Monday, May 13, 2013



ಬೆಂಕಿಗಾಹುತಿಯಾದ ಕಾಯಿ, ಕೊಬ್ಬರಿ
ಚಿಕ್ಕನಾಯಕನಹಳ್ಳಿ,ಮೇ.13 : ತಾಲೂಕಿನ ಅಣೆಕಟ್ಟೆಯ ಶಿವಣ್ಣ ಎಂಬವರ ತೋಟದಲ್ಲಿ ಸಂಗ್ರಹಿಸಲಾಗಿದ್ದ ತೆಂಗಿನ ಕಾಯಿ ಹಾಗೂ ಕೊಬ್ಬರಿಗೆ ಬೆಂಕಿ ಬಿದ್ದರಿಂದ ಸುಮಾರು ಒಂದುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ಕಾಯಿ, ಕೊಬ್ಬರಿ ಬೆಂಕಿಗೆ ಆಹುತಿಯಾಗಿದೆ.
ಸೋಮವಾರ ಮಧ್ಯಾಹ್ನ 1.30ರ ಸುಮಾರಿನಲ್ಲಿ ತೊಟದಲ್ಲಿ ತೆರೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಕಾಯಿ-ಕೊಬ್ಬರಿ ರಾಶಿಗೆ ಬೆಂಕಿ ಕಾಣಿಸಿಕೊಂಡಿದೆ, ಸುತ್ತ ಮುತ್ತಲಿನ ತೋಟದವರು ಹಾಗೂ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಬೆಂಕಿ ಹತೋಟಿಗೆ ಬರಲಿಲ್ಲ ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲವಾಯಿತು. 
ರೋಗಗಳ ಭರಾಟೆಯಲ್ಲಿ ತತ್ತರಿಸಿರುವ ತೆಂಗಿನ ಬೆಳೆಗಾರರಿಗೆ, ಬರದ ಬರೆ, ವೈಜ್ಞಾನಿಕ ಬೆಲೆಯಿಲ್ಲದೆ, ಬರದಾಡುತ್ತಿರುವ ಜೊತೆಗೆ ಮಳೆಗಾಳಿಯಂತಹ ಪ್ರಾಕೃತಿಕ ಮುನಿಸು ಜೊತೆಗೆ ಅಗ್ನಿ ಹಾವುತಿ ಇಂತಹ ಘಟನೆಗಳಿಂದ  ರೈತರ ಬದುಕು ಅತಂತ್ರವಾಗಿದೆ, ಇಂತಹ  ಅವಘಡಗಳಿಗೆಲ್ಲಾ ಪರಿಹಾರವನ್ನು  ನೀಡಲು ಸಕರ್ಾರ ಚಿಂತನೆ ನಡೆಸಬೇಕೆಂದು ಪಿ.ಎಲ್.ಡಿ.ಬ್ಯಾಂಕ್ ನಿದರ್ೇಶಕ ಎಂ.ಬಿ.ನಾಗರಾಜ್ ಒತ್ತಾಯಿಸಿದ್ದಾರೆ.