Wednesday, December 8, 2010



: ಕೆ.ಎಸ್.ಕೆ.ವಿರುದ್ದ ಆರೋಪ ಮಾಡಲು ಟಿ.ಬಿ.ಜೆ.ಯವರಿಗೆ ನೈತಿಕ ಹಕ್ಕಿಲ್ಲ: ಸುರೇಶ್ ಹಳೇಮನೆ
ಚಿಕ್ಕನಾಯಕನಹಳ್ಳಿ,ಡಿ.6: ನಮ್ಮ ತಾಲೂಕನ್ನು ಸದಾ ಮಲತಾಯಿ ಧೋರಣೆಯಲ್ಲೇ ಅಭಿವೃದ್ಧಿಯಿಂದ ದೂರ ಮಾಡಿದ ಟಿ.ಬಿ.ಜಯಚಂದ್ರರವರಿಗೆ ನಮ್ಮ ಮಾಜಿ ಶಾಸಕರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲವೆಂದು ಬಿ.ಜೆ.ಪಿ. ಮಂಡಲ ಪ್ರಧಾನ ಕಾರ್ಯದಶರ್ಿ ಸುರೇಶ್ ಹಳೇಮನೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರು ಹಾಗೂ ಶಿರಾ ವಿಧಾನಸಭಾ ಸದಸ್ಯರು ಆದ ಟಿ ಬಿ ಜಯಚಂದ್ರ ರವರು ತಮ್ಮ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಬಿ ಜೆ ಪಿ ಮಾಜಿ ಶಾಸಕರೊಬ್ಬರು ಚಿಕ್ಕನಾಯಕನಹಳ್ಳಿಗೆ ಹೇಮಾವತಿ ಹರಿಯುತ್ತದೆಂದು ಸುಳ್ಳು ಹೇಳಿದ್ದಾರೆ ಆ ತರಹದ ಯಾವುದೇ ಪ್ರಯತ್ನ ನಡೆದಿಲ್ಲ ಚೀಫ್ ಎಂಜಿನಿಯರ್ ರವರು ಸಕರ್ಾರಕ್ಕೆ ವರದಿಯನ್ನು ಮಾತ್ರ ನೀಡಿದ್ದಾರೆ, ನಾನು ಸದನದ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನ ಸಮಿತಿಯ ಅಧ್ಯಕ್ಷನಾಗಿರುವುದರಿಂದ ಈ ಎಲ್ಲ ವಿಷಯಗಳನ್ನು ಪರಿಶೀಲಿಸಿ ಸತ್ಯವನ್ನು ಅನಾವರಣಗೊಳಿಸಿದ್ದು ಈ ರೀತಿ ನೀರಾವರಿ ವಿಷಯಗಳನ್ನು ಬಹಿರಂಗಪಡಿಸಬಾರದು ಆದರೆ ನಾನು ಈಗಾಗಲೆ ಕಳ್ಳಂಬೆಳ್ಳ ಶಿರಾ ಕೆರೆಗೆ ಹೇಮಾವತಿ ನೀರನ್ನು ಹರಿಸಿ ಅನುಭವಸ್ಥನಾಗಿದ್ದೇನೆ. ಹಾಗೆಯೇ ಚಿಕ್ಕನಾಯಕನಹಳ್ಳಿಗೂ ನೀರನ್ನು ಹರಿಸಲು ಸಕರ್ಾರದೊಳಗೆ ಗೌಪ್ಯವಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದಿದ್ದಾರಲ್ಲದೆ, ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಈ ಮಾತುಗಳನ್ನಾಡಿರುವ ಜಯಚಂದ್ರ ಸಚಿವರಾಗಿದ್ದಾಗ ಮಾಡಿದ್ದೇನು ಎಂದು ಸುರೇಶ್ ಪ್ರಶ್ನಿಸಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆಯೂ ಚಿಕ್ಕನಾಯಕನಹಳ್ಳಿಯಲ್ಲಿಯೇ ಇದ್ದ ಅವರ ಕಛೇರಿಗೆ ಬಾರದ, ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸದೆ ಚಿಕ್ಕನಾಯಕನಹಳ್ಳಿಯ ಪ್ರಗತಿ ಕಾರ್ಯಗಳನ್ನು ಸದಾ ಕಡೆಗಣಿಸುತ್ತಲೇ ಬಂದಿರುವ ಇವರಿಂದ ನಾವು ಹೇಳಿಸಿಕೊಳ್ಳಬೇಕಾದ್ದು ಏನು ಇಲ್ಲವೆಂದಿದ್ದಾರೆ.
ಈಗಾಗಲೇ ನೀರಾವರಿ ಬಗ್ಗೆ ಬಿ ಜೆ ಪಿ ಸ್ಪಷ್ಟ ನಿಲುವನ್ನು ತಳೆದಿದ್ದು, ಈ ಯೋಜನೆ ಅನುಷ್ಟಾನಗೊಳ್ಳುತ್ತದೆಂಬ ಧೃಡ ವಿಶ್ವಾಸವಿರುವಾಗ ಅದನ್ನು ನಾನೇ ಮಾಡಿದೆನೆಂದು ಹೇಳಿಕೊಳ್ಳಲು ಜಯಚಂದ್ರರವರು ಈ ರೀತಿಯ ಕೆಳಮಟ್ಟದ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿರುವುದು ನಾಚಿಕೆಗೇಡಿನ ವಿಷಯ. ತಮ್ಮದೇ ಸಕರ್ಾರವಿದ್ದು, ತಾವೇ ಸಚಿವರಾಗಿದ್ದು, ಸಾಧಿಸಲಾಗದ್ದನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಂಡು ಸಾಧಿಸುತ್ತೇನೆ ಎಂದು ಹೇಳುತ್ತಲೇ ಭಾ ಜ ಪಾ ವಿರುದ್ದ ಅಪಪ್ರಚಾರ ಮಾಡುತ್ತಿರುವ ಜಯಚಂದ್ರರವರು ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲಿ. ನಮ್ಮ ಪಕ್ಷದ ಮಾಜಿ ಶಾಸಕರ ಬಗ್ಗೆ ಮಾತನಾಡುವ ಸಾಹಸಕ್ಕೆ ಇನ್ನು ಮುಂದೆ ಮುಂದಾದರೆ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇನ್ನು ಒಂದು ಅಂಶ ನೆನಪಿರಲಿ ಸದನದ ಸಮಿತಿ ಅಧ್ಯಕ್ಷರಾಗಿ ಪಡೆದವೆಂದು ಹೇಳುತ್ತಿರುವ ವಿಷಯವನ್ನು ಸಕರ್ಾರದಿಂದ ಪಡೆಯಲು ಸಾಮಾನ್ಯ ವ್ಯಕ್ತಿಯಾದರೆ ಸಾಕು, ಮಾಹಿತಿ ಹಕ್ಕಿನಡಿ ಪಡೆಯಬಹುದು. ಅದನ್ನು ಹೇಳಲು ಇಷ್ಟೊಂದು ದೊಡ್ಡ ಡೌಲು-ಡಂಗೂರ ಅವಶ್ಯಕತೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಸ್ಪದರ್ಿಸುವ ಉಮೇದಿನಲ್ಲಿ ಚಿಕ್ಕನಾಯಕನಹಳ್ಳಿಗೆ ವಾರಕ್ಕೆರಡು ಬಾರಿ ಆಗಮಿಸುವ ಮಾತನಾಡುತ್ತಿರುವವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ನಮ್ಮ ಪಕ್ಷ ಸಮರ್ಥವಾಗಿದೆ ಎಂದು ಸುರೇಶ್ ಹಳೇಮನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುಡುಗಾಡು ಸಿದ್ದರಿಗೆ ನಿವೇಶನ ಒದಗಿಸಲು ಶ್ರಮಿಸುವೆ: ಪುರಸಭಾ ಅಧ್ಯಕ್ಷ ರಾಜಣ್ಣ
ಚಿಕ್ಕನಾಯಕನಹಳ್ಳಿ,ಡಿ.8: ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ 53ನೇ ಪರಿನಿವರ್ಾಣ ದಿನವನ್ನು ಪಟ್ಟಣದ ಕೇದಿಗೆಹಳ್ಳಿ ಗುಂಡುತೋಪಿನ ಶ್ರಮಿಕ ವರ್ಗದ ಬಿಡಾರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ರವರು ದಲಿತರ ಉದ್ದಾರಕ್ಕಾಗಿ ಸಾಕಷ್ಟು ಶ್ರಮಿಸಿದ್ದು, ಅವರ ಪರಿನಿವರ್ಾಣ ದಿನವನ್ನು ಜಾಗೃತಿ ವೇದಿಕೆ ಈ ಬಿಡಾರದಲ್ಲಿ ಹಮ್ಮಿಕೊಂಡಿರುವುದು ಸಮಂಜಸವಾಗಿದ್ದು, ಇಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸಿಕೊಂಡು ಬಂದಿರುವ ಈ ಜನಕ್ಕೆ ಶಾಶ್ವತವಾಗಿ ನಿವೇಶನವನ್ನು ನೀಡುವ ಜವಬ್ದಾರಿ ಪುರಸಭೆಯ ಮೇಲಿದ್ದು, ಶೀಘ್ರ ಇವರಿಗೆ ನಿವೇಶನವನ್ನು ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಪುರಸಭಾ ಸದಸ್ಯ ಹಾಗೂ ಜಾಗೃತಿ ವೇದಿಕೆ ಸಂಚಾಲಕ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಹಲವು ದಶಕಗಳಿಂದ ಇಲ್ಲಿ ವಾಸಿಸುತ್ತಿರುವ ಸುಡುಗಾಡು ಸಿದ್ದರು ಎಂಬ ಪರಿಶಿಷ್ಟ ಜಾತಿಯ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಜನರು ಹಲವು ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಇವರು ಚಳಿ, ಮಳೆ, ಬಿಸಲುಗಳಲ್ಲಿ ನೊಂದಿದ್ದಾರೆ, ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದ ಜಲಾವೃತಗೊಂಡಿದ್ದ ಈ ಸ್ಥಳದಲ್ಲೇ ವಾಸಿಸಿದ್ದು ಸಾವಲಾಗಿತ್ತು. ಕನಿಷ್ಟ ಮಟ್ಟದ ಸವಲತ್ತುಗಳಿಲ್ಲದೆ ಬೇಸತ್ತು ಹೋಗಿರುವ ಈ ಜನಕ್ಕೆ ಪುರಸಭೆಯ ವತಿಯಿಂದ ಶೀಘ್ರ ನಿವೇಶನ ಕೊಡಬೇಕೆಂದು ಒತ್ತಾಯಿಸಿದರು.
ಈ ಭಾಗದ ಪುರಸಭಾ ಸದಸ್ಯೆ ಧರಣಿ ಲಕ್ಕಪ್ಪ ಮಾತನಾಡಿ, ಈ ಜನರಿಗೆ ನಿವೇಶನ ಕೊಡಿಸಲು ಯಾವುದೇ ರೀತಿಯ ರಾಜಕೀಯವನ್ನು ಮಧ್ಯೆ ತರದೆ ಇವರ ಕಷ್ಟಕ್ಕೆ ಸ್ಪಂದಿಸುವುದು ಮಾನವೀಯತೆ ಗುಣ ಎಂದರು.
ಈ ಸಂದರ್ಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಇವರ ಕಷ್ಟಕ್ಕೆ ಪುರಸಭೆಯವರು ಶೀಘ್ರ ಸ್ಪಂದಿಸಬೇಕು, ಕಾನೂನು ಕಟ್ಟಲೆಗಳನ್ನೇ ಮುಂದು ಮಾಡಿಕೊಂಡು ಹೋಗದೆ, ಮಾನವೀಯ ನೆಲಗಟ್ಟಿನಲ್ಲಿ ಯೋಚಿಸಿ ಸುಡುಗಾಡು ಸಿದ್ದರಿಗೆ ಅನುಕೂಲ ಮಾಡಿಕೊಂಡಬೇಕೆಂದರು.
ಸವಿತ ಸಮಾಜದ ಮುಖಂಡ ಸುಬ್ರಹ್ಮಣ್ಯ ಮಾತನಾಡಿ ಈ ಜನರಿಗೆ ವಸತಿಯದೊಂದೆ ಸಮಸ್ಯೆಯಲ್ಲ, ಗುಡಿಸಲಿನಲ್ಲಿ ವಾಸಿಸುತ್ತಿರವುದರಿಂದ ಇವರ ಜೀವಕ್ಕೆ ಸಂಚಾಕರವಿದೆ ಎಂದರಲ್ಲದೆ, ಇತ್ತೀಚೆಗೆ ಇಲ್ಲಿಯ ಹೆಣ್ಣು ಮಕ್ಕಳೊಬ್ಬಳ ಮೇಲೆ ಅತ್ಯಾಚರವೆಸೆಗಿದ ಘಟನೆಯೂ ನಡೆದಿದೆ ಇಂದಿನ ನಾಗರೀಕ ಸಮಾಜದಲ್ಲಿ ಇನ್ನೂ ಈ ರೀತಿಯ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಾಚಿಗೆಗೇಡಿನ ವಿಷಯವೆಂದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರುಗಳಾದ ರುಕ್ಮಿಣಮ್ಮ, ಎಂ.ಎಸ್.ರವಿಕುಮಾರ್, ಡಿ.ಎಸ್.ಎಸ್.ಮುಖಂಡರುಗಳಾದ ಲಿಂಗದೇವರು, ಹೊಸಕೆರೆ ಮಲ್ಲಿಕಾರ್ಜನಯ್ಯ, ಬೋರವೆಲ್ ತಿಮ್ಮಯ್ಯ, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ.ಡಿ.07: ಕೃಷಿ ಬಗ್ಗೆ ರೈತರು ಹೆಚ್ಚು ಒತ್ತು ನೀಡಿ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರಗಳನ್ನು ರೈತರು ಉಪಯೋಗಿಸದ ನಂತರ ಒಳ್ಳೆಯ ಇಳುವರಿ ಹಾಗೂ ಸಮೃದ್ಧವಾದ ಬೆಳೆಯಿಂದ ಉತ್ತಮ ಆಹಾರ ದೊರಕುವುದು ಎಂದು ಶಾಸಕ ಸಿ.ಬಿ. ಸುರೇಶ್ಬಾಬು ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಉತ್ಸವ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವುದೇ ಸಮಸ್ಯೆಗಳನ್ನು ಹೊತ್ತು ಬರುವ ರೈತರುಗಳ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಿ, ಕೃಷಿ ಇಲಾಖೆಯಲ್ಲಿ ಸಲಕರಣೆಗಳನ್ನು ರೈತರಿಗೆ ಕಾಲಕಾಲಕ್ಕೆ ಒದಗಿಸುವುದಲ್ಲದೆ ಸಕರ್ಾರದಿಂದ ಬಂದಂತಹ ಸಾಮಾಗ್ರಿಗಳು ನೇರವಾಗಿ ರೈತರಿಗೆ ಸಿಗುವಂತೆ ಹಾಗೂ ಫಲಾನುಭವಿಗಳಿಗೆ ದೊರೆಯಬೇಕಾದ ಸೌಲಭ್ಯವನ್ನು ಅಧಿಕಾರಿಗಳು ದೊರೆಯುವಂತೆ ಮಾಡಬೇಕು ಮತ್ತು ರೈತರ ಅಭಿವೃದ್ಧಿಗೆ ಸಕರ್ಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ದುಡಿಯಬೇಕು ಎಂದರು.
ಬೆಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞ ಡಾ|| ಶಶಿಧರ್ ಮಾತನಾಡಿ ಕಾಡುಗಳನ್ನು ಬೆಳೆಸಿ ನಾಡನ್ನು ಉಳಿಸಿ ಕಾಡಿನ ನಾಶದಿಂದ ಪಕ್ಷಿ ಪ್ರಪಂಚ ನಾಶವಾಗುತ್ತಿದೆ ಇದರಿಂದ ಮರಗಳಲ್ಲಿ ಗೂಡು ಕಟ್ಟುವ ಜೇನಿನಗೂಡುಗಳು ಸಹ ಕಡಿಮೆಯಾಗುತ್ತಿದು ಜೇನುಕೃಷಿಯು ಸಹ ನಾಶವಾಗುತ್ತಿದೆ ಬೆಳೆಯಲ್ಲಿ ಇಳುವರಿ ಕಡಿಮೆಯಾಗಿ ಆಹಾರ ಪದಾರ್ಥವನ್ನು ಆಮದು ಮಾಡಿಕೊಳ್ಳುಂತಹ ಪರಿಸ್ಥಿತಿ ಬರುವಂತಾಗಿದೆ. ಕಾಡಿಲ್ಲದೆ ಮಳೆಯಿಲ್ಲ ಮಳೆಯಿಲ್ಲದೇ ಬೆಳೆಯಿಲ್ಲ ಬೆಳೆಯಿಲ್ಲದೆ ರೈತರಿಗೆ ಬದುಕಿಲ್ಲ ಇದರಿಂದಾಗಿ ರೈತರು ಕೃಷಿಯನ್ನು ಬಿಟ್ಟು ಹೊರಗಡೆ ಕೂಲಿ ಕೆಲಸಗಳಿಗಾಗಿ ವಲಸೆ ಹೋಗುತ್ತಿದ್ದಾರೆ ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಕಾಡು ಮುಖ್ಯ, ಕಾಡನ್ನು ಬೆಳೆಸಿ ಕೃಷಿಯನ್ನು ಉಳಿಸಿ ಕೃಷಿಯಿಂದ ರೈತರ ಸುಖವಾದ ಜೀವನ ಮತ್ತೆ ಸಿಗುವಂತಾಗಲಿ ಎಂದ ಅವರು ರೈತರು ಉಳುಮೆ ಮಾಡಬೇಕಾದರೆ ಕಬ್ಬಿಣದ ನೇಗಿಲಿನಿಂದ ಆಳವಾದ ಉಳುಮೆ ಮಾಡಿದರೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆಯು ಉತ್ತಮವಾಗಿ ಬಂದು ಇಳುವರಿಯು ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಬೆಳೆಸಿಕೊಂಡು ಬಂದಂತಹ ಮರಗಳಿಂದ ಮಳೆ ಬೆಳೆ ಚೆನ್ನಾಗಿ ಆಗುತ್ತಿತ್ತು ಬೆಳೆದಂತಹ ಬೆಳೆಗಳಿಂದ ನಮ್ಮ ಹಿರಿಯರು ಆರೋಗ್ಯವಾಗಿದ್ದರು. ಈಗ ಅವರು ಬೆಳಸಿದಂತಹ ಮರಗಳನ್ನು ನಾಶ ಮಾಡಿ ನಾವು ಉಳಿಸಿದಂತಹ ಪರಿಸರವೆಷ್ಟು ಎಂಬುದನ್ನು ನಾವೆ ಊಹೆ ಮಾಡಬೇಕು. ಕೃಷಿಯಲ್ಲಿ ಹೆಚ್ಚು ಲಾಭ ಮಾಡಬೇಕಾದರೆ ಹೈನುಗಾರಿಕೆ ಬೇಕು.
ವೇದಿಕೆಯಲಿ ತಾ.ಪಂ. ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಕೃಷಿ ವಿಜ್ಞಾನ ಕೇಂದ್ರದ ತಜ್ಞರಾದ ಶಿವಲಿಂಗಯ್ಯ, ತಾಲ್ಲೂಕು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಚಂದ್ರಶೇಖರ್, ಕೃಷಿ ಸಮಾಜದ ಜಿಲ್ಲಾ ಪ್ರತಿನಿಧಿ ಲೋಕೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ರಘುನಾಥ್, ಪುರಸಭಾ ಅಧ್ಯಕ್ಷ ರಾಜಣ್ಣ, ಉಪಾಧಕ್ಷೆ ಕವಿತಾಚನ್ನಬಸವಯ್ಯ, ಪುರಸಭಾ ಸದಸ್ಯ ಸಿ.ಎಸ್. ರಮೇಶ್, ತಾ.ಪಂ. ಸದಸ್ಯ ದಾಸೇಗೌಡರು, ಶಿವಕುಮಾರ್, ಕಮಲಾನಾಯಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಲಿಂಗದೇವರು ಪ್ರಾಥರ್ಿಸಿದರೆ, ರೈತಗೀತೆಯನ್ನು ನಿವರ್ಾಣೇಶ್ವರ ಬಾಲಿಕಾ ಪ್ರೌಢಶಾಲೆಯ ಮಕ್ಕಳಿಂದ ನೆರವೇರಿಸಲಾಯಿತು ರಂಗಸ್ವಾಮಿ ಸ್ವಾಗತಿಸಿದರೆ ಶ್ಯಾಮಸುಂದರ್ ನಿರೂಪಿಸಿ ಬಸಪ್ಪ ಭಾಗವತ್ ವಂದಿಸಿದರು.