Thursday, July 18, 2013

ಮಕಡೆ ಮಲಗಿದ ಮುಂಗಾರು: ತಿನ್ನೋಕಿಲ್ಲ ಬೇಳೆಕಾಳು
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.17 : ಮನ್ಲಿದ್ದ ಇಸೊವೋಸೊ ಹೆಸರುಕಾಳ್ನ ತಂದು ಹೊಲಕ್ಕೆ ಚೆಲ್ಲುದ್ವಿ, ಗಿಡ ಒಂದ ಹಂತಕ್ಕೆ ಬೆಳ್ದು ಗರ್ಭಕಟ್ಟೋಟೈಂಗೆ ಮೊಡಗರ್ಭಕಟ್ಲಿಲ್ಲ ಮಳೆಸುರಸ್ಲಿಲ್ಲ, ಉತ್ತಿದಷ್ಟು ಕಾಳೂ ಕೈ ಸೇರ್ಲಿಲ್ಲ, ದನಗಳಾದ್ರೂ ತಿನ್ನಲಿ ಅಂತ ಕೊಳ್ಳುರಿ ಬಿಚ್ಚಿ, ಕೈ ಚೆಲ್ಲಿ ಕುಂತಿವ್ನಿ. ಹೆಸರುಕಾಳಿನ್ ಕಥೆ ಹಿಂಗಾತು, ರಾಗಿ ಕಾಳಿನ್ ಕಥೆ ಹೆಂಗೋ... ಅನ್ನೊ ಯೋಚ್ನೆ ನನ್ನದು. ನಮ್ಮ ಬದುಕು ಒಂಥರಾ ಬ್ಯಾಸಾಯ ಮನೆ ಮಕ್ಳೆಲ್ಲಾ ಸಾಯ ಅನ್ನಂಗೆ ಆಗೋಗೈತೆ, ರಾಗಿನೂ ಕೈ ಕೊಟ್ರೆ ಸಿದ್ರಾಮಯ್ಯ ಕೊಟ್ಟಿರೊ ಅನ್ನ ಉಂಡ್ಕೊಂಡು ಜೀವ ಹಿಡ್ಕೊ ಬೇಕಾಗೈತೆ ಅಂತಾರೆ, ಗುಡ್ಡದ ಹಟ್ಟಿ ಬಡ ರೈತ ಚಿತ್ತಪ್ಪ.
ತಾಲ್ಲೂಕಿನಲ್ಲಿ ಮುಂಗಾರು ಮಕಾಡೆ ಮಲಗಿದೆ, ಸಣ್ಣಹಿಡುವಳಿದಾರರು ಮುಂಗಾರಿನ ಕನಸು ಬಿಟ್ಟು ಎಷ್ಟೋ ದಿನಗಳಾಗಿವೆ. ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ, ಉದ್ದು, ಹಲಸಂದೆ ಬೆಳೆಗಳು ಹಾಳಾಗಿವೆ. ಅಲ್ಲೋ ಇಲ್ಲೋ ಒಂದಷ್ಟು ಕಡೆ ಹಾಕಿರುವ ಎಳ್ಳು ಗಣೇಶನ ಹಬ್ಬದ ಎಳ್ಳುಂಡೆಗೆ ಸಿಗಬಹುದು.
ತಾಲ್ಲೂಕಿನಾದ್ಯಂತ ಸುಮಾರು 12675 ಎಕರೆ ಪ್ರದೇಶಕ್ಕೆ ಹೆಸರುಕಾಳು ಬಿತ್ತಿದ್ದಾರೆ, ತೋಗರಿ 3050, ಹಲಸಂದೆಯನ್ನು 1125 ಎಕರೆಗೆ, ಉದ್ದನ್ನು 550  ಎಕರೆ ಎಳ್ಳು 225 ಎಕರೆಯಲ್ಲಿದೆ. ಹಂದನಕೆರೆಯಲ್ಲಿ 1600, ಹುಳಿಯಾರಿನಲ್ಲಿ 1515 ಎಕರೆಯಲ್ಲಿ  ಹೆಸರು ಬಿತ್ತಿದ್ದರೆ, ಹುಳಿಯಾರಿನಲ್ಲಿ ಒಂದು ಸಾವಿರ ಎಕೆರೆಯಲ್ಲಿ ತೊಗರಿ ಬಿತ್ತಿದ್ದಾರೆ.
ಏಪ್ರಿಲ್ನಿಂದಲೇ ಆರಂಭವಾಗುವ ಮುಂಗಾರು ತಡವಾಗಿ ಆರಂಭವಾಯಿತು. ಈ ಬಾರಿ ಭರಣಿ ಮಳೆ ಕೈ ಕೊಟ್ಟಿದ್ದರಿಂದ ಹಲವರು ಹೆಸರನ್ನು ಭಿತ್ತಿದ್ದು ಕೃತಿಕಾ ಮಳೆಗೆ ಅಂದರೆ ಮೇ ಕೊನೆಯಲ್ಲಿ, 90 ದಿವಸದ ಬೆಳೆಯಾದ ಹೆಸರು, ಈ ಹೊತ್ತಿಗಾಗಲೇ ಕಾಳು ತುಂಬಿದ ಗೊಂಚಲುಗಳ ಗಿಡದಲ್ಲಿ ಅಷಾಡದ ಗಾಳಿಗೆ ತೊನೆದಾಡುತ್ತಿರಬೇಕಾಗಿತ್ತು, ಆದರೆ ಮಳೆ ಕೈ ಕೊಟ್ಟಿದ್ದರಿಂದ ಕಾಳು ತುಂಬುವುದಿರಲಿ ಗರ್ಭನೆ ಕಟ್ಟಲಿಲ್ಲವಾದ್ದರಿಂದ ಹೊಲದ ತುಂಬಾ ಬರಿ 'ಸ್ಯಾದ್ರ'ನೇ ತುಂಬಕೊಂಡಿದೆ.
 ಇನ್ನು ಉದ್ದಿನ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಹಲಸಂದೆ 4ತಿಂಗಳ ಬೆಳೆಯಾದ್ದರಿಂದ ಒಂದಿಷ್ಟು ನೆಚ್ಚಿಕೊಳ್ಳಬಹುದು, ಮುಂದಿನ ಮಳೆಗಳು ಹನಿಯದಿದ್ದರೆ ಇದಕ್ಕೂ ಅದೇ ಗತಿ, ಆದರೆ ತೋಟಗಳಲ್ಲಿ ಹಾಕಿರುವವರು ಮತ್ತು ಕಾಲಕಾಲಕ್ಕೆ ನೀರು ಕಟ್ಟಿರುವವರಿಗೆ ಕಾಳು ಸಿಗುತ್ತದೆ, ಬಡ ರೈತನ ಪಾಡು ಮಾತ್ರ ತುಸು ಕಷ್ಟವೇ, ಕಾರಣ ಕಳೆದ ಬಾರಿ ಮಳೆ ಇಲ್ಲದೆ ಬರ ದಲ್ಲಿ ನರಳಿದ ರೈತನಿಗೆ ಈ ಬಾರಿ ಮುಂಗಾರು ಕೈ ಕೊಟ್ಟಿರುವುದರಿಂದ ಮನೆಯಲ್ಲಿ ತಿನ್ನಲಿಕ್ಕೆಂದು ಇಟ್ಟುಕೊಳ್ಳಲು ಬೇಳೆ ಕಾಳುಗಳು ಇಲ್ಲವಾಗಿವೆ. 
ರಾಗಿ ಸೇರಿದಂತೆ ಸಿರಿ ಧಾನ್ಯಗಳ ಗತಿ ಏನು?: ಜುಲೈ ಆರಂಭದಿಂದ ಆಗಸ್ಟ್ 15ರವರೆಗೆ ರಾಗಿ, ಸಾವೆ, ನವಣೆ ಹಾರಕ ಬೆಳೆಗಳಿಗೆ ಸುಸಂದರ್ಭ, ರಾಗಿಯ ವಿವಿಧ ತಳಿಗಳಾದ ಇಂಡಾಫ್-5, ಇಂಡಾಫ್-8, ಜಿಪಿಯು-28, ಪಿಆರ್-202 ಭಿತ್ತನೆ ಮಾಡಲು ಅವಕಾಶವಿದೆ. ಒಟ್ಲು ಮಾಡಿ ಸಸಿ ಹಾಕುವವರಿಗೆ ಈಗಾಗಲೇ ಕಾಲ ಮೀರಿ ಹೋಗಿದೆ. ಮೃಗಶಿರಾ ಮಳೆ ಬಾರದಿರುವುದರಿಂದ ರಾಗಿ ಒಟ್ಲು ಒಣಗಿ ಹೋಗಿದೆ, ಇನ್ನೇನಿದ್ದರೂ ಸಡ್ಡೆರಾಗಿ ಅಂದರೆ ನೇರವಾಗಿ ರಾಗಿಯನ್ನು ಸಾಲು ಗುಣಿಯಲ್ಲಿ ಹಾಕುವವರೆಗೆ ಮಾತ್ರ ಅವಕಾಶವಿದೆ. ಪುನರ್ವಸು, ಪುಷ್ಯ, ಮಗ್ಗೆಮಳೆ ನೆಲಮುಟ್ಟದೆ ಮುಗಿಲಲ್ಲೇ ನಿಂತರೆ ಈ ಬಾರಿಯೂ ಬರ ಬಿದ್ದಂಗೆ ಸರಿ...,  ಓ ಪ್ರಕೃತಿಯೇ ಮುನಿಯಬೇಡ, ಮಳೆ ರಾಯನೇ ಹಾಗೆ ಮಾಡಬೇಡ ಧರೆಗಳಿದು ದಣಿದಿರುವ ಜೀವಗಳಿಗೆ ತಂಪನೆರೆಯಪ್ಪ.

ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ.
  • 19ರಂದು ಚಿತ್ರಕಲಾ ಪ್ರದರ್ಶನ, 
  • 20ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ.
  • 21 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ಸಂಪೂರ್ಣ ರಾಮಾಯಣ ನಾಟಕ. 

ಚಿಕ್ಕನಾಯಕನಹಳ್ಳಿ,ಜು.17: ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಇದೇ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಪ್ರತಿವರ್ಷದಂತೆ ಈ ವರ್ಷವು ಸಂಘಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿವೆ.  
ಜುಲೈ 19ರ ಶುಕ್ರವಾರ ಬೆಳ್ಳಿಪಲ್ಲಕ್ಕಿ ಉತ್ಸವ, 20ರಂದು ಬ್ರಹ್ಮರಥೋತ್ಸವ, 21ರಂದು ರಥೋತ್ಸವ ನಡೆಯಲಿದೆ. 
ವಾಣಿ ಚಿತ್ರಕಲಾ ಕಾಲೇಜಿನಲ್ಲಿ 19ರಿಂದ 21ರವರೆಗೆ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಪ್ರಾತ್ಯಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖ್ಯಾತ ಕಲಾವಿದ ಪ್ರಭು ಹರಸೂರು ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 20ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು 10.30ಕ್ಕೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸೀನಿಯರ್ ಗ್ರೂಪ್ಗೆ ಪ್ರವೇಶ ದರ.500ರೂ, ಗೆಲುವು ಪಡೆದವರಿಗೆ, ಪ್ರಥಮ ಬಹುಮಾನ 30ಸಾವಿರ, ದ್ವಿತೀಯ ಬಹುಮಾನ15ಸಾವಿರ, ತೃತಿಯ ಬಹುಮಾನ 7ಸಾವಿರ, 
ಜ್ಯೂನಿಯರ್ ಗ್ರೂಪ್ ಪ್ರವೇಶ ದರ 300ರೂ, ಪ್ರಥಮ ಬಹುಮಾನ 10ಸಾವಿರ ರೂ, ದ್ವಿತೀಯ ಬಹುಮಾನ 5ಸಾವಿರ, ತೃತಿಯ ಬಹುಮಾನ 3ಸಾವಿರ, ಜ್ಯೂನಿಯ್ ಸಿಂಗಲ್ ಪ್ರವೇಶ ದರ 100ರೂ ಪ್ರಥಮ ಬಹುಮಾನ 1500ರೂ, ದ್ವಿತೀಯ 1ಸಾವಿರ, ತೃತಿಯ 750, ಜ್ಯೂನಿಯರ್ ಕಪಲ್ ಪ್ರವೇಶ ದರ 150ರೂ  ಪ್ರಥಮ ಬಹುಮಾನ 2ಸಾವಿರ, ದ್ವಿತೀಯ 1ಸಾವಿರ, ತೃತಿಯ 750, ಸೀನಿಯರ್ ಕಪಲ್ ಪ್ರವೇಶ ದರ ರೂ 200, ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ, ತೃತಿಯ 1ಸಾವಿರ ರೂ ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಚಾನಲ್ನಲ್ಲಿ ಪ್ರಸಾರಗೊಳ್ಳುವುದು ಹೆಚ್ಚಿನ ವಿವರಗಳಿಗಾಗಿ 9900399920, 9980163152 ನಂ.ಗೆ ಸಂಪಕರ್ಿಸಬಹುದು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ 20ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಹಾಗೂ 22ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
20ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಇದೆ.
21ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು 21ರ ಭಾನುವಾರ ಮಧ್ಯಾಹ್ನ 3ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದೇ ಸಂಜೆ 8ಕ್ಕೆ ನವದಂಪತಿಗಳ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ವಿತರಣೆ ಮಾಡಲಿದ್ದು, ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಕೇಬಲ್ ನೆಟ್ವಕರ್್ನಲ್ಲಿ ಪ್ರಸಾರಗೊಳ್ಳಲಿದೆ.
ಕುಸ್ತಿ ಸ್ಪಧರ್ೆ: 21ರ ಭಾನುವಾರ ಪಟ್ಟಣದ ವ್ಯಾಯಾಮ ಶಾಲೆಗಳು ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಸ್ಪಧರ್ೆಯನ್ನು ಏರ್ಪಡಿಸಿದೆ, ಸಂಜೆ ಮಿತ್ರಕಲಾ ಸಂಘದ ವತಿಯಿಂದ  13ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಹಳೆಯೂರು ಶ್ರೀ ಆಂಜನೇಯಸ್ವಾಮಿ ಗುಡಿ ಬೀದಿ(ಹೂವಾಡಿಗರ ಬೀದಿ)ಯಲ್ಲಿ ನಾಟಕ ನಡೆಯಲಿದೆ.

  1. ಚುನಾವಣೆಯಲ್ಲಿ ಸ್ಪಧರ್ಿಸಿ ಲೆಕ್ಕ ಕೊಡದ ಅಬ್ಯಾಥರ್ಿಗಳ ಹೆಸರು ಪ್ರಕಟ.

                 ಚಿಕ್ಕನಾಯಕನಹಳ್ಳಿ,ಜು.17 : ಕಳೆದ ವಿಧಾನಸಭೆಯಲ್ಲಿ ಜೆಡಿಯುವಿನಿಂದ ಸ್ಪಧರ್ಿಸಿದ್ದ ಪ್ರಕಾಶ್ ಹಾಗೂ ಪುರಸಭೆ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 20ನೇ ವಾಡರ್್ನ ಶಕುಂತಲಮ್ಮ, 4ನೇ ವಾಡರ್್ನ ಶೈಲಜ, 14ನೇ ವಾಡರ್್ನಿಂದ ಬಾಬುಸಾಹೇಬ್ರವರು ಇದುವರೆವಿಗೂ ತಮ್ಮ ಚುನಾವಣಾ ವೆಚ್ಚದ ಲೆಕ್ಕಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿರುವುದಿಲ್ಲ, ಇವರು ತಮ್ಮ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡದಿದ್ದರೆ ಮುಂದಿನ ಚುನಾವಣೆಗೆ ಸ್ಪಧರ್ಿಸಲು ಅವಕಾಶವಿರುವುದಿಲ್ಲ ಎಂದು ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಒಂದು ತಿಂಗಳ ನಂತರ ಎಲ್ಲಾ ಅಭ್ಯಥರ್ಿಗಳು ತಮ್ಮ ಚುನಾವಣಾ ವೆಚ್ಚದ ಮಾಹಿತಿ ನೀಡಬೇಕು, ತಾಲ್ಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 11ಅಭ್ಯಥರ್ಿಗಳ ಪೈಕಿ ಪ್ರಕಾಶ್ರವರು ಹಾಗೂ ಪುರಸಭೆಯ 72 ಅಭ್ಯಥರ್ಿಗಳ ಪೈಕಿ ಶಕುಂತಲಮ್ಮ, ಶೈಲಜ, ಬಾಬುಸಾಹೇಬ್ರವರಿಗೆ ಈಗಾಗಲೇ ಒಂದು ಬಾರಿ ರಿಜಿಸ್ಟಾರ್ ನೋಟಿಸ್ ಹಾಗೂ ಮೊದ್ದಾಂ ನೋಟೀಸ್ ನೀಡಿದ್ದರೂ ಇದುವರೆವಿಗೂ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ ಈ ಬಗ್ಗೆ ಚುನಾವಣಾ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಭಾರತ ಚುನಾವಣಾ ಆಯೋಗದ ಪ್ರಕಾರ 300ಕ್ಕೂ ಹೆಚ್ಚು ಜನರಿದ್ದು ಮತಗಟ್ಟೆಯಿಂದ ಅವರು 2.ಕಿ.ಮೀಯಿಂದ ದೂರವಿದ್ದರೆ ಆ ಪ್ರದೇಶದಲ್ಲಿ ಮತಗಟ್ಟೆ ಆರಂಭಿಸುವುದಾಗಿ ಸೂಚನೆಯಿದೆ. ತಾಲ್ಲೂಕಿನಲ್ಲಿ ಅಂತಹ ಪ್ರದೇಶ ಯಾವುದೂ ಇಲ್ಲವೆಂದು ತಿಳಿಸಿದರು. ತಾಲ್ಲೂಕಿನಲ್ಲಿ ತೆರವಾಗಿರುವ ತೀರ್ಥಪುರ, ದೊಡ್ಡ ಎಣ್ಣೆಗೆರೆ, ಕುಪ್ಪೂರು, ದಸೂಡಿ, ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 7ರಂದು ಬುಧವಾರ 8ಕ್ಕೆ ಮತ ಎಣಿಕೆ ನಡೆಯಲಿದೆ.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತಾರ್ ಎಲ್.ಎಸ್.ಶಿವಶಂಕರ್  ಉಪಸ್ಥಿತರಿದ್ದರು.