Saturday, October 30, 2010


ತಾಲೂಕು ಆಡಳಿತದ ವತಿಯಿಂದ ನ.1 ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ.30
: 54ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ನವಂಬರ್ 1ರ ಬೆಳಗ್ಗೆ 9ಕ್ಕೆ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ತಹಶೀಲ್ದಾರ್ ಟಿ.ಸಿ.ಕಾಂತರಾಜು ಧ್ವಜಾರೋಹಣ ನೆರವೇರಿಸಲಿದ್ದಾರೆ.ಸಮಾರಂಭದಲ್ಲಿ ಕಲಾವಿದ ಸಿ.ಎನ್.ಕೃಷ್ಣಾಚಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಗೋಕಾಕ್ ಚಳುವಳಿ ಹೋರಾಟಗಾರ ಸಿ.ಎಸ್.ನಾಗರಾಜುರವರಿಗೆ ಸನ್ಮಾನಿಸಲಾಗುವುದು.. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಜಿ.ರಾಜಣ್ಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಬಿ.ಲಕ್ಕಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿರುವರು.
ಕನ್ನಡ ಸಂಘದ ವತಿಯಿಂದ

ರಾಜ್ಯೋತ್ಸವಚಿಕ್ಕನಾಯಕನಹಳ್ಳಿ,ಅ.30: 54ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.1ರಿಂದ ಮೂರು ದಿನಗಳ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ತಿಳಿಸಿದ್ದಾರೆ.ಅಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಜರಾಜೇಶ್ವರಿ ಮೆರವಣಿಗೆಯನ್ನು ಏರ್ಪಡಿಸಲಾಗಿದೆ ಜೊತಗೆ ಕೃಷ್ಣದೇವರಾಯ, ಟಿಪ್ಪು ಸುಲ್ತಾನ್ ಕಿತ್ತೂರ ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಮದಕರಿ ನಾಯಕ, ಕುವೆಂಪು, ಮಾಸ್ತಿವೆಂಕಟೇಶ ಅಯ್ಯಂಗಾರ್, ತಾ.ರಾ.ಸು, ದ.ರಾ.ಬೇಂದ್ರೆ, ತೀ.ನಂ.ಶ್ರೀ, ಸಿ.ಬಿ.ಮಲ್ಲಪ್ಪ, ಡಾ.ರಾಜ್ಕುಮಾರ್ ಹಾಗೂ ಪೌರಾಣಿಕ ಕಥೆಗಳನ್ನು ಪ್ರತಿಬಿಂಬಿಸುವ ಸ್ಥಬ್ದ ಚಿತ್ರಗಳಿರುತ್ತವೆ.ನ.1ರ ಮಧ್ಯಾಹ್ನ ಮಧಾಹ್ನ 3ಗಂಟೆಗೆ ಕನ್ನಡ ಸಂಘದ ವೇದಿಕೆಯಲ್ಲಿ ರಂಗ ಗೀತೆಗಳ ಸ್ಪಧರ್ೆ, 2ರ ಮಂಗಳವಾರ ಸಂಜೆ 6.30ಕ್ಕೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು 3ರ ಬುಧವಾರ 'ಆಷಾಡದಲ್ಲಿ ಅಳಿಯ' ಎಂಬ ನಗೆ ನಾಟಕವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ನ ಮೂಲಭೂತ ಸೌಕರ್ಯಕ್ಕಾಗಿ ಪ್ರತಿಭತನೆಚಿಕ್ಕನಾಯಕನಹಲ್ಲಿ,ಅ.30:

ಸಕರ್ಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ವಿದ್ಯಾಥರ್ಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಮುಖ ಮಾಡಿರುವ ಪರಿಣಾ ಶಿಕ್ಷಣದ ವ್ಯಾಪಾರೀಕರಣ ನಡೆಯುತ್ತಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲವೆಂದು ತಾಲೂಕು ಪ್ರಮುಖ್ ಚೇತನ್ಪ್ರಸಾದ್ ಕಿಡಿಕಾರಿದರು.ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ, ಎ.ಬಿ.ವಿ.ಪಿ. ಪ್ರತಿಭಟನಾ ಮೆರವಣಿಗೆಯಲ್ಲಿ ತಾಲೂಕ್ ಕಛೇರಿಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ 4ವರ್ಷಗಳ ಹಿಂದೆ ಬಿ.ಕಾಂ, ಬಿ.ಎಸ್.ಡಬ್ಲೂ ಮತ್ತು ಬಿ.ಬಿ.ಎಂ ಕೋಸರ್್ಗಳು ಆರಂಭಗೊಂಡಿದ್ದು, ದಿನದಿಂದ ದಿನಕ್ಕೆ ವಿದ್ಯಾಥರ್ಿಗಳು ಹೆಚ್ಚಾಗುತ್ತಿದೆ. ಈಗ 500ಕ್ಕೂ ಹೆಚ್ಚು ವಿದ್ಯಾಥರ್ಿಗಳನ್ನು ಹೊಂದಿದ್ದು ಈ ವಿದ್ಯಾಥರ್ಿಗಳ ಸಂಖ್ಯೆಗೆ ಅಗತ್ಯವಿರುವಷ್ಟು ಕೊಠಡಿಗಳಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲದೆ ವಿದ್ಯಾಥರ್ಿಗಳು ಪರದಾಡುವಂತಾಗುತ್ತಿದೆ. ಖಾಯಂ ಉಪನ್ಯಾಸಕ ಕೊರತೆ, ಕ್ರೀಡೆಗೆ ತರಬೇತಿ ನೀಡಲು ದೈಹಿಕ ಶಿಕ್ಷಕರು ಇಲ್ಲದಿರುವುದು ಮತ್ತು ಕಾಲೇಜಿನಲ್ಲಿ 12ಸಾವಿರ ಪುಸ್ತಕಗಳಿದ್ದರೂ ಗ್ರಂಥಪಾಲಕರಿಲ್ಲದೆ ಪುಸ್ತಕಗಳು ವಿದ್ಯಾಥರ್ಿಗಳಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ಸ್ಮಧರ್ಾತ್ಮಕ ಯುಗದಲ್ಲಿ ಬೇಕಾಗಿರುವ ಕಂಪ್ಯೂಟರ್ ಶಿಕ್ಷಣ ಮತ್ತು ಗ್ರೂಪ್ ಡಿ ನೌಕರರಿಲ್ಲದೆ ಸ್ವಚ್ಚತೆಯಲ್ಲೂ ವ್ಯತ್ಯಾಸವಾಗಿದೆ. ಗ್ರಾಮೀಣ ಭಾಗದಿಂದ ಸೈಕಲ್ನಲ್ಲಿ ಬರುವ ವಿದ್ಯಾಥರ್ಿಗಳಿಗೆ ಸೈಕಲ್ ಸ್ಟ್ಯಾಂಡ್ ಇಲ್ಲದಿರುವುದರಿಂದ ವಿದ್ಯಾಥರ್ಿಗಳು ಉಪನ್ಯಾಸದ ಕಡೆ ಗಮನ ನೀಡದೆ ತಮ್ಮ ಸೈಕಲ್ಗಳ ಕಡೆ ಗಮನ ಹರಿಸಬೇಕಾಗುತ್ತದೆ ಎಂದು ವಿದ್ಯಾಥರ್ಿಗಳು ದೂರಿದ್ದಾರೆ. ಕಾಲೇಜಿನ ಆವರಣಕ್ಕೆ ಅಗತ್ಯವಿರುವ ಕಾಂಪೌಂಡ್ ಇಲ್ಲದೆ ಕಾಲೇಜಿನ ಕಟ್ಟಡದಲ್ಲಿ ರಾತ್ರಿ ಸಮಯದಲ್ಲಿ ಆಗುಂತಕರು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಕಾಲೇಜಿನ ವಿದ್ಯಾಥರ್ಿಗಳು ತಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಚೇತನ್ ಹೇಳಿದರು.ಅಭಾವಿಪ ಹಿರಿಯ ಮುಖಂಡ ರಾಕೇಶ್ ಮಾತನಾಡಿ ಸಕರ್ಾರ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಕ್ಕೆ ಹಣವನ್ನು ಹಂಚಿಕೆ ಮಾಡಿದ ನಂತರ ಉಳಿದ ಅಲ್ಪ ಮೊತ್ತವನ್ನು ಮಾತ್ರ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡುತ್ತಿದ್ದು ಇದರಿಂದ ಶಿಕ್ಷಣದ ಅಭಿವೃದ್ದಿ ಕೆಲಸಗಳಾಗದೆ ಕುಂಠಿತಗೊಳ್ಳುತ್ತಿವೆ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಅಭಾವಿಪ ನಗರ ಕಾರ್ಯದಶರ್ಿ ಮನೋಹರ್ ಅಣೆಕಟ್ಟೆ, ಸಹ ಕಾರ್ಯದಶರ್ಿ ದಿಲೀಪ್, ಸದಸ್ಯರಾದ ವಿಜಯ್ಕುಮಾರ್, ಗುರುಚೇತನ್, ವರದರಾಜು, ಮಂಜುನಾಥ್, ಆನಂದ್ ಉಪಸ್ಥಿತರಿದ್ದರು.
ಪುರಸಭಾ ಆವರಣದಲ್ಲಿದ್ದ ಶ್ರೀಗಂಧ ,

ಅ.30: ಪುರಸಭಾ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ದುಷ್ಕಮರ್ಿಗಳು ಕದ್ದು ಕೊಯ್ದಿದ್ದು, ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಕಳೆದ ಹತ್ತುವರ್ಷಗಳಿಂದ ಪುರಸಭಾ ಆವರಣದಲ್ಲಿದ್ದ ಎರಡು ಶ್ರೀಗಂಧದ ಮರಗಳನ್ನು ಬೆಳೆಸಲಾಗಿತ್ತು, ಇದರಲ್ಲಿ ಒಂದು ಮರವನ್ನು ಕಳೆದ ಮಾಚರ್ಿನಲ್ಲಿ ಕೊಯ್ದಿದ್ದು, ಇದನ್ನು ಹೊರ ತರಲಾಗದೆ ಸ್ಥಳದಲ್ಲೇ ಬಿಟ್ಟು ಹೋಗಿದ್ದರು, ಇದನ್ನು ಕಛೇರಿಯ ಸಿಬ್ಬಂದಿ ಆಫೀಸ್ನಲ್ಲೇ ಇಟ್ಟುಕೊಂಡಿದ್ದಾರೆ. ಈಗ ಮತ್ತೆ ಶ್ರೀಗಂಧದ ಮರವನ್ನು ಕುಯ್ದಿದು, ಈ ಸಲ ಮರವನ್ನು ಹೊತ್ತುಹೊಯ್ಯುವಲ್ಲಿ ಸಫಲಕಂಡಿರುವ ದುಷ್ಕಮರ್ಿಗಳು, ಮರವನ್ನು ಮಂಗಮಾಯ ಮಾಡಿದ್ದಾರೆ. ಪುರಸಭಾ ವ್ಯಾಪ್ತಿಗೆ ಸೇರಿದ ಸಂತೆ ಮೈದಾನದಲ್ಲೂ ಮೂರು ಕಾಡು ಮರಗಳು ಕಳೆದ ಎರಡು ತಿಂಗಳ ಹಿಂದೆ ಕಾಣೆಯಾಗಿವೆ, ಪುರಸಭೆಯ ಹಿಂಭಾಗದಲ್ಲಿದ್ದ ಜಲ ಶುದ್ದಿಕರಣ ಘಟಕದಲ್ಲಿದ್ದ ಜೆ.ಸಿ.ಬಿ. ವಾಹನದಲ್ಲಿದ್ದ ಬ್ಯಾಟರಿಯೂ ಕಳ್ಳತನವಾಗಿದೆ. ಸದಾ ಜಾಗೃತರಾಗಿರುವ ಕಛೇರಿಯ ಆವರಣಲ್ಲೇ ಈ ಪ್ರಕರಣ ನಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ