Monday, April 8, 2013




ವಿದ್ಯೆ ಕಲಿತ ದೊಡ್ಡವನಲ್ಲ, ವಿದ್ವತ್ ಪಡೆದವನೇ ದೊಡ್ಡವ
                      
ಚಿಕ್ಕನಾಯಕನಹಳ್ಳಿ,ಏ.08 : ಪುರಂದರದಾಸರು, ಕನಕದಾಸರು ದಾಸರುಗಳಲ್ಲಿ ಶ್ರೇಷ್ಠ ದಾಸರಾದರೆ ಸಂತರಲ್ಲಿ ಶಿಶುನಾಳ ಷರೀಫರು ಶ್ರೇಷ್ಠರು ಎಂದು ಸಂತಶಿಶುನಾಳ ಷರೀಫ ಶಿವಯೋಗಿಗಳ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂತರ್ಿ ಹೇಳಿದರು.
    ಪಟ್ಟಣದ ನವೋದಯ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಕ್ರೀಡೆ ಮತ್ತು ರಾ.ಸೇ.ಯೋ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಷರೀಪರು ಜನಪದ ಸಾಹಿತ್ಯ, ತತ್ವಪದಗಳಲ್ಲದೆ ಲಾವಣಿ, ದೊಡ್ಡಾಟ, ಮಹಾಭಾರತ, ರಾಮಾಯಣ, ದೇವಿಪುರಾಣಗಳಂತಹ ನಾಟಕಗಳನ್ನು ಬರೆದು ಜನರ ಮನದಲ್ಲಿ ಅಳಿಸಲಾಗದಂತೆ ನೆಲೆಯೂರಿದ್ದಾರೆ, ಷರೀಫರು ಹುಟ್ಟಿದ್ದು ಹಜರತ್ ತತ್ವದಲ್ಲಿ, ಬೆಳೆದದ್ದು ಹರಿತ್ವದಲ್ಲಿ, ಕೊನೆಗೆ ಶಿವಯೋಗಿತ್ವದಲ್ಲಿ ಎಂದರು.
ಸಂತ ಶಿಶುನಾಳ ಷರೀಪ ಶಿವಯೋಗಿಯೆಂದರೆ, ಲೌಕಿಕವನ್ನು ಬಿಟ್ಟವನೇ ಸಂತನಾಗಿದ್ದು, ತಾಯಿ ಕರುಳು ಶಿಶುನಾಳ, ಷರೀಪ ಸದ್ಗುಣವಂತ ಹಾಗೂ ಶಿವಯೋಗಿಯೆಂದರೆ ಸನ್ಯಾಸಿಯಾಗಿರುವವನು ಎಂದರ್ಥ ಹಾಗೂ  ಶಿವಯೋಗಿಗಳಲ್ಲಿ ಸನ್ಯಾಸಿಶಿವ(ಅಘೋರಿಗಳು), ಸಂಸಾರಿಶಿವ, ಪರಶಿವವೆಂಬಂತೆ ಇದ್ದಾರೆ ಎಂದರು.
 ವಿದ್ಯೆ ಕಲಿತವನು ದೊಡ್ಡವನಲ್ಲ, ವಿದ್ವತ್ ಕಲಿತವನು ಶ್ರೇಷ್ಠ, ವೇದವನ್ನು ತಿಳಿದವರಿಗಿಂತ ಗಾದೆ ಮಾತನ್ನು ಅರಿತವನೇ ಶ್ರೇಷ್ಠ ಎಂದರಲ್ಲದೆ ಶಿಶುನಾಳರು ಬರೆದಿರುವ ಗೀತೆಗಳು, ತತ್ವಗಳನ್ನು ಯುವಕರಿಗೆ ಅವಶ್ಯಕವಿದೆ, ಇಂದಿನ ಯುವಕರು ಟಿ.ವಿ, ಮೊಬೈಲ್, ಇಂಟರ್ನೆಟ್ನ ಜೀವನದಲ್ಲಿ ಮುಳುಗುತ್ತಿದ್ದಾರೆ, ಭಾರತವನ್ನು ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ನೋಡಿದರೆ ಮಾತ್ರ ಸ್ವಾಮಿ ವಿವೇಕಾನಂದರಂತಹ ಮಹಾಪುರಷರು ನಮಗೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ವಿದ್ಯಾಥರ್ಿಗಳ ಪ್ರಗತಿಗೆ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತದೆ, ಅವರನ್ನು ಉತ್ತಮ ಪ್ರಜ್ಞಾವಂತರನ್ನಾಗಿ ಹಾಗೂ ನಾಯಕರನ್ನಾಗಿ ಪರಿವತರ್ಿಸಲು ಶಿಕ್ಷಣದಿಂದಲೇ ಸಾಧ್ಯ ಎಂದ ಅವರು ವಿದ್ಯಾಥರ್ಿಗಳು ತಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ನವೋದಯ ವಿದ್ಯಾ ಸಂಸ್ಥೆಯ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ಯುವಕರು ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಿ ಮತದಾನದ ಹಕ್ಕನ್ನು ಪಡೆಯಿರಿ, ಮತ ಚಲಾಯಿಸುವಾಗ ಪ್ರಜ್ಞಾವಂತಿಕೆಯಿಂದ ಚಲಾಯಿಸಿರಿ ಎಂದು ತಿಳಿಸಿದರು.
    ಸಮಾರಂಭದಲ್ಲಿ ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸ್ಪಧರ್ೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿರು.
ಸಮಾರಂಭದಲ್ಲಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣುಕಾರ್ಯ, ಪ್ರಾಂಶುಪಾಲ ಕೆ.ಸಿ.ಬಸಪ್ಪ ಉಪಸ್ಥಿತರಿದ್ದರು.
 ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿ ಲಾವಣ್ಯ ಪ್ರಾಥರ್ಿಸಿದರೆ, ಪ್ರಾಂಶುಪಾಲ ಕೆ.ಸಿ.ಬಸಪ್ಪ ಸ್ವಾಗತಿಸಿದರು. ವಿದ್ಯಾಥರ್ಿನಿ ಮೋಕ್ಷ ನಿರೂಪಿಸಿ, ಉಪನ್ಯಾಸಕ ಚನ್ನಬಸಪ್ಪ ವಂದಿಸಿದರು.
    ಕಳಪೆ ವಿದ್ಯುತ್ ಕಂಬ: ಓಡಾಡಲು ಜನರಿಗೆ ಭೀತಿ

ಚಿಕ್ಕನಾಯಕನಹಳ್ಳಿ,ಏ.08 : ಕೆಪಿಟಿಸಿಎಲ್ ಇಲಾಖಾ ವತಿಯಿಂದ ನೂತನ ಕೋಡುಗಲ್ಲು ರಸ್ತೆಯಲ್ಲಿ ಹಾಕಿರುವ ವಿದ್ಯುತ್ ಕಂಬ ಕಳಪೆಯಿಂದ ಕೂಡಿದ್ದು ಕಂಬ ಅರ್ಧಕ್ಕೆ ಮುರಿದಿವರು ಗುತ್ತಿಗೆದಾರ ಕಂಬವನ್ನು ಹಾಕಿದ್ದಾರೆ ಎಂದು ಆ ಭಾಗದ ಜನರು ಆಪಾದಸಿದ್ದಾರೆ.
    ಕಂಬ ಅರ್ಧಕ್ಕೆ ಮುರಿದ ಕಬ್ಬಿಣದ ಸಲಾಕೆಗಳ ಮೇಲೆ ನಿಂತಿದ್ದು ಮಳೆಗಾಲ ಪ್ರಾರಂಭವಾಗುತ್ತಿರುವ ಈ ಸಮಯದಲ್ಲಿ ಬಿರುಗಾಳಿ, ಬೀಸಿದರೆ ವಿದ್ಯುತ್ ಕಂಬ ಮುರಿದು ಬಿದ್ದು ರಸ್ತೆಯಲ್ಲಿ ಓಡಾಡುವ ಜನ ನೂರಾರು ದನಕರುಗಳು ಜಮೀನುಗಳಿಗೆ ಈ ರಸ್ತೆಯಲ್ಲೇ ಹೋಗುತ್ತಿರುವುದರಿಂದ ಆಕಸ್ಮಿಕ ಕಂಬ ಮುರಿದು ಬಿದ್ದರೆ ಪ್ರಾಣಹಾನಿ ಉಂಟಾಗುವ ಸಂಭವವಿರುವುದರಿಂದ ಕೂಡಲೇ ವಿದ್ಯುತ್ ಕಂಬ ತೆಗೆದು ಬೇರೆ ಕಂಬ ನೆಡುವಂತೆ ಈ ರಸ್ತೆಯಲ್ಲಿ ವಿಹಾರಕ್ಕೆ ತೆರಳುವ ಜನತೆ ಕೆಪಿಟಿಸಿಎಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
       ವಿದ್ಯುತ್ ಸಮಸ್ಯೆ ರೈತ ಸಂಘದವರಿಂದ ಅಧಿಕಾರಿಗಳಿಗೆ ಘೇರಾವ್
                   
ಚಿಕ್ಕನಾಯಕನಹಳ್ಳಿ:ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಗಳು ವಿದ್ಯುತ್ ಪೂರೈಸದೆ ರೈತರಿಗೆ ದ್ರೋಹವೆಸಗುತ್ತಿವೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಎರಡು ವಿದ್ಯತ್ ಪ್ರಸರಣ ಉಪಸ್ಥಾವರಗಳ ಮೇಲೆ ಸೋಮವಾರ ಅಧಿಕಾರಿಗಳಿಗೆ ಘೆರಾವ್ ಹಾಕಿದರು.
  ತಾಲ್ಲೂಕಿನ ಶೆಟ್ಟಿಕೆರೆ ಮತ್ತು ತಿಮ್ಮನಹಳ್ಳಿ ಉಪಸ್ಥಾವರಗಳಮೇಲೆ ಪ್ರತ್ಯೇಕವಾಗಿ ದಾಳಿಮಾಡಿದ ನೂರಾರು ಕಾರ್ಯಕರ್ತರು ಸ್ಥಾವರಗಳ ಕಾರ್ಯವನ್ನು ಬಲವಂತವಾಗಿ ಸ್ಥಗಿತಗೊಳಿಸಿ ಮೇಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
.ನೇತೃತ್ವ ವಹಿಸಿದ್ದ ಕೆಂಕೆರೆ ಸತೀಶ್ ಮಾತನಾಡಿ ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ವಿದ್ಯುತ್ ನೀಡುತ್ತಿರುವುದರಿಂದ ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಬೆಳೆಗಳೆಲ್ಲಾ ಬಾಡುತ್ತಿವೆ ಮತ್ತು ದನಕರುಗಳಿಗೆ ಕೆರೆ ಕಟ್ಟೆಗಳಲ್ಲಿ ನೀರಿಲ್ಲ, ಬೋರನೀರನ್ನಾದರೂ ಕುಡಿಸೋಣವೆಂದರೆ ವಿದ್ಯುತ್ ಸಮಸ್ಯೆಯಿಂದ ಅವು ಬಾಯಾರಿ ಬಳಲುವ ಪರಿಸ್ಥಿತಿ ಬಂದಿದೆ ಎಂದರಲ್ಲದೆ, ವಿದ್ಯುತ್ ನಿರ್ವಹಣೆಯ ವ್ಯತ್ಯಯದಿಂದ ತಿಮ್ಮನಹಳ್ಳಿ ಒಂದೇ ದಿನ ಇಪ್ಪತ್ತೈದು ಬೋರ್ವೆಲ್ಗಳ ಮೋಟರ್ಗಳು ಹಾಗೂ ಹತ್ತು ಟಿ.ವಿ.ಗಳು ಸುಟ್ಟು ಹೋಗಿದೆ ಎಂದರು.   
   ಶೆಟ್ಟಿಕೆರೆ ಉಪಸ್ಥಾವರದ ಮೇಲೆ ಭಾನುವಾರವೇ ದಾಳಿಯನ್ನು ಆಯೋಜಿಸಿದ್ದ ರೈತಸಂಘ ಉಸ್ತುವಾರಿ ಎಂಜಿನಿಯರ್ ಪ್ರಸಾದ್ ಮೇಲಾಧಿಕಾರಿಗಳು ರಜೆಯಲ್ಲಿರುವಕಾರಣ ಸ್ಥಳಕ್ಕೆ ಬೇಟಿ ನೀಡಲಾಗುತ್ತಿಲ್ಲ ಆದಕಾರಣ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂತೆಗುಕ್ಕೊಳ್ಳುವಂತೆ ಮನವಿ ಮಾಡಿಕೊಂಡಿದ್ದರಿಂದ ಚಳವಳಿಯನ್ನು  ಸೋಮವಾರಕ್ಕೆ ಮುಂದೂಡಿದ ರೈತರು ಬೆಳಗ್ಗೆ 9ಗಂಟೆಗೆ ಸ್ಥಳದಲ್ಲಿ ಜಮಾಯಿಸಿದರು.
    11ಗಂಟೆಯಾದರೂ ಮೇಲಾಧಿಕಾರಿಗಳು ಬರದಿದ್ದಾಗ ರೈತರು ಕೆಪಿಟಿಸಿಎಲ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು. ನಂತರ ಸ್ಥಳಕ್ಕಾಗಮಿಸಿದ ಎಇಇ ರಾಜಶೇಖರ ಮೂತರ್ಿಗೆ ಘೆರಾವ್ ಹಾಕಿದರು.
 ಎ.ಇ.ಇ. ರಾಜಶೇಖರ ಮೂತರ್ಿ ಮಾತನಾಡಿ ಚಿಕ್ಕನಾಯಕನಹಳ್ಳ,ತಿಪಟೂರು ಮತ್ತು ತುರುವೇಕೆರೆ ತಾಲ್ಲೂಕುಗಳಿಗೆ ದಿನಕ್ಕೆ 130 ಮೆಘಾ ವ್ಯಾಟ್ ವಿದ್ಯತ್ ಅವಷ್ಯಕವಿದ್ದು ಕೇವಲ 30 ಮೆಘಾ ವ್ಯಾಟ್ ಸರಬರಾಜಾಗುತ್ತಿದ್ದು ನಿಯಮಿತವಾಗಿ ಬೆಳಗ್ಗೆ 2ಗಂಟೆ ಮತ್ತು ರಾತ್ರಿ 3ಗಂಟೆ ವಿದ್ಯುತ್ ಪೂರೈಸಲು ಸಧ್ಯವಿಲ್ಲ ಎಂದರು.ರೈತರು ಪಟ್ಟು ಸಡಿಲಿಸದಿದ್ದಾಗ ಜಿಲ್ಲಾ ಹಂತದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪಕರ್ಿಸಿ ರೈತರ ಬೇಡಿಕೆಗೆ ಸಮ್ಮತಿಸಿದರು. ನಂತರ ಮದ್ಯಾಹ್ನ 1ಗಂಟೆ ಸುಮಾರಿಗೆ ತಿಮ್ಮನಹಳ್ಳಿ ಉಪಸ್ಥಾವರದ ಮೇಲೆ ಮುತ್ತಿಗೆಹಾಕಿ ತಾಲ್ಲೂಕಿನಾಧ್ಯಂತ ಏಕರೂಪದ ನಿಯಮ ಪಾಲಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಿದರು. ಎಇಇ ರಾಜಶೇಖರಮೂತರ್ಿ ಸಮ್ಮತಿಸಿದ ನಂತರ ಪ್ರತಿಭಟನಾಕಾರರು ಚದುರಿದರು
    ಪ್ರತಿಭಟನೆಯಲ್ಲಿ ರೈತ ಮುಖಂಡರುಗಳಾದ ನಾಗರಾಜ್, ಬೋರಣ್ಣ, ನರಸಿಂಹಮೂತರ್ಿ, ಚಂದ್ರಪ್ಪ, ಮಲ್ಲೇಶ್, ಮಲ್ಲಿಕಾರ್ಜನ್, ರವಿ, ಅಶೋಕ್, ತೋಂಟಾರಾಧ್ಯ, ಶಾಂತಪ್ಪ ಸೇರಿದಂತೆ ಇನ್ನೂರಕ್ಕೂ ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.