಕಟ್ಟಲು  15 ಸಾವಿರ ರೂಗಳನ್ನು ಸಾಲವಾಗಿ ಕೊಡಿಸಿದ್ದನ್ನು, ಈ ಸಾಲವನ್ನು ವಾಪಸ್ ಮಾಡುವಂತೆ ಕೇಳಿದ್ದಕ್ಕೆ ಮಂಜುಳಾರವರ ತಂದೆ ತಮ್ಮಯ್ಯ(ಆರೋಪಿ) ರವಿಕುಮಾರ್ ಮೇಲೆ ಕಲ್ಲಿನಿಂದ ಹೊಡೆದು, ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದಾನೆ. ಹೊಡೆತದ ಸ್ವರೂಪ ಬಲವಾಗಿದ್ದರಿಂದ ಎದೆ ಹಾಗೂ ಬೆನ್ನಿನ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು ರವಿಕುಮಾರ್ ಆಸ್ಪತ್ರೆಗೆಂದು ಬಂದ ಸಂದರ್ಭದಲ್ಲಿ ತನ್ನ ಬಂಧುಗಳ ಮನೆಯಲ್ಲಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ದೂರು ನೀಡಿರುವ ಮೃತನ ಹೆಂಡತಿ ಬಿ.ಸಿ.ಗಂಗಮ್ಮ ತನ್ನ ಗಂಡನ ಸಾವಿಗೆ ತನ್ನ ಚಿಕ್ಕಪ್ಪ ತಮ್ಮಯ್ಯನೇ ಕಾರಣ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.   ಚಿ.ನಾ.ಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲೀಸರು ತನಿಖೆ ಕೈಗೊಂಡಿದ್ದಾರೆ.