Wednesday, April 14, 2010

ಜಾತಿಯಿಂದ ಮನುಷ್ಯನನ್ನು ಗುತರ್ಿಸಬೇಡಿ, ಪ್ರತಿಭೆಯಿಂದ ಗುತರ್ಿಸಿ: ಸಿ.ಬಿ.ಎಸ್

ಚಿಕ್ಕನಾಯಕನಹಳ್ಳಿ, ಏ.14: ಯಾವುದೇ ವ್ಯಕ್ತಿಯನ್ನು ಅವರಲ್ಲಿರುವ ಪ್ರತಿಭೆಗಳ ಮೂಲಕ ಗುತರ್ಿಸಬೇಕೆ ಹೊರತು ಜಾತಿಗಳಿಂದಲ್ಲ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡವರ ಪರವಾದ ಕೆಲಸಗಳನ್ನು ಮಾಡಿದರೆ ಅಂಬೇಡ್ಕರ್ ಮತ್ತು ಜಗಜೀವನ್ ರಾಮ್ ರವರನ್ನು ನೆನೆದಂತಾಗುತ್ತದೆ ಎಂದ ಅವರು, ಸಮಾಜದ ಕೆಳಸ್ತರದಲ್ಲಿರುವ ಜನರಿಗೆ ಅವರ ಅಗತ್ಯತೆಯನು ಅರಿತು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರಲ್ಲದೆ, ಅಧಿಕಾರಿಗಳು ಇದನ್ನು ತಿಳಿದು ಕೆಲಸ ಮಾಡಿ ಎಂದರು. ತಾಲೂಕಿನ ಒಂದು ನೂರು ದಲಿತ ಸಂಘಗಳಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡಿಸಲಾಗುವುದು ಎಂದರು.
ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಜಾತಿ ವರ್ಗಗಳಲ್ಲಿರುವ ಸಣ್ಣತನ ಮರೆಯಾಗಬೇಕು, ದೊಡ್ಡವರ ಆಶಯದಂತೆ ನಡೆಯಬೇಕು, ಆಗ ಮಾತ್ರ ಇಂತಹ ದಿನಾಚರಣೆಗೆ ಅರ್ಥ ಬರುತ್ತದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಚಿಕ್ಕಣ್ಣ ಎಳ್ಳೆಕಟ್ಟೆ, ಸಾರ್ವತ್ರಿಕ ಶಿಕ್ಷಣ ಹಾಗೂ ಮಹಿಳಾ ಮೀಸಲಾತಿಯ ಬಗ್ಗೆ ಅಂಬೇಡ್ಕರ್ ರವರು ಅಂದೇ ಪ್ರತಿಪಾದಿಸಿದ್ದರು ಎಂದ ಅವರು, ಯಾರು ಆಥರ್ಿಕವಾಗಿ ಹಿಂದುಳಿದಿದ್ದಾರೆ ಅಂತಹವರೆಲ್ಲಾ ಮೀಸಲಾತಿಗೆ ಅರ್ಹರು ಎಂಬುದೇ ಅಂಬೇಡ್ಕರ್ರವರ ನಿಲುವಾಗಿತ್ತು ಎಂದರು. ತಾವು ರಚಿಸಿದ 63 ಪುಸ್ತಕಗಳಲ್ಲಿ ಮುಂದಿನ ಭಾರತದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ಕನಸು ಕಂಡಿದ್ದರು ಎಂದರು. ಅಂಬೇಡ್ಕರ್ ರವರು 'ದಲಿತ ಸೂರ್ಯ' ಎಂದು ಕರಿಸಿಕೊಂಡ ಮಹಾನ್ ನಾಯಕರು ಎಂದರು.
ಬಾಬು ಜಗಜೀವನ್ ರಾಮ್ ರವರು ಭಾಕ್ರಾನಂಗಲ್ ಅಣೆಕಟ್ಟು ಕಟ್ಟುವ ಮೂಲಕ ಆ ಭಾಗದ ರೈತರ ಪಾಲಿಗೆ ವರದಾನವನ್ನು ನೀಡಿದರು ಎಂದರಲ್ಲದೆ, ದೇಶದ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದರು ಕೃಷಿ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆಯ ಫಲವಾಗಿ ಜಗಜೀವನ್ ರಾಮ್ ರವರು ಹಸಿರು ಕ್ರಾಂತಿಯ ಹರಿಕಾರ ಎಂಬ ಕೀತರ್ಿಗೆ ಭಾಜನಾದರು ಎಂದರು. ಸಂಸ್ಕೃತದ ಬಗ್ಗೆ ವಿಶೇಷ ಒಲವಿಟ್ಟುಕೊಂಡಿದ್ದ ಜಗಜೀವನ್ ರಾಮ್ ರವರು ತುಳಸಿ ರಾಮಾಯಣವನ್ನು ಸುಲಲಿತವಾಗಿ ಪಠಿಸುತ್ತಿದ್ದರು ಎಂದರು.
ಜಿ.ಪಂ.ಸದಸ್ಯ ಜಿ.ರಘುನಾಥ್ ಮಾತನಾಡಿ, ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರೆ ಈ ವರ್ಗಗಳಿಗೆ ಇನ್ನಿಷ್ಟು ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿದ್ದು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಸಾಮಾಜಿಕ ನ್ಯಾಯ ಸಿಗದ ಹೊರತು ಕಾನೂನಿನ ಸ್ವಾತಂತ್ರ ದೊರೆಯುವುದಿಲ್ಲವೆಂದು ಅರಿತಿದ್ದ ಈ ನಾಯಕರುಗಳು ಸಾಮಾಜಿಕ ನ್ಯಾಯಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದರು ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಮ್ಮ, ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯರಾದ ತಿಮ್ಮಕ್ಕ, ಕಮಲಾನಾಯ್ಕ್, ರುದ್ರೇಶ್, ಪುರಸಭಾ ಸದಸ್ಯರುಗಳಾದ ಕೃಷ್ಣಮೂತರ್ಿ, ಲಕ್ಷ್ಮಯ್ಯ, ಸಿ.ಡಿ.ಚಂದ್ರಶೇಖರ್, ಕವಿತಾಚನ್ನಬಸವಯ್ಯ, ಬಿ.ಜೆ.ಪಿ.ಮುಖಂಡ ಶ್ರೀನಿವಾಸಮೂತರ್ಿ, ದಲಿತ ಮುಖಂಡ ನಾರಾಯಣ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಬೇವಿನಹಳ್ಳಿ ಚನ್ನಬಸವಯ್ಯ, ತೀರ್ಥಪುರದ ಕುಮಾರ್, ಲಿಂಗದೇವರು, ಚಿಕ್ಕಣ್ಣ ಎಣ್ಣೆಕಟ್ಟೆಯವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭಕ್ಕೂ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರವನ್ನು ಸಿಂಗರಿಸಿದ ವಾಹನದಲ್ಲಿ ತಾಲೂಕು ಕಛೇರಿಯಿಂದ ವಿವಿಧ ಜಾನಪದ ನೃತ್ಯಗಳೊಂದಿಗೆ ಮೆರವಣಿಗೆಯಲ್ಲಿ ವೇದಿಕೆಯ ಬಳಿ ತರಲಾಯಿತು.