Saturday, June 18, 2011ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಕನಿಷ್ಟ ಮೂರು ತಿಂಗಳಿಗೊಮ್ಮೆಯಾದರೂ ಶಾಲೆಗೆ: ಪೋಷಕರಿಲ್ಲಿ ಮನವಿ.
ಚಿಕ್ಕನಾಯಕನಹಳ್ಳಿ,ಜೂ.18: ಕನಿಷ್ಠ 3 ತಿಂಗಳಿಗೊಮ್ಮೆ ಪೋಷಕರ ಸಭೆ ಕರೆದು ಪ್ರತಿ ಮಕ್ಕಳ ಪ್ರಗತಿ ಹಾಗೂ ಶಾಲಾ ಕಾಮಗಾರಿಗಳ ಬಗ್ಗೆ ಪರಿಶೀಲಿಸುವುದು ಪ್ರತಿ ಪೋಷಕರ ಕರ್ತವ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಎ.ಬಿ.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ದೇಶೀಯಾ ವಿದ್ಯಾಪೀಠ ಬಾಲಕರ ಪ್ರೌಡಶಾಲಾ ಆವರಣದಲ್ಲಿ ನಡೆದ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್.ಡಿ.ಎಂ.ಸಿ ಅಧ್ಯಕ್ಷರು ಶಾಲೆಯ ಎಲ್ಲ ರೀತಿಯ ಭೌತಿಕ ಅವಶ್ಯಕತೆಗಳನ್ನು ಪೂರೈಸಿ ಊರಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ದೊರಕುವಂತೆ ನೋಡಿಕೊಳ್ಳುವ ಜವಾಬ್ದಾರಿ ಮತ್ತು ಯಾವ ಮಗುವೂ ಶಾಲೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಿಸಬೇಕು ಎಂದರಲ್ಲದೆ ಶಾಲೆಯ ಮುಖ್ಯ ಶಿಕ್ಷಕರ ರಜೆ ಮಂಜೂರು ಮಾಡುವುದು ಎಸ್.ಡಿ.ಎಂ.ಸಿ ಅಧ್ಯಕ್ಷರುಗಳ ಜವಬ್ದಾರಿಯಾಗಿದೆ ಎಂದರು.
ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ, ಶಿಕ್ಷಕರ ಜೊತೆ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರುಗಳು ಸಹಕಾರದಿಂದ ಕಾರ್ಯನಿರ್ವಹಿಸಿದರೆ ಶಾಲೆಯು ಶೈಕ್ಷಣಿಕವಾಗಿ ಅಭಿವೃದ್ದಿಯಾಗುತ್ತದೆ ಎಂದರು.
ಸಮನ್ವಯಾಧಿಕಾರಿ ಜಗದೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಹೆಣ್ಣು ಮಕ್ಕಳಿಗೆ ಎಸ್ಕಾಟರ್್ ಸೇವೆಯನ್ನು ನೀಡುವುದು, ನಲಿ-ಕಲಿ ಎಂಬ ಕಲಿಕಾ ವಿಧಾನವನ್ನು ಶಿಕ್ಷಕರ ಜೊತೆಗೂಡಿ ಯಶಸ್ವಿಗೊಳಿಸುವುದು, ಶಾಲಾ ಆಸ್ತಿ ರಕ್ಷಣೆ ಹಾಗೂ ನಿರ್ವಹಣೆ, ಮಕ್ಕಳಿಗೆ ಅಗಗತ್ಯವಿರುವ ಪರಿಕರಗಳು ಸಮಯಕ್ಕೆ ಸರಿಯಾಗಿ ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಶಾಲೆಯ ಎಲ್ಲಾ ದಾಖಲೆಗಳ ಮೇಲ್ವಿಚಾರಣೆ ಹಾಗೂ ಪರಿಶೀಲನೆ ಮಾಡುವುದು, ಶಾಲೆಯಲ್ಲಿ ದೊರೆಯುವ ಎಲ್ಲಾ ಪ್ರೋತ್ಸಾಹದಾಯಕ ವಿತರಣೆಗಳನ್ನು ಖಚಿತಪಡಿಸಿಕೊಂಡು ಅದರ ಮೇಲ್ವಿಚಾರಣೆ ಮಾಡುವುದು ಎಸ್.ಡಿ.ಎಂ.ಸಿ.ಯ ಜವಬ್ದಾರಿಯಾಗಿರುತ್ತದೆ ಎಂದ ಅವರು, ಶಾಲೆಗೆ ಅವಶ್ಯವೆನಿಸುವ ಚರಸ್ವತ್ತುಗಳನ್ನು ಖರೀದಿ ಮಾಡುವುದು, ಅವರು ಶಾಲೆಯ ಅಭಿವೃದ್ದಿಗಾಗಿ ನಿಧಿಗಳನ್ನು ಪಡೆಯಲು ಮನವಿಗಳನ್ನು ನೀಡುವುದು ಅಲ್ಲದೆ, ನಗದು ರೂಪದಲ್ಲಿ ಯಾವುದೇ ದೇಣಿಗೆಗಳು ಚರ ಅಥವಾ ಸ್ಥಿರ ರೂಪದಲ್ಲಿ ಸ್ವೀಕರಿಸಿ ಅದನ್ನು ಶಾಲೆಯ ಅಭಿವೃದ್ದಿಗಾಗಿ ಶ್ರಮಿಸುವುದು, ವಿದ್ಯಾಥರ್ಿ, ಶಿಕ್ಷಕರು, ಪೋಷಕರು ಹಾಗೂ ಇತರೇ ಶಾಲಾ ಸಿಬ್ಬಂದಿಗಳ ಕುಂದುಕೊರತೆ ಹಾಗೂ ದೂರುಗಳನ್ನು ಬಗೆಹರಿಸುವಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಮುಂದಾಗಬೇಕು ಎಂದರು.
ಡಿ.ವಿ.ಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿ ಮುಖ್ಯೋಪಾಧ್ಯಾಯರು, ಶಿಕ್ಷಕರು ಕಾರ್ಯ ನಿರ್ವಹಿಸುವಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಶಾಲಾ ಅಭಿವೃದ್ದಿ ಕಡೆ ಗಮನ ಹರಿಸಬೇಕು ಎಂದ ಅವರು, ಪಟ್ಟಣದ ರೇವಣಮಠ ಶಾಲೆಯ ನೂತನ ಕಟ್ಟಡಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷ ಮುಂಜಾನೆ 6ಕ್ಕೆ ನೀರನ್ನು ಹಾಯಿಸುತ್ತಿರುತ್ತಾರೆ, ಅಧ್ಯಕ್ಷರ ಕರ್ತವ್ಯ ನಿರ್ವಹಣೆಯಲ್ಲಿ ಅವರು ಮಾದರಿಯಾಗಿದ್ದಾರೆ ಎಂದರಲ್ಲದೆ, ಶಾಲಾ ಕಾರ್ಯಕ್ಕೆ ಅಧ್ಯಕ್ಷರು ಮತ್ತು ಸದಸ್ಯರುಗಳು ಮುಂದಾಗಬೇಕು ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳು ಶಿಕ್ಷಕರ ಕರ್ತವ್ಯದ ಬಗ್ಗೆ ಪರಿಶೀಲಿಸಬೇಕು ಶಿಕ್ಷಕರಿಗೆ ಶಾಲಾ ಕೆಲಸಗಳ ಬಗ್ಗೆ ತರಬೇತಿ ನೀಡಿ ಶಾಲೆಯ ಶೈಕ್ಷಣಿಕ ಪ್ರಗತಿಗೆ ಮುಖ್ಯ ಪಾತ್ರ ವಹಿಸಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಹಿತಾಬಾಯಿ, ತಾ.ಪಂ. ಉಪಾಧ್ಯಕ್ಷೆ ಬೀಬೀಪಾತೀಮ, ಸದಸ್ಯರಾದ ಲತಾ, ಚೇತನಗಂಗಾಧರ್, ಶಾಲಾ ಮುಖ್ಯೋಪಾಧ್ಯಾಯ ಎಂ.ಎಲ್.ಮಲ್ಲಿಕಾಜರ್ುನಯ್ಯ, ನಿವೃತ್ತ ಶಿಕ್ಷಕ ಜಿ.ತಿಮ್ಮಯ್ಯ ಉಪಸ್ಥಿತರಿದ್ದರು.