Thursday, August 14, 2014


 ಹೊಯ್ಸಳರ ಕಾಲದ ಶಿಲ್ಪಕಲೆಗಳ ಸೌಂದರ್ಯ ಶೆಟ್ಟಿಕೆರೆಯಲ್ಲಿನ ಯೋಗಮಾಧವನಂದಸ್ವಾಮಿ ದೇವಾಲಯದಲ್ಲಿ
  ]

 ಚಿಕ್ಕನಾಯಕನಹಳ್ಳಿ : ಹೊಯ್ಸಳರ ಕಾಲದ ಶಿಲ್ಪಕಲೆಗಳ ಸೌಂದರ್ಯವನ್ನು ವೀಕ್ಷಿಸಲು ಬೇಲೂರು, ಹಳೇಬೀಡು ಪ್ರವಾಸ ತಾಣಗಳಿಗೆ ತೆರಳಿದಾಗ ಸಿಗುವ ಶಿಲ್ಪಕಲೆಗಳ ಸೊಬಗು ತಾಲ್ಲೂಕಿನ ಶೆಟ್ಟಿಕೆರೆಯಲ್ಲಿನ ಯೋಗಮಾಧವನಂದಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದಾಗಲೂ ಶಿಲ್ಪಕಲೆಗಳ ಕಲಾತ್ಮಕತೆ ಪ್ರವಾಸಿಗರಿಗೆ ದೊರೆಯುತ್ತದೆ.
    ಶೆಟ್ಟಿಕೆರೆಯ ಈ ದೇವಾಲಯವು     1262ನೇ ಇಸವಿಯಲ್ಲಿ ಹೊಯ್ಸಳರ ದೊರೆಯಾದ ಮೂರನೇ ನರಸಿಂಹ ಬಲ್ಲಾಳನ ಮಂತ್ರಿಯಾದ ಗೋಪಾಲ ದಂಡನಾಯಕ ಈ ದೇವಾಲಯ ನಿಮರ್ಿಸಿದ್ದನೆಂದು ತಿಳಿದು ಬಂದಿದ್ದು, ಆಗಿನ ಶ್ರೀಭರತ ಪ್ರಕಾಶ ಪುರಿ ಎಂಬ (ಈಗಿನ ಶೆಟ್ಟಿಕೆರೆ) ಊರಿನ ಅಗ್ರಹಾರದಲ್ಲಿ ದೇವಾಲಯ ನಿಮರ್ಿತವಾಗಿತ್ತು.
    ಈ ಯೋಗಮಾಧವ ದೇವಾಲಯ ಕಳೆದ ಕೆಲ ದಶಕದ ಹಿಂದೆ ಶಿಥಿಲಗೊಂಡಿತ್ತು, ದೇವಸ್ಥಾನದ ಜೀಣೋಧ್ದಾರಕ್ಕಾಗಿ ಹದಿಮೂರನೇ ಹಣಕಾಸಿನ ಯೋಜನೆ ಅಡಿಯಲ್ಲಿ ಒಂದು ಕೋಟಿ ಮೂವತ್ತೆರಡು ಲಕ್ಷರೂಗಳ ವೆಚ್ಚ ಬಿಡುಗಡೆಯಾಗಿ ದೇವಾಲಯದ ಜೀಣೋದ್ದಾರ ಕಾಮಗಾರಿ ಪೂರ್ಣಗೊಂಡು ಇದೇ ತಿಂಗಳ ಆಗಸ್ಟ್ 14 ಮತ್ತು 15ರಂದು ಪುನರ್ ನಿಮರ್ಾಣ ಪ್ರಯುಕ್ತ ಪುನರ್ ಪ್ರತಿಷ್ಠಾಪನೆ ನಡೆಯಲಿದೆ.
    ಶಿಥಿಲಗೊಂಡಿದ್ದ ಸಮಯದಲ್ಲಿ ದೇವಾಲಯದ ಒಳಭಾಗದಲ್ಲಿ ಗಾಳಿ-ಬೆಳಕು ಇಲ್ಲದೆ ಪೂರ್ಣ ಕತ್ತಲೆಯಿಂದ ಕೂಡಿತ್ತು, ಜೀಣರ್ೋದ್ದಾರವಾದ ನಂತರ ದೇವಸ್ಥಾನಕ್ಕೆ ವಿದ್ಯುದೀಪಾಲಂಕರವನ್ನು ಮಾಡಿಸಿದ್ದಾರೆ, ಒಳ ಹಾಗೂ ಹೊರಭಾಗದಲ್ಲಿ ಸುಂದರವಾಗಿ ಕೆತ್ತನೆಯನ್ನು ಪೂರ್ಣಗೊಳಿಸಿದ್ದಾರೆ.


        ಯೋಗಮಾಧವ ದೇವಾಲಯದ ಹಿನ್ನಲೆ ಮತ್ತು ವಿಶೇಷ :
    ಶೆಟ್ಟಿಕೆರೆ ಊರಿನ ಪಡುವಣಕ್ಕೆ ಹೊಯ್ಸಳರ ಭುಜಬಲ ವೀರಸಿಂಹನ ಕಾಲದಲ್ಲಿ ಪೂವರ್ಾಭಿಮುಖವಾಗಿ ನಿಮರ್ಿಸಲಾಗಿರುವ ದೇವಾಲಯವು ವಾಸ್ತು ವೈಖರಿ ಶಿಲ್ಪಾಲಂಕರಾದಿಂದ ಮತ್ತು ಪ್ರಧಾನವಾಗಿ ನಕ್ಷತ್ರ ಹಾಗೂ ಕಮಲ ಸಮ್ಮಿಶ್ರ ವಿನ್ಯಾಸದಲ್ಲಿ ರೂಪುಗೊಂಡಿದೆ, ದೇವಾಲಯದ ಹೊರಗಿನ ಪ್ರಕಾರ ಮಹಾದ್ವಾರ ಮಂಟಪ ಮತ್ತು ಹೊರವಲಯ ದ್ವಾರದ ಎದುರು ಗರುಡ ಸ್ತಂಭ ವಿಜಯನಗರ ಪಾಳೇಗಾರನ ಕಾಲದಲ್ಲಿನ ಡ್ರಾವಿಡ ಶೈಲಿಯಲ್ಲಿ ನಿಮರ್ಿತವಾಗಿದೆ.  
    ಮಹಾದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿದರೆ ಮೊದಲು ಸಿಗುವುದು ಹೊರ ನವರಂಗದ ಪೂರ್ವ ದ್ವಾರದ ನೈರುತ್ಯ ಮೂಲೆಯಲ್ಲಿ ಒಂದು ಕೋಣೆಯನ್ನು ಜೋಡಿಸಿ ಅದರಲ್ಲಿ ದುಗರ್ಾದೇವಿಯನ್ನು ಪ್ರತಿಷ್ಠಾಪಿಸಲಾಗಿದೆ.
    ದಕ್ಷಿಣ ಗರ್ಭಗುಡಿಯಲ್ಲಿ ಕೊಳಲು ಗೋಪಾಲ, ಉತ್ತರ ಗರ್ಭಗುಡಿಯಲ್ಲಿ ಲಕ್ಷ್ಮೀನಾರಾಯನ ದಂಪತಿಗಳ ಸುಂದರ ವಿಗ್ರಹಗಳು ಹಾಗೂ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ.
 ದೇವಸ್ಥಾನದ ಪ್ರಧಾನವಾದ ಮೂಲದೇವರು ಯೋಗಮಾಧವನ ಗರ್ಭಗುಡಿಯು ಬಾಗಿಲು ವೈಷ್ಣವ ದ್ವಾರಪಾಲಕರಿಂದ ಅಲಂಕೃಗೊಂಡು ಗರ್ಭಗುಡಿಯಲ್ಲಿನ ಯೋಗ ಮಾಧವನ ಶಿಲಾವಿಗ್ರಹವನ್ನು ಗರಡ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಯೋಗನಾಥ ಅತ್ಯಂತ ಶಾಂತಿ ಹಾಗೂ ಅಪರೂಪದ ಶಿಲಾ ಮೂತರ್ಿಯಾಗಿದೆ.
    ಯೋಗಮಾಧವ ಚತುಭರ್ುಜ ಹೊಂದಿದ್ದು ಪದ್ಮಾಸನ ಅಥವಾ ಬ್ರ್ರಹ್ಮಾಸನದಲ್ಲಿ ಕುಳಿತಿದ್ದಾನೆ, ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದು, ಮುಂದಿನ ಕೈಯಲ್ಲಿ ಬಲಹಸ್ತದ ಮೇಲೆ ಎಡಹಸ್ತವನ್ನಿಟ್ಟು ಯೋಗಮುದ್ರೆಯಿಂದ ಸೂಚಿತವಾಗಿದೆ. ಮಾಧವ ಧ್ಯಾನ ಮುದ್ರೆಯಲ್ಲೂ ಆಯುಧ ದಾರಿಯಾಗಿರುವುದು ಇಲ್ಲಿ ಸ್ವಾರಸ್ಯಕರವಾಗಿದೆ, ಯೋಗಶಾಸ್ತ್ರ ತಿಳಿಸುವಂತೆ ಪ್ರತಿಬಿಂಬಿಸುವ ನೇತ್ರಗಳು, ನಾಸಿಕಾಗ್ರಹದಲ್ಲಿ ತೋರದೆ ಪೂರ್ಣತೆರೆದು ಎದುರು ನೋಟದಲ್ಲಿ ದಿಟ್ಟಭಾವವನ್ನು ಸೂಚಿಸುವಂತಿದೆ.
    ಅಗ್ರಹಾರದ ಮೂವತ್ತೇಳು ಪ್ರಕಾರವನ್ನು ಒಡಂಬಡಿಸಿ ದೇವಸ್ಥಾನವನ್ನು ನಡೆಸಲೆಂದು ಸಾಕಷ್ಟು ವ್ಯವಸ್ಥೆ ಮಾಡಿದನೆಂಬ ಇತಿಹಾಸ ಪುಟದಲ್ಲಿ ಉಲ್ಲೇಖಿಸಿದ್ದಾರೆ, ದೇವಸ್ಥಾನದ ನಿಮರ್ಾಣದ ಶಿಲ್ಪಕಲೆಗಳ ಕೆತ್ತನೆಗೆ ಬಳಪದ ಕಲ್ಲುಗಳನ್ನು ಬಳಸಲಾಗಿದೆ.

ಶೈಲಿ : ದೇವಾಲಯವು ಡ್ರಾವಿಡ ವೇಸರ ಶೈಲಿಯನ್ನು ಒಳಗೊಂಡಿದ್ದು ನಕ್ಷತ್ರಾಕಾರದ ಜಗತಿಯನ್ನು ಒಳಗೊಂಡಿದೆ, ದೇವಾಲಯವು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿದೆ, ಮೂಲ ದೇವರ ಮೂತರ್ಿಯಿರುವ ಜಾಗ ಗರ್ಭಗೃಹ, ನಂತರದ ಸ್ಥಳ ಶುಕನಾಸಿ ಅಥವಾ ಅಂತರಾಳ, ಮೂರನೆಯದು ನವರಂಗ ಅಥವಾ ಸಭಾಮಂಟಪ, ನಾಲ್ಕನೆಯದು ವಾಹನ ಮಂಟಪ, ಗರ್ಭಗುಡಿಯಲ್ಲಿ ಮೂಲವಿಗ್ರಹ, ಅಂತರಾಳ ಅಥವಾ ಶುಕನಾಸಿಯು ವಿಶೇಷ ಪ್ರಾರ್ಥನೆಗೆ ರಾಜರಿಗೆ, ದೇವಾಲಯಕ್ಕೆ ಸಂಬಂಧಪಟ್ಟ ಧಾಮರ್ಿಕ ಅಧಿಕಾರಿಗಳು ಪ್ರಾರ್ಥನೆ ಸಲ್ಲಿಸಲು ಮತ್ತು ಉತ್ಸವ ದೇವರುಗಳನ್ನು ಇಟ್ಟು ಪೂಜಿಸುವ ಸ್ಥಳ, ಸಭಾಮಂಟಪ ಅಥವಾ ನವರಂಗವು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರುತ್ತದೆ, ನವರಂಗ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು, ವಿಶೇಷ ಸಭೆಗಳನ್ನು ನಡಸುವುದಕ್ಕಾಗಿ ರಚನೆಯಾಗಿದೆ, ವಾಹನ ಮಂಟಪದಲ್ಲಿ ಸಂಬಂಧಿಸಿದ ದೇವರ ವಾಹನವನ್ನು ಕೆತ್ತಲಾಗಿದೆ.
    ದೇವಾಲಯದ ಪುನರ್ ಪ್ರತಿಷ್ಠಾಪನಾ ಮಹೋತ್ಸವ :  14ರ ಗುರುವಾರ ಗಂಗಾಪೂಜೆ, ಪುಣ್ಯಾಹ, ದೇವನಾಂದಿ, ಕಳಶ ಸ್ಥಾಪನೆ, ಗಣಪತಿ, ನವಗ್ರಹ, ಮೃತ್ಯುಂಜಯ, ಲಕ್ಷ್ಮಿನಾರಾಯಣ ಹೋಮಗಳು ನಂತರ ಮಂಗಳಾರತಿ ವಾಸ್ತುಪೂಜೆ, ರಾಮೋಘ್ಮ ಹೋಮ, ಬಲಿ ಪ್ರಧಾನ, ಕದಳಿ ಛೇದನ, ಸೂತ್ರ ಬಂಧನ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಾಗಲಿದೆ. ಪ್ರಾತಃಕಾಲ ನೇತ್ರೋನ್ಮಿಲನ, ಕಳಾಹೋಮ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಡೆಯಲಿದೆ. ಸಂಜೆ 4ಕ್ಕೆ ಶ್ರೀ ಕಾಲಭೈರವೇಶ್ವರಸ್ವಾಮಿ, ಶ್ರೀ ಕೆಂಪಮ್ಮದೇವರು, ಶ್ರೀ ಧರ್ಮರಾಯಸ್ವಾಮಿ ದೇವರುಗಳ ಆಗಮನವಾಗಲಿದೆ.
    15ರ ಮಧ್ಯಾಹ್ನ ಶ್ರೀ ಯೋಗಮಾಧ್ವಸ್ವಾಮಿ ದೇವಾಲಯದಲ್ಲಿ ನೆಲೆಸಿರುವ ದೇವರುಗಳ ಪುನರ್ ಪ್ರತಿಷ್ಠಾಪನೆ, 12ಕ್ಕೆ ಪೂಣರ್ಾಹುತಿ ನಂತರ ಕಳಶ ಸ್ಥಾಪನೆ, ಕುಂಭಾಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 6ಕ್ಕೆ ಶ್ರೀ ಕಾಲಭೈರವಸ್ವಾಮಿ, ಶ್ರೀ ಕೆಂಪಮ್ಮದೇವರು ಮತ್ತು ಶ್ರೀ ಧರ್ಮರಾಯಸ್ವಾಮಿ ದೇವರುಗಳ ಉತ್ಸವವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮದ್ದಿನ ಸೇವೆ, ಕಪರ್ೂರದ ಸೇವೆಗಳೊಂದಿಗೆ ನಡೆಯಲಿದೆ.


ತಪ್ಪಿಗೆ ತಕ್ಕ ಶಾಸ್ತಿ ಎಂಬಂತೆ, ಅನ್ನ ನೀರು ಬಿಟ್ಟು ಬೀದಿ ಪಾಲಾಗಿರುವ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್.
ಚಿಕ್ಕನಾಯಕನಹಳ್ಳಿ,: ಕಟ್ಟಿಕೊಂಡ ಹೆಂಡ್ತೀರನ್ನು ಬಿಟ್ಟು ಇಟ್ಕೊಂಡೋಳ ಹಿಂದೆ ಬಿದ್ದ ಪರಿಣಾಮ  ಇದ್ದಬದ್ದ ಆಸ್ತಿ ಅಡವುಗಳನ್ನೇಲ್ಲಾ ದೋಚಿಕೊಂಡು ಕೊನೆಗೆ ಲಕ್ವ ಹೊಡೆದಿರುವ ವ್ಯಕ್ತಿಯನ್ನು ಬಸ್ಸ್ಟಾಂಡ್ನಲ್ಲಿ ಎಸೆದು ಹೋಗಿರುವ ಕರುಣಾಜನಕ ಸ್ಥಿತಿ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೆದಾರ್ ಒಬ್ಬರಿಗೆ ಒದಗಿಬಂದಿದೆ.
    ಈತನ ಸ್ಥಿತಿ ನೋಡಿದರೆ ಶತ್ರುವಿಗೂ ಬೇಡ ಎನ್ನಿಸುತ್ತದೆ, ಪಟ್ಟಣದ ಖಾಸಗಿ ಬಸ್ಸ್ಟಾಂಡ್ನಲ್ಲಿ ಕಳೆದ ಹತ್ತು ದಿನಗಳಿಂದ ಅನ್ನ ನೀರು ಇಲ್ಲದೆ ಜೀವಂತ ಶವದಂತೆ ಬಿದ್ದಿರುವ ಲಕ್ಕಣ್ಣ ಎಂಬಾತ ಒಂದು ಕಾಲಕ್ಕೆ ಚಿ.ನಾ.ಹಳ್ಳಿ, ಗುಬ್ಬಿ, ತುರುವೇಕೆರೆಯ ನ್ಯಾಯಾಲಯಗಳಲ್ಲಿ ಶಿರಸ್ತೆದಾರ್ ಆಗಿ ಕರ್ತವ್ಯ ನಿರ್ವಹಿಸಿದವರು. ಆದರೆ ಇಂದು ಬೀದಿ ಬಿಕಾರಿಯಂತಾಗಿದ್ದಾರೆ.
    ಹಾಗೆ ನೋಡಿದರೆ ಇವರು ದವರ್ೇಸಿಯೂ ಅಲ್ಲ, ಬೇವಸರ್ಿಯೂ ಅಲ್ಲ ಆದರೆ ಸ್ವಯಂಕೃತ ಅಪರಾಧ, ಎಲ್ಲಾ ಇದ್ದು ಏನೂ ಇಲ್ಲದೆ ಸಾಯುವ ಕಾಲದಲ್ಲಿ ತನ್ನವರೆನ್ನಲೂ ಯಾರೂ ಇಲ್ಲದ ಸ್ಥಿತಿಗೆ ತಲುಪಿದ್ದಾರೆ. ಇವರು ಈ ಸ್ಥಿತಿಗೆ ಕಾರಣ ತಾನೇ ಮಾಡಿಕೊಂಡ ಯಡವಟ್ಟುಗಳು,  ಹಾಗಾಗಿ ತಾನು ಮಾಡಿರುವ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ ಎಂದು,  ಅನ್ನ ನೀರು ಸೇವೆಸದೆ ಸಾಯಬೇಕು ಎನ್ನುವ ಹಠಕ್ಕೆ ಬಿದ್ದವರಂತೆ, ಬಸ್ಸ್ಟಾಂಡ್ನಲ್ಲಿ ಕಳೆದ ಹತ್ತು ದಿನಗಳಿಂದ ಮಲಗಿದ್ದ ಸ್ಥಳದಲ್ಲೇ ಮಲಗಿದ್ದಾರೆ, ಆ ಸ್ಥಳವನ್ನು ಬಿಟ್ಟು ಕಿಂಚಿತ್ತೂ ಕದಲಿಲ್ಲ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ, ಅವರ ಆ ಸ್ಥಿತಿಯನ್ನು ನೋಡಿ, ಜನ ತಿನ್ನಲು ಏನೂ ಕೊಟ್ಟರು ಸ್ವೀಕರಿಸೋದಿಲ್ಲ. ಇಡೀ ಹತ್ತು ದಿನಗಳಲ್ಲಿ ಒಮ್ಮೆ ಮಾತ್ರ ನೀರು ಎಂದು ಕನವರಿಸಿರುವುದು ಬಿಟ್ಟು  ಬೇರೇನನ್ನೂ ಮಾತನಾಡಿಲ್ಲ. ಇಂತಹ ಲಕ್ಕಣ್ಣ ನಾಲ್ಕು ಮನೆಯ ಒಡೆಯ, ಐದಾರು ಎಕರೆ ಜಮೀನು ಇದ್ದವ, ತಿಂಗಳಿಗೆ ಇಪ್ಪತ್ತು ಸಾವಿರದ ವರೆಗೂ ಪೆನ್ಷ್ನ್ ಪಡೆಯುವ ಈತ ಈಗ ಬೀದಿ ಪಾಲು.
ಈ ಸ್ಥತಿಗೆ ಬರಲು ಕಾರಣ: ಈತನಿಗೆ ಇಬ್ಬರು ಪತ್ನಿಯರಿದ್ದರು, ಅದರಲ್ಲಿ ಒಬಾಕೆ ವೃತ್ತಿಯಲ್ಲಿ ನಸರ್್ ಆಗಿದ್ದವರು, ನಸರ್್ನ ತಂಗಿಯನ್ನೇ ಎರಡನೇ ಮದುವೆಯಾಗಿದ್ದರು, ಈ ಸಂಸಾರಕ್ಕೆ ಒಬ್ಬ ಮಗನೂ ಇದ್ದಾನೆ, ಆತ ಗೋವಾದಲ್ಲಿ ಸಾಫ್ಟ್ವೇರ್ ಇಂಜಿನಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ, ಆದರೆ ಇವರ ಸಂಬಂಧವನ್ನು ದಶಕಗಳ ಹಿಂದಯೇ ಕಡಿದುಕೊಂಡಿರುವ ಈತ,  ಅವರತ್ತ ಕಣ್ಣೇತ್ತೂ ನೋಡಲಿಲ್ಲ. ಕುಣಿಗಲ್ ಕಡೆಯ ಮಹಿಳೆಯೊಂದಿಗೆ ಚಿ.ನಾ.ಹಳ್ಳಿಯಲ್ಲಿ ವಾಸವಿದ್ದ, ಆಕೆ ಸಾವನ್ನಪ್ಪಿದ ನಂತರ ಮತ್ತೊಬ್ಬಳೊಂದಿಗೆ ಸಂಬಂಧವಿಟ್ಟುಕೊಂಡ. ಈಕೆ ಇವರ ಆಸ್ತಿ ಅಡವುಗಳನ್ನೇಲ್ಲಾ ತನ್ನ ಹೆಸರಿಗೆ ಬರಸಿಕೊಂಡು ಬರುತ್ತಿದ್ದ ಪೆನ್ಷ್ನ್ ಹಣವನ್ನು ತಾನೇ ಪಡೆಯುತ್ತಿರುವ ಆ ಮಹಿಳೆ, ಲಕ್ಕಣ್ಣನಿಗೆ ಲಕ್ವ ಹೊಡೆದ(ಸ್ಟ್ರೋಕ್) ದಿನ ದಿಂದ ಆತನನ್ನು ಬಸ್ ಸ್ಟಾಂಡ್ನಲ್ಲಿ ಬಿಟ್ಟು ಹೋಗಿದ್ದಾರೆ.
    ಕಳೆದ ಹತ್ತು ದಿನಗಳಿಂದ ಅಲ್ಲೇ ಮಲಗಿರುವ ಲಕ್ಕಣ್ಣ ತನ್ನಿಂದ ಅನುಕೂಲ ಪಡೆದವರಿಗೇ ನಾನು ಬೇಡವಾಗಿರುವಾಗ,  ನಾನು ಇದ್ದೇನು ಪ್ರಯೋಜನವೆನ್ನುವಂತೆ ಅನ್ನ ನೀರು ಬಿಟ್ಟಿದ್ದಾರೆ,  ಅಲ್ಲಿರುವ ಅಂಗಡಿಯವರು ಏನಾದರೂ ಆಹಾರ ಕೊಟ್ಟರೂ  ತಿನ್ನುವುದಿಲ್ಲ. ಮಲಗಿದ್ದ ಸ್ಥಳದಿಂದ ಕದಲದ ಈತನ ಸುತ್ತಾ ನೋಣಗಳು ಜುಯ್ಯೋ ಎನ್ನುತ್ತವೆ, ಗಬ್ಬು ವಾಸನೆ ಬರುತ್ತಿದೆ, ಈತನ ಈ ಸ್ಥಿತಿಯನ್ನು ಸಂಸಾರ ಮರೆತವರು,  ಅನೈತಿಕ ಸಂಬಂಧಗಳಿಗೆ ಹಲ್ಲುಗಿಂಜುವವರು ನೋಡಿದರೆ ಕ್ಷಣ ಕಾಲ ಯೋಚಿಸುವಂತೆ ಮಾಡಲೂ ಬಹುದು, ಬುದ್ದಿಯೂ ಬರಬಹುದು...!
                      

ಕೆಪಿಎಸ್ಸಿಯ ಪರೀಕ್ಷೆಯ ನಿಧರ್ಾರದಿಂದ ಪ್ರತಿಭಾನ್ವಿತ ಹಾಗೂ ಬಡವಿದ್ಯಾಥರ್ಿಗಳಿಗೆ ಅನುಕೂಲ
ಚಿಕ್ಕನಾಯಕನಹಳ್ಳಿ,ಆ.12 ; ಕೆಪಿಎಸ್ಸಿ ಪರೀಕ್ಷೆಯಲ್ಲಿ ಆದಂತಹ ಭ್ರಷ್ಠಾಚಾರವು ಸಿಐಡಿ ವರದಿಯಿಂದ ಬಹಿರಂಗವಾಗಿದ್ದು ಸಿ.ಎಂ.ಸಿದ್ದರಾಮಯ್ಯನವರು ಸಚಿವ ಸಂಪುಟದ ಒತ್ತಡವಿದ್ದರೂ ಆಯ್ಕೆ ಪಟ್ಟಿಯನ್ನು ರದ್ದು ಮಾಡಿ ಮತ್ತೊಮ್ಮೆ ಪರೀಕ್ಷೆ ನಡೆಸಲು ತೀಮರ್ಾನಿಸಿರುವುದು ಪ್ರತಿಭಾನ್ವಿತ ಹಾಗೂ ಬಡ ವಿದ್ಯಾಥರ್ಿಗಳಿಗೆ ಸಹಾಯವಾಗಲಿದೆ ಎಂದು ರಾಜ್ಯ ಅಹಿಂದ ಸಂಚಾಲಕ ಸಿ.ಎಲ್.ರವಿಕುಮಾರ್ ಹೇಳಿದರು.
    ಪಟ್ಟಣದ ರೇವಣಪ್ಪನ ಮಠದ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 67ನೇ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಹಣ್ಣು ಹಾಗೂ ಶಾಲಾ ವಿದ್ಯಾಥರ್ಿಗಳಿಗೆ ನೋಟ್ಬುಕ್, ಸಮವಸ್ತ್ರ ವಿತರಿಸಿ ಮಾತನಾಡಿದರು.
    ಕನರ್ಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆಸಿದ ನೇಮಕಾತಿಯ ಬಗ್ಗೆ ಸಚಿವ ಸಂಪುಟದಲ್ಲಿ ನಾಲ್ಕೈದು ಬಾರಿ ಚಚರ್ೆಯಾಯಿತು, ನಂತರ ಈ ವಿಷಯದ ಬಗ್ಗೆ ಸಿಐಡಿ ನೀಡಿದ ವರದಿಯನ್ನು ಆಧಾರವಾಗಿಟ್ಟುಕೊಂಡು  ಮುಖ್ಯಮಂತ್ರಿಗಳು ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಅನುಕೂಲ ಮಾಡಲು ಕೆಪಿಎಸ್ಸಿ ನೇಮಕಾತಿ ಪಟ್ಟಿಯನ್ನು ಸಚಿವ ಸಂಪುಟ ರದ್ದುಗೊಳಿಸಿರುವುದು ಉತ್ತಮ ನಿಧರ್ಾರ ಎಂದರು.
    ಹಿರಿಯ ಕಾಂಗ್ರೆಸ್ ಮುಖಂಡ ಸಿ.ಕೆ.ಗುರುಸಿದ್ದಯ್ಯ ಮಾತನಾಡಿ ಸಿದ್ದರಾಮಯ್ಯನವರ ಆದರ್ಶಗಳನ್ನು ಒಪ್ಪಿಕೊಂಡು ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷ ರೇವಣಸಿದ್ದೇಶ್ವರ ಮಠದಲ್ಲಿ ವಿದ್ಯಾಥರ್ಿಗಳಿಗೆ ನೋಟ್ಬುಕ್ ನೀಡುತ್ತಿರುವ  ಕಾರ್ಯ ಶ್ಲಾಘನೀಯವಾದುದು ಎಂದರಲ್ಲದೆ ರಾಜ್ಯದಲ್ಲಿ ಉತ್ತಮ ಆಡಳಿತ ನಿರ್ವಹಿಸುತ್ತಿರುವ ಸಿದ್ದರಾಮಯ್ಯನವರು ಯಾವುದೇ ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಆ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿರವ ಬಗ್ಗೆ ವಿಷಾಧಿಸಿದರು.
    ಕಾಂಗ್ರೆಸ್ ಮುಖಂಡ ನಾರಾಯಣಗೌಡ ಮಾತನಾಡಿ ಸಿ.ಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಉತ್ತಮ ಯೋಜನೆಗಳನ್ನು ತರುತ್ತಿದ್ದಾರೆ, ಈ ಯೋಜನೆಗಳ ಬಗ್ಗೆ ವಿದ್ಯಾಥರ್ಿಗಳು ಪತ್ರಿಕೆಯಲ್ಲಿ ಓದಿ ತಿಳಿಯಬೇಕು ಎಂದರು.
    ಮುಖಂಡ ಕೆ.ಜಿ.ಕೃಷ್ಣೆಗೌಡ ಮಾತನಾಡಿ ಕೆಪಿಎಸ್ಸಿ ಭ್ರಷ್ಠಾಚಾರದಲ್ಲಿ ಉತ್ತಮ ನಿಧರ್ಾರ ತೆಗೆದುಕೊಂಡಿರುವ ಮುಖ್ಯಮಂತ್ರಿಗಳ ವಿರುದ್ದ ಜೆ.ಡಿ.ಎಸ್ ಹಾಗೂ ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ, ಭ್ರಷ್ಠಾಚಾರ ತೊಡೆದು ಹಾಕಲು ಸಿದ್ದರಾಮಯ್ಯನವರು ಉತ್ತಮ ನಿಧರ್ಾರ ತೆಗೆದುಕೊಂಡಿದ್ದಾರೆ ಎಂದರಲ್ಲದೆ ಹೋರಾಟದಿಂದ ಬೆಳೆದು ಬಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಬೇಕೆಂಬ ಕನಸನ್ನು ನನಸಾಗಿ ಮಾಡಿಕೊಂಡ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
    ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಸಿದ್ದರಾಮಯ್ಯ, ಸಣ್ಣಪ್ಪ, ಉಪಸ್ಥಿತರಿದ್ದರು.

ಆಗಸ್ಟ್ 15ರಂದು ತುಮಕೂರಿನ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಕಪ್ಪುಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಆ.12 : ನಿವೃತ್ತ ನ್ಯಾಯಮೂತರ್ಿ ಎ. ಜೆ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕನರ್ಾಟಕ ಮಾದಿಗ ದಂಡೋರ ಜಿಲ್ಲಾ ಶಾಖೆ ವತಿಯಿಂದ ಆಗಸ್ಟ್ 15ರಂದು ತುಮಕೂರಿನ ಡಾ.ಶಿವಕುಮಾರಸ್ವಾಮೀಜಿ ಸರ್ಕಲ್ ಬಳಿ ಬೆಳಗ್ಗೆ 8ಕ್ಕೆ ಕಪ್ಪುಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಕಾರ್ಯದಶರ್ಿ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನರ್ಾಟಕ ಮಾದಿಗ ದಂಡೋರ ಸಂಘಟನೆಯು ಮಾದಿಗ ಜಾತಿಯ ಬಂಧುಗಳಿಗೆ ಆಥರ್ಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಎ.ಜೆ.ಸದಾಶಿವ ವರದಿಯ ಪ್ರಕಾರ ಶೇ.6ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವಂತೆ ರಾಜ್ಯ ಸಕರ್ಾರಕ್ಕೆ ಶಿಫಾರಸ್ಸು ಮಾಡಿದೆ, ಆದರೆ ಆಯೋಗದ ವರದಿಯನ್ನು ಜಾರಿಗೆ ತರುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಇಚ್ಛಾಶಕ್ತಿಯನ್ನು ಪ್ರದಶರ್ಿದೆ ನಿರ್ಲಕ್ಷ ವಹಿಸಿವೆ ಆದ್ದರಿಂದ ಕನರ್ಾಟಕ ಮಾದಿಗ ದಂಡೋರ ಸಂಘಟನೆ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಸಕರ್ಾರದ ಮೇಲೆ ಒತ್ತಡ ತರಲು ಆಗಸ್ಟ್ 15ರಂದು ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಸೋಮನಹಳ್ಳಿ ಜಗದೀಶ್, ಉಪಾಧ್ಯಕ್ಷ ಈಚನೂರು ಮಹದೇವ್, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಅಶೋಕ್, ಸಂಘಟನೆಯ ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಸಣ್ಣಮ್ಮ ಉಪಸ್ಥಿತರಿದ್ದರು.

ಕೊಲೆ ಮಾಡಿದ್ದ ಆರೋಪಿಗಳ ಬಂಧನ
ಚಿಕ್ಕನಾಯಕನಹಳ್ಳಿ,ಆ.13: ತಾಲೂಕಿನ ಚಿಕ್ಕೇಣ್ಣೆಗೆರೆಯಲ್ಲಿ ತನ್ನ ಪತ್ನಿಯೊಂದಿಗೆ ಅನೈತಿಕ ಸಂಪರ್ಕವಿಟ್ಟುಕೊಂಡಿದ್ದ ವ್ಯಕ್ತಿಯನ್ನು ಪ್ರಶ್ನೆಸಿದ್ದ ಹಿನ್ನೆಲೆಯಲ್ಲಿ ಲಿಂಗರಾಜು ಎಂಬುವನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಜಯಕುಮಾರ್ ನೇತೃತ್ವ ತಂಡ ಪ್ರಕರಣವನ್ನು ಭೇದಿಸಿ ಬಂಧಿಸಿದ್ದಾರೆ.
    ಮೃತ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅದೇ ಗ್ರಾಮದ ಹನುಮಂತಯ್ಯ ಎಂಬುವನು ಲಿಂಗರಾಜುವಿಗೆ  ಮಧ್ಯದಂಗಡಿಯಲ್ಲಿ ಭೇಟಿಯಾಗಿದ್ದು ಇಬ್ಬರೂ ಕುಡಿದ ಅಮಲಿನಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ, ನಂತರ ಹನುಮಂತಯ್ಯ ಉಪಾಯವಾಗಿ ಲಿಂಗರಾಜುವನ್ನು ಗ್ರಾಮದ ಕೆರೆಯ ಹಿಂಭಾಗಕ್ಕೆ ಕರೆದೊಯ್ದು ಅಲ್ಲಿ ಟವಲ್ನಿಂದ ಲಿಂಗರಾಜುವಿನ ಕೊರಳಿಗೆ ಬಿಗಿದು ಕೊಲೆ ಮಾಡಿದ್ದನ್ನೆನ್ನಲಾಗಿದೆ, ನಂತರ ತನ್ನ ಸಂಬಂಧಿಯಾದ ಯೋಗೀಶ್ನ ಸಹಾಯದಿಂದ ಮರಕ್ಕೆ ನೇಣು ಬಿಗಿದಂತೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ, ಆದರೆ ಮೃತನ ಕೊರಳಿನಲ್ಲಿ ಆದ ಗಾಯಗಳಿಂದ ಪ್ರಕರಣ ಬೆಳಕಿಗೆ ಬಂದಿದೆ.
    ಈ ಸಂಬಂಧ ಹನುಮಂತಯ್ಯ, ಯೋಗೀಶ್ ಹಾಗೂ ಇವರಿಬ್ಬರಿಗೂ ರಕ್ಷಣೆ ನೀಡಿದ್ದ ಗಿರೀಶ್ ಎಂಬುವರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಇಸ್ಪೀಟ್ ಆಡುತ್ತಿದ್ದ ಐವರ ಬಂಧನ: ತಾಲೂಕಿನ ರಂಗನಾಥ ಪುರದ ಬಳಿ ಇಸೀಟ್ ಆಡುತ್ತಿದ್ದ ಐವರನ್ನು ಬಂಧಿಸಿ ಅವರಿಂದ ಒಂದು ಮಾರುತಿ ಓಮ್ನಿ ವಾಹನ, ಮೂರು ಮೋಬೈಲ್ ಹಾಗೂ ಪಣಕ್ಕಿಟ್ಟ ಒಂದು ಮುಕ್ಕಾಲು ಸಾವಿರ ರೂಗಳ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಜಗಳ ಬಿಡಿಸಲು ಹೋಗಿ ಚೂರಿ ತಿವಿಸಿಕೊಂಡವನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ: ತಾಲೂಕಿನ ಶೆಟ್ಟೀಕೆರೆಯಲ್ಲಿ ಆಟೋ ಚಾಲಕ ಕೆಂಪಯ್ಯ ಹಾಗೂ ರವಿ ಎಂಬುವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದರು, ಜಗಳ ಬಿಡಿಸಲು ಹೋದ ಯತೀಶ್ನಿಗೆ ಕೆಂಪಯ್ಯ ಚೂರಿಯಿಂದ ತಿವಿದಿದ್ದಾನೆ, ಇದರಿಂದ ತೀವ್ರ ಗಾಯಗೊಂಡ ಯತೀಶ್ನಿಗೆ ಶ್ವಾಸಕೋಶಕ್ಕೆ ಹಾನಿಯಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಯದಿಂದ ಪಾರಾಗಿದ್ದಾನೆ, ಕೆಂಪಯ್ಯನನ್ನು ಚಿ.ನಾ.ಹಳ್ಳಿ ಪೊಲೀಸರು ಬಂದಿಸಿದ್ದಾರೆ.
ಬಸ್ನಿಂದ ಬಿದ್ದು ವ್ಯಕ್ತಿ ಸಾವು: ಪಟ್ಟಣದ ಕೇದಿಗೆಹಳ್ಳಿ ಪಾಳ್ಯದ ಬಳಿ ವ್ಯಕ್ತಿಯೊಬ್ಬ ಬಸ್ನ ಟಾಪ್ನಲ್ಲಿ ಕುಳಿತು ಪ್ರಯಣಿಸುತ್ತಿರುವಾಗ, ಮರದ ಕೊಂಬೆಯೊಂದು ಕೃಷ್ಣಪ್ಪ(50) ಎಂಬಾತನಿಗೆ ತಗುಲಿದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ಬಸ್ನಿಂದ ಕೆಳಕ್ಕೆ ಬಿದ್ದಿದ್ದಾನೆ, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಪ್ರಾಣಬಿಟ್ಟಿದ್ದಾನೆ.
ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


 ಸಾಹಿತಿ ಎಂ.ವಿ.ನಾಗರಾಜ್ರಾವ್ರವರ 74ನೇ ಹುಟ್ಟುಹಬ್ಬ
ಚಿಕ್ಕನಾಯಕನಹಳ್ಳಿ,ಆ.13: ಸಾಹಿತಿ ಎಂ.ವಿ.ನಾಗರಾಜ್ರಾವ್ರವರ 74ನೇ ಹುಟ್ಟುಹಬ್ಬ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ರೋಟರಿ ಸೇವಾ ಪ್ರಶಸ್ತಿ ಸಮಾರಂಭವನ್ನು ಇದೇ 16ರಂದು ಬೆಳಗ್ಗೆ 10.30ಕ್ಕೆ ಕೋ.ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ತುಮಕೂರು ರಾಮಕೃಷ್ಣ ವಿವೇಕಾನಂದಾಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಕಾರ್ಯಕ್ರಮ ಉದ್ಘಾಟಿಸುವರು. ಲೇಖಕ ಪ್ರೊ.ನಾ.ದಯಾನಂದ ಪ್ರಾಸ್ತಾವಿಕ ನುಡಿಯುವರು, ಪ್ರೊ.ನಾ.ದಯಾನಂದರವರು ರಚಿಸಿರುವ ಎಂ.ವಿ.ನಾಗರಾಜ್ರಾವ್ ಬದುಕು-ಬರಹ 'ವಷರ್ಾನುಕಾಲ' ಕೃತಿ ಬಿಡುಗಡೆಯನ್ನು ಸಾಹಿತಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ನೆರವೇರುಸುವರು.
    ಎಂ.ವಿ.ನಾಗರಾಜ್ರಾವ್ರವರ ಸಾರ್ಥಕ ಬದುಕಿನ ನೂರು ಸ್ಪೂತರ್ಿ ಕಥೆಗಳು ಪುಸ್ತಕದ ಇಂಗ್ಲೀಷ್ ಅನುವಾದ 'ಲಿಟಲ್ ಲ್ಯಾಮ್ಸ್' ಪುಸ್ತಕ ಬಿಡುಗಡೆಯನ್ನು ಸಕರ್ಾರಿ ದಂತ ಮಹಾವಿದ್ಯಾಲಯದ ನಿವೃತ್ತ ನಿದರ್ೇಶಕ ಡಾ.ಎಸ್.ಎಸ್.ಹಿರೇಮಠ್ ಬಿಡುಗಡೆ ಮಾಡುವರು, ಎಂ.ವಿ.ಎನ್ರವರ 74ನೇ ಹುಟ್ಟುಹಬ್ಬದ ಶುಭಾಶಯಗಳೊಂದಿಗೆ ರೋಟರಿಯ ಪ್ರತಿಷ್ಠಿತ ಅಂತರಾಷ್ಟ್ರೀಯ ಸೇವಾ ಪ್ರಶಸ್ತಿ ಪ್ರಧಾನ ಹಾಗೂ ಸಾಹಿತ್ಯ ಸಾಧಕರಿಗೆ ಗೌರವಾರ್ಪಣೆ ನಡೆಯಲಿದೆ.
    ಜಿಲ್ಲಾ ರೋಟರಿ ಆರ್.ಐ ಪಿಡಿಜಿ ಕೆ.ಎಸ್.ನಾಗೇಂದ್ರ, ರೋಟರಿ ಅಧ್ಯಕ್ಷ ಸಿ.ಎನ್.ಮರುಳಾರಾಧ್ಯ, ಪೂವರ್ಾಧ್ಯಕ್ಷರು ಸಿ.ಎಸ್.ಪ್ರದೀಪ್ಕುಮಾರ್,  ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಇನ್ನರ್ವೀಲ್ ಅಧ್ಯಕ್ಷೆ ಶಶಿಕಲಾ ಜಯದೇವ್, ಡಾ.ಕವಿತಾಕೃಷ್ಣ, ಗೌಡನಕಟ್ಟೆ ತಿಮ್ಮಯ್ಯ, ಬಾಳೆಕಾಯಿ ಶಿವನಂಜಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.

 ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ,

ಚಿಕ್ಕನಾಯಕನಹಳ್ಳಿ,ಆ.13 : ಭಾವಸಾರ ಕ್ಷತ್ರಿಯ ಯುವಕರ ಸಂಘದಿಂದ  ಶ್ರೀ ಕೃಷ್ಣ ಜನ್ಮಾಷ್ಠಮಿ, ಪ್ರಥಮ ವರ್ಷದ ತಾಲ್ಲೂಕು ಮಟ್ಟದ ವಿದ್ಯಾಥರ್ಿಗಳ ಪ್ರತಿಭಾ ಪುರಸ್ಕಾರ ಮತ್ತು ಉಚಿತ ನೋಟ್ ಪುಸ್ತಕಗಳ ವಿತರಣಾ ಸಮಾರಂಭ ಹಾಗೂ ರುಕ್ಮಿಣಿ ಮಹಿಳಾ ಸ್ವಸಹಾಯ ಸಂಘದ ಪ್ರಥಮ ವಾಷರ್ಿಕ ಸಮಾರಂಭವನ್ನು ಇದೇ 17ರ ಭಾನುವಾರ ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
     ಪಟ್ಟಣದ ತಾಲ್ಲೂಕು ಕಛೇರಿ ಎದುರಿನ ಶ್ರೀ ಪಾಂಡುರಂಗಸ್ವಾಮಿ ನಿವೇಶನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗೋಡೆಕೆರೆ ಚಮಠದ ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶೀಕೇಂದ್ರಸ್ವಾಮಿಗಳು ಉದ್ಘಾಟನೆ ನೆರವೇರಿಸುವರು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
    ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪೂಜಾ ಕಾರ್ಯಕ್ರಮ ಮತ್ತು ಪ್ರಸಾದ ವಿನಿಯೋಗವಿದೆ, ಎಲ್ಲಾ ಮಕ್ಕಳೂ ಕೃಷ್ಣನ ವೇಶ ಹಾಕಿಕೊಂಡು ಬರುವುದು, ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.