Thursday, May 21, 2015


ಉಚಿತ ಬೇಸಿಗೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು 


ಚಿಕ್ಕನಾಯಕನಹಳ್ಳಿ,ಏ.21 : ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ನಡೆಯುತ್ತಿರುವ ಉಚಿತ ಬೇಸಿಗೆ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ.
ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಡ್ರಾಯಿಂಗ್, ಪೇಪರ್ ಕಟಿಂಗ್, ಪೇಂಟಿಂಗ್, ಸಂಗೀತ, ಭರತನಾಟ್ಯ, ಜೇಡಿಮಣ್ಣಿನಿಂದ ಅಟಿಕೆ ತಯಾರಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬದುಕು ಎನ್.ಜಿ.ಓ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಅಂಗನವಾಡಿ ಶಿಕ್ಷಕಿ ಕವಿತಾ ಮಕ್ಕಳಿಗೆ ಪೇಪರ್ ಕಟ್ಟಿಂಗ್ ಹಾಗೂ ಆಟಿಕೆಗಳನ್ನು ತಯಾರಿಸುವುದು ಹೇಳಿಕೊಡುತ್ತಿದ್ದಾರೆ, ಶಿಕ್ಷಕ ಕುಮಾರ್ ಮಕ್ಕಳಿಗೆ ಯೋಗಾಸನ, ಧ್ಯಾನ, ಡ್ರಾಯಿಂಗ್, ಕಲಿಸುವುದು, ಬಸವರಾಜು ರವರು ಪೇಂಟಿಂಗ್, ಪೇಪರ್ ಕಟ್ಟಿಂಗ್ ಹಾಗೂ ಮಹದೇವಮ್ಮ ನವರು ಸಂಗೀತ, ನೃತ್ಯ ಹಾಡು ಮುಂತಾದ ಕಲೆಗಳನ್ನು ಕಲಿಸುತ್ತಿದ್ದಾರೆ.
ಈ ಶಿಬಿರದಲ್ಲಿ ಮಕ್ಕಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ, ಇದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಹಕಾರಿಯಾಗಿದೆ. 8 ವರ್ಷದಿಂದ 15 ವರ್ಷದ ವರೆಗಿನ ಮಕ್ಕಳ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಪೋಷಕರಿಗೆ ತುಂಬ ಖುಷಿ ಕೊಟ್ಟಿದೆ ಎನ್ನುತ್ತಾರೆ ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳು. 
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರತಿನಿತ್ಯ ಮಧ್ಯಾಹ್ನ ಊಟದ ವ್ಯವಸ್ಥೆ ನೀಡಲಾಗುತ್ತಿದೆ. ಲೇಖನಿ ಸಾಮಗ್ರಿಗಳು ಹಾಗೂ ಶಿಬಿರಕ್ಕೆ ಬೇಕಾಗಿರುವ ಪರಿಕರಗಳನ್ನು ಧಾರವಾಡದ ಬಾಲವಿಕಾಸ ಅಕಾಡೆಮಿ ನೀಡುತ್ತಿದ್ದು ಇದರ ಉಸ್ತುವಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಚಿ.ನಾ.ಹಳ್ಳಿ ಶಾಖೆ ನೋಡಿಕೊಳ್ಳುತ್ತಿದೆ.


ಕಾತ್ರಿಕೆಹಾಳ್-ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತಿಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಶೇ.71.40 ರಷ್ಟು ಫಲಿತಾಂಶ 
ಚಿಕ್ಕನಾಯಕನಹಳ್ಳಿ,ಮೇ.21 : ತಾಲ್ಲೂಕಿನ ಕಾತ್ರಿಕೆಹಾಳ್-ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿಗೆ ದ್ವಿತಿಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಶೇ.71.40 ರಷ್ಟು ಫಲಿತಾಂಶ ದೊರಕಿದೆ.
ಕಾಲೇಜಿನ ವಿದ್ಯಾಥರ್ಿ ಷಡಕ್ಷರಿ 512 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಪ್ರಥಮ ದಜರ್ೆಯಲ್ಲಿ ಎಂಟು ವಿದ್ಯಾಥರ್ಿಗಳು, ದ್ವಿತೀಯ ದಜರ್ೆಯಲ್ಲಿ ಆರು ಮತ್ತು ತೃತೀಯ ದಜರ್ೆಯಲ್ಲಿ ಒಬ್ಬ ವಿದ್ಯಾಥರ್ಿ ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ಎಲ್ಲಾ ವಿದ್ಯಾಥರ್ಿಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಎನ್.ಇಂದಿರಮ್ಮ ಹಾಗೂ ಉಪನ್ಯಾಸಕ ವರ್ಗ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.

Friday, May 15, 2015

ಗ್ರಾಮದ  ರಸ್ತೆ ಸರಿಯಾಗುವವರೆಗೂ  ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ :  ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಮೇ.14 : ಗ್ರಾಮದಲ್ಲಿ ಸಂಚರಿಸಲು ತೊಂದರೆಯಾಗಿರುವ ರಸ್ತೆ ಸರಿಯಾಗುವವರೆಗೂ ಗ್ರಾಮದ ಯಾರೊಬ್ಬರೂ ಕೂಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಮತ ಬಹಿಷ್ಕರಿಸುತ್ತೇವೆ ಎಂದು ತಾಲ್ಲೂಕಿನ ಮಲ್ಲೇನಹಳ್ಳಿತಾಂಡ್ಯದ ಗ್ರಾಮಸ್ಥರು ರಸ್ತೆಗಿಳಿದು ಪ್ರತಿಭಟಿಸಿದರು.
ತಾಲ್ಲೂಕಿನ ಕುಪ್ಪೂರು ಬೇವಿನಹಳ್ಳಿ ಗೇಟ್ನಿಂದ ಸಮೀಪದ ಗೊಲ್ಲರಹಟ್ಟಿ, ಎ.ಕೆ.ಕಾಲೋನಿ, ಕೋಡಿಹಟ್ಟಿ, ಜೋಗಿಹಟ್ಟಿ, ಬಲ್ಲೇನಹಳ್ಳಿ, ಉಪ್ಪಾರಹಳ್ಳಿ ತಾಂಡ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚರಿಸಲು ಬಹಳ ತೊಂದರೆಯಾಗಿದೆ,  ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದರೂ ಏನು ಪ್ರಯೋಜನವಾಗಿಲ್ಲ, ಚುನಾವಣೆ ಸಂದರ್ಭದಲ್ಲಿ ಮಾತ್ರ ಓಟನ್ನು ಕೇಳಿಕೊಂಡು ಬರುವವರು ನಂತರ ನಮ್ಮಗಳ ಸಮಸ್ಯೆಯನ್ನೇ ನೋಡುವುದಿಲ್ಲ ಆದ್ದರಿಂದ ಈ ಬಾರಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ ಎಂದು ಹೇಳಿದ್ದಾರೆ.
ಗ್ರಾಮಸ್ಥ ಸೋಮಶೇಖರ್ ಮಾತನಾಡಿ, ಸುಮಾರು 25 ವರ್ಷಗಳಿಂದಲೂ ಈ ಭಾಗದಲ್ಲಿ ರಸ್ತೆ ಸಂಚಾರದ ಸಮಸ್ಯೆ ಹಾಗೆ ಇದೆ, ಮಳೆ ಬಂದರಂತೂ ಸಂಚರಿಸಲು ಕಷ್ಟಕರವಾಗುತ್ತದೆ, ಶಾಲೆಗೆ ತೆರಳುವ ವಿದ್ಯಾಥರ್ಿಗಳು ಮಳೆ ಬಂದರೆ ಶಾಲೆಗೆ ಹೋಗುವುದಿಲ್ಲ, ಪ್ರತಿನಿತ್ಯ ಕೆಲಸಕ್ಕೆ ತೆಳುವವರು ಪಟ್ಟಣಕ್ಕೆ ತೆರಳಲು ರಸ್ತೆ ಸಂಚಾರ ತೊಂದರೆಯಾಗಿರುವುದರಿಂದ ಈ ಭಾಗದಲ್ಲಿ ರಸ್ತೆ ಸಂಚಾರ ಸರಿಯಾಗುವವರೆಗೂ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದರು.
ಗ್ರಾ.ಪಂ.ಮಾಜಿ ಸದಸ್ಯ ರಘುನಾಥ್ ಮಾತನಾಡಿ, ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯನಾಗಿದ್ದ ಸಂದರ್ಭದಲ್ಲಿ ರಸ್ತೆ ಸರಿಪಡಿಸಲು ಸುಮಾರು 10 ಬಾರಿ ಆಕ್ಷನ್ ಪ್ಲ್ಯಾನ್ ಮಾಡಿದ್ದೆವು ಆದರೆ ಗ್ರಾ.ಪಂ.ಅಧ್ಯಕ್ಷರು, ಪಿಡಿಓರವರು ಪರ್ಸಂಟೇಜ್ ಕೇಳುತ್ತಾರೆ ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಶಾಸಕರು, ಸಂಸದರಿಗೆ ತಿಳಿಸಿದರೂ ಯಾರು ಈ ಬಗ್ಗೆ ಗಮನ ಹರಿಸಿಲ್ಲ ಆದ್ದರಿಂದ ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥೆ ಸುಶೀಲಮ್ಮ ಮಾತನಾಡಿ ಮಲ್ಲೇನಹಳ್ಳಿ ತಾಂಡ್ಯದಲ್ಲಿ ಮಳೆ ಬಂದರೆ ಸಂಚರಿಸಲು ಕಷ್ಟಕರವಾಗುತ್ತದೆ, ಶಾಲಾ ವಿದ್ಯಾಥರ್ಿಗಳಿಗಂತು ರಸ್ತೆ ಸಮಸ್ಯೆಯೇ ದೊಡ್ಡದಾಗಿದೆ, ಬೇವಿನಹಳ್ಳಿಯಿಂದ ನಮ್ಮ ಗ್ರಾಮಕ್ಕೆ ಸಂಚರಿಸಲು ಆಟೋ ಚಾಲಕರನ್ನು ಕೇಳಿದರೆ ನಿಮ್ಮ ಗ್ರಾಮದಲ್ಲಿ ರಸ್ತೆ ಸರಿಯಿಲ್ಲ ರಸ್ತೆ ಸರಿಯಾದ ಮೇಲೆ ಬರುತ್ತೇವೆ ಎಂದು ಹೇಳುತ್ತಾರೆ ಆದ್ದರಿಂದ ಈ ಭಾಗದಲ್ಲಿ ರಸ್ತೆ ಸರಿಯಾಗುವವರೆಗೂ ಚುನಾವಣೆಯಲ್ಲಿ ನಾವು ಮತ ಚಲಾಯಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಮಾನಾಯ್ಕ, ಗೋಪಾಲನಾಯ್ಕ, ಶೈಲಜ, ಬಲರಾಮನಾಯ್ಕ, ಪುರುಷೋತ್ತಮ್, ದಿಲೀಪ್, ಉಮೇಶ್, ಚಂದ್ರು, ಕುಮಾರ್, ದಯಾನಂದ್, ಸಂತೋಷ್ಕುಮಾರ್, ದೇವರಾಜ್ ಹಾಗೂ ಗ್ರಾಮಸ್ಥರು ಹಾಜರಿದ್ದರು.


ತಾಲ್ಲೂಕಿನ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪ್ರೌಡಶಾಲೆಗಳ ಪಲಿತಾಂಶ 
ಚಿಕ್ಕನಾಯಕನಹಳ್ಳಿ,ಏ.13 : ತಾಲ್ಲೂಕಿನ 2014-15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಕರ್ಾರಿ ಪ್ರೌಡಶಾಲೆ, ಅನುದಾನಿತ ಪ್ರೌಡಶಾಲೆ ಹಾಗೂ ಅನುದಾನ ರಹಿತ ಪ್ರೌಡಶಾಲೆಗಳ ಒಟ್ಟು 2665 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು 2235 ವಿದ್ಯಾಥರ್ಿಗಳು ಉತ್ತೀರ್ಣರಾಗಿ ತಾಲ್ಲೂಕಿಗೆ ಶೇ83.86 ರಷ್ಟು ಪಲಿತಾಂಶ ದೊರಕಿದೆ ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಶೇ.4ರಷ್ಟು ಹೆಚ್ಚು ಫಲಿತಾಂಶ ತಾಲ್ಲೂಕಿಗೆ ದೊರೆತಿದ್ದು ತಾಲ್ಲೂಕಿನಲ್ಲಿ 1294 ವಿದ್ಯಾಥರ್ಿಗಳು, 1371 ವಿದ್ಯಾಥರ್ಿನಿಯರು ಪರೀಕ್ಷೆ ಬರೆದಿದ್ದು 1021ವಿದ್ಯಾಥರ್ಿಗಳು, 1214 ವಿದ್ಯಾಥರ್ಿನಿಯರು ತೇರ್ಗಡೆಯಾಗಿದ್ದು ಈ ಬಾರಿಯೂ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದ ವಿದ್ಯಾಥರ್ಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಶೇ.78.90.ರಷ್ಟು ವಿದ್ಯಾಥರ್ಿಗಳು, ಶೇ.88.25.ರಷ್ಟು ವಿದ್ಯಾಥರ್ಿನಿಯರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಒಟ್ಟು ಶೇ.83.86.ರಷ್ಟು ಫಲಿತಾಂಶ ತಾಲ್ಲೂಕಿಗೆ ದೊರಕಿದೆ. ಇದರಲ್ಲಿ 60 ವಿದ್ಯಾಥರ್ಿಗಳು ಅತ್ಯುನ್ನತ, 204 ಪ್ರಥಮ, 396 ದ್ವಿತೀಯ, 636 ತೃತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಖಡವಾರು ಫಲಿತಾಂಶ ಪಡೆದ ಶಾಲೆಗಳು 
ಅನುದಾನಿತ ಶಾಲೆಗಳು:  ಚಿತ್ರಲಿಂಗೇಶ್ವರ ಪ್ರೌಢಶಾಲೆ ಹರೇನಹಳ್ಳಿಗೇಟ್ ಶೇ.100%, ಜಯಭಾರತಿ ಪ.ಪೂ.ಕಾಲೇಜು ಮತಿಘಟ್ಟ ಶೇ.98%, ಬಸವೇಶ್ವರ ಪ್ರೌಢಶಾಲೆ ಅಣೇಕಟ್ಟೆ ಶೇ.96.55, ಟಿ.ಆರ್.ಎಸ್.ಆರ್.ಬಾ. ಪ್ರೌಢಶಾಲೆ ಹುಳಿಯಾರು ಶೇ.96, ಗವಿರಂಗನಾಥ ಪ್ರೌಢಶಾಳೆ ದೊಡ್ಡೆಣ್ಣೆಗೆರೆ ಶೇ.94%, ಜನತಾ.ಪ.ಪೂ.ಕಾಲೇಜು ಶೇ.93.33, ಜಿವಿಪಿ ಬಾಲಿಕಾ ಪ್ರೌಢಶಾಲೆ ಸೀಗೇಬಾಗಿ 93.10, ಶ್ರೀಸ್ವಾಮಿ ವಿವೇಕಾನಂದ ಪ್ರೌಢಶಾಲೆ ಕುಪ್ಪೂರು ಶೇ.92.73, ಕಾಳಿದಾಸ ಪ್ರೌಢಶಾಲೆ ಹಂದನಕೆರೆ ಶೇ.88.10, ದೇವರಾಜೇಅರಸ್ ಪ್ರೌಢಶಾಲೆ ಮಲಗೊಂಡನಹಳ್ಳಿ ಶೇ.88.00, ಶ್ರೀ ಕನಕದಾಸ ಪ್ರೌಢಶಾಲೆ ಹುಳಿಯಾರು ಶೇ.87.88, ಜಿವಿಪಿ ಬಾಲಿಕಾ ಪ್ರೌಢಶಾಲೆ ಹಂದನಕೆರೆ ಶೇ87.10, ವಿಶ್ವಭಾರತಿ ಪ್ರೌಢಶಾಲೆ ಬರಕನಹಾಳ್ ಶೇ.85.71, ಶ್ರೀ ಮಾರುತಿ ಗ್ರಾ.ಪ್ರೌಢಶಾಲೆ ಚಿಕ್ಕಬಿದರೆ ಶೇ.84.44, ಸಾಕ್ಷರತಾ ಮಹಿಳಾ ಮ.ಪ್ರೌ.ಶಾಲೆ ಗುರುವಾಪುರ ಶೇ.84, ಶ್ರೀ ರಂಗನಾಥ ಪ್ರೌಢಶಾಲೆ ಬೆಳಗುಲಿ ಶೇ83.93, ಬಸವೇಶ್ವರ ಪ್ರೌಢಶಾಲೆ ಹುಳಿಯಾರು ಶೇ83.02, ಜ್ಞಾನಪೀಠ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.81.82, ಜಿವಿಪಿ ಕಿರಿಯ ಕಾಲೇಜು ಹಂದನಕೆರೆ ಶೇ.ಶೇ80.00, ಡಿವಿಪಿ ಬಾಲಕಿಯರ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ78.57, ಡಾ.ಅಂಬೇಡ್ಕರ್ ಪ್ರೌಢಶಾಲೆ ತೀರ್ಥಪುರ-ಕಾತ್ರಿಕೆಹಾಳ್ ಶೇ.78.38, ಮಾರಮ್ಮದೇವರ ಪ್ರೌಢಶಾಲೆ ದೊಡ್ಡರಾಂಪುರ ಶೇ77.27, ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ75.00, ಶಾರದಾ.ಪ.ಪೂ.ಕಾಲೇಜು ತಿಮ್ಮನಹಳ್ಳಿ ಶೇ.75.00, ವಿದ್ಯಾಭಾರತಿ ಪ್ರೌಢಶಾಲೆ ಗಾಣದಾಳು ಶೇ.72.73, ಶ್ರೀ ಲಕ್ಷ್ಮೀನರಸಿಂಹ ಪ್ರೌಢಶಾಲೆ ಬೈಲಪ್ಪನಮಠ ಶೇ.72.00, ಸಿದ್ದಗಂಗಾ ಪ್ರೌಢಶಾಲೆ ಕಂದಿಕೆರೆ ಶೇ.70.45, ವಿದ್ಯಾರಣ್ಯ ಪ್ರೌಢಶಾಲೆ ಬೊಮ್ಮೇನಹಳ್ಳಿ ಶೇ.70.37, ಬಾಪೂಜಿ ಪ್ರೌಢಶಾಲೆ ಬೇವಿನಹಳ್ಳಿ ಶೇ.68.00, ಡಾ.ಅಂಬೇಡ್ಕರ್ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.68.00, ಶ್ರೀ ರಾಮಲಿಂಗೇಶ್ವರ ಪ್ರೌಢಶಾಲೆ ರಾಮನಹಳ್ಳಿ ಶೇ.67.74, ಡಿವಿಪಿ ಬಾಲಕರ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.67.06, ಬೂದೇವಿ ಗ್ರಾಮಾಂತರ ಪ್ರೌಢಶಾಲೆ ಬರಗೀಹಳ್ಳಿ ಶೇ.18.75 ಪಡೆದಿದೆ.
ಅನುದಾನರಹಿತ ಶಾಲೆಗಳು  : ರಾಮಾಂಜನೇಯ ಪ್ರೌಢಶಾಲೆ ಗೂಬೆಹಳ್ಳಿ ಶೇ.40.00, ವಾಸವಿ ಆಂಗ್ಲ ಪ್ರೌಡಶಾಲೆ ಹುಳಿಯಾರು ಶೇ.95.83, ರೋಟರಿ ಆಂಗ್ಲ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.100.00, ಶ್ರೀ ಶಾರದವಿದ್ಯಾಪೀಠ ಪ್ರೌಢಶಾಲೆ ಶೇ.92.59, ಇಂದಿರಾಗಾಂಧಿ ಪ್ರೌಢಶಾಲೆ ಮುದ್ದೇನಹಳ್ಳಿ ಶೇ.20.00, ನವೋದಯ ಪ್ರೌಢಶಾಲೆ ಆಂಗ್ಲ ಚಿ.ನಾ.ಹಳ್ಳಿ ಶೇ.97.30, ಜ್ಞಾನಜ್ಯೋತಿ ಪ್ರೌಢಶಾಲೆ ಆಂಗ್ಲ.ಹುಳಿಯಾರು ಶೇ.100.00 ಪಡೆದಿವೆ.
ಸಕರ್ಾರಿ ಶಾಲೆಗಳು : ಸಕರ್ಾರಿ ಪ.ಪೂ.ಕಾಲೇಜು ಗೋಡೆಕೆರೆ ಶೇ.82.26, ಹುಳಿಯಾರು ಕೆಂಕೆರೆ ಕಾಲೇಜು ಶೇ.91.19, ಸ.ಪ.ಪೂ.ಕಾಲೇಜು ಬೋರನಕಣಿವೆ ಶೇ.81.25, ಸಕರ್ಾರಿ ಪ್ರೌಢಶಾಲೆ ಯಳನಡು ಶೇ.84.29, ಸಕರ್ಾರಿ ಪ್ರೌಢಶಾಲೆ ದಸೂಡಿ ಶೇ.69.35, ಸಕರ್ಾರಿ ಪ್ರೌಢಶಾಲೆ ಸಾಸಲು ಶೇ.96.88, ಸಕರ್ಾರಿ ಪ್ರೌಢಶಾಲೆ ಚಿ.ನಾ.ಹಳ್ಳಿ ಶೇ.77.50, ಸಕರ್ಾರಿ ಪ್ರೌಢಶಾಲೆ ಉದರ್ು ಹುಳಿಯಾರು ಶೇ.85.71, ಸಕರ್ಾರಿ ಪ್ರೌಢಶಾಲೆ ಬರಗೂರು ಶೇ.92.50, ಸಕರ್ಾರಿ ಪ್ರೌಢಶಾಲೆ ಬರಶಿಡ್ಲಹಳ್ಳಿ ಶೇ.100.00, ಸಕರ್ಾರಿ ಪ್ರೌಢಶಾಲೆ ದಬ್ಬಗುಂಟೆ ಶೇ.88.25, ಸಕರ್ಾರಿ ಪ್ರೌಢಶಾಲೆ ಜೆ.ಸಿ.ಪುರ ಶೇ.79.59, ಸಕರ್ಾರಿ ಪ್ರೌಢಶಾಲೆ ಕಾಮಲಾಪುರ ಶೇ.90.91, ಸಕರ್ಾರಿ ಪ್ರೌಢಶಾಲೆ ಬಡಕೇಗುಡ್ಲು ಶೇ.77.78, ಸಕರ್ಾರಿ ಪ್ರೌಢಶಾಲೆ ಕೆಂಕೆರೆ ಶೇ.83.33, ಸಕರ್ಾರಿ ಪ್ರೌಢಶಾಲೆ ಗೂಬೆಹಳ್ಳಿ-ನಂದಿಹಳ್ಳಿ ಶೇ.86.67, ಸಕರ್ಾರಿ ಪ್ರೌಢಶಾಲೆ ಹೆಚ್.ತಮ್ಮಡಿಹಳ್ಳಿ ಶೇ.83.33, ಸಕರ್ಾರಿ ಪ್ರೌಢಶಾಲೆ ತೀರ್ಥಪುರ ಶೇ.94.44, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ ಶೇ.100.00, ಯುಪಿಆರ್ಎಮ್ಎಸ್ಎ ಜಿಹೆಚ್ಎಸ್ ಬೆಳ್ಳಾರ ಶೇ.95.65, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಶೇ.100.00 ಫಲಿತಾಂಶ ಪಡೆದಿವೆ.



Wednesday, May 13, 2015

ೆಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ ಚಿಕ್ಕನಾಯಕನಹಳ್ಳಿ ವಿದ್ಯಾಥರ್ಿನಿ ಎಂ.ಆರ್.ಧೃವಿಕ
                                                                       ಚಿತ್ರ ಶೀಷರ್ಿಕೆ :
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೊರಾಜರ್ಿ ಶಾಲೆಯ ವಿದ್ಯಾಥರ್ಿನಿ ಎಂ.ಆರ್.ಧೃವಿಕ 619 ಅಂಕಗಳಿಸಿ ಜಿಲ್ಲೆಗೆ ಪ್ರಥಮರೆನಿಸಿದ್ದಾರೆ. ಚಿತ್ರದಲ್ಲಿ ವಿದ್ಯಾಥರ್ಿನಿ ತಾಯಿ ನಾಗಮಣಿ, ಶಾಲೆಯ ಪ್ರಾಂಶುಪಾಲ ಸತೀಶ್ ಇದ್ದಾರೆ.

ಚಿಕ್ಕನಾಯಕನಹಳ್ಳಿ, : ತಾಲ್ಲೂಕಿನ ಮೊರಾಜರ್ಿ ದೇಸಾಯಿ ವಸತಿ ನಿಲಯದ ವಿದ್ಯಾಥರ್ಿನಿ ಎಂ.ಆರ್.ಧೃವಿಕ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಎಂ.ಆರ್.ಧೃವಿಕ ಎಸ್.ಎಸ್ಎಲ್ಸಿ ಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ 124, ಇಂಗ್ಲೀಷ್ 98, ಹಿಂದಿ 99, ಗಣಿತ 100, ವಿಜ್ಞಾನ 99, ಸಮಾಜವಿಜ್ಞಾನ 99 ಅಂಕಗಳನ್ನು ಪಡೆದು ಎ+ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. ಎಂ.ಆರ್.ಧೃವಿಕ ಕೃಷಿ ಕುಟುಂಬದ ತಂದೆ ಎಚ್.ರಂಗನಾಥಸ್ವಾಮಿ, ತಾಯಿ ನಾಗಮಣಿ ಮಗಳಾಗಿದ್ದಾರೆ. ವಿದ್ಯಾಥರ್ಿನಿ ಎಂ.ಆರ್.ಧೃವಿಕ ಪಠ್ಯಪುಸ್ತಕ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ದೆಯಿಂದ ಕಲಿತಿದ್ದು ಓಸ್ವಾಲ್ ಪ್ರಶ್ನೆಪುಸ್ತಕವನ್ನು ನಿತ್ಯ ನೋಡುವ ಅಭ್ಯಾಸ ಮಾಡಿಕೊಂಡಿದ್ದೆ, ಶಾಲೆಯಲ್ಲಿ ನೀಡುವ ಪ್ರಶ್ನೆಪತ್ರಿಕೆಯನ್ನು ಚಾಚೂ ತಪ್ಪದೆ ಬರೆಯುತ್ತಿದ್ದೆ ಎಂದರಲ್ಲದೆ ಮುಂದೆ ಐ.ಎ.ಎಸ್ ಮಾಡುವ ಬಯಕೆಯಿದೆ ಎಂದರು.
ಪ್ರಾಂಶುಪಾಲ ಸತೀಶ್ ಮಾತನಾಡಿ, ಎಂ.ಆರ್.ಧೃವಿಕ ಪ್ರತಿಭಾನ್ವಿತ ವಿದ್ಯಾಥರ್ಿನಿಯಾಗಿದ್ದರು. ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ಶಿಕ್ಷಕರು ವಿದ್ಯಾಥರ್ಿಗಳಿಗೆ ಮೂರು ತಿಂಗಳ ಮುಂಚೆಯೇ ಪರೀಕ್ಷೆಯ ಬಗ್ಗೆ ಯಾವ ರೀತಿ ಸಿದ್ದತೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ವಿದ್ಯಾಥರ್ಿಗಳಿಗೆ ತಯಾರಿ ನಡೆಸಿದ್ದರು ಹಾಗೂ ಪರೀಕ್ಷೆಯಲ್ಲಿ ಬರೆಯಲು ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು. ಈ ಕಾರಣದಿಂದಲೇ ಧೃವಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆಯಲು ಕಾರಣ ಹಾಗೂ ಶಾಲೆಯ ಎಲ್ಲಾ ವಿದ್ಯಾಥರ್ಿಗಳು ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬರಲು ಸಾಧ್ಯವಾಯಿತು ಎಂದರು.
ಮೊರಾಜರ್ಿ ದೇಸಾಯಿ  ಶಾಲೆಯಿಂದ 47 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು ಎಂ.ಎಆರ್.ಧೃವಿಕ 619, ಪ್ರೀತಿ 600, ಕಾವ್ಯ 576, ಮಧುಶ್ರೀ 574, ಭಾಸ್ಕರ್ ಡಿ.ಎಸ್.569, ಸುಕ್ಷಿತ್ 563, ಅಂಕ ಹಾಗೂ 10 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ, 26 ಮಕ್ಕಳು ಪ್ರಥಮ ದಜರ್ೆಯಲ್ಲಿ, 5 ಮಕ್ಕಳು ದ್ವಿತಿಯ ದಜರ್ೆಯಲ್ಲಿ ಪಾಸಾಗುವ ಮೂಲಕ ಶಾಲೆಗೆ ಶೇ.100ರಷ್ಟು ಫಲಿತಾಂಶ ಬಂದಿದೆ ಎಂದರು.
 
ರೋಟರಿ ಶಾಲೆಯ ವಿದ್ಯಾಥರ್ಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 617 ಅಂಕ
ಚಿಕ್ಕನಾಯಕನಹಳ್ಳಿ,ಮೇ.13 : ನಿರೀಕ್ಷಯಂತೆ ಅಂಕ ಬಂದಿರುವುದು ಸಂತಸ ತಂದಿದೆ, ಈ ನಿಟ್ಟಿನಲ್ಲೇ ಮುಂದೆ ಡಾಕ್ಟರ್ ಆಗುವ ನಿರೀಕ್ಷೆಯಿದೆ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 611 ಅಂಕ ಪಡೆದಿರುವ ಸಿ.ವಿ.ದಶರ್ಿನಿ ಹೇಳಿದರು.
ಪಟ್ಟಣದ ರೋಟರಿ ಶಾಲೆಯ ವಿದ್ಯಾಥರ್ಿನಿ ಸಿ.ವಿ.ದಶರ್ಿನಿ ಮಾತನಾಡಿ, ತಂದೆ ತಾಯಿಯ ಕನಸು ನನಸು ಮಾಡುವುದು ನನ್ನ ಧ್ಯೇಯ, ತಂದೆ ವಕೀಲರಾದ ವೆಂಕಟೇಶ್, ತಾಯಿ ಲಕ್ಷ್ಮೀಲತಾ ಇವರು ಕೃಷಿ ಕುಟುಂಬದಿಂದ ಬಂದವರಾಗಿದ್ದು ಮಗಳ ಯಶಸ್ಸಿಗೆ ಸಂತಸ ಹಂಚಿಕೊಂಡರು.
ಗಣಿತದಲ್ಲಿ 100ಕ್ಕೆ 100 ಅಂಕಗಳಿಸಿದರೆ, ಕನ್ನಡದಲ್ಲಿ 122, ಇಂಗ್ಲೀಷ್ 97, ಹಿಂದಿ 98, ವಿಜ್ಞಾನ 97, ಸಮಾಜ 97, ಪಡೆದು ಒಟ್ಟು 611 ಅಂಕ ಪಡೆದು ಶೇ.97ರಷ್ಟು ಅಂಕ ಪಡೆದಿದ್ದಾರೆ.


ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೋಟರಿ ಶಾಲೆಗೆ 100% ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.13 : ಪಟ್ಟಣದ ರೋಟರಿ ಆಂಗ್ಲ ಪ್ರೌಢಶಾಲೆಯ ವಿದ್ಯಾಥರ್ಿ ಮೋಹಿತ್.ಎಸ್. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ರೋಟರಿ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ 55 ವಿದ್ಯಾಥರ್ಿಗಳು ಪರೀಕ್ಷೆ ಬರೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 15 ವಿದ್ಯಾಥರ್ಿಗಳು, ಪ್ರಥಮ ದಜರ್ೆಯಲ್ಲಿ 40 ವಿದ್ಯಾಥರ್ಿಗಳು ಪಾಸಾಗಿದ್ದಾರೆ, ಶೇ.100 ರಷ್ಟು ಫಲಿತಾಂಶ ಬಂದಿದೆ. 
1) ಎಸ್.ಮೋಹಿತ್ 619.(ಶೇ.99.4,) 2) ದಶರ್ಿನಿ 611.(97.11), ಜಿ.ಕೆ.ಸಂದೀಪ್606(96.96), ಬಿಂದುರಾಜಶೇಖರ್ 597(95.52), ದೊರೈರಾಜ್588(94.08), ಬಿ.ಎಸ್.ಚೇತನ 577(92.32), ಸಹನ ಸಿ.ಎಸ್(577(92.32), ಪಾವನಗಂಗ 576(92.16), ಕೆ.ಆರ್.ಶ್ರೀಲಕ್ಷ್ಮೀ 573(91.68), ಹೆಚ್.ಬಿ.ಯಶವಂತ್573(91.68), ಟಿ.ವಿನಯ್568(90.88), ಆಶಾ.ಕೆ.ಎಸ್567(90.72), ಸಹನ.ಕೆ.566(90.56), ಮಧು.ಬಿ.ಎನ್.565(90.40), ಸುಪ್ರಿತ.ಸಿ.565(90.40) ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
(1ರಿಂದ 15ರವರೆಗಿನ ಪೋಟೋಗಳು).
ಚಿಕ್ಕನಾಯಕನಹಳ್ಳಿ ರೋಟರಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು.


















Tuesday, May 5, 2015


ಕಟ್ಟಡ ಕಾಮರ್ಿಕರ ನೂತನ ಸಂಘ ಉದ್ಘಾಟನೆ
ಚಿಕ್ಕನಾಯಕನಹಳ್ಳಿ : ಕಟ್ಟಡ ಕಾಮರ್ಿಕರ ಬಗ್ಗೆ ಸಂಸತ್ತಿನಲ್ಲಾಗಲಿ, ವಿಧಾನಸಭೆಯಲ್ಲಾಗಲಿ, ಜಿ.ಪಂ.ಸಭೆಯಲ್ಲಾಗಲಿ, ಯಾರು ಪ್ರಸ್ತಾಪಿಸದೇ ಇರುವುದು ದುರದೃಷ್ಠಕರ ಎಂದು ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ತುಮಕೂರು ಜಿಲ್ಲಾ ಖಜಾಂಚಿ ಅಶ್ವತ್ಥ್ನಾರಾಯಣ್ ವಿಷಾಧಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ದೇವಾಲಯದ ಬಳಿ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾಮರ್ಿಕರ ಸಂಘದ ನೂತನ ಶಾಖಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿಧಾನಸಭಾ ಸದಸ್ಯರು ತಮ್ಮ ಸಂಬಳ ಸಾರಿಗೆ ವ್ಯವಸ್ಥೆಗೆ 8 ನಿಮಿಷಗಳಲ್ಲಿ ಹೆಚ್ಚಿಸಿಕೊಂಡರು. ಆದರೆ ಅಸಂಘಟಿತ ಕಾಮರ್ಿಕರ ಬಗ್ಗೆ ಗಮನ ಹರಿಸಲಿಲ್ಲ ಎಂದು ವಿಷಾಧಿಸಿದ ಅವರು ಸಕರ್ಾರ ಪ್ರತಿ ಕಟ್ಟಡ ಕಟ್ಟುವವ ಶೇ.1ರಷ್ಟು ಸೆಸ್ ವಸೂಲಿ ಮಾಡುತ್ತಿದ್ದು, ಈ ಹಣ 3280 ಕೋಟಿ ರೂಪಾಯಿಗಳಾಷ್ಟಾಗಿದೆ ಆದರೆ ಕಾಮರ್ಿಕರಿಗೆ ಮಾತ್ರ ಸರಿಯಾದ ಸವಲತ್ತುಗಳು ನೀಡುತ್ತಿಲ್ಲ ಎಂದ ಅವರು ಕೇಂದ್ರ ಸಕರ್ಾರ ಬಂಡವಾಳ ಶಾಹಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆಯನ್ನು ಮನ್ನ ಮಾಡುತ್ತಿದ್ದಾರೆ, ಈಗಿನ ಕೇಂದ್ರ ಸಕರ್ಾರ ಅಭಿವೃದ್ದಿಯ ಹೆಸರಿನಲ್ಲಿ ರೈತರಿಂದ ಜಮೀನುಗಳನ್ನು ವಶಪಡಿಸಿಕೊಂಡು ರೈತರಿಗೆ ವಂಚಿಸುತ್ತಿದ್ದಾರೆಂದು ಹೇಳಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗಿರೀಶ್ ಮಾತನಾಡಿ, ದೇಶದ ಕಟ್ಟಡದ ಕಾಮರ್ಿಕರು  5ಕೋಟಿ ಜನರಿದ್ದು ರಾಜ್ಯದಲ್ಲಿ 25ಲಕ್ಷ ಕಾಮರ್ಿಕರಿದ್ದಾರೆ, ಸಂಸತ್ತಿನ ಪಾಲರ್ಿಮೆಂಟ್, ವಿಧಾನಸೌದ ಸಕರ್ಾರಿ ಕಛೇರಿಗಳು ಸೇರಿದ್ದು ನಾನಾ ಕಟ್ಟಡಗಳು ಕಾಮರ್ಿಕರೇ ಕಟ್ಟಿದ್ದಾರೆ ಆದರೆ ಅವರಿಗೆ ಸವಲತ್ತುಗಳನ್ನು ನೀಡುತ್ತಿದೆ, ಸಕರ್ಾರಿ ನೌಕರರಿಗೆ ಕಂಪನಿಗಳ ಕಾಮರ್ಿಕರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು ಅಸಂಘಟಿತ ಕಾಮರ್ಿಕರಿಗೆ ಸವಲತ್ತು ನೀಡುತ್ತಿಲ್ಲ ಎಂದ ಅವರು ರಾಜ್ಯದಲ್ಲಿ 7.45ಲಕ್ಷ ಕಾಮರ್ಿಕರು ನೊಂದಣಿ ಮಾಡಿಸಿಕೊಂಡಿದ್ದಾರೆ ಆದ್ದರಿಂದ ಪ್ರತಿಯೊಬ್ಬ ಕಾಮರ್ಿಕರೂ ಕಾಮರ್ಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಳ್ಳುವ ಮೂಲಕ ಸಕರ್ಾರದ ನಾನಾ ಸವಲತ್ತುಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಮರ್ಿಕರು ಮೋಟಾರ್ ಬೈಕ್ ಜಾಥಾವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಿದರು.
ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್ ಮತ್ತಿತರರು ಉಪಸ್ಥಿತರಿದ್ದರು.





ಕನ್ನಡ ಸಾಹಿತ್ಯ ಪರಿಷತ್ ಆರಂಭಗೊಂಡು ನೂರವಸಂತಗಳು 
ಚಿಕ್ಕನಾಯಕನಹಳ್ಳಿ : ಕನ್ನಡದ ಮನಸ್ಸುಗಳನ್ನು ಒಂದುಗೂಡಿಸಲು ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ ಇಂದಿಗೆ ನೂರು ವಸಂತಗಳು ತುಂಬುತ್ತಿರುವುದರಲ್ಲಿ ಹಲವರ ಶ್ರಮವಿದೆ ಎಂದು ಸಾಹಿತಿ ಎಂ.ವಿ.ನಾಗರಾಜ್ರಾವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಆರಂಭವಾಗಿ ನೂರು ವಸಂತಗಳು ತುಂಬಿದ ಹಿನ್ನಲೆಯಲ್ಲಿ ಪಟ್ಟಣದ ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ನೂರರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತನ್ನದೇ ಆದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ 1915ರಲ್ಲಿ ಆರಂಭವಾಯಿತು ಅಂದಿನಿಂದ ಇಂದಿನವರೆಗೂ ಸಾಹಿತ್ಯ ಪರಿಷತ್ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಕನ್ನಡ ಮನಸ್ಸುಗಳನ್ನು ಕಟ್ಟುತ್ತಿದೆ ಎಂದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ, ಕನ್ನಡ ಮನಸ್ಸುಗಳು ಹಾಗೂ ಪಟ್ಟಣದ ಸಂಘಟನೆಗಳು ಕನ್ನಡ ಸಾಹಿತ್ಯ ಪರಿಷತ್ನ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ  ಕಾರ್ಯಕ್ರಮ ಹಮ್ಮಿಕೊಂಡಿರುವುದು ಕನ್ನಡದ ಬಗ್ಗೆ ಇರುವ ಅಭಿಮಾನವಾಗಿದೆ, ಕೇಂದ್ರ ಸಕರ್ಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಎಂದರಲ್ಲದೆ ಕನ್ನಡ ಭಾಷೆ ಉಳಿಯಬೇಕು, ಬೆಳೆಯಬೇಕು ಹಾಗೂ ಕನ್ನಡ ಕಾರ್ಯಕ್ಕೆ ನಾವೆಲ್ಲರೂ ಒಟ್ಟುಗೂಡಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ ಜಯಲಕ್ಷ್ಮಮ್ಮ, ಸಿದ್ದಲಿಂಗಮ್ಮ, ಜಯರಾಮ್, ಸಿ.ಡಿ.ಚಂದ್ರಶೇಖರ್, ಪಾರ್ಥಸಾರಥಿರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ನಂತರ ಕನ್ನಡ ಸಂಘ, ಕನರ್ಾಟಕ ರಕ್ಷಣಾ ವೇದಿಕೆ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ, ದಲಿತ ಸಂಘರ್ಷ ಸಮಿತಿ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಸಂಘ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಯಕನರ್ಾಟಕ ವೇದಿಕೆ, ಭೋದಿವೃಕ್ಷ, ಚಿಕ್ಕನಾಯಕ ಯೂತ್ ಕ್ಲಬ್, ಸ್ನೇಹಕೂಟ, ನಡೆನುಡಿ, ಕುಂಚಾಂಕುರ ಕಲಾಸಂಘ, ಭುವನೇಶ್ವರಿ ಸಂಘ, ಆಟೋಚಾಲಕರ, ಕಟ್ಟಡ ಕಟ್ಟುವ ಹಾಗೂ ಕೂಲಿ ಕಾಮರ್ಿಕರ ಸಂಘ ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಕನ್ನಡ ಬಾವುಟದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ರ್ಯಾಲಿ ನಡೆಸಿದರು.
ಈ ಸಂದರ್ಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಿದ್ದುಜಿ.ಕೆರೆ, ನಿರೂಪ್ರಾವತ್, ಮಂಜುನಾಥ್, ರವಿಕುಮಾರ್, ಜಯಮ್ಮ, ಗೋವಿಂದರಾಜು, ಲಿಂಗದೇವರು, ಬಸವರಾಜು, ನಂಜುಂಡಪ್ಪ, ಸುಪ್ರಿಂಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.




ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ  ಎಂಟು ಜನ ಅವಿರೋಧವಾಗಿ ಆಯ್ಕೆ ಇನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿ
ಚಿಕ್ಕನಾಯಕನಹಳ್ಳಿ,ಮೇ.5: ಟಿ.ಎ.ಪಿ.ಸಿ.ಎಂ.ಎಸ್ನ ಆಡಳಿತ ಮಂಡಳಿಗೆ 10 ಜನ ಚುನಾಯಿತ ನಿದರ್ೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆ ಮಾಡಿದ್ದು ಇದರಲ್ಲಿ ಎಂಟು ಜನ ಅವಿರೋಧವಾಗಿ ಆಯ್ಕೆಯಾದರೆ ಎನ್ನೆರಡು ಸ್ಥಾನಕ್ಕೆ ಐದು ಜನ ಕಣದಲ್ಲಿದ್ದಾರೆ.
ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ (ಟಿ.ಎ.ಪಿ.ಸಿ.ಎಂ.ಎಸ್)ಕ್ಕೆ ಎ ವರ್ಗದಿಂದ ಅವಿರೋಧವಾಗಿ ಆಯ್ಕೆಯಾದವರೆಂದರೆ, ಷಡಾಕ್ಷರಿ ಮಾಳಿಗೆಹಳ್ಳಿ, ಜಯದೇವಮೂತರ್ಿ ತೀರ್ಥಪುರ, ಲಿಂಗದರಾಜು ಹಂದನಕೆರೆ, ಜಯದೇವಪ್ಪ ಗಾಣಧಾಳು, ವಕೀಲ ಎನ್.ಎನ್.ಶ್ರೀಧರ್ ವಿವಿಧ ವಿ.ಎಸ್.ಎಸ್.ಎನ್.ಸೊಸೈಟಿಗಳನ್ನು ಪ್ರತಿನಿಧಿಸಿದ್ದಾರೆ, ಮೀಸಲು ಕ್ಷೇತ್ರದಿಂದ ಶಶಿಶೇಖರ್, ಮಹಿಳಾ ಕ್ಷೇತ್ರದಿಂದ ಮಂಜುಳ ನಾಗರಾಜ್ ಗೋಪಾಲನಹಳ್ಳಿ, ಕಲ್ಪನಾ ರಾಮಲಿಂಗಯ್ಯ ಮಾರಸಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿ.ಸಿ.ಎಂ.ನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಎರಡು ಸ್ಥಾನಕ್ಕೆ ಎರಡು ಸಾವಿರ ಷೇರುದಾರರು ಮತಚಲಾಯಿಸಬೇಕಿದೆ.
ಟಿ.ಎ.ಪಿ.ಸಿ.ಎಂ.ಎಸ್.ಗೆ ಒಟ್ಟು 13 ಜನ ನಿದರ್ೇಶಕರಿದ್ದು, ಇದರಲ್ಲಿ 10 ಜನ ಚುನಾವಣೆ ಮೂಲಕ ಆಯ್ಕೆಯಾದರೆ ಇಬ್ಬರು ಅಧಿಕಾರಿ ವರ್ಗದಿಂದ ನಿದರ್ೇಶಕರಾಗಿ ನಿಯೋಜನೆಗೊಳ್ಳುವರು, ಒಬ್ಬರು ಸಕರ್ಾರದಿಂದ ನೇಮಕಗೊಳ್ಳುವರು.




ಚಿಕ್ಕನಾಯಕನಹಳ್ಳಿ ಬಿಜೆಪಿ ಪಕ್ಷದ ವತಿಯಿಂದ ನೇಪಾಳ ಸಂತ್ರಸ್ಥರಿಗಾಗಿ ಪರಿಹಾರ ನಿಧಿ ಸಂಗ್ರಹ ಮಾಡಲಾಯಿತು. ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತಾ.ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ಬುಳ್ಳೇನಹಳ್ಳಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.


Saturday, May 2, 2015


ವಕೀಲರ ಸಂಘದ ನೂತನ ಅಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಕರಿಯಪ್ಪ, ಕಾರ್ಯದಶರ್ಿಯಾಗಿ ಬಿ.ಜಿ.ಆದರ್ಶ,ಉಪಾಧ್ಯಕ್ಷರಾಗಿ ಸಿ.ರಾಜಶೇಖರ್ ಸಹಕಾರ್ಯದಶರ್ಿಯಾಗಿ ಟಿ.ರವೀಂದ್ರಕುಮಾರ್, ಖಜಾಂಚಿಯಾಗಿ ಮೋಹನ್ಪೃಥ್ವಿಪ್ರಸಾದ್ ಆಯ್ಕೆಯಾಗಿದ್ದಾರೆ.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
ಚಿಕ್ಕನಾಯಕನಹಳ್ಳಿ : ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ, ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸುಕರಾಗಿರುವುದನ್ನು ಸ್ವಾಗತಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗೋ.ನಿ.ವಸಂತ್ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಪರಿಶಿಷ್ಠ ಜಾತಿಯಲ್ಲಿನ ಶೇಕಡಾ 15ರ ಮೀಸಲಾತಿಯನ್ನು ಸಂವಿಧಾನದತ್ತವಾಗಿ, ಜನಸಂಖ್ಯಾ ಆಧಾರಿತವಾಗಿ ಪರಿಶಿಷ್ಠ ಜಾತಿಯ ಒಳಗಿನ ಮಾದಿಗರಿಗೆ ಶೇ.6%, ಛಲವಾಧಿಗಳಿಗೆ ಶೇ.5%, ಉಳಿದ ಇತರೆಯವರಿಗೆ ಶೇ.3% ಹಾಗೂ ಅಲೆಮಾರಿಗಳಿಗೆ ಶೇ.1% ಒಳ ಮೀಸಲಾತಿಯಲ್ಲಿ ವಗರ್ೀಕರಣ ಮಾಡಿ ಸಕರ್ಾರಕ್ಕೆ ಶಿಫಾರಸ್ಸು ಮಾಡಿದ್ದು, ಅಸ್ಪೃಶ್ಯತೆಯ ಅಸಮಾನತೆಯ ಬದುಕನ್ನು ಸವೆಸುತ್ತಿರುವ ಮಾದಿಗರು ಮತ್ತು ಛಲವಾದಿ(ಹೊಲೆಯ) ಸಮುದಾಯಗಳಿಗೆ ನ್ಯಾ.ಸದಾಶಿವ ವರದಿ ಜಾರಿಗೊಂಡರೆ ಈ ಸಮುದಾಯಗಳು ಸಾಮಾಜಿಕ ಮುಖ್ಯ ವಾಹಿನಿಗೆ ಬರಲು ಸಹಾಯಕವಾಗುತ್ತದೆ ತಕ್ಷಣ ಸದಾಶಿವ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿ, ದಲಿತ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಸಿ.ಎಸ್.ಲಿಂಗದೇವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಂಡ ನಿವಾಸಿಗಳಿಗೆ ದುಶ್ಚಟಗಳಿಂದ ದೂರವಿರಲು
                                                          
ಜಾಗೃತಿ ಶಿಬಿರ
                             

ಚಿಕ್ಕನಾಯಕನಹಳ್ಳಿಮೇ.02 : ಯುವಕ, ಯುವತಿಯರು ಮಧ್ಯಪಾನ, ಬೀಡಿ ಸಿಗರೇಟು, ಗುಟುಕದಂತಹ ದುಷ್ಚಟಗಳಿಗೆ ಒಳಗಾಗುವುದರಿಂದ ಅವರ ಆರೋಗ್ಯದ ಮೇಲೆ ಬೀರುವ ದುಷ್ಪಣಾಮದ ಬಗ್ಗೆ ತಾಂಡ ನಿವಾಸಿಗಳಿಗೆ ಅರಿವು, ಜಾಗೃತಿ ಮೂಡಿಸಲು ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನರ್ಾಟಕ ಸಕರ್ಾರದ, ಕನರ್ಾಟಕ ತಾಂಡಾ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದ್ದು ಕನರ್ಾಟಕದಲ್ಲಿರುವ ವಿವಿಧ ತಾಂಡಗಳಿಗೆ ಮತ್ತು ತಾಂಡ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕಿನ ಬರಗೂರು ಗ್ರಾಮ ಪಂಚಾಯಿತಿಗೆ ಸೇರಿದ ಟಿ.ತಾಂಡಾ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥಯ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನರ್ಾಟಕದ ತಾಂಡಾ ಅಭಿವೃದ್ದಿ ನಿಗಮದಿಂದ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು, ತಾಂಡದಲ್ಲಿ ಸಿ.ಸಿ.ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ಬೀದಿ ದೀಪಗಳು, ವಿದ್ಯುತ್ ಸಂಪರ್ಕ, ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು ಆರೋಗ್ಯ ಕೇಂದ್ರಗಳು, ಆರೋಗ್ಯ ತಪಾಸಣಾ ಶಿಬಿರ ಮತ್ತು ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ ಮತ್ತು ಖುತುಮಾನ ಶಾಲೆಗಳು, ತಾಂಡ ನಿವಾಸಿಗಳಿಗಾಗಿ ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕೃತಿಕ ಆಚಾರ ವಿಚಾರ ಸಂಪ್ರದಾಯಗಳಿಗೆ ಉತ್ತೇಜನ, 2006 ಅರಣ್ಯ ಹಕ್ಕು ಕಾಯ್ದೆ ಅನ್ವಯ ತಾಂಡಾದ ನಿವಾಸಿಗಳು ಸಕರ್ಾರಿ ಜಮೀನು, ಗೋಮಾಳ, ಅರಣ್ಯ ಭೂಮಿ ಉಳುಮೆ ಮಾಡುವವರಿಗೆ ಹಕ್ಕು ಪತ್ರ ವಿತರಣೆ ಮಾಡಿಸುವ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು ಹಾಗೂ ಪ್ರತಿಯೊಂದು ತಾಂಡಾ ಮಟ್ಟದಲ್ಲಿ ತಾಂಡಾ ವಿಕಾಸ ಸಮಿತಿಯನ್ನು ರಚನೆ ಮಾಡುವುದು, ಅದರಲ್ಲಿ ತಾಂಡಾದ ವಂಶಪಾರಂಪಾರಿಕರಾದ ನಾಯಕ, ಡಾವೂ, ಕಾರುಭಾರಿ & ಒಬ್ಬ ವಿದ್ಯಾವಂತ ಯುವಕ/ಯುವತಿ ಹಾಗೂ ಸ್ಥಳಿಯ ಚುನಾಯಿತಿ ಪ್ರತಿನಿಧಿಗಳು ತಾಂಡಾ ವಿಕಾಸ ಸಮಿತಿಯಲ್ಲಿ ಪದಮಿತ ಸದಸ್ಯರಾಗಿರುವುದು ತಾಂಡಾ ವಿಕಾಸ ಸಮಿತಿಯ ಮುಖ್ಯ ಉದ್ದೇಶ ತಾಂಡಾವನ್ನು ನಾವೇ ಅಭಿವೃದ್ದಿ ಮಾಡವುದು ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಚೇತನಗಂಗಾಧರ್, ರಾಜ್ಯ ತಾಂಡ ಅಭಿವೃದ್ದಿ ನಿಗಮದ ಸಂಪನ್ಮೂಲ ವ್ಯಕ್ತಿಗಳಾದ ಹರಿಯಾನಾಯ್ಕ, ಕೃಷ್ಣನಾಯ್ಕ, ಶಶಿಧರನಾಯ್ಕ, ಗ್ರಾ.ಪಂ.ಮಾಜಿ ಸದಸ್ಯರಾದ ಚಂದ್ರನಾಯ್ಕ, ಶಿಕ್ಷಕ ಮೂತರ್ಿನಾಯ್ಕ, ಗಂಗಾದರ್, ಬಡ್ಸರ್್ ಸಂಸ್ಥೆಯ ಸಿಬ್ಬಂದಿ ಶಿವಾನಂದನಾಯಕ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಚಿಕ್ಕನಾಯಕನಹಳ್ಳಿಯಲ್ಲಿ ಜಯಕನರ್ಾಟಕ ಸಂಘಟೆನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪರೈರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ ತಾ.ಜಯಕನರ್ಾಟಕ ಸಂಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಉಚಿತ ಹಣ್ಣು, ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ತಾ.ಜಯಕನರ್ಾಟಕ ಸಂಘಟನೆ ಅಧ್ಯಕ್ಷ ಹೆಚ್.ಎನ್.ವೆಂಕಟೇಶ್, ಕುಮಾರಸ್ವಾಮಿ, ಲೋಕೇಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.

Friday, May 1, 2015


                              ಟಾಟಾ ಸಫಾರಿ ಕಾರಿಗೆ ಲಾರಿ ಡಿಕ್ಕಿ 


ಚಿಕ್ಕನಾಯಕನಹಳ್ಳಿ,ಮೇ.01: ತಾಲ್ಲೂಕಿನ ಬಿ.ಎಚ್.ರಸ್ತೆಯ ಬಳ್ಳೆಕಟ್ಟೆ ಬಳಿಯ ಪೋಚಕಟ್ಟೆ ಗೇಟ್ ಹತ್ತಿರ ಟಾಟಾ ಸಫಾರಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 5 ಜನ ಗಾಯಗೊಂಡು ಓರ್ವ ತೀವ್ರ ಗಾಯಗೊಂಡು ತುಮಕೂರು ಜಿಲ್ಲಾ ಆಸ್ವತ್ರೆಗೆ ಕಳಿಸಲಾಗಿದೆ. 
  ಹೊಸದುರ್ಗ ತಾಲ್ಲೂಕು ಕಿಟ್ಟದಾಳಿನ ಶರತ್ ಎನ್ನುವರು ಕುಟುಂಬ ಸಮೇತ ತುಮಕೂರಿನಲ್ಲಿ ತಮ್ಮ ಸಂಬಂಧಿಕರ ಮದುವೆ ಮುಗಿಸಿಕೊಂಡು ತಮ್ಮ ಸ್ವಂತ ಗ್ರಾಮವಾದ ಕಿಟ್ಟದಾಳಿಗೆ ವಾಪಸ್ಸು ಬರುವಾಗ ಪೋಚುಕಟ್ಟೆ ಬಳಿ ಎದುರಿನಿಂದ ಬಂದ ಲಾರಿ ಟಾಟಾ ಸಫಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಯುಸುತ್ತಿದ್ದ ಶರತ್ ಸೇರಿದಂತೆ ಆತನ ಪತ್ನಿ ರೀತು ಮಕ್ಕಳಾದ ರಶ್ಮೀಕ, ದೀಕ್ಷಾ ಹಾಗೂ ಶರತ್ ಅತ್ತೆ ಮಾಲ ಇವರು ಗಾಯಗೊಂಡಿದ್ದಾರೆ. ರಶ್ಮೀಕ ತೀರ್ವವಾಗಿ ಗಾಯಗೊಂಡು ಹುಳಿಯಾರು ಸಕರ್ಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಸಕರ್ಾರಿ ಆಸ್ವತ್ರೆಗೆ ದಾಖಲಿಸಲಾಗಿದೆ. ಈ ಸಂಬಂದ ಹುಳಿಯಾರು ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಲಾರಿ ಚಾಲಕ ತಲೆಮರೆಸಿಕೊಂಡಿದ್ದಾನೆ.
                                                                  ಸುದ್ದಿ ಇಲ್ಲ
                                                               ಚಿತ್ರ ಶೀಷರ್ಿಕೆ :
                                     
ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭಾ ಕಾಯರ್ಾಲಯದ ಸಿಬ್ಬಂದಿ ಮುರುಡಯ್ಯ ವಯೋನಿವೃತ್ತಿಯ ಪ್ರಯುಕ್ತ ಪುರಸಭಾ ವತಿಯಿಂದ ಬೀಳ್ಕೊಡಲಾಯಿತು. ಪುರಸಭಾಧ್ಯಕ್ಷೆ ರೇಣುಕಮ್ಮ, ಪುರಸಭಾ ಸಿಬ್ಬಂದಿಗಳಾದ ಚಂದ್ರಶೇಖರ್, ಗಂಗಾಧರಯ್ಯ, ಚಂದ್ರಶೇಖರ್, ರವಿಕುಮಾರ್, ಜಯಶಂಕರ್, ನಾಗರಾಜು, ಲಕ್ಷ್ಮಮ್ಮ ಉಪಸ್ಥಿತರಿದ್ದರು



ವಿವಿಧ ದೇವಾಲಯದ ಧಾಮರ್ಿಕ ಕಾರ್ಯಕ್ರಮಗಳು
 ಚಿಕ್ಕನಾಯಕನಹಳ್ಳಿ,ಮೇ.01 :  ತಾಲ್ಲೂಕಿನ ತಮ್ಮಡೀಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿಯ ಜೀಣರ್ೊದ್ಧಾರ ನೂತನ ದೇವಾಲಯ ಪ್ರವೇಶ ಪ್ರಾಣ ಪ್ರತಿಷ್ಠಾಪನಾ ನೇತ್ರೋನ್ನಿಲನ ದೃಷ್ಠಿ ಹಾಗೂ ಹೋಮರ್ಚನಾಭಿಷೇಕ ಮಹೋತ್ಸವ ಮೇ 3 ರಿಂದ 4 ರವರೆಗೆ ನಡೆಯಲಿದೆ. 3 ರಂದು ಗೋಧೂಳಿ ಲಗ್ನದಲ್ಲಿ ವಿವಿಧ ಪೂಜೆ, ಶ್ರೀ ಬಸವೇಶ್ವರ ದೇವಾಲಯ ಪ್ರವೇಶವು  ಶ್ರೀ ಮಲ್ಲಿಕಾಜರ್ುನಸ್ವಾಮಿ, ವಿರೂಪಾಕ್ಷಸ್ವಾಮಿ ದೇವರುಗಳ ಆಗಮನಗಳೊಂದಿಗೆ ನಡೆಯಲಿದೆ. 
4 ರಂದು ಬೆಳಗಿನ ಜಾವ 4-30 ರಿಂದ 5 -30 ರ ಬ್ರಾಹ್ಮೀ ಮುಹೂರ್ತದಲ್ಲಿ  ತಮ್ಮಡೀಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮಿಯವರ ಅಮೃತ ಹಸ್ತದಿಂದ ಬಸವೇಶ್ವರ ಸ್ವಾಮಿ ಶಿಲಾ ಮೂತರ್ಿಯ ಪ್ರತಿಷ್ಠಾಪನೆ ಹಾಗೂ ಪ್ರಾಣ ಪ್ರತಿಷ್ಠಾಪನಾ ನಂತರ ನೇತ್ರೋನ್ಮಿಲನ ಬೆಳಿಗ್ಗೆ 7-30 ಕ್ಕೆ ರುದ್ರಭಿಷೇಕ ಹಾಗೂ ಮುಂತಾದ ಧಾಮರ್ಿಕ ಕಾರ್ಯಕ್ರಮಗಳು ನಡೆಯಲಿವೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಧಿಗಳು ಆಗಮಿಸುವಂತೆ ಮನವಿ ಮಾಡಿದ್ದಾರೆ.
8ನೇ ವರ್ಷ ವಾಷರ್ಿಕೋತ್ಸವ: ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವಿ ಹಾಗೂ ಮಾಸ್ತಮ್ಮ ದೇವಾಲಯದ  8 ನೇ ವರ್ಷದ ವಾಷರ್ಿಕೋತ್ಸವ ಸಮಾರಂಭ  ಮೇ 03 ಮತ್ತು 04 ರಂದು ನಡೆಯಲಿದೆ.  
ಮೇ 3 ರಂದು ಸಂಜೆ 6.30 ವಿವಿಧ ಹೋಮ ಮತ್ತು  ಮಹಾಮಂಗಳಾರತಿ,     4 ರಂದು ಪ್ರಾತಃಕಾಲ ವಿವಿಧ ಪೂಜೆ,  12-05 ಕ್ಕೆ ಪೂಣರ್ಾಹುತಿ, ಬಲಿ ಪ್ರಧಾನ, ಕಳಶ ಸ್ಥಾಪನೆ, ಅಭಿಷೇಕ, ಮಧ್ಯಾಹ್ನ 1-50 ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮದಲ್ಲಿ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ  ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವರ ಟ್ರಸ್ಟ್ ಸಮಿತಿ  ಮನವಿ ಮಾಡಿದೆ.