Saturday, August 2, 2014


ಕ್ಷೀರಭಾಗ್ಯ ಯೋಜನೆ ಒಂದು ವರ್ಷ ಪೂರ್ಣ : ಸಂತಸ
ಚಿಕ್ಕನಾಯಕನಹಳ್ಳಿ,ಆ.01 : ಶಾಲೆಗಳಿಗೆ ಬರುವ ವಿದ್ಯಾಥರ್ಿಗಳ ಹಸಿವು ನೀಗಿಸಲು ಸಕರ್ಾರ ಹಮ್ಮಿಕೊಂಡಿರುವ ಕ್ಷೀರಭಾಗ್ಯ ಯೋಜನೆಗಾಗಿ ತುಮಕೂರು ಹಾಲು ಒಕ್ಕೂಟ ಚಿ.ನಾ.ಹಳ್ಳಿ ತಾಲ್ಲೂಕಿಗೆ ಒಂದು ದಿವಸಕ್ಕೆ 90ಸಾವಿರ ರೂ ನಷ್ಟು ಹಾಲಿನ ಪೌಡರ್ ನೀಡುತ್ತಿದೆ ಎಂದು ಜಿಲ್ಲಾ ಹಾಲು ಒಕ್ಕೂಟದ ನಿದರ್ೇಶಕ ಹಳೆಮನೆ ಶಿವನಂಜಪ್ಪ ಹೇಳಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲೆಯ ಆವರಣದಲ್ಲಿ ಸಕರ್ಾರ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕ್ಷೀರಭಾಗ್ಯ ಯೋಜನೆ ಆರಂಭವಾಗಿ ಒಂದು ವರ್ಷದ ಯಶಸ್ವಿ ಯೋಜನೆಯಲ್ಲಿ ಮಕ್ಕಳಿಗೆ ಹಾಲನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಕರ್ಾರ ಶಾಲಾ ವಿದ್ಯಾಥರ್ಿಗಳಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಕ್ಷೀರಭಾಗ್ಯ ಯೋಜನೆಯೂ ಒಂದು ಉತ್ತಮ ಯೋಜನೆಯಾಗಿದೆ, ಈ ಯೋಜನೆಯು ವಾರದಲ್ಲಿ ಮೂರು ದಿನಗಳ ಕಾಲ ಹಾಲನ್ನು ನೀಡಲಿದ್ದು ತಾಲ್ಲೂಕಿನ 367 ಶಾಲೆಗಳ 18569 ಮಕ್ಕಳಲ್ಲಿ ಪ್ರತಿ ವಿದ್ಯಾಥರ್ಿಗೆ 150 ಎಂ.ಎಲ್ ಹಾಲನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಕ್ಷೀರಭಾಗ್ಯ ಯೋಜನೆಯು ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮವಾಗಿದ್ದು, ಶಾಲೆಯಲ್ಲಿಯೇ ಮಕ್ಕಳಿಗೆ ಉತ್ತಮ ಹಾಲನ್ನು ನೀಡುವುದರಿಂದ ಮಕ್ಕಳ ಮಾನಸಿಕ, ಭೌಧ್ದಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ, ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದರಲ್ಲದೆ ಕ್ಷೀರಭಾಗ್ಯ ಯೋಜನೆಯಿಂದ ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಾಗಿ ಹಾಜರಾತಿ ಗುಣಮಟ್ಟವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತುಮಕೂರು ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಯರಗುಂಟಪ್ಪ, ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಆರ್.ನಾಗರಾಜು ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.


ನೀರಿಗಾಗಿ ಪಟ್ಟಣದ 6ನೇ ವಾಡರ್್ ನಾಗರೀಕರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ.01 : ಕುಡಿಯುವ ನೀರಿಗಾಗಿ ಆಗ್ರಹಿಸಿ ಪಟ್ಟಣದ 6ನೇ ವಾಡರ್್ನ ಲಿಂಗಯ್ಯನಪಾಳ್ಯದ ನಾಗರೀಕರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕುಡಿಯುವ ನೀರು ಬರುತ್ತಿದ್ದ ಬೋರ್ ಕೆಟ್ಟು ಮೂರು ತಿಂಗಳಾಗಿದ್ದು ನೀರಿಗಾಗಿ ಬೇರೆಯರ ತೋಟಗಳ ಬೋರ್ಗಳಲ್ಲಿ ಕಾಡಿ ಬೇಡಿ ನೀರನ್ನು ತರಲಾಗುತ್ತಿತ್ತು ಆದರೆ ಇಷ್ಟು ದಿವಸ ಮಾನವೀಯತೆಯಿಂದ ನೀರು ಬಿಡುತ್ತಿದ್ದ ಅವರೂ ಈಗ ತೋಟಕ್ಕೆ ನೀರು ಬೇಕು ಎಂದು ಗೇಟ್ಗೆ ಬೀಗ ಹಾಕಿದ್ದಾರೆ,  ಇದರಿಂದ ವಾಡರ್್ನ ಜನತೆ ಹಾಗೂ ದನ ಕರುಗಳಿಗೂ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದರು.
ದಿನಕೂಲಿಗಾಗಿ ಕೆಲಸ ಮಾಡುವ ನಾವು ನೀರನ್ನು ತರುವುದಕ್ಕಾಗಿಯೇ ದಿನವನ್ನು ಮುಡುಪಾಗಿಟ್ಟರೆ ಆ ದಿನದ ನಮ್ಮ ಕೂಲಿಯೂ ಹೋಗುತ್ತದೆ ಎಂದರಲ್ಲದೆ ಪುರಸಭೆಯಿಂದ ನಮ್ಮ ವಾಡರ್್ಗೆ ಟ್ಯಾಂಕರ್ನಲ್ಲಿ ನೀರು ಬರುತ್ತಿದೆ, ಆದರೆ ಟ್ಯಾಂಕರ್ ನೀರು ರಾತ್ರಿ 12ರ ಸುಮಾರಿನಲ್ಲಿ ಅದರಲ್ಲೂ ಹದಿನೈದು ದಿನಕ್ಕೊಮ್ಮೆ ಬರುತ್ತದೆ, ಬಂದರೂ ಟ್ಯಾಂಕರ್ನಲ್ಲಿ ಬರುವ ನೀರು ಒಂದು ಮನೆಗೆ ಹತ್ತು ಬಿಂದಿಗೆಯಷ್ಟು ಮಾತ್ರ ದೊರಕುತ್ತಿದೆ ಈ ಬಗ್ಗೆ 6ನೇ ವಾಡರ್್ನ ಸದಸ್ಯೆ ಧರಣಿರವರಿಗೆ ತಿಳಿಸಿದರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಲಿಂಗಯ್ಯನಪಾಳ್ಯದ ಪುಟ್ಟಮ್ಮ ಪ್ರತಿಭಟನೆಯಲ್ಲಿ ಮಾತನಾಡಿ ಮೂರು ತಿಂಗಳಿನಿಂದಲೂ ನಾವು ನೀರಿಗಾಗಿ ಬೇರೆಯವರನ್ನು ಅವಲಂಬಿಸಬೇಕಾಗಿದೆ ಟ್ಯಾಂಕರ್ನಲ್ಲಿ ನೀರು ಸರಿಯಾಗಿ ಬರುತ್ತಿಲ್ಲ, ರಾತ್ರಿ ವೇಳೆಯಲ್ಲಿ ನೀರು ಕಳುಹಿಸಿದರೆ ಜನರು ನಿದ್ರಿಸುತ್ತಿರುತ್ತಾರೆ, ಟ್ಯಾಂಕರ್ನಲ್ಲಿ ನೀರು ಬಂದಿದೆ ಎಂದು ತಿಳಿದವರು ಮಾತ್ರ ನೀರನ್ನು ಪಡೆಯುತ್ತಿದ್ದಾರೆ ಆದ್ದರಿಂದ ದಿನಕ್ಕೊಮ್ಮೆ ಟ್ಯಾಂಕರ್ನಲ್ಲಿ ನೀರು ಕೊಡಿ ಇಲ್ಲವಾದರೆ ಕೆಟ್ಟಿರುವ ಬೋರ್ ಸರಿಪಡಿಸಿ ನೀರು ಕೊಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಲಕ್ಕಣ್ಣ, ಸಿದ್ದರಾಮಯ್ಯ, ನಿಂಗಣ್ಣ, ಗಂಗಾಧರ್, ರವಿ, ಶಿವಮ್ಮ, ನಾಗಮಣಿ ಸೇರಿದಂತೆ ಆರನೇ ವಾಡರ್್ನ ನಾಗರೀಕರು ಉಪಸ್ಥಿತರಿದ್ದರು.

 
ಸೋಲಾರ್ ಗ್ರಾಮವಾಗಿ ಕುಪ್ಪೂರು ಗ್ರಾಮದ ಬಾಚಿಹಳ್ಳಿ
ಚಿಕ್ಕನಾಯಕನಹಳ್ಳಿ,ಆ.01 : ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗ್ರಾಮದ ಬಾಚಿಹಳ್ಳಿಯನ್ನು ಸೋಲಾರ್ ಗ್ರಾಮವನ್ನಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘ ಪರಿವತರ್ಿಸಿದೆ. 
  ಬಾಚಿಹಳ್ಳಿಯಲ್ಲಿರುವ 45 ಕುಟುಂಬಗಳಲ್ಲಿ 40 ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದೆ .ಎಫ್.ಐ ಸೆಲ್ಕೋ ಸೋಲಾರ್ ಪ್ರೈವೆಟ್ ಲಿಮಿಟೆಡ್ ನಿಂದ ಸೋಲಾರ್ಗಳನ್ನು ಅಳವಡಿಸಲಾಗಿದ್ದು, ಕಂಪೆನಿಯವರು ಒಂದು ಕುಟುಂಬಕ್ಕೆ 1,300.ಅನುದಾನ ಒದಗಿಸಲಾಗಿದೆ. ಒಟ್ಟು 52,000.00 ಅನುದಾನ ನೀಡಲಾಗಿದೆ.
ಕಾರ್ಯಕ್ರಮವನ್ನು ಮೈಸೂರು ಧ.ಗ್ರಾ.ಯೋಜನೆಯ ಪ್ರಾದೇಶಿಕ ನಿದರ್ೆಶಕ ಶ್ರೀಹರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಚಿಹಳ್ಳಿ ಹಿರಿಯ ಮುಖಂಡರು ಜಯಣ್ಣ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ,   ತಾ.ಪಂ.ಸದಸ್ಯ ಶಶಿಧರ್, ಕುಪ್ಪೂರು 636ನೇ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಸ್.ಎಲ್ ಶಾಂತಕುಮಾರ್, ತುಮಕೂರು  ಜಿಲ್ಲಾ ನಿದರ್ೇಶಕ ಪಿ.ಕೆ.ಪುರುಷೋತ್ತಮ್, ಯೋಜನಾಧಿಕಾರಿ ರೋಹಿತಾಕ್ಷ, ಮೇಲ್ವಿಚಾರಕರಾದ ನಾಗರಾಜ್.ಎ.ಎಸ್, ಹೈನುಗಾರಿಕಾಧಿಕಾರಿ ಗೋಪಿ,  ಮತ್ತು ಬಾಚಿಹಳ್ಳಿಯ ಸೇವಾಪ್ರತಿನಿಧಿ  ಉಷಾ ಮತ್ತು ವಲಯದ ಎಲ್ಲಾ ಸೇವಾಪ್ರತಿನಿಧಿಗಳು, ಗ್ರಾಮಾಸ್ಥರು ಹಾಜರಿದ್ದರು. 

ಹಾಲು ಪರೀಕ್ಷಕನ ಮೇಲೆ ಹಲ್ಲೆ
ಚಿಕ್ಕನಾಯಕನಹಳ್ಳಿ,ಆ.01 : ಹಂದನಕೆರೆ ಹಾಲು ಉತ್ಪಾದಕ ಸಹಕಾರ ಸಂಘದ ಹಾಲು ಪರೀಕ್ಷಕನ ಮೇಲೆ ಸಂಘದ ಕಾರ್ಯದಶರ್ಿ ಹಾಗೂ ಅಧ್ಯಕ್ಷ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾಗಿರುವ ಶ್ರೀನಿವಾಸ್ (29), ಕಾರ್ಯದಶರ್ಿ ನಾಗರಾಜು, ಅಧ್ಯಕ್ಷ ಭಂಡಾರಿನಾಯ್ಕ್ ಮಾಡುವ ಅವ್ಯವಹಾರಗಳ ಬಗ್ಗೆ ಸಾರ್ವಜನಿಕರಿಕೆ ತಿಳಿಸುತ್ತಾನೆಂದು ರಜೆ ಮೇಲೆ ತೆರಳಿದ್ದು ಅಲ್ಲಿಂದ ಬಂದ  ನಂತರ ಕೆಲಸಕ್ಕೆ ಸೇರಿಸಿಕೊಳ್ಳುವ ವಿಚಾರಕ್ಕೆ ಸಂಬಂಧ ಪಟ್ಟಂತೆ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾಗಿರುವ ವ್ಯಕ್ತಿ ಶ್ರೀನಿವಾಸ್ ತಿಳಿಸಿದ್ದಾರೆ.
2009ರಿಂದಲೂ ಹಂದನಕೆರೆಯ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಾರ್ಯದಶರ್ಿ ನಾಗರಾಜು ರೈತರಿಗೆ ಹಾಲಿನ ಅಳತೆಯಲ್ಲಿ ನಡೆಸುತ್ತಿದ್ದ ಮೋಸವನ್ನು ರೈತರಿಗೆ ತಿಳಿಸಿದ ವಿಷಯಕ್ಕಾಗಿ ಶ್ರೀನಿವಾಸ್ನನ್ನು ಒಂದು ತಿಂಗಳ ಕಾಲ ಕೆಲಸದಿಂದ ತೆಗೆದು ಹಾಕಲಾಗಿತ್ತು ನಂತರ ಪುನಹ ಕೆಲಸಕ್ಕಾಗಿ ಕಛೇರಿಗೆ ಹೋದಾಗ ಮನಬಂದಂತೆ ತಳಿಸಿದ್ದಾರೆ, ಪರಿಶಿಷ್ಟ ಜಾತಿಯವನಾಗಿ ನಾನೊಬ್ಬನೇ ಇಲ್ಲಿ ಕೆಲಸ ಮಾಡುತ್ತಿದ್ದು ನನ್ನನ್ನು ಕೆಲಸದಿಂದ ತೆಗೆಯಬೇಕು ಎಂಬ ಉದ್ದೇಶವಿತ್ತು ಎಂದು ಪತ್ರಿಕೆಯ ಮುಂದೆ ಅಳಲು ತೋಡಿಕೊಂಡರು. ಹಲ್ಲೆಗೊಳಗಾದ ಶ್ರೀನಿವಾಸ್ ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ದಲಿತ ವ್ಯಕ್ತಿ ಎಂದು ಹಲ್ಲೆ ಮಾಡಿರುವುದಕ್ಕೆ ದಲಿತ ಮುಖಂಡರುಗಳಾದ ವಕೀಲ ಜಯಣ್ಣ, ಲಿಂಗದೇವರು, ಮಲ್ಲಿಕಾಜರ್ುನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.