Wednesday, July 23, 2014

ಎಸ್.ಎಫ್.ಸಿ.ಯೋಜನೆಯ ಎರಡು ಕೋಟಿ ಅನುದಾನ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ವಿನಿಯೋಗ.

ಚಿಕ್ಕನಾಯಕನಹಳ್ಳಿ,23: ಪಟ್ಟಣದ ಪುರಸಭೆಯ ವಾಡರ್್ಗಳಲ್ಲಿನ ಅಭಿವೃದ್ದಿಗೆ ವಿಶೇಷ ಹಣಕಾಸು ಯೋಜನೆಯ ಎರಡು ಕೋಟಿ ಏಳು ಲಕ್ಷ ರೂಗಳನ್ನು ವಿವಿಧ ಕಾಮಗಾರಿಗಳಿಗೆ ವಿನಿಯೋಗಿಸಲು ವಿಶೇಷ ಸಭೆಯಲ್ಲಿ ತೀಮರ್ಾನಿಸಲಾಯಿತು.
 ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪಾ.ಟಿ.ರಾಮಯ್ಯರವರ ಅಧ್ಯಕ್ಷತೆಯಲ್ಲಿ ಕರೆದಿದ್ದ ವಿಶೇಷ ಸಭೆಯಲ್ಲಿ 2013-14ನೇ ಸಾಲಿನ 13ನೇ ಹಣಕಾಸು ಯೋಜನೆ ಬಾಕಿ ಇದ್ದ 85.87 ಲಕ್ಷ ಅನುದಾನ ಹಾಗೂ 14-15ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಯೋಜನೆಯ ಉಳಿಕೆ 44.66ಲಕ್ಷ ಅನುದಾನ ಹಾಗೂ 14-15ನೇ ಸಾಲಿನ 13ನೇ ಹಣಕಾಸು ಯೋಜನೆಯ 77.07 ಲಕ್ಷ ಅನುದಾನದ ವಿಂಗಡಣೆ ಮಾಡಿ ಯೋಜನೆ ರೂಪಿಸಲಾಯಿತು.
 ನೀರು ಲಭ್ಯತೆಗನುಗಣುವಾಗಿ ಕೊಳವೆಬಾವಿ ಕೊರೆಸುವಂತೆ ಹಾಗೂ ಶುದ್ದ ಕುಡಿಯುವ ನೀರು ಘಟಕಗಳ ಸ್ಥಾಪನೆ, ಘನತ್ಯಾಜ್ಯ ವಸ್ತುವಿನಿಂದ ಎರೆಹುಳು ಗೊಬ್ಬರ ತಯಾರಿಸುವ ಘಟಕಗಳಿಗೆ ಆದ್ಯತೆ, 23ವಾಡರ್್ಗಳಲ್ಲಿ ಅಗತ್ಯವಿರುವ ಕಡೆ ಕಂಟೈನರ್ ಇಡುವುದು, ಘನತ್ಯಾಜ್ಯ ಸಾಗಿಸುವ ವಾಹನ ಖರೀದಿಸುವಂತೆ ಹಾಗೂ ನೀರು ಸಂಗ್ರಹಕ್ಕಾಗಿ ಕೆರೆಯ ಹೂಳು ಎತ್ತಲು ಸದಸ್ಯರೆಲ್ಲಿ ಕೇಳಿಬಂದಾಗ ಮತ್ತೋರ್ವ ಸದಸ್ಯ ಮೊದಲು ಪಟ್ಟಣದ ಕೆರೆಯನ್ನು ಪುರಸಭೆಯ ವಶಕ್ಕೆ ಪಡೆದ ಮೇಲೆ ಚಚರ್ಿಸೋಣ ಎಂದರು.
 ಪಟ್ಟಣದಲ್ಲಿರುವ ಮತಿಘಟ್ಟ ಗೇಟ್ ಬಳಿ ಕಳೆದ 6ತಿಂಗಳಿನಿಂದ ಕುಡಿಯುವ ನೀರನ್ನು ಕೊಳಾಯಿ ಮೂಲಕ ಬಿಟ್ಟಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪವಾಗಿ ಆ ಬಗ್ಗೆಯ ಚಚರ್ೆಯಲ್ಲಿ ಗೊಂದಲವಾಯಿತು. ಈ ಕೂಡಲೇ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುಖ್ಯಾಧಿಕಾರಿ ವೆಂಕಟೇಶ್ ಶೆಟ್ಟಿ ಉತ್ತರಿಸಿದರು.
 ಪಟ್ಟಣದ ಹೃದಯ ಭಾಗದಲ್ಲಿ ನಡೆಯುವ ಮಾರುಕಟ್ಟೆಗೆ ಮಹಿಳೆಯರೇ ಹೆಚ್ಚಾಗಿ ವ್ಯಾಪಾರ ಮಾಡಲು ಹಾಗೂ ಖರೀದಿಸಲು ಬರುತ್ತಾರೆ ಅವರಿಗೂ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಾಲಯ ನಿಮರ್ಾಣಕ್ಕೆ ಕ್ರಿಯಾಯೋಜನೆಯಲ್ಲಿ ಸೇರಿಸಬೇಕು ಎಂದು ಸದಸ್ಯ ಟಿಂಬರ್ ಮಲ್ಲೇಶ್ ಕೋರಿಕೆಗೆ ಪ್ರತಿರೋಧವಾಗಿ ಸದಸ್ಯ ಸಿ.ಎಂ.ರಂಗಸ್ವಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು, ಅಲ್ಲಿಗೆ ಶೌಚಾಲಯ ಬೇಕಿಲ್ಲ, ಬಳಸುವುದಿಲ್ಲ ನನ್ನ ವಾಡರ್್ನಲ್ಲಿ ನಿಮರ್ಿಸಲು ನಾನು ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಮಾತನಾಡಿದರು.
 ಇದಕ್ಕೆ ಸದಸ್ಯರು ಕೂಡಲೇ ಪ್ರತಿಕ್ರಿಯಿಸಿ ಪುರಸಭೆ ಸಾರ್ವಜನಿಕರ ಸ್ವತ್ತು ಅಗತ್ಯ ಅಂಶಗಳನ್ನು ಮನಗಂಡೇ ಪೂರೈಸಬೇಕಾಗಿದ್ದು ಪುರಸಭೆಯ ಜವಬ್ದಾರಿ ನೀವು ಸದಸ್ಯರಾಗಿ ಈ ರೀತಿ ಮಾತನಾಡಬಾರದು ಶೌಚಾಲಯ ನಿಮರ್ಿಸಿವುದು ಸಾರ್ವಜನಿಕರ ಉಪಯೋಗಕ್ಕೆ ಎಂದು ಸದಸ್ಯ ಟಿಂಬರ್ ಮಲ್ಲೇಶ್ ಬೆಂಬಲಕ್ಕೆ ನಿಂತರು. ಅಂತಿಮವಾಗಿ ಶೌಚಾಲಯ ನಿಮರ್ಿಸಲು ಸಭೆ ತೀಮರ್ಾನಿಸಿತು.
 ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಪ್ರಕಾಶ್ ಹೆಚ್.ಬಿ, ಸಿ.ಎಸ್.ರಮೇಶ್, ಮಹಮದ್ಖಲಂದರ್, ಅಶೋಕ್, ಸಿ.ಟಿ.ದಯಾನಂದ್, ರಾಜಶೇಖ
ರ್, ರೇಣುಕಾಗುರುಮೂತರ್ಿ, ಧರಣಿಲಕ್ಕಪ್ಪ, ರೇಣುಕಾಸಣ್ಣಮುದ್ದಯ್ಯ, ರೂಪಾ, ಪ್ರೇಮಾ ಮತ್ತಿತರರು ಉಪಸ್ಥಿತರಿದ್ದರು.
 
ಲೋಕಾಯುಕ್ತರ ಭೇಟಿ

ಚಿಕ್ಕನಾಯಕನಹಳ್ಳಿ,ಜೂ.23: ಜಿಲ್ಲಾ ಲೋಕಾಯುಕ್ತ ಕಛೇರಿಯಿಂದ ಬರುವ ದೂರವಾಣಿ ಕರೆಗಳಿಗೆ ಅಸಡ್ಡೆ ತೋರುವ ಇಲಾಖೆಗಳ ಬಗ್ಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಗೌತಮ್ ಬೇಸರ ವ್ಯಕ್ತಪಡಿಸಿದರು.
 ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಲೋಕಾಯುಕ್ತ ಕಛೇರಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಹಲವು ಮಾಹಿತಿಗಳನ್ನು ಕೇಳಲು ನಾವು ಕಛೇರಿಗಳಿಗೆ ಪೋನ್ ಮಾಡಿದರೆ, ಕಛೇರಿಯ ಅಟೆಂಡರ್ ಅಥವಾ ವಿಷಯಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಪೋನ್ ಎತ್ತಿಕೊಂಡು ಜಾರಿಕೆಯ ಉತ್ತರ ನೀಡುವ ಪರಿಪಾಠ ಹಲವು ಕಛೇರಿಗಳಲ್ಲಿ ಹೆಚ್ಚಾಗಿದೆ. ಇದು ತಪ್ಪಬೇಕು ಎಂದರಲ್ಲದೆ, ಸಾರ್ವಜನಿಕರ ಕರೆಗಳಿಗೂ ಸ್ಪಂದನೆ ನೀಡಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ತಾಕೀತು ಮಾಡಿದರು.
 ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ನೀಡುವ ಅಜರ್ಿಗಳನ್ನು ನಾವು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ವಿಲೇ ಮಾಡಲಾಗುವುದು, ಈ ಬಗ್ಗೆ ತಾವು ತೆಗೆದುಕೊಳ್ಳುವ ಕ್ರಮದ ಬಗ್ಗೆ ನಮ್ಮ ಕಛೇರಿಗೆ ಹಾಗೂ ಅಜರ್ಿದಾರರಿಗೆ ಇಬ್ಬರಿಗೂ ಮಾಹಿತಿ ನೀಡುವುದು ಕಡ್ಡಾಯ, ನೀವು ನಮಗೊಬ್ಬರಿಗೆ ಮಾಹಿತಿ ನೀಡಿದರೆ ಅಜರ್ಿದಾರರು ರಾಜ್ಯ ಲೋಕಾಯುಕ್ತ ಕಛೇರಿಗೆ ಮತ್ತೆ ಅಜರ್ಿ ಸಲ್ಲಿಸುತ್ತಾರೆ ಇದರಿಂದ ನಮಗೆ ಹಾಗೂ ಇಲಾಖಾ ಅಧಿಕಾರಿಗಳಾದ ನಿಮಗೆ ಇಬ್ಬರಿಗೂ ಗೊಂದಲ ಉಂಟಾಗುತ್ತದೆ ಎಂದರು.
 ಗಣಿ ಪ್ರದೇಶದಲ್ಲಿನ ಹಳ್ಳಿಗಳ ಕಚ್ಚಾ ರಸ್ತೆಯೂ ಗುಂಡಿ ಗೊಟರುಗಳಿಂದ ಕೂಡಿದ್ದು ರಸ್ತೆಗಳು ಸಂಪೂರ್ಣ ಹಾಳಾಗಿದೆ ಹಾಗೂ ಇಂತಹ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಆ ಭಾಗದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗಿದ್ದು ಆರೋಗ್ಯದ ಮೇಲೂ ಸಾಕಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇಲ್ಲಿನ ಧೂಳಿನಿಂದ ಬೆಳೆಗಳೂ ಹಾಳಾಗುತ್ತಿವೆ ಎಂದು ನಂಜುಂಡಪ್ಪ ಲೋಕಾಯುಕ್ತರ ಬಳಿ ದೂರಿದರು.
 ಜನ ಸಂಪರ್ಕ ಸಭೆ ಮಧ್ಯಾಹ್ನ 3ರಿಂದ 5ರವರಗೆ ನಡೆಯಿತು ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 12 ಅಜರ್ಿಗಳನ್ನು ಸ್ವೀಕರಿಸಿದ್ದು, ಇವುಗಳಲ್ಲಿ 7 ಅಜರ್ಿಗಳಿಗೆ ಹದಿನೈದು ದಿನಗಳೊಳಗೆ ಉತ್ತರಿಸುವಂತೆ, 3 ಅಜರ್ಿಗಳನ್ನು ಉಪ ಲೋಕಾಯುಕ್ತರಿಗೆ ಹಾಗೂ ಎರಡು ಅಜರ್ಿಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು.
  ಈ ಸಂದರ್ಭದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣನಾಯ್ಕ್, ಸಿ.ಡಿ.ಪಿ.ಓ ಅನೀಸ್ಖೈಸರ್, ಸಬ್ಇನ್ಸ್ಪೆಕ್ಟರ್ ಮಹಾಲಕ್ಷ್ಮಮ್ಮ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 
 

ಅನಾಥ ನವಜಾತ ಹೆಣ್ಣು ಶಿಶು ಪತ್ತೆ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ

ಚಿಕ್ಕನಾಯಕನಹಳ್ಳಿ,ಜು.23: ತಾಲೂಕಿನ ಹೊಯ್ಸಳಕಟ್ಟೆ ಸಕರ್ಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಅನಾಥ ನವಜಾತ ಹೆಣ್ಣು ಶಿಶು ಪತ್ತೆಯಾಗಿದ್ದು, ಶಿಶುವನ್ನು ಸಿ.ಡಿ.ಪಿ.ಓ ವಶಕ್ಕೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
 ವಿಷಯ ತಿಳಿದ ಅಂಗನವಾಡಿ ಸೂಪರ್ವೈಸರ್, 108 ಅಂಬ್ಯೂಲೆನ್ಸ್ ನಲ್ಲಿ ಚಿ.ನಾ.ಹಳ್ಳಿ ಸಕರ್ಾರಿ ಆಸ್ಪತ್ರೆ ತಂದಿದ್ದು, ಮಗುವನ್ನು ತಪಾಸಣೆ ಮಾಡಿದ ಮಕ್ಕಳ ತಜ್ಞೆ ಡಾ.ಶಶಿರೇಖಾ, ಮಗು ಅವಧಿ ಪೂರ್ವ ಜನನವಾಗಿರುವುದರಿಂದ ಮಗುವಿನ ತೂಕ ಒಂದುವರೆ ಕೆ.ಜಿ.ಯಷ್ಟು ಇದೆ ಎಂದರು.  ಇಲ್ಲಿ   ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಎ.ಸಿ.ಡಿ.ಪಿ.ಓ. ಪರಮೇಶ್ವರಪ್ಪ ಕೊಂಡ್ಯೊಯ್ದಿದ್ದಾರೆ. ಮಗುವಿನ ಆರೋಗ್ಯ ಸುಸ್ಥಿರವಾಗಿದ್ದು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ವಶಕ್ಕೆ ನೀಡಲಾಗಿದೆ.