Wednesday, June 15, 2016


ಬಡತನ, ಅಸಮಾನತೆ, ದೌರ್ಜನ್ಯಕ್ಕೆ ಒಳಗಾದ ಮಕ್ಕಳೇ ಬಾಲಕಾಮರ್ಿಕರಾಗುತ್ತಿರುವುದು : ನ್ಯಾಯಾಧೀಶ
ಚಿಕ್ಕನಾಯಕನಹಳ್ಳಿ,ಜೂ.15 : ಬಡತನ, ಅಸಮಾನತೆ, ದೌರ್ಜನ್ಯಕ್ಕೆ ಒಳಗಾದ ಮಕ್ಕಳೇ ಹೆಚ್ಚು ಬಾಲಕಾಮರ್ಿಕರಾಗಿ ಪರಿವರ್ತನೆಯಾಗುತ್ತಿದ್ದಾರೆ ಇದರಿಂದ ಮಕ್ಕಳ ಆರೋಗ್ಯ ಹಾಗೂ ಭವಿಷ್ಯ ದಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ವಿಷಾಧಿಸಿದರು.
ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಬಾಲಕಾಮರ್ಿಕರ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಗಳಲ್ಲಿ ಆಥರ್ಿಕ ಪರಿಸ್ಥಿತಿಯನ್ನು ಸುಧಾರಿಸಲಾಗದೆ ಪೋಷಕರು ತಮ್ಮ ಮಕ್ಕಳನ್ನು ದುಡಿಯಲು ಕಳುಹಿಸುತ್ತಾರೆ,  ಇದರಿಂದ  ಬಾಲಕಾಮರ್ಿಕ ಪದ್ದತಿ ಬೆಳೆದು,  ಮಕ್ಕಳ ಜೀವನದ ಸ್ಥಿತಿ ಏರುಪೇರಾಗಲಿದೆ ಜೊತೆಗೆ  ಶಿಕ್ಷಣ ವಂಚಿತರಾಗಿ ದುಶ್ಚಟಗಳ ದಾಸರಾಗುತ್ತಾರೆ ಇದರಿಂದ ಅವರ ಆರೋಗ್ಯದಲ್ಲಿ ತೊಂದರೆಯಾಗಲಿದೆ, ಮಕ್ಕಳು ಶಾಲೆಗೆ ಹೋಗುವಂತಾದರೆ ಮುಂದೆ ಅವರ ಜೀವನ ಮಟ್ಟವೂ ಸುಧಾರಣೆಯಾಗಲಿದೆ,  ಸಕರ್ಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಆದ್ದರಿಂದ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದರು.
ವಕೀಲ ದಿಲೀಪ್ ಬಾಲ ಕಾಮರ್ಿಕ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿ, ಆಥರ್ಿಕ ಪರಿಸ್ಥಿತಿಯನ್ನು ಸರಿದೂಗಿಸಲು ಮಕ್ಕಳು ಬಾಲ ಕಾಮರ್ಿಕ ಪದ್ದತಿಗೆ ಒಳಗಾಗುತ್ತಿದ್ದಾರೆ, 14ವರ್ಷದ ಒಳಗಿನ ಮಕ್ಕಳು ಕಾಖರ್ಾನೆಗಳು, ಗಾಮರ್ೆಟ್ಸ್ ಅಂಗಡಿಗಳು ಇನ್ನಿತರ ಕಡೆ ಕೆಲಸ ಮಾಡುತ್ತಿದ್ದರೆ, ಈ ರೀತಿಯಲ್ಲಿ ತಮ್ಮ ಅಕ್ಕಪಕ್ಕದಲ್ಲಿ ಮಕ್ಕಳು ಕೆಲಸ ನಿರ್ವಹಿಸುತ್ತಿದ್ದರೆ ಆ ಬಗ್ಗೆ ಹತ್ತಿರದ ಅಂಗನವಾಡಿ ಕಾರ್ಯಕತರ್ೆಯರಿಗಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಾಗಲಿ, ಪೋಲಿಸ್ ಠಾಣೆಗಾಗಲಿ ತಿಳಿಸಬಹುದು ಎಂದರಲ್ಲದೆ ಮಕ್ಕಳು ಜನನ-ಮರಣ ಪತ್ರವನ್ನು ಪಡೆದು ಜೋಪಾನವಾಗಿಟ್ಟುಕೊಳ್ಳಿ ತಮ್ಮ ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿದೆ ಎಂದರು.
ವಕೀಲ ಹೆಚ್.ಟಿ.ಹನುಮಂತರಾಯಪ್ಪ ಮಾತನಾಡಿ, 16ವರ್ಷದ ಒಳಗಿನ ಮಕ್ಕಳು ಅಪರಾಧದಲ್ಲಿ ಬಾಗಿಯಾದರೆ ಅದು ಬಾಲಪರಾಧ ಎನಿಸಿಕೊಳ್ಳುತ್ತದೆ, ಚಿಕ್ಕಪುಟ್ಟ ಗುಂಪು ಕಟ್ಟಿಕೊಂಡು ಕೆಟ್ಟ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಮಕ್ಕಳು ಬಾಲಪರಾಧಿಗಳಾಗುತ್ತಿದ್ದಾರೆ ಈ ಬಗ್ಗೆ ಪೋಷಕರು ಎಚ್ಚರವಹಿಸಿ ತಮ್ಮ ಮಕ್ಕಳ ಭವಿಷ್ಯದ ಕಡೆ ಗಮನ ಹರಿಸಿ ಎಂದರು.
ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯಿನಿ ಟಿ. ಕಮಲಮ್ಮ ಮಾತನಾಡಿ, ಬಡತನದಿಂದ ಮಕ್ಕಳು ಶಿಕ್ಷಣ ವಂಚಿತರಾಗಿ ಬಾಲಕಾಮರ್ಿಕ ಪದ್ದತಿಗೆ ಸಿಲುಕುತ್ತಿದ್ದಾರೆ ಇದರಿಂದ ಮಕ್ಕಳ ಭವಿಷ್ಯವೇ ಹಾಳಾಗುವುದು ಈ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ಜಾಗೃತಿ ನೀಡುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಾಯಕ ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ವಕೀಲರ ಸಂಘದ ಕಾರ್ಯದಶರ್ಿ ಕೆ.ಎಂ.ಷಡಕ್ಷರಿ, ವಕೀಲರುಗಳಾದ ಟಿ.ಆರ್.ರವೀಂದ್ರಕುಮಾರ್, ರತ್ನರಂಜಿನಿ, ತೇಜಸ್ವಿನಿ ಉಪಸ್ಥಿತರಿದ್ದರು.

ಸರಕಳ್ಳತನ 

ಚಿಕ್ಕನಾಯಕನಹಳ್ಳಿ,ಜೂ.15 : ಕಪ್ಪು ವೇಷಧಾರಿಗಳಿಬ್ಬರು ಪಲ್ಸರ್ ಬೈಕ್ನಲ್ಲಿ ಬಂದು ಮಹಿಳೆಯರ ಸರ ಅಪಹರಣ ಮಾಡಿರುವ ಘಟನೆ ತಾಲ್ಲೂಕಿನ ಎರಡು ಕಡೆ ನಡೆದಿದ್ದು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದೆ.
ತಾಲ್ಲೂಕಿನ ಹಂದನಕೆರೆ ಹೋಬಳಿ ಬೊಮ್ಮೇನಹಳ್ಳಿ ಬಳಿ ಬೆಳಗ್ಗೆ 9ರ ಸುಮಾರಿನಲ್ಲಿ ಹೊಲದಲ್ಲಿ ಒಂಟಿಯಾಗಿ ಕೆಲಸ ಮಾಡುತ್ತಿದ್ದ ಗೌರಮ್ಮ ಎಂಬುವವರ ಬಳಿ ವಿಳಾಸ ಕೇಳುವ ನೆಪದಲ್ಲಿ ತೆರಳಿ ಗೌರಮ್ಮನಿಗೆ ಬೆದರಿಸಿ 35ಗ್ರಾಂ ಚಿನ್ನದ ಸರವನ್ನು ಅಪಹರಿಸಿದ್ದಾರೆ. ಬೆಳಗ್ಗೆ 11ರ ಸುಮಾರಿನಲ್ಲಿ ಕುಪ್ಪೂರು-ತಮ್ಮಡಿಹಳ್ಳಿ ಹಳ್ಳದ ಬಳಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲಲಿತಮ್ಮ ಎಂಬುವರನ್ನು ಬೆದರಿಸಿ 40ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ತಿಪಟೂರು ವಲಯದ ಪೋಲಿಸ್ ಉಪಅಧೀಕ್ಷಕರಾದ ರವಿಕುಮಾರ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದ್ದು ಅಪಹರಣ ಸ್ಥಳಗಳಿಗೆ ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ನರಸಿಂಹಮೂತರ್ಿ, ತಿಪಟೂರು ಗ್ರಾಮಾಂತರ ವೃತ್ತ ನಿರೀಕ್ಷಕ ರಮೇಶ್, ಚಿ.ನಾ.ಹಳ್ಳಿ ಸಬ್ಇನ್ಸ್ಪೆಕ್ಟರ್ ವಿಜಯ್ಕುಮಾರ್, ಹುಳಿಯಾರ್ ಸಬ್ಇನ್ಸ್ಪೆಕ್ಟರ್ ಪ್ರವೀಣ್, ಹಂದನಕೆರೆ ಸಬ್ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಈ ಸಂಬಂಧ ಹಂದನಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.