Tuesday, October 30, 2012


ಅಲ್ಲಿದೆ ನಮ್ಮನೆ, ಇಲ್ಲಿರಿವೆ ಸುಮ್ಮನೆ: ಸಚಿವ ಪುಟ್ಟಸ್ವಾಮಿ
ಚಿಕ್ಕನಾಯಕನಹಳ್ಳಿ,ಅ.30 : ಯಡಿಯೂರಪ್ಪ ನಮ್ಮ ನಾಯಕರು, ಅವರು ಎಲ್ಲಿರುತ್ತಾರೋ ನಾನು ಅಲ್ಲಿರುತ್ತೇನೆ, ಜಗದೀಶ್ ಶೆಟ್ಟರ್ ನಮಗೆ ಸಭಾ ನಾಯಕರು ಅವರ ಕ್ಯಾಬಿನೇಟ್ನಲ್ಲಿರುವವರೆಗೆ ಮಾತ್ರ ನಾನು ಅವರಿಗೆ ನಿಷ್ಠನಾಗಿರುತ್ತೇನೆ ಎಂದು ಸಹಕಾರ ಸಚಿವ ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಯಡಿಯೂರಪ್ಪನವರ ಅಭಿಮಾನಿ, 24 ವರ್ಷಗಳಿಂದ ರಾಜಕೀಯವಾಗಿ ಅಜ್ಞಾತವಾಸವಾಗಿದ್ದ ನನ್ನನ್ನು ಮುಖ್ಯವಾಹಿನಿಗೆ ತರುವುದಷ್ಟೇ ಅಲ್ಲ, ನನ್ನ ಗಾಣಿಗ ಸಮಾಜ ಎಂದು ಮರೆಯಲಾರದಷ್ಟು ಸಹಾಯ ಮಾಡಿದ್ದಾರೆ, ಬೆಂಗಳೂರಿನಲ್ಲಿ 10 ಎಕರೆ ಜಾಗವನ್ನು ಕೊಟ್ಟಿದ್ದಾರೆ ಅದು ಈಗ 150 ಕೋಟಿ ರೂಗಳಷ್ಟು ಬೆಲೆ ಬಾಳುವಂತಹ ಜಾಗ ಎಂದ ಅವರು, ಸಮಾಜದ ಅಭಿವೃದ್ದಿಗಾಗಿ 5 ಕೋಟಿ ರೂಗಳಷ್ಟು ಹಣವನ್ನು ನೀಡಿದ್ದಾರೆ, ನಮ್ಮ ಸಮಾಜ ಅಲ್ಲೊಂದು ಗುರುಪೀಠವನ್ನು ಸ್ಥಾಪಿಸಿ, ಶಾಲೆಗಳನ್ನು ತೆರೆಯುವುದಲ್ಲದೆ, ವಿದ್ಯಾಥರ್ಿಗಳಿಗೆ ವಸತಿ ನಿಲಯವನ್ನು ಪ್ರಾರಂಭಿಸುವುದಾಗಿ ತಿಳಿಸಿದರು. ನಮ್ಮ ಸಮಾಜದ ಹೆಸರನ್ನು ಹೇಳಿಕೊಂಡ ವೈಯಕ್ತಿಕ ಲಾಭ ಮಾಡಿಕೊಂಡ ಸುದರ್ಶನ್, ದೊಡ್ಡ ಮಟ್ಟದ  ಒಂದು ಸಮಾವೇಶವನ್ನು ಮಾಡಲಿಲ್ಲ ಎಂದರಲ್ಲದೆ, ಗಾಣಿಗ ಸಮಾಜ ಇತಿಹಾಸದಲ್ಲೇ ಕಂಡರಿಯದಷ್ಟು ಸಹಕಾರವನ್ನು ನೀಡಿರುವ ಯಡಿಯೂರಪ್ಪನವರನ್ನು ಸದಾ ಸ್ಮರಿಸುತ್ತದೆ ಎಂದರು.
ದೊಡ್ಡವರು ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಿ:  ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಬಡ್ಡಿ ಇಲ್ಲದಂತೆ ಸಾಲ ನೀಡುತ್ತಿರುವುದನ್ನು ಇತರರು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಎಲ್ಲಾ ರೈತರು ಸಹಕಾರ ಕ್ಷೇತ್ರದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು  
ಇತ್ತೀಚೆಗೆ ಸಕರ್ಾರ ರೈತರು ಪಡೆದಿದ್ದ 25ಸಾವಿರ ಸಾಲವನ್ನು ಮನ್ನಾ ಮಾಡಿದೆ ಆದರೆ ಇದರಿಂದ ತೀರ ಹಿಂದುಳಿದ, ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಯಾವ ಉಪಯೋಗವೂ ಆಗಿಲ್ಲ ಎಂದರಲ್ಲದೆ ಈಗ ನೀಡುವ ಬಡ್ಡಿ ರಹಿತ ಸಾಲದ ಅನಕೂಲವನ್ನು ನಿಜವಾದ ಫಲಾನುಭವಿಗಳು ಪಡೆದುಕೊಳ್ಳಲು ಸದಸ್ಯತ್ವ ಪಡೆದುಕೊಳ್ಳಬೇಕೆಂದು ತಿಳಿಸಿದ ಅವರು 10 ಗುಂಟೆ ಜಮೀನು ಪಡೆದಿರುವ ಎಲ್ಲರು ರೈತ ಸಹಕಾರ ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಹಾಗೂ ಇದರಿಂದ ಫಲಾನುಭವಿಗಳು ಸಾಲ ಪಡೆಯಬಹುದು ಎಂದರಲ್ಲದೆ, ಸಣ್ಣ ಹಿಡುವಳಿದಾರರಿಗೆ  ಸಾಲ ಕೊಡದಿದ್ದರೆ ನನಗೆ ದೂರವಾಣಿ ಮೂಲಕ ತಿಳಿಸಿ ಎಂದರು.
ಸಹಕಾರ ಇಲಾಖೆ ಬಡವರ ಪರವಾಗಿದೆ ಸಹಕಾರ ಬ್ಯಾಂಕ್ಗಳಲ್ಲಿ  ಸಾಲ ಪಡೆಯದವರು ಮೊದಲ ಸಂಘದ ಸದಸ್ಯರಾಗಿ ಎಂದ ಅವರು, ಯಾರಿಗೆ ಜಮೀನು ಇರುವುದಿಲ್ಲ ಅಂತಹವರು ಹೈನುಗಾರಿಕೆಗೆ ಮುಂದಾಗಿ ಅಂತಹವರಿಗೆ ಜಿಲ್ಲಾ ಕೋ ಆಪರೇಟಿವ್ನಿಂದ ಸಹಾಯ ಸಿಗಲಿದೆ ಎಂದರು.
ಈಗಾಗಲೇ ಹೈನುಗಾರಿಕೆಯ ಮೂಲಕ ಹಾಲಿನ ಉತ್ಪಾದನೆಯಲ್ಲಿ ತೊಡಗಿರುವವರಿಗೆ ನೇರವಾಗಿ ಪ್ರತಿ ವಾರ ಸಂಬಳ ಸಿಗುತ್ತಿದೆ, 2006-07ರಲ್ಲಿ ಹಾಲಿಗೆ 8.5ರೂ ಇತ್ತು 2012ರಲ್ಲಿ 22.5ರೂ ಆಗಿದ್ದು ಇದರಲ್ಲಿ ನೇರವಾಗಿ ರೈತರಿಗೆ 19.5ರೂ ಸಿಗುತ್ತಿದೆ ಅಲ್ಲದೆ 2ರೂ ಸಬ್ಸಿಡಿ ಹಣವಾಗಿ ಯಡಿಯೂರಪ್ಪನವರು ನೀಡಿದ್ದಾರೆ ಇದರ ಪರಿಣಾಮ ಜಮೀನು ಇಲ್ಲದವರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ಆಥರ್ಿಕವಾಗಿ ಸುಧಾರಿಸುತ್ತಿದ್ದಾರೆ ಎಂದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಹಕಾರಿ ಮುಖಂಡ ಸಿಂಗದಹಳ್ಳಿ ರಾಜ್ಕುಮಾರ್, ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರೇವಣ್ಣ ಶೆಟ್ಟಿ, ಗಾಣಿಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಮುದ್ದವೀರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.