Friday, October 26, 2012



ಕೃಷಿ ಇಲಾಖೆಯ ನಿರ್ಲಕ್ಷ್ಯ: ನೂರಾರು ಎಕರೆ ರಾಗಿ ಫಸಲು ಹುಳುಗಳ ಪಾಲು, ಬೆಳೆದವನ ಹೊಟ್ಟೆಗೆ ತಣ್ಣೀರು ಬಟ್ಟೆ.
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಸೆ.26 : ಬರದಿಂದ ಬದುಕು ಮೂರಾಬಟ್ಟೆಯಾಗಿದೆ, ಹೆಂಗೋ ಅಂಗದಲ್ಲಿ ಭಂಗದಲ್ಲಿ ಉಸಿರಿಟ್ಟಕೊಂಡು ಜೀವನಕ್ಕೆ ಅಂತ ಅಷ್ಟೊ ಇಷ್ಟೋ ರಾಗಿ ಬೆಳೆಕೊಳ್ಳುತ್ತಿದಿವಿ, ಅದನ್ನೂ ಈ ಹುಳುಗಳು ಮಣಪಾಲು ಮಾಡ್ಯಾಕ್ಯಾವೆ, ನಮಗೀಗ ಹೊಟ್ಟೆಗೆ ತಣ್ಣೀರ ಬಟ್ಟೇನೇ ಗತಿ. ಇಷ್ಟಾದ್ರೂ ಕೃಷಿ ಇಲಾಖೆಯವರು ನಮ್ಮ ಹೊಲಗಳಿಗೆ ಬಂದು ನೋಡಿಲ್ಲ, ನಮ್ಮ ಕಷ್ಟ ಕೇಳಿಲ್ಲ. ನಾವೇ ಆಫೀಸ್ಗೆ ಹೋಗಿ ಹೇಳಿದ್ರೂವೇ ಎಂತಂದೊ ಒಂದಿಷ್ಟು ಔಷಧಿ ಕೊಟ್ಟು ಸಾಗ ಆಕ್ಯಾವರೇ, ನೋಡಿ ಸ್ವಾಮಿ ನಮ್ಮ ಜೀವನ ಹಿಂಗೆ ಬೀದಿ ಬಿದ್ದೋಗದೆ ಎಂದು ಗದ್ಗದಿತ ಧ್ವನಿಯಲ್ಲಿ ಹೇಳ್ತಾರೆ ಸಾಲ್ಕಟ್ಟೆ ಎ.ಕೆ.ಕಾಲೋನಿಯ ಸಣ್ಣ ಹಿಡುವಳಿದಾರ ಕರಿಯಪ್ಪ.
ಈ ನೊಂದ ಮಾತುಗಳು ಕೇವಲ ಒಬ್ಬರದ್ದಲ್ಲ, ತಾಲೂಕಿನ ಆಲದಕಟ್ಟೆ ಭಾಗದಿಂದ ಸಾಲ್ಕಟ್ಟೆವರೆಗಿನ ಸುಮಾರು 500 ಎಕರೆಗೆ ಹೆಚ್ಚು ಜಮೀನುಗಳ ನೂರಾರು ಬಡ ರೈತರ ಗೋಳು. ಮಳೆಯ ಅಭಾವದಿಂದಲೇ ಸುಮಾರು 2ತಿಂಗಳ ಹಿಂದಷ್ಟೇ ಬಿದ್ದ ಅಲ್ಪಸ್ವಲ್ಪ ಮಳೆಯಲ್ಲಿ  ಉಳುಮೆ ಮಾಡಿ ಬೆಳೆಯುತ್ತಿದ್ದ 500 ಎಕರೆಯಲ್ಲಿನ ರಾಗಿ ಬೆಳೆಯು ಹುಳುವಿನ ಹಸಿವಿಗೆ ನಾಶವಾಗಿ ರೈತರ ಹೊಟ್ಟೆಪಾಡಿನ ಬೆಳೆಗೆ ಕೊಡಲಿಪೆಟ್ಟು ಬಿದ್ದಿದೆ.
 ತಾಲ್ಲೂಕಿನ ಸಾಲ್ಕಟ್ಟೆ ಗ್ರಾಮದ ಬಸವರಾಜು, ಶ್ರೀರಂಗಯ್ಯ ಹಾಗೂ ಅಕ್ಕಪಕ್ಕದಲ್ಲಿನವರ ಜಮೀನಿನವರು, ಸ್ಥಳಕ್ಕೆ ಭೇಟಿ ನೀಡಿದ ಪತ್ರಿಕೆಯವರ ಬಳಿ ತಮಗಾಗಿರುವ ನಷ್ಟವನ್ನು ವಿವರಿಸಿದರು. ಹೆಕ್ಟೇರ್ಗಟ್ಟಲೆ ರಾಗಿ ಬೆಳೆಗೆ ಹುಳುಗಳು ದಾಳಿ ಇಟ್ಟು ರಾಗಿ ಫಸಲನ್ನು ನಾಶಗೊಳಿಸಿ ರೈತರಿಗೆ ಸಿಗಬೇಕಿದ್ದ ಲಕ್ಷಾಂತರ ರೂಗಳಿಗೂ ಹೆಚ್ಚಿನ ಬೆಳೆಯನ್ನು ಹುಳು ನಾಶ ಮಾಡಿದೆ.
ರೈತಾಪಿ ವರ್ಗ ತಮ್ಮಲ್ಲಿರುವ ಅಲ್ಪ ಪ್ರಮಾಣದ ಸವಲತ್ತುಗಳಿಂದ ಬೆಳೆದ ಬೆಳೆಯು ನಾಶವಾಗಿರುವುದರಿಂದ ಬೆಳೆಯನ್ನೇ ನಂಬಿರುವ ರೈತರು ಮುಂದಿನ ಪರಿಸ್ಥಿತಿ ಬಗ್ಗೆ ಯೋಚಿಸುತ್ತಿದ್ದಾರೆ, ಅವರು ಹೇಳುವಂತೆ ಮುಂಜಾನೆ ಹೊತ್ತು ಇಂತಹ ಹುಳುಗಳು ರಸ್ತೆಯಲ್ಲೇ ಹರಿದುಕೊಂಡು ಹೋಗುತ್ತವೆ, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪ ತಾಳದೆ ಹೊಲದ ಬದುಗಳಲ್ಲಿ ಹರಿದಾಟಿ ಅಲ್ಲಿರುವ ಹುಲ್ಲನ್ನು ತಿನ್ನುತ್ತಿವೆ, ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಹುಳುಗಳು ಬೆಳೆಯನ್ನು ನಾಶ ಮಾಡುತ್ತವೆ ಎಂದ ಅವರು ಈ ಬಗ್ಗೆ ಕೃಷಿ ಇಲಾಖೆಗೆ ತಿಳಿಸಿದರೂ ಅವರು ನಿರ್ಲಕ್ಷದಿಂದಿದ್ದಾರೆ  ಎಂದು ತಿಳಿಸಿದರಲ್ಲದೆ ಸಕರ್ಾರ ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ ರೈತರ ಆಥರ್ಿಕ ಪರಿಸ್ಥಿತಿ ಸುಧಾರಿಸುವಂತೆ ಆ ಭಾಗದ ಮುಖಂಡ ಸಾಲ್ಕಟ್ಟೆ ಶ್ರೀನಿವಾಸ ಆಗ್ರಹಿಸಿದ್ದಾರೆ. 





ನೇಕಾರರ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಜನ ಹೊರಡಲು ದೇವಾಂಗ ಸಂಘದ ಮನವಿ.

                                  
ಚಿಕ್ಕನಾಯಕನಹಳ್ಳಿ,ಅ.26 :  ತುಮಕೂರಿನಲ್ಲಿ ಇದೇ 28ರ ಭಾನುವಾರದಂದು ನಡೆಯಲಿರುವ ಜಿಲ್ಲಾ ನೇಕಾರರ ಸಮಾವೇಶಕ್ಕೆ ತಾಲ್ಲೂಕಿನ ಎಲ್ಲಾ ನೇಕಾರ ಬಂಧುಗಳು ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಪುರಸಭಾಧ್ಯಕ್ಷ  ಹಾಗೂ ದೇವಾಂಗ ಸಮುದಾಯದ ಮುಖಂಡ ಸಿ.ಟಿ.ವರದರಾಜು ಮನವಿ ಮಾಡಿದರು.
ಪಟ್ಟಣದ ಬನಶಂಕರಿ ಕಲ್ಯಾಣ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೇಕಾರರಲ್ಲಿ 27 ಒಳಪಂಗಡಗಳಿದ್ದು ಈ ಎಲ್ಲಾ ಪಂಗಡಗಳು ಸಕರ್ಾರಿ ಸವಲತ್ತುಗಳಿಂದ ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾವೆ, ಈ ಸೌಲಭ್ಯಗಳನ್ನು ಪಡೆಯಲು ನೇಕಾರರ ಸಮುದಾಯ ಸಮಾವೇಶ ನಡೆಸುತ್ತಿದೆ, ಅದಕ್ಕಾಗಿ ನೇಕಾರ ಸಮುದಾಯದವರಾದ ದೇವಾಂಗ ಸಮಾಜ, ಪದ್ಮಶಾಲಿ ಸಮಾಜ, ತೊಗಟವೀರ ಸಮಾಜ, ಕುರುಹಿನಶೆಟ್ಟಿ ಸಮಾಜ, ಪಟ್ಟಸಾಲೆ ಸಮಾಜ ಸೇರಿದಂತೆ  ಎಲ್ಲಾ ನೇಕಾರರು ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು, 
 ಆಥರ್ಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯ ಸೌಲಭ್ಯಗಳಲ್ಲಿ ಹಿಂದುಳಿದಿರುವ ನಾವು ಈ ಸಮಾವೇಶದ ಮುಖಾಂತರ ಸಂಘಟನೆಗೊಂಡು ಸಕರ್ಾರದ ಸೌಲಭ್ಯಗಳನ್ನು ಪಡೆಯಬೇಕಾಗಿದೆ ಎಂದು ತಿಳಿಸಿದ ಅವರು ಸಮಾವೇಶದ ದಿವ್ಯ ಸಾನಿಧ್ಯ್ಯವನ್ನು ದಯಾನಂದಪುರಿಸ್ವಾಮಿಜಿ, ಪ್ರಭುಲಿಂಗಸ್ವಾಮಿಜಿ, ದಿವ್ಯಜ್ಞಾನಾನಂದಪುರಿ ಸ್ವಾಮಿ, ಶಂಕರಶಿವಾಚಾರ್ಯಸ್ವಾಮಿ, 1008 ಜಗದ್ಗುರು ಬಸವರಾಜಪಟ್ಟದಾರ್ಯಸ್ವಾಮಿರವರು ವಹಿಸಲಿದ್ದು ಸಮಾಜದ ಮುಖಂಡ ಎಂ.ಡಿ.ಲಕ್ಷೀನಾರಾಯಣ ಸಮಾವೇಶದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ  ರಾಜ್ಯದಲ್ಲಿ 80ಲಕ್ಷ ಹಾಗೂ ಜಿಲ್ಲೆಯಲ್ಲಿ 2ಲಕ್ಷದಷ್ಟು ಜನರಿರುವ ನೇಕಾರ ಸಮುದಾಯ ಒಗ್ಗಟ್ಟಾಗಿ ಸಮಾವೇಶಗೊಂಡು ನೇಕಾರರ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ ಎಂದ ಅವರು ಸಮಾವೇಶಕ್ಕೆ ತಾಲ್ಲೂಕಿನಿಂದ ಹತ್ತು ಜನಪದ ಕಲಾತಂಡಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದರು.
ದೇವಾಂಗ ಸಂಘದ ಮುಖಂಡ ಬನಶಂಕರಯ್ಯ ಮಾತನಾಡಿ ತಾಲ್ಲೂಕಿನಲ್ಲಿ 10ಸಾವಿರಕ್ಕೂ ಹೆಚ್ಚು ಜನರಿರುವ ಇರುವ ನೇಕಾರರು ಸಮಾವೇಶಕ್ಕೆ ಪಾಲ್ಗೊಂಡು ನೇಕಾರ ಸಮುದಾಯದ ಸಮಸ್ಯೆಗಳನ್ನು ತಿಳಿಸಬೇಕು ಎಂದ ಅವರು ಆ ಮೂಲಕ ನೇಕಾರರು ಎಚ್ಚೆತ್ತುಕೊಂಡು ಒಗ್ಗಟ್ಟಾಗಿ ನಮ್ಮ ಸಂಘಟನೆಯನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ದೇವಾಂಗ ಸಂಘದ ಅಧ್ಯಕ್ಷ ಕೋದಂಡರಾಮಯ್ಯ, ಸಹಕಾರ್ಯದಶರ್ಿ ಅಶೋಕ್, ಕುರುಹೀನಶೆಟ್ಟಿ ಸಮಾಜದ ನಾಗರಾಜು, ಪ್ರಮೋದ್, ನೇಕಾರ ಧನಪಾಲ್, ರಂಗನಾಥ್ ಉಪಸ್ಥಿತರಿದ್ದರು.


ಚಿ.ನಾ.ಹಳ್ಳಿ: ಕಾಂಗ್ರೇಸ್ ಪೂರ್ವಭಾವಿ ಸಭೆ
ಚಿಕ್ಕನಾಯಕನಹಳ್ಳಿ,ಅ.26 : ಕಾಂಗ್ರೆಸ್ನೊಂದಿಗೆ ಬನ್ನಿ-ಬದಲಾವಣೆ ತನ್ನಿ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ನವಂಬರ್ 6ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಏರ್ಪಡಿಸಿದ್ದು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವಭಾವಿ ಸಭೆಯನ್ನು ಇದೇ 29ರ ಸೋಮವಾರ ಮಧ್ಯಾಹ್ನ 12ಕ್ಕೆ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಸಂಘಟನಾ ಉಸ್ತುವಾರಿ  ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫಿ ಅಹಮದ್, ಮಾಜಿ ಶಾಸಕ ಆರ್.ನಾರಾಯಣ್, ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು  ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.