Saturday, May 17, 2014


ಲೋಕಸಭಾ ಫಲಿತಾಂಶ: ಜೆ.ಸಿ.ಎಂ, ಕೆ.ಎಸ್.ಕೆ. ಹೊಂದಾಣಿಕೆ ಮತದಾರನಿಗೆ ಸಮಾಧಾನ ತಂದಿಲ್ಲವೆ...?!
  • ಶಾಸಕ ಸಿ.ಬಿ.ಎಸ್. ನಿರೀಕ್ಷೆಗಳು ಹುಸಿಯಾಯಿತೇ ?
  • ಎರಡು ಜಾತಿಗಳ ನಡುವಿನ ರಾಜಕಾರಣ ಇನ್ನು ಇತಿಹಾಸವೇ ?
  • ಅಹಿಂದ ಜಾತಿಗಳು ನಿಣರ್ಾಯಕವೆನಿಸುತ್ತವಯೇ 
  • ಕಾಂಗ್ರೆಸ್ಗೆ ಇಲ್ಲಿ ನಿಜವಾದ ಶಕ್ತಿ ಇದೆಯೇ 
  • ಈ ಶಕ್ತಿಯನ್ನು ಚುನಾವಣೆಯ ಸಂದರ್ಭದಲ್ಲಿ ನಾಯಕರೇ ಹಾಳು ಮಾಡುತ್ತಿದ್ದರೆ?

ಚಿಕ್ಕನಾಯಕನಹಳ್ಳಿ,ಮೇ: ಈ ಭಾರಿಯ ಲೋಕಸಭಾ ಚುನಾವಣೆ ಫಲಿತಾಂಶ ಈ ವಿಧಾನ ಸಭಾ ಕ್ಷೇತ್ರದ ಮಟ್ಟಿನ ಹಲವು ವಿದ್ಯಮಾನಗಳಿಗೆ ಜನಾದೇಶ ನೀಡಿದೆ. 
ಅವುಗಳಲ್ಲಿ ಪ್ರಮುಖ ಅಂಶಗಳೆಂದರೆ, ಜನಪ್ರತಿನಿಧಿಗಳಾಗ ಬಯಸುವವರು ಕೇವಲ ತಮ್ಮ ಜಾತಿಗಳನ್ನಷ್ಟೇ ತೃಪ್ತಿ ಪಡಿಸಿದರೆ ಸಾಕಾಗುವುದಿಲ್ಲ, ಬೇರೆ ಜಾತಿಯ ಮತದಾರರನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳಬೇಕಿದೆ ಎಂಬ ಸಂದೇಶವನ್ನು ಸ್ಪಷ್ಟ ಪಡಿಸಿದೆ.  ಅಲ್ಲದೆ  ಶಾಸಕ ಸಿ.ಬಿ.ಸುರೇಶ್ ಬಾಬು ಇಟ್ಟ ನಿರೀಕ್ಷೆ ಹುಸಿಯಾಗಿರುವುದು, ಮಾಜಿ ಶಾಸಕರಿಬ್ಬರು ಒಂದೇ ಪಕ್ಷದಡಿಗೆ ಬಂದಿರುವುದಕ್ಕೆ ಅಸಮಧಾನ ತೋರ್ಪಡಿಸಿರುವುದು, ಕಾಂಗ್ರೆಸ್ ಪಕ್ಷದ ಬಲವರ್ಧನೆಗೊಂಡಿರುವುದು, ಮತದಾರರ ಎಲ್ಲಾ ಚುನಾವಣೆಗಳಲ್ಲೂ ಒಂದೇ ರೀತಿ ಆಲೋಚಿಸಿದೆ ತನ್ನ ಪ್ರಜ್ಞಾವಂತಿಕೆಯನ್ನು ಮೆರೆದಿರುವುದು ಈ ಚುನಾವಣೆಯಲ್ಲಿ ಸ್ಪಷ್ಟವಾಗಿದೆ.
 ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದೀಚೆಗಿನ ಚುನಾವಣೆಗಳನ್ನು ಹೋಲಿಕೆ ಮಾಡಿದರೆ ಇರುವ ಇಬ್ಬರಲ್ಲಿ ಯಾರು ಹಿತವರು ಎಂಬಂತೆ ಆಯ್ಕೆ ಮಾಡುತ್ತಿದ್ದರು, ಮತ್ತು ಇಲ್ಲಿ ಆಯ್ಕೆಯಾಗುತ್ತಿದ್ದು ಒಮ್ಮೆ ಕುರುಬರು ಗೆದ್ದರೆ ಮತ್ತೊಮ್ಮೆ ಲಿಂಗಾಯಿತರು ಗೆಲ್ಲುತ್ತಿದ್ದರು,  ಇವರಿಬ್ಬರನ್ನು ಬಿಟ್ಟರೆ ಬೇರೆಯವರಿಗೆ ಈ ಕ್ಷೇತ್ರದಲ್ಲಿ ಅವಕಾಶವೇ ಇಲ್ಲ, ಮಿಕ್ಕ ಜಾತಿಗಳಿರುವುದು ಕೇವಲ ಮತ ಹಾಕಲಿಕ್ಕೆ ಹೊರತು ಆಯ್ಕೆ ಯಾಗುವುದಕ್ಕಲ್ಲವೇನೋ ಎಂಬಂತೆ ತೋರುತ್ತಿದ್ದು ಆದರೆ 2013ರ ವಿಧಾನ ಸಭಾ ಚುನಾವಣೆಯ ನಂತರ ಆ ಕಾಲ ಬದಲಾಗಿದೆ, ಈ ವಾದವನ್ನು 2014ರ ಲೋಕಸಭಾ ಚುನಾವಣೆ ಇನ್ನಷ್ಟು ಬಲಪಡಿಸಿದೆ. ಇಲ್ಲಿನ ನಾಯಕರು ತಮಗೆ ನಿರ್ಣಯಕ ಮತಗಳೆಂದರೆ, ಅಹಿಂದ ವರ್ಗವೂ ಸೇರಿದಂತೆ ಒಕ್ಕಲಿಗ ಮತದಾರರಿಗೂ ಮನ್ನಣೆ ನೀಡಬೇಕೆಂಬ ಆದೇಶವನ್ನು ನೀಡಿದೆ.  
 ಹಿಂದಿನ ಚುನಾವಣೆಗಳಿಗಿಂತ ಈ ಚುನಾವಣೆಯಲ್ಲಿ  ಕಾಂಗ್ರೆಸ್ ಪಕ್ಷಕ್ಕೆ  ನಿರೀಕ್ಷೆಗಿಂತ ಹೆಚ್ಚಿನ ಮುನ್ನಡೆ ಪಡೆದಿರುವುದು ಕಾಂಗ್ರೆಸಿಗರಲ್ಲಿ ಅದರಲ್ಲೂ ಯುವ ಕಾರ್ಯಕರ್ತರಲ್ಲಿ ಭಾರಿ ಉತ್ಸಹವನ್ನು ಮೂಡಿಸಿದ್ದರೆ, ಬಿ.ಜೆ.ಪಿ.ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ, ಇಲ್ಲಿನ ಬಿ.ಜೆ.ಪಿ. ಲೋಕಸಭಾ ಚುನಾವಣೆಗೂ ಮುನ್ನ  ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಕಾರ್ಯಕರ್ತರು ಪಕ್ಷವನ್ನು ಬಲಪಡಿಸುತ್ತಿದ್ದರು ಆದರೆ ಕೆ.ಜೆ.ಪಿ. ಬಿ.ಜೆ.ಪಿ. ರಾಜ್ಯದಲ್ಲಿ ವಿಲೀನಗೊಂಡ ಬಳಿಕ ಇಲ್ಲಿಯೂ ವಿಲೀನಗೊಂಡವು,  ಕೆ.ಜೆ.ಪಿ.ಯಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪಧರ್ಿಸಿದ್ದ ಜೆ.ಸಿ.ಮಾಧುಸ್ವಾಮಿ,  ಬಿ.ಜೆ.ಪಿ.ಗೆ ಸೇರ್ಪಡೆಗೊಂಡರು. ಸೇರ್ಪಡೆ ಕಾರ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಾದ್ದರಿಂದ ಸಂಧಾನ ಕಾರ್ಯ ಸ್ಪಷ್ಟವಾಗಿ ನಡೆಯದೆ ಇದ್ದುದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು, ಕಾರಣ ಹುಳಿಯಾರು, ಬುಕ್ಕಾಪಟ್ಟಣ ಭಾಗದಲ್ಲಿ ಕೆ.ಎಸ್.ಕೆ. ಪರವಾದ ಬೆಂಬಲಿಗರಿಗೂ, ಉಳಿದ ಭಾಗದಲ್ಲಿನ ಜೆ.ಸಿ.ಎಂ. ಅಭಿಮಾನಿಗಳಿಗೂ ತೆರದ ಹೃದಯದ ಹೊಂದಾಣಿಕೆ ಯಾಗದೆ,  ತೆರೆಯ ಮರೆಯ ಗೊಂದಲಗಳು ಹಾಗಿಯೇ ಉಳಿದುಕೊಂಡವು,  ಲೋಕಸಭಾ ಚುನಾವಣೆಯ ನಂತರ ಆ ಗೊಂದಲ ಇನ್ನಷ್ಟು ಜಾಸ್ತಿಯಾಯಿತು ಎನ್ನುತ್ತಾರೆ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತ ಧನಂಜಯ. 
  ಮತದಾರನೂ ಈ ಇಬ್ಬರ ಹೊಂದಾಣಕೆಿಯನ್ನು ನೇರವಾಗಿ ಒಪ್ಪಿಕೊಂಡಿಲ್ಲವೆಂಬುದನ್ನು ಈ ಚುನಾವಣೆಯಲ್ಲಿ ಅಲ್ಲಲ್ಲಿ ಕಂಡು ಬಂದಿತು. ಈ ಅಭಿಪ್ರಾಯ ಹೌದೇನೆ ಎಂಬಂತೆ ಫಲಿತಾಂಶವೂ ಬಂದಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಉಳಿದ ಅಬ್ಯಾಥರ್ಿಗಳಿಗಿಂತ 11.999 ಮತಗಳಷ್ಟು ಹೆಚ್ಚಿಗೆ ನೀಡುವ ಮೂಲಕ ಇದನ್ನು ಪುಷ್ಟಿಗೊಳಿಸಿದ್ದಾರೆ. 
ಈ ಚುನಾವಣೆಯಲ್ಲಿ ಬಿ.ಜೆ.ಪಿ. ಅಬ್ಯಾಥರ್ಿ ಜಿ.ಎಸ್.ಬಸವರಾಜು ಪಡೆದಿರುವ ಮತಗಳು 45.863 ಮತಗಳು ಮಾತ್ರ, ಈ ಅಂಕಿಯನ್ನು ನೋಡಿದರೆ ಜೆ.ಸಿ.ಎಂ. ಮತ್ತು ಕೆ.ಎಸ್.ಕೆ. ಹೊಂದಾಣಿಕೆ ಅಷ್ಟೇನು ಜಿ.ಎಸ್.ಬಿ. ಪರವಾಗಿ ಕೆಲಸ ಮಾಡಿಲ್ಲವೆನಿಸುತ್ತದೆ, ಕಾರಣ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಸಿ.ಎಂ. 49.620 ಮತಗಳನ್ನು ಪಡೆದಿದ್ದರು, ಕೆ.ಎಸ್.ಕಿರಣ್ಕುಮಾರ್ 29.150 ಮತಗಳನ್ನು ಪಡೆದಿದ್ದರು ಇವರಿಬ್ಬರ ಮತಗಳು ಸೇರಿಸಿದರೆ 78.770 ಮತಗಳಾಗುತ್ತವೆ ಆದರೆ ಇದರಲ್ಲಿ ಶೇ.60 ರಷ್ಟು  ಮತಗಳು ಜಿ.ಎಸ್.ಬಿ. ಬೀಳದಿರುವುದು ಇವರಿಬ್ಬರ ಹೊಂದಾಣಿಕೆ  ಮತದಾರರಿಗೂ  ಸಮಾಧಾನ ತಂದಿಲ್ಲವೆಂಬುದನ್ನು  ಸ್ಪಷ್ಟ ಪಡಿಸುತ್ತದೆ.
ಇನ್ನೂ ಕಾಂಗ್ರೆಸ್ ಪಕ್ಷದ ಪರವಾಗಿ ಈ ಕ್ಷೆತ್ರ ವಾಲುತ್ತಿದೆ ಎಂಬುದಕ್ಕೆ ಈ ಫಲಿತಾಂಶ ಒಂದು ಒಳನೋಟವನ್ನು ಕೊಡುತ್ತದೆ. ಅಲ್ಲದೆ ಚುನಾವಣೆಯಲ್ಲಿ ವಿಜಿಯಿಯಾಗಿರುವ ಮುದ್ದುಹನುಮೇಗೌಡರು ಹಲವು ಸಲ ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ಈ ಕ್ಷೇತ್ರವನ್ನು ನಾನು ದತ್ತು ಪಡೆಯುತ್ತೇನೆ, ಈ ಕ್ಷೇತ್ರಕ್ಕೆ ಆಗಬೇಕಾಗಿರುವ ಜನೋಪಯೋಗಿ ಕೆಲಸಗಳಿಗೆ ಒತ್ತುಕೊಟ್ಟಂತೆ  ಸಕರ್ಾರದ ಮಟ್ಟದಲ್ಲಿ ಕೆಲಸ ಮಾಡಿ ಹೆಚ್ಚಿನ ಅಭಿವೃದ್ದಿ ಕೆಲಸಕ್ಕೆ ಅನುದಾನ ತರುತ್ತೇನೆ.  ನನ್ನೆಲ್ಲಾ ಕಾರ್ಯಗಳಿಗೆ ಹೆಗಲಿಗೆ ಹೆಗಲು ಕೊಟ್ಟಿರುವ ಕಾಂಗ್ರೆಸ್ನ ಯುವ ಮುಂದಾಳು ಎಸ್.ಎನ್.ಸತೀಶ್ ಈ ಕ್ಷೇತ್ರದ ಅಭಿವೃದ್ದಿಗೆ ದುಡಿಯಲು ತೋರಿಸುತ್ತಿರುವ ಉತ್ಸಾಹ ಈ ಕ್ಷೇತ್ರವನ್ನು ಹೆಚ್ಚು ಹೆಚ್ಚು ಅಭಿವೃದ್ದಿ ಪಡಿಸಲು ಸ್ಫೂತರ್ಿ ನೀಡಿದೆ ಎನ್ನುವ ಮಾತಗಳನ್ನಾಡಿದ್ದಾರೆ.  ಈ ಎಲ್ಲವನ್ನು ಅವಲೋಕಿಸಿದಾಗ ಇಲ್ಲಿನ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಗೊಳುವ ವಿಶ್ವಾಸ ಮೂಡುತ್ತಿದೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಗುಂಪುಗಾರಿಕೆ ಮಾಡದೆ ಒಟ್ಟಾಗಿ ಕೆಲಸ ಮಾಡಿದರೆ ಮುಂದೆ ಭವಿಷ್ಯವಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ.
ಒಟ್ಟಾರೆ ಅತಿ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿರುವ ಈ ತಾಲೂಕಿಗೆ ಸಕರ್ಾರದಿಂದ ಹೆಚ್ಚಿನ ಅನುದಾನ ತಂದು, ಇಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಸರಿ ಪಡಿಸುವ, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ಕುಡಿಯಲು ಶುದ್ದ ನೀರು ಕೊಡುವ ಕಾರ್ಯಗಳು ಸೇರಿದಂತೆ ಕ್ಷೇತ್ರದ  ಅಭಿವೃದ್ದಿಗೆ ಎಲ್ಲರೂ  ಒಂದಾಗಿ ಕೆಲಸ ಮಾಡಿದರೆ ಕ್ಷೇತ್ರಕ್ಕೂ ಒಳ್ಳೆಯದು ಜನರು ಮತ ಹಾಕಿದ್ದಕ್ಕೂ ಸಾರ್ಥಕವೆನಿಸುತ್ತದೆ ಆದರೆ ಆಗಾಗುತ್ತದೆಯೇ . . . ?!

ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು  ವಿಜಯೋತ್ಸವ

ಚಿಕ್ಕನಾಯಕನಹಳ್ಳಿ,: ತುಮಕೂರು ಲೋಕಸಭಾ ಚುನಾವಣೆಯಲ್ಲಿ ಎಸ್.ಪಿ.ಮುದ್ದಹನುಮೇಗೌಡರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲೂ ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು,  ಈ ಫಲಿತಾಂಶವೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ನಾಂದಿಯಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ನೆಹರು ಸರ್ಕಲ್ನಲ್ಲಿ ಎಂ.ಪಿ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಮುದ್ದುಹನುಮೇಗೌಡರು ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಬಸವರಾಜು, ಎಸ್.ಪಿ.ಮುದ್ದಹನುಮೇಗೌಡರಿಗೆ ಕ್ಷೇತ್ರದಲ್ಲಿ 11999 ಹೆಚ್ಚು ಮತ ಪಡೆದಿರುವುದು ನೋಡಿದರೆ ಮುಂದಿನ ಬಾರಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ, ಮುದ್ದಹನುಮೇವಗೌಡರೇ ನಮಗೆ ಶಾಸಕರು,  ಅವರ ನೇತೃತ್ವದಲ್ಲಿ ತಾಲ್ಲೂಕಿನಾದ್ಯಂತ ಕಾಂಗ್ರೆಸ್ ಬಲಪಡಿಸಲು ಎಲ್ಲರೂ ಒಂದಾಗಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕಾಂಗ್ರೆಸ್ ಗೆಲುವಿಗೆ ಶ್ರಮಿಸುವುದಾಗಿ ಹೇಳಿದರು. 
ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಮಾತನಾಡಿ ಮುದ್ದಹನುಮೇಗೌಡರ ಪರವಾಗಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ರಾಜ್ಯದ ನಾಯಕತ್ವ ಹಾಗೂ ರಾಜ್ಯ ಸಕರ್ಾರ ಹಮ್ಮಿಕೊಂಡಿರುವ ಅಭಿವೃದ್ದಿ ಯೋಜನಾ ಕಾಯಕ್ರಮಗಳಿಗೆ ತಾಲ್ಲೂಕಿನ ಹಾಗೂ ಜಿಲ್ಲಯ ಜನತೆ ಕಾಂಗ್ರೆಸ್ನ್ನು ಬೆಂಬಲಿಸಿದ್ದಾರೆ ಎಂದರು. 
ಕಾಂಗ್ರೆಸ್ ಮುಖಂಡರಾದ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕಾಂಗ್ರೆಸ್ಗೆ ಜನತೆ ಅತಿ ಹೆಚ್ಚು ಮತ ನೀಡಿ  ಕಾಂಗ್ರೆಸ್ ಅಭ್ಯಥರ್ಿ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯ ಸಿ.ಪಿ.ಮಹೇಶ್, ಕಾಂಗ್ರೆಸ್ ಮುಖಂಡರುಗಳಾದ ಹೊಸಹಳ್ಳಿ ಅಶೋಕ್, ಸಿ.ಎಂ.ಬೀರಲಿಂಗಯ್ಯ, ಕೆ.ಜಿ.ಕೃಷ್ಣೆಗೌಡ, ಸಿ.ಕೆ.ಗುರುಸಿದ್ದಯ್ಯ, ರಾಜಣ್ಣ, ತೀರ್ಥಪುರದ ವಾಸು, ವಕೀಲ ಪರಮೇಶ್ವರ್, ಸಜ್ಜಾದ್, ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತಿದ್ದರು.