Friday, June 28, 2013

ಸಕರ್ಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಸವಲತ್ತು ಸಿಗಲಿ ಪ್ರೊ.ಸಿ.ಹೆಚ್.ಮರಿದೇವರು
ಚಿಕ್ಕನಾಯಕನಹಳ್ಳಿ,ಜೂ.28 : ಕಾನ್ವೆಂಟ್ ಶಾಲೆಗಳ ಅಬ್ಬರದಲ್ಲಿ ಕನ್ನಡದ ಸೊಲ್ಲು ಅಡಗಿಹೋಗುತ್ತದೇನೋ ಎನ್ನುವಂತಾಗಿದೆ, ಇದಕ್ಕೆ ಕನ್ನಡಿಗರೆಲ್ಲ ಕಂಕಣ ಕಟ್ಟಿಕೊಂಡು ಕನ್ನಡವನ್ನು ಉಳಿಸುವ ಬೆಳೆಸುವ ಪ್ರತಿಜ್ಞೆಯನ್ನು ತೊಡಬೇಕು. ಸಕರ್ಾರ ಕನ್ನಡ ಶಾಲೆಗಳಿಗೆ ಕಾನ್ವೆಂಟ್ ಶಾಲೆಗಳಲ್ಲಿರುವಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕನ್ನಡವನ್ನು ಸಂರಕ್ಷಿಸುವ ಹೊಣೆಗಾರಿಗೆ ತಾಳಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಇಂಗ್ಲೀಷ್ ಎಂಬ ಸಾಂಕ್ರಾಮಿಕ ರೋಗ ಕನರ್ಾಟಕ ರಾಜ್ಯಕಷ್ಟೇ ಅಲ್ಲ, ಇಡೀ ಭರತಖಂಡಕ್ಕೆಲ್ಲ ಹಬ್ಬಿದೆ. ಅದು ವಿಶ್ವವೆಲ್ಲವನ್ನೂ ಆವರಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಕನರ್ಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕ. ಸಕರ್ಾರವೇ ಕನ್ನಡ ಶಾಲೆಗಳನ್ನು ಮುಚ್ಚುವ ತರದೂರಿನಲ್ಲಿದೆ. ಇದೊಂದು ಬಹುದೊಡ್ಡ ದುರಂತ. ಸಾಹಿತ್ಯ ಜನಜೀವನದ ಗತಿಬಿಂಬವಾಗಬೇಕು ಮತ್ತು ಪ್ರತಿಬಿಂಬವಾಗಬೇಕು ನಿಜ. ಸಾಹಿತ್ಯವು ಜೀವನದಲ್ಲಿ ಅನ್ನ ಬಟ್ಟೆ ವಸತಿಗಳನ್ನು ಒದಗಿಸಿಕೊಡುವುದಿಲ್ಲ. ಆದರೆ ಅವುಗಳನ್ನು ಸನ್ಮಾರ್ಗದಲ್ಲಿ ಸಂಪಾದಿಸಿಕೊಳ್ಳಲು ತಿಳುವಳಿಕೆ ನೀಡುತ್ತದೆ. ಅದು ಜೀವನಕ್ಕೆ ಹೊಸ ದೃಷ್ಠಿ ನೀಡಲು ನೆರವಾಗುತ್ತದೆ. ಸತತ ಅಧ್ಯಯನದಿಂದ ಜೀವನ ನವನವೋನ್ಮೇಶಾಲಿಯಾಗುತ್ತದೆ. 
ಉತ್ತಮ ಸಂಸ್ಕೃತಿ ಸಂಸ್ಕಾರ ಮತ್ತು ನಾಗರಿಕತೆಗಳನ್ನು ರೂಪಿಸಿಕೊಳ್ಳಲು ಶಕ್ತಿ ನೀಡುತ್ತದೆ. ವ್ಯಕ್ತಿ ವ್ಯಕ್ತಿತ್ವವು ಪರಿಮಳಭರಿತವಾದ ದುಂಡುಮಲ್ಲಿಗೆಯ ಪುಷ್ಪದಂತೆ ಅರಳಲು ಸಹಾಯಕವಾಗುತ್ತದೆ. ಇಂದಿನ ರಾಜಕೀಯ, ಚಲನಚಿತ್ರ, ದೂರದರ್ಶನ, ಕ್ರಿಕೆಟ್ ಮೊದಲಾದವುಗಳಿಗೆ ಅತಿಯಾದ ಪ್ರಚಾರ ದೊರೆಯುತ್ತಿರುವುದರಿಂದ, ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವ ವರ್ಗ, ಅಭ್ಯಸಿಸುವ ವರ್ಗ ಕಡಿಮೆ ಆಗುತ್ತಿದೆಯೇನೊ ಎಂಬ ಅನುಮಾನ ಕಾಡುತ್ತಿದೆ. ಆದರೆ ಅವುಗಳಿಗಿಂತಲೂ ಸಾಹಿತ್ಯವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳುವುದು ತುಂಬಾ ಒಳ್ಳೆಯದು.
ಇಂದಿಗೂ ಕ್ರಿಯಾಶೀಲವಾಗಿ ಹಾಗೂ ಸೃಜನಾತ್ಮಕವಾಗಿ ಉಳಿದಿರುವ ಒಂದು ಧೀಮಂತ ಭಾಷೆ ಕನ್ನಡ ಈ ಕನ್ನಡದ ಅಭಿವೃದ್ದಿಗಾಗಿ ಅನ್ಯಭಾಷೆಗಳಿಂದ ಕೊಳ್ಳೆಹೊಡೆದು ಕನ್ನಡ ಭಾಷಾ ಕಣಜವನ್ನು ತುಂಬಿಸಿ ಅದನ್ನು ಶ್ರೀಮಂತ ಮಾಡಬೇಕಾದ್ದು ಕನ್ನಡ ನಾಡಿನ ಎಲ್ಲ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಈಲ್ಲೆಯಲ್ಲಿ ಗಮಕಕಲೆ, ಚಿತ್ರಕಲೆ, ನೃತ್ಯಕಲೆ, ಸಂಗೀತಕಲೆ, ಜಾನಪದ ಕಲೆ, ಶಿಲ್ಪಕಲೆ ಮತ್ತು ಕಲಾವಿದರುಗಳು ಅಗಣಿತ ಪ್ರಮಾಣದಲ್ಲಿದ್ದಾರೆ.
ಸಂಸ್ಕೃತ, ತಮಿಳು, ತೆಲುಗು ಭಾಷೆಗಳಿಗೆ ಸಿಕ್ಕಂತೆ ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗಿದೆ. ಆದರೆ ಅದಕ್ಕೆ ಸಿಕ್ಕಬೇಕಾದ ಸೌಲಭ್ಯಗಳು ಇನ್ನೂ ಲಭ್ಯವಾಗಿಲ್ಲ. ಆ ದಿಕ್ಕಿನಲ್ಲಿ ನಮ್ಮ ರಾಜ್ಯದ ಸಂಸದರು ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಇತ್ತೀಚೆಗೆ ಕೊಬರಿಗೆ ಸರಿಯಾದ ಬೆಲೆ ನಿಗದಿಗೊಳ್ಳದೇ ತೆಂಗು ಬೆಳೆವ ರೈತರು ಕಂಗಾಲಾಗಿ ಹೋಗಿದ್ದಾರೆ. ಜತೆಗೆ ಮಳೆಯ ಅಭಾವ, ಬೋರ್ವೆಲ್ಗಳೆಲ್ಲ ಬತ್ತಿಹೋಗಿರುವುದು, ಅಂತರ್ ಜಲ ಕುಸಿತ, ನುಸಿಪೀಡೆ, ಕಪ್ಪುತಲೆ ಹುಳುವಿನ ಬಾದೆ ಇತ್ಯಾದಿ ಅನೇಕಾನೇಕ ಸಂಕಷ್ಟಗಳಿಗೆ ಸಿಕ್ಕಿ ತೆಂಗು ಬೆಳೆಗಾರರು ನಲುಗಿಹೋಗಿದ್ದಾರೆ. ವಿಶೇಷವಾಗಿ ಈ ಸಮಸ್ಯೆಗಳ ನಿವಾರಣೆಗಾಗಿ ಪ್ರಸ್ತುತ ಸಕರ್ಾರದ ಜನಪ್ರತಿನಿಧಿಗಳು ನಮ್ಮ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನಿಗಧಿಗೊಳಿಸಲು ಶ್ರಮಿಸಬೇಕಾಗಿದೆ.
ತೆಂಗು ಬೆಳೆಗಾರ ರೈತರ ನೆರವಿಗೆ ಇರುವುದೊಂದೇ ಮಾರ್ಗ. ಸಕರ್ಾರ ಭದ್ರಾ ಮೇಲ್ದಂಡೆ ಯೋಜನೆ, ನೇತ್ರಾವತಿ ತಿರುವು ಯೋಜನೆ ಮತ್ತು ವಾಟರ್ಗ್ರಿಡ್ ಕೆನಾಲ್ ಮೂಲಕ ರಾಜ್ಯದ ಅನೇಕ ಜಿಲ್ಲೆಗಳ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದರೆ ತೆಂಗು ಬೆಳೆ ರೈತರು ಬದುಕಲು ದಾರಿಯಾಗುತ್ತದೆ.
101ಜನ ವಿಭೂತಿ ಪುರುಷರ ಶಿಲಾ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಹುಚ್ಚನ್ನು ಹತ್ತಿಸಿಕೊಂಡಿದ್ದೇನೆ. ಕೆವಲ ಶಿಲಾಪ್ರತಿಮೆಗಳನ್ನು ನಿಲ್ಲಿಸುವುದಷ್ಟೇ ಅಲ್ಲ. ಪ್ರತಿಯೊಂದು ಶಿಲಾಪ್ರತಿಮೆಯ ಪೀಠಭಾಗದಲ್ಲಿ ಅವರವರ ಸುಪ್ರಸಿದ್ದ ಧ್ಯೇಯವಾಕ್ಯಗಳನ್ನು ಶಿಲಾಫಲಕದಲ್ಲಿ ಕೆತ್ತಿಸಿ ಹಕುವುದು ಎಂದರಲ್ಲದೆ ಶಿಲಾಪ್ರತಿಮೆಗಳ ಸ್ಥಾಪನೆಗಾಗಿ ಸಿದ್ದರಮನಗರಕ್ಕೆ 3ಕಿ.ಮೀ ಚಿಕ್ಕನಾಯಕನಹಳ್ಳಿಗೆ 8ಕಿ.ಮೀ ತುಮಕೂರಿಗೆ 28 ಕಿ.ಮೀ ಬೆಂಗಳೂರಿಗೆ 118ಕಿ.ಮೀ ದೂರದಲ್ಲಿರುವ ಸುಂಟರಮಳೆಗೆ ಶ್ರೀ ಗುರುಸಿದ್ದರಾಮೇಶ್ವರರ ದಏವಾಲಯದ ಬೆಟ್ಟದ ತಪ್ಪಲಿನ ಪ್ರದೇಶ. ಅಲ್ಲಿ ಒಂದಷ್ಟು ಸಕರ್ಾರಿ ಭೂಮಿ ಇದೆ. ಅದನ್ನು ಲೀಸ್ ಪಡೆದುಕೊಳ್ಳಲು ಶ್ರೀ ಸಿದ್ದರಾಮೇಶ್ವರ ಸೇವಾ ಟ್ರಸ್ಟ್ನವರು ಅಜರ್ಿ ಸಲ್ಲಿಸುವವರಿದ್ದಾರೆ. ಅದಕ್ಕೆ ಜಿಲ್ಲಾ ಸಚಿವರಾದ ಟಿ.ಬಿ.ಜಯಚಂದ್ರರವರು ಹಾಗೂ ಸ್ಥಳೀಯ ಶಾಸಕ ಸುರೇಶ್ಬಾಬುರವರು ಹೆಚ್ಚು ಮುತುವಜರ್ಿ ವಹಿಸಿ ಆ ಜಮೀನನ್ನು ನಿಯಮಗಳ ಪ್ರಕಾರ ಲೀಸ್ ಕೊಡಿಸಬೇಕಾಗಿ ಪ್ರಾಥರ್ಿಸುತ್ತೇನೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಾಹಿತ್ಯದ ಸೋಂಕಿಲ್ಲದೇ ಪರಿಪೂರ್ಣ ಮನುಷ್ಯನಾಗಲು ಸಾಧ್ಯವಿಲ್ಲ ಎಂದ ಅವರು ಸಾಹಿತ್ಯದ ಓದು-ಬರವಣಿಗೆ ಮನಷ್ಯನ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ ಅಲ್ಲದೇ ಮಾನವೀಯತೆ ಹೃದಯ ವೈಶಾಲ್ಯತೆಯನ್ನು ಬೆಳೆಸಲು ಸಹಕಾರಿಯೆಂದರು.
ಸಾಹಿತ್ಯ ಸಮ್ಮೇಳನಗಳು ಕನ್ನಡದ ಬೇರುಗಳನ್ನು ಗಟ್ಟಿಮಾಡುವ ಕೆಲಸಮಾಡಬೇಕಿದೆ ಎಂದು ಆಶಿಸಿದ ಸಚಿವರು ಕನರ್ಾಟಕ ಏಕೀಕರಣವಾಗಿ 60 ವರ್ಷಗಳು ಕಳೆದಿದ್ದು, ಸಂಪೂರ್ಣ ಕನ್ನಡೀಕರಣದ ಆಶಯ ಇನ್ನೂ ಈಡೇರಿಲ್ಲ. ಕೇಂದ್ರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಸೌಲಭ್ಯ ಕಲ್ಪಿಸಿದ್ದರೂ ಆಡಳಿತ ಕ್ಷೇತ್ರದಲ್ಲಿ ಕನ್ನಡದ ಶಬ್ದ ಭಂಡಾರ ವಿಸ್ತ್ರತಗೊಳ್ಳದಿರುವುದು ವಿಷಾದನೀಯವೆಂದರು.
ಚಿ.ನಾ.ಹಳ್ಳಿಗೆ ಶಾಶ್ವತ ನೀರಿನ ಯೋಜನೆ: ಚಿಕ್ಕನಾಯಕನಹಳ್ಳಿ ನನಗೆ ಜನ್ಮ ನೀಡಿ, ರಾಜಕೀಯ ನೆಲೆ ಕಲ್ಪಿಸಿಕೊಟ್ಟ ತಾಲೂಕು ಎಂದು ಸ್ಮರಿಸಿದ ಸಚಿವರು ತೆಂಗು ಬೆಳೆದು ಸಮೃದ್ದ ಜೀವನ ನಡೆಸುತ್ತಿದ್ದ ಜನರು ಇಂದು ಮಳೆಯಿಲ್ಲದೆ, ಬೆಳೆಯಿಲ್ಲದೆ ಬರಗಾಲದಿಂದ ತತ್ತರಿಸಿದ್ದಾರೆ. ಈ ಭಾಗಕ್ಕೆ ನೀರು ಹರಿಸಬೇಕೆಂದು ದಿ.ಎನ್.ಬಸವಯ್ಯ ಅವರ ಕಾಲದಿಂದಲೂ ಪ್ರಯತ್ನ ನಡೆಯುತ್ತಾಬಂದಿದೆ. ಈ ಭಾಗಕ್ಕೆ ಶಾಶ್ವತ ನೀರು ಕಲ್ಪಿಸಲು ಬಜೆಟ್ನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಕನ್ನಡ ಭವನ ನಿಮರ್ಾನಕ್ಕೆ ಬದ್ದ: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೆನಪಿಗಾಗಿ ತುಮಕೂರಿನಲ್ಲಿ ನಿಮರ್ಿಸುತ್ತಿರುವ ಕನ್ನಡ ಭವನ ಪೂರ್ಣಗೊಳಿಸಲು ಬದ್ಧರಿರುವುದಾಗಿ ಭರವಸೆ ನೀಡಿದ ಸಚಿವರು ಚಿ.ನಾ.ಹಳ್ಳಿಯ ತೀನಂಶ್ರೀ ಭವನ ಹಾಗೂ ಕನ್ನಡ ಭವನ ನಿಮರ್ಾಣ ಪೂರ್ಣಗೊಳಿಸಲು ಸಹಕಾರ ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ರವರ ಕನ್ನಡಿಗನ ಕಣ್ಣಲ್ಲಿ ಕಠ್ಮಾಂಡು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅಬ್ಕಾರಿ ಆಯುಕ್ತ ಡಾ.ಸಿ.ಸೋಮಶೇಖರ್, ಕನ್ನಡ ಭಾಷೆಯ ಮೇಲೆ ಅನೇಕ ಆಕ್ರಮಣಗಳು ನಡೆದರೂ ಭಾಷೆಯ ಸತ್ವಕ್ಕೆ ಕುಂದು ಉಂಟಾಗಿಲ್ಲ.ಆದರೆ ದೃಶ್ಯ ಮಾಧ್ಯಮದವರ ಅಕ್ಷರ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದು, ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು. 
ಕನ್ನಡ ಭಾಷೆ, ನೆಲ,ಜಲ,ಬದುಕು ಹಾಗೂ ಸಂಸ್ಕೃತಿಯ ಮೇಲೆ ಆಕ್ರಮಣಗಳು ಹೆಚ್ಚಾಗಿರುವುದು ವಿಷಾದ ಸಂಗತಿಯಾಗಿದೆಯೆಂದರು. 
ಸಮ್ಮೇಳನದ ಅಂಗವಾಗಿ ಹೊರತಂದ ಕಣಜ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡಿಗರಿಗೆ ಸಿಇಟಿಯಲ್ಲಿ ಶೇ.50ರಷ್ಟು ಹಾಗೂ ಉದ್ಯೋಗದಲ್ಲಿ ಮೀಸಲು ಕಲ್ಪಿಸಬೇಕಲ್ಲದೇ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಓದುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಚಾರ್ ಆಶಯ ನುಡಿಗಳನ್ನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಜಿಲ್ಲಾಧಿಕಾರಿ ಸತ್ಯಮೂತರ್ಿ, ಸಿಇಓ ಗೋವಿಂದರಾಜು, ಜಿ.ಪಂ.ಉಪಾಧ್ಯಕ್ಷೆ ಮಮತ, ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ , ತಾಲೂಕು ಕಸಾಫ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪತ್ರಕರ್ತ ಚಿ.ನಿ.ಪುರುಷೋತ್ತಮ,ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಸಾಹಿತಿ ಎಂ.ವಿ.ನಾಗರಾಜರಾವ್, ನಿಕಟಪೂರ್ವ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
ಬಾಕ್ಸ್
ರಾಜ್ಯ ಸರಕಾರದ ಕಾನೂನು, ಅಧಿನಿಯಮಗಳನ್ನು ಸಂಪೂರ್ಣ ಕನ್ನಡೀಕರಣ ಗೊಳಿಸಲು ಚಿಂತನೆ ನಡೆದಿದ್ದು, ಅನೇಕ ಸವಾಲುಗಳು ಎದುರಾಗಿವೆ. ಆಡಳಿತ ಕನ್ನಡದ ಶಬ್ದ ಬಂಡಾರ ವಿಸ್ತರಣೆಗೆ ಕಸಾಪ ನೆರವು ಅಗತ್ಯವಾಗಿದೆ.,
-ಟಿ.ಬಿ.ಜಯಚಂದ್ರ ಕಾನೂನು ಸಚಿವರು


ಮೆರವಣಿಗೆಯ ಮೂಲಕ ಪ್ರಧಾನ ವೇದಿಕೆಗೆ ಆಗಮಿಸಿದ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು
ಚಿಕ್ಕನಾಯಕನಹಳ್ಳಿ,ಜೂ.28 : ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು ಕುಳಿತಿರುವ ಪುಷ್ಪಾಲಂಕೃತವಾದ ವಾಹನವು  ಕನ್ನಡ ಸಂಘದ ವೇದಿಕೆಯಿಂದ ಆರಂಭಗೊಂಡು, ಪಟ್ಟಣದ ರಾಜ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಧಾನ ವೇದಿಕೆಗೆ ಕರೆದೊಯ್ಯಲಾಯಿತು.
ಸಮ್ಮೇಳನಾಧ್ಯಕ್ಷರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೀರಗಾಸೆ, ಚಕ್ಕೆಭಜನೆ, ಗಾರುಡಿಗೊಂಬೆ, ಗೊವರನ ಕುಣಿತ, ಪೂಜಾ ಕುಣೀತ, ಹೆಜ್ಜೆಮೇಳ, ಮಹಿಳಾ ತಮಟೆ, ಕೋಲಾಟ, ಲಂಬಾಣಿ ನೃತ್ಯ, ಗಾಲ್ಡಿಗನ ಕುಣಿತ, ಕಂಸಾಳೆ, ಡೊಳ್ಳುಕುಣಿತ, ನಾದಸ್ವರ, ತಮಟೆ ವಾದ್ಯ, ಅರೇವಾದ್ಯ, ಕಹಳೆ, ಚಿಟ್ಟಿಮೇಳ, ಸೋಮನಕುಣಿತ, ಸ್ತ್ರೀಭಜನಾತಂಡ, ಗೊರವಯ್ಯನ ಕುಣಿತ ಹಾಗೂ ವಿವಿಧ ಜಾನಪದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಮ್ಮೇಳನದಲ್ಲಿ ಪ್ರದಶರ್ಿನಿ ಸಮುಚ್ಛಯ , ಗುಡಿಕೈಗಾರಿಕಾ ಪ್ರದಶರ್ಿನ, ಪುಸ್ತಕ ಮಳಿಗೆ ಉದ್ಘಾಟನೆ, ರಂಗೋಲಿ ಚಿತ್ತಾರ, ಕಣದ ರಾಶಿ, ಛಾಯಾಚಿತ್ರ ಪ್ರದರ್ಶನ, ಭುವೇಶ್ವರಿ ಶಿಲ್ಪ ಅನಾವರಣ ಸಾರ್ವಜನಿಕರನ್ನು ಆಕಷರ್ಿಸಿತು.
ಪಟ್ಟಣದ ತುಂಬ ಊರಿನ ಹಿರಿಯ ಹೆಸರಿನಿಂದ ಕೂಡಿದ ಬಾಗಿಲುಗಳು, ಕಮಾನುಗಳು ಆಕಷರ್ಿಸಿದವು.
ಮೆರವಣಿಗೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಾ.ಪಂ.ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಹೆಚ್.ಬಿಕ.ಪಂಚಾಕ್ಷರಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಸಿ.ಬಿ.ರೇಣುಕಸ್ವಾಮಿ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರವಿಚಂದ್ರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಸೀಮೆಎಣ್ಣೆ ಕೃಷ್ಣಯ್ಯ ಸೇರಿದಂತೆ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

Monday, June 24, 2013


9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ದತೆ: ಎಂ.ಎಸ್.ರವಿಕುಮಾರ್

ಚಿಕ್ಕನಾಯಕನಹಳ್ಳಿ,ಜೂ.24 : 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದ್ದು ಸಮ್ಮೇಳನಕ್ಕೆ ಗ್ರಾಮೀಣ ಹೆಣ್ಣುಮಕ್ಕಳು ರೊಟ್ಟಿ ತಯಾರಿಸಿ ತರುವುದು,  ಆರಂಭವಾಗುವ ಒಂದು ದಿನ ಮುಂಚಿತವಾಗಿಯೇ ಗಿಳಿವಿಂಡು ಮಕ್ಕಳ ತಂಡದಿಂದ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮ್ಮೇಳನಕ್ಕೆ ಪ್ರಾರಂಭವಾಗಲಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ಕಸಾಪ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 28,29, ಹಾಗೂ 30ರಂದು ವಿದ್ಯುಕ್ತವಾಗಿ ಸಮ್ಮೇಳನ ನಡೆಯಲಿದೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಕನ್ನಡ ಸಂಘದಿಂದ ಆರಂಭಗೊಂಡು  ಪಟ್ಟಣದ ನಾಲ್ಕು ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ಈ ವೇಳೆ 30ಕ್ಕೂ ಹೆಚ್ಚು ಕಲಾ ತಂಡಗಳು ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ, ಸಮ್ಮೇಳನದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೂ  ಅಗತ್ಯವಿರುವ ಪೂರ್ವ ಸಿದ್ದತೆಗಳನ್ನು ಸಿದ್ದಪಡಿಸಿಕೊಂಡಿದ್ದೇವೆ, 25ರಂದು ಸಮ್ಮೇಳನದ ಪರವಾಗಿ ಪಟ್ಟಣದ ಬೀದಿಗಳಲ್ಲಿ ಧನ ಧಾನ್ಯ ಸಂಗ್ರಹಣೆಗಾಗಿ ಕನ್ನಡ ಪರ ಸಂಘಟನೆಗಳು, ಆಟೋ ಚಾಲಕರ ಸಂಘದಿಂದ  ಜಾಥಾ ನಡೆಸಲಿವೆ. 27ರಂದು ಮಕ್ಕಳ ನಾಟಕಗಳು ವಿಶೇಷ ಆಕರ್ಷಣೆ ಪಡೆಯಲಿದ್ದು ಶಾಲಾ ಕಾಲೇಜು ವಿದ್ಯಾಥರ್ಿಗಳ ಎನ್.ಎಸ್.ಎಸ್ ವಿದ್ಯಾಥರ್ಿಗಳು ನಮಗೆ ಕೈಜೋಡಿಸಲಿದ್ದಾರೆ ಎಂದರು. 
ಸಮ್ಮೇಳನದಲ್ಲಿ ವಿಶೇಷವಾಗಿ ನಮ್ಮೂರಲ್ಲಿ ಗಜಲ್ ಎಂಬ ವಿಶೇಷ ಕವಿಗೋಷ್ಠಿ ಹಾಗೂ  ವಿವಿಧ ಗೋಷ್ಠಿಗಳಲ್ಲಿ ನಡೆಯುವ ಸಾಹಿತ್ಯ, ಸಾಂಸ್ಕೃತಿಯ, ವೈಶಿಷ್ಟ್ಯತೆಗಳ ಅನಾವರಣ, ಕೃಷಿಗೆ ಸಂಬಂಧಿಸಿದ ವಿಷಯಗಳ ಮಂಡನೆ, ಚಚರ್ೆ ತೆಂಗು ಬೆಳೆಗೆ ಸಂಬಂಧಿಸಿದ ಮಾರುಕಟ್ಟೆ, ಅದರ ಮುಂದಿನ ಪರಿಣಾಮಗಳ ಚಿಂತನೆ, ಕುಂಚಾಂಕುರ ಕಲಾ ಸಂಘದ ಆಕರ್ಷಕ ಚಿತ್ರಕಲೆಗಳ ಪ್ರದರ್ಶನ, ಶಿಲ್ಪಿ ವಿಶ್ವನಾಥ್ರವರಿಂದ ಕೆತ್ತಲ್ಪಟ್ಟ ಭುವನೇಶ್ವರಿ ವಿಗ್ರಹದ ಅನಾವರಣ, ಛಾಯಾಚಿತ್ರ ಸಂಘಗಳಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ದರ್ಶನ, ರಾಜ್ ಅಭಿಮಾನಿ ಸಿ.ಹೆಚ್.ರೂಪೇಶ್ರವರ ರಾಜ್ ಪ್ರದರ್ಶನ, ರಂಗೋಲಿ ಚಿತ್ತಾರ, ಗುಡಿ ಕೈಗಾರಿಕೆಗಳಾದ ಕಂಬಳಿ, ಬುಟ್ಟಿ, ಕುಂಬಾರಿಕೆಗಳ ಪ್ರದರ್ಶನ, ಹಾಗೂ ಮೆರವಣಿಗೆಯಲ್ಲಿ ವೈಶಿಷ್ಟ್ಯಪೂರ್ಣ ಕಲಾ ತಂಡಗಳ, ಸಾಂಸ್ಕೃತಿ ವೈಭವ ಪ್ರತಿಬಿಂಬಿಸುವ ಜಾನಪದ ಕಲೆಗಳ ಪ್ರದರ್ಶನವಿರುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಪರಿಷತ್ನ ಪ್ರಧಾನ ಕಾರ್ಯದಶರ್ಿಗಳಾದ ಉಪನ್ಯಾಸಕ ರವಿಕುಮಾರ್ ಮಂಜುನಾಥರಾಜ ಅರಸ್,  ನಂದೀಶ್ ಬಟ್ಲೇರಿ, , ಸಿ.ಟಿ.ಗುರುಮೂತರ್ಿ, ಎಸ್.ಬಿ.ಕುಮಾರ್, ಸಿ.ಹೆಚ್.ಗಂಗಾಧರ್ ಉಪಸ್ಥಿತರಿದ್ದರು. 

Friday, June 21, 2013


ಹೇಮಾವತಿ ನೀರು ತರುವ ಯೋಜನೆಗೆ 35 ಕೋಟಿ ರೂ ಬಿಡುಗಡೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜೂ.21 ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಬಳಿ ಒಂದುವರೆ ಎಕರೆ ಜಮೀನಿದ್ದು ಈ ಸ್ಥಳದಲ್ಲಿ ಶಾಸಕರ ಅನುದಾನ ಸೇರಿದಂತೆ ಭಕ್ತಾಧಿಗಳ ನೆರವಿನಿಂದ ಕಲ್ಯಾಣ ಮಂಟಪ ನಿಮರ್ಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ನೂತನ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನ ಧಾಮರ್ಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ್ಲ ತಾಲೂಕಿಗೆ  ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ 35ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ತಿಳಿಸುವುದು ನನಗೆ ಸಂತಸತಂದಿದೆ ಎಂದರಲ್ಲದೆ, .ತಾಲ್ಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ದೇವಾಲಯಗಳಿರುವ  ಬೀಡಾಗಿದ್ದು ಪ್ರಸಿದ್ದ ಹಳೆಯೂರು ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹಲವು ಪುರಾತನ ದೇವಾಲಯಗಳು ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವಿರುವುದು ತಾಲ್ಲೂಕಿನ ಹೆಮ್ಮೆಯ ವಿಷಯ ಎಂದರು.
ಪಟ್ಟಣದಲ್ಲಿ ಹಲವಾರು ವರ್ಷಗಳಿಂದ  ನೆನಗುದಿಗೆ ಬಿದ್ದಿದ್ದ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನೆ ಭಕ್ತಾಧಿಗಳ ನೆರವಿನಿಂದ ಕೈಗೊಂಡು ಪೂರ್ಣಗೊಂಡಿದೆ ಎಂದರಲ್ಲದೆ, ದೇವಾಲಯದ ಸಮಿತಿಯ ಸದಸ್ಯರು ರಾತ್ರಿ ಹಗಲು ಎನ್ನದೆ ದೇವಾಲಯದ ಜೀಣರ್ೋದ್ದಾರ ಶ್ರಮಿಸಿರುವುದು ಶ್ಘಾಘನೀಯ ಎಂದರು.
ನಿವೃತ್ತ ವಾತರ್ಾ ಮತ್ತು ಪ್ರಸಾರ ಇಲಾಖೆ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಹಾಲಿ ಕನ್ವಿನಿಯರ್ ಚಂದ್ರಶೇಖರ್ಶೆಟ್ಟಿರವರ ಧಾಮರ್ಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜೀಣೋದ್ದಾರ ಮಾಡಿರುವುದು ಶ್ಘಾಘನೀಯವಾದುದು ಎಂದರು.
ರಾಜ್ಯ ಜೆ.ಡಿ.ಎಸ್.ವಕ್ತಾರ ರಮೇಶಬಾಬು ಮಾತನಾಡಿ ಚಿ.ನಾ.ಹಳ್ಳಿ ತಾಲ್ಲೂಕು ದೇವಾಲಯದ ಬೀಡಾಗಿದೆ, ಧಾಮರ್ಿಕ ಕಷೇತ್ರದಲ್ಲಿ ತಾಲ್ಲೂಕಿಗೆ ವಿಶೇಷ ಸ್ಥಾನಮಾನವಿದೆ,ಪಟ್ಟಣದ ವೆಂಕಟರಮಣ ದೇವಾಲಯ ಪ್ರಸನ್ನರಾಮೇಶ್ವರದೇವಾಲಯ, ಬನಶಂಕರಿದೇವಾಲಯ, ಆದಿಆಂಜನೇಯಸ್ವಾಮಿ ದೇವಾಲಯ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿವೆ ಎಂದರು.
ಈ ಸಂದರ್ಭದಲ್ಲಿ ಅರ್ಚಕರಾದ ನಾಗೇಶ್ ಹಾಗೂ ರಾಮಕೃಷ್ಣಜೋಯಿಸ್ರವರನ್ನು ಸನ್ಮಾನಿಸಲಾಯಿತು. ಹಾಗೂ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನದ ಫಲಾನುಭವಿಗಳಿಗೆ ಚೆಕ್ನ್ನು ವಿತರಿಸಲಾಯಿತು.
ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಶಂಕುಸ್ಥಾಪನೆ ರಾಜಗೋಪುರ ಕಳಸಸ್ಥಾಪನೆಸ ಪ್ರಾಣಪ್ರತಿಷ್ಠಾಪನೆ, ಶ್ರೀ ರಾಮತಾರಕ ಹೋಮವನ್ನು ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದಸ್ವಾಮಿಯವರು ನೆರವೇರಿಸಿದರು.
ಕಾರ್ಯಕ್ರಮವನ್ನು ತಹಶೀಲ್ದಾರ್ ಕಾಮಾಕ್ಷಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಸಾಹಿತಿ ಎಂ.ವಿ.ನಾಗರಾಜ್ರಾವ್, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ದೇವಾಲಯದ ಕನ್ವಿನಿಯರ್ ಚಂದ್ರಶೇಖರ್ಶೆಟ್ಟಿ, ತಾ.ಜೆಡಿಎಸ್ ಅಧ್ಯಕ್ಷ ಜಿ.ರಘುನಾಥ್, ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ಪ್ರಕಾಶ್, ರವಿಚಂದ್ರ, ದಯಾನಂದ್, ಮೈನ್ಸ್ಶಾಂತಕುಮಾರ್, ಸಿ.ಬಿ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 ತರಬೇತಿಯನ್ನು ಹಾಗೂ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿ
ಚಿಕ್ಕನಾಯಕನಹಳ್ಳಿ,ಜೂ.21 : ಗ್ರಾಮದ ಅಭಿವೃದ್ದಿಗಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಗ್ರಾಮಸ್ಥರಿಗೆ ನೀಡುವ ತರಬೇತಿಯನ್ನು ಹಾಗೂ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ನಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಪರ್ಾಡು ಮಾಡಬೇಕು ಎಂದು ಒಕ್ಕೂಟದ ಅಧ್ಯಕ್ಷ ನಿರಂಜನಮೂತರ್ಿ ಹೇಳಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಚಿಂತಮಣಿ ನೇರಳೆ ನಾಟಿ ಮತ್ತು ನಿರ್ವಹಣೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
 ಕುಪ್ಪೂರು ವಲಯದ ಮೇಲ್ವಿಚಾರಕರಾದ ನಾಗರಾಜು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ ಸ್ವಸಹಾಯ ಸಂಘಗಳಲ್ಲಿ ಆಥರ್ಿಕ ಗುಣಮಟ್ಟವನ್ನು ಹೆಚ್ಚಿಸಲು ಸ್ವ-ಉದ್ಯೋಗದ ಜೊತೆಗೆ ತೋಟಗಾರಿಕ ಬೆಳೆಯಾದ ನೇರಳೆಯನ್ನು ಮಿಶ್ರ ಕೃಷಿ ಮಾಡಿ ಲಾಭಗಳಿಸಲು  ತಿಳಿಸಿದರು. ಹೇಮಾವತಿ ನಾಲೆಯಿಂದ ಚಿ.ನಾ.ಹಳ್ಳಿ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆಗೆ 35ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ತಿಳಿಸುವುದು ನನಗೆ ಸಂತಸತಂದಿದೆ ಎಂದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ಎಸ್.ಹೆಚ್ ನಾಗಪ್ಪ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ  ತೋಟಗಾರಿಕ ಬೆಳೆ ರೈತರ ಕೈ ಹಿಡಿದಿದ್ದು ಇದರ ಅಡಿಯಲ್ಲಿ ನಮ್ಮ ಯೋಜನೆ ವತಿಯಿಂದ ಗೋಪಾಲನಹಳ್ಳಿ ಗ್ರಾಮದಲ್ಲಿ 10 ಕುಟುಂಬಗಳಲ್ಲಿ 1 ಕುಟುಂಬಕ್ಕೆ 30 ಸಸಿಗಳನ್ನು ವಿತರಿಸಿ ಮಾದರಿ ಮಿಶ್ರ ಬೆಳೆಯ ಪ್ರಾತ್ಯಕ್ಷಿಕೆಯನ್ನು ಗ್ರಾಮದ 10 ಕುಟುಂಬಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಈ 10 ಕುಟುಂಬಗಳಿಗೆ ಉಚಿತ ಚಿಂತಾಮಣಿ ನೇರಳೆ ಸಸಿಯನ್ನು ನೀಡಿ ನಿರ್ವಹಣೆಗೆ ಉಚಿತ ತರಬೇತಿಯನ್ನು ನೀಡಿ ಗ್ರಾಮೀಣ ಜನತೆಯ ಆಥರ್ಿಕ ಮಟ್ಟವನ್ನು ಸುಧಾರಿಸುವಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ತಾಲೂಕಿನಾದ್ಯಾಂತ ಕಾರ್ಯನಿರ್ವಹಿಸುತ್ತಿದೆ. ಎಂದರಲ್ಲದೆ ಗೋಪಾಲನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ನಾವು ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸುನಿಲ್ಕುಮಾರ್, ಗ್ರಾಮಸ್ಥರಾದ ಉಪನ್ಯಾಸಕ ರಘು, ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.


ಮಾಸ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರಿಗೆ ಅಭಿನಂದನಾ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.20 : ರೋಟರಿ ಕ್ಲಬ್ ವತಿಯಿಂದ  ಮಾಸ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನವರಿಗೆ ಅಭಿನಂದನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಇದೇ 26ರ ಬುಧವಾರ ಸಂಜೆ 6.45ಕ್ಕೆ ಪಟ್ಟಣದ ರೋಟರಿ ಬಾಲಭವನದಲಿಏರ್ಪಡಿಸಲಾಗಿದೆ ಎಂದು ರೋಟಿರಿ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದರು.
2012-13ರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರಿಗೆ, ಬೆಂಗಳೂರಿನ ಅಂಬೇಡ್ಕರ್ ಡೆಂಟಲ್ ಕಾಲೇಜು ಮುಖ್ಯಸ್ಥ ಡಾ.ಮಹಮದ್ ಫೈಜುದ್ದೀನ್ರವರಿಗೆ ಗೌರವಾಭಿನಂದನೆ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರವರ ನಾಲ್ಕನೇ ಮುದ್ರಣ ಕಂಡಿರುವ 'ಅಘೋರಿಗಳ ನಡುವೆ' ಎಂಬ ಕಾದಂಬರಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭವನ್ನು ವಕೀಲ ಎಂ.ಮಹಾಲಿಂಗಯ್ಯ, ಡಾ,ಸಿ.ಎಂ.ಸುರೇಶ್ ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೋಟರಿಯ ಜಿಲ್ಲಾ 3190 ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಶಾಲಾ ಸಾಮಗ್ರಿ ವಿತರಣೆ ಮಾಡಲಿದ್ದಾರೆ.

Tuesday, June 18, 2013


ಗ್ರಾಮೀಣ ಜನರ ಆರೋಗ್ಯ ಕಾಪಾಡಿದರೆ ವೈದ್ಯ ಜನರ ಪಾಲಿನ ದೇವರಾಗುತ್ತಾನೆ.

ಚಿಕ್ಕನಾಯಕನಹಳ್ಳಿ,ಜೂ.81 : ಸೇವೆ ಪರಮಾತ್ಮ ನಿಯೋಜಿಸಿದ ಕರ್ತವ್ಯ ಎಂದು ಹಳ್ಳಿಗಾಡಿನ ಪ್ರದೇಶದಲ್ಲಿ ಹಲವಾರು ವರ್ಷಗಳ ಕಾಲ ಗ್ರಾಮೀಣ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಸೇವೆ ಸಲ್ಲಿಸಿದಂತಹ ಉತ್ತಮ ವ್ಯಕ್ತಿಗೆ ಅಭಿನಂದಿಸುವುದರಿಂದ ಗ್ರಾಮದವರ ಮನಸ್ಥಿತಿ ಬದಲಾಗಲಿದೆ, ಅಂತಹ ಕಾರ್ಯವನ್ನು ಗೋಡೆಕೆರೆ ಗ್ರಾಮದ ಯುವಕರು ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮಿ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯ ಸಕರ್ಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 15ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಡಾ.ಗಣೇಶ್ರವರು ಉನ್ನತ ಶಿಕ್ಷಣ ನಿಮಿತ್ತ ವಗರ್ಾವಾಗಿರುವುದರಿಂದ ಗೋಡೆಕೆರೆಯ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಸೇವೆ ಸಲ್ಲಿಸಿದಂತಹ ವ್ಯಕ್ತಿಗಳಿಗೆ ಗ್ರಾಮಸ್ಥರು ಇತ್ತೀಚೆಗೆ ನಡೆಸುತ್ತಿರುವ ಸನ್ಮಾನ ಕಾರ್ಯಕ್ರಮವು ಇತರರಿಗೆ ಮಾದರಿಯಾಗಿದೆ, ತಮ್ಮ ನಿಷ್ಠಾವಂತ ಸೇವೆಯನ್ನು ಗ್ರಾಮದ ಎಲ್ಲರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದವರಿಗೆ ಇಂತಹ ಕಾರ್ಯಕ್ರಮ ಇನ್ನೂ ಆದರ್ಶ ಪ್ರಜೆಗಳ ಸಾಲಿಗೆ ಕೊಂಡೊಯ್ಯುತ್ತದೆ ಎಂದ ಅವರು ಈ ಕಾರ್ಯಕ್ರಮದಿಂದ ಗ್ರಾಮದ ಯುವಕರ ಮನಸ್ಥಿತಿಯೂ ಬದಲಾಗಲಿದೆ ಎಂದರು.
ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿರವರ ಮಾತನಾಡಿ ಡಾ.ಗಣೇಶ್ರವರು ತಮ್ಮ ಬದುಕಿನ ಸೇವೆಯನ್ನು ಹೆಚ್ಚಿನದಾಗಿ ಗೋಡೆಕೆರೆ ಗ್ರಾಮದಲ್ಲಿಯೇ ಸಲ್ಲಿಸಿ ಬದುಕಿನ ಸಾಕಷ್ಟು ತಮ್ಮ ಅನುಭವವನ್ನು ಇಲ್ಲಿನ ಜನರಿಗೆ ನೀಡಿದ್ದಾರೆ, ಗೋಡೆಕೆರೆ ಗ್ರಾಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಊರಿನ ಜನತೆಯಲ್ಲೂ ಡಾ.ಗಣೇಶ್ ಉತ್ತಮ ವೈದ್ಯಾಧಿಕಾರಿಯಾಗಿ ಚಿಕಿತ್ಸೆ ನೀಡಿದ್ದಾರೆ ಎಂದರಲ್ಲದೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ಡಾ.ಗಣೇಶ್ರವರನ್ನು ಮಾದರಿಯಾಗಿಸಿಕೊಂಡರೆ ಉತ್ತಮ ಸೇವೆ ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಗಣೇಶ್, ಕಡುಬಡತನದಿಂದ ಬಂದಂತಹ ನಾನು ವೈದ್ಯನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಸಿದ್ದರಾಮನ ಕೃಪೆಯಿಂದ ವೈದ್ಯನಾಗಿದ್ದೇನೆ,  ಇಷ್ಟು ವರ್ಷಗಳ ಕಾಲ ಗ್ರಾಮದ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದ ಜೊತೆಗೆ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದೆನು, ಹದಿನೈದು ವರ್ಷಗಳ ಕಾಲ ಗ್ರಾಮದ ಆಸ್ಪತ್ರೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ನಾನು ಗ್ರಾಮದವರು ತೋರಿಸುತ್ತಿರುವ ಆತ್ಮೀಯತೆಗೆ ಚಿರಋಣಿಯಾಗಿದ್ದು, ತನ್ನ ಉನ್ನತ ಶಿಕ್ಷಣ ಹೋಗುತ್ತಿರುವುದಾಗಿ ತಿಳಿಸಿದರು.
ಮಾಜಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಡಾ.ಗಣೇಶ್ರವರು ಗೋಡೆಕೆರೆ ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವುದರಿಂದ 2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೆರಿಗೆ ಮಾಡಿಸಿದ ಕೀತರ್ಿ ಗೋಡೆಕೆರೆ ಆಸ್ಪತ್ರೆಗೆ ಬಂದಿದೆ ಎಂದರಲ್ಲದೆ ಈ ಆಸ್ಪತ್ರೆಗೆ ಬೇಕಾಗಿರುವ ಹೆಚ್ಚಿನ ಕೊಠಡಿಯೊಂದಕ್ಕೆ ಅಜರ್ಿ ಸಲ್ಲಿಸಿದ್ದು, ಅದಕ್ಕೆ ಅನುಮೋದನೆ ದೊರಕಬೇಕಿದೆ ಎಂದರು.
ಸಮಾರಂಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮರಿಸ್ವಾಮಿ, ವ್ಯವಸಾಯೋತ್ಪನ್ನ ಸಹಕಾರ ಸಂಘದ ಸದಸ್ಯ ಸಿದ್ದರಾಮಣ್ಣ, ಗ್ರಾ.ಪಂ.ಸದಸ್ಯ ಲೋಕೇಶ್, ಪ್ರಾಂಶುಪಾಲ ಪಾಂಡುರಂಗಪ್ಪ ಉಪಸ್ಥಿತರಿದ್ದರು.

ಗ್ರಾಮೀಣ ಜನರಿಗೆ ಶುದ್ದ ನೀರು, ಉತ್ತಮ ಆರೋಗ್ಯ ನೀಡಲು ಗ್ರಾ.ಪಂ.ಗಳಿಗೆ ಸೂಚನೆ:


ಚಿಕ್ಕನಾಯಕನಹಳ್ಳಿ,ಜೂ.18 : ತಾಲ್ಲೂಕಿನಲ್ಲಿ ಡೆಂಗ್ಯೂ, ಚಿಕನ್ಗುನ್ಯಾ ಹರಡದಂತೆ ಫಾಗಿಂಗ್ ಮಾಡಲು ಹಾಗೂ ಬಡವರುಗೆ ಸರಿಯಾಗಿ ಪಡಿತರ ಚೀಟ ವಿತರಿಸಲು, ಕುಡಿಯುವ ನೀರು ಸರಬರಾಜು ಮಾಡಲು ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಓಗಳಿಗೆ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಸಲಹೆ ನೀಡಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಪಡಿತರ ಚೀಟಿ ವಿತರಣೆ ಸಂಬಂಧ ತಾಲ್ಲೂಕು ಗ್ರಾ.ಪಂ.ಅಧ್ಯಕ್ಷ, ಪಿಡಿಓ, ಹಾಗೂ ಕಾರ್ಯದಶರ್ಿಗಳ ತುತರ್ುಸಭೆಯಲ್ಲಿ ಮಾತನಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಪಡಿತರ ಚೀಟಿಗೆ 50ರೂ ಸಕರ್ಾರ ನಿಗಧಿ ಪಡಿಸಿದ್ದು ಖಾಸಗಿ ಕಂಪ್ಯೂಟರ್ ಸೆಂಟರ್ಗಳಲ್ಲಿ 100ರಿಂದ 150ರೂ ವಸೂಲು ಮಾಡಿ ಜನರನ್ನು ಸುಲಿಗೆ ಮಾಡುತ್ತಿವೆ ಎಂಬ ದೂರುಗಳು ಬಂದಿದ್ದು ಗ್ರಾ.ಪಂ. ಪಿಡಿಓಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 
2011-12ನೇ ಸಾಲಿನ ಬಸವ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಮನೆಗಳನ್ನು ಮಂಜೂರಾತಿ ನೀಡಿದ್ದು 390 ಮನೆಗಳು ಬ್ಲಾಕ್ ಆಗಿದ್ದು ಈಗ ಈ ಮನೆಗಳನ್ನು ಕಟ್ಟಲು ಸಕರ್ಾರ ಹಸಿರು ನಿಶಾನೆ ನೀಡಿದೆ. ಸಂಬಂಧಪಟ್ಟ ಗ್ರಾ.ಪಂ.ಅಧ್ಯಕ್ಷರು ಪಿಡಿಓ ಹಾಗೂ ಕಾರ್ಯದಶರ್ಿಗಳು ಜೂನ್ 25ರ ಒಳಗಾಗಿ ವರದಿ ನೀಡುವಂತೆ ನಂತರ ನೀಡುವ ಮನೆಗಳಿಗೆ ಸಕರ್ಾರ ಮಂಜೂರಾತಿ ನೀಡುವುದಿಲ್ಲ, ಎರಡನೇ ಹಂತದಲ್ಲಿರುವ ಮನೆಗಳಗೆ ಮಾತ್ರ ಹಣ ಬಿಡುಗಡೆ ಆಗುವುದೆಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ ಸಭೆಯಲ್ಲಿ ತಿಳಿಸಿದರು.
ಜೂನ್ ಕೊನೆ ವಾರ ಸಕರ್ಾರ ಎನ್.ಆರ್.ಇ.ಜಿ ಹಣ ಬಿಡುಗಡೆ ಮಾಡುತ್ತಿದ್ದು ಎನ್.ಆರ್.ಇ.ಜಿಯಲ್ಲಿ ಕೆಲಸ ಮಾಡುವ ಕೂಲಿ ಕಾಮರ್ಿಕರಿಗೆ ಹಣ ಪಡೆಯಲು ಆಧಾರ್ ಕಾಡರ್್ ಕಡ್ಡಾಯ ಇದರ ಬಗ್ಗೆ ಪಿಡಿಓಗಳು ಕೂಲಿ ಕಾಮರ್ಿಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವ ಗುತ್ತಿಗೆದಾರರು ಪಂಪ್ಸೆಟ್ ಅಳವಡಿಸುತ್ತಾರೆ ಆದರೆ ಗ್ರಾಮ ಪಂಚಾಯ್ತಿ ವಶಕ್ಕೆ ನೀಡುವುದಿಲ್ಲ ಎಂದು ಗ್ರಾ.ಪಂ.ಕಾರ್ಯದಶರ್ಿಗಳು ದೂರಿದರು.
ಪಡಿತರ ಚೀಟಿ ವಿತರಣೆಯಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳಿಂದಲೇ ಗೊಂದಲ ಸೃಷ್ಠಿಯಾಗುತ್ತಿದೆ ಎಂದು ತಾ.ಪಂ.ಅಧ್ಯಕ್ಷ ದೂರಿದರು. ಗ್ರಾ.ಪಂ.ಗಳಲ್ಲಿ ಪಡಿತರ ಚೀಟಿ ವಿತರಿಸಲು ಸಕರ್ಾರ ಕ್ರಮ ಕೈಗೊಂಡಿರುವುದರಿಂದ ಗ್ರಾ.ಪಂ.ಗಳ ಸಾರ್ವಜನಿಕರ ಕೆಲಸಗಳೇ ಮಾಡಲಾಗುತ್ತಿಲ್ಲ ಎಂದು ಪಿಡಿಓಗಳು ತಮ್ಮ ಅಳಲನ್ನು ತೋಡಿಕೊಂಡರು.
ಒಂದು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ನೀಡಬೇಕು, ಆದರೆ ಒಂದೇ ಪಡಿತರ ಚೀಟಿ ಆರು ಬಾರಿ ಮುದ್ರಣವಾಗಿದ್ದು ಎಲ್ಲಾ ಕಾಡರ್ುಗಳನ್ನು ಹಿಂದಿರುಗಿಸಲಾಗಿದೆ ಎಂದು ಪಿಡಿಓ ಶಿವಕುಮಾರ್ ತಿಳಿಸಿದರು.
 ಕೆಂಕೆರೆಯಲ್ಲಿ ನೀರಿನ ಅಭಾವವಿದ್ದು ಕೊಡಲೇ 2ಕೊಳವೆ ಬಾವಿಗಳನ್ನು ಕೊರೆಸುವಂತೆ  ಪಿಡಿಓ ಶಿವಕುಮಾರ್ ಸಭೆಯಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಸಮಸ್ಯೆಗಳ ಬಗ್ಗೆ ಪಿ.ಡಿ.ಓಗಳ ಗಮನಕ್ಕೆ ತರಲು ದೂರವಾಣಿ ಮಾಡಿದರೂ ಕೆಲವು ಪಿಡಿಓಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಹೀಗೆ ಮಾಡಿದರೆ ಹೇಗೆ ಎಂದು ಗ್ರಾ.ಪಂ.ಅಧ್ಯಕ್ಷರುಗಳು ಪ್ರಶ್ನಿಸಿದ್ದಾರೆ. 
 ಹೊಸ ಮೋಟಾರುಗಳಿಗೆ ಕಾಯದೇ ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಸಲು ನಿಧಾನವಾದರೆ ಹಳೆ ಬೋರ್ವೆಲ್ಗಳಲ್ಲಿ ಇರುವ ಮೋಟಾರುಗಳನ್ನು ತೆಗೆದು ಅಳವಡಿಸುವಂತೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ ಸಲಹೆ ನೀಡಿದರು. ಇದರಿಂದ ಗ್ರಾಮಗಳ ಜನತೆಯ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಕಾರ್ಯದಶರ್ಿಗಳು ಚಿಂತಿಸಿ ಎಂದರು.
ತಾಲ್ಲೂಕಿನ ದುಗಡಿಹಳ್ಳಿ, ಮಲ್ಲಿಗೆರೆಹಟ್ಟಿ, ಕಾಮಲಾಪುರ ಗೊಲ್ಲರಹಟ್ಟಿ, ಮಾದೀಹಳ್ಳಿ, ಅಜ್ಜೇನಹಳ್ಳಿ, ಗಂಟಗನಪಾಳ್ಯ, ಸಾಲಕಟ್ಟೆ, ವಡೇರಹಳ್ಳಿ, ಗೌಡನಹಳ್ಳಿ, ಚುಂಗನಹಳ್ಳಿ, ಜೋಡಿಕಲ್ಲೇನಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೊರತೆ ಇದ್ದು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ತಹಶೀಲ್ದಾರ್ರವರಿಗೆ ಪಿಡಿಓಗಳು ಮನವಿಸಲ್ಲಿಸಿ ನಂತರ ನೀರು ಸರಬರಾಜು ಮಾಡುವಂತೆ ಇ.ಓ ತಿಮ್ಮಯ್ಯ ತಿಳಿಸಿದರು.
ತಿಮ್ಮಲ್ಲಾಪುರ ಗ್ರಾ.ಪಂ.ಯ ಹೊಸಹಳ್ಳಿ ಗ್ರಾಮದ ಕುಡಿಯುವ ನೀರಿನ ತೊಟ್ಟ ತೊಳೆಯುತ್ತಿಲ್ಲ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ, ಇದರ ಬಗ್ಗೆ ಪಿಡಿಓಗೆ ತರಾಟೆಗೆ ತೆಗೆದುಕೊಂಡ ತಾ.ಪಂ.ಅಧ್ಯಕ್ಷ ಶಶಿಧರ್ ಕೂಡಲೇ ತೊಟ್ಟಿಯನ್ನು ಸ್ವಚ್ಛಗೊಳಿಸುವಂತೆ ಸಲಹೆ ನೀಡಿದರು. 
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಆಹಾರ ಶಿರಸ್ತೆದಾರ್ ಮಂಜುನಾಥ್, ಇ.ಓ ಎ.ಜಿ.ತಿಮ್ಮಯ್ಯ, ಎಇಇ ಚಿಕ್ಕದಾಸಪ್ಪ, ಗ್ರಾ.ಪಂ.ಅಧ್ಯಕ್ಷರುಗಳಾದ ಎಂಜಯ್ಯ, ಸಿದ್ದರಾಮಯ್ಯ, ಅಜ್ಜಿಗುಡ್ಡೆಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


Saturday, June 15, 2013


ಸಿ.ಬಿ.ಸುರೇಶ್ಬಾಬುರವರಿಗೆ ಅಭಿನಂದನಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಜೂ.15 : ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿರುವ ಸಿ.ಬಿ.ಸುರೇಶ್ಬಾಬುರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜೂನ್16ರಂದು (ಇಂದು) ಬೆಳಗ್ಗೆ 10.30ಕ್ಕೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
ಹಂದನಕೆರೆ ಹೋಬಳಿಯ ಹುಲಿಕಮ್ಮನ ಬೆಟ್ಟದ ಶ್ರೀ ದುರ್ಗಮ್ಮನವರ ಸನ್ನಿದಿಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ನೌಕರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.

ತೋಟಗಾರಿಕೆಯು ರೈತರ ಜೀವನಾಡಿ 
ಚಿಕ್ಕನಾಯಕನಹಳ್ಳಿ,ಜೂ.15 : ತೋಟಗಾರಿಕೆಯು ರೈತರ ಜೀವನಾಡಿಯಂತೆ,  ಸದಾ ರೈತರ ಕೈ ಹಿಡಿಯುವುದರೊಂದಿಗೆ ಉತ್ತಮ ಫಸಲನ್ನು ನೀಡುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೇಲ್ವಿಚಾರಕರಾದ ನಾಗರಾಜು ಹೇಳಿದರು.
            ತಾಲ್ಲೂಕಿನ ಕುಪ್ಪುರು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತೋಟಗಾರಿಕಾ ಅಂತರ ಬೆಳೆಯಾಗಿ ನುಗ್ಗೆಯನ್ನು ಬೆಳೆಯುವಂತೆ ಕೃಷಿ ಸಲಹಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ತೋಟಗಾರಿಕಾ ಬೆಳೆಗಳಾದ ತೆಂಗು ,ಬಾಳೆ ,ಅಡಿಕೆ, ನುಗ್ಗೆ, ಮಾವು , ಪಪ್ಪಾಯಿ ಮುಂತಾದ ಬೆಳೆಗಳು ರೈತರನ್ನು ರಕ್ಷಿಸಿವೆ  ಹಾಗಾಗಿ ಮಿಶ್ರ ಬೆಳೆಯಾಗಿ ಭಾಗ್ಯ ತಳಿಯ ನುಗ್ಗೆಯನ್ನು ಬೆಳೆಯಿರಿ ಎಂದು ತಿಳಿಸಿದ ಅವರು ಪ್ರಗತಿಬಂದು ಸಂಘದ ಕೃಷಿಕರಿಗೆ ಮತ್ತು ಸಂಘದ ಸೇವಾಧಿಕಾರಿಗಳಿಗೆ ತೋಟದ ತಾಕುಗಳಿಗೆ ಭೇಟಿ ನೀಡಲು ಹಾಗೂ ಕೃಷಿ ಸಲಾಹ ಕಾರ್ಯಕ್ರಮಗಳ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಿದರು. 
ಕೊನೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕ ವಿಷಯ ತಜ್ಞರಾದ ನಾಗಪ್ಪದೇಸಾಯಿಯವರು ಮಾತನಾಡಿ ತೋಟಗಾರಿಕೆಯ ಬೆಳೆಯನ್ನು ಲಾಭದಾಯಕವಾಗಿನ್ನಾಗಿ ಮಾಡಬೇಕಾದರೆ ಮಣ್ಣು ಪರಿಕ್ಷೆ ಮಾಡಿಸಿ ಅದಕ್ಕೆ ಸೂಕ್ತ ಗೊಬ್ಬರಗಳನ್ನು ಪೂರೈಸುವುದು ಅಗತ್ಯ, ಅದರ ಜೊತೆಗೆ ವೈಜ್ಞಾನಿಕ ಬೇಸಾಯ ಪದ್ದತಿಗಳಾದ ಅಂತರ ಬೇಸಾಯ ಪದ್ದತಿ, ಹನಿ ನೀರಾವರಿ ಪದ್ಧತಿ, ಜೀವಾಣು ಗೊಬ್ಬರದ ಬಳಕೆ, ಮಿಶ್ರ ಬೇಸಾಯ ಪದ್ದತಿಯನ್ನು ಅಳವಡಿಸಿ ರಾಸಾಯನಿಕ ಗೊಬ್ಬರಗಳನ್ನು ಬಳಸಿಕೊಂಡು ತೋಟಗಾರಿಕ ಬೆಳೆಯನ್ನು ಲಾಭಧಾಯಕವಾಗಿಸಿಕೊಳ್ಳಬಹುದು ಎಂದರಲ್ಲದೆ ರೈತರ ಪ್ರಾತ್ಯಕ್ಷಿಕೆಯ ತಾಕುಗಳಿಗೆ ಬೇಟಿ ನೀಡಿ ಸುಧೀರ್ಘವಾಗಿ ಸುಮಾರು 3 ಗಂಟೆಗಳಕಾಲ ರೈತರುಗಳಿಗೆ ಹಾಗೂ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸೇವಾಪ್ರತಿನಿಧಿಗಳಿಗೆ ಮಾಹಿತಿ ವಿವರಿಸಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿಯಾದ ಎಸ್.ಹೆಚ್.ನಾಗಪ್ಪ ಕಾರ್ಯಕ್ರಮದಲ್ಲಿ ಮಾತನಾಡಿ 10 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡು ರೈತರುಗಳಿಗೆ ಮುಂಚೂಣಿ ಪ್ರಾತ್ಯಕ್ಷಿಕೆಯಾಗಿ ಬಿಡುಗಡೆ ಮಾಡುತ್ತಿದ್ದೇವೆ, ಇದರಲ್ಲಿ ತಮ್ಮಡಿಹಳ್ಳಿ, ಬೆನಕನಕಟ್ಟೆ, ಕುಪ್ಪೂರಿನ ಭಾಗದ ರೈತರು ಭಾಗ್ಯತಳಿಯ ನುಗ್ಗೆಯನ್ನು ನಮ್ಮ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಉಚಿತವಾಗಿ ಪಡೆಯುವುದರೊಂದಿಗೆ ಈ ಕಾರ್ಯಕ್ರಮದ ಉಪಯೋಗವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸೇವಾ ಪ್ರತಿನಿಧಿಗಳಾದ ಆದರ್ಶ, ಚಂದ್ರಶೇಖರಯ್ಯ, ಸಂಘದ ಓಕ್ಕೂಟದ ಅಧ್ಯಕ್ಷರಾದ ಮಹೇಶ್, ಪ್ರಗತಿಬಂಧು ಸಂಘದ ಕೃಷಿಕರಾದ ಶಂಕರಲಿಂಗಪ್ಪ, ಓಂಕಾರಸ್ವಾಮಿ, ಅನಂತಪ್ಪ, ಶಿವಕುಮಾರಸ್ವಾಮಿ, ಬಸವರಾಜು, ವಿಜಯಕುಮಾರ್ ಮತ್ತಿತರರು ಉಪಸ್ತಿತರಿದ್ದು ರೈತರ ತಾಕುಗಳಿಗೆ ಭೇಟಿ ನೀಡುವುದರೊಂದಿಗೆ ಪ್ರಾಯೋಗಿಕ ಮಿಶ್ರ ಬೆಳೆಯ ಬಗ್ಗೆ ಹಾಗು ಮಣ್ಣು ಪರಿಕ್ಷೆಯನ್ನು ಕುರಿತು ತೋಟಗಾರಿಕಾ ಮಾಹಿತಿಯನ್ನು ಪಡೆದರು 

Friday, June 14, 2013




ಚಿತ್ರಕಲಾ ಕ್ಷೇತ್ರದಲ್ಲಿ ಕುಂಚಾಂಕುರ ಕಲಾ ಸಂಘದ ಕೆಲಸ ಶ್ಲಾಘನೀಯ: ಸಿದ್ದು ಜಿ.ಕೆರೆ
ಚಿಕ್ಕನಾಯಕನಹಳ್ಳಿ,ಜೂ.14: ಸ್ಥಳೀಯ ಚಿತ್ರಕಲಾವಿದರನ್ನು ಪ್ರೋತ್ಸಾಹಿಸಿ ಜಿಲ್ಲಾ ಹಾಗು ರಾಜ್ಯ ಮಟ್ಟದಲ್ಲಿ ತಮ್ಮ ಕಲಾಕೃತಿಗಳ ಕಲೆಯನ್ನು ಪ್ರದಶರ್ಿಸುವ ಪ್ರತಿಭೆ ಕಲಾವಿದನಿಗೆ ಒಂದು ಅಯಾಮವನ್ನು ತಂದುಕೊಟ್ಟಿದೆ ಎಂದು ಕಲಾವಿದ ಸಿದ್ದು ಜಿ.ಕೆರೆ ತಿಳಿಸಿದರು.
ಪಟ್ಟಣದಲ್ಲಿ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪದರ್ೆಯನ್ನು ಉದ್ಘಾಟಿಸಿ ಮಾತನಾಡಿ ಅವರು ಚಿತ್ರಕಲಾ ಶಿಬಿರ ಹಾಗು ಸ್ಪಧರ್ೆಯನ್ನು ಸತತ 10 ವರ್ಷಗಳಂದ ನೆಡೆಸಿಕೊಂಡು ಬಂದಿರುವ ಕುಂಚಾಂಕುರ ಕಲಾ ಸಂಘದ ಗಂಗಾಧರ್ ರವರ ಕೆಲಸ ಶ್ಳಾಘನೀಯವಾದ ಕೆಲಸವಾಗಿದೆ ಎಂದರು.
 ಹೊಯ್ಸಳ ಶಿಲ್ಪಕೇಂದ್ರದ ಶಿಲ್ಪಿ ವಿಶ್ವಾನಾಥರವರು ತುಂಬ ಕಷ್ಟಪಟ್ಟು ಶಿಲ್ಪಕಲೆ ಕಲಿತು ರಾಜ್ಯಪ್ರಶಸ್ತಿ ಪಡೆದು ನಮ್ಮೂರಿನಲ್ಲೆ ಶಿಲ್ಪಾಕಲಾ ಕಾಲೇಜು ತೆರೆದು ಕಲಾವಿದರನ್ನು ಸೃಷ್ಟಿ ಮಾಡುತ್ತಿದ್ದಾರೆ ಚಿತ್ರ ಹಾಗು ಶಿಲ್ಪ ಕಲಾವಿದ ವಿದ್ಯಾಥರ್ಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮ ಕಲೆಯನ್ನು ಪ್ರದಶರ್ಿಸಿ ಹೆಸರುಗಳಿಸಲಿ ಎಂದರು.
 ಕುಂಚಾಂಕುರ ಕಲಾ ಸಂಘದ ಅಧ್ಯಕ್ಷರಾದ ಸಿ.ಹೆಚ್.ಗಂಗಾದರ್ ಮಗ್ಗದಮನೆರವರು ಮಾತನಾಡಿ ಸಾಹಿತಿಗಳು ಪುಸ್ತಕ ಬರೆಯುವ ಮೂಲಕ ಸಮಾಜದ ಹಾಗುಹೋಗುಗಳ ಪರಿಚಯವನ್ನು ಮಾಡಿಕೊಡುವಂತೆ, ಚಿತ್ರಾಕಲಾವಿದರು ತಮ್ಮ ಚಿತ್ರಗಳ ರಚನೆಯಲ್ಲಿ ಸಮಾಜದ, ಲೋಕದ ಅಂಕುಡೊಂಕುಗಳನ್ನು ತಿದ್ದುವ ಜವಬ್ದಾರಿ ಕಲಾವಿದರಿಗಿದೆ ಎಂದರಲ್ಲದೆ,  ಈ ನಾಡು, ನುಡಿ, ಜಲ, ಸಂಸ್ಕೃತಿ, ಕಲೆಯ ಬಗ್ಗೆ, ನಶಿಸುತ್ತಿರುವ ಗ್ರಾಮೀಣ ಕುಲಕಸುಬುಗಳ ಗ್ರಾಮೀಣಾಭಿವೃದ್ದಿಯಲ್ಲಿ ಮಾಧ್ಯಮಗಳ ಪಾತ್ರದ ವಿಷಯವಾಗಿ ಚಿತ್ರ ರಚಿಸಬಹುದೆಂದರು.
 ಶಿಲ್ಪಿ ವಿಶ್ವಾನಾಥ ಮಾತನಾಡಿ 10 ದಿನಗಳ ಕಾಲ ನೆಡೆದ ಈ ಶಿಬಿರದಲ್ಲಿ ಪಾಲ್ಗೊಂಡಿರುವ ಕಲಾ ವಿದ್ಯಾಥರ್ಿಗಳು ಇನ್ನು ಹೆಚ್ಚಿನ ಶ್ರಮವಹಿಸಿ ಕಲಿತರೆ ಒಳ್ಳೆಯ ಕಲಾವಿದರಾಗಬಹುದು ಕಲೆ ಎಂಬದು ಒಂದು ರೀತಿಯ ತಪಸ್ಸು ಇದ್ದಹಾಗೆ ಶ್ರದ್ದೆಯಿಂದ ಕಲಿಯಬೇಕು ಎಂದರು.
 ಕಾರ್ಯಕ್ರಮದಲ್ಲಿ ವಾಣಿಚಿತ್ರಕಲಾ ಕಾಲೇಜಿನ ಉಪನ್ಯಾಸಕ ರವೀಶ್ ಬಾಳೆಕಾಯಿ, ಶ್ಯಾಮ್ ,ಕನ್ನಡ ಸಾಹಿತ್ಯ ಪರಿಷತ್ತಿನ ಹುಳಿಯಾರು ಶಬ್ಬೀರ್, ಪ್ರವೀಣ್, ಕಲಾವಿದರಾದ ಗೌಸ್, ಜಗ್ಗು, ನವೀನ್ಅರಸ್,  ನರಸಿಂಹ, ರೇಣುಕಾ, ರಂಗಸ್ವಾಮಿ, ಸಿ.ಎಂ.ರಘು, ಮೈಸ್ ಕಂಪ್ಯೂಟರ್ ಹರೀಶ್ ಉಪಸ್ಥಿತರಿದ್ದರು.


ರೈತರ ಪಂಪ್ಸೆಟ್ಟ್ಗಳ ಅಕ್ರಮ ವಿದ್ಯುತ್ ಸಂಪರ್ಕವನ್ನು ಶೀಘ್ರ ಸಕ್ರಮಗೊಳಿಸಿ: ಶಾಸಕ ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿ,ಜೂ.14 : ರೈತರು ಅಕ್ರಮ, ಸಕ್ರಮದ ಅಡಿಯಲ್ಲಿ ಬೆಸ್ಕಾಂ 12ಸಾವಿರ ರೂಪಾಯಿ ಪಾವತಿಸಿದ್ದು ಕೂಡಲೇ ಟೆಂಡರ್ ಕರೆದು ಫಲಾನುಭವಿಗಳಿಗೆ ಸಕ್ರಮ ಬಳಸುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಸೂಚಿಸಿದರು.
ಪಟ್ಟಣದ ಬೆಸ್ಕಾಂ ಕಛೇರಿಗೆ ಭೇಟಿ ನೀಡಿ  ತಾಲ್ಲೂಕಿನ ಅಧಿಕಾರಿಗಳೊಂದಿಗೆ ಚಚರ್ಿಸಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಲೋಡ್ ಇರುವ ಟ್ರಾನ್ಸ್ಪಾರಂಗಳ ಜಾಗದಲ್ಲಿ ಹೆಚ್ಚುವರಿ ಟ್ರಾನ್ಸ್ಫಾರಂಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನ ಬೆಳಗುಲಿ, ದೊಡ್ಡೆಣ್ಣೆಗೆರೆ,  ಮತ್ತಿಘಟ್ಟ ಬಳಿಯ ಗಾಂಧಿನಗರ, ಗೋಡೆಕೆರೆ ಭಾಗದಲ್ಲಿ 110 ಕೆ.ವಿ ಹಾಗೂ ಸಾಲ್ಕಟ್ಟೆ ಕ್ರಾಸ್ ಬಳಿ 220ಕೆವಿ ವಿದ್ಯುತ್ ಉಪಸ್ಥಾವರಗಳನ್ನು ಸ್ಥಾಪಿಸಲು ಸಕರ್ಾರಕ್ಕೆ ಪ್ರಸ್ತಾವನೆ ಕಳುಹಿಸಲು ಅಧಿಕಾರಿಗಳಿಗೆ ತಿಳಿಸಿದರು. ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊರೆದಿರುವ ಕೊಳವೆ ಬಾವಿಗಳಿಗ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರಲ್ಲದೆ, ತಾಲ್ಲೂಕಿನಲ್ಲಿ ಲೈನ್ಮೇನ್ಗಳ ಕೊರತೆ ಇದ್ದು ಈ ಬಗ್ಗೆ ಸಕರ್ಾರಕ್ಕೆ ಪತ್ರ ಬರೆಯುವಂತೆ ತಿಳಿಸಿದರು. 
ಸಭೆಯಲ್ಲಿ ತಿಪಟೂರು ವಿಭಾಗದ ಬೆಸ್ಕಾಂ ಕಾರ್ಯನಿರ್ವಹಕ ಅಭಿಯಂತರ ಉಮಾಶಂಕರ್, ಎ.ಇ.ಇ ರಾಜಶೇಖರ್, ಎ.ಎ.ಓ ಪ್ರಕಾಶ್, ಶಾಖಾಧಿಕಾರಿ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

Thursday, June 13, 2013


ತರಬೇನಹಳ್ಳಿ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,: ಕುಡಿಯುವ ನೀರಿಗಾಗಿ ಆಗ್ರಹಿಸಿ ತಾಲ್ಲೂಕಿನ ತರಬೇನಹಳ್ಳಿ ಗ್ರಾಮಸ್ಥರು ತಾಲ್ಲೂಕು ಪಂಚಾಯ್ತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.
ಸುಮಾರು 120 ಮನೆಗಳಿರುವ ತರಬೇನಹಳ್ಳಿ ಗ್ರಾಮದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರದಾಡುವ ಸ್ಥಿತಿ ಎದುರಾಗಿದೆ,  ನೀರಿಗಾಗಿ ಜನತೆ ಕಿಲೋಮೀಟರ್ಗಟ್ಟಲೆವರೆಗೂ ಸಂಚರಿಸುವ ಸ್ಥತಿ ಎದುರಾಗಿದ್ದು ದನಕರುಗಳು ಸಾಯುವ ಸ್ಥಿತಿಗೆ ಬಂದಿವೆ, ಈ ಗ್ರಾಮದಲ್ಲಿ ನೂರಾರು ಲೀಟರ್ ಹಾಲನ್ನು ಪಟ್ಟಣಕ್ಕೆ ಕೊಂಡೊಯ್ಯುತ್ತೇವೆ ಆದರೆ ನೀರಿಲ್ಲದೆ ದನಕರುಗಳು ಹಾಲನ್ನು ಸರಿಯಾಗಿ ನೀಡುತ್ತಿಲ್ಲ ಇದರಿಂದ ನಮ್ಮ ಆಥರ್ಿಕ ಜೀವನದ ಮೇಲೂ ಹೊಡೆತ ಬಿದ್ದಿದೆ  ಎಂದು ಗ್ರಾಮಸ್ಥರು ಪ್ರತಿಭಟನೆ ವೇಳೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡರು.
ತಾಲ್ಲೂಕು ಪಂಚಾಯ್ತಿ ಆಡಳಿತ ವ್ಯವಸ್ಥೆ ಶೀಘ್ರವಾಗಿ ನೀರಿನ ಸಮಸ್ಯೆ ಬಗೆಹರಿಸಬೇಕು ಇಲ್ಲವಾದಲ್ಲಿ ಉಗ್ರಪ್ರತಿಭಟನೆ ಮಾಡುವುದಾಗಿ ತಿಳಿಸಿದರಲ್ಲದೆ ಟ್ಯಾಂಕರ್ ನೀರಿನ ವ್ಯವಸ್ಥೆಯಿಂದ ಗ್ರಾಮಸ್ಥರು ಪರಸ್ಪರ ಜಗಳವಾಡುತ್ತಿದ್ದಾರೆ ಅದಕ್ಕಾಗಿ ಹೆಚ್ಚಿನ ಟ್ಯಾಂಕರ್ ವ್ಯವಸ್ಥೆ ಮಾಡಿಸಲು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಂಜಾಮರಿ, ಷಣ್ಮುಖ, ಗಂಗಾಧರ್ ಹಾಗೂ ರೈತ ಸಂಘದ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.
ಭಾಷಾ ಬೋಧಕರು ವಿದ್ಯಾಥರ್ಿಗಳಿಗೆ ಕನ್ನಡ ವ್ಯಾಕರಣದ ಬಗ್ಗೆ ಹೆಚ್ಚು ಒತ್ತು ನೀಡಿ
ಚಿಕ್ಕನಾಯಕನಹಳ್ಳಿ : ಇಂದಿನಿಂದಲೇ ಕನ್ನಡ ಭಾಷಾ ಭೋದಕರು ವಿದ್ಯಾಥರ್ಿಗಳಿಗೆ ವ್ಯಾಕರಣದ ಬಗ್ಗೆ ಹೆಚ್ಚಿನ ಒತ್ತನ್ನು ನೀಡಿದರೆ ವಿದ್ಯಾಥರ್ಿ ಕನ್ನಡ ಭಾಷೆಯಲ್ಲಿ ಉತ್ತಮ ಅಂಕ ಪಡೆಯುತ್ತಾರೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಬಾಲಕಿಯರ ಪ್ರೌಡಶಾಲೆಯಲ್ಲಿ ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಭೋದಕರ ಸಂಘದ ವತಿಯಿಂದ ನಡೆದ ಕನ್ನಡ ಭಾಷಾ ಪುನಶ್ಚೇತನ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.85ರಷ್ಟು ಫಲಿತಾಂಶ ಬರುತ್ತದೆಂದು ನಿರೀಕ್ಷಿಸಿದ್ದೆವು, ಆದರೆ ಕಳೆದ ಬಾರಿಗಿಂತ 5ರಷ್ಟು ಪಲಿತಾಂಶ ಕಡಿಮೆ ಬಂದಿದೆಯಲ್ಲದೆ, ತಾಲ್ಲೂಕು ಜಿಲ್ಲೆಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ಶಿಕ್ಷಕರು ಈಗಿನಿಂದಲೇ ವಿದ್ಯಾಥರ್ಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉತ್ತಮ ಫಲಿತಾಂಶ ಬರುವಂತೆ ಕರೆ ನೀಡಿದರು. 
ತಾಲ್ಲೂಕಿನಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಕಾಯರ್ಾಗಾರಗಳು ನಡೆಯುತ್ತಿವೆ ಆದರೂ ತಾಲ್ಲೂಕಿನಲ್ಲಿ 4ಶಾಲೆಗಳು ಮಾತ್ರ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದುಕೊಂಡಿವೆ. 2013-14ನೇ ಸಾಲಿನಲಿ ಇನ್ನೂಮ ಉತ್ತಮ ಫಲಿತಾಂಶ ಎಲ್ಲಾ ಶಾಲೆಗಳಲ್ಲೂ ಬರಬೇಕು ಎಂದರಲ್ಲದೆ ಅದಕ್ಕಾಗಿ ತರಬೇತಿ ಹಾಗೂ ಮೌಲ್ಯಮಾಪನದ ಬಗ್ಗೆ ವ್ಯಾಪಕ ಚಚರ್ೆಯಾಗಬೇಕು, ಇಂತಹ ಕಾರ್ಯಗಾರದಲ್ಲಿ ಶಿಕ್ಷಕರು ಭಾಗವಹಿಸಿ, ಮೂಲ ಉದ್ದೇಶದ ಅರಿವನ್ನು ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು. 
ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ ತಾಲ್ಲೂಕಿನ ಕನ್ನಡ ಭಾಷಾ ಬೋಧಕರ ಸಂಘಟನೆ ಕನ್ನಡ ಭಾಷಾ ಬೋಧನೆಯ  ಬಗ್ಗೆ ಶಿಕ್ಷಕರಲ್ಲಿ ಹೆಚ್ಚಿನ ತರಬೇತಿ ನೀಡುತ್ತಿದೆ, ಆದರೂ ತಾಲ್ಲೂಕಿನ 58ಶಾಲೆಗಳಲ್ಲಿ ಕೇವಲ 4ಶಾಲೆಗಳು ಮಾತ್ರ ಶೇ.100ರಷ್ಟು ಪಲಿತಾಂಶ ಪಡೆದಿವೆ ಈ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ವಿದ್ಯಾಥರ್ಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಪ್ರೀತಿ ವಿಶ್ವಾಸ ಬರುವಂತೆ ನೋಡಿಕೊಳ್ಳಬೇಕು ಎಂದರು.
ಡಿ.ವಿ.ಪಿ.ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಲ್.ಮಲ್ಲಿಕಾಜರ್ುನಯ್ಯ ಮಾತನಾಡಿ ಕನ್ನಡ ಭಾಷೆ ಸುಲಭವಲ್ಲ, ಕನ್ನಡವೂ ಕಠಿಣ ಎಂಬುದನ್ನು ಮಕ್ಕಳಿಗೆ ಅರಿವು ಮೂಡಿಸಬೇಕು, ಹಾಗೂ ಕನ್ನಡದ ಬಗ್ಗೆ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡು 2013-14ನೇ ಸಾಲಿನಲ್ಲಿ ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಶೇ.100ರಷ್ಟು ಪಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದರು.
ತಾಲ್ಲೂಕು ಪ್ರೌಡಶಾಲಾ ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು. ಸಮಾರಂಭದಲ್ಲಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಪ್ಪ, ಮಂಜಯ್ಯಗೌಡರು ಉಪಸ್ಥಿತರಿದ್ದರು.
ಇದೇ 17ರಂದು ಚಿ.ನಾ.ಹಳ್ಳಿಯಲ್ಲಿ ಬಿ.ಎಸ್.ಪಿ.ಪಕ್ಷದ ಸಭೆ

ಚಿಕ್ಕನಾಯಕನಹಳ್ಳಿ,ಜು.13: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಜನ ಸಮಾಜ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರ ಸಭೆಯನ್ನು ಇದೇ 17ರ ಸೋಮವಾರ ಬೆಳಿಗ್ಗೆ11ಕ್ಕೆ ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಪಕ್ಷದ ಕಛೇರಿಯಲ್ಲಿ ಕರೆಯಲಾಗಿದೆ ಎಂದು ಪಕ್ಷದ ಸಂಚಾಲಕರು ತಿಳಿಸಿದ್ದಾರೆ.
ಪಕ್ಷದ ನಾಯಕರು ಹಾಗೂ ರಾಜ್ಯ ಸಮಿತಿ ಪ್ರಧಾನ ಕಾರ್ಯದಶರ್ಿಯವರಾದ ಕ್ಯಾಪ್ಟನ್ ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಆದ್ದರಿಂದ ಪಕ್ಷದ ಎಲ್ಲ ಮುಖಂಡರುಗಳು ಮತ್ತು ಸಕ್ರಿಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸುವಂತೆ ಸಂಚಾಲಕರುಗಳಾದ ಆರ್.ರಂಗಸ್ವಾಮಿ ಕೋರಿದ್ದಾರೆ. 


ಜನರ ಸಮಸ್ಯೆ ಬಗೆಹರಿಸುವುದೇ ಜಯಕನರ್ಾಟಕ ಸಂಘದ ಧ್ಯೇಯ:

ಚಿಕ್ಕನಾಯಕನಹಳ್ಳಿ,ಜೂ.12 : ಜಯಕನರ್ಾಟಕ ವೇದಿಕೆ ಎರಡನೇ ಪಂಕ್ತಿ ನಾಯಕರಿಗಾಗಿ ಹುಡುಕಾಡುತ್ತಿದೆ, ಅದಕ್ಕಾಗಿ 2ವರ್ಷಕ್ಕೊಮ್ಮೆ ರಾಜ್ಯ, ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಬದಲಾಯಿಸುತ್ತದೆ ಎಂದು ಜಯಕನರ್ಾಟಕ ಸಂಘಟನೆಯ ರಾಜ್ಯ ಯುವ ಅಧ್ಯಕ್ಷ ಕೆ.ಎನ್.ಜಗದೀಶ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯನ್ನು ಎನ್.ಮುತ್ತಪ್ಪರೈರವರು ರಾಜ್ಯದಲ್ಲಿ ಹೊಸ ಬದಲಾವಣೆ ತರಬೇಕೆಂದು ಆಸೆಯನ್ನಿಟ್ಟುಕೊಂಡು ವೇದಿಕೆ ಸ್ಥಾಪಿಸಿದರು. ರಾಜ್ಯದ 30ಜಿಲ್ಲೆಗಳಲ್ಲೂ ಸಂಘಟನೆ ಮಾಡುವ ಮೂಲಕ ಸುಮಾರು 18ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಹೊಂದಿ, ಜನ ಪರ ಚಿಂತನೆಗೆ ಹಾಗೂ ಅವರ ಸಮಸ್ಯೆಗೆ ಸ್ಪಂದಿಸಲು ಮುಂದಾದರು ಅವರ ಮಾದರಿಯಲ್ಲೇ ತಾಲ್ಲೂಕಿಗೆ ಆಗಮಿಸಿರುವ ನಾವು ಮುತ್ತಪ್ಪರೈರವರ ಅನುಪಸ್ಥಿತಿಯಲ್ಲಿ ನಿಮ್ಮೊಂದಿಗೆ ಸಂಘಟನೆ ಬಲಿಷ್ಠಗೊಳಿಸಲು ಮುಂದಾಗಿದ್ದೇವೆ ಎಂದರು.
ಸಕರ್ಾರ ಮತ್ತು ಜನರ ನಡುವೆ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲು ಇಚ್ಛಿಸಿರುವ ಯುವಕರಿಗೆ ಜಯಕನರ್ಾಟಕ ಸಂಘಟನೆ ಆದ್ಯತೆ ನೀಡುತ್ತಿದೆ, ರಾಜ್ಯದ ಸಮಸ್ಯೆಗಳ ಬಗ್ಗೆ ಯುವಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಬಡಿದೆಬ್ಬಿಸಲು ಸಂಘಟನೆಯ ಅವಶ್ಯಕತೆ ಇದೆ, ಆದರೆ ಸಂಘಟನೆಯಲ್ಲಿ ಯಾವ ದುರುದ್ದೇಶವೂ ಇರುವುದಿಲ್ಲವೆಂದು ತಿಳಿಸಿದರು.
ನಮ್ಮ ಸಂಘಟನೆಯಲ್ಲಿರುವ ಹಲವರು ಇಂದು ಜಿಲ್ಲಾ ಪಂಚಾಯತ್ ಹಾಗೂ ಬೆಂಗಳೂರಿನ ಬಿಬಿಎಂಪಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು ಆ ಮೂಲಕ ಜನರ ಸಮಸ್ಯೆ ಬಗೆಹರಿಸುತ್ತಿದ್ದಾರೆ ಎಂದರಲ್ಲದೆ ಜಯಕನರ್ಾಟಕ ಸಂಘಟನೆಯ ಕಾರ್ಯಕರ್ತರಿಗೆ ಸ್ಮಾಟರ್್ಕಾಡರ್್ನ್ನು ನೀಡುತ್ತಿದೆ, ಇದರಲ್ಲಿ ನಮ್ಮ ಕಛೇರಿಯ ದೂರವಾಣಿ ಸಂಪರ್ಕವಿದೆ,  ಕಾರ್ಯಕರ್ತರು ತಾವು ದೂರದ ಊರಿನಲ್ಲಿ ಸಮಸ್ಯೆ ಎದುರಾದಗ ದೂರವಾಣಿಗೆ ಸಂಪಕರ್ಿಸಿದರೆ ಅಲ್ಲಿನ ಕಾರ್ಯಕರ್ತರು ನಿಮ್ಮ ಸಮಸ್ಯೆ ನಿವಾರಿಸಲು ಮುಂದಾಗುವರು ಹಾಗೂ ಜನರಿಗೆ ಉತ್ತಮ ಕೆಲಸ ಮಾಡಿಕೊಂಡು ಬರುತ್ತಿರುವ ಸಂಘಟನೆ ಮುಂದೆ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಮೆಡಿಕಲ್ ಕ್ಯಾಂಪ್ ಹಮ್ಮಿಕೊಳ್ಳಲಿದೆ ಎಂದರು.  
ಜಿಲ್ಲಾ ಜಯಕನರ್ಾಟಕ ಸಂಘಟನೆಯ ಅಧ್ಯಕ್ಷ ದೀಪಕ್ ಮಾತನಾಡಿ ನಾವು ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸಲು ಈಗಾಗಲೇ 5ಜಿಲ್ಲೆಗಳಲ್ಲಿ ಕಾರ್ಯಕರ್ತರಲ್ಲಿ ಚಚರ್ಿಸಿದ್ದೇವೆ, ತುಮಕೂರು ಜಿಲ್ಲೆಯ ತಾಲ್ಲೂಕುಗಳಿಗೂ ತೆರಳಿ ಅಲ್ಲಿನ ಯುವಶಕ್ತಿಯನ್ನು ನಮ್ಮೊಂದಿಗೆ ಕೈಜೋಡಿಸಲು ಕೋರಿದ್ದೇವೆ, ಅಲ್ಲದೆ ಸಂಘಟನೆಯ ಸದಸ್ಯತ್ವವನ್ನು ಹೆಚ್ಚಿಸಿ ಸಂಘಟನೆಯಿಂದ ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯದ ವಿರುದ್ದ ಹೋರಾಟ ಮಾಡಲು ತಿಳಿಸಿದ್ದೇವೆ ಎಂದರಲ್ಲದೆ ಪಕ್ಷಗಳು ಸಂಘಟನೆ ಮಾಡುವುದು ಅಧಿಕಾರ ಬರುವವರೆಗೆ ಮಾತ್ರ ಆದರೆ ನಮ್ಮ ಸಂಘಟನೆ ಜನರ ಸಮಸ್ಯೆ ನಿವಾರಿಸುವುದಕ್ಕಾಗಿ  ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯಕನರ್ಾಟಕ ಜಿಲ್ಲಾ ಉಪಾಧ್ಯಕ್ಷ ಸೋಮಶೇಖರ್,  ತಾಲೂಕು ಗೌರವಾಧ್ಯಕ್ಷ ಹೆಚ್.ಬಿ.ಪ್ರಕಾಶ್, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಉಪಾದ್ಯಕ್ಷ ಚಂದ್ರು(ಜೆಸಿಬಿ), ತಾಲ್ಲೂಕು ಯುವ ಅಧ್ಯಕ್ಷ ಭೈರೇಶ್, ನಾಗರಾಜು, ಧೃವಕುಮಾರ್ ಮುಂತಾದವರಿದ್ದರು.
ಸ್ಥಳೀಯ ಜನಪ್ರತಿನಿದಿ  ಮತ್ತು ಗಣಿಭಾದಿತ ರೈತರನ್ನು ದೂರವಿಟ್ಟು ಗಣಿಗಾರಿಕೆ ಸಭೆ: ತಾ.ಪಂ.ಅಧ್ಯಕ್ಷರ ಆಕ್ರೋಶ
ಚಿಕ್ಕನಾಯಕನಹಳ್ಳಿ,ಜೂ.11 : ಗಣಿ ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ಚಚರ್ಿಸಲುಶಾಸಕರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಗೆ ಜಿ.ಪಂ, ತಾ.ಪಂ. ಸದಸ್ಯರನ್ನು ಹಾಗೂ ಗಣಿಭಾದಿತ ರೈತರನ್ನು ಆಹ್ವಾನಿಸಿದೆ ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಆರೋಪಿಸಿದರು.
ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ 3ವರ್ಷಗಳಿಂದ ಮಳೆ ಬೆಳೆ ಇಲ್ಲದ ಸಂದರ್ಭದಲ್ಲಿ ಗಣಿ ಭಾಗದಿಂದ ಲಕ್ಷಾಂತರ ಟನ್ ಕಬ್ಬಿಣದ ಅಧಿರು ಸಾಗಿಸಿದ್ದಾರೆ, ರಸ್ತೆ ಅಭಿವೃದ್ದಿ ಹಾಗೂ ಗ್ರಾಮಗಳ ಅಭಿವೃದ್ದಿಗೆ ಪ್ರತಿಟನ್ಗೆ 25ರೂ ನಂತೆ ಹಣ ತೆಗೆದಿದ್ದರೂ ಅದನ್ನು ಉಪಯೋಗಿಸಿ ರಸ್ತೆ ರಿಪೇರಿ ಮಾಡಿಸದ ತಾಲೂಕು ಆಡಳಿತ ನಿರ್ಲಕ್ಷದೆ ಎಂದರು.
 ಲಾರಿಗಳು ಚಲಿಸುವ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ರಸ್ತೆಗಳಿಗೆ ನೀರನ್ನು ಸಿಂಪಡಿಸದೇ ಇರುವುದರಿಂದ ಗಣಿ ಧೂಳು ತೋಟಗಳ ತೆಂಗು, ಅಡಿಕೆ ಬೆಳೆಗಳ ಮೇಲೆ ಧೂಳು ಕುಳಿತುಕೊಳ್ಳುವುದರಿಂದ ಸರಿಯಾದ ಬೆಳೆಯಾಗದೆ ರೈತರಿಗೆ ತೀವ್ರತರ ನಷ್ಠವುಂಟಾಗಿದೆ. ಸೊಂಡೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಗಣಿ ಧೂಳಿನಿಂದ ರೈತರಿಗೆ ಬೆಳೆ ಪರಿಹಾರ ನೀಡುವಂತೆ ಒತ್ತಾಯಿಸಿ ಸೊಂಡೇನಹಳ್ಳಿ ಮಾವಿನ ಮರದ ಬಳಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಪರಿಣಾಮ ಗಣಿ ಭಾಗದಲ್ಲಿ ಸಂಚರಿಸುವ ಲಾರಿ ಮಾಲೀಕರು, ಟ್ರಾನ್ಸ್ಪೋಟರ್್ ಗುತ್ತಿಗೆದಾರರು ಹಾಗೂ ಮೈನ್ಸ್ನವರನ್ನು ಮಾತ್ರ ಶನಿವಾರ ನಡೆದ ಸಭೆಗೆ ಆಹ್ವಾನ ನೀಡಿದ್ದಾರೆ ಹೊರತು ರೈತರನ್ನು ಕಡೆಗಣಿಸಿ ಸಭೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಪರಿಹಾರ ಕೆಲವರಿಗೆ ನೀಡಿ, ಉಳಿದವರಿಗೆ ಪರಿಹಾರ ನೀಡದೆ ಇರುವುದು ದುರಂತ, ಐದು ವರ್ಷಗಳ ಹಿಂದ ಗಣಿ ಭಾಗದಲ್ಲಿ ಸಂಚರಿಸುವ ರಸ್ತೆಗಳಿಗೆ ಡಾಂಬರು ಹಾಕಿಸುತ್ತೇವೆ ಎಂದು ಆಶ್ವಾಸನೆ ನೀಡಿದರು, ಇದುವರೆಗೂ ಡಾಂಬಾರು ಹಾಕಿಲ್ಲ ಎಂದು ದೂರಿದರು. 
ರೈತರ ಬೆಳೆಗೆ ಬೆಂಬಲ ಬೆಲೆ ನಿಗಧಿಡಪಸಿ, ನೆಫೆಡ್ ಕೇಂದ್ರಕ್ಕೆ ಒತ್ತಾಯ:  ರೈತರು ಬೆಳೆದ ತೆಂಗಿನ ಬೆಲೆ ಕಡಿಮೆಯಾಗಿ ಕೊಬ್ಬರಿ ಬೆಲೆ ಪಾತಾಳಕ್ಕೆ ಕುಸಿದಿದ್ದು ಇದರಿಂದ ರೈತ ಕಂಗಾಲಾಗಿದ್ದಾನೆ, ಇಂತಹ ಸಂದರ್ಭದಲ್ಲಿ ಸಕರ್ಾರ ರೈತರ ನೆರವರಿಗೆ ಬರುವಂತೆ ಒತ್ತಾಯಿಸಿದ ಅವರು ಹುಳಿಯಾರು ಹಾಗೂ ಚಿಕ್ಕನಾಯಕನಹಳ್ಳಿ ಎ.ಪಿ.ಎಂ.ಸಿ ಗಳಲ್ಲಿ ನಫೆಡ್ ಕೇಂದ್ರ ಪ್ರಾರಂಭಿಸುವಂತೆ ಒತ್ತಾಯಿಸಿದರು. ಜೂನ್ 18ರ ಒಳಗೆ ನಫೆಡ್ ಕೇಂದ್ರ ಪ್ರಾರಂಭಿಸದಿದ್ದರೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ನಿರಂಜನಮೂತರ್ಿ ಹಾಗೂ ಕೆಂಕೆರೆ ನವೀನ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸುವಂತೆ ಒತ್ತಾಯಿಸಿದರು. ಕಳೆದ ಮೂರು ವರ್ಷಗಳಿಂದ ತೀವ್ರ ಬರಗಾಲದಿಂದ ತತ್ತರಿಸಿರುವ ರೈತರು ರಾಷ್ಟ್ರೀಕೃತ ಬ್ಯಾಂಕ್ನಿಂದ ತೆಗೆದುಕೊಂಡ ಸಾಲವನ್ನು ಸಕರ್ಾರ ಕೂಡಲೇ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ಹಾಗೂ ಕೃಷಿ ಇಲಾಖೆ ವತಿಯಿಂದ ಉಚಿತವಾಗಿ ರೈತರಿಗೆ ಸಮರ್ಪಕ ಬಿತ್ತನೆ ಬೀಜ ವಿತರಿಸಲು ಸಕರ್ಾರ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ, ಕಾನಕೆರೆ ಪರಮೇಶ್, ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.


ತಾಲೂಕಿನ ಹೆಸರು ಗಿಡಗಳಲ್ಲಿ ಹೇನಿನ ಬಾದೆ:
ಮುಂಜಾಗ್ರತೆ ವಹಿಸಲು ರೈತರಿಗೆ ಸಲಹೆ
ಚಿಕ್ಕನಾಯಕನಹಳ್ಳಿ,ಜೂ.12 :  ತಾಲ್ಲೋಕಿನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಭಿತ್ತನೆಯಾದ ಹೆಸರು ಬೆಳೆಯಲ್ಲಿ ಹೇನಿನ ಬಾದೆ ಕಂಡು ಬಂದಿದೆ ಎಂದು ಸಹಾಯಕ ಕೃಷಿ ನಿದರ್ೇಶಕರಾದ ಕೃಷ್ಣಪ್ಪ ತಿಳಿಸಿದ್ದಾರೆ.
ಹೆಸರು ಗಿಡದಲ್ಲಿ ಎಲೆಗಳ ಮುದುಡಿರುವುದು, ಗಿಡಗಳಲ್ಲಿ ಗುಂಪಾಗಿ ಹೇನುಗಳಿರುವುದು, ಹೇನಿನ ಬಾದೆಯ ಲಕ್ಷಣಗಳಾಗಿದ್ದು ಈ ಭಾದೆಯ ಹತೋಟಿಗೆ ತರಲು 1.7 ಮಿಲಿ ಡೈಮಿಥೋಯೇಟ್(ರೋಗರ್)1ಲೀ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು, 1 ಎಕರೆಗೆ 200ಲೀ ಸಿಂಪರಣಾ ದ್ರಾವಣ ಬಳಸಬೇಕಾಗುತ್ತದೆ ಎಂದಿದ್ದಾರೆ.
ನಂಜುರೋಗ :-ಎಲೆಗಳು ಕಾಂತಿಹೀನಗೂಂಡು ಹೂವು ಸರಿಯಾಗಿ ಬಿಡುವುದಿಲ್ಲ ಇದರ ಹತೋಟಿಗಾಗಿ ಅಂತರ್ಪ್ಯಾಡಿ ಸಸ್ಯಸಂರಕ್ಷಣ ಔಷಧಿ ಸಿಂಪಡಿಸಬೇಕು ಎಂದು ತಿಳಿಸಿರುವ ಅವರು 1.7 ಮಿಲಿ ಡೈಮಿಥೋಯೇಟ್ ಔಷಧಿಯನ್ನು 1ಲೀ ನೀರಿನ ಪ್ರಮಾಣದಲ್ಲಿ ಬಳಸಿ ಸಿಂಪಡಿಸಬೇಕು ಎಂದಿದ್ದಾರೆ.
ಎಲೆತಿನ್ನುವ ಹುಳುವಿನಬಾದೆ ಕಂಡುಬಂದಲ್ಲಿ 2 ಮಿಲಿ ಕ್ಲೋರೋಫೈರಿಪಾಸ್ ಔಷಧಿಯನ್ನು 1ಲೀ ನೀರಿನ ಪ್ರಮಾಣದಲ್ಲಿ ಬಳಸಿ ಸಿಂಪಡಿಸಲು ಹಾಗೂ 1 ಎಕರೆ ಪ್ರಮಾಣದಲ್ಲಿ 250ಲೀ ಸಿಂಪರಣಾ ದ್ರಾವಣ ಬಳಸಬೇಕಾಗಾಗಿದ್ದು ಈ ಬಗ್ಗೆ ಸಸ್ಯಸಂರಕ್ಷಣಾ ಕ್ರಮಗಳನ್ನು ಕೈಗೂಳ್ಳಲು ರೈತ ಭಾಂದವರಲ್ಲಿ ಮನವಿ ಮಾಡಿದ್ದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳ ಅಧಿಕಾರಿಗಳನ್ನು ಸಂಪಕರ್ಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Monday, June 10, 2013



ಮನದಲ್ಲಿ ಬೇರೂರಿದ್ದ ಶಿಕ್ಷಕರಿಗೆ ಹೃದಯ ಸ್ಪಶರ್ಿ ಶ್ರದ್ದಾಂಜಲಿ ಅಪರ್ಿಸಿದ ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಜೂ.09 : ಮನದಾಳದಲ್ಲಿ ಬೇರೂದಿದ ಶಿಕ್ಷಕ ಅಗಲಿದಾಗ ಶಿಷ್ಯವೃಂದದವರು ಹಾಗೂ ಗ್ರಾಮಸ್ಥರು ಶಿಕ್ಷಕರಿಗೆ ಈಗೂ ಗೌರವ ಸಲ್ಲಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಗೋಪಾಲನಹಳ್ಳಿಯ ಜನರು.
ಗೋಪಾಲನಹಳ್ಳಿಯಲ್ಲಿ 20ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡುತ್ತಲೇ ಗ್ರಾಮಸ್ಥರ ಮನೆ, ಮನದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿಕೊಂಡಿದ್ದ ಶಿಕ್ಷಕ ರಂಗಸ್ವಾಮಿಯ್ಯ ನವರನ್ನು ಸ್ಮರಿಸಿಕೊಂಡ ರೀತಿ ಇಡೀ ಸಮಾಜಕ್ಕೆ ಆದರ್ಶವಾಗುವಂತೆ ಶ್ರದ್ದಾಂಜಲಿ ಸಭೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಆಚರಿಸಿದ್ದು ಹೃದಯಸ್ಪಶರ್ಿಯಾಗಿತ್ತು.
ಕಳೆದ ತಿಂಗಳು  ಸಾವನ್ನಪ್ಪಿದ ಗ್ರಾಮಸ್ಥರ ಪ್ರೀತಿಯ ನಿವೃತ್ತ ಶಿಕ್ಷಕ ರಂಗಸ್ವಾಮಿರವರ ಅಂತಿಮ ಸಂಸ್ಕಾರಕ್ಕೆ  ಗ್ರಾಮಸ್ಥರೆಲ್ಲಾ ತೆರಳಲು ಸಾಧ್ಯವಾಗಲಿಲ್ಲವೆಂಬ ನೋವಿನಿಂದ  ಇಡೀ ಗ್ರಾಮದವರು ಒಟ್ಟಿಗೆ ಸೇರಿ ಅವರ ನೆನಪಿನಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಮನಮಿಡಿಯುವಂತೆ ನಡೆಸಿಕೊಟ್ಟರು.
ಇಪ್ಪತ್ತು ವರ್ಷಗಳ ಕಾಲ ಗೋಪಾಲನಹಳ್ಳಿಯ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಗ್ರಾಮದ ಪ್ರತಿಯೊಬ್ಬರ ಮನೆ-ಮನದಲ್ಲಿ ನೆಲಸಲು ಕಾರಣ ಅವರು ವೃತ್ತಿಯಲ್ಲಿ ಇಟ್ಟಿದ್ದ ಶ್ರದ್ದೆ ಹಾಗೂ ವಿದ್ಯಾಥರ್ಿಗಳಿಗೆ ನೀಡುತ್ತಿದ್ದ ಮಾರ್ಗದರ್ಶನ, ಅವರ ಅಕ್ಷರಭ್ಯಾಸವನ್ನಷ್ಟೇ ಮಾಡಿಸಿದೆ, ಮಕ್ಕಳಿಗೆ ಪಾಠದ ಜೊತೆಗೆ, ಆಟ, ನಾಟಕ, ಸಾಂಸ್ಕೃತಿಕ ಕಲೆಗಳ ಪರಿಚಯವನ್ನು ಮಾಡಿಕೊಡುತ್ತಿದ್ದು, ಗ್ರಾಮದ ಸ್ವಚ್ಚತೆಗಾಗಿ ಅವರು ವಹಿಸುತ್ತಿದ್ದ ಕಾಳಜಿಯ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಸ್ಮರಿಸಿಕೊಂಡರು.
ಶ್ರದ್ದಾಂಜಲಿ ಕಾರ್ಯಕ್ರಮವನ್ನು ಊರಿನ ಗ್ರಾಮಸ್ಥರೆಲ್ಲರೂ ಒಂದೆಡೆ ಸೇರುವಂತೆ ಬೃಹತ್ ಶಾಮಿಯಾನದ ವ್ಯವಸ್ಥೆ ಮಾಡಿದಲ್ಲದೆ, ಭಜನೆ, ಸ್ಮರಣೆ, ಮಾತು, ಮಾರ್ಗದರ್ಶನ, ಊಟ ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ದಿ.ರಂಗಸ್ವಾಮಿರವರ ಸ್ನೇಹಿತರಾದ ನಿವೃತ್ತ ಶಿಕ್ಷಕ ರಾಮಕೃಷ್ಣಪ್ಪ ಮಾತನಾಡಿ, ಅವರ ಜೊತೆ ಸಹಪಾಠಿಯಾಗಿದ್ದ ನಾನು ಅವರಿಂದ ಉತ್ತಮವಾದ ತಿಳುವಳಿಕೆ ಪಡೆದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ, ನಾಟಕದ ಕೆಲ ಪ್ರಸಂಗದ ಅಂಶಗಳು ಹಾಗೂ ಗ್ರಾಮ ಸ್ವಚ್ಛತೆಯ ಬಗ್ಗೆ ವಿದ್ಯಾಥರ್ಿಗಳಿಗೆ ತಿಳಿಸಿದರಲ್ಲದೆ ರಂಗಸ್ವಾಮಿರವರೊಂದಿಗೆ 20ವರ್ಷ ನನ್ನ ಅವರ ಒಡನಾಟ ಉತ್ತಮ ರೀತಿಯಲ್ಲಿತ್ತು, ಅವರು ಮಕ್ಕಳಿಗೆ ನೀತಿ ಕಥೆಗಳನ್ನು ವಿದ್ಯಾಥರ್ಿಗಳಿಗೆ ಹೇಳುತ್ತಾ ಅವರಿಗೆ ಸಂಸ್ಕಾರಯುತವಾದ ಜೀವನ ನಡೆಸಲು ದಾರಿಯಾದರು ಎಂದರಲ್ಲದೆ ಜೀವನದಲ್ಲಿ ನೆನಪಿನಲ್ಲಿ ಉಳಿಯುವ ಶಿಕ್ಷಕರು, ಸಂಬಳಕ್ಕಾಗಿ ದುಡಿಯುವ ಶಿಕ್ಷಕರು, ಕಾಟಾಚಾರಕ್ಕೆ ಶಿಕ್ಷಕ ವೃತ್ತಿ ಮಾಡುವವರು ಎಂಬ ಮೂರು ವಿಧಗಳಿವೆ,  ಅವರಲ್ಲಿ ದಿ.ರಂಗಸ್ವಾಮಿಯವರು ಮೊದಲ ಪಂಕ್ತಿಯ  ಶಿಕ್ಷಕರು ಎಂದರು.
ಗೋಪಾಲನಹಳ್ಳಿ ರಘು ಮಾತನಾಡಿ ಗ್ರಾಮದ ವಿದ್ಯಾಥರ್ಿಗಳಿಗೆ ಉತ್ತಮ ಬದುಕು ರೂಪಿಸಿದ ಹಾಗೂ ಸಮಾಜಕ್ಕೆ ತನ್ನ ಸರ್ವಸ್ವದ ಅನುಭವವನ್ನು ನೀಡಿದ ಶಿಕ್ಷಕರಲ್ಲಿ ರಂಗಸ್ವಾಮಿರವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ, ಅವರ 78ವರ್ಷಗಳ ಕಾಲದ ಜೀವಿತಾವಧಿಯಲ್ಲಿ  ಈ ಗ್ರಾಮದಲ್ಲೇ 20ವರ್ಷ ಸೇವೆ ಸಲ್ಲಿಸಿದ್ದಾರೆ ಎಂದರಲ್ಲದೆ ರತ್ನಮಾಂಗಲ್ಯ ಎಂಬ ನಾಟಕವನ್ನು ಪ್ರಾರಂಭಿಸಿ ಹಲವು ಕಲಾವಿದರಿಗೆ ದಾರಿದೀಪವಾದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಂಗಸ್ವಾಮಿರವರ ಪುತ್ರ ಶ್ರೀನಿವಾಸ್, ಗ್ರಾಮದ ಹಿರಿಯರಾದ ಮುನಿಸಿದ್ದಪ್ಪ, ಶಾಂತವೀರಪ್ಪ, ಗ್ರಾ.ಪಂ.ಸದಸ್ಯ ಡಿ.ಎಮ್.ಬಸವರಾಜು, ನಾಗರಾಜು,  ವೆಂಕಟರಾಮಯ್ಯ, ಶಿಕ್ಷಕ ಕಾಂತರಾಜು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು

Friday, June 7, 2013


ಹೆಸರಿಗೆ ನಂಜು ರೋಗ, ಹಲಸಂದೆಗೆ ಕರಿಹೇನಿನ ಕೀಟಗಳ ಬಗ್ಗೆ ಎಚ್ಚರ ವಿರಲಿ
                          (ಸಿ.ಗುರುಮೂತರ್ಿ ಕೊಟಿಗೆಮನೆ)
                                         
ಚಿಕ್ಕನಾಯಕನಹಳ್ಳಿ,ಜು.7: ಬರಗಾಲದ ಬೇಗೆಗೆ ಕಂಗಾಲಾಗಿದ್ದ ರೈತರು ಬಿದ್ದ ಅಲ್ಪ ಸ್ವಲ್ಪ ಮಳೆಗೆ ಹೊಲಗಳನ್ನು ಅಸನು ಮಾಡಿಕೊಂಡು ಇದ್ದ ಅಷ್ಟೋ ಇಷ್ಟೋ ಬೀಜಗಳನ್ನು ರಾಸಾಯನಿಕ ಗೊಬ್ಬರಗಳೆಂಬ ನಿಧಾನ ಗತಿಯ ವಿಷದ ಉಂಡೆಗಳೊಂದಿಗೆ ಬಿತ್ತಿ ಬಂದಿದ್ದಾರೆ, ಮತ್ತೆ ಮುಗಿಲು ನೋಡುವ ಸರದಿಯಲ್ಲಿದ್ದಾನೆ. ಆದರೆ ಮಳೆರಾಯ ತಾಲೂಕಿನಲ್ಲಿ ವಾಡಿಕೆಯಷ್ಟು ಪ್ರಮಾಣದಲ್ಲೂ ಬರದೆ ಸತಾಯಿಸುತ್ತಿದ್ದಾನೆ, ಜೊತೆಗೆ ರೈತರು ಸಸಿಗಳಿಗೆ ಹರಡುವ ರೋಗಗಳ ಬಗ್ಗೆಯೂ ಎಚ್ಚರವಿರಬೇಕಾಗಿದೆ.
ತಾಲೂಕಿನ ರೈತರು ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಅಲಸಂದೆ ಗಳನ್ನು ಮುಂಗಾರಿಗೆ 17350 ಎಕರೆ ಪ್ರದೇಶದಲ್ಲಿ ಬಿತ್ತಿದ್ದಾನೆ, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆರಂಭವಾಗುವ ಪೂರ್ವ ಮುಂಗಾರಿಗೆ ತೊಗರಿಯನ್ನು 3050 ಎಕರೆಯಲ್ಲಿ ಬಿತ್ತಿದ್ದರೆ, ಹೆಸರನ್ನು 12675 ಎಕರೆಯಲ್ಲಿ, ಉದ್ದು550 ಎಕರೆ, ಅಲಸಂದೆ 1075 ಎಕರೆಗಳಲ್ಲಿ, ಎಳ್ಳು 225 ಎಕರೆಯಲ್ಲಿ,  ಜೋಳವನ್ನು 145 ಎಕರೆ ಪ್ರದೇಶದಲ್ಲಿ ಬಿತ್ತಿದ್ದಾರೆ. ಈ ಬೆಳೆಗಳಿಗೆ ಮಳೆ ಬೇಕು ಆದರೆ ತಾಲೂಕಿನಲ್ಲಿ ಮೇ ಮತ್ತು ಜೂನ್ ತಿಂಗಳ ಇದುವರೆಗೆ  ಬಿದ್ದಿರುವ ಮಳೆಯ ಪ್ರಮಾಣ 106 ಮಿ.ಮೀ ಮಾತ್ರ, ಇನ್ನೂ 35 ಮಿ.ಮೀ.ಮಳೆಯಾಗಬೇಕು, ಅದೂ ಕಾಲ ಕಾಲಕ್ಕೆ ಆಗಬೇಕು, ಹೆಸರು 3ತಿಂಗಳ ಬೆಳೆ ಆದ್ದರಿಂದ ಮೇ ತಿಂಗಳಲ್ಲಿ ಬಿತ್ತಿದವರೆಗೆ ಈ ಬೆಳೆ ಉತ್ತಮ ಫಸಲು ಕೊಡುತ್ತದೆ.
ತಡ ಮುಂಗಾರು ಆರಂಭ: ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗಿನ ಕಾಲವನ್ನು ತಡ ಮುಂಗಾರು ಕಾಲವೆಂದು ಗುತರ್ಿಸಿದ್ದು, ಈ ಸಮಯದಲ್ಲಿ ಸಿರಿ ಧಾನ್ಯಗಳಾದ ನವಣೆ, ಸಜ್ಜೆ, ಸಾವೆ, ಹಾರಕದ ಜೊತೆ ದ್ವಿದಳ ಬೆಳೆಗಳಾದ ಅವರೆ, ಹುರುಳಿ. ಎಣ್ಣೆಕಾಳು ಬೆಳೆಗಳಾದ, ನೆಲಗಡಲೆ, ಹುಚ್ಚಳ್ಳು, ಸಾಸುವೆ ಬೆಳೆಯಲು ಪ್ರಾಶಸ್ತವಾಗಿದೆ, ಇನ್ನೂ ರಾಗಿ, ಸೂರ್ಯಕಾಂತಿ, ಮುಸುಕಿನ ಜೋಳವನ್ನು ಬೆಳೆಯ ಬಹುದು. 
  ರೋಗಗಳ ಭಾದೆ: ಹೆಸರು ಕಾಳಿಗೆ ನಂಜುರೋಗ, ಹಳದಿ ರೋಗಗಳಂತಹವು ಬಾರದೆ ಇದ್ದರೆ ಈ ಬಾರಿ ಸ್ವಲ್ಪ ಬೆಳೆಯಾಗಬಹುದು ಎಂಬುದು ಅನುಭವಿಸ್ಥರ ಮಾತು, ಆದರೆ ತಾಲೂಕಿನಲ್ಲಿ ಪರಿಸ್ಥಿತಿ ಆಗಿಲ್ಲ. ಈಗಾಗಲೇ ಹುಳಿಯಾರು ಹೋಬಳಿ ಭಾಗದಲ್ಲಿ ಹೆಸರು ಕಾಳಿಗೆ ನಂಜುರೋಗ ಕಾಣಿಸಿಕೊಂಡಿದೆ,  ಹಲಸಂದೆಗೆ ತಾಲೂಕಿನ ಅಲ್ಲಲ್ಲಿ ಕರಿಹೇನು ರೋಗ ಕಾಣಿಸಿಕೊಂಡಿದೆ, ಇಂತಹ ಪರಿಸ್ಥಿತಿಯಲ್ಲಿ ರೈತನಿದ್ದಾನೆ.
ನಂಜುರೋಗಕ್ಕೆ ಔಷಧೋಪಚಾರ:  ಹೆಸರಿಗೆ ನಂಜುರೋಗ ಹಾಗೂ ಹಳದಿ ರೋಗಗಳು ಕಾಣಿಸಿಕೊಂಡಿರುವ ಹೊಲಗಳಿಗೆ ರೈತರು ತಕ್ಷಣವೇ ಮಾನೋಕ್ರೊಟೋಪಾಸ್ ಎಂಬ ಕೀಟ ನಾಶಕವನ್ನು ಒಂದು ಎಂ.ಎಲ್ ಔಷಧಿಗೆ ಒಂದು ಲೀಟರ್ನಂತೆ ನೀರು ಬೆರಸಿ ಹೊಲಗಳಿಗೆ ಸಿಂಪಡಿಸುವುದು ಉತ್ತಮ. ಹೊಲದಲ್ಲಿ ಒಂದು ಗಿಡದಲ್ಲಿ ಈ ರೋಗ ಕಾಣಿಸಿಕೊಂಡರೂ ಅದು ಇಡೀ ಹೊಲವನ್ನು ಆವರಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿರುತ್ತವೆ ಆದ್ದರಿಂದ ರೈತರು ಬೇಗ ಎಚ್ಚೆತ್ತುಕೊಳ್ಳುವುದು ಒಳ್ಳೆಯದು, ಈ ರೋಗಕ್ಕೆ ಯಾವುದೇ ರೀತಿಯಾದ ಸಾವಯವ ಔಷಧಿಗಳು, ರಾಸಾಯನಿಕ ಕ್ರಿಮಿನಾಶಕದಷ್ಟು ಪರಿಣಾಮಕಾರಿಯಾಗುವುದಿಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು. ನಂಜು ಅಥವಾ ಹಳದಿ ನಂಜುರೋಗವನ್ನು ಉದಾಸೀನ ಮಾಡಿದರೆ ಗಿಡದಲ್ಲಿ ಕಾಳು ಕಟ್ಟುವುದಿಲ್ಲ, ಕಟ್ಟಿದರೂ ಸೀಕಲು ಕಾಳುಗಳಾಗುತ್ತವೆ.
ಹಲಸಂದೆಗೆ ಕರಿಹೇನು ರೋಗ ಉಲ್ಬಣಗೊಳ್ಳುತ್ತಿದೆ ಆದ್ದರಿಂದ ಹಲಸಂದೆ ಹಾಕಿರುವ ರೈತರು ತಕ್ಷಣವೇ ಡೈಮಿತೋಯೇಟ್ ಔಷಧವನ್ನು ಒಂದು ಲೀಟರ್ ನೀರಿಗೆ 1.7 ಮಿ.ಲೀ.ಬೆರಸಿ ಸಿಂಪಡಿಸಿ.
ಪೂರ್ವ ಮುಂಗಾರಿಗೆ ಈಗಾಗಲೇ ಸಮಯ ಮುಗಿದಿರುವುದರಿಂದ ಈಗ ಬಿತ್ತನೆಗೆ ಮುಂದಾಗುವವರು ತಡ ಮುಂಗಾರಿನ ಬೆಳೆಗಳನ್ನು ಬೆಳೆಯುವುದು ಒಳ್ಳೆಯದು.
ಸುದ್ದಿ: 2
 ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಉಪಯೋಗ ಪಡೆಯಲು ರೈತರಿಗೆ ಕರೆ
ಚಿಕ್ಕನಾಯಕನಹಳ್ಳಿ,ಜೂ.07 : ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ಹೋಬಳಿ ಮಟ್ಟದಲ್ಲಿ  ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ವಿಮೆ ಮಾಡಿಸಲು ಅವಕಾಶವಿದ್ದು, ಪ್ರಾಯೋಗಿಕವಾಗಿಕ  ರಾಷ್ಟ್ರೀಯ ಕೃಷಿ ಯೋಜನೆಯನ್ನು 2013ರ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಘಟಕವಾರು ಬೆಳೆಗಳ ಘೋಷಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಕೃಷ್ಣಪ್ಪ ತಿಳಿಸಿದಾರೆ.
ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ತಾಲ್ಲೂಕಿನ ಕಸಬಾ, ಶೆಟ್ಟಿಕೆರೆ, ಕಂದಿಕೆರೆ, ಹುಳಿಯಾರು, ಹಂದನಕೆರೆ ಹೋಬಳಿ ಹಾಗೂ ಕಂದಿಕೆರೆ ಗ್ರಾಮ ಪಂಚಾಯಿತಿ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರು ಭಾಗವಹಿಸಲು ಜೂನ್ 30ಕೊನೆಯ ದಿನವಾಗಿರುತ್ತದೆ.
  ಜೋಳ ಬೆಳೆಯನ್ನು ಕಸಬಾ, ಹಂದನಕೆರೆ, ಹುಳಿಯಾರು, ಕಂದಿಕೆರೆ, ರಾಗಿ (ನೀರಾವರಿ) ಹುಳಿಯಾರು, ಸಾವೆ(ಮಳೆ ಆಶ್ರಿತ) ಹುಳಿಯಾರು ಹಂದನಕೆರೆ, ನವಣೆ(ಮಳೆಆಶ್ರಿತ)ಹುಳಿಯಾರು, ರಾಗಿ(ಮಳೆಮಿಶ್ರಿತ), ಹೆಸರು(ಮಳೆಆಶ್ರಿತ) ಹುರುಳಿ(ಮಳೆಆಶ್ರಿತ)ಬೆಳೆಯನ್ನು ತಾಲ್ಲೂಕಿನ ಎಲ್ಲಾ ಹೋಬಳಿಗಳು, ಹುರಳು(ಮಳೆ ಆಶ್ರಿತ)ಹುಳಿಯಾರು, ಹಂದನಕೆರೆ, ಕಸಬಾ, ಹತ್ತಿ(ನೀರಾವರಿ)ಹಂದನಕೆರೆ, ಮೆಣಸಿನಕಾಯಿ(ಮಳೆಆಶ್ರಿತ) ಬೆಳೆಗಳನ್ನು ಹುಳಿಯಾರು ಹೋಬಳಿಗಳಲ್ಲಿ ಹಾಗೂ ತೊಗರಿ(ಮಳೆಆಶ್ರಿತ)ಬೆಳೆಯನ್ನು ಕಂದಿಕೆರೆ, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳಿಲ್ಲಿ  ಮುಂಗಾರಿಗೆ ವಿಮೆ ಮಾಡಿಸಲು ಅವಕಾಶವಿದೆ.
ಬೆಳೆಸಾಲ ಪಡೆಯದೇ ಇರುವ ರೈತರು ಅಜರ್ಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣೆ/ಖಾತೆ/ಪಾಸ್ಪುಸ್ತಕ/ಕಂದಾಯ ರಸೀತಿಯನ್ನು ನೀಡುವುದು. ಏಪ್ರಿಲ್1ರಿಂದ ಜೂನ್ 30ರೊಳಗೆ ಬೆಳೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಒಳಪಡಿಸತಕ್ಕದ್ದು. 
2013 ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಬೆಳೆವಿಮೆವ್ಯಾಪ್ತಿಯಲ್ಲಿ ಬರುತ್ತದೆ.
ವಿಮಾ ಯೋಜನೆಯ ಉದ್ದೇಶಗಳು : ಅಧಿಸೂಚಿತ ಬೆಳೆಗಳು ಪ್ರಕೃತಿ ವಿಕೋಪ, ಪೀಡೆ ಮತ್ತು ರೋಗ ಬಾಧೆಯಿಂದ ವಿಫಲಗೊಂಡಲ್ಲಿ ಅಂತಹ ಬೆಳೆಗಳನ್ನು ಅಧಿಸೂಚಿತ ಘಟಕಗಳಲ್ಲಿ ಬೆಳೆದ ರೈತರಿಗೆ ವಿಮಾ ರಕ್ಷೆ ಹಾಗೂ ಆಥರ್ಿಕ ನೆರವನ್ನು ನೀಡುವುದು. ಕೃಷಿ ವರಮಾನವನ್ನು ವಿಶೇಷವಾಗಿ ಪ್ರಕೃತಿ ವಿಕೋಪಗಳಿಗೆ ತುತ್ತಾದ ವರ್ಷಗಳಲ್ಲಿ ಸ್ಥಿರಗೊಳಿಸಲು ನೆರವಾಗುವುದು. ಪ್ರಕೃತಿ ವಿಕೋಪಗಳಿಂದ ಪ್ರವಾಹ. ಆಲಿಕಲ್ಲು ಮಳೆ, ಭೂಕುಸಿತ ಮತ್ತು ಚಂಡಮಾರುತ ಉಂಟಾದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ನಷ್ಟದ ನಿರ್ಧರಣೆಗಾಗಿ ಅಳವಡಿಸಿಕೊಳ್ಳುವುದು. ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಆಲಿಕಲ್ಲು ಮಳೆ ಭೂಕುಸಿತದಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವುದು. ಇಂತಹ ಸ್ಥಳೀಯ ಗಂಡಾಂತರಗಳಿಂದ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಂ ಕಛೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯು ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48ಗಂಟೆಗಳೊಳಗಾಗಿ ತಿಳಿಸಬೇಕು.
ಯಾವ ರೈತರು ಭಾಗವಹಿಸಬಹುದು : ಅಧಿಸೂಚಿತ ಕ್ಷೇತ್ರ ಘಟಕಗಳಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲಾ ರೈತರು ಯೋಜನೆಯಡಿಯಲ್ಲಿ ಭಾಗವಹಿಸಬಹುದು. ಏಪ್ರಿಲ್ 1ರಿಂದ ಜೂನ್ 30ರವರೆಗೆ ಅಧಿಸೂಚಿತ ಬೆಳೆಗಳನ್ನು ಅಧಿಸೂಚಿತ ಘಟಕಗಳಲ್ಲಿ ಬೆಳೆಯಲು ಬೆಳೆ ಸಾಲ ಮಂಜೂರಾದ ಎಲ್ಲಾ ರೈತರಿಗೆ ಇದು ಕಡ್ಡಾಯವಾಗಿರುತ್ತದೆ. ಬೆಳೆ ಸಾಲ ಪಡೆಯದ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಅವರು ಸ್ವಿಚ್ಛೆಯಿಂದ ಭಾಗವಹಿಸಬಹುದು.
ವಿಮಾ ಕಂತಿನ ಮೇಲೆ ರಿಯಾಯಿತಿ : ಎಲ್ಲಾ ವರ್ಗದ ರೈತರಿಗೂ ವಿಮಾ ಕಂತಿನ ಮೇಲೆ ರಿಯಾಯಿತಿ ನೀಡಲಾಗಿದೆ. ರಿಯಾಯಿತಿಯನ್ನು ಹೊರತು ಪಡಿಸಿದ ವಿಮಾ ಕಂತನ್ನು ಮಾತ್ರ ರೈತರು ಕಟ್ಟಬೇಕು ಯಾವುದೇ ಸೇವಾ ಶುಲ್ಕವನ್ನು ರೈತರು ಭರಿಸಬೇಕಾಗಿಲ್ಲ. 

Wednesday, June 5, 2013



ಶಿಲ್ಪಕಲೆಯ ಮೂಲಕ  ಜಿಲ್ಲಾ ಸಮ್ಮೇಳನಕ್ಕೆ ಮೆರಗು: ಸೋ.ಮು.ಭಾಸ್ಕರಾಚಾರ್ 

ಚಿಕ್ಕನಾಯಕನಹಳ್ಳಿ,ಜೂ.05 : ಕಲೆ, ಶಿಲ್ಪಕಲೆಯ ಬಗ್ಗೆ ಯುವಜನತೆ ಆಸಕ್ತಿ ಮೂಡಿಸಲು ಏರ್ಪಡಿಸಿರುವ ಚಿತ್ರಕಲಾ ಶಿಬಿರವು ಕಲಾವಿದರನ್ನು ಪ್ರೋತ್ಸಾಹಿಸಲು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್  ಎಂದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕಿನಲ್ಲಿ ನಡೆಯುವ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕುಂಚಾಂಕುರ ಕಲಾ ಸಂಘ, ಹೊಯ್ಸಳ ಶಿಲ್ಪ ಕೇಂದ್ರ, ಜಕಣಾ ಶಿಲ್ಪ ಗುರು ಕುಲಾ ಹಾಗೂ ವಾಣಿ ಚಿತ್ರಕಲಾ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 5ರಿಂದ 15ರವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯುವ ಚಿತ್ರಕಲಾ ಹಾಗೂ ಶಿಲ್ಪಕಲಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾರತ ಶಿಲ್ಪಕಲೆ, ಸಂಸ್ಕೃತಿಗಾಗಿ ವಿಶೇಷ ಉತ್ತೇಜನ ನೀಡುತ್ತಿದೆ, ಅನಾದಿಕಾಲದಿಂದಲೂ ನಮ್ಮ ರಾಜ ಮಹರಾಜರು ಶಿಲ್ಪಕಲೆಯ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ ಫಲವಾಗಿ ಬೇಲೂರು, ಹಳೆಬೀಡು, ಅಜಂತ, ಎಲ್ಲೋರ, ಪಟ್ಟದಕಲ್ಲು, ಐಹೊಳೆಯು ಜಗದ್ ವಿಖ್ಯಾತವಾಗಿವೆ. ನಮ್ಮ ಪೂರ್ವಜರು ಅತ್ಯಂತ ಬುದ್ದಿವಂತರು ಎಂಬುದಕ್ಕೆ ಈ ನಿದರ್ಶನಗಳೇ ಸಾಕ್ಷಿಯಾಗಿದೆ, ಕಲೆ ನಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯುತ್ತದೆ, ಕಲೆಯನ್ನು ಸೃಷ್ಠಿ ಮಾಡುವ ಕಲಾವಿದ ಸರ್ವ ಶ್ರೇಷ್ಠವಾದವನು ಕಲಾವಿದರು ಜಾತ್ಯಾತೀತ ಪಕ್ಷಾತೀತವಾಗಿ ಬೆಳೆಯುತ್ತಿದ್ದಾರೆ, ಶಿಲ್ಪಕಲೆ ಮಾನವನ ಬದುಕಿನ ಸಾರ್ಥಕತೆಗೆ ದಾರಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ತಾಲ್ಲೂಕಿನಲ್ಲಿ ನಡೆಯುವ 9ನೇ ಜಿಲ್ಲಾ ಕನ್ನಡ ಸಮ್ಮೇಳನದ ಯಶಸ್ವಿಗೆ ಎಲ್ಲರೂ ದುಡಿಯಬೇಕು, ನಮ್ಮಲ್ಲಿನ ಯುವ ಪ್ರತಿಭೆಗಳು ಧಾಮರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಾಡಿನ ಉತ್ತಮ ಸಂದೇಶ ನೀಡುವಂತಾಗಬೇಕಿದೆ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜಾನಪದ ಕಲಾ ತಂಡಗಳು ಸಂಘ ಸಂಸ್ಥೆಗಳು ತೊಡಿಸಿಕೊಂಡಾಗ ಮಾತ್ರ ತಾಲ್ಲೂಕಿನಲ್ಲಿ ಸಮ್ಮೇಳನ ಯಶಸ್ವಿಯಾಗಲು ಸಾಧ್ಯ ಇದಕ್ಕೆ ನಾನು ತಮ್ಮ ಜೊತೆಯಲ್ಲಿದ್ದು ಸಮ್ಮೇಳನದ ಯಶಸ್ವಿಗಾಗಿ ದುಡಿಯುವುದಾಗಿ ತಿಳಿಸಿದರು. 
 ಮೂರು ದಿನ ನಡೆಯುವ ಸಮ್ಮೇಳನದ ಗೋಷ್ಠಿಗಳು ಯುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಸಮ್ಮೇಳನದಲ್ಲಿ ನಡಯುವ ಗೋಷ್ಠಿಗಳು ನಾಡಿಗೆ ಉತ್ತಮ ಸಂದೇಶ ನೀಡುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಪುರಸಭಾ ಸದಸ್ಯರಾದ ರಂಗಸ್ವಾಮಯ್ಯ, ಅಶೋಕ್, ಬಿ.ಇ.ಓ ಸಾ.ಚಿ.ನಾಗೇಶ್, ಸಿಡಿಪಿಓ ಅನೀಸ್ಖೈಸರ್, ತಾ.ಕಸಾಪ ಅಧ್ಯಕ್ಷ ರವಿಕುಮಾರ್,  ಪರಶಿವಮೂತರ್ಿ, ರಾಜಶೇಖರ್, ಸಿದ್ದು ಜಿ.ಕೆರೆ, ಸಿ.ಹೆಚ್.ಗಂಗಾಧರ್, ಶಿಲ್ಪಿವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ರಾಜಗೋಪುರ ಉದ್ಘಾಟನೆ



ಚಿಕ್ಕನಾಯಕನಹಳ್ಳಿ,ಜೂ.05 : ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ರಾಜಗೋಪುರ, ಕಳಸ ಪ್ರತಿಷ್ಠಾಪನೆ ಹಾಗೂ ಧಾಮರ್ಿಕ ಸಮಾರಂಭವು ಜೂನ್ 19ರಿಂದ 21ರವರೆಗೆ ನಡೆಯಲಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜೀಣರ್ೋದ್ದಾರ ಸಮಿತಿಯ ಪೂರ್ವಭಾವಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಆಂಜನೇಯಸ್ವಾಮಿ ದೇವಾಲಯದ ರಾಜೋಗೋಪುರಕ್ಕೆ 45ಲಕ್ಷರೂಗಳ ವೆಚ್ಚದಲ್ಲಿ ನಿಮರ್ಿಸಲಾಗಿದೆ. ಜೂನ್ 19ರಂದು ಮಹಾಗಣಪತಿ ಪೂಜೆ, ಯಾಗಶಾಲಾ ಪ್ರವೇಶ, 20ರಂದು ದೀಪಾರಾಧನೆ, ವೇದಪಾರಾಯಣ, ಗೋಪುರಶುದ್ದಿ, ಕಳಸಸ್ಥಾಪನೆ, ಮಹಾಗಣಪತಿ ಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ ನಡೆಯಲಿವೆ.  21ರಂದು ಗೋಪುರ ದೇವತಾಪೂಜೆ, ಪ್ರಾಣಪ್ರತಿಷ್ಠೆ, ಮಹಾಪೂಜೆ, ಕಳಸದರ್ಶನ ಹಾಗೂ 8ಗಂಟೆಗೆ ವೇದಪಾರಾಯಣ, ಪ್ರತಿಷ್ಠಾಂಗ ಹೋಮಾದಿಗಳು, ಮಹಾಪೂಣರ್ಾಹುತಿ, ಗೋಪೂಜೆ ನಡೆಯಲಿದ್ದು ಮಧ್ಯಾಹ್ನ 12ಗಂಟೆಗೆ ಕಳಸ ಪ್ರತಿಷ್ಠಾ ಮಹಾ ಕುಂಭಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಲಿದೆ ಎಂದು ತಿಳಿಸಿದರು.
ಈ ಸಮಾರಂಭಕ್ಕೆ ತುಮಕೂರು ರಾಮಕೃಷ್ಣ ಮಠದ ಶ್ರೀ ವೀರೇಶಾನಂದಸ್ವಾಮಿಜಿ, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಜಿ.ಪಂ.ಅಧ್ಯಕ್ಷೆ ಪ್ರೇಮಮಹಾಲಿಂಗಪ್ಪ, ಮಾಜಿ ಶಾಸಕರುಗಳಾದ ಬಿ.ಲಕ್ಕಪ್ಪ, ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್ ಸೇರಿದಂತೆ ತಾಲ್ಲೂಕಿನ ವಿವಿಧ ಮಠಾಧೀಶರು,  ಜಿ.ಪಂ. ತಾ.ಪಂ, ಪುರಸಭಾ ಸದಸ್ಯರು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ದೇವಾಲಯದ ಕನ್ವಿನರ್ ಚಂದ್ರಶೇಖರ್ಶೆಟ್ಟರು, ಸಾಹಿತಿ ಎಂ.ವಿ.ನಾಗರಾಜ್ರಾವ್, ಪ್ರಚಾರ ಸಮಿತಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಡಿವಿಪಿ ವಿದ್ಯಾಸಂಸ್ಥೆಯ ಕಾರ್ಯದಶರ್ಿ ಸಿ.ಎಸ್.ನಟರಾಜು, ಪುರಸಭಾ ಸದಸ್ಯರದ ರಂಗಸ್ವಾಮಯ್ಯ, ಅಶೋಕ್, ಸಿ.ಆರ್.ತಿಮ್ಮಪ್ಪ, ರವಿಚಂದ್ರ, ಸಿ.ಕೆ.ಕೃಷ್ಣಮೂತರ್ಿ, ಮಾಳಿಗೆಹಳ್ಳಿ ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ತಾ.ಪ.ಅಧ್ಯಕ್ಷರಾಗಿ ಕೆ.ಜೆ.ಪಿ.ಯ ಶಶಿಧರ್, ಉಪಾಧ್ಯಕ್ಷರಾಗಿ ಬಿ.ಜೆ.ಪಿ.ಯ ಎ.ಬಿ.ರಮೇಶ್ಕುಮಾರ್ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ,ಜೂ.05 : ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಎಚ್.ಆರ್. ಶಶಿಧರ್ ಹೊನ್ನೆಬಾಗಿ ಹಾಗೂ ಉಪಾಧ್ಯಕ್ಷರಾಗಿ ಎ.ಬಿ.ರಮೇಶ್ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 19 ಸ್ಥಾನಗಳಿದ್ದು ಜೆಡಿಎಸ್7 ಸದಸ್ಯರು, ಜೆ.ಡಿ.ಯುನಿಂದ ಗೆದ್ದಿದ್ದ ಸದಸ್ಯರೆಲ್ಲಾ ಒಟ್ಟಿಗೆ ಕೆ.ಜೆ.ಪಿ.ಸೇರಿದ್ದರಿಂದ 6ಜನ ಸದಸ್ಯರು ಈಗ ಕೆ.ಜೆ.ಪಿಯಲ್ಲಿದ್ದಾರೆ,  ಬಿಜೆಪಿಯಿಂದ  6ಸದಸ್ಯರು ಗೆದ್ದಿದ್ದರು. 
ಕೆಜೆಪಿ ಮತ್ತು ಬಿಜೆಪಿ ಪಕ್ಷಗಳ ಒಪ್ಪಂದದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದೆ, ಒಪ್ಪಂದಂತೆ ಬಿ.ಜೆ.ಪಿ. ಉಪಾಧ್ಯಕ್ಷ ಪದವಿಯನ್ನು ಸ್ವೀಕರಿಸಿ, ಕೆ.ಜೆ.ಪಿ.ಗೆ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಟ್ಟಿದೆ. 
ನೂತನ ತಾ.ಪಂ.ಅಧ್ಯಕ್ಷ ಶಶಿಧರ್ ಆಯ್ಕೆಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಆಡಳಿತದ ಮೊದಲ ಆದ್ಯತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿದ್ದು,  ತಾಲ್ಲೂಕಿನಲ್ಲಿ ಪಡಿತರ ಚೀಟಿಯ ಸಮಸ್ಯೆಯನ್ನು  ಸರಿಪಡಿಸಲು ಗ್ರಾಮ ಪಂಚಾಯ್ತಿಗಳ ಪಿಡಿಓ, ಕಾರ್ಯದಶರ್ಿಗಳ ಸಭೆ ಕರೆದು ಸಾರ್ವಜನರಿಗೆ ಪಡಿತರ ಚೀಟಿ ಪಡೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ, ಅಲ್ಲದೆ ತಾಲ್ಲೂಕು ಕಛೇರಿಯಲ್ಲಿ ಸಾಮಾನ್ಯ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ದಿನನಿತ್ಯ ಪರದಾಡುತ್ತಿದ್ದಾರೆ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ನಿಂದ ಆಗುತ್ತಿರುವ ತೊಂದರೆಯೂ ಸೇರಿದಂತೆ  ತಾಲೂಕಿನ ಸಮಸ್ಯೆಗಳನ್ನೆಲ್ಲ ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕು ಪಂಚಾಯಿತಿ ಆಡಳಿತ ನಡೆಸುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷ ರಮೇಶ್ಕುಮಾರ್ ಮಾತನಾಡಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರೆಲ್ಲರಿಗೂ ಅಭಿನಂದನೆ ತಿಳಿಸಿದ ಅವರು ನಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತೇವೆ, ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಉತ್ತಮ ಆಡಳಿತ ನಡೆಸುತ್ತೇವೆ ಎಂದರು. 
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ್, ಕೆಂಕೆರೆ ನವೀನ್, ವಸಂತಕುಮಾರ್, ಹೊಸಳ್ಳಿ ಜಯಣ್ಣ ಸೇರಿದಂತೆ ತಾ.ಪಂ.ಸದಸ್ಯರು ಹಾಜರಿದ್ದರು.

Tuesday, June 4, 2013


ಗ್ರಾಮಸ್ಥರು, ಶಿಕ್ಷಕಿಯ ನಡುವೆ ತಲೆದೋರಿದ್ದ ಸಮಸ್ಯೆ ಬಗೆಹರಿಸಿದ ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಜೂ.04 : ತಾಲೂಕಿನ ಸಾಲಕಟ್ಟೆ ಕಾಲೋನಿಯ ಗ್ರಾಮಸ್ಥರಿಗೂ ಹಾಗೂ ಸ್ಥಳೀಯ ಸಕರ್ಾರಿ ಶಾಲೆಯ ಮುಖ್ಯ ಶಿಕ್ಷಕಿಗೂ ತಲೆದೋರಿದ್ದ ಭಿನ್ನಾಭಿಪ್ರಾಯದಿಂದ ಶಾಲೆಗೆ ಬೀಗ ಹಾಕಿದ್ದು ಬಿ.ಇ.ಓ. ಸಾ.ಚಿ.ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಶಾಲಾ ಮುಖ್ಯಶಿಕ್ಷಕಿಯು ಶಾಲಾ ಅಭಿವೃದ್ದಿಗಾಗಿ ಬಂದಂತಹ ಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರ ಗಮನಕ್ಕೆ ಬಾರದೆ ಹಣ ಬಳಸಿಕೊಂಡಿದ್ದಾರೆ  ಎಂದು ಆರೋಪಿಸಿ ಸಾಲ್ಕಟ್ಟೆ ಕಾಲೋನಿಯ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಬೀಗ ಹಾಕಿ ಗ್ರಾಮಸ್ಥರು ಧರಣಿ ನಡೆಸಿರುವ ಘಟನೆ ನಡೆದಿತ್ತು.
ಶಾಲೆಗೆ ಬಂದಂತಹ ಶಾಲಾ ಅನುದಾನ, ಶಿಕ್ಷಕರ ಅನುದಾನವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಮುಖ್ಯಶಿಕ್ಷಕಿ ಬಳಸಿಕೊಂಡಿರುವ  ಹಣವನ್ನು ಪೂತರ್ಿ ಕಟ್ಟಬೇಕು ಜೊತೆಗೆ ಶಿಕ್ಷಕಿಯನ್ನು ಬೇರೆ ಕಡೆ ವಗರ್ಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು.
ಈ ಸಂಬಂಧ  ಸಾಲ್ಕಟ್ಟೆ ಶ್ರೀನಿವಾಸ್ ಮಾತನಾಡಿ ಶಾಲೆಯಲ್ಲಿ ಈ ರೀತಿಯ ದುರುಪಯೋಗ ನಡೆದಿರುವ ಬಗ್ಗೆ ಶಿಕ್ಷಕಿಯನ್ನು ಗ್ರಾಮಸ್ಥರು ಕೇಳಿದಾಗ ನನ್ನದು ತಪ್ಪಾಗಿದೆ ಆ ಹಣವನ್ನು ಕಟ್ಟುತ್ತೇನೆಂದು ಗ್ರಾಮಸ್ಥರ ಮುಂದೆ ಒಪ್ಪಿಕೊಂಡಿದ್ದರು, ಇದಾದ ಮೂರು ದಿನಗಳ ನಂತರವೂ ಹಣ ಕಟ್ಟಿರುವುದಿಲ್ಲ ಎಂದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜಯ್ಯ ಮಾತನಾಡಿ ನಾವು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು ನಮ್ಮ ಹಿಂದಿನ ಅವಧಿಯಲ್ಲಿ ಹಣ ದುರುಪಯೋಗವಾಗಿದೆ ಎಂದರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿ.ಇ.ಓ ಸಾ.ಚಿ.ನಾಗೇಶ್ ಘಟನೆ ಕುರಿತಂತೆ ಮಾತನಾಡಿ ಎಷ್ಟು ಹಣ ದುರುಪಯೋಗವಾಗಿದೆ ಅಷ್ಟು ಹಣವನ್ನು ಈಗಲೇ ಶಿಕ್ಷಕಿಯಿಂದ ಕಟ್ಟಿಸಿ, ಶಾಲೆಯನ್ನು ಪ್ರಾರಂಭಿಸುತ್ತೇವೆ,  ಗ್ರಾಮಸ್ಥರ ಬೇಡಿಕೆಯಂತೆ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜಿಸಲಾಗುವುದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗರಾಜಯ್ಯ, ಬಸವರಾಜು, ಈಶ್ವರ್, ಶ್ರೀರಂಗಯ್ಯ, ನಾಗೇಶಯ್ಯ, ಚಂದ್ರಯ್ಯ, ಕೃಷ್ಣಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
6ನೇ ವಾಡರ್್ನ ನಾಗರೀಕರಿಂದ ಪುರಸಭಾ ಕಛೇರಿಗೆ ಮುತ್ತಿಗೆ 
ಚಿಕ್ಕನಾಯಕನಹಳ್ಳಿ,ಜೂ.04 : ನಮಗೆ ಸಮರ್ಪಕವಾಗಿ ನೀರು ಕೊಡಿ, ರಸ್ತೆ ಸರಿಪಡಿಸಿ, ವಿದ್ಯುತ್ ನೀಡಿ ಇಲ್ಲಾವಾದರೆ ಪುರಸಭೆಯಲ್ಲಿರುವ ನಮ್ಮ ವಾಡರ್್ನ್ನು ಮಂಡಲ್ ಪಂಚಾಯಿತಿಗೆ ವಗರ್ಾಯಿಸಿಬಿಡಿ ಎಂದು ಪುರಸಭಾ ಕಛೇರಿಗೆ ಪಟ್ಟಣದ ಕೇದಿಗೆಹಳ್ಳಿ ವಾಡರ್್ಗೆ ಸೇರಿದ ಹೊಸೂರು ಗ್ರಾಮದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ನೀರು ಬೇಕು ನೀರು, ನೀರಿಗಾಗಿ ಈ ಹೋರಾಟ ಎಂಬ ಕೂಗಿನ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ಹೊಸೂರಿನ ನಾಗರೀಕರು ನಮಗೆ ಈಗ ಸಿಗುತ್ತಿರುವ ನೀರು ಸಾಲುತ್ತಿಲ್ಲ, ನಮ್ಮ ವಾಡರ್್ನಲ್ಲಿರುವ ಅಕ್ಕಪಕ್ಕದ ಜನ ನೀರಿಗಾಗಿ ಪ್ರತಿದಿನ ಜಗಳವಾಡುತ್ತಿದ್ದಾರೆ, ನಮ್ಮ ವಾಡರ್್ನ್ನು ಪುರಸಭೆಗೆ ತಗೆದುಕೊಂಡು ಹದಿನೈದು ವರ್ಷವಾದರೂ ಮೂಲಭೂತ ಸೌಕರ್ಯ ಸಿಗುತ್ತಿಲ್ಲ, ಅಲ್ಲಿನ ಕಸದ ಸಮಸ್ಯೆಯನ್ನು ಸ್ವಚ್ಛತೆಗೊಳಿಸಲು ಯಾರೂ ಬರುತ್ತಿಲ್ಲ,  ಎಂದು ದೂರಿದರು.
ಕೇದಿಗೆಹಳ್ಳಿ ವಾಡರ್್ನ ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ನಮ್ಮ ವಾಡರ್್ಗೆ ಪುರಸಭೆ ಯಾವುದೇ ಮೂಲ ಸೌಕರ್ಯ ನೀಡಿಲ್ಲ, ಮೂರು ತಿಂಗಳಿನಿಂದಲೂ ನಮಗೆ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ, ಎಲ್ಲಾ ವಾಡರ್್ನಲ್ಲೂ ಬೋರ್ಕೊರೆಸಿದ್ದಾರೆ ನಮ್ಮ ವಾಡರ್್ನಲ್ಲಿ ಯಾವುದೇ ಬೋರ್ ಕೊರೆಸಿಲ್ಲ, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀಡಿದಂತೆ ಪುರಸಭೆ ಮಾಡುತ್ತಿದ್ದು ಈ ಬಗ್ಗೆ ನಮ್ಮ ವಾಡರ್್ನ ನಾಗರೀಕರು ಆಕ್ರೋಶಿತರಾಗಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಸೇರಿದಂತೆ ಆ ವಾಡರ್ಿನ ನಾಗರೀಕರು ಹಾಜರಿದ್ದರು.
ಸಾಹಿತ್ಯ ಸಮ್ಮೇಳನಕ್ಕೆ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಜೂ.04 :  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕಿನ ಚಿತ್ರಕಲೆ ಮತ್ತು ಶಿಲ್ಪಕಲೆ ವತಿಯಿಂದ ವಿಶೇಷವಾದ ಪ್ರದರ್ಶನವನ್ನು ಅನೇಕ ಕಲಾವಿದರೊಂದಿಗೆ ನಿಮರ್ಾಣ ಮಾಡಿ ಕನ್ನಡ ನೆಲ, ಜಲ, ಸಾಹಿತ್ಯವನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಲು ತೀಮರ್ಾನಿಸಲಾಗಿದೆ ಎಂದು ಕಲಾವಿದ ಸಿದ್ದು ಜಿ.ಕೆರೆ ತಿಳಿಸಿದರು.
ಪಟ್ಟಣದ ಗಂಗು ಆಟ್ಸ್ನ ಕಛೇರಿಯಲ್ಲಿ  ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿತ್ರಕಲಾ ಪ್ರದರ್ಶನ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ಏರ್ಪಡಿಸಿದ್ದು ತುಮಕೂರು ಜಿಲ್ಲೆಯ ಐತಿಹಾಸಿಕ, ಧಾಮರ್ಿಕ, ಶೈಕ್ಷಣಿಕ, ಪ್ರಾಕೃತಿಕ ಹಾಗೂ ರಂಗಭೂಮಿ  ಕಲಾವಿದರಿಂದ ಮತ್ತು ತಾಲ್ಲೂಕು ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ಆಯ್ಕೆ ಮಾಡಿದಂತಹ ಚಿತ್ರಗಳನ್ನು ಜಿಲ್ಲಾ ಸಮ್ಮೇಳನದಲ್ಲಿ ಪ್ರದಶರ್ಿಸಲು ತಯಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿ.ಹೆಚ್.ಗಂಗಾಧರ್ ಮಾತನಾಡಿ ಕುಂಚಾಂಕುರ ಕಲಾ ಸಂಘದಿಂದ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪಧರ್ೆ ಏರ್ಪಡಿಸಿದ್ದು ಚಿತ್ರಕಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಾಗೂ ಕಲೆಯನ್ನೇ ಶಿಕ್ಷಣವನ್ನಾಗಿ ಪಡದು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗಲೆಂದು ಈ ರೀತಿಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ, ಶಿಲ್ಪ ವೈಭವದ ಬಗ್ಗೆ  ಹಾಗೂ ನಶಿಸುತ್ತಿರುವ ಗ್ರಾಮೀಣ ಕುಲ ಕಸುಬು ಹಾಗೂ ಗ್ರಾಮೀಣ ವಿಭಾಗದಲ್ಲಿ ಮಾಧ್ಯಮಗಳ ಪಾತ್ರವನ್ನು ಸ್ಪಧರ್ೆಯಲ್ಲಿ ಇಟ್ಟಿದ್ದು, ಸ್ಪಧರ್ೆಯಲ್ಲಿ ಪ್ರಥಮ ಬಹುಮಾನವಾಗಿ 3ಸಾವಿರ, ದ್ವಿತೀಯ 2ಸಾವಿರ,ತೃತಿಯ 1ಸಾವಿರ ಮತ್ತು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ನಮ್ಮ ಕಲಾ ಚೌಕಟ್ಟಿನಲ್ಲಿ ಕನ್ನಡ ಸಂಘದ ವೇದಿಕೆಯಲ್ಲಿ ದಿನಾಂಕ 5ರಿಂದ ಬೆಳಗ್ಗೆ 10ರಿಂದ 5ರವರಗೆ ಶಿಲ್ಪಕಲಾ ಮತ್ತು ಚಿತ್ರಕಲಾ ಕಾರ್ಯಗಾರ ಮಾಡುತ್ತಿದ್ದು ಆಸಕ್ತ ಎಲ್ಲರೂ ಭಾಗವಹಿಸಬಹುದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸಿ.ಹೆಚ್.ಗಂಗಾಧರ್ 9845007131, ವಿಶ್ವನಾಥ್ 9845279517, ಸಿ.ಎ.ನಿರೂಪ್ರಾವತ್ 9902159412, ಸಿ.ಪಿ.ಗಿರೀಶ್ 9141092238ಗೆ ಸಂಪಕರ್ಿಸಲು ಹಾಗೂ ಕಲಾಸಕ್ತರು ತಮ್ಮ ಜೊತೆ ಕೈಜೋಡಿಸಲು ಕೋರಿದರು.
ಶಿಲ್ಪಿ ವಿಶ್ವನಾಥ್ ಮಾತನಾಡಿ ಸಮ್ಮೇಳನಕ್ಕಾಗಿ ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ ಏರ್ಪಡಿಸಿದ್ದು ಜಕಣಾಚಾರಿರವರು ಮಾಡಿದ ಮಾದರಿ ಶಿಲ್ಪದಂತೆ ಹಾಗೂ ಕನ್ನಡ ತಾಯಿ ಭುವನೇಶ್ವರಿಯ ರಚನೆ ಮಾಡಲು ಇದನ್ನು 15ದಿನಗಳ ಅವಧಿಯಲ್ಲಿ ಮಾಡಲು ತೀಮರ್ಾನಿಸಿದ್ದು ಈ ಕಾರ್ಯಕ್ರಮಕ್ಕೆ ಆಸಕ್ತರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

 ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ
ಚಿಕ್ಕನಾಯಕನಹಳ್ಳಿ,ಜೂ.04 : ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ ಹಾಗೂ ಸಿ.ಬಿ.ಸುರೇಶ್ಬಾಬುರವರಿಗೆ ಅಭಿನಂದನಾ ಸಮಾರಂಭವನ್ನು ಇದೇ 9ರ ಭಾನುವಾರ ಏರ್ಪಡಿಸಲಾಗಿದೆ ಎಂದು ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿ ತಿಳಿಸಿದರು.
ಪಟ್ಟಣ ಕಲ್ಲತ್ತಿಗಿರಿ ವೀರಭದ್ರಶ್ವೇರ ದೇವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜು.9ರ  ಬೆಳಗ್ಗೆ 7ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಬೆಲಗೂರು ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯದ ಬಿಂದುಮಾದವಶರ್ಮ ನೆರವೇರಿಸಲಿದ್ದಾರೆ. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಲಿಂಗಶಿವಾಚಾರ್ಯಸ್ವಾಮಿ, ಕರಿಸಿದ್ದೇಶ್ವರಸ್ವಾಮಿ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮಿ, ಷಡಕ್ಷರಮಠದ ರುದ್ರಮುನಿಸ್ವಾಮಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರಶಿವಾಚಾರ್ಯಸ್ವಾಮಿ, ಬೀರೂರುಮಠದ ರುದ್ರಮುನಿಶಿವಾಚಾರ್ಯಸ್ವಾಮಿ ಆಗಮಿಸಲಿದ್ದು ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಈ ಸಂದರ್ಭದಲ್ಲಿ ನೂತನ ಶಾಸಕ ಸಿ.ಬಿ.ಸುರೇಶ್ಬಾಬು, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಬೆಂಗಳೂರು ಶಾಸಕ ಪ್ರಿಯಾಕೃಷ್ಣ ಉಪಸ್ಥಿತರಿರುವರು.  

Monday, June 3, 2013


ಗಣಿ ಧೂಳಿನಿಂದ ಉಂಟಾದ ಬೆಳೆ ನಷ್ಠಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ 
 
ಚಿಕ್ಕನಾಯಕನಹಳ್ಳಿ,ಜೂ.03 : ಗಣಿ ಧೂಳಿನಿಂದ ಈಿ ಭಾಗದ ಜಮೀನುಗಳಲ್ಲಿನ ಬೆಳೆನಾಶದಿಂದ ಉಂಟಾದ ನಷ್ಠವನ್ನು ನೀಡುವಂತೆ ಹಾಗೂ ಗಣಿಭಾಗದ  ಸ್ಥಳೀಯ ನಿರುದ್ಯೋಗಿ ಯುವಕರಿಗೆ  ಉದ್ಯೋಗಕ್ಕಾಗಿ ಒತ್ತಾಯಿಸಿ ಸೊಂಡೇನಹಳ್ಳಿ ಹಾಗೂ ಸುತ್ತಮುತ್ತಲಿನ ನೂರಾರು ರೈತರು ಸೋಮವಾರ ಪ್ರತಿಭಟನೆ ಹಾಗೂ ಧರಣಿ ನಡೆಸಿದರು.
ತಾಲ್ಲೂಕಿನ ಗಣಿ ಭಾಗದ ಪ್ರದೇಶದ ಸುತ್ತಲೂ ಈಗಾಗಲೇ ಗಣಿಧೂಳಿನಿಂದ ತೆಂಗು, ಅಡಿಕೆ, ಬಾಳೆ, ರಾಗಿ ಬೆಳೆನಾಶದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಗಣಿಗಳಲ್ಲಿ ಕಬ್ಬಿಣದ ಅದಿರು ತೆಗೆಯಲು ಸ್ಪೋಟಕಗಳನ್ನು ಬಳಸಿದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ, ತುಂಬಾ ತೊಂದರೆಯಾಗಿದೆ, ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಗಣಿಗಾರಿಕೆಯಲ್ಲಿ ಟಾಸ್ಕ್ಪೋಸರ್್ ರಚಿಸಿದ್ದು ಇದರ ನಡವಳಿಕೆಯನ್ನು ಅಧಿಕಾರಿಗಳು ಇದುವರೆಗೂ ಜಾರಿಗೆ ತಂದಿಲ್ಲ, ಮೈನ್ಸ್ಲಾರಿಗಳು ಗ್ರಾಮದ ಒಳಗಡೆ ಹೋಗುವುದರಿಂದ ಗ್ರಾಮಗಳ ಮನೆಗಳಲ್ಲಿ ಧೂಳಿನಿಂದ ಆವೃತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು ಇದರಿಂದ ಉಬ್ಬಸದಂತಹ ಕಾಯಿಲೆಗಳು ಹರಡುತ್ತಿವೆ. ಈಗಾಗಲೇ ಗಣಿಗಾರಿಕೆ ಭಾಗದಲ್ಲಿ ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಕಾಂಕ್ರಿಟ್ರಸ್ತೆ ನಿಮರ್ಿಸಲು ಹಣ ಬಿಡುಗಡೆಯಾಗಿದ್ದರೂ ಇದುವರೆಗೂ ಸಮರ್ಪಕವಾದ ಅಭಿವೃದ್ದಿ ಕಾಮಗಾರಿಗಳು ನಡೆದಿಲ್ಲ.
ಲಾರಿಗಳಲ್ಲಿ ಕಬ್ಬಿಣದ ಅಧಿರನ್ನು ಸಾಗಿಸುವಾಗ ರಸ್ತೆ, ಗುಂಡಿಗಳು ಬಿದ್ದಿದ್ದು, ಲಾರಿಗಳು ಚಲಿಸುವಾಗ ಹೆಚ್ಚನ ಧೂಳು ಆವೃತವಾಗುವುದನ್ನು ತಡೆಗಟ್ಟಲು ನೀರನ್ನು ಸಿಂಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ. ಮೈನ್ಸ್ ಮಾಲೀಕರು ಮಧ್ಯವತರ್ಿಗಳಿಗೆ ಪ್ರತಿ ಲಾರಿಗೆ 350ರೂ ಹಣ ನೀಡುತ್ತಾರೆ ಎಂದು ದೂರಿದರಲ್ಲದೆ ಗಣಿ ವಿಷಯದ ಬಗ್ಗೆ ಚಚರ್ಿಸಿದರೆ ಮೈನ್ಸ್ ಮಾಲೀಕರು ಸುಳ್ಳು ಮೊಕ್ಕದ್ದಮೆ ದಾಖಲಿಸುತ್ತೇವೆಂದು ರೈತರಿಗೆ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದಾಗಿ, ಮೈನ್ಸ್ ಮಾಲೀಕರನ್ನು ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಹಾಗೂ ಪರಿಸರ ಇಲಾಖಾ ಅಧಿಕಾರಿಗಳನ್ನು ಕರೆಸಿ ಚಚರ್ಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಗ್ರಾ.ಪಂ.ಸದಸ್ಯ ತಮ್ಮೇಗೌಡ ಮಾತನಾಡಿ ಸುಪ್ರಿಂಕೋಟ್ ಆದೇಶಿಸಿದಂತೆ ಸ್ಥಳೀಯರಿಗೆ ಉದ್ಯೋಗ ಹಾಗೂ ನಾಸರ್ಿಹಳ್ಳಿಯಲ್ಲಿ ಭಾಗದಲ್ಲಿ ಸಿಮೆಂಟ್ ರಸ್ತೆ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ  ಯಾವುದೇ ಕಾನೂನು ಜಾರಿಗೆ ಬಂದಿಲ್ಲ, ಸ್ಥಳೀಯವಾಗಿ ಸಿಸಿರೋಡ್ ಆಗಬೇಕು, ಈ ಭಾಗದಲ್ಲಿರುವ ಜಮೀನು ಇರುವವರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
ಗುಬ್ಬಿ ತಾಲ್ಲೂಕಿನ ಸಾಮಾಜಿಕ ಪರಿವರ್ತನ ಸಂಸ್ಥೆಯ ನಾಗರತ್ನಮ್ಮ ಮಾತನಾಡಿ  ತಾಲ್ಲೂಕಿನಲ್ಲಿ ಮೈನ್ಸ್ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದಿಸಿಲ್ಲ, ಮೈನ್ಸ್ನಿಂದ ಅಂತಃರ್ಜಲ ಕುಸಿಯುತ್ತಿದೆ, ಜನಸಾಮಾನ್ಯರಿಗೆ ಇದರಿಂದ ಬಹಳ ಸಮಸ್ಯೆ ಉಂಟಾಗುತ್ತಿದ್ದು ಯಾವುದೇ ರೀತಿಯ ಅನುಕೂಲವಾಗುತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗುಬ್ಬಿ ತಾಲ್ಲೂಕಿನ ನಂಜುಂಡಪ್ಪ, ವಸಂತಕುಮಾರ್, ಯೋಗಿ, ಪ್ರಕಾಶ್, ಹನುಮಂತಯ್ಯ, ಲಕ್ಷಯ್ಯ ಗೋಡೆಕೆರೆ ಶಿವಲಿಂಗಮೂತರ್ಿ, ಸೊಂಡೇನಹಳ್ಳಿ ಪಾಲಣ್ಣ, ಧರ್ಮಪಾಲ್, ಬಸವರಾಜು, ನರಸಿಂಹಮೂತರ್ಿ, ಚಿದಾನಂದಮೂತರ್ಿ, ಚಿಕ್ಕಣ್ಣ, ಕುಮಾರ್, ಕೆಂಪಯ್ಯ, ತಿಮ್ಮೇಗೌಡ, ಎಸ್.ಎನ್.ಬಸವರಾಜು, ನರಸಿಂಹಯ್ಯ, ತಮ್ಮಯ್ಯ ಸೇರಿದಂತೆ ಗಣಿ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಾ.ಎಸ್.ಜಿ.ಪರಮೇಶ್ವರಪ್ಪ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ,ಜು.3: ನೂತನವಾಗಿ ತಾಲೂಕು ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಅಧ್ಯಕ್ಷರಾಗಿ ನೀರಾವರಿ ಹೋರಾಟಗಾರ, ಖ್ಯಾತ ವೈದ್ಯ ಡಾ.ಎಸ್.ಜಿ.ಪರಮೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ವಕೀಲ ಜಿ.ಶ್ರೀನಿವಾಸಮೂತರ್ಿ, ಕಾರ್ಯದಶರ್ಿಯಾಗಿ ಬಿ.ಜಿ.ರಾಜಣ್ಣ, ಉಪಾಧ್ಯಕ್ಷರಾಗಿ ಎಚ್.ಬಿ.ಪ್ರಕಾಶ್, ಕುಮಾರಸ್ವಾಮಿ(ನಿಶಾನಿ), ಸತ್ಯನಾರಾಯಣ ದಬ್ಬಗುಂಟೆ, ಸಹ ಕಾರ್ಯದಶರ್ಿಯಾಗಿ ವಕೀಲ ಬಿ.ಕೆ.ಸದಶಿವಾ, ಖಜಾಂಚಿಯಾಗಿ ಪುರಸಭಾ ಸದಸ್ಯ ರಾಜಶೇಖರ್, ಸಂಘಟನಾ ಕಾರ್ಯದಶರ್ಿಗಳಾಗಿ  ಎಸ್.ಸತೀಶ್ ಸಿದ್ದನಕಟ್ಟೆ, ಬಿ.ಎನ್.ಲೋಕೇಶ್, ಕಾಂತರಾಜ್ ಬೋರವೆಲ್ ಆಯ್ಕೆಯಾಗಿದ್ದಾರೆ.
ಸಂಘದ ನಿದರ್ೇಶಕರುಗಳಾಗಿ ರಾಮಚಂದ್ರಣ್ಣ, ರಂಗನಾಥಪ್ಪ, ಎಂ.ರಾಮಯ್ಯ, ಬಿ.ಹೆಚ್.ದಯಾನಂದ್, ಗಂಗಾಧರಯ್ಯ, ಕೆ.ನಾರಾಯಣ ಕಂಟಲಗೆರೆ, ನಿರಂಜನಮೂತರ್ಿ.ಎಸ್.ಕೆ, ಕೃಷ್ಣೆಗೌಡ, ತಿಮ್ಮರಾಯಪ್ಪ, ಗೋಪಿನಾಥ, ರಂಗಪ್ಪ, ರಮೇಶ್ ಹಾಗೂ ಸಂಚಾಲಕರಾಗಿ ಸತೀಶ್, ರಮೇಶ್ ಬೆನಕನಕಟ್ಟೆ ಆಯ್ಕೆಯಾಗಿದ್ದಾರೆ. 


ನಿಷೇಧ ನಡುವೆಯೂ ಕಾಳಸಂತೆಯಲ್ಲಿ ಮಾರಟವಾಗುತ್ತಿರುವ ಗುಟ್ಕಾ
ಚಿಕ್ಕನಾಯಕನಹಳ್ಳಿ,ಜೂ.03 : ಸುಪ್ರೀಂಕೋಟರ್್ ಗುಟ್ಕಾ ಮೇಲೆ ನಿಷೇದ ಜಾರಿ ಮಾಡಿದರೂ ರಾಜ್ಯ ಸಕರ್ಾರ ಗುಟ್ಕಾ ನಿಷೇದ ಅನುಷ್ಠಾನಕ್ಕೆ ತಂದ ಪರಿಣಾಮ ಈಗಾಗಲೇ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದ ಅಂಗಡಿ ಮಾಲೀಕರು ಇದರ ಲಾಭ ಪಡೆಯಲು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.
 2ರೂಗೆ ಮಾರಬೇಕಾದ ಗುಟ್ಕಾವನ್ನು 10ರೂಗೆ, 6ರೂಗೆ ಇದ್ದ ಬೆಲೆ 15ರೂಗೆ ಮಾರಾಟವಾಗುತ್ತಿದ್ದು ಗುಟ್ಕಾ ಗ್ರಾಹಕರು ದುಬಾರಿ ಬೆಲೆಯ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. 

Saturday, June 1, 2013



ವಿದ್ಯುತ್ ಅವಗಡ ಒಂದು ಸಾವು: ಶಾಸಕರ ಸಾಂತ್ವಾನ
ಚಿಕ್ಕನಾಯಕನಹಳ್ಳಿ,ಜೂ.01 : ಟಿ.ವಿ.ಗೆ ಕೇಬಲ್ವೈರನ್ನು ಅಳವಡಿಸುವ ಸಮಯದಲ್ಲಿ ಸಂಭವಸಿದ ವಿದ್ಯುತ್ಶಾಖ್ನಿಂದ ವ್ಯಕ್ತಿಯೊಬ್ಬ ಅಸುನೀಗಿರುವ ಘಟನೆ ತಾಲ್ಲೂಕಿನ ಕ್ಯಾತನಾಯಕನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ಮಾಳಿಗೆಹಳ್ಳಿ ಸಮೀಪದಲ್ಲಿರುವ ಕ್ಯಾತನಾಯಕನಹಳ್ಳಿಯ ಉಮೇಶ್(28) ಎಂಬ ವ್ಯಕ್ತಿ ಈ ಘಟನೆಯಿಂದ ಸಾವನ್ನಪ್ಪಿರುವ ದುದರ್ೈವಿಯಾಗಿದ್ದು ಉಮೇಶ್ ತಾಯಿ, ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆ ವಿವರ : ಶುಕ್ರವಾರ ಸಂಜೆ ಮಳೆಗಾಳಿ ಬೀಸುತ್ತಿದ್ದರಿಂದ ಕೇಬಲ್ವೈರನ್ನು ಟಿವಿಯಿಂದ ತೆಗೆದು ನಂತರ ಮಳೆ ನಿಂತಮೇಲೆ, ಕೇಬಲ್ವೈರನ್ನು ಟಿವಿಗೆ ಅಳವಡಿಸಲು ಹೋಗಿದ್ದಾನೆ, ಈ ಸಮಯದಲ್ಲಿ ವಿದ್ಯುತ್ವೈರ್ ಜೊತೆ ಕೇಬಲ್ವೈರ್ ಸುತ್ತಿಕೊಂಡಿದ್ದರಿಂದ ವಿದ್ಯುತ್ನ ಪವರ್ ಕೇಬಲ್ಗೂ ತಾಕಿ ಉಮೇಶ್ ಬಲಿಯಾಗಿದ್ದಾನೆ.
ಗ್ರಾಮಸ್ಥರ ಆಕ್ರೋಶ : ಗ್ರಾಮದಲ್ಲಿ ವಿದ್ಯುತ್ವೈರ್ನ ಜೊತೆ ಕೇಬಲ್ವೈರನ್ನು ಕೇಬಲ್ ಮಾಲೀಕರು ಅಳವಡಿಸಿದ್ದಾರೆ, ಇದರಿಂದ ಕೇಬಲ್ಗೆ ವಿದ್ಯುತ್ ಹರಿಯುತ್ತಿದೆ, ಇಗ ಸಂಭವಿಸಿರುವ ಘಟನೆ ರೀತಿ ಗ್ರಾಮದಲ್ಲಿ ಹಲವು ಬಾರಿ ಆಗಿದೆ, ಆದರೆ ಈ ಘಟನೆ ಸಾವಿನವರೆಗೆ ಕರೆದೊಯ್ಯುತ್ತದೆ ಎಂದುಕೊಂಡಿರಲಿಲ್ಲ, ಕೇಬಲ್ವೈರನ್ನು ವಿದ್ಯುತ್ ವೈರ್ ಜೊತೆ ಹೊಂದಿಕೊಂಡಿರುವುದನ್ನು ತೆಗೆದು ಬೇರೆ ಮಾರ್ಗದ ಮೂಲಕ ವೈರ್ ಎಳೆಯಿರಿ ಎಂದು ಕೇಬಲ್ ಮಾಲೀಕರಿಗೆ ತಿಳಿಸಿದರೂ ಅವರು ನಮ್ಮ ಮಾತಿಗೆ ಸ್ಪಂದಿಸುತ್ತಲೇ ಇಲ್ಲ ಇಗ ಸಂಭವಿಸಿರುವ ಘಟನೆಗೆ ಕೇಬಲ್ ಮಾಲೀಕರೆ ಹೊಣೆ ಎಂದು ಗ್ರಾಮಸ್ಥರು ದೂರಿದರು.
ಶಾಸಕರ ಸಾಂತ್ವಾನ : ಘಟನೆ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತದೊಂದಿಗೆ ಆಗಮಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಘಟನೆ ಕುರಿತು ತಾಲ್ಲೂಕಿನಾದ್ಯಂತ ವಿದ್ಯುತ್ವೈರ್ಗೆ ಅಳವಡಿಸಿರುವ ಕೇಬಲ್ವೈರನ್ನು ತೆಗೆಸಲು ಬೆಸ್ಕಾಂ ಎಇಇ ರಾಜಶೇಖರ್ರವರಿಗೆ ಸೂಚಿಸಿದರು. ಮೃತಪಟ್ಟ ಕುಟುಂಬದವರಿಗೆ ಸಾಂತ್ವಾನ ನೀಡಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕಾಗಿ ಹಣಸಹಾಯ ನೀಡಿದರು. 
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಾಮಾಕ್ಷಮ್ಮ, ಸಿ.ಪಿ.ಐ ಕೆ.ಪ್ರಭಾಕರ್ ಹಾಗೂ ಬೆಸ್ಕಾಂ ಇಲಾಖೆಯ ಎಇಇ ರಾಜಶೇಖರ್ ಆಗಮಿಸಿದ್ದರು.
ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ವಿರೋಧ
ಚಿಕ್ಕನಾಯಕನಹಳ್ಳಿ,ಜೂ.1: ಜಿಲ್ಲೆಯ ಹಾಗೂ ತಾಲೂಕಿನ ಮೌಲ್ಯಯುತ ಕೊಡುಗೆಗಳನ್ನು ಕಡೆಗಣಿಸಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನಕ್ಕೆ ಪ್ರೊ.ಸಿ.ಎಚ್.ಮರಿದೇವರುರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವ ಮೌಲ್ಯಕ್ಕೆ ವಿರೋಧವಾಗಿದೆ ಎಂದು ಪ್ರಗತಿಪರ ಚಿಂತಕ ಸಿ.ಆರ್.ನಾಗಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ತಾಲೂಕು ಬಯಲು ಸೀಮೆಯ ಬಿರು ಬಿಸಿಲಿಗೆ ತುತ್ತಾಗಿದ್ದರೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ನೆಲದಲ್ಲಿ ಹತ್ತು ಹಲವು ಸಾಹಿತಿಗಳು, ಚಿಂತಕರು ಹಾಘೂ ರಂಗಕಮರ್ಿಗಳು ಇದ್ದರೂ ಅವರನ್ನು ಕಡೆಗಣಿಸಿ ಪ್ರೊ.ಮರಿದೇವರು ಅವರನ್ನು ಆಯ್ಕೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಪ್ರಗತಿಪರ ಚಿಂತಕರು, ಸಾಹಿತಿಗಳು ಮತ್ತು ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತರುಗಳಾದ ಶಿವನಂಜಯ್ಯ ಬಾಳೆಕಾಯಿ, ಕೃಷ್ಣಮೂತರ್ಿ ಬಿಳಿಗೆರೆ, ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಡಾ.ನವೀನ್ ಹಳೆಮನೆ, ಡಾ.ಸಿ.ಜಿ.ಮಲ್ಲಿಕಾರ್ಜನಯ್ಯ, ಎಸ್.ಗಂಗಾಧರಯ್ಯ, ಅಣೆಕಟ್ಟೆ ವಿಶ್ವನಾಥ್, ಎನ್.ಇಂದಿರಮ್ಮ, ಡಾ.ರಘಪತಿ, ಸಂಚಲನದ ನಾಸಿರ್ ಹುಸೇನ್, ಸಿ.ಪಿ.ಗಿರೀಶ್, ಸಿ.ಎಸ್.ಸುಬ್ರಹ್ಮಣ್ಯ, ಇಬ್ರಾಹಿಂ, ಕೆ.ಪ್ರಹ್ಲಾದ್, ಕಂಟಲಗೆರೆ ಗುರುಪ್ರಸಾದ್ ಸೇರಿದಂತೆ ಹಲವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.