Monday, October 31, 2011
ಚಿ.ನಾ.ಹಳ್ಳಿಗೆ ಇಂದು ಮಾಜಿ ಸಿ.ಎಂ.ಕುಮಾರಸ್ವಾಮಿ ಭೇಟಿ
ಚಿಕ್ಕನಾಯಕನಹಳ್ಳಿ,ಅ.31: ಸಕರ್ಾರಿ ಪ್ರಾಥಮಿಕ ಪಾಠಶಾಲೆ ಮತ್ತು ಸಕರ್ಾರಿ ಪ್ರೌಡಶಾಲಾ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ನವಂಬರ್ 1ರಂದು ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕಿನ ಹಂದನಕೆರೆ ಹೋಬಳಿಯ ಕಾಮಲಾಪುರದಲ್ಲಿ ಏರ್ಪಡಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಮುರುಗೇಶ್ನಿರಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಸಂಸದ ಹೆಚ್.ಡಿ.ಕುಮಾರಸ್ವಾಮಿ ನೂತನವಾಗಿ ನಿಮರ್ಿಸಿರುವ ಪ್ರೌಡಶಾಲಾ ಕಟ್ಟಡ ಹಾಗೂ ಸಂಸದ ಜಿ.ಎಸ್.ಬಸವರಾಜು ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ.
 ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಕೊಳಾಯಿ ನೀರು ಸರಬರಾಜು ಶಂಕುಸ್ಥಾಪನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಶಾಸಕ ಶಿವಲಿಂಗೇಗೌಡರು, ಜಿ.ಪಂ.ಅಧ್ಯಕ್ಷ ಡಾ.ರವಿ.ಡಿ.ನಾಗರಾಜಯ್ಯ, ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಸದಸ್ಯ ಆರ್.ಸಿ.ಆಂಜನಪ್ಪ, ತಾ.ಪಂ.ಅಧ್ಯಕ್ಷ ಬಿ.ಆರ್.ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿ ಪಾತೀಮ, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಉಪಸ್ಥಿತರಿರುವರು.
ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ:  ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು
ಚಿಕ್ಕನಾಯಕನಹಳ್ಳಿ,ಅ.31: ಪಟ್ಟಣದ ಪತ್ರಕರ್ತರೊಬ್ಬರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ತಾಲೂಕಿನ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
    ಪಟ್ಟಣದ ನೆಹರು ವೃತ್ತದಿಂದ ತೆರಳಿದ ಪ್ರತಿಭಟನಾಕಾರರು ತಾಲ್ಲೂಕು ಕಛೇರಿ ಮುಂದೆ ಕೆಲವುಕಾಲ ರಸ್ತೆತಡೆ ನಡೆಸಿ ನಂತರ ತಾಲೂಕು ಕಛೇರಿ  ಆವರಣದಲ್ಲಿ ಹಲ್ಲೆಯನ್ನು ಖಂಡಿಸಿ ಜನಪರ ಚಿಂತಕ ಒಕ್ಕೂಟ,   ರೈತಸಂಘ, ದಲಿತ ಸಮುದಾಯ, ಹಾಗೂ ಟೈಲರ್ ಅಸೋಸಿಯೇಶನ್, ಕಾಲೇಜ್ ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಎಂ.ವಿ.ನಾಗರಾಜ್ರಾವ್,  ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಗುಂಡಾಗಿರಿ ರಾಜಕಾರಣ ಮಾಡಿದವರ ವಿರುದ್ದ ಪೋಲಿಸ್ ಇಲಾಖೆ ಇನ್ನು ಪಾರದರ್ಶಕ ಸ್ಥಿತಿಗತಿ ಕೇಳುತ್ತಿದೆ ಹೊರತು ಪ್ರಕರಣದ ವಿರುದ್ದ ಯಾವುದೇ ತೀವ್ರ ತನಿಖೆ ನಡೆಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
    ಮಾಜಿ ಶಾಸಕರೊಬ್ಬರು ಹಲ್ಲೆ ನಡೆಸಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರ್ರವಲ್ಲ ಪತ್ರಿಕಾರಂಗದ ಮೇಲೆ ನಡೆಸಿದ ಹಲ್ಲೆ, ಕಳೆದ 20 ವರ್ಷಗಳಿಂದ ಪತ್ರಿಕೆಯಲ್ಲಿ ಅವರು ದುಡಿಯುತ್ತಿದ್ದಾರೆ ಎಂದರಲ್ಲದೆ,  ಸಮಾರಂಭವೊಂದರ ವರದಿಯಲ್ಲಿ  ತಮ್ಮ ಹೆಸರನ್ನು ಹಾಕಿಲ್ಲ ಎಂಬ ಕಾರಣವೊಡ್ಡಿ ಕುಟುಂಬವರ್ಗ ಹಾಗೂ ಸಹಚರರೊಂದಿಗೆ ಅವರ ಅಂಗಡಿ ಬಳಿ ಬಂದು  ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಮುಂದೆ ಇಂತಹ ಘಟನೆಗಳ ಮರುಕಳಿಸಬಾರದು ಹಾಗೂ ಪ್ರಕರಣದ ಬಗ್ಗೆ ಪೋಲಿಸರು ತೀವ್ರ ತನಿಖೆ ನಡೆಸಬೇಕೆಂದರು.
    ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಈ ರೀತಿಯ ಹಲ್ಲೆಗಳಿಂದ ವರದಿಗಾರರು ದೃತಿಕೆಡ ಬಾರದು, ಇದನ್ನು ಸವಾಲೆಂದು ಸ್ವೀಕರಿಸಿ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಮುಂದಾಗಬೇಕೆಂದ ಅವರು, ಲೇಖನಿಗೆ ಬಲವಾದ ಶಕ್ತಿ ಇದೆ, ಅದರಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದರು. ಕಾನೂನಿನ ಬಗ್ಗೆ ಅರಿವಿರುವೊಬ್ಬ ಮಾಜಿ ಶಾಸಕ ಈ ರೀತಿಯ ಕೃತ್ಯಕ್ಕೆ ಇಳಿಯಬಾರದಿತ್ತು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಅಕ್ಷಮ್ಯ ಅಪರಾಧ ಎಂದರು.
    ಜನಪರ ಚಿಂತಕ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವದಲ್ಲ್ಲಿ ಪತ್ರಿಕಾರಂಗ ತನ್ನದೇ ಆದ ಸ್ಥಾನ ಹೊಂದಿದ್ದು ಜಗತ್ತಿನ ಸರಿತಪ್ಪುಗಳನ್ನು ತಿದ್ದುವ ಕ್ಷೇತ್ರ ಇದಾಗಿದೆ,  ಅಂತಹ ಕ್ಷೇತ್ರದಲ್ಲಿ ದುಡಿಯುವವರ ಮೇಲೆ,  ಕೇವಲ ಹೆಸರು ಬರಲಿಲ್ಲವೆಂಬ ಕಾರಣವೊಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.  ಮಾಜಿ ಶಾಸಕರು ಕೇವಲ ಹೆಸರಿಗೋಸ್ಕರ ರಾಜಕೀಯ ಮಾಡುವುದಾದರೆ ಅದು ಅವರಿಗೆ ನಾಚಿಕೆಗೇಡು ತರುವ ವಿಷಯ, ಇಲ್ಲಿ ಯಾರನ್ನೂ ತೇಜೋವಧೆ ಮಾಡಲು ಹೊರಟಿಲ್ಲ ಹಲ್ಲೆ ನಡೆಸಿರುವವರ ವಿರುದ್ದ ಹೋರಾಟ ಹಾಗೂ ಮುಂದೆಂದು ಈ ರೀತಿ ಆಗಬಾರದೆಂಬ ಎಚ್ಚರಿಕೆ ಎಂದರು.
ಪ್ರತಿಭಟನೆಯಲ್ಲಿ  ರೈತ ಸಂಘದ ಸತೀಶ್ ಕೆಂಕೆರೆ, ಡಿ.ಎಸ್.ಎಸ್ನ ಲಿಂಗದೇವರು, ಪತ್ರಕರ್ತ ಚಿ.ನಿ.ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹುಳಿಯಾರಿನ ಇಬ್ರಾಹಿಂ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ತಾ.ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಶಂಕರಪ್ಪ, ಶಂಕರಲಿಂಗಪ್ಪ, ರಾಕೇಶ್,  ಸೇರಿದಂತೆ ಹಲವರು ಹಾಜರಿದ್ದರು.
ಡಿಪ್ಲೊಮೊ ಕಾಲೇಜ್ ಮಂಜೂರಾತಿಗೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಅ.31 : ತಾಲ್ಲೂಕಿನಲ್ಲಿ ತಾಂತ್ರಿಕ ತರಬೇತಿ ಕಾಲೇಜುಗಳು ಇಲ್ಲದೆ ನೂರಾರು ವಿದ್ಯಾಥರ್ಿಗಳು ಶಿಕ್ಷಣಕ್ಕಾಗಿ ಬೇರೆ ಬೇರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ತಾಲ್ಲೂಕಿಗೆ ಸಕರ್ಾರಿ  ಇಂಜನಿಯರಿಂಗ್ ಮತ್ತು ಡಿಪ್ಲೊಮೊ ಕಾಲೇಜನ್ನು ಮಂಜೂರು ಮಾಡಬೇಕಾಗಿ ಅಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲ್ಲೂಕು ದಂಡಾಧಿಕಾರಿ ಉಮೇಶ್ವಂದ್ರರವರಿಗೆ ಮನವಿ ಅಪರ್ಿಸಿತು.
    ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲ್ಲೂಕ್ ಪ್ರಮುಕ್ ಚೇತನ್ಪ್ರಸಾದ್ ತಾಲ್ಲೂಕನ್ನು ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿದ್ದು ತಾಂತ್ರಿಕ ತರಬೇತಿ ಕಾಲೇಜುಗಳು  ಅತ್ಯವಶ್ಯಕವಾಗಿದೆ ಇದರಿಂದ ಇಂಜನಿಯರಿಂಗ್ ಮತ್ತು ಡಿಪ್ಲೊಮೊ ಕಾಲೇಜುಗಳು ಬೇಕಾಗಿವೆ ಇದನ್ನು ಪರಿಗಣಿಸಿ ಸಕರ್ಾರ  ಸೂಕ್ತಗಮನ ಹರಿಸಿ ಕಾಲೇಜನ್ನು ಮಂಜೂರು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರ ಕಾರ್ಯದಶರ್ಿ ದಿಲೀಪ್, ರವಿ, ನಂದನ್, ನಂದನ್, ಮಧು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.