Friday, January 21, 2011

ದಾಸ್ಯ ಗುಲಾಮಗಿರಿಯ ಬದ್ದ ವೈರಿ ವಿವೇಕಾನಂದ
ಚಿಕ್ಕನಾಯಕನಹಳ್ಳಿ,ಜ.21: ಕಾಲೇಜು ಮಟ್ಟದಲ್ಲಿನ ಯುವಕರ ಚಲ, ಹುಮ್ಮಸ್ಸಿನ ಹೋರಾಟವನ್ನು ನಮ್ಮ ದೇಶವನ್ನು ಕಟ್ಟುವುದಕ್ಕಾಗಿ ಉಪಯೋಗಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಯುವಕರಿಗೆ ಕರೆ ನೀಡಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕೇವಲ ಮಾತಿನಿಂದ ಈಡೀ ವಿಶ್ವವನ್ನೇ ಗೆದ್ದ ಸ್ವಾಮಿ ವಿವೇಕಾನಂದರು, ಮೊದಲು ತಮ್ಮನ್ನು ತಾನು ಗೆಲ್ಲುತ್ತಿದ್ದರು ಈ ರೀತಿ ಯುವಕರು ತಮ್ಮ ಸ್ವಂತಿಕೆ ಗೆಲ್ಲಲು ಮುಂದಾಗಬೇಕು ಯುವಕರು ಮುಂದಿನ ಗುರಿಗಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದ ಅವರು ಅಭಾವಿಪ ದೇಶ ಭಕ್ತ ವಿದ್ಯಾಥರ್ಿ ಸಂಘಟನೆಯಾಗಿದ್ದು ಸಂಘಟನೆಯ ಶಿಸ್ತು ಉತ್ತಮ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂದರು
ಉಪನ್ಯಾಸಕ ರವೀಶ್ ಮಾತನಾಡಿ ಕೇವಲ ಪರೀಕ್ಷೆಗಳ ಅಂಕಗಳಿಗಾಗಿ ಮಾತ್ರ ಶಿಕ್ಷಣವಲ್ಲ, ಸಮಾಜ ಅಭಿವೃದ್ದಿಗೆ ಪೂರಕವಾಗುವಂತಹ ಶಿಕ್ಷಣವನ್ನು ವಿದ್ಯಾಥರ್ಿಗಳು ಪಡೆಯಬೇಕು ಎಂದ ಅವರು, ಭಯೋತ್ಪಾದನೆಯಂತಹ ಹೀನ ಕೃತ್ಯಗಳಿಗೆ ಯುವಕರು ಒಳಗಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳು ಮಡಿಕೊಳ್ಳುತ್ತಿದ್ದಾರೆ ಇದರಿಂದ ದೇಶದ ಕೀತರ್ಿ, ಸಾಂಸ್ಕೃತಿಕತೆ ಹಾಳಾಗುವುದಲ್ಲದೆ ದೇಶದ ಕೀತರ್ಿಗೂ ಮಂಕು ಬಳಿದಂತಾಗುತ್ತದೆ ಎಂದರು. ವಿವೇಕಾನಂದರಂತಹ ಮಹಾನ್ ದಾರ್ಶನಿಕರು ಮತ್ತೊಮ್ಮೆ ಹುಟ್ಟಿ ಬರಬೇಕೆಂದ ಅವರು, ಭಾರತವನ್ನು ಎಲ್ಲಾ ದೇಶಗಳು ಕೀಳರಿಮೆಯಿಂದ ಕಾಣುತ್ತಿದ್ದ ಸಮಯದಲ್ಲಿ ತನ್ನ ಜಾಣ್ಮೆಯಿಂದಲೇ ದೇಶದ ಕೀತರ್ಿಯನ್ನು ಬೆಳಗುತ್ತಿದ್ದರು ಎಂದರು. ವಿವೇಕಾನಂದರು ದಾಸ್ಯ, ಗುಲಾಮಗಿರಿಯನ್ನು ಕಿತ್ತೊಗೆಯಲು ಸ್ವತಂತ್ರಕ್ಕಾಗಿ ಹೋರಾಡುವ ವ್ಯಕ್ತಿಯನ್ನು ತಯಾರಿ ಮಾಡುಲು ಹಂಬಲಿಸುತ್ತಿದ್ದರು ಎಂದರು.
ನಗರ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸಾವಿರಾರು ವಿದ್ಯಾಥರ್ಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ತು.ಹಾ.ಒ.ಅಧ್ಯಕ್ಷ ಶಿವನಂಜಪ್ಪ ಹಳೇಮನೆ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ. ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಪ್ರಾಂಶುಪಾಲ ಶಿವಕುಮಾರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ನಗರ ಸಹ ಕಾರ್ಯದಶರ್ಿ ದಿಲೀಪ್ ಸ್ವಾಗತಿಸಿದರೆ, ವಿಜಯ್ ನಿರೂಪಿಸಿ, ಮನೋಹರ್ ವಂದಿಸಿ, ಕಾರ್ಯರ್ತರಾದ ರವಿ, ಮಧು, ಜಯರಾಜ್, ನವೀನ್, ಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: 2010-11ನೇ ಸಾಲಿನ ಸಕರ್ಾರಿ, ಖಾಸಗಿ, ಅನುದಾನ, ಅನುದಾನ ರಹಿತ ಪ್ರೌಡಶಾಲಾ ವಿದ್ಯಾಥರ್ಿಗಳಿಗೆ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಶಾಲೆಯಿಂದಾ 2 ವಿದ್ಯಾಥರ್ಿಗಳ 1 ತಂಡ ಈ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವುದು ಹಾಗೂ ಈ ಪರೀಕ್ಷಾ ಕಾರ್ಯಕ್ಕೆ ಒಬ್ಬರು ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಲು ಎಲ್ಲಾ ಪ್ರೌಡಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ.
ಸಾಕ್ಷಾರ ಮಿತ್ರರಿಗೆ ತರಬೇತಿ
ಚಿಕ್ಕನಾಯಕನಹಳ್ಳಿ,ಜ.21: ತಾಲೂಕಿನಲ್ಲಿರವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಕ್ಷರ ಭಾರತ್ 2012ನ್ನು ಅನುಷ್ಠಾನ ಗೊಳಿಸಲು ಇದೇ 25ರಂದು ಬೆಳಗ್ಗೆ 10 ಗಂಟೆಗೆ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಲಾಗಿದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ್ ತಿಳಿಸಿದ್ದಾರೆ.
ಜಿಲ್ಲಾ ಲೋಕ ಶಿಕ್ಷಣ ಸಮಿತಿ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅಧ್ಯಕ್ಷರುಗಳು ಶಿಬಿರದಲ್ಲಿ ಭಾಹವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚಿ.ತಾ.ಮೂ.ಗೆಳೆಯರ ಒಕ್ಕೂಟದ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: ಬೆಂಗಳೂರಿನ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 23ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದು ಬಿ.ಬಿ.ಎಂ.ಪಿ ಸೂಪರಿಟೆಂಡೆಂಟ್ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ಸಮಾರಂಭ ಉದ್ಘಾಟಿಸಿಲಿದ್ದು ಚಿ.ನಾ.ಹಳ್ಳಿ ತಾ.ಮೂ.ಗೆ.ಬಳಗದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಸುಜಯ ಮಹಲಿಂಗಪ್ಪ, ವಕೀಲ ಎಸ್.ಹನುಮಂತಯ್ಯ, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್. ಎಚ್.ಎಸ್.ಶಿವಲಿಂಗಯ್ಯ, ಕ.ಪ್ರ.ಜನತಾದಳ ಕಾರ್ಯದಶರ್ಿ ರಮೇಶ್ಬಾಬು, ಚಾಟರ್್ರ್ಡ್ ಅಕೌಂಟೆಂಟ್ ಹೆಚ್.ಸಿ.ಗುರುದತ್, ಸಿವಿಲ್ ಗುತ್ತಿಗೆದಾರ ಸಿ.ಎನ್.ಎಸ್.ಮೂತರ್ಿ, ಸಬ್ರಿಜಿಸ್ಟಾರ್ ಶ್ರೀದೇವಿರಾಮಯ್ಯ, ಆಕರ್ಿಟೆಕ್ಟ್ ಉದಯ್ಕುಮಾರ್, ವಿಜ್ಞಾನಿ ಎಸ್.ಎನ್.ರಾಮಯ್ಯ ಉಪಸ್ಥಿತರಿರುವರು.
ಕುಷ್ಠರೋಗ ಕಂಡುಬಂದರೆ ಉಚಿತ ಚಿಕಿತ್ಸೆಗಾಗಿ ಆರೋಗ್ಯಾಧಿಕಾರಿಗಳನ್ನು ಸಂಪಕರ್ಿಸಲು ಮನವಿ
ಚಿಕ್ಕನಾಯಕನಹಳ್ಳಿ.ಜ.21: ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ ಇದು ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಕಡಿತ, ನವೆ ಇಲ್ಲದ ಮಚ್ಚೆಗಳೇ ಕುಷ್ಠರೋಗ ಇರಬಹುದು. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ಕ್ರಿಮಿಯಿಂದ ಬರುತ್ತದೆ. ಇದು ಪಾಪಕರ್ಮಗಳಿಂದ ಬರುವುದಿಲ್ಲ ಮತ್ತು ವಂಶ ಪಾರಂಪರ್ಯವಲ್ಲ, ಜನ್ಮತ ಯಾರೂ ಕುಷ್ಟರೋಗಿಗಳಾಗಿ ಹುಟ್ಟುವುದಿಲ್ಲ. ಈ ರೋಗವು ಯಾರಿಗಾದರೂ ಯಾವ ವಯಸ್ಸಿನಲ್ಲಾದರೂ ಬರಬಹುದು. ಕುಷ್ಠರೋಗದ ಲಕ್ಷಣಗಳು ಕಂಡು ಬಂದ ಮೇಲೆಯಾದರೂ ಚಿಕಿತ್ಸೆ ಪಡೆಯದೇ ಹೋದಲ್ಲಿ ಅಂಗವಿಕಲತೆ ಉಂಟಾಗಬಹುದೇ ಹೊರತು ರೋಗದಿಂದ ಅಂಗವಿಕಲತೆ ಬರುವುದಿಲ್ಲ ಕುಷ್ಠರೋಗದ ಬಗ್ಗೆ ಸಲಹೆ ಮತ್ತು ಉಚಿತ ಚಿಕಿತ್ಸೆಗಾಗಿ ನಿಮ್ಮ ಹತ್ತಿರದ ಸಕರ್ಾರಿ ಆಸ್ಪತ್ರೆಗಳಲ್ಲಿ ಮತ್ತು ಸಿಬ್ಬಂದಿ ವರ್ಗದವರನ್ನು ಸಂಪಕರ್ಿಸಬಹದು ಎಂದು ತಾಲೂಕು ಆರೋಗ್ಯಾಧಿಕಾರಿಗಳ ಸಂಪಕರ್ಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿರುತ್ತಾರೆ.