Monday, October 31, 2011
ಚಿ.ನಾ.ಹಳ್ಳಿಗೆ ಇಂದು ಮಾಜಿ ಸಿ.ಎಂ.ಕುಮಾರಸ್ವಾಮಿ ಭೇಟಿ
ಚಿಕ್ಕನಾಯಕನಹಳ್ಳಿ,ಅ.31: ಸಕರ್ಾರಿ ಪ್ರಾಥಮಿಕ ಪಾಠಶಾಲೆ ಮತ್ತು ಸಕರ್ಾರಿ ಪ್ರೌಡಶಾಲಾ ಕಟ್ಟಡಗಳ ಉದ್ಘಾಟನಾ ಸಮಾರಂಭವನ್ನು ನವಂಬರ್ 1ರಂದು ಮಧ್ಯಾಹ್ನ 2.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕಿನ ಹಂದನಕೆರೆ ಹೋಬಳಿಯ ಕಾಮಲಾಪುರದಲ್ಲಿ ಏರ್ಪಡಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಮುರುಗೇಶ್ನಿರಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು ಸಂಸದ ಹೆಚ್.ಡಿ.ಕುಮಾರಸ್ವಾಮಿ ನೂತನವಾಗಿ ನಿಮರ್ಿಸಿರುವ ಪ್ರೌಡಶಾಲಾ ಕಟ್ಟಡ ಹಾಗೂ ಸಂಸದ ಜಿ.ಎಸ್.ಬಸವರಾಜು ಪ್ರಾಥಮಿಕ ಶಾಲಾ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ.
 ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಕೊಳಾಯಿ ನೀರು ಸರಬರಾಜು ಶಂಕುಸ್ಥಾಪನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಾ.ಎಂ.ಆರ್.ಹುಲಿನಾಯ್ಕರ್, ಶಾಸಕ ಶಿವಲಿಂಗೇಗೌಡರು, ಜಿ.ಪಂ.ಅಧ್ಯಕ್ಷ ಡಾ.ರವಿ.ಡಿ.ನಾಗರಾಜಯ್ಯ, ಉಪಾಧ್ಯಕ್ಷೆ ಲಲಿತಮ್ಮ ಮಂಜುನಾಥ್, ಸದಸ್ಯ ಆರ್.ಸಿ.ಆಂಜನಪ್ಪ, ತಾ.ಪಂ.ಅಧ್ಯಕ್ಷ ಬಿ.ಆರ್.ಸೀತಾರಾಮಯ್ಯ, ಉಪಾಧ್ಯಕ್ಷೆ ಬಿಬಿ ಪಾತೀಮ, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ ಉಪಸ್ಥಿತರಿರುವರು.
ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ:  ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು
ಚಿಕ್ಕನಾಯಕನಹಳ್ಳಿ,ಅ.31: ಪಟ್ಟಣದ ಪತ್ರಕರ್ತರೊಬ್ಬರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ತಾಲೂಕಿನ ವಿವಿಧ ಜನಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
    ಪಟ್ಟಣದ ನೆಹರು ವೃತ್ತದಿಂದ ತೆರಳಿದ ಪ್ರತಿಭಟನಾಕಾರರು ತಾಲ್ಲೂಕು ಕಛೇರಿ ಮುಂದೆ ಕೆಲವುಕಾಲ ರಸ್ತೆತಡೆ ನಡೆಸಿ ನಂತರ ತಾಲೂಕು ಕಛೇರಿ  ಆವರಣದಲ್ಲಿ ಹಲ್ಲೆಯನ್ನು ಖಂಡಿಸಿ ಜನಪರ ಚಿಂತಕ ಒಕ್ಕೂಟ,   ರೈತಸಂಘ, ದಲಿತ ಸಮುದಾಯ, ಹಾಗೂ ಟೈಲರ್ ಅಸೋಸಿಯೇಶನ್, ಕಾಲೇಜ್ ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
    ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಎಂ.ವಿ.ನಾಗರಾಜ್ರಾವ್,  ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಗುಂಡಾಗಿರಿ ರಾಜಕಾರಣ ಮಾಡಿದವರ ವಿರುದ್ದ ಪೋಲಿಸ್ ಇಲಾಖೆ ಇನ್ನು ಪಾರದರ್ಶಕ ಸ್ಥಿತಿಗತಿ ಕೇಳುತ್ತಿದೆ ಹೊರತು ಪ್ರಕರಣದ ವಿರುದ್ದ ಯಾವುದೇ ತೀವ್ರ ತನಿಖೆ ನಡೆಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
    ಮಾಜಿ ಶಾಸಕರೊಬ್ಬರು ಹಲ್ಲೆ ನಡೆಸಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲೆ ಮಾತ್ರ್ರವಲ್ಲ ಪತ್ರಿಕಾರಂಗದ ಮೇಲೆ ನಡೆಸಿದ ಹಲ್ಲೆ, ಕಳೆದ 20 ವರ್ಷಗಳಿಂದ ಪತ್ರಿಕೆಯಲ್ಲಿ ಅವರು ದುಡಿಯುತ್ತಿದ್ದಾರೆ ಎಂದರಲ್ಲದೆ,  ಸಮಾರಂಭವೊಂದರ ವರದಿಯಲ್ಲಿ  ತಮ್ಮ ಹೆಸರನ್ನು ಹಾಕಿಲ್ಲ ಎಂಬ ಕಾರಣವೊಡ್ಡಿ ಕುಟುಂಬವರ್ಗ ಹಾಗೂ ಸಹಚರರೊಂದಿಗೆ ಅವರ ಅಂಗಡಿ ಬಳಿ ಬಂದು  ಹಲ್ಲೆ ನಡೆಸಿರುವುದು ಖಂಡನೀಯವಾಗಿದ್ದು ಮುಂದೆ ಇಂತಹ ಘಟನೆಗಳ ಮರುಕಳಿಸಬಾರದು ಹಾಗೂ ಪ್ರಕರಣದ ಬಗ್ಗೆ ಪೋಲಿಸರು ತೀವ್ರ ತನಿಖೆ ನಡೆಸಬೇಕೆಂದರು.
    ದಲಿತ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ಮಾತನಾಡಿ, ಈ ರೀತಿಯ ಹಲ್ಲೆಗಳಿಂದ ವರದಿಗಾರರು ದೃತಿಕೆಡ ಬಾರದು, ಇದನ್ನು ಸವಾಲೆಂದು ಸ್ವೀಕರಿಸಿ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಮುಂದಾಗಬೇಕೆಂದ ಅವರು, ಲೇಖನಿಗೆ ಬಲವಾದ ಶಕ್ತಿ ಇದೆ, ಅದರಿಂದ ಸಮಾಜದ ಪರಿವರ್ತನೆ ಸಾಧ್ಯ ಎಂದರು. ಕಾನೂನಿನ ಬಗ್ಗೆ ಅರಿವಿರುವೊಬ್ಬ ಮಾಜಿ ಶಾಸಕ ಈ ರೀತಿಯ ಕೃತ್ಯಕ್ಕೆ ಇಳಿಯಬಾರದಿತ್ತು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ಅಕ್ಷಮ್ಯ ಅಪರಾಧ ಎಂದರು.
    ಜನಪರ ಚಿಂತಕ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವದಲ್ಲ್ಲಿ ಪತ್ರಿಕಾರಂಗ ತನ್ನದೇ ಆದ ಸ್ಥಾನ ಹೊಂದಿದ್ದು ಜಗತ್ತಿನ ಸರಿತಪ್ಪುಗಳನ್ನು ತಿದ್ದುವ ಕ್ಷೇತ್ರ ಇದಾಗಿದೆ,  ಅಂತಹ ಕ್ಷೇತ್ರದಲ್ಲಿ ದುಡಿಯುವವರ ಮೇಲೆ,  ಕೇವಲ ಹೆಸರು ಬರಲಿಲ್ಲವೆಂಬ ಕಾರಣವೊಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದರು.  ಮಾಜಿ ಶಾಸಕರು ಕೇವಲ ಹೆಸರಿಗೋಸ್ಕರ ರಾಜಕೀಯ ಮಾಡುವುದಾದರೆ ಅದು ಅವರಿಗೆ ನಾಚಿಕೆಗೇಡು ತರುವ ವಿಷಯ, ಇಲ್ಲಿ ಯಾರನ್ನೂ ತೇಜೋವಧೆ ಮಾಡಲು ಹೊರಟಿಲ್ಲ ಹಲ್ಲೆ ನಡೆಸಿರುವವರ ವಿರುದ್ದ ಹೋರಾಟ ಹಾಗೂ ಮುಂದೆಂದು ಈ ರೀತಿ ಆಗಬಾರದೆಂಬ ಎಚ್ಚರಿಕೆ ಎಂದರು.
ಪ್ರತಿಭಟನೆಯಲ್ಲಿ  ರೈತ ಸಂಘದ ಸತೀಶ್ ಕೆಂಕೆರೆ, ಡಿ.ಎಸ್.ಎಸ್ನ ಲಿಂಗದೇವರು, ಪತ್ರಕರ್ತ ಚಿ.ನಿ.ಪುರುಷೋತ್ತಮ್, ಕೆ.ಜಿ.ರಾಜೀವಲೋಚನ, ಹುಳಿಯಾರಿನ ಇಬ್ರಾಹಿಂ ಮುಂತಾದವರು ಮಾತನಾಡಿದರು.
ಪ್ರತಿಭಟನೆಯಲ್ಲಿ ತಾ.ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಶಂಕರಪ್ಪ, ಶಂಕರಲಿಂಗಪ್ಪ, ರಾಕೇಶ್,  ಸೇರಿದಂತೆ ಹಲವರು ಹಾಜರಿದ್ದರು.
ಡಿಪ್ಲೊಮೊ ಕಾಲೇಜ್ ಮಂಜೂರಾತಿಗೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಅ.31 : ತಾಲ್ಲೂಕಿನಲ್ಲಿ ತಾಂತ್ರಿಕ ತರಬೇತಿ ಕಾಲೇಜುಗಳು ಇಲ್ಲದೆ ನೂರಾರು ವಿದ್ಯಾಥರ್ಿಗಳು ಶಿಕ್ಷಣಕ್ಕಾಗಿ ಬೇರೆ ಬೇರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಹೋಗುವ ಪರಿಸ್ಥಿತಿ ಉಂಟಾಗಿದೆ ಆದ್ದರಿಂದ ತಾಲ್ಲೂಕಿಗೆ ಸಕರ್ಾರಿ  ಇಂಜನಿಯರಿಂಗ್ ಮತ್ತು ಡಿಪ್ಲೊಮೊ ಕಾಲೇಜನ್ನು ಮಂಜೂರು ಮಾಡಬೇಕಾಗಿ ಅಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ ತಾಲ್ಲೂಕು ದಂಡಾಧಿಕಾರಿ ಉಮೇಶ್ವಂದ್ರರವರಿಗೆ ಮನವಿ ಅಪರ್ಿಸಿತು.
    ಈ ಸಂದರ್ಭದಲ್ಲಿ ಮಾತನಾಡಿದ ಅಭಾವಿಪ ತಾಲ್ಲೂಕ್ ಪ್ರಮುಕ್ ಚೇತನ್ಪ್ರಸಾದ್ ತಾಲ್ಲೂಕನ್ನು ಶಿಕ್ಷಣ ಕ್ಷೇತ್ರದಲ್ಲಿ ಕಡೆಗಣಿಸಿದ್ದು ತಾಂತ್ರಿಕ ತರಬೇತಿ ಕಾಲೇಜುಗಳು  ಅತ್ಯವಶ್ಯಕವಾಗಿದೆ ಇದರಿಂದ ಇಂಜನಿಯರಿಂಗ್ ಮತ್ತು ಡಿಪ್ಲೊಮೊ ಕಾಲೇಜುಗಳು ಬೇಕಾಗಿವೆ ಇದನ್ನು ಪರಿಗಣಿಸಿ ಸಕರ್ಾರ  ಸೂಕ್ತಗಮನ ಹರಿಸಿ ಕಾಲೇಜನ್ನು ಮಂಜೂರು ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರ ಕಾರ್ಯದಶರ್ಿ ದಿಲೀಪ್, ರವಿ, ನಂದನ್, ನಂದನ್, ಮಧು ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.
 

Saturday, October 29, 2011


ಮಾದಿಗರು, ದಕ್ಕಲಿಗರು ಸಹೋದರರು,  ನಮ್ಮಲ್ಲಿ ವಿಷಬೀಜ ಬಿತ್ತುತ್ತಿರುವವರ ವಿರುದ್ದ ಹೋರಾಡಿ
ಚಿಕ್ಕನಾಯಕನಹಳ್ಳಿ,ಅ.29 : ದಕ್ಕಲಿಗ ಸಮುದಾಯವನ್ನು  ಹೀಯಾಳಿಸುವುದು, ನಿಂದಿಸುವುದನ್ನು ಮಾದಿಗ ಜನಾಂಗ ಎಂದಿಗೂ ಮಾಡುವುದಿಲ್ಲ ಅವರು ನಮ್ಮ ಅಣ್ಣತಮ್ಮಂದಿರಂತೆ ಇದ್ದು ದಕ್ಕಲಿಗ ಹಾಗೂ ಮಾದಿಗರ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ಬರವಣಿಗೆಯು ಕಿಡಿಗೇಡಿಗಳು ನಮ್ಮ ಸಮಾಜಗಳ  ನಡುವೆ ವಿರಸ ತರುವ ಕೆಲಸಮಾಡುತ್ತಿದ್ದಾರೆ  ಇದನ್ನು ಮಾದಿಗ ಸಮುದಾಯ ಖಂಡಿಸುತ್ತದೆ ಎಂದು ಮಾದಿಗ ದಂಡೋರ ಸಮಿತಿಯ ರಾಜ್ಯ ಪದಾಧಿಕಾರಿ ಬೇವಿನಹಳ್ಳಿ ಚನ್ನಬಸವಯ್ಯ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ರಾಜ್ಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಲೇಖನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದಕ್ಕಲಿಗ ಸಮುದಾಯವು ಮಾದಿಗ ಜನಾಂಗದ 30 ಬುಡಕಟ್ಟಿಗಳ ಪಟ್ಟಿಯಲ್ಲಿ   ದಕ್ಕಲಿಗ ಸಮುದಾಯವೂ ಸೇರಿದೆ, ದಕ್ಕಲಿಗರು ನಮ್ಮ ಅಣ್ಣತಮ್ಮಂದಿರಿದ್ದಂತೆ ಅವರ ವಾಸ, ಜೀವನಶೈಲಿ ಬಗ್ಗೆ ಎಲ್ಲಿಯೂ ಅಪಸ್ವರ ತೆಗೆದಿಲ್ಲ, ಅವರು ನಮ್ಮ ಕಾಲೋನಿಗಳಿಗೆ ಪ್ರವೇಶಿಸಲು ಸ್ವಾಗತವಿದೆ ಆದರೂ ಈ ಬಗ್ಗೆ ಪತ್ರಿಕೆಯಲ್ಲಿ ಅಲ್ಪ ತಿಳುವಳಿಕೆಯ ಲೇಖಕರೊಬ್ಬರು ಮಾದಿಗರಿಂದ ದಕ್ಕಲಿಗರ ವಿರುದ್ದ ಧೋರಣೆ ಇದೆ ಎಂಬ ಬರವಣಿಗೆಯು ಖಂಡನೀಯವಾಗಿದೆ ಎಂದರು.
    ಗೋಷ್ಠಿಯಲ್ಲಿ ತಾ.ಮಾದಿಗ ಸಂಘದ ಅಧ್ಯಕ್ಷ ಸಾದರಹಳ್ಳಿ ಜಯಣ್ಣ, ರಾಜ್ಯ ಡಾ.ಅಂಭೇಡ್ಕರ್ ಯುವಸೇನೆ ಅಧ್ಯಕ್ಷ ಚೌಳಕಟ್ಟೆ ನಾಗರಾಜು, ಸಿ.ಎನ್.ಹನುಮಯ್ಯ , ಕಂದಿಕೆರೆ ಕೃಷ್ಣಮೂತರ್ಿ ಉಪಸ್ಥಿತರಿದ್ದರು.

ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಪ್ಪಿಸಿ
ಚಿಕ್ಕನಾಯಕನಹಳ್ಳಿ,ಅ.29 : ಬಡತನದಿಂದ ಬೇಸತ್ತು ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ, ಈ ರೀತಿಯ ಘಟನೆ ನಡೆದ ಸ್ಥಳಗಳಲ್ಲಿ ಸ್ಥಳೀಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಗೆ ತಿಳಿಸಿದರೆ ಶಿಶುಗಳ ಪಾಲನೆ ಹಾಗೊ ಪೋಷಣೆಯನ್ನು ಇಲಾಖೆ ನೋಡಿಕೊಳ್ಳುತ್ತದೆ ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ತಿಳಿಸಿದರು.
    ಪಟ್ಟಣದ ಸಿ.ಡಿ.ಪಿ.ಓ ಕಛೇರಿಯಲ್ಲಿ ನವಜಾತ ಶಿಶುಗಳ ಪಾಲನೆ, ಪೋಷಣೆಯ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಬಡತನದಲ್ಲಿ ನೊಂದು ಜೀವನ ಸಾಗಿಸಲಾಗದ ಸ್ಥಿತಿಯಲ್ಲಿ ಅಥವಾ ಅನೈತಿಕ ಸಂಬಂಧಗಳನ್ನು ಮರೆಮಾಚಲು ಕೆಲವರು ಹೆರಿಗೆಯಾದ ತಕ್ಷಣ ತಮ್ಮ ಮಕ್ಕಳನ್ನು ತೊಟ್ಟಿಗಳಿಗೆ ಬಿಸಾಡುತ್ತಿದ್ದಾರೆ ಇದರಿಂದ ಶಿಶುಗಳು ಪ್ರಾಣಿಗಳಿಗೆ ಆಹಾರವಾಗುತ್ತದೆ ಇಲ್ಲವಾದರೆ ಕಿಡಿಗೇಡಿಗಳಿಗೆ ದೊರಕಿ ಮಗುಗಳಿಂದ ಬಿಕ್ಷಾಟನೆ, ಅವರ ಅಂಗಗಳನ್ನು ಮಾರುವುದು ಇತ್ಯಾದಿ ಕಾನೂನುಬಾಹಿರ ಕೆಲಸಗಳನ್ನು ಮಾಡುತ್ತಾರೆ ಎಂದ ಅವರು,  ದೇಶದಲ್ಲಿ 1000 ಗಂಡಸರಿಗೆ ಕೇವಲ 973 ಮಹಿಳೆಯರಿದ್ದು  ಇದಕ್ಕೆ ಕಾರಣ ಮಹಿಳೆಯರ ಬಗ್ಗೆ ಇರುವ ಅಸಡ್ಡೆ ಇದನ್ನು ತೊರೆಯಬೇಕು ಎಂದು ಸಲಹೆ ನೀಡಿದರು.
    ಪುರಸಭಾಧ್ಯಕ್ಷ ದೊರೆಮುದ್ದಯ್ಯ ಮಾತನಾಡಿ ಕೆಲವು ಪೋಷಕರು ಮಕ್ಕಳು ತಮಗೆ ಸಂಬಂಧವಿಲ್ಲವೆಂದು ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ ಇದರಿಂದ ಮಕ್ಕಳು ಹಲವು ಕೆಟ್ಟಚಟಗಳನ್ನು ಕಲಿತು ದೇಶಕ್ಕೆ ಅಪಾಯಕಾರಿಗಳಾಗುತ್ತಿದ್ದಾರೆ ಎಂದ ಅವರು,  ಮಹಿಳೆಯರನ್ನು ಗ್ರಾಮೀಣ ಪ್ರದೇಶಗಳಲ್ಲಿ ನೌಕರಿ ಕೊಡಿಸಿಕೊಡುತ್ತೇವೆ ಎಂದು ಕರೆದುಕೊಂಡು ಹೋಗಿ ದೊಡ್ಡ ನಗರಗಳಲ್ಲಿ  ವೇಶ್ಯಾವಾಟಿಕೆಗಳಲ್ಲಿ ತೊಡಗಿಸುತ್ತಿರುವುದು ಹೆಚ್ಚಾಗಿದೆ,  ಮಹಿಳೆಯರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.
    ಸಮಾರಂಭದಲ್ಲಿ ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿದೇವಿಪುಟ್ಟಯ್ಯ, ಸ್ತ್ರೀ ಶಕ್ತಿ ಸಂಘದ ಅಂಬಿಕ, ಯೋಜನಾಧಿಕಾರಿ ಪರ್ವತಯ್ಯ, ಪರಮೇಶ್ವರಯ್ಯ, ಪುಟ್ಟಸ್ವಾಮಿ, ಶಶಿಕಲಾ, ನಾಗರತ್ನ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿದರೆ, ಪರ್ವತಯ್ಯ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ನೇರರಸ್ತೆ ಕಾಮಗಾರಿ ನಿಲ್ಲಿಸಿ, ಖಾಸಗಿ ಕಂಪನಿಯವರ ಪ್ರಸ್ತಾವನೆಯನ್ನು ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಅ.28 : ತಾಲ್ಲೂಕಿನ ಶೆಟ್ಟಿಕೆರೆ ಗೇಟ್ನಿಂದ ಹಾಸನ ಜಿಲ್ಲೆ ಚಿಂದೇನಹಳ್ಳಿ ಗಡಿಯವರೆಗೆ ರಸ್ತೆ ನಿಮರ್ಾಣ ಮಾಡಲು ಈಗಿರುವ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಹೊಸ ರಸ್ತೆ ನಿಮರ್ಾಣ ಮಾಡಲು ಸಕರ್ಾರ ಆದೇಶ ನೀಡಿದ್ದರೂ ಖಾಸಗಿ ಕಂಪನಿಯವರು ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ನೇರ ರಸ್ತೆ ನಿಮರ್ಾಣ ಮಾಡಲು ಸವರ್ೆ ಕಾರ್ಯವನ್ನು ನಿರ್ವಹಿಸುತ್ತಾ ರೈತರ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರ ಬಗ್ಗೆ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿತು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಕಟ್ಟೆರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರರವರಿಗೆ ಮನವಿ ಅಪರ್ಿಸಿತು.
ಹಾಲಿ ಇರುವ ರಸ್ತೆಯನ್ನು ಅಗಲೀಕರಣ ಮಾಡಿಕೊಂಡು ಹೊಸರಸ್ತೆ ನಿಮರ್ಾಣ ಮಾಡಲು ಸಕರ್ಾರ ಆದೇಶಿಸಿದ್ದರೂ ಭೂ ಸ್ವಾಧೀನ ಮಾಡಿಕೊಂಡಿಲ್ಲದ ರೈತರ ಜಮೀನನ್ನು ರೈತರಲ್ಲಿ ಅನುಮತಿ ಪಡೆಯದೇ ನೇರ ರಸ್ತೆ ಸಂಪರ್ಕ ಮಾಡಿ ಹಣ ಲಪಟಾಯಿಸುವ ಹುನ್ನಾರ ಹಾಕಿ, ರೈತರ ಜಮೀನುಗಳಲ್ಲಿ ಅಳತೆ ಮಾಡಿ ಗಡಿಗುರುತಗಳ ಬಗ್ಗೆ ಸವರ್ೆ ಕಾರ್ಯ ನಡೆಸಿದ್ದಾರೆ. ಇದರಿಂದ  ರೈತರ ನೆಮ್ಮದಿ ಹಾಳಳಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿರುವ ಅವರು ಇಲ್ಲಿರುವ ಜಮೀನುಗಳಲ್ಲಿ ತೆಂಗು, ಅಡಕೆ, ಮಾವು ಹಾಗೂ ಇತರೆ ಬೆಲೆ ಬಾಳುವ ಮರಗಳಿಂದ ಆದಾಯವಿದ್ದು ತಮ್ಮ ಕುಟುಂಬದ ಸಂಪೂರ್ಣ ನಿರ್ವಹಣೆ ಈ ಜಮೀನುಗಳಿಂದ ನಡೆಯುತ್ತಿದೆಯಾದ್ದರಿಂದ ಖಾಸಗಿ ಕಂಪನಿಯವರು ಲಾಭ ಸಂಪಾದನೆಯ ದುರುದ್ದೇಶದಿಂದ ರೈತರ ಜಮೀನನ್ನು ರಸ್ತೆ ಕಾಮಗಾರಿ ನಡೆಸಲು ಪ್ರಸ್ತಾವನೆ ಸಲ್ಲಿಸಿರುವ ಬಗ್ಗೆ ಸ್ಥಳ ತನಿಖೆ ಮಾಡಿ ಅವರ ಪ್ರಸ್ತಾವನೆಯನ್ನು ಕೈ ಬಿಟ್ಟು ಸಕರ್ಾರದ ಆದೇಶಾನುಸಾರ ಹಾಲಿ ಇರುವ ರಸ್ತೆಯನ್ನೇ ಅಗಲೀಕರಣ ಮಾಡಿಕೊಂಡು ಕಾಮಗಾರಿ ಮಾಡಲು ಆದೇಶ ನೀಡಿ ರೈತರ ಜಮೀನನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲಿ ರೈತರುಗಳಾದ ಬಿ.ಎಸ್.ಯೋಗಾನಂದ್, ರಾಮೇಗೌಡರು, ಜಯಶಂಕರ್,  ರೈತ ಸಂಘದ ಸತೀಶ್ ಕೆಂಕೆರೆ, ಗಂಗಾಧರ್,  ಜಗದೀಶ್, ಗ್ರಾ.ಪಂ.ಅಧ್ಯಕ್ಷ ಶಶಿಧರ್, ತೋಂಟಾದಾರ್ಯ, ತೇಜಸ್ವಿ.ಎಸ್.ಸಿ, ಮಲ್ಲೇಶಪ್ಪ, ಮರುಳಯ್ಯ, ಸತೀಶ್ ಕೆ.ಆರ್, ಶಿವಲಿಂಗಯ್ಯ, ಬಿ.ಎಸ್.ರವೀಶಯ್ಯ, ಲೋಕೇಶ್, ನಟರಾಜ್ ಮುಂತಾದವರಿದ್ದರು.

ಚಿಕ್ಕನಾಯಕನಹಳ್ಳಿ,ಅ.28 :
ತಾಲ್ಲೂಕು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಇದೇ ಮಂಗಳವಾರ 1ರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಂದಿಕೆರೆಯ ಶ್ರೀ ಶನೇಶ್ವರ ನಾಟಕ ವಸ್ತ್ರಾಭರಣ ಮಂಡಳಿ ಮಾಲೀಕ ದಿವಂಗತ ಮಹದೇವಪ್ಪ(ಮರಣೋತ್ತರ), ಹುಳಿಯಾರಿನ ಹಾಮರ್ೋನಿಯಂ ಕಲಾವಿದರಾದ ಗೌರಮ್ಮಶಿವಕುಮಾರ್ರವರಿಗೆ ಸನ್ಮಾನಿಸಲಾಗುವುದು.

ಚಿಕ್ಕನಾಯಕನಹಳ್ಳಿ,ಅ.28 : ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸ್ಟೆಪ್ ಅಪ್ ಘಟಕದಡಿಯಲ್ಲಿ 2011-12ನೇ ಸಾಲಿಗೆ ಪುರಸಭಾ ವ್ಯಾಪ್ತಿಯ ಬಿ.ಪಿ.ಎಲ್ ಕುಟುಂಬದ ಫಲಾನುಭವಿಗಳಿಗೆ ಮೆಕಾನಿಕಲ್ ತರಬೇತಿ, ಕಂಪ್ಯೂಟರ್ ಶಿಕ್ಷಣದಲ್ಲಿ ಬಿ.ಪಿ.ಓ ಮತ್ತು ಸ್ಟೋಕನ್ ಇಂಗ್ಲೀಷ್ ಕೋಸರ್್ 6ತಿಂಗಳ ತರಬೇತಿ ನೀಡಲಾಗುವುದು ಎಂದು ಪುರಸಭಾ ಕಾಯರ್ಾಲಯ ತಿಳಿಸಿದೆ.
ಟೈಲರಿಂಗ್ ತರಬೇತಿಯು ಒಂದು ತಿಂಗಳ ಅವದಿಯಾಗಿದೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ ಪ್ರತಿ ತಿಂಗಳು 500 ರೂ ಸ್ಟ್ರೈಫಂಡ್ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಯ ನಂತರ ಬೆಂಗಳೂರು, ಹುಳಿಯಾರು, ತಿಪಟೂರು, ತುಮಕೂರು, ಚಿಕ್ಕನಾಯಕನಹಳ್ಳಿಯಲ್ಲಿ ತರಬೇತಿ ನೀಡಿದ ಸಂಸ್ಥೆಯವರು ಉದ್ಗೋಗವಕಾಶ ಒದಗಿಸಿಕೊಡುವುದರಿಂದ ಉದ್ಯೋಗಾಕಾಂಕ್ಷಿಗಳು ಮಾತ್ರ 02.11.2011 ರೊಳಗಾಗಿ ಕಛೇರಿಯಿಂದ ಅಜರ್ಿ ಪಡೆದು ಸಲ್ಲಿಸುವುದು, ತಡವಾಗಿ ಬಂದ ಅಜರ್ಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Wednesday, October 26, 2011ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಮೊದಲನೇ ವರ್ಷದ ವಾಷರ್ಿಕೋತ್ಸವ ಚಿಕ್ಕನಾಯಕನಹಳ್ಳಿ,ಅ.26 : ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಮೊದಲನೇ ವಾಷರ್ಿಕೋತ್ಸವ ಸಮಾರಂಭವನ್ನು ಇದೇ ನವಂಬರ್ 1ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಸಹಾಯಕ ನಿದರ್ೇಶಕ ಎ.ಕೆ.ಬಸವರಾಜಪ್ಪ, ಸಿ.ಪಿ.ಐ ಕೆ.ಪ್ರಭಾಕರ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿದೇವಿ, ಮುಖ್ಯಾಧಿಕಾರಿ ಹೊನ್ನಪ್ಪ, ಪುರಸಬಾ ಸದಸ್ಯರಾದ ಸಿ.ಬಸವರಾಜು, ಸಿ.ಡಿ.ಚಂದ್ರಶೇಖರ್, ರಾಜಣ್ಣ, ಸಿ.ಎಂ.ರಂಗಸ್ವಾಮಯ್ಯ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಮಾಜಿ ಪುರಸಭಾಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಸಾಹಿತಿ ಆರ್.ಬಸವರಾಜು, ಕಾಂಗ್ರೆಸ್ ಮುಖಂಡ ಕೃಷ್ಣೆಗೌಡ, ಸಿದ್ದು ಜಿ.ಕೆರೆ, ಸಿ.ಎನ್.ಹನುಮಯ್ಯ, ಚಿದಾನಂದ್, ನಿಂಗಪ್ಪ ಉಪಸ್ಥಿತರಿರುವರು.
ಮಹಾಲಕ್ಷ್ಮೀ ದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ಚಿಕ್ಕನಾಯಕನಹಳ್ಳಿ,ಅ.26 : ಶ್ರೀ ಮಹಾಲಕ್ಷ್ಮೀದೇವಿಯ ನೂತನ ದೇವಾಲಯ ಪ್ರಾರಂಭೋತ್ಸವ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ ನವಂಬರ್ 4ರಂದು ಏರ್ಪಡಿಸಲಾಗಿದೆ. ಸಮಾರಂಭವನ್ನು ದೇವಾಂಗ ಬೀದಿಯ ಬನಶಂಕರಿ ದೇವಾಲಯದ ಬಳಿ ಹಮ್ಮಿಕೊಂಡಿದ್ದು ಹಂಪಿ ಹೇಮಕೂಟದ ಗಾಯಿತ್ರಿ ಪೀಠಾಧ್ಯಕ್ಷರಾದ ದಯಾನಂದಪುರಿ ಮಹಾಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರ ಸ್ವಾಮಿಗಳು ದಿವ್ಯಸಾನಿದ್ಯ ವಹಿಸಲಿದ್ದು ಮಹಾಲಕ್ಷ್ಮೀ ದೇವಾಲಯ ಸಮಿತಿ ಅಧ್ಯಕ್ಷ ವಿ.ಶೇಷಗಿರಿ(ಮಂದಾಲಿ) ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ನೇಕಾರರ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ದೇವಾಂಗ ಸಂಘದ ಅಧ್ಯಕ್ಷ ಸಿ.ಎ.ಕೋದಂಡರಾಮಯ್ಯ, ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಕೆ.ಜೆ.ವೆಂಕಟರಮಣಪ್ಪ, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಹೇಮಚಂದ್ರ, ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ ಸಿ.ಟಿ.ವರದರಾಜು, ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ನಾಮಿನಿ ಸದಸ್ಯ ಈಶ್ವರ್ ಭಾಗವತ್, ಗಾಯಿತ್ರಿ ಪೀಠ ಸಂಸ್ಥಾನದ ಕಾರ್ಯದಶರ್ಿ ಕೆ.ಸಿ.ತಿಮ್ಮಶೆಟ್ಟಿ ಉಪಸ್ಥಿತರಿರುವರು.

Saturday, October 22, 2011ಪ್ಯಾಕೇಜ್ ಗುತ್ತಿಗೆ ನಿಲ್ಲಿಸಿ ಸ್ಥಳೀಯ ಗುತ್ತಿಗೆದಾರರನ್ನು ಉಳಿಸಿ
ಚಿಕ್ಕನಾಯಕನಹಳ್ಳಿ.ಅ.21 : ದೊಡ್ಡ ದೊಡ್ಡ ಕಂಪನಿಯವರು ತಾಲ್ಲೂಕಿನ ಹಲವು ಗುತ್ತಿಗೆಗಳನ್ನು ಪಡೆದು ತಾಲ್ಲೂಕಿನ ಗುತ್ತಿಗೆದಾರರನ್ನು ತಮ್ಮ ಮೇಸ್ತ್ರಿಗಳನ್ನಾಗಿ ಮಾಡಿಕೊಳ್ಳುತ್ತಾ ಗುತ್ತಿಗೆದಾರರಿಗೆ ಆಥರ್ಿಕವಾಗಿ ತೊಂದರೆ ಪಡಿಸುತ್ತಿದ್ದಾರೆ, ಅದಕ್ಕಾಗಿ ಸ್ಥಳೀಯ ಗುತ್ತಿಗೆದಾರರೆಲ್ಲರೂ ಸಂಘಟನೆಯ ಮೂಲಕ ಒಂದಾಗಬೇಕು ಎಂದು ಗುತ್ತಿಗೆದಾರ ನಂದಿಹಳ್ಳಿ ಶಿವಣ್ಣ ಹೇಳಿದರು.
ಪಟ್ಟಣದ ಜಿ.ಪಂ ಇಂಜನಿಯರಿಂಗ್ನ ಎ.ಇ.ಇ.ಕಛೇರಿಯ ಬಳಿ ನೂತನವಾಗಿ ಆರಂಭಗೊಂಡ ತಾಲ್ಲೂಕು ಗುತ್ತಿಗೆದಾರರ ಸಂಘವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರಿಗೆ ಇನ್ನೊಬ್ಬ ಗುತ್ತಿಗೆದಾರರಿಂದ ವ್ಯವಹಾರಕ್ಕೆ ಪೈಪೋಟಿ ಇದ್ದರೂ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಬೇರೆ ತಾಲ್ಲೂಕಿನಿಂದ ಬಂದಂತಹ ಗುತ್ತಿಗೆದಾರಿಗೆ ಗುತ್ತಿಗೆ ನೀಡುವುದನ್ನು ಇಲ್ಲಿನವರು ವಿರೋಧಿಸಿ, ಸ್ಥಳೀಯರಿಗೆ ಗುತ್ತಿಗೆ ಕೆಲಸಗಳಲ್ಲಿ ಮೊದಲ ಆದ್ಯತೆ ನೀಡಬೇಕು ಎಂದ ಅವರು, ಬೇರೆ ಕಡೆಯಿಂದ ಬಂದಂತಹ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೆಲಸ ನೀಡುವುದು ಅಷ್ಟಕಷ್ಟೆಯಾಗಿದೆ, ಸ್ಥಳೀಯರಿಗೆ ನೀಡಿದರೆ ಕೆಲಸ ಮುಗಿಯುವವರೆಗೆ ಅದೇ ಸ್ಥಳದಲ್ಲಿದ್ದು ಉತ್ತಮ ಗುಣಮಟ್ಟ ಕಾಯ್ದುಕೊಳ್ಳುತ್ತಾರೆ ಎಂದರು. ಈತ ಅಸ್ತ್ರಿತ್ವಕ್ಕೆ ಬಂದಿರುವ ನಮ್ಮ ಸಂಘದ ಗುತ್ತಿಗೆದಾರರು ಒಬ್ಬರಿಗೊಬ್ಬರು ಸಹಕರಿಯಾಗಿ ಸಂಘದ ಮಾತುಗಳಿಗೆ ಸ್ಪಂದಿಸಬೇಕು ಎಂದರು.
ತಾ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರುಣ್ಕುಮಾರ್ ಮಾತನಾಡಿ ಕೋಟಿಗಟ್ಟಲೆ ಕಾಮಗಾರಿ ಗುತ್ತಿಗೆಯನ್ನು ಕೇವಲ ಕೆಲವೇ ಮಂದಿಗೆ ಸಕರ್ಾರ ನೀಡುತ್ತಿರುವುದು ವಿಪಯರ್ಾಸ ಇದನ್ನು ಹಲವರಿಗೆ ನೀಡಲು ಒತ್ತಾಯಸಿದರಲ್ಲದೆ, 1 ಮತ್ತು 2ನೇ ದಜರ್ೆ ಗುತ್ತಿಗೆದಾರರು 3 ಮತ್ತು .4ನೇ ದಜರ್ೆ ಗುತ್ತಿಗೆದಾರರ ಕೆಲಸಗಳಿಗೆ ತೊಂದರೆ ಪಡಿಸದಂತೆ ಕೆಲಸ ನಿರ್ವಹಿಸಬೇಕು ಹಾಗೂ ತಾಲ್ಲೂಕಿನ ಸಂಘದಲ್ಲಿ ಈಗಾಗಲೇ 60ಜನ ಗುತ್ತಿಗೆದಾರರಿದ್ದು ಒಬ್ಬರು ಇನ್ನೊಬ್ಬರಿಗೆ ಪ್ರೋತ್ಸಾಹ ನೀಡಬೇಕು ಮತ್ತು ನೂತನವಾಗಿ ಉದ್ಘಾಟನೆಗೊಂಡಿರುವ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಸಮಾರಂಭದಲ್ಲಿ ಗುತ್ತಿಗೆದಾರರಾದ ಆಲದಕಟ್ಟೆ ತಿಮ್ಮಯ್ಯ, ಜಲಾಲ್ಸಾಬ್, ಮಾತನಾಡಿದರು.
ಸಮಾರಂಭದಲ್ಲಿ ಎ.ಡಬ್ಲ್ಯೂ,ಇ ಚಿಕ್ಕದಾಸಪ್ಪ, ಗುತ್ತಿಗೆದಾರರಾದ ಚಿದಂಬರಶಾಸ್ತ್ರಿ, ಕೆ.ಗಂಗಣ್ಣ, ಕೃಷ್ಣಪ್ಪ, ಎಂ.ಎನ್.ಶಿವರಾಜು, ಶಿವಣ್ಣ, ನಾಗಣ್ಣ ಮುಂತಾದವರಿದ್ದರು.


ಪುರಸಭೆಯವರ ನಿರ್ಲಕ್ಷ್ಯದಿಂದ ನಿವಾಸಿಗಳಿಗೆ ಅಲಜರ್ಿ
ಚಿಕ್ಕನಾಯಕಯಕನಹಳ್ಳಿ,ಅ.22: ಪಟ್ಟಣದ ಹ್ಲದಯಭಾಗವಾಗದ ಬಸ್ಸ್ಟಾಂಡ್ ಪಕ್ಕದಲ್ಲೇ ಕೋಳಿ ಅಂಗಡಿಗಳು ಇರುವುದರಿಂದ ಕೋಳಿಯ ತ್ಯಾಜ್ಯವಸ್ತುಗಳಾದ ಪುಕ್ಕ, ಸೇರಿದಂತೆ ಇತರ ತ್ಯಾಜ್ಯ ಮಾಂಸ ಪದಾರ್ಥಗಳನ್ನು ಅಂಗಡಿಗಳ ಹಿಂಭಾಗದಲ್ಲೇ ಹಾಕುವುದರಿಂದ ಈ ಭಾಗದ ನಿವಾಸಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ
ಈ ಪ್ರದೇಶ ವಾಣಿಜ್ಯ ಪ್ರದೇಶವಾಗಿರುವುದರಿಂದ ಈ ಭಾಗಕ್ಕೆ ಬರುವ ಗ್ರಾಹಕರಿಗೂ ತೊಂದರೆಯಾಗಿದೆ ಎಂದು ಹಲವು ವರ್ಷಗಳಿಂದ ಪುರಸಭೆಗೆ ದೂರು ನೀಡಿದರು ಅವರು, ದಿವ್ಯ ನಿರ್ಲಕ್ಷವಹಿಸುವುದರಿಂದ ನಾವಿಲ್ಲಿ ಬದುಕುವುದೇ ದುಸ್ಥರವಾಗಿದೆ ಎಂದು ಈ ಭಾಗದ ನಿವಾಸಿ ಚನ್ನಬಸವಯ್ಯ ಪತ್ರಿಕೆಗೆ ಅಲವತ್ತುಕೊಂಡಿದ್ದಾರೆ.
ಅಂಗಡಿಯವರು ಕೋಳಿಗಳನ್ನು ಕ್ಲೀನ್ ಮಾಡಿದ ನಂತರ ಅದರ ಪುಕ್ಕ, ಕರಳು, ಮಾಂಸ ಇತ್ಯಾಧಿ ತ್ಯಾಜ್ಯವಸ್ತುಗಳನ್ನು ಮನೆಗಳ ಸಮೀಪದಲ್ಲೇ ಹಾಕುವುದರಿಂದ ಅವುಗಳು ಕೊಳೆತು ನಿವಾಸಿಗಳಿಗೆ ದುವರ್ಾಸನೆ ಬರುವುದಲ್ಲದೆ, ಹಂದಿ ನಾಯಿಗಳ ಕಾಟ ಜಾಸ್ತಿಯಾಗಿ ಮಕ್ಕಳು ಹಾಗು ವೃದ್ದರಿಗೆ ಇವುಗಳಿಂದ ಅಲಜರ್ಿ ಹೆಚ್ಚಾಗಿದೆ ಎಂದಿದ್ದಾರೆ.
ಈ ತ್ಯಾಜ್ಯವಸ್ತುಗಳಿಂದ ಸಾಂಕ್ರಾಮಿಕ ರೋಗಗಳು ಉಂಟಾಗುತ್ತಿದೆ ಇವರು ಈ ಬಗ್ಗೆ ಇಲ್ಲಿನ ಅಂಗಡಿ ಮಾಲೀಕರು, ಆಟೋಚಾಲಕರು, ಹಾಗೂ ಮನೆಗಳ ನಿವಾಸಿಗಳು ಈಗಾಗಲೇ ಜಿಲ್ಲಾಧಿಕಾರಿಗಳು, ತಿಪಟೂರು ವಿಭಾಗದ ಅಸಿಸ್ಟೆಂಟ್ ಕಮಿಷನರ್, ಪುರಸಭೆ ಮುಖ್ಯಾಧಿಕಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನೀಡಿದ್ದರೂ ಇತ್ತ ಯಾರೊಬ್ಬರೂ ಗಮನ ಹರಿಸಿಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಳಿ ಅಂಗಡಿ ಮಾಲೀಕರ ಅಳಲು: ಕೋಳಿ ಅಂಗಡಿಯ ಮಾಲೀಕ ಪುಟ್ಟಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಈ ಮೊದಲು ನಾವು ಬಸ್ಟಾಂಡ್ ಬಳಿ ಕೋಳಿಅಂಗಡಿಗಳನ್ನು ನಡೆಸುತ್ತಿದ್ದಾಗ ಪುರಸಭೆಯವರು ಈ ಜಾಗದಿಂದ ತೆರವುಗೊಳಿಸಿದರು, ನಂತರ ಕೋಳಿಅಂಗಡಿಯವರೆಲ್ಲ ಸೇರಿ ಖಾಸಗಿ ಜಮೀನಲ್ಲಿ ಕೋಳಿ ಅಂಗಡಿ ಇಡುವುದೆಂದು ತೀಮರ್ಾನಿಸಿ ಕೋಳಿ ಅಂಗಡಿಗಳನ್ನು ಇಲ್ಲಿ ಇಟ್ಟುಕೊಂಡಿದ್ದೇವೆ.
ಕೋಳಿ ಕ್ಲೀನ್ ಮಾಡುವ ಈ ಪ್ರದೇಶಕ್ಕೆ ಪುರಸಭೆಯವರು ಕಂಟೈನರ್(ಕಸದ ತೊಟ್ಟಿ) ಒದಿಸಿಲು ಹಾಗೂ ನೀರಿನ ವ್ಯವಸ್ಥೆ ನೀಡಬೇಕೆಂದು ಕೇಳಿಕೊಂಡಿದ್ದೆವು ಅವರು ಈವೆರೆಗೆ ನೀಡಿಲ್ಲ ಎಂದರಲ್ಲದೆ, ನಮಗೆ ಪುರಸಭೆಯವರೇ ಒಳ್ಳೆ ಜಾಗವನ್ನು ತೋರಿಸಿದರೆ ನಾವು ಅಲ್ಲಿಗೆ ನಮ್ಮ ಅಂಗಡಿಗಳನ್ನು ಸ್ಥಳಾಂತರಿಸಿಕೊಳ್ಳುತ್ತೇವೆ ಎನ್ನುತ್ತಾರೆ.
Wednesday, October 19, 2011ಗಣಿ ಪ್ರದೇಶದ ಗ್ರಾಮಸ್ಥರಿಂದ ತಲಸ್ಪಶರ್ಿ ಮಾಹಿತಿ ಪಡೆದ ಸಿ.ಇ.ಸಿ ತಂಡಚಿಕ್ಕನಾಯಕನಹಳ್ಳಿ,ಅ.19: ಗಣಿಗಾರಿಕೆ ನಡೆಯ ಬೇಕೋ, ಬೇಡವೋ ಎಂಬ ಪ್ರಶ್ನೆಗೆ ಹಲವರು ಬೇಡವೇ ಬೇಡ ಎಂದರೆ, ಕೆಲವು ಜನ ಗ್ರಾಮಸ್ಥರು ದೊಡ್ಡ ಗಾತ್ರದ ಯಂತ್ರಗಳನ್ನು ಬಳಸಿಕೊಂಡು ಗಣಿಗಾರಿಕೆ ನಡೆಸುವುದಾದರೇ ಬೇಡ. ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ಗಣಿ ಪರವಾನಿಗೆ ನೀಡುವ ಸಂದರ್ಭದಲ್ಲಿ ವಿಧಿಸಿರುವ ನಿಯಮಗಳಂತೆ ನಡೆಯುವುದಾದರೆ ಗಣಿಗಾರಿಕೆ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಗಣಿ ಪ್ರದೇಶಗಳಿಗೆ ಸುಪ್ರಿಂ ಕೋಟರ್್ನ ನಿದರ್ೇಶನದ ಮೇರಿಗೆ ನೇಮಕಕೊಂಡಿರುವ ಸಿ.ಇ.ಸಿ.ತಂಡದ ತಜ್ಞರಾದ ಡಾ.ಅರುಣ ಕುಮಾರ್, ಡಾ.ಸೋಮಶೇಖರ್ ಗ್ರಾಮಸ್ಥರೊಮದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಜನರು ವ್ಯಕ್ತಪಡಿಸದ ಮುಖ್ಯ ಅಭಿಪ್ರಾಯವಿದು. ಗಣಿ ಪ್ರದೇಶದ ಗ್ರಾಮವಾದ ಹೊನ್ನೆಬಾಗಿ, ಗೊಲ್ಲರಹಳ್ಳಿ ಹಾಗೂ ಬುಳ್ಳೇನಹಳ್ಳಿ ಗ್ರಾಮಸ್ಥರಗಳೊಂದಿಗೆ ಸಂವಾದ ನಡೆಸಿದ ಸಿ.ಇ.ಸಿ. ತಂಡ ಈ ಭಾಗದ ಜನರ ಸಮಾಜೋಆಥರ್ಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿತು. ಈ ಸಂದರ್ಭದಲ್ಲಿ ತಜ್ಞರು ಗ್ರಾಮಸ್ಥರಗಳೊಂದಿಗೆ ಮಾತನಾಡಿ, ಇಲ್ಲಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಯುವ ಮೊದಲು ಇಲ್ಲಿನ ಹೊಲಗಳಲ್ಲಿ ಆಹಾರ ಧಾನ್ಯಗಳ ಇಳುವರಿ ಎಕರೆಗೆ ಎಷ್ಟಿತ್ತು, ಈಗ ಎಷ್ಟಿದೆ, ಒಂದು ಎಕರೆ ತೋಟದಲ್ಲಿ ಮೊದಲು ಬೀಳುತ್ತಿದ್ದ ತೆಂಗಿನ ಕಾಯಿಗಳೆಷ್ಟು, ಅಡಿಕೆ ಇಳುವರಿಗಳೆಷ್ಟು, ಈಗ ಎಷ್ಟಿದೆ, ಜನರ ಆರೋಗ್ಯದ ಮೇಲೆ ಗಣಿಗಾರಿಕೆ ಯಾವ ರೀತಿಯ ದುಷ್ಪರಿಣಾಮ ಬೀರಿದೆ, ಜಾನುವಾರಗಳ ಆರೋಗ್ಯದ ಮೇಲೆ ಯಾವ ಪ್ರಮಾಣದಲ್ಲಿ ಕೇಡುವುಂಟು ಮಾಡಿದೆ, ಅಂತರ್ಜಲ ಎಷ್ಟು ಕುಸಿದಿದೆ, ಬ್ಲಾಸ್ಟಿಂಗ್ನಿಂದ ಆಗಿರುವ ಅನಾಹುತಗಳೇನು ಎಂಬ ಹಲವು ರೀತಿಯ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಗ್ರಾಮಸ್ಥರಿಗೆ ಪ್ರಶ್ನೆಗಳನ್ನು ಕೇಳಿ ತಲ ಸ್ಪಶರ್ಿ ವಿವರಗಳನ್ನು ಪಡೆದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮಸ್ಥರು ತಾವು ಕುಡಿಯುತ್ತಿರುವ ನೀರಿನ ಗುಣ ಮಟ್ಟವನ್ನು ತೋರಿಸಿದರಲ್ಲದೆ, ತಮಗಾಗಿರುವ ಚರ್ಮ ರೋಗದ ಬಗ್ಗೆ, ಹೃದ್ರೋಗ, ಉಬ್ಬಸ ಮುಂತಾದ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಜ್ಞರೊಂದಿಗೆ ತೋಟಗಾರಿಕೆ ಇಲಾಖೆಯ ಉಪ ನಿದೇರ್ಶಕ ಪ್ರಸಾದ್, ಸಹಾಯಕ ನಿದೇರ್ಶಕ ರೇಣುಕ ಪ್ರಸಾದ್, ತಹಶೀಲ್ದಾರ್ ಎನ್.ಆರ್. ಉಮೇಶ ಚಂದ್ರ, ಪಿ.ಎಸೈ. ಚಿದಾನಂದ ಮೂತರ್ಿ ಹಾಜರಿದ್ದರು.ಬಾಕ್ಸ್:1ಸಿ.ಇ.ಸಿ ತಂಡ ಗುರುವಾರ ಗಣಿ ಪ್ರದೇಶದ ಉಳಿದ ಗ್ರಾಮಗಳಾದ ಗೋಡೆಕೆರೆ, ಸೊಂಡೇನಹಳ್ಳಿ, ಸೋಮನಹಳ್ಳಿ, ನಡುವನಹಳ್ಳಿ, ಬಗ್ಗನಹಳ್ಳಿ ಭಾಗದ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.ಮಾಹಿತಿಯ ಕೊರತೆ: ಸಿ.ಇ.ಸಿ.ತಂಡ ಗಣಿ ಪ್ರದೇಶಗಳಿಗೆ ಆಗಮಿಸಿ ಜನರಿಂದ ಮಾಹಿತಿ ಪಡೆಯುತ್ತದೆ ಎಂಬು ವಿಷಯ ತಿಳಿದಿತ್ತು ಆದರೆ ಬುಧವಾರವೇ ಹೊನ್ನೆಬಾಗಿ ಭಾಗದ ಹಳ್ಳಿಗಳಿಗೆ ಆಗಮಿಸುತ್ತದೆ ಎಂಬ ಮಾಹಿತಿ ತಮಗೆ ತಿಳಿದಿರಲಿಲ್ಲವೆಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ 36 ಪಂಪ್ ಸೆಟ್ ವಿತರಣೆಚಿಕ್ಕನಾಯಕನಹಳ್ಳಿ,ಅ.18:ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ತಾಲೂಕಿನ ಫಲಾನುಭವಿಗಳಿಗೆ ಮಂಜೂರಾಗಿರುವ ವಿವಿಧ ಸವಲತ್ತುಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ಪರಿಶಿಷ್ಟ ಜಾತಿಯವರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 36 ಜನ ಫಲಾನುಭವಿಗಳಿಗೆ ಒಂದು ಲಕ್ಷ ರೂ ಮೌಲ್ಯದ ಪಂಪ್ ಸೆಟ್ಗಳನ್ನು ವಿತರಿಸಲಾಯಿತು, ಒಂದು ಲಕ್ಷ ರೂಗಳ ಪೈಕಿ 86 ಸಾವಿರ ಸಕರ್ಾರದ ಸಬ್ಸಿಡಿಯಾದರೆ ಉಳಿದ 14 ಸಾವಿರ ರೂಗಳನ್ನು ಫಲಾನುಭವಿಗಳು ಸಂಬಂಧಿಸಿದ ನಿಗಮಕ್ಕೆ ಮರುಪಾವತಿ ಮಾಡಬೇಕು. ದೊಡ್ಡ ಬಿದರೆಯ ಶ್ರೀ ರೇಣುಕಾಂಬ ಸುಜಲ ಜಲಾನಯನ ಸಂಘದ 14 ಮಹಿಳಾ ಸದಸ್ಯರಿಗೆ ತಲಾ 25 ಸಾವಿರ ರೂ ಗಳ ಸಾಲ ಸೌಲಭ್ಯ ನೀಡಲಾಯಿತು, ಇದರಲ್ಲಿ 10 ಸಾವಿರ ಸಬ್ಸಿಡಿ, ಉಳಿದ 15 ಸಾವಿರ ಹಣವನ್ನು ಮರು ಪಾವತಿ ಮಾಡುವ ಷರತ್ತಿಗೊಳಪಟ್ಟು ಈ ಸಾಲವನ್ನು ನೀಡಲಾಗಿದೆ. ಅದೇ ರೀತಿ ಒಂದು ಟಾಟಾ ಇಂಡಿಕಾ ಕಾರ್ಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸಂದರ್ಭದಲ್ಲಿ ತಾ.ಪಂ. ಇ.ಓ. ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಅಭಿವೃದ್ದಿ ನಿಗಮದ ಮಧು ಉಪಸ್ಥಿತರಿದ್ದರು.(ಪೊಟೋ ಇದೆ. 18 ಸಿ.ಎನ್.ಎಚ್.ಪಿ1)ರೈತರಿಗೆ ಡೀಸೆಲ್ ದರದಲ್ಲಿ ರಿಯಾಯಿತಿ ನೀಡಲು ರೈತ ಮೋಚರ್ಾ ಒತ್ತಾಯಚಿಕ್ಕನಾಯಕನಹಳ್ಳಿ,ಸೆ.18: ಭಾರತೀಯ ಜನತಾ ಪಕ್ಷದ ರೈತ ಮೋಚರ್ಾ ಸಮಿತಿಯ ಕಾರ್ಯಗಾರಿ ಸಮಿತಿ ಸಭೆಯು ತಾ.ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ ಗುರುವಾಪುರ ಜಿ.ಎಸ್.ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಮೋಚರ್ಾ ಅಧ್ಯಕ್ಷರಾದ ರೇಣುಕಯ್ಯ, ಪ್ರಧಾನ ಕಾರ್ಯದಶರ್ಿ ಗರುಡಯ್ಯ, ತಾ.ಬಿಜೆಪಿ ಅಧ್ಯಕ್ಷ ಶಿವಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ರೈತ ಮೊಚರ್ಾದಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ರೈತ ಪ್ರಹರಿಗಳನ್ನು ನೇಮಿಸುವಂತೆಯೂ ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಬಳಸುವ ಜನುವಾರುಗಳ ಸಂಖ್ಯೆ ಕಡಿಮೆ ಇರುವುದರಿಂದ ರೈತರು ಟ್ರಾಕ್ಟರ್ ಅವಲಂಬಿಸಿರುವುದರಿಂದ ರೈತರಿಗೆ ವ್ಯವಸಾಯಕ್ಕೆ ಉತ್ತೇಜನ ನೀಡುವ ಸಲುವಾಗಿ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸುವಂತೆ ಕೇಂದ್ರ ಸಕರ್ಾರವನ್ನು ಒತ್ತಾಯಿಸಲಾಯಿತು.ರಾಜ್ಯ ಸಕರ್ಾರದಿಂದ ಬಿಡುಗಡೆ ಮಾಡಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸುವರ್ಣಬೂಮಿ ಯೋಜನೆಯ ಸಹಾಯ ಧನವನ್ನು ಅಧಿಕಾರಿಗಳು ವಿಳಂಬೆ ಮಾಡದೆ ತಕ್ಷಣ ರೈತರಿಗೆ ತಲುಪಿಸವುದು ಹಾಗೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳಲಾಗಿದೆ ಎಂದು ತಾಲೂಕು ರೈತ ಮೋಚರ್ಾದ ಪ್ರಧಾನ ಕಾರ್ಯದಶರ್ಿ ಕೆ.ಎಸ್.ಪರಮೇಶ್ವರಯ್ಯ ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ರೈತ ಮೋಚರ್ಾದ ಕಾರ್ಯದಶರ್ಿ ಎ.ಬಿ.ಶರತ್ ಕುಮಾರ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಮಹಿಳಾ ಜನಪ್ರತಿನಿಧಿಗಳಿಗೆ ರಾಜ್ಯಮಟ್ಟದ ವಿಚಾರ ಸಂಕೀರಣಚಿಕ್ಕನಾಯಕನಹಳ್ಳಿ.ಅ.17: ಮಹಿಳಾ ಜನಪ್ರತಿನಿಧಿಗಳ ರಾಜ್ಯಮಟ್ಟದ ವಿಚಾರ ಸಂಕೀರಣ ಮುಂಬರುವ ನವೆಂಬರ್ನಲ್ಲಿ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ತಿಳಿಸಿದ್ದಾರೆ. ನವೆಂಬರ್ 17 ರಿಂದ 19ರವರೆಗೆ ನಡೆಯುವ ವಿಚಾರ ಸಂಕೀರಣದಲ್ಲಿ ಜನತಂತ್ರ ಮತ್ತು ಸಂವಿಧಾನ, ಮಾನವ ಹಕ್ಕುಗಳು, ಕೌನ್ಸಿಲರ್ಗಳ ಪಾತ್ರ ಹಾಗೂ ಸ್ಥಳೀಯ ಸಕರ್ಾರದಲ್ಲಿ ಮಹಿಳಾ ಜನಪ್ರತಿನಿಧಿಗಳು ಸಕ್ರೀಯವಾಗಿ ಭಾಗವಹಿಸಬೇಕಾದರೆ ಆಡಳಿತಾತ್ಮಕವಾಗಿ ತರಬೇಕಾದ ಬದಲಾವಣೆಗಳ ಬಗ್ಗೆ ಚಚರ್ಿಸಲಾಗುವುದು ಎಂದರು. ಈ ಸಭೆಯಲ್ಲಿ ನಗರ ಸಂಶೋಧನಾ ಕೇಂದ್ರದ ಮಂಗಳೂರು ವಿಭಾಗದ ಹರಿಣಿ, ಬೆಂಗಳೂರು ವಿಭಾಗದ ಗುರುರಾಜ್ ಬುಥ್ಯಾ ಉಪಸ್ಥಿತರಿದ್ದರು.

Monday, October 17, 2011ಬರಗೂರು ಪಿ.ಡಿ.ಓ. ಅಮಾನತ್ತಿಗೆ ಒತ್ತಾಯಿಸಿ ತಾ.ಪಂ.ಕಛೇರಿ ಮುಂದೆ ಪ್ರತಿಭಟನೆಚಿಕ್ಕನಾಯಕನಹಳ್ಳಿ,ಅ.17: ಬರಗೂರು ಪಂಚಾಯಿತಿ ಪಿ.ಡಿ.ಓ. ಶಿವಕುಮಾರ್ರವರನ್ನು ಕರ್ತವ್ಯದಿಂದಲೇ ವಿಮುಕ್ತಿಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷ ಬಸವರಾಜು ರವರ ನೇತೃತ್ವದಲ್ಲಿ ಹಲವು ಪಂಚಾಯಿತಿಗಳ ಅಧ್ಯಕ್ಷರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ಒತ್ತಾಯಿಸಿದರು. ತಾಲೂಕಿನ ಬರಗೂರು ಗ್ರಾ.ಪಂ.ಯಲ್ಲಿ ಗಾಂಧಿಜಯಂತಿಯಂದು ನಡೆದ ಸ್ವಚ್ಚತಾ ಕಾರ್ಯಕ್ರಮದ ಗ್ರಾಮ ಸಭೆಯಲ್ಲಿ ಪಿ.ಡಿ.ಓ. ಶಿವಕುಮಾರ್ ಹಾಗೂ ಅಧ್ಯಕ್ಷ ಬರಗೂರು ಬಸವರಾಜು ಇಬ್ಬರೂ ಕೈ ಕೈ ಮೀಲಾಯಿಸಿದ್ದರು, ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಈಗ ಅಧ್ಯಕ್ಷ ಬಸವರಾಜು, ಸದಸ್ಯರು, ತಾಲೂಕಿನ ವಿವಿಧ ಗ್ರಾ.ಪಂ.ಅಧ್ಯಕ್ಷರು ಹಾಗೂ ಗ್ರಾಮಸ್ಥರು ತಾ.ಪಂ. ಕಛೇರಿ ಮುಂದೆ ಪಿ.ಡಿ.ಓ. ಶಿವಕುಮಾರ್ ರವರ ದೌರ್ಜನ್ಯ ಖಂಡಿಸಿ ಮತ್ತು ಅಮಾನತ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಬಸವರಾಜು, ಪಿ.ಡಿ.ಓ. ಶಿವಕುಮಾರ್ ರವರ ಮೇಲೆ 8 ಗುರುತರ ಆರೋಪಗಳಿದ್ದು, ಆರೆ, ಗುದ್ದಲಿ, ಸಿ.ಎಫ್.ಎಲ್ ಬಲ್ಪ್ಗಳ ಖರೀದಿಯಲ್ಲಿ, ವಸತಿ ಯೋಜನೆಗಳಲ್ಲೂ ಭ್ರಷ್ಟಾಚಾರ ನಡೆಸಿದ್ದರು, ಈ ಬಗ್ಗೆ ಸಾರ್ವಜನಿಕರೆದರು ಕೇಳಿದಾಗ ಏಕಾಏಕಿ ನನ್ನ ಮೇಲೆರಗಿದರು ಎಂದು ಆರೋಪಿಸಿದರಲ್ಲದೆ, ಜನಪ್ರತಿನಿಧಿಗಳಿಗೆ ಗೌರವವನ್ನು ಕೊಡುವ ಪ್ರವೃತ್ತಿಯನ್ನು ಬೆಳಿಸಿಕೊಂಡಿದ್ದಾರೆ ಎಂದರು.ತಾಲೂಕು ಗ್ರಾ.ಪಂ.ಅಧ್ಯಕ್ಷರುಗಳ ಒಕ್ಕೂಟದ ಅಧ್ಯಕ್ಷೆ ಹಾಗೂ ಗೋಡೆಕೆರೆ ಗ್ರಾ.ಪಂ. ಅಧ್ಯಕ್ಷೆ ಕುಶಲ ಮರಿಸ್ವಾಮಿ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಸದಾ ಜನರ ಬಳಿಯೇ ಇರುವುದರಿಂದ ನೀರು, ಸ್ವಚ್ಚತೆ ಹಾದಿಯಾಗಿ ಎಲ್ಲಾ ಸಮಸ್ಯೆಗಳಿಗೆ ನಾವು ತಕ್ಷಣ ಪ್ರತಿಕ್ರಿಯಿಸಿ ಸಮಸ್ಯೆ ಬಗೆಹರಿಸಬೇಕು, ಇಂತಹ ಸಂದರ್ಭಗಳಲ್ಲಿ ಪಿ.ಡಿ.ಓ.ಗಳು ಸ್ಥಳದಲ್ಲಿ ವಾಸ್ತವ್ಯವಿದ್ದರೆ ಜನರ ಸಮಸ್ಯೆಗಳನ್ನು ನಾವು ಶೀಘ್ರ ಪರಿಹರಿಸಲು ಸಹಾಯಕವಾಗುತ್ತದೆ ಇದನ್ನು ಅರಿತು ಕೆಲಸ ಮಾಡಬೇಕು ಎಂದರಲ್ಲದೆ, ಸಕರ್ಾರದಿಂದ ಬರುವ ಪ್ರತಿಯೊಂದು ಆದೇಶವನ್ನು ಜನಪ್ರತಿನಿಧಿಗಳಿಗೆ ತಿಳಿಸಬೇಕು ಆದರೆ, ಅನುದಾನಗಳ ಬಗ್ಗೆ ಬರುವ ಆದೇಶವನ್ನು ಪಿ.ಡಿ.ಓ.ಗಳು ತಮ್ಮ ಬಳಿ ಇಟ್ಟುಕೊಂಡು ನಮ್ಮನ್ನು ಕತ್ತಲಿಯಲ್ಲಿಟ್ಟಿರುತ್ತಾರೆ ಎಂದರು. ಕುಪ್ಪೂರು ಗ್ರಾ.ಪಂ. ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ತಾಲೂಕಿನ ಪಿ.ಡಿ.ಓ. ಗಳು ಸರಿಯಾದ ಸಮಯಕ್ಕೆ ಗ್ರಾ.ಪಂ.ಕಾಯರ್ಾಲಯಕ್ಕೆ ಬರುವುದಿಲ್ಲ ಸದಾ ತಾ.ಪಂ. ಕಛೇರಿಯಲ್ಲಿ ಬೀಡುಬಿಟ್ಟಿರುತ್ತಾರೆ, ಕೇಳಿದರೆ ಆ ಸಭೆ, ಈ ಸಭೆ ಇತ್ತು ಎಂದು ಸಬೂಬು ಹೇಳುತ್ತಾರೆ ಎಂದರು. ಮತ್ತಿಘಟ್ಟ ಗ್ರಾ.ಪಂ.ಅಧ್ಯಕ್ಷ ಮಹೇಶ್ ಮಾತನಾಡಿ ಅಧಿಕಾರ ವಿಕೆಂದ್ರೀಕರಣದಿಂದ ಗ್ರಾಮ ಮಟ್ಟಕ್ಕೆ ಅಧಿಕಾರ ಬಂದಿದೆ ಅದನ್ನು ಸದುಪಯೋಗ ಪಡಿಸಿಕೊಂಡು ಜನರಿಗೆ ಸೇವೆ ಮಾಡಲು ಮುಂದಾದರೆ ನಮ್ಮನ್ನು ನಿಯಂತ್ರಿಸುವವರು ಹಲವು ಮಂದಿ ಅದರ ಜೊತೆಗೆ ಅಧಿಕಾರ ಶಾಹಿಯೂ ಸರಿಯಾದ ರೀತಿಯಲ್ಲಿ ಸ್ಪಂದಿಸದಿದ್ದರೆ ನಾವು ಅಧಿಕಾರದಲ್ಲಿದ್ದು ಜನರಿಗೆ ಯಾವ ರೀತಿಯ ಸೇವೆಯನ್ನು ಕೊಟ್ಟಂತಾಗುತ್ತದೆ ಎಂದರು. ಕೆಂಕೆರೆ ತಾ.ಪಂ.ಸ್ಯದಸ್ಯ ನವೀನ್ ಮಾತನಾಡಿ, ಪಿ.ಡಿ.ಓಗಳು ಹಾಗೂ ಕಾರ್ಯದಶರ್ಿಗಳನ್ನು ಗ್ರಾ.ಪಂ.ಯಲ್ಲಿ ಹುಡುಕಿದರೂ ಸಿಗುವುದಿಲ್ಲ, ಅವರನ್ನು ನೋಡಬೇಕೆಂದರೆ ಚಿ.ನಾ.ಹಳ್ಳಿ.ಯ ಮಿಲ್ಟ್ರಿ ಹೋಟೆಲ್ ಹಾಗೂ ಬಾರ್ಗಳ ಬಳಿ ಬಂದರೆ ತಕ್ಷಣವೇ ಸಿಗುತ್ತಾರೆ ಎಂದರು. ಪ್ರತಿಭಟನಾಕಾರರ ನೇತೃತ್ವವಹಿಸಿದ್ದ ಬಸವರಾಜು ತಮ್ಮ ಮನವಿ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ ರವರಿಗೆ ಸಲ್ಲಿಸಿದರು. ಇ.ಓ.ದಯಾನಂದ ಮನವಿ ಸ್ವೀಕರಿಸಿ ಮಾತನಾಡಿ, ಪಿ.ಡಿ.ಓ.ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಇ.ಓ.ಗಳಿಗೆ ಅಧಿಕಾರವಿರುವುದಿಲ್ಲ, ನಾನು ನಿಮ್ಮ ಮನವಿಯನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿದರು. ಪ್ರತಿಭಟನೆಯಲ್ಲಿ ಮಾಜಿ ಜಿ.ಪಂ.ಸದಸ್ಯೆ ಬಿ.ಎನ್.ಶಿವಪ್ರಕಾಶ್, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಹುಳಿಯಾರ್ ಗ್ರಾ.ಪಂ.ಅಧ್ಯಕ್ಷ ಮಹಮದ್ ಸಯದ್ ಅನ್ಸರ್ ಆಲಿ ಸೇರಿದಂತೆ ಹಲವು ಗ್ರಾ.ಪಂ. ಅಧ್ಯಕ್ಷರುಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.


ಸಿಇಸಿಯ ಮೂರನೇ ತಂಡ ಚಿ.ನಾ.ಹಳ್ಳಿ ಗಣಿ ಪ್ರದೇಶಕ್ಕೆ ಭೇಟಿಚಿಕ್ಕನಾಯಕನಹಳ್ಳಿ,

ಅ.17: ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಪರಿಣಾಮ/ದುಷ್ಪರಿಣಾಮಗಳನ್ನು ಅಧ್ಯಯನ ಮಾಡಲು ಸುಪ್ರೀಂಕೋಟರ್್ ನೇಮಿಸಿರುವ ಸಿಇಸಿ ತಂಡದ ಸದಸ್ಯರು ಸೋಮವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಗಣಿ ಪ್ರದೇಶಕ್ಕೆ ಭೇಟಿ, ನೀರಿನ ಮೂಲಗಳ ಮೇಲೆ ಆಗಿರುವ ಪರಿಣಾಮ ಶೋಧಿಸಿತು.ಬೆಳಗ್ಗೆ 11.30ರ ಸುಮಾರಿಗೆ ಸಿಇಸಿ ತಂಡದ ನಾಲ್ಕೈದು ಮಂದಿ ಸದಸ್ಯರು ಚಿಕ್ಕನಾಯಕನಹಳ್ಳಿ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಬಳಿಕ ಗಣಿ ಹೊನ್ನೆಬಾಗಿ, ಬುಳ್ಳೇನಹಳ್ಳಿ ಮಾರ್ಗದಲ್ಲಿ ಗಣಿ ಪ್ರದೇಶಕ್ಕೆ ತೆರಳಿದರು. ಅಬ್ಬಿಗೆ ಗುಡ್ಡದಲ್ಲಿ ನಡೆದಿರುವ ಗಣಿಗಳಿಗೆ ಭೇಟಿ ನೀಡಿದ ಸದಸ್ಯರು, ಪುನಾಃ ಪ್ರವಾಸಿ ಮಂದಿರಕ್ಕೆ ಆಗಮಿಸಿ ವಾಪಸಾದರು.ಇದರಿಂದಾಗಿ ಸಿಇಸಿ ತಂಡದ ಪೈಕಿ 3ನೇ ಉಪ ತಂಡ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶಕ್ಕೆ ಭೇಟಿ ನೀಡಿದಂತಾಗಿದೆ. ನೀರಿನ ಮೂಲ ಶೋಧ:ಸೋಮವಾರ ಭೇಟಿ ನೀಡಿದ್ದ ತಂಡ ಕೇವಲ ನೀರಿನ ಮೂಲದ ಮೇಲಾಗಿರುವ ಪರಿಣಾಮ ಶೋಧಿಸಿತು. ಬುಳ್ಳೇನಹಳ್ಳಿ, ಹೊನ್ನೆಬಾಗಿ ಸೇರಿದಂತೆ ಈ ಬೆಟ್ಟದ ತಳ ಭಾಗದಲ್ಲಿರುವ ಕೆರೆ, ಕೊಳವೆ ಬಾವಿಗಳ ನೀರು ಸಂಗ್ರಹಿಸಿದ ತಂಡ, ಗಣಿಗಾರಿಕೆಯಿಂದ ನೀರಿನ ಮೇಲೆ ದುಷ್ಪರಿಣಾಮವಾಗಿದೆಯೇ ಎಂದು ತಲೆ ಕೆಡಿಸಿಕೊಂಡಿತು. ತುಮಕೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಿಇಸಿ ತಂಡದ ಜೊತೆಯಲ್ಲಿದ್ದರು.ಬಾಲಾಜಿ ಮೈನ್ಸ್ ಸಮೀಕ್ಷೆ:ಈ ಹಿಂದೆ ಎಲ್ಲ ಗಣಿಗಳ ಸವರ್ೆ ಕಾರ್ಯ ನಡೆದಿತ್ತು. ಅಬ್ಬಿಗೆ ಗುಡ್ಡದ ತುದಿಯಲ್ಲಿರುವ ಬಾಲಾಜಿ ಮೈನ್ಸ್ ಸವರ್ೆ ಕಾರ್ಯ ಮಾತ್ರ ಉಳಿದಿತ್ತು. ಸೋಮವಾರ ಅರಣ್ಯ, ಗಣಿ ಇಲಾಖೆ, ಜಿಲ್ಲಾಡಳಿತ ಜಂಟಿಯಾಗಿ ಸವರ್ೆ ಕಾರ್ಯ ನಡೆಸಿದವು.ಬಾಕ್ಸ್-1ಮಳೆಗಾಲದಲ್ಲಿ ಶೋಧ ಸರಿಯೇ?ಕಳೆದ ಜೂನ್ ಅಂತ್ಯದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಳೆ ಆರಂಭವಾಗಿದೆ. ಈವರೆಗೂ ವಾಡಿಕೆ ಮಳೆ ಸಂಪೂರ್ಣವಾಗಿ ಆಗಿಲ್ಲ. ಆದರೂ ಶೇ.40ರಷ್ಟು ಮಳೆಯಾಗಿದೆ.ಗಣಿಗಾರಿಕೆ ಪ್ರದೇಶವಾದ ಅಬ್ಬಿಗೆ ಗುಡ್ಡ, ಸೊಪ್ಪಿನ ಗುಡ್ಡ ಪ್ರದೇಶಗಳ ಸುತ್ತಮುತ್ತಲ ಹಳ್ಳ, ಕೊಳ್ಳ, ಕೆರೆ, ಕಟ್ಟೆಗಳ ನೀರು ಮಳೆಯಿಂದಾಗಿ ಹೊಸ ನೀರು ಬಂದು ತಿಳಿಯಾಗಿದೆ. ಅದರಲ್ಲೂ ತಾಲೂಕಿನೆಲ್ಲೆಡೆಗಿಂತ ಈ ಗಣಿ ಗುಡ್ಡಗಳ ಪ್ರದೇಶದಲ್ಲೇ ಅತಿ ಹೆಚ್ಚು ಮಳೆಯಾಗುತ್ತದೆ. ಇದರಿಂದ ಗಣಿ ಗುಡ್ಡದ ಧೂಳೆಲ್ಲ ಜೂನ್ ಅಂತ್ಯದಿಂದ ಸುರಿದ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಪರಿಸರ, ಗಿಡ, ಮರ, ಗಣಿ ಲಾರಿಗಳು ಸಾಗುವ ದಾರಿಗಳ ಇಕ್ಕೆಗಳ ಹಸಿರು ಗಿಡಗಳೆಲ್ಲ ಮಳೆ ನೀರಿನಿಂದ ತೊಳೆದು ಸ್ವಚ್ಛ ಪರಿಸರ ಉಂಟಾಗಿದೆ.ಮೊದಲ ಮಳೆಗೇ ಎಲ್ಲ ಧೂಳು ಕೊಚ್ಚಿಕೊಂಡು ಹೋಗಿದ್ದು, ಆ ಬಳಿಕ ಸುರಿದ ಮಳೆಯ ತಿಳಿಯಾದ, ಸ್ವಚ್ಛ ನೀರು ಈಗ ಕೆರೆ, ಕಟ್ಟೆಗಳಲ್ಲಿವೆ. ಬೇಸಿಗೆಯಲ್ಲಿ ಧೂಳು ಹಿಡಿದು ಕೆರೆ ನೀರು ಹಾಳಾಗಿರುತ್ತವೆ. ಆಗ ನೀರಿನ ಮೇಲಾಗಿರುವ ಪರಿಣಾಮ ಶೋಧಿಸದೇ ಮಳೆಗಾಲದಲ್ಲಿ ನೀರಿನ ಮೇಲಾಗಿರುವ ಪರಿಣಾಮ ಶೋಧಿಸುತ್ತಿರುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ.ಆದರೆ ಮಳೆ ನೀರು ಅಂತರ್ಜಲ ಸೇರುವುದರಿಂದ ಅಂತರ್ಜಲದ ಮೇಲಾಗಿರುವ ಪರಿಣಾಮವನ್ನು ಶೋಧಿಸಲು ಈಗ ಸಕಾಲ ಎಂಬ ಅಭಿಪ್ರಾಯವೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

Wednesday, October 12, 2011

Friday, October 7, 2011


ಚಿ.ನಾ..ಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಒಗ್ಗೂಡಿಸಿ ಉಗ್ರಹೋರಾಟ
ಚಿಕ್ಕನಾಯಕನಹಳ್ಳಿ,ಸೆ.07 : ಸಕರ್ಾರ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ತಾಲ್ಲೂಕಿನ ಪ್ರತಿ ಹಳ್ಳಿಹಳ್ಳಿಯಲ್ಲೂ ಎಲ್ಲಾ ಪಕ್ಷ, ರೈತರು ಹಾಗೂ ಸಾರ್ವಜನಿಕರನ್ನು ಒಗ್ಗೂಡಿಸಿ ಉಗ್ರಹೋರಾಟ ನಡೆಸುವುದಾಗಿ ಶಾಸಕ ಸಿ.ಬಿ.ಸುರೇಶ್ಬಾಬು ಸಕರ್ಾರಕ್ಕೆ ಎಚ್ಚರಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದಿರುವ ಬಗ್ಗೆ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ತಾಲ್ಲೂಕು ಕಛೇರಿ ಆವರಣದಲ್ಲಿ ಮಾತನಾಡಿದರು.
ಡಾ.ನಂಜುಡಪ್ಪರವರ ವರದಿಯನ್ವಯ ತಾಲ್ಲೂಕು ಅತಿಹಿಂದುಳಿದ ಪ್ರದೇಶವಾಗಿದ್ದು ಇಲ್ಲಿನ ರೈತರು ಮಳೆಯನ್ನು ತಮ್ಮ ಬದುಕಿಗೆ ಅಳವಡಿಸಿಕೊಂಡು ಜೀವನ ನಡೆಸುತ್ತಿರುವವರು ಮುಂಗಾರು ಮತ್ತು ಹಿಂಗಾರು ಮಳೆಯಿಲ್ಲದೆ ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ ಅಲ್ಲದೆ ತಾಲ್ಲೂಕಿನಲ್ಲಿರುವ 195600 ಜಾನುವಾರುಗಳಿಗೆ ಮೇವಿನ ಸಮಸ್ಯ ಎದುರಾಗಿದ್ದು ರೈತರು ತೀವ್ರ ಆಥರ್ಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ, ಈ ಪ್ರದೇಶದಲ್ಲಿ ಬರಗಾಲ ಕಾಣಿಸಿಕೊಂಡಿರುವುದರಿಂದ ಹಿಂಗಾರು, ಮುಂಗಾರು ಬೆಳೆಯ ವೈಪಲ್ಯದ ಬಗ್ಗೆ ಈಗಾಗಲೇ ಸಕರ್ಾರಕ್ಕೆ ವರದಿ ನೀಡಲಾಗಿದೆ ಆದರೂ ಬರಪ್ರದೇಶದ ಹೆಸರಿನಿಂದ ತಾಲ್ಲೂಕನ್ನು ಕೈಬಿಟ್ಟಿರುವುದರಿಂದ ಜನತೆ ಮುಂದಿನ ದಿನಗಳಲ್ಲಿ ಆಥರ್ಿಕ ಸಂಕಷ್ಟ ಎದುರಿಸಲಿದ್ದಾರೆ ಎಂದ ಅವರು ತಾಲ್ಲೂಕಿನಲ್ಲಿ ನೀರಿನ ಜೊತೆಗೆ ವಿದ್ಯುತ್ ಸಮಸ್ಯೆಯೂ ಎದುರಾಗಿದೆ ತಾಲ್ಲೂಕಿನಲ್ಲಿ ವ್ಯಾಪ್ತಿಯಲ್ಲಿ ಸುಮಾರು 19000 ಐ.ಪಿ.ಸೆಟ್ಟುಗಳು ಚಾಲನೆಯಲ್ಲಿದ್ದು ಐ.ಪಿ.ಸೆಟ್ ಹೊಂದಿರುವ ರೈತರಿಗೆ ಉತ್ತಮ ವೋಲ್ಟೇಜ್ ಒದಗಿಸಲು ತೊಂದರೆಯಾಗಿರುತ್ತದೆ ಅಲ್ಲದೆ ಇತ್ತೀಚಿನ ಅನಿಯಮಿತ ಲೋಡ್ಶೆಡ್ಡಿಂಗ್ನಿಂದ ಸಾಕಷ್ಟು ತೊಂದರೆಯಾಗುತ್ತಿದ್ದು ಬಡರೈತರ ಹಿತದೃಷ್ಠಿಯಿಂದ ಇವುಗಳನ್ನು ತಪ್ಪಿಸಲು ಹೋರಾಟ ಆರಂಬಿಸಿದ್ದು ತಕ್ಷಣಕ್ಕೆ ಪಕ್ಷದ ಜನಪ್ರತಿನಿಧಿಗಳ ವತಿಯಿಂದ ನಡೆಯುತ್ತಿರುವ ಈ ಪ್ರತಿಭಟನೆಯು ತಾಲ್ಲೂಕನ್ನು ಸಕರ್ಾರ ಬರಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಎಲ್ಲಾ ಪಕ್ಷಗಳ ಜೊತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು.
ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಈಗಾಗಲೇ ಮಳೆಯಿಲ್ಲದೇ ಆಹಾರ ಧಾನ್ಯ ಬೆಳೆಯು ಇಳಿಮುಖವಾಗಿದ್ದು ರೈತರು ಕಂಗಾಲಾಗಿದ್ದಾರೆ, ನೀರಿಗಾಗಿ ಪರದಾಡುತ್ತಿದ್ದಾರೆ ಇದರ ಕೂಲಂಕುಶವಾಗಿ ಜಿಲ್ಲಾಧಿಕಾರಿಗಳು ಅರಿತು ತಾಲ್ಲೂಕನ್ನು ಬರಪೀಡಿತ ಪ್ರದೇಶವಾಗಿ ಘೋಷಿಸಬೇಕು ಎಂದು ಹೇಳಿದರು.
ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂಬಿ.ನಾಗರಾಜು, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ಚಂದ್ರಶೇಖರಶೆಟ್ಟರು ಮಾತನಾಡಿದರು.
ಪ್ರತಿಭಟನೆಯಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ಸಿ.ಎಸ್.ರಮೇಶ್, ಎಂ.ಎನ್.ಸುರೇಶ್, ಸಿ.ಕೆ.ಕೃಷ್ಣಮೂತರ್ಿ, ರಾಜಣ್ಣ, ರುಕ್ಮಿಣಮ್ಮ, ಮಾಜಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ , ತಾ.ಪಂ.ಸದಸ್ಯರಾದ ಲತಾ, ಚೇತನಗಂಗಾಧರ್ ಮುಂತಾದವರಿದ್ದರು.