Thursday, April 7, 2011

ಪ್ರಥಮ ದಜರ್ೆ ಕಾಲೇಜ್ನಲ್ಲಿ ಹಲವು 'ಇಲ್ಲಗಳ' ಮಧ್ಯೆ ಅಭಿವೃದ್ದಿ ಚಿಕ್ಕನಾಯಕನಹಳ್ಳಿ, ಸಕರ್ಾರಿ ಕಾಲೇಜು ಎಂದರೆ ವಿದ್ಯಾಥರ್ಿಗಳು ದೂರ ಉಳಿಯುವ ಕಾಲ ಒಂದಿತ್ತು, ಆದರೆ ಇಂದು ಈ ಚಿತ್ರಣ ಬದಲಾಗಿದೆ. ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ವಿದ್ಯಾಬ್ಯಾಸದ ಜೊತೆಗೆ ಹಲವು ಹತ್ತು ತರಬೇತಿಗಳು, ಉದ್ಯೋಗಕ್ಕೆ ಅನುಕೂಲವಾಗುವಂತಹ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತಿರುವುದರಿಂದ ನಾವೂ ಸಕರ್ಾರಿ ಕಾಲೇಜ್ನಲ್ಲಿ ಕಲಿಯಬೇಕು ಎಂಬ ಉದ್ದೇಶ ಹೊಂದಿ, ಇಲ್ಲಿಂದ ಬೇರೆ ತಾಲ್ಲೂಕಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದ ವಿದ್ಯಾಥರ್ಿಗಳು ಇಂದು ಈ ಕಾಲೇಜಿಗೆ ಸೇರ ಬಯಸುತ್ತಿದ್ದಾರೆ, ಆದರೆ ಈ ವಿದ್ಯಾಥರ್ಿಗಳು ಕಾಲೇಜಿನ ಮೂಲಭೂತ ಸೌಕರ್ಯಗಳಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ. 1989ರಲ್ಲಿ ಸ್ಥಾಪನೆಯದ ಕಾಲೇಜು, ಇಂದಿಗೆ 22 ವಸಂತಗಳು ತುಂಬಿದ್ದರೂ ತರಗತಿಗಳಿಗಾಗಿ ಗ್ರಂಥಾಲಯ, ಉಗ್ರಾಣದ ಕೊಠಡಿಗಳಲ್ಲಿ ವಿದ್ಯಾಥರ್ಿಗಳು ಭೋದನೆ ಆಲಿಸಬೇಕಾಗಿದೆ, 3ವರ್ಷಗಳ ಹಿಂದೆ ಕೇವಲ 4 ಕೊಠಡಿಗಳಲ್ಲಿ ಬಿ.ಎ, ಬಿ.ಬಿ.ಎಂ, ಬಿ.ಕಾಂ ನ 7 ತರಗತಿ ನಡೆಯುತ್ತಿತ್ತಲ್ಲದೆ, ಕೊಠಡಿಗಳಿಲ್ಲದೆ ವಿದ್ಯಾಥರ್ಿಗಳು ತಮ್ಮ ಬೋಧನೆಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು, ಈ ವಿಷಯ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಆ ಸಂದರ್ಭದಲ್ಲಿ ಇದ್ದ ಪ್ರಾಂಶಪಾಲ ದಿವಂಗತ ಎಲ್.ಟಿ.ಶಿವಶಂಕರ್ರವರ ಒತ್ತಾಯದಿಂದ ಕಾಲೇಜಿನ ಕಟ್ಟಡ ಕಾಮಗಾರಿಗೆ ಅನುದಾನ ದೊರೆತು ಕಾಲೇಜಿಗೆ ಕೊಠಡಿಗಳ ಕಾಮಗಾರಿ ಶುರುವಾಯಿತು. ಆ ಸಂದರ್ಭದಲ್ಲಿ ಕಾಲೇಜಿಗೆ ಹೊಸದಾಗಿ ಬಂದ ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ ವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕೊಠಡಿಗಳ ಕಾಮಗಾರಿ ಪೂರ್ಣಗೊಳಿಸಿದರಲ್ಲದೆ, ತರಗತಿಗಳಿಗಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಂಡರು. ಆದರೂ ಕಾಲೇಜಿನ ವಿದ್ಯಾಥರ್ಿಗಳಿಗೆ ಸಮಸ್ಯೆಗಳು ಹೆಚ್ಚಾಗಿದೆ, ಕಾಲೇಜಿಗೆ ಈಗಿರುವ ಹಾಜರಾತಿ ಗಮನಿಸಿದರೆ ಕೊಠಡಿಗಳ ಸಮಸ್ಯೆ ಇನ್ನೂ ಇದೆ, ವಿದ್ಯಾಥರ್ಿಗಳು ತಮ್ಮ ಬೋದನೆಗಾಗಿ ಗ್ರಂಥಾಲಯ, ಉಗ್ರಾಣ ಮತ್ತು ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳಲ್ಲಿ ಕುಳಿತು ಬೋದನೆ ಆಲಿಸುತ್ತಿದ್ದಾರೆ, ಕಾಲೇಜಿನಲ್ಲಿ ತರಗತಿ ನಡೆಸಲು 8 ಕೊಠಡಿಗಳಿದ್ದು ಗ್ರಂಥಾಲಯಕ್ಕೆ, ವಿದ್ಯಾಥರ್ಿಗಳ ಶೌಚಾಲಯಕ್ಕೆ, ಕಾಲೇಜಿನ ಸಭಾಂಗಣ, ಕಂಪ್ಯೂಟರ್ ಕೊಠಡಿಗಾಗಿ ಮತ್ತು ಮುಂದಿನ ವರ್ಷದ ದಾಖಲಾತಿ ಗಮನಿಸಿದರೆ ಇನ್ನೂ 10 ಕೊಠಡಿಗಳ ಕೊರತೆಯು ಎದ್ದು ಕಾಣುತ್ತಿದೆ ಅಲ್ಲದೆ ಕಾಲೇಜಿನ 5 ಎಕರೆ ಜಮೀನಿನಲ್ಲಿ ಸುಮಾರು 600 ಸಸಿಗಳನ್ನ ನೆಟ್ಟಿರುವ ಪರಿಸರ ಸಂರಕ್ಷಣೆಗಾಗಿ ಮತ್ತು ಕಾಲೇಜಿನ ಭದ್ರತೆಗಾಗಿ ಕಾಲೇಜಿಗೆ ಕಾಂಪೌಂಡ್ನ ಕೊರತೆಯನ್ನೂ ನೀಗಿಸಬೇಕಾಗಿದೆ. ಈ ಎಲ್ಲಾ ಕೊರತೆಗಳಿದ್ದರೂ ಸಹ ಕಾಲೇಜಿನ ವಿದ್ಯಾಥರ್ಿಗಳ ಹಾಜರಾತಿ 220 ಇದ್ದದ್ದು ಈಗ 477ಸಂಖ್ಯೆಗೆ ಏರಿದೆ. ಒಂದು ವರ್ಷದಲ್ಲಿ ಈ ಏರಿಕೆಗೆ ಕಾರಣವಾಗಿರುವ ಬಗ್ಗೆ ಪತ್ರಿಕೆ ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ತಾಲ್ಲೂಕಿನ ಸುತ್ತಮುತ್ತಲಿನಲ್ಲಿರುವ ಸುಮಾರು 25 ಕಾಲೇಜುಗಳಿಗೆ ಭೇಟಿ ಮಾಡಿ ಅಲ್ಲಿರುವ ಸೌಕರ್ಯಗಳು, ಅಲ್ಲಿನ ಉತ್ತಮವಾದ ಬೋದನೆ, ಈ ಎಲ್ಲಾ ಅಂಶಗಳನ್ನು ಗಮನಿಸಿ ಕಾಲೇಜಿನಲ್ಲೂ ಅಂತಹ ಸೌಕರ್ಯಗಳನ್ನು ನೀಡುವಲ್ಲಿ ಮುಂದಾದೆ, ಅಲ್ಲದೆ ಕಾಲೇಜಿಗಾಗಿ ಕನ್ನಡ ಮೇಜರ್, ಇಂಗ್ಲೀಷ್ ಮೇಜರ್, ಮತ್ತು ಬಿ.ಎಸ್.ಡಬ್ಲ್ಯೂ ಈ ಕೋಸರ್್ಗಳನ್ನು ತರುವಲ್ಲಿ ಯಶಸ್ವಿಯಾಗಿ ಪಕ್ಕದ ತಾಲ್ಲೂಕುಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದ ವಿದ್ಯಾಥರ್ಿಗಳನ್ನು ಕಾಲೇಜಿನತ್ತ ಸೆಳೆಯುವಲ್ಲಿ ಯಶಸ್ವಿಯಾಗಿ, ಗ್ರಾಮೀಣ ವಿದ್ಯಾಥರ್ಿಗಳಿಗೆ ಸಂವಹನ ಕೌಶಲ್ಯ, ಧ್ಯೆರ್ಯ, ಮತ್ತು ಬೌದ್ದಿಕ ಬೆಳವಣಿಗೆ ಬೆಳಸಿ ಅವರಿಗೆ ಉತ್ತಮ ತರಬೇತಿ ನೀಡುವ ಜೊತೆಗೆ ವಿದ್ಯಾಥರ್ಿಗಳ ಉದ್ಯೋಗಕ್ಕೆ ಸಹಾಯವಾಗುವಂತಹ ಶಿಬಿರಗಳು, ಯೋಗ ಶಿಬಿರಗಳನ್ನು ಹಲವು ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಕಾರ್ಯಗಾರ, ಸಾಂಸ್ಕೃತಿಕ ಕಾರ್ಯಕ್ರಮ, ಇಂತಹ ಹಲವಾರು ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಏರ್ಪಡಿಸುವ ಮೂಲಕ ಕಾಲೇಜಿನಲ್ಲಿ ವಿದ್ಯಾಥರ್ಿಗಳ ಹೆಚ್ಚಿನ ಸಂಖ್ಯೆಯ ಹಾಜರಾತಿ ದಾಖಲಾಗಿದೆ ಮುಂದಿನ ವರ್ಷ ದಾಖಲಾತಿ 800ಕ್ಕೂ ಹೆಚ್ಚು ವಿದ್ಯಾಥರ್ಿಗಳ ದಾಖಲಾತಿ ಅವಕಾಶದ ಕನಸು ನನ್ನದಾಗಿದೆ ಎಂದಿರುವ ಪ್ರಾಂಶುಪಾರು ತಾಲೂಕಿನಲ್ಲಿ, ಇರದ ಬಿ.ಎಸ್ಸಿ(ವಿಜ್ಞಾನ) ಕೋಸರ್್ನ್ನು ಕಾಲೇಜಿಗೆ ತರುವಲ್ಲಿ ಯಶಸ್ವಿಯಾದರೂ ಕಾಲೇಜಿನಲ್ಲಿರುವ ಕೊರತೆಗಳಿಂದ ವಿಜ್ಞಾನ ಕೋಸರ್್ ತಾಲೂಕಿಗೆ ಮರೀಚಿಕೆಯಾಯಿತು ಮತ್ತು ಕಾಲೇಜಿನಲ್ಲಿ ವಿದ್ಯಾಥರ್ಿಗಳಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಕಾಲೇಜಿನ ಅಭಿವೃದ್ದಿ ಮತ್ತು ವಿದ್ಯಾಥರ್ಿಗಳ ಬೆಳವಣಿಗೆಗಾಗಿ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಪ್ರಾಂಶುಪಾಲರು ಇನ್ನು ಒಂದೂವರೆ ವರ್ಷದಲ್ಲಿ ಹಲವು ಕೆಲಸ ನಿರ್ವಹಿಸುವ , ತನ್ನ ವಿದ್ಯಾಥರ್ಿಗಳಿಗಾಗಿ ತೀವ್ರ ಆಸಕ್ತಿ ವಹಿಸಿ ಅಭಿವೃದ್ದಿಗಾಗಿ ಶ್ರಮಿಸುವ ಪ್ರಾಂಶುಪಾಲರ ಕನಸುಗಳಿಗೆ, ತಾಲೂಕಿನಲ್ಲಿ ಇರದ ವಿಜ್ಞಾನ ಕೋಸರ್್ ತಾಲೂಕಿಗೆ ತರುವಲ್ಲಿ ಶಾಸಕರು, ತಾಲೂಕು ಆಡಳಿತ ಮಂಡಳಿ ಸ್ಪಂದಿಸಿ ಕಾಲೇಜಿನ ಅಭಿವೃದ್ದಿ ಮತ್ತು ತಾಲೂಕಿನ ವಿದ್ಯಾಥರ್ಿಗಳ ಬೆಳವಣಿಗೆ ಬಗ್ಗೆ ಗಮನ ಹರಿಸುವರೇ ಎಂಬುದು ಶಿಕ್ಷಣಾಸಕ್ತರ ಒತ್ತಾಸೆ..

ಭಾರತದ ಸುಪ್ರಸಿದ್ದ ರಂಗಕಲಾವಿದ ಸಿ.ಬಿ.ಮಲ್ಲಪ್ಪನವರ 125ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ನಾಟಕೋತ್ಸವ ಹಾಗೂ ನಾಟಕ ಸ್ಪಧರ್ೆ ಮತ್ತು ವಿಚಾರ ಸಂಕೀರಣವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ತಿಳಿಸಿದ್ದಾರೆ.ಸಂಘದ ಮುವತ್ತನೇ ವರ್ಷ ಆಚರಣೆ ಮತ್ತು ಪಟ್ಟಣದ ರಂಗಕಮರ್ಿಗಳಾದ ಸಿ.ಬಿ.ಮಲ್ಲಪ್ಪ, ಬಿ.ಕೆ.ಈಶ್ವರಪ್ಪ ಹಾಗೂ ಪಂಚಲಿಂಗಯ್ಯನವರ ಸ್ಮರಣೆಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಏಪ್ರಿಲ್ ಅಂತಿಮ ವಾರ ಅಥವಾ ಮೇ ಮೊದಲ ವಾರದಲ್ಲಿ ಹಮ್ಮಿಕೊಳ್ಳಲಾಗಿರುವ ಈ ಉತ್ಸವವನ್ನು ಐದು ದಿನಗಳ ವರೆಗೆ ಹಮ್ಮಿಕೊಳ್ಳಲು ನಿರ್ಧರಿಸಿದ್ದು ಸ್ಪಧರ್ೆಗೆ ಹೆಚ್ಚು ನಾಟಕಗಳು ಆಗಮಿಸಿದರೆ ಏಳು ದಿನಗಳ ವರೆಗೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿರುವ ಅವರು ಸಾಮಾಜಿಕ ಮತ್ತು ಪ್ರಯೋಗಿಕ ನಾಟಕಗಳಿಗೆ ಒತ್ತು ನೀಡಲಾಗಿದ್ದು ಕೊನೆಯ ದಿನ ಪೌರಾಣಿಕ ಮತ್ತು ಐತಿಹಾಸಕ ನಾಟಕಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಸ್ಫದರ್ೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ., ಬಿ.ಕೆ.ಈಶ್ವರಪ್ಪನವರ ಹೆಸರಿನ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ, ತೃತೀಯ ಬಹುಮಾನ 7 ಸಾವಿರ ರೂ., ಪಂಚಲಿಂಗಯ್ಯವರ ಹೆಸರಿನ ಆಕರ್ಷಕ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಇದಲ್ಲದೆ ಉತ್ತಮ ರಂಗಸಜ್ಜಿಕೆ ಉತ್ತಮ ನಿದರ್ೇಶಕ ಉತ್ತಮ ಕಥೆ, ಉತ್ತಮ ನಟ-ನಟಿ, ಉತ್ತಮ ಬೆಳಕು-ಧ್ವನಿ, ಉತ್ತಮ ಸಂಗೀತ, ಇವರುಗಳಿಗೆ ವೈಯಕ್ತಿಕ ನಗದು ಬಹುಮಾನಗಳಿರುತ್ತದೆ ಹಾಗೂ ಭಾಗವಹಿಸಿದ ಎಲ್ಲಾ ನಾಟಕ ತಂಡಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶ್ತಿ ಪತ್ರ ವಿತರಿಸಲಾಗುವುದು.ಸ್ಪಧರ್ೆಯಲ್ಲಿ ಭಾಗವಹಿಸುವ ತಂಡಗಳ ಕಲಾವಿದರ ಊಟ ಮತ್ತು ವಸತಿ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುವುದು, ನಾಟಕ ಸ್ಪಧರ್ೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳಿಗೆ ಅಜರ್ಿ ನಮೂನೆಗಳನ್ನು ವಿತರಿಸಲಾಗುತ್ತಿದ್ದು, ಪ್ರವೇಶ ಧನ ಐದು ನೂರು ರೂಗಳೊಂದಿಗೆ ಅಜರ್ಿ ಸಲ್ಲಿಸುವುದಕ್ಕೆ ಏ.7 ಕೊನೆಯ ದಿನವಾಗಿರುತ್ತದೆ. ಸಂಘದ ಕಾರ್ಯದಶರ್ಿ ಸುಪ್ರೀಂ ಸುಬ್ರಹ್ಮಣ್ಯ ಮಾತನಾಡಿ, ಅಭಿನವ ಭಕ್ತಶಿರೋಮಣಿ ಸಿ.ಬಿ.ಮಲ್ಲಪ್ಪನವರ 125ನೇ ಜನ್ಮ ದಿನಾಚರಣೆಯ ಅಂಗವಾಗಿ ಮಲ್ಲಪ್ಪನವರ ವ್ಯಕ್ತಿ ಮತ್ತು ಪಾತ್ರ ಚಿತ್ರಣ ಹಾಗೂ ರಂಗ ಕಲೆಯ ವಿಷಯವಾಗಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.ಸಂಘದ 30ನೇ ವರ್ಷದ ಆಚರಣೆಗಾಗಿ ಹೊರತರುತ್ತಿರುವ ಸ್ಮರಣೆ ಸಂಚಿಕೆಗೆ ಲೇಖನವನ್ನು ಆಹ್ವಾನಿಸಿದ್ದು ಈ ಹಿಂದೆ ನಮ್ಮ ಸಂಘ ಹಮ್ಮಿಕೊಂಡಿದ್ದ ನಾಟಕೋತ್ಸವದಲ್ಲಿ ಭಾಗವಹಿಸಿದ್ದ ಕಲಾವಿದರು, ರಂಗಾಸಕ್ತರು ಲೇಖನಗಳನ್ನು ಕಳುಹಿಸಬಹುದು ಎಂದರು.ಗೋಷ್ಠಿಯಲ್ಲಿ ಸಿದ್ದು ಜಿ.ಕೆರೆ, ಸಿ.ಎಚ್.ಗಂಗಾಧರ್, ಸಿದ್ದರಾಮಯ್ಯ ಉಪಸ್ಥಿತರಿದ್ದರು.ಹೆಚ್ಚಿನ ವಿವರಗಳಿಗಾಗಿ ಸಿದ್ದು ಜಿ.ಕೆರೆ, ಮೊ.ನಂ. 9886531222, ಸುಪ್ರೀಂ ಸುಬ್ರಹ್ಮಣ್ಯ ಮೊ.ನಂ.9742192989, ಸಿ.ಎಚ್.ಗಂಗಾಧರ್ ನಂ, 9845007131, ಸಿ.ಕೆ.ಹರೀಶ್ 9740179009, ಶ್ರೀನಿವಾಸ ಸಾಲ್ಕಟ್ಟೆ 9448748206 ಇವರುಗಳನ್ನು ಸಂಪಕರ್ಿಸಲು ಕೋರಲಾಗಿದೆ.