Friday, February 1, 2013


ವಸತಿ ಯೋಜನೆಯ ಆಯ್ಕೆಯಲ್ಲಿ ಇ.ಓ.ದಯಾನಂದರ ಅಧಿಕಾರ ದುರುಪಯೋಗ: ಜನಪ್ರತಿನಿಧಿಗಳ ಆಕ್ರೋಶ.
ಚಿಕ್ಕನಾಯಕನಹಳ್ಳಿ,ಫೆ.01: ವಸತಿ ಯೋಜನೆಯ ಫಲಾನುಭವಿಗಳ ಆಯ್ಕೆ ವಿಷಯದಲ್ಲಿ  ಹಿಂದಿನ ಇ.ಓ. ದಯಾನಂದ ರವರು ಹಣ ಪಡೆದು ಏಕಪಕ್ಷೀಯವಾಗಿ ವತರ್ಿಸಿ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯಸಿ ಕರ್ತವ್ಯ ಲೋಪವೆಸಗಿದ್ದಾರೆ ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಫಲಾನುಭವಿಗಳ ಆಯ್ಕೆ ಸರಿಯಾಗಿ ನಡೆಯಬೇಕೆಂದು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು  ಆಗ್ರಹಿಸಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ನಡೆದ ಬಸವ, ಇಂದಿರಾ ಆವಾಜ್ ವಸತಿ ಯೋಜನೆಯಡಿ ಫಲಾನುಭವಿಗಳ ಅನುಮೋದನಾ ಪಟ್ಟಿಗೆ ಜಾಗೃತಿ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳು ಆರೋಪಿಸಿದರು. 
  ಬಸವ ಇಂದಿರಾ ರಾಜೀವ್ ಗಾಂಧಿ ವಸತಿ ಯೋಜನೆಯಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಹಿಂದಿನ ತಾಲ್ಲೂಕು ಪಂಚಾಯಿತಿ ಕಾರ್ಯನಿವರ್ಾಹಣಾಧಿಕಾರಿ ಎನ್.ಎಂ. ದಯಾನಂದ ರವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿ ಮನಸೋಇಚ್ಛೆ ಹಣ ಪಡೆದು ಆಯ್ಕೆ ಮಾಡಿದ್ದಾರೆ ಎಂದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಆರೋಪ ಮಾಡಿದರು.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಕ್ಕಾಪಟ್ಟಣ ಹೋಬಳಿ ಹೊರತು ಪಡಿಸಿ ಉಳಿದ ಹೋಬಳಿಗಳನ್ನು ನಿರ್ಲಕ್ಷಿಸಿ ಬುಕ್ಕಾಪಟ್ಟಣ ಹೋಬಳಿಗೆ 1781 ಮನೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. 
ಶಿರಾ ತಾಲ್ಲೂಕಿನ ತಾ.ಪಂ.ಸದಸ್ಯ ರಂಗನಾಥಪ್ಪ ಮಾತನಾಡಿ ಕಳೆದ ಭಾರಿ 164 ಮನೆಗಳನ್ನು ಮಂಜೂರು ಮಾಡಿದ್ದು 2ನೇ ಅವಧಿಯಲ್ಲಿ ಮಂಜೂರಾತಿಗೆ ಶಾಸಕ ಸಿ.ಬಿ.ಸುರೇಶ್ಬಾಬು ವಸತಿ ಸಚಿವ ವಿ.ಸೋಮಣ್ಣರವರನ್ನು ಭೇಟಿ ಮಾಡಿ ಅತಿ ಹಿಂದುಳಿದ ಗುಡ್ಡಗಾಡು ಪ್ರದೇಶವಾದ ತಾಲ್ಲೂಕಿಗೆ ಹೆಚ್ಚುವರಿ 2000 ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ ಪರಿಣಾಮ ತಾಲ್ಲೂಕಿಗೆ ಪುನಃ 2000 ಮನೆಗಳನ್ನು ದೊರಕಿಸಲು ಸಾಧ್ಯವಾಯಿತು ಎಂದರು. 
  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ಪ್ರತಿ ಗ್ರಾಮಪಂಚಾಯ್ತಿ ಗ್ರಾಮ ಸಭೆಗಳಲ್ಲಿ ಗುಡಿಸಲು ರಹಿತ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಿ ಅನುಮೋದನೆಗೆ ಕಳುಹಿಸುವಂತೆ ಎರಡು ಭಾರಿ ಸೂಚಿಸಿದ್ದರು. ಸಂಬಂಧಪಟ್ಟ ಗ್ರಾಮಪಂಚಾಯ್ತಿಗಳ ಕಾರ್ಯದಶರ್ಿ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಪಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ನೀಡಿದ ನಂತರ ಬುಕ್ಕಾಪಟ್ಟಣ ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ  ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಿದವರನ್ನು ಮಾತ್ರ ಪಟ್ಟಿಗೆ ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ತಾ.ಪಂ. ಅಧ್ಯಕ್ಷ ಎಂ.ಎಂ.ಜಗದೀಶ್, ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಶಿರಾ ತಾ.ಪಂ. ಅಧ್ಯಕ್ಷೆ ಗಂಗಮ್ಮಸಿದ್ದಹನುಮಯ್ಯ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಜಾನಮ್ಮ, ತಾ.ಪಂ.ಸದಸ್ಯರಾದ ಹೇಮಾವತಿ, ಚೇತನಾ ಗಂಗಾಧರ್, ನಿರಂಜನ್, ಜಯಣ್ಣ, ಶಶಿಧರ್, ರಮೇಶ್ ಕುಮಾರ್, ಶಿವರಾಜ್, ಲತವಿಶ್ವೇಶ್ವರಯ್ಯ, ಬುಕ್ಕಾಪಟ್ಟಣ ತಾ.ಪಂ.ಸದಸ್ಯೆ ಶೈಲಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ, ಶಿರಾ ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ವೇದಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.   
ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ ಜೇಷ್ಟತಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಫೆ.01:  ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್-2 ವೃಂದಕ್ಕೆ ಬಡ್ತಿ ಸಂಬಂಧ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಜಿಲ್ಲಾವಾರು, ವಿಷಯವಾರು ಪದವಿ ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಸೇವಾನಿರತ ಶಿಕ್ಷಕರ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಬಿಇಒ ಕಛೇರಿ ಸೂಚನಾ ಫಲಕದಲ್ಲಿ ಪ್ರಕಟಿಲಾಗಿದೆ ಇಂದು ಬಿ.ಇ.ಓ. ಸಾ.ಚಿ. ನಾಗೇಶ್ ತಿಳಿಸಿದ್ದಾರೆ. 
.  ಜನವರಿ 01 2013ರೊಳಗೆ ಅರ್ಹ ವಿದ್ಯಾರ್ಹತೆಯನ್ನು ಹೊಂದಿದವರು  ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಆಕ್ಷೇಪಣೆಗಳನ್ನು ಅರ್ಹ ಶಿಕ್ಷಕರುಗಳಿಂದ ಆಹ್ವಾನಿಸಲಾಗಿದೆ. ಹೊಸದಾಗಿ ಹೆಸರು ಸೇರ್ಪಡೆ ಅಥವಾ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಲ್ಲಿ ಅಥವಾ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಶಿಕ್ಷಕರು ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕರಿಗೆ ದಿನಾಂಕ 06.02.2013 ರೊಳಗಾಗಿ ಸಲ್ಲಿಸಲು ಹಾಗೂ ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಮಾನ್ಯ ಮಾಡಲಾಗುವುದಿಲ್ಲ ತಿಳಿಸಿದೆ. ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಚಿ.ನಾ.ಹಳ್ಳಿ ಜಿ.ಎಫ್.ಜಿ.ಸಿ.ಯಿಂದ ಎನ್.ಎಸ್.ಎಸ್.ಶಿಬಿರ


ಚಿಕ್ಕನಾಯಕನಹಳ್ಳಿ,ಫೆ.01:  ಸಕರ್ಾರಿ ಪ್ರಥಮ ದಜರ್ೆ ಕಾಲೇಜು 2012-2013 ಸಾಲಿನ  ವಾಷರ್ಿಕ ವಿಶೇಷ ಶಿಬಿರವನ್ನು ಇದೇ ಫೆಬ್ರವರಿ 2 ರಿಂದ 8 ವರೆಗೆ 7 ದಿನಗಳ ಕಾಲ ಕಂದಿಕೆರೆಯಲ್ಲಿ ನಡೆಯಲಿದೆ. 
ಫೆಬ್ರವರಿ 2ನೇ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯುವ ಶಿಬಿರದ ಉದ್ಘಾಟನಾ ಸಮಾರಂಭವನ್ನು  ಶಾಸಕ ಸಿ.ಬಿ.ಸುರೇಶ್ಬಾಬು  ನೇರೆವೆರಿಸಿಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ವಿ.ವರದರಾಜು ವಹಿಸಲಿದ್ದು ಕಾರ್ಯಕ್ರಮಾಧಿಕಾರಿಗಳಾದ ಶಿವರಾಮಯ್ಯ ಪ್ರಾಸ್ತಾವಿಕ ಮಾತಗಳನ್ನಾಡಲಿದ್ದಾರೆ.  
ಮುಖ್ಯ ಅತಿಥಿಗಳು ತಹಸೀಲ್ದಾರ್ ಎನ್. ಆರ್ ಉಮೇಶ್ ಚಂದ್ರ  ಜಿಲ್ಲಾ ಪಂಚಾಯಿತ್ ಸದಸ್ಯೆ ಲೋಹಿತ ಬಾಯಿ ಪುರಾಸಭಾಧ್ಯಕ್ಷ ಕೃಷ್ಣಮೂತರ್ಿ ತಾ.ಪಂ ಉಮಾದೇವಿ ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ಕಂದಿಕೆರೆ ಗ್ರಾ.ಪಂ. ಅಧ್ಯಕ್ಷ ಸಿ. ಲೋಕೇಶ್ ಮಾಜಿ ಜಿ.ಪಂ. ಅಧ್ಯಕ್ಷೆ ಜಯಮ್ಮ ದಾನಪ್ಪ ಶಾಂತವೀರಸ್ವಾಮಿ ಅಧ್ಯಕ್ಷ ಎನ್. ರೇವಣ್ಣ ಹಾಲು ಉತ್ಪಾತಕರ ಸಂಘದ ಅಧ್ಯಕ್ಷ ಕೆ.ನಾಗರಾಜು, ಗ್ರಾ.ಪಂ. ಸದಸ್ಯರಾದ ಕೆ.ಆರ್ ನಾಗರಾಜು, ವಸಂತಕುಮಾರ್, ಅಬ್ದುಲ್ ರಜಾಕ್ ಉಪಸ್ಥಿತರಿರುವರು. 

aPÀÌ£ÁAiÀÄPÀ£ÀºÀ½î PÉÊUÀjPÁ E¯ÁSÁªÀw¬ÄAzÀ a®ègÉ ªÁå¥ÁgÀUÁgÀjUÉ ±Á¸ÀPÀ ¹.©.¸ÀÄgÉÃ±ï ¨Á§Ä Qmï «vÀj¹zÀgÀÄ. f.¥ÀA.¸ÀzÀ¸Éå eÁ£ÀªÀÄä gÁªÀÄZÀAzÀæAiÀÄå, vÁ.¥ÀA.¸ÀzÀ¸ÀågÁzÀ ZÉÃvÀ£ÁUÀAUÁzsÀgï, ºÉêÀiÁªÀw,  PÉÊUÁjPÁ «¸ÀÛgÁuÁ¢üPÁj ¹zÀÝUÀAUÀªÀÄä ªÀÄwÛvÀgÀgÀÄ ºÁdjzÀÝgÀÄ. 
                                                    

aPÀÌ£ÁAiÀÄPÀ£ÀºÀ½î J¸ïJAJ¸ï PÁ¯ÉÃf£À «zÁåyð¤ vÀ£ÀÄ¥ÀæeÁ ¥ÀÄgÀ¸À¨sÁ PÁAiÀiÁð®AiÀÄ £ÀqɹzÀ WÀ£À vÁådå ªÀ¸ÀÄÛ ¤ªÀðºÀuÉ PÀÄjvÁV£À ¨sÁµÀt ¸ÀàzsÉðAiÀÄ°è ¥ÀæxÀªÀÄ §ºÀĪÀiÁ£À ¥ÀqÉ¢zÀÝjAzÀ UÀtgÁeÉÆåÃvÀìªÀ ¸ÀAzÀ¨sÀðzÀ°è ±Á¸ÀPÀ ¹.©.¸ÀÄgÉñï¨Á§Ä §ºÀĪÀiÁvÀ£À «vÀj¹zÀgÀÄ. ¥ÀÄgÀ¸À¨sÁzsÀåPÀë ¹.PÉ.PÀȵÀÚªÀÄÆwð, G¥ÁzsÀåPÉë UÁ¬Äwæ¥ÀÄlÖtÚ, vÀºÀ²Ã¯ÁÝgï GªÉÄñïZÀAzÀæ ºÁdjzÀÝgÀÄ.