Friday, September 17, 2010
ಡಾ.ಪುಟ್ಟರಾಜು ಗವಾಯುಗಳ ಲಿಂಗೈಕ್ಯಕ್ಕೆ ಕುಪ್ಪೂರು ಶ್ರೀಗಳ ಶೋಕ
ಚಿಕ್ಕನಾಯಕನಹಳ್ಳಿ,ಸೆ.17: ಗದಗದ ಡಾ.ಪುಟ್ಟರಾಜು ಗವಾಯುಗಳು ಇಹಲೋಕ ತ್ಯಜಿಸಿದ್ದರಿಂದ ಸಮಾಜಕ್ಕೆ ಹಾಗೂ ಸಂಗೀತ ಕ್ಷೇತ್ರಕ್ಕೆ ತೀವ್ರ ನಷ್ಟವಾಗಿದೆ ಎಂದು ಕುಪ್ಪೂರು ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.
ಅಂಧರ ಬಾಳಿನ ಬೆಳಕಾಗಿದ್ದ ಗವಾಯುಗಳು, ಈನಾಡಿನ ಸಾವಿರಾರು ಅಂಧರಿಗೆ ಬದಕನ್ನು ಕಲ್ಪಿಸಿಕೊಡುವ ಮೂಲಕ ಹೊರಗಣ್ಣಿಗಿಂತ ಒಳಗಣ್ಣು ಮುಖ್ಯ ಎಂಬುದನ್ನು ಸಾಧಿಸಿ ತೋರಿಸಿದರೆ ಎಂದಿದ್ದಾರಲ್ಲದೆ, ಗದಗದಲ್ಲಿನ ಮಠ ಹಾಗೂ ಸಮಾಜದ ಅಭಿವೃದ್ದಿಗಾಗಿ ಸಾಕಷ್ಟು ದುಡಿದಿದ್ದಾರೆ. ಭಕ್ತರಿಗೆ ಸನ್ಮಾರ್ಗವನ್ನು ಬೋಧಿಸುವ ಕೆಲಸಕ್ಕೆ ಸಂಗೀತವನ್ನು ದುಡಿಸಿಕೊಳ್ಳುವ ಮೂಲಕ ವಿಶಿಷ್ಟರೀತಿಯಲ್ಲಿ ತಮ್ಮ ಸೇವೆಯನ್ನು ಅಜರಾಮರಗೊಳಿಸಿದ್ದಾರೆ ಎಂದರು.
ಅವರ ಅಗಲಿಕೆ ಈ ನಾಡಿಗೆ ಹಾಗೂ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವೆನಿಸಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮುದ್ರೆ ಸಹಿತ ಯೋಗ ನಡಿಗೆ ಶಿಬಿರ
ಚಿಕ್ಕನಾಯಕನಹಳ್ಳಿ,ಸೆ.17: ನೇತಾಜಿ ಯೋಗ ಪ್ರತಿಷ್ಠಾನದ ವತಿಯಿಂದ ಮುದ್ರೆ ಸಹಿತ ಯೋಗ ನಡಿಗೆ ಶಿಬಿರ ಕಾರ್ಯಕ್ರಮವನ್ನು ಇದೇ 20ರ ಸೋಮವಾದಂದು ಬೆಳಗ್ಗೆ 6ಗಂಟೆಗೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ದೇಶಿಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ರೋಟರಿ, ಇನ್ನರ್ವೀಲ್ ಕ್ಲಬ್, ನಿವೃತ್ತ ನೌಕರರ ಸಂಘ ಮತ್ತು ತಾಲೂಕು ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದು ವಕೀಲ ಸಿ.ಕೆ.ಸೀತಾರಾಮಯ್ಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು ನೇತಾಜಿ ಯೋಗ ಪ್ರತಿಷ್ಠಾನ ಅಧ್ಯಕ್ಷ ಡಾ.ಜಿ.ಪ್ರಶಾಂತಕುಮಾರ್ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಮಾಧವರಾವ್ ಉಪಸ್ಥಿತರಿರುವರು.
ಎಸ್.ಡಿ.ಎಂ.ಸಿ.ಗೆ ಆಯ್ಕೆ
ಚಿಕ್ಕನಾಯಕನಹಳ್ಳಿ,ಸೆ.17: ತಾಲೂಕಿನ ಅರಳೀಕೆರೆ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೂತನ ಎಸ್.ಡಿ.ಎಂ.ಸಿ ಸಮಿತಿಯನ್ನು ರಚಿಸಲಾಗಿದೆ.
ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ರಾಜಶೇಖರಯ್ಯ, ಉಪಾಧ್ಯಕ್ಷರಾಗಿ ಶಿವಮ್ಮ ಎ.ಎಲ್, ಸದಸ್ಯ ಕಾರ್ಯದಶರ್ಿ ಶಾಲೆಯ ಎಚ್.ಎಂ, ಕೆ.ಎನ್.ಮೂಡ್ಲಯ್ಯ, ಸದಸ್ಯರಾಗಿ ಮಂಜುನಾಥ್, ಕುಮಾರಸ್ವಾಮಿ, ಚಂದ್ರಕಲಾ, ಕೆಂಪಯ್ಯ, ಲಕ್ಷ್ಮಯ್ಯ, ಸಿದ್ರಾಮಕ್ಕ, ಪ್ರಸನ್ನರವರು ನೂತನವಾಗಿ ಆಯ್ಕೆಯಾಗಿದ್ದಾರೆ.