Monday, November 5, 2012


ಸದಾಶಿವ ಆಯೋಗವನ್ನು ವಿರೋಧಿಸಿ ವಿವಿಧ ಸಮುದಾಯದವರ ಭಾರಿ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ನ.5 : ಎ.ಜೆ.ಸದಾಶಿವ ಆಯೋಗ ಸಕರ್ಾರಕ್ಕೆ ನೀಡಿರುವ ವರದಿ ದೋಷಪೂರಿತವಾಗಿದೆ, ಕೆಲವರ ಸ್ವಾರ್ಥಕ್ಕಾಗಿ ಹಾಗೂ ರಾಜಕಾರಣದ ತಂತ್ರಗಾರಿಕೆಗಾಗಿ ಇಂತಹ ವರದಿ ಹೊರ ಬಂದಿದೆ, ಇದು ಜಾತಿ-ಜಾತಿಗಳಲ್ಲಿ ಕಿಚ್ಚನ್ನು ಹಚ್ಚಿ ಪರಸ್ಪರ ಕಾದಾಡುವುದಕ್ಕೆ ನಾಂದಿಯಾಗಿದ್ದು, ಸಕರ್ಾರ ಆಯೋಗದ ವರದಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಬಂಜಾರ, ಬೋವಿ, ಕೊರಚ, ಕೊರಮ, ಕುಳುವ, ಸಿಳ್ಳೇಕ್ಯಾತ, ಬುಡುಬುಡಿಕೆ, ಸಿದ್ದರು, ಜೋಗಿ, ದೊಂಬಿದಾಸ ಹಾಗೂ ಇತರೆ ಸಮುದಾಯದವರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕನಕ ಭವನದಿಂದ ತಾಲ್ಲೂಕು ಕಛೇರಿವೆರಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಸಮುದಾಯದ ಭಾರಿ ಸಂಖ್ಯೆಯಲ್ಲಿನ ಜನರು ಹಾಗೂ ಸಮಾಜದ ಮುಖಂಡರಗಳು  ಭಾಗವಹಿಸಿದ್ದರು.
ಪರಿಶಿಷ್ಟರಲ್ಲಿ ಒಳಮೀಸಲಾತಿಯ ವಗರ್ೀಕರಣಕ್ಕೆ ಉದ್ದೇಶ ಪೂರ್ವಕವಾಗಿ ಶಿಫಾರಸ್ಸು ಮಾಡಿರುವ ವರದಿಯು, ಈ ನೆಲದ ಕಾನೂನಿಗೆ ವ್ಯತಿರಿಕ್ತವಾಗಿದೆ, ಈ ವರದಿಯ ಪರಿಣಾಮವಾಗಿ ಪರಿಶಿಷ್ಠ ಜಾತಿಗಳಲ್ಲೇ ಶ್ರೇಣಿಕೃತ ಸಮಾಜದ ನಿಮರ್ಾಣವಾಗಿ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗುವ ಸ್ಥಿತಿ ನಿಮರ್ಾಣವಾಗುತ್ತದೆ. ಪರಿಶಿಷ್ಠರಲ್ಲಿ ವಿವಿಧ ಜಾತಿ ಜನಾಂಗಗಳು ಸೇರ್ಪಡೆಗೊಂಡಿರುವುದರಿಂದ ಇವರೆಲ್ಲ ಸಾಮಾಜಿಕ, ಆಥರ್ಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರು ಎಂಬ ವಿಶಾಲವಾದ ಪರಿಕಲ್ಪನೆ ಈಗಿನ ಪೀಳಿಗೆಯ ಜನರಲ್ಲಿದೆ. ಈ ವರದಿಯಾದಾರದ ಮೇಲೆ ಸ್ಪೃಶ್ಯ ಮತ್ತು ಅಸ್ಪೃಶ್ಯ ಪರಿಶಿಷ್ಠ ಜಾತಿ ವಗರ್ೀಕರಣವೇನಾದರೂ ಆದರೆ ಈ ವರ್ಗಗಳನ್ನು ಜನರ ನೋಡುವ ದೃಷ್ಠಿಕೋನವೇ ಬೇರೆಯಾಗಬಹುದು ಎಂದರು.
ಆದ್ದರಿಂದ ಈ ವರದಿಯ ತಯಾರಿಕೆಗಾಗಿ ಸಂಗ್ರಹಿಸಿರುವ ಎಲ್ಲಾ ಅಧಿಕೃತ ಮಾಹಿತಿಗಳನ್ನು ಬಳಕೆ ಮಾಡಿಕೊಂಡು ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಅಂಕಿ ಅಂಶಗಳನ್ನು ಕಲೆಹಾಕಿ 1950ರಿಂದ ಇದುವರೆವಿಗೂ ಪರಿಶಿಷ್ಠ ಜಾತಿಯಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ 101 ಜಾತಿಗಳಿಗೆ ಮೀಸಲಾತಿ ಅನ್ವಯವಾಗುವ ಪ್ರತಿ ಕ್ಷೇತ್ರಗಳಲ್ಲಿ ಅವರವರ ಜನಸಂಖ್ಯೆಗನುಗುಣವಾಗಿ ಎಷ್ಟು ಪ್ರಯೋಜನ ಪಡೆಯಬೇಕಿತ್ತು ಮತ್ತು ಅದರಲ್ಲಿ ಎಷ್ಟು ಪರಯೋಜನ ಪಡೆಯಲಾಗಿದೆ ಎಂಬುದನ್ನು ಪರಮಾಶರ್ಿಸಿ, ಕಡಿಮೆ ಪ್ರಯೋಜನ ಪಡೆದಿರುವ ಜಾತಿ ಮತ್ತು ಜನಾಂಗಕ್ಕೆ ಹೆಚ್ಚು ಪ್ರಯೋಜನ ಪಡೆದವರ ಸಮಕ್ಕೆ ತರಲು ಕಾನೂನು ರೀತ್ಯಾ ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ ವಾಸ್ತವಾಂಶದ ವರದಿ ತಯಾರಿಸಲು ಹಾಗೂ ಸಲಹೆ ಶಿಫಾರಸ್ಸನ್ನು ಮಾಡಲು ಒಂದು ಸಮಿತಿ ರಚಿಸಬೇಕು.
 ಈ ಆಯೋಗ ಸಮಗ್ರ ವರದಿಯೊಂದನ್ನು ನೀಡಬೇಕಾಗಿರುವುದರಿಂದ  ಹೆಚ್ಚಿನ ಜನಸಂಖ್ಯೆ ಇರುವ ಎಡ, ಬಲ, ಬಂಜಾರ ಮತ್ತು ಭೋವಿ ಜನಾಂಗದವರಿಎಗ ಸೂಕ್ತ ಪ್ರಾತಿನಿಧ್ಯ ನೀಡಿ ಇತರೆ ಜಾತಿಗಳ ಪರವಾಗಿ ಎರಡು ಜನ ಪ್ರತಿನಿಧೀಗಳನ್ನು ಸದಸ್ಯರನ್ನಾಗಿಸಿ ಎಲ್ಲರೂ ಒಪ್ಪಬಹುದಾದ ಒಂದು ಸಮಗ್ರವಾದ ವರದಿಯನ್ನು ತಯಾರಿಸಲು ಆಯೋಗಕ್ಕೆ ತಿಳಿಸಬೇಕೆಂದು ಸಕರ್ಾರಕ್ಕೆ ನೀಡಿರುವ  ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪತ್ರಿಭಟನೆಯಲ್ಲಿ  ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್ ಮಾತನಾಡಿ ಎ.ಜೆ.ಸದಾಶಿವ ಆಯೋಗವು ತಾನು ನಡೆಸಬೇಕಿದ್ದ ಅಧ್ಯಯನದಲ್ಲಿ ಭಾರತ ಸಂವಿಧಾನವು ನೀಡಿರುವ ಮೀಸಲಾತಿ ಸೌಲಭ್ಯವು 1950ರಿಂದ ಈವರೆವಿಗೂ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ ಎಲ್ಲಾ ಉಪಜಾತಿಯವರಿಗೆ ಎಷ್ಟರ ಮಟ್ಟಿಗೆ ತಲುಪಿದೆ, ಕೆಲವರಿಗೆ ತಲುಪದೆ ಅನಾನುಕೂಲವಾಗಿದೆಯೇ ಎಂಬುದನ್ನು ಪ್ರತಿಬಿಂಬಿಸಿ ಕಡಿಮೆ ಪ್ರಯೋಜನವಾಗಿರುವ ಜಾತಿಗಳಿಗೆ ಇತರೆಯವರು ಪಡೆದ ಪ್ರಯೋಜನಕ್ಕೆ ಸಮನಾಗಿ ಸರಿದೂಗಿಸಲು ಏನು ಕ್ರಮ ಕೈಗೊಳ್ಳಬಹುದು ಎಂಬುದರ ಬಗ್ಗೆ ಸಲಹೆಗಳನ್ನು ನೀಡಬೇಕಾಗಿತ್ತು, ಆದರೆ ಆಯೋಗವು ಈ ಎಲ್ಲಾ ಅಂಶಗಳನ್ನು ಬದಿಗೊತ್ತಿ ಕೆಲವೇ ಉಪಜಾತಿಯ ಜನರಿಗೆ ಅನುಕೂಲವಾಗುವಂತಹ ಶಿಫಾರಸ್ಸು ಮಾಡಿರುವುದು ನ್ಯಾಯ ಸಮ್ಮತವಾದ ವರದಿಯಲ್ಲವೆಂಬುದನ್ನು ಸ್ಪಷ್ಟ ಪಡಿಸುತ್ತದೆ ಎಂದರು.
ಮಾಜಿ.ಜಿ.ಪಂ.ಉಪಾಧ್ಯಕ್ಷೆ ಚಂಪಕಮಾಲಾ ಮಾತನಾಡಿ ಎ.ಜೆ.ಸದಾಶಿವ ಆಯೋಗದ ವರದಿಯು ಮೀಸಲಾತಿಯನ್ನು ಪ್ರಕಟಿಸಿರುವುದನ್ನು ನೋಡಿದರೆ ಈ ಆಯೋಗವು ಸರಿಯಾದ ಸಮೀಕ್ಷೆ ನಡೆಸದೆ ಸಿದ್ದಪಡಿಸಿರುವ ಅವೈಜ್ಞಾನಿಕವಾದ ವರದಿಯಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕು ಅಧಿಕ ಜನರು ಜಮಾಯಿಸಿದ್ದರು. ತಾ.ಬಂಜಾರ ಸೇವಾ ಸಂಘದ ಕಾರ್ಯದಶರ್ಿ ರಾಮಚಂದ್ರನಾಯ್ಕ ಮನವಿ ಪತ್ರವನ್ನು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರರವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾ.ಭೋವಿ ಸಮಾಜದ ಅಧ್ಯಕ್ಷ ಕೆ.ಕೆ.ಹನುಮಂತಯ್ಯ, ಕಾರ್ಯದಶರ್ಿ ತಿಮ್ಮಾಭೋವಿ, ತಾ.ಪಂ.ಸದಸ್ಯೆ ಚೇತನಗಂಗಾಧರ್,  ಗುರುವಯ್ಯ, ಚಂದ್ರಾನಾಯ್ಕ,  ಲಕ್ಷ್ಮೀನಾಯ್ಕ, ಮೋತಿನಾಯ್ಕ, ವೇದಮೂತರ್ಿ ಸೇರಿದಂತೆ ವಿವಿಧ ಸಮುದಾಯದವರು ಭಾಗವಹಿಸಿದರು.
ಗ್ರಾಮ ಸಹಾಯಕರ ಸಂಘದ ಪಾದಯಾತ್ರೆಗೆ ಬೆಂಬಲ
ಚಿಕ್ಕನಾಯಕನಹಳ್ಳಿ,ನ.5: ಗ್ರಾಮ ಸಹಾಯಕರುಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿದ್ದಗಂಗಾ ಮಠದಿಂದ ವಿಧಾನ ಸೌಧದವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು, ಈ ಯಾತ್ರೆಗೆ ತಾಲೂಕು ಗ್ರಾಮ ಸಹಾಯಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದ್ದಾರೆ.