Tuesday, June 8, 2010


ಶುದ್ದ ಓದು ಸ್ಪಷ್ಟ ಬರಹ ಈ ವರ್ಷದ ಮೂಲ ಮಂತ್ರ
ಚಿಕ್ಕನಾಯಕನಹಳ್ಳಿ,ಜು.8: ಶಿಕ್ಷಣದ ಅಭಿವೃದ್ದಿಗೆ ಸಕರ್ಾರ ಒಂದೇ ಎಲ್ಲವನ್ನೂ ಮಾಡಲಾಗದು ಸಮುದಾಯವು ಇಲಾಖೆಯ ಆಶೋತ್ತರಗಳಿಗೆ ಪೂರಕವಾಗಿ ಸ್ಪಂಧಿಸಬೇಕೆಂದು ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಕನಕ ಭವನದಲ್ಲಿ ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟ ಹಾಗೂ ಬೆಂಗಳೂರಿನ ಸಪ್ತಮಿ ಟ್ರಸ್ಟ್ ಸಹಯೋಗದಲ್ಲಿ ಪಟ್ಟಣದಲ್ಲಿರುವ ಸಕರ್ಾರಿ ಶಾಲೆಗಳ 1500 ವಿದ್ಯಾಥರ್ಿಗಳಿಗೆ ಉಚಿತ ತಟ್ಟೆ ಲೋಟ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ವ ಶಿಕ್ಷಣ ಅಭಿಯಾನವು ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ, ಇದಕ್ಕೆ ಬೆಂಬಲವಾಗಿ ಸಂಘ ಸಂಸ್ಥೆಗಳು ತಮ್ಮ ಕೈಲಾದ ಸಹಕಾರವನ್ನು ನೀಡಿದರೆ ಈ ಕ್ಷೇತ್ರಕ್ಕೆ ಇನ್ನಿಷ್ಟು ಒತ್ತು ಸಿಕ್ಕಂತಾಗುತ್ತದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿ, ಗುಣಾತ್ಮಕ ಶಿಕ್ಷಣವನ್ನು ನೀಡಲು ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳು ಕೈ ಜೋಡಿಸಬೇಕೆಂಬ ಇಲಾಖೆಯ ಆಶಯಕ್ಕೆ ಸ್ಪಂದಿಸುವಂತೆ ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ಮೂಲದ ಗೆಳೆಯರ ಬಳಗವು ಸಹಕರಿಸುತ್ತಿರುವುದು ತುಂಬಾ ಶ್ಲಾಘನೀಯ ಎಂದ ಅವರು, ಮಕ್ಕಳಿಗೆ ಶುದ್ದ ಓದು, ಸ್ಪಷ್ಟ ಬರಹವನ್ನು ಕಲಿಸಲು ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನು ಸಕರ್ಾರ ನೀಡಿದೆ, ಇದಕ್ಕೆ ಪ್ರತಿಯಾಗಿ ಎಲ್ಲಾ ಶಿಕ್ಷಕರು ಇಲಾಖೆ ಸೂಚಿಸಿರುವ ಈ ವರ್ಷದ ಮೂಲ ಮಂತ್ರವಾದ ಶುದ್ದ ಓದು ಸ್ಪಷ್ಟ ಬರಹಕ್ಕೆ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಬೆಂಗಳೂರಿನ ಸಪ್ತಮಿ ಟ್ರಸ್ಟ್ನ ಆನಂದ್ ರವರು ಮಾತಮಾಡಿ ನಮ್ಮ ಸಂಸ್ಥೆ, ಗೆಳೆಯರ ಒಕ್ಕೂಟದೊಂದಿಗೆ ಕೈ ಜೋಡಿಸಿ ಇಲ್ಲಿಗೆ 1500 ತಟ್ಟೆ ಲೋಟಗಳನ್ನು ವಿತರಿಸುವ ಯೋಜನೆಯನ್ನು ಕೈಗೊಂಡಿತು ಎಂದರಲ್ಲದೆ, ಇಲ್ಲಿಯವರೆಗೆ ನಮ್ಮ ಟ್ರಸ್ಟ್ 308 ಶಾಲೆಗಳಿಗೆ 30 ಸಾವಿರ ತಟ್ಟೆ ಲೋಟಗಳನ್ನು ವಿತರಿಸಿದೆ ಎಂದರು.
ಸಮಾರಂಭದಲ್ಲಿ ಕ್ಯಾಪ್ಟನ್ ಸೋಮಶೇಖರ್, ಸತ್ಯ ಪ್ರಕಾಶ್ ಮಾತನಾಡಿದರು. ಈ ಸಂದರ್ಭದಲ್ಲಿ ಕಾರ್ಯದಶರ್ಿ ತರಬೇನಹಳ್ಳಿ ಷಡಾಕ್ಷರಿ ಸ್ವಾಗತಿಸಿದರೆ, ವಿಶ್ವನಾಥ್ ನಿರೂಪಿಸಿದರು, ಮುದ್ದೇನಹಳ್ಳಿ ನಾಗರಾಜು ವಂದಿಸಿದರು.