Monday, August 2, 2010


ಕುಪ್ಪೂರು ಶ್ರೀಗಳ ಹುಟ್ಟು ಹಬ್ಬದಂದು ನೀರಾವರಿಗಾಗಿ 67 ಸಂಘಟನೆಗಳಿಂದ ಚಚರ್ೆ

ಚಿಕ್ಕನಾಯಕನಹಳ್ಳಿ,ಆ2: ಜನತೆಗೆ ಅಗತ್ಯವಾಗಿರುವುದು ನೀರಾವರಿ ಸೌಲಭ್ಯ ಕಲ್ಪಿಸಲು ಇಂದು ತಾಲೂಕಿನಲ್ಲಿ ನೀರಾವರಿ ಹೋರಾಟದಿನವನ್ನಾಗಿ ಆಚರಿಸಲಾಗಿತ್ತಿದೆ ಎಂದು ಡಾ.ಯತೀಶ್ವರ ಶಿವಚಾರ್ಯಸ್ವಾಮೀಜಿ ಹೇಳಿದರು.

ತಾಲೂಕಿನ ಕಪ್ಪೂರು ಗದ್ದಿಗೆ ಮಠದಲ್ಲಿ ಯತೀಶ್ವರ ಶಿವಚಾರ್ಯಸ್ವಾಮಿ 36ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಮ್ಮ ಜನ್ಮದಿನವನ್ನು ನೀರಾವರಿ ಹೋರಾಟ ದಿನವನ್ನಾಗಿ ಆಚರಿಸಲು ಸಂಕಲ್ಪಿಸಲಾಗಿದೆ ಇದಕ್ಕೆ ತಾಲೂಕಿನ 67ಸಂಘಟನೆಗಳು ಬೆಂಬಲ ಸೂಚಿಸಿದ್ದು ಮುಂದೆ ವಿವಿಧ ಹೋರಾಟಗಳನ್ನು ರೂಪಿಸಲಾಗುವುದು ಎಂದರು.

ಹೊಸದುರ್ಗದ ಭಗೀರತ ಮಠದ ಪುರಷೋತ್ತಮಾನಂದ ಸ್ವಾಮೀಜಿ ಮಾತನಾಡಿ ಮಾನವ ಜನ್ಮವನ್ನು ಸನ್ಮಾರ್ಗದ ಮೂಲಕ ಸಾರ್ಥಕತೆ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಆರೋಗ್ಯ ತಪಾಸಣೆ ಶಿಬಿರದ ಮುಖ್ಯಸ್ಥರಾದ ಡಾ.ಜಿ.ಪರಮೇಶ್ವರಪ್ಪ ಮಾತನಾಡಿ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಮಠದ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ ಮತ್ತು ಸುತ್ತಮುತ್ತಲಿನ ನೂರಾರು ಮಂದಿಗೆ ವಿವಿಧ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.


ಚಿಕ್ಕನಾಯಕನಹಳ್ಳಿ,ಜು.30: ಭವಿಷ್ಯದ ಬಗೆಗೆ ಹಲವು ಹೊಂಗನಸುಗಳನ್ನು ಹೊತ್ತು ಹೊಸ ಪರಿಸರದಲ್ಲಿ ಪ್ರವೇಶ ಪಡೆದು ಆರಂಭಿಕ ಮುಜುಗರಕ್ಕೆ ಒಳಗಾಗುವ ವಿದ್ಯಾಥರ್ಿಗಳ ಆತಂಕವನ್ನು ತಪ್ಪಿಸಲು ಸ್ಥಳೀಯ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳು ಕಿರಿಯ ವಿದ್ಯಾಥರ್ಿಗಳನ್ನು ಪರಿಚಯಿಸಿಕೊಳ್ಳಲು ಆತ್ಮೀಯವೆನಿಸುವ 'ಮಡಿಲು ಸೇರುವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಹಿರಿಯ ಮತ್ತು ಕಿರಿಯ ವಿದ್ಯಾಥರ್ಿಗಳಲ್ಲಿ ಅನೇಕರು ಪರಸ್ಪರ ಶುಭಾಷಯ ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ ತರುವಾಯ ಕಾಲೇಜಿನ ಅಧ್ಯಾಪಕ ವೃಂದ 2010-11ನೇ ಸಾಲಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ನೀಲ ನಕ್ಷೆಯೊಂದನ್ನು ವಿದ್ಯಾಥರ್ಿಗಳ ಎದುರು ಅನಾವರಣಗೊಳಿಸಿ ಅದರ ಯಶಸ್ಸು ಆ ಮೂಲಕ ನಿಮ್ಮಗಳ ವ್ಯಕ್ತಿತ್ವದ ವಿಕಸನದ ಸಾಧನೆಗಾಗಿ ಎಲ್ಲ ವಿದ್ಯಾಥರ್ಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಅರಿಕೆ ಮಾಡಿದರು.

ಕಾಲೇಜಿನಿ ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಗಾತ್ರದಲ್ಲಿ ಚಿಕ್ಕದಾದರೂ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಈ ಕಾಲೇಜಿನಿಂದ ಅಧಿಕ ಸಂಖ್ಯೆಯ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಅದಕ್ಕಾಗಿಯೇ ಎಲ್ಲ ಅಧ್ಯಾಪಕರನ್ನೊಳಗೊಂಡಂತೆ ನಡೆಸಿದ ತೀವ್ರತರ ಚಿಂತನೆ ಮತ್ತು ಚಚರ್ೆಯ ಫಲವಾಗಿ ಈ ನೀಲ ನಕ್ಷೆ ರೂಪಿಸಲಾಗಿದೆ. ವಿದ್ಯಾಥರ್ಿಗಳ ಆಪ್ತ ಸಮಾಲೋಚನೆ, ವಿಭಿನ್ನ ವೇದಿಕೆಗಳಲ್ಲಿ ಅವರುಗಳ ಪ್ರತಿಭಾ ಅನಾವರಣಕ್ಕೆ ಅವಕಾಶ, ವಿಚಾರ ಸಂಕಿರಣ, ಸ್ಪೋಕನ್ ಇಂಗ್ಲೀಷ್, ಗುಂಪು ಚಚರ್ೆ, ಚಚರ್ಾಸ್ಪಧರ್ೆ, ಸಮೀಕ್ಷೆ ಸಂಗತಿ ಅಧ್ಯಯನ ರಾಷ್ಟ್ರೀಯ ಸೇವಾ ಯೋಜನೆ ಇವುಗಳನ್ನೊಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೀಪನ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ ತನ್ಮೂಲಕ ಪ್ರತಿ ವಿದ್ಯಾಥರ್ಿಯ ಸವಾಂಗೀಣ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ನೀಲ ನಕ್ಷೆಯ ಯೋಜಿತ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾಥರ್ಿಗಳು ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರೋತ್ತರ ಏಳಿಗೆ ಸಾಧಿಸಲೆಂದು ಹಾರೈಸಿದರು.

ಸಮಾರಂಭದಲ್ಲಿ ಅಧ್ಯಾಪಕರುಗಳಾದ ಆರ್.ಎಂ.ಶೇಖರಯ್ಯ, ಎಸ್.ಎಲ್.ಶಿವಕುಮಾರಸ್ವಾಮಿ, ಬಿ.ಎಸ್.ಬಸವಲಿಂತಯ್ಯ, ಸಿ.ಚನ್ನಬಸಪ್ಪ, ಹೆಚ್.ಎಸ್.ಪ್ರಕಾಶ, ಶಿವಯೋಗಿ, ಆಶಾ, ಅರುಣ್ಕುಮಾರ್, ಡಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿದ್ಯಾಥರ್ಿಯರಾದ ಅನ್ನಪೂರ್ಣ ಮತ್ತು ಹೇಮ ಪ್ರಾಥರ್ಿಸಿ, ರವಿಚಂದ್ರ ಸ್ವಾಗತಿಸಿ, ದನಲಕ್ಷೀ ನಿರೂಪಿಸಿ, ಶ್ರೀನಿವಾಮೂತರ್ಿ ವಂದಿಸಿದರು.

ಕಂದಿಕೆರೆ ಶಾಂತಪ್ಪನವರ ಜಾತ್ರೆ

ಚಿಕ್ಕನಾಯಕನಹಳ್ಳಿ,ಆ2: ಜಡೇಸಿದ್ದೇಶ್ವರ ಮತ್ತು ಶಾಂತವೀರ ಸ್ವಾಮಿ 21ನೇ ವರ್ಷಬ್ದಿ ಪೂಜಾ ಮತ್ತು ಪಲ್ಲಕ್ಕಿ ಮಹೋತ್ಸವ ಇದೇ ಆಗಸ್ಟ್ 11ರಂದು ಏರ್ಪಡಿಸಲಾಗಿದೆ.

ಮಹೋತ್ಸವದಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಂತರ ಮಧ್ಯಾಹ್ನ 1-30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ 6-30ಕ್ಕೆ ಪಲ್ಲಕ್ಕಿ ಮಹೋತ್ಸವ ಜನಪದ ಕಲಾ ವೀರಗಾಸೆ ಕಥಾನಕದೊಂದಿಗೆ ಕಂದಿಕೆರೆ ರಾಜಬೀದಿಗಳಲ್ಲಿ ಏರ್ಪಡಿಸಲಾಗಿದೆ