Friday, April 1, 2016


ನವೋದಯ ಕಾಲೇಜಿಗೆ ಬಿ.ಶ್ರೇಣಿ : ಪ್ರಾಂಶುಪಾಲರ ಸಂತಸ
ಚಿಕ್ಕನಾಯಕನಹಳ್ಳಿ,ಏ.01 :  ರಾಷ್ಟ್ರ ಮಟ್ಟದಲ್ಲಿ ಕಾಲೇಜಿನ ಗುಣಮಟ್ಟವನ್ನು ನಿರ್ಧರಿಸಿ, ಮೌಲ್ಯಾಂಕ ನೀಡುವ ನ್ಯಾಕ್ ಸಮಿತಿ ನಮ್ಮ ಕಾಲೇಜಿಗೆ 'ಬಿ' ಶ್ರೇಣಿ ನೀಡಿರುವುದು ನಮಗೆ ಸಂತೋಷವನ್ನು ತಂದಿದೆ ಎಂದು ನವೋದಯ ಕಾಲೇಜಿನ ಪ್ರಾಂಶುಪಾಲ ಪ್ರೋ ಎಸ್.ಎಲ್.ಶಿವಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು,  ಇದೇ ತಿಂಗಳು 10,11. ಹಾಗೂ 12ರಂದು ರಾಷ್ಟ್ರ ಮಟ್ಟದಲ್ಲಿ ಕಾಲೇಜಿನ ಗುಣಮಟ್ಟವನ್ನು ನಿರ್ಧರಿಸುವ ಸಲುವಾಗಿ  ಮೌಲ್ಯಾಂಕ ನೀಡುವ ನ್ಯಾಕ್ ಸಮಿತಿ ನಮ್ಮ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಈಗ  ನ್ಯಾಕ್ ಸಮಿತಿ ವರದಿಯನ್ನು ನೀಡಿದ್ದು ಅದರ ಮೌಲ್ಯಮಾಪನದಂತೆ  ಇಂದು ಫಲಿತಾಂಶ ಸಿಕ್ಕಿದ್ದು, ಇದರಂತೆ ಕಾಲೇಜಿಗೆ ಬಿ ಶ್ರೇಣಿ ದೊರೆತಿದ್ದು ಇದು ನಮಗೆ ಹಾಗೂ ಕಾಲೇಜಿನ ಸಿಬ್ಬಂದಿಗೆ ಸಂತೋಷನ್ನು ತಂದಿದೆ. 
 ನಮ್ಮ ಕಾಲೇಜಿಗೆ ಈ ಶ್ರೇಣಿ ದೊರೆಯಲು ಕಾರಣ ಇಲ್ಲಿನ ವಿದ್ಯಾಥರ್ಿಗಳಿಗೆ ಸಿಗುತ್ತಿರುವಂತಹ ಮೂಲಭೂತ ಸವಲತ್ತುಗಳು ಹಾಗೂ ಶಿಕ್ಷಣಕ್ಕೆ ಬೇಕಾದಂತಹ ವಾತಾವರಣ, ಪರಿಸರ, ಮತ್ತು ಪರಿಹಾರ ತರಗತಿಗಳು, ಇದಲ್ಲದೇ ಇಲ್ಲಿನಡೆಯುತ್ತಿರುವಂತಹ ಸಂಶೋದನೆಗಳು, ವಿವಿಧ ವಿಷಯಗಳ ಮೇಲೆ ಸೆಮಿನಾರ್ಗಳು, ಉತ್ತಮ ಗ್ರಂಥಾಲಯ ವ್ಯವಸ್ಥೆ, ಅಪಾರ ಪುಸ್ತಕಗಳು, ಕಂಪ್ಯೂಟರ್ಕೇಂದ್ರ, ವಿದ್ಯಾಥರ್ಿನಿಯರ ಪ್ರತ್ಯಕ ಓದಿನ ಕೊಠಡಿ, ಉತ್ತಮ ಶೌಚಾಲಯ, ವ್ಯಾಯಾಮ ಕೇಂದ್ರ, ಬಡ ವಿದ್ಯಾಥರ್ಿಗಳ ಕಲ್ಯಾಣ ನಿಧಿ ಸ್ಥಾಪನೆ,  ಇದರ ಮೂಲಕ ಬಡ ವಿದ್ಯಾಥರ್ಿಗಳಿಗೆ ಸಹಾಯ ಮಾಡುವ ಪದ್ದತಿ ಇದೆ ಎಂದರಲ್ಲದೆ,  ಹಿರಿಯ ವಿದ್ಯಾಥರ್ಿಗಳ ಸಂಘ, ಎನ್ಎಸ್ಎಸ್ ಘಟಕ, ಕ್ರೀಡಾ ವಿಭಾಗದಲ್ಲಿನ ಸಾಧನೆ, ಸಾಂಸ್ಕೃತಿಕ ವಿಭಾಗದಲ್ಲಿ ಯುವಕ ಯುವತಿ ಮಂಡಳಿಗಳ ಮೂಲಕ ಸಾಧನೆ ಸೇರಿದಂತೆ ಕಾಲೇಜಿನಲ್ಲಿರುವ ಶಿಸ್ತು, ಉಪನ್ಯಾಸಕರು, ಬೋಧಕೇತರ ವರ್ಗ, ಪ್ರಾಂಶುಪಾಲರ ನಾಯಕತ್ವ ಇವೆಲ್ಲದುದರ  ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನ್ಯಾಕ್ ಸಮಿತಿಯವರು ಕಾಲೇಜಿನ ಬಗ್ಗೆ ಸಂಪೂರ್ಣವಾದ ವರದಿಯನ್ನು ಸಲ್ಲಿಸಿದ್ದು, ನ್ಯಾಕ್ ಸಮಿತಿ ಬಿ ಶ್ರೇಣಿಯನ್ನು ನೀಡಿದೆ ಇದು ನಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದರು.
ಈ ಸಂದರ್ಭದಲ್ಲಿ  ಉಪನ್ಯಾಸಕರುಗಳಾದ ಪ್ರೊ. ಬಿ.ಶಿವಪ್ರಸಾದ್, ಪ್ರೊ. ಹೆಚ್.ಎಸ್.ಶಿವಯೋಗಿ, ಹಿರಿಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಸಂಚಾಲಕ ಮಂಜುನಾಥರಾಜ್ ಅರಸ್ ಉಪಸ್ಥಿತರಿದ್ದರು.

ವಿದ್ಯಾಥರ್ಿಗಳಿಗಾಗಿ ಪ್ರತಿವರ್ಷ ಸಿಇಟಿ ತರಬೇತಿ ಭಾಗ್ಯ ಶಾಸಕರಿಂದ ವಿನೂತನ ಶಿಬಿರ 
ಚಿಕ್ಕನಾಯಕನಹಳ್ಳಿ,ಏ.01 : ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲರು ವಿಶ್ವವಿದ್ಯಾಲಯಕ್ಕೆ ಅಜರ್ಿ ಸಲ್ಲಿಸಿದ್ದರೆ ತಾಲ್ಲೂಕಿಗೆ ಎಂ.ಎ ಕೋಸರ್್ ನೀಡಬಹುದಾಗಿತ್ತು, ಈಗ ಅಜರ್ಿ ಸಲ್ಲಿಸುವ ಸಮಯ ಮುಗಿದಿದೆ, ಶಾಸಕರ ನೇತೃತ್ವದಲ್ಲಿ ಪ್ರಾಂಶುಪಾಲರು ಅಜರ್ಿ ಸಲ್ಲಿಸಿದರೆ ಕಾನೂನಿನ ಪ್ರಕಾರ ಪರಿಶೀಲಿಸಿ ಸ್ನಾತಕೋತ್ತರ ಕೋಸರ್್ ತೆರೆಯಲು ಸೂಚನೆ ನೀಡಬಹುದು ಎಂದು ತುಮಕೂರು ವಿ.ವಿ.ಉಪ ಕುಲಪತಿ ಪ್ರೊ.ಎ.ಹೆಚ್.ರಾಜಾಸಾಬ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಿ.ಬಿ.ಸುರೇಶ್ಬಾಬು ಮತ್ತು ಸಂಗಡಿಗರ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ವಿದ್ಯಾಥರ್ಿಗಳಿಗೆ ಅನುಕೂಲವಾಗಲೆಂದು ಏಪ್ರಿಲ್1 ರಿಂದ  28ರವರೆಗೆ ಉಚಿತ ಸಿಇಟಿ ತರಬೇತಿ ಶಿಬಿರ ಏರ್ಪಡಿಸಿದ್ದು ಇದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸ್ನಾತಕೋತ್ತರ ಪದವಿ ತೆರೆಯುವ ಬಗ್ಗೆ ಅಜರ್ಿ ಸಲ್ಲಿಸಿದ ಎಲ್ಲಾ ತಾಲ್ಲೂಕುಗಳಿಗೂ ಅನುಮತಿ ನೀಡಲಾಗಿದೆ ತಾಲ್ಲೂಕಿನಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪದವಿ ತೆರೆಯಲು ಪ್ರಯತ್ನಿಸಲಾಗುವುದು.
ಸಿಇಟಿ ತರಬೇತಿಗೆ ಹಾಜರಾಗುವ ವಿದ್ಯಾಥರ್ಿಗಳು ಪಿಯುಸಿ ಪರೀಕ್ಷೆಗೆ ತಯಾರಾದಂತೆ ಸಿಇಟಿ ಪರೀಕ್ಷೆಗೆ ಸಿದ್ದರಾಗಬೇಕು, ಸಿಇಟಿಯಿಂದ ಪಡೆಯುವ ಮೆರಿಟ್ ಅಂಕದ ಮೇಲೆ ವಿದ್ಯಾಥರ್ಿಗಳು ಹೊಂದುವ ಮೆಡಿಕಲ್, ಇಂಜನಿಯರಿಂಗ್ ಇನ್ನಿತರ ಕೋಸರ್್ಗಳಿಗೆ ಪ್ರವೇಶ ಪಡೆಯಲು ಮೆರಿಟ್ ಅಂಕ ಮುಖ್ಯವಾಗಿದೆ ಎಂದರಲ್ಲದೆ ವಿದ್ಯಾಥರ್ಿಗಳು ಸಿಇಟಿ ಪರೀಕ್ಷೆಗೆ ಹಾಜರಾಗುವ ವೇಳೆ 5ರಿಂದ 10ವರ್ಷಗಳ ಹಿಂದಿನ ಪರೀಕ್ಷಾ ಪೇಪರ್ಗಳನ್ನು ಹೆಚ್ಚು ಅಭ್ಯಶಿಸಿ ಅದರಲ್ಲಿ ಗೊತ್ತಾಗದಿದ್ದರೆ ಶಿಬಿರದಲ್ಲಿನ ಶಿಕ್ಷಣ ತಜ್ಞರ ಪ್ರಶ್ನಿಸಿ ಉತ್ತರ ಪಡೆದುಕೊಳ್ಳಿ ಎಂದರಲ್ಲದೆ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿ ಶಾಸಕರ ಜೊತೆ ಅವರ ಸಂಗಡಿಗರು ಸಿಇಟಿ ತರಬೇತಿ ಶಿಬಿರ ಏರ್ಪಡಿಸಿರುವುದು ಸಂತಸದ ಸಂಗತಿ ಎಂದರು.
ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಉಚಿತವಾಗಿ ಸಿಇಟಿ ತರಬೇತಿ ಶಿಬಿರ ನಡೆಯುತ್ತಿದೆ ಎಂದು ವಿದ್ಯಾಥರ್ಿಗಳು ಉದಾಸೀನ ಮಾಡಿ ಬೇಜವಬ್ದಾರಿತನದಿಂದ ತರಬೇತಿಗೆ ಹಾಜರಾಗದಿದ್ದರೆ ನಿಮ್ಮ ಭವಿಷ್ಯವನ್ನು ನೀವೇ ಹಾಳುಮಾಡಿಕೊಂಡಂತಾಗುತ್ತದೆ ಎಂದರಲ್ಲದೆ, ಪಿಯುಸಿ ಓದುತ್ತಿರುವ ಎಲ್ಲಾ ವಿದ್ಯಾಥರ್ಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕತೆಗೆ ಅನುಕೂಲವಾಗಲೆಂದು ಶೈಕ್ಷಣಿಕ ಅಭಿವೃದ್ದಿ ಚಿಂತಕರ ಜೊತೆಗೂಡಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ, ಈ ಸಿಇಟಿ ತರಬೇತಿ ಶಿಬಿರವನ್ನು ಪ್ರತಿ ವರ್ಷ ಮುನ್ನೆಡೆಸಿಕೊಂಡು ಹೋಗುತ್ತೇವೆ ಎಂದರು.
 ಶಿಬಿರಕ್ಕೆ ತಾಲ್ಲೂಕಿನ ವಿದ್ಯಾಥರ್ಿಗಳು ಮಾತ್ರವಲ್ಲದೆ ಆಸಕ್ತಿ ಇರುವ ಬೇರೆ ತಾಲ್ಲೂಕಿನ ವಿದ್ಯಾಥರ್ಿಗಳು ಆಗಮಿಸಿ ತರಬೇತಿಯ ಪ್ರಯೋಜನ ಪಡಯಬೇಕು, ಉನ್ನತ ವಿದ್ಯಾಭ್ಯಾಸ ಹೊಂದಲು ಮಕ್ಕಳಲ್ಲಿ ಆಸಕ್ತಿ ಇರುತ್ತದೆ ಆದರೆ ಪೋಷಕರಲ್ಲಿನ ಆಥರ್ಿಕ ಸಮಸ್ಯೆಯಿಂದಾಗಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸೂಕ್ತ ತರಬೇತಿ ಸಿಗದೆ ಹಿಂದುಳಿಯುವಂತಾಗಿದೆ ಅದಕ್ಕಾಗಿಯೇ ಈ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದರಲ್ಲದೆ,  ವಿದ್ಯಾಥರ್ಿಗಳು ದೊರಕಿರುವ ಉಚಿತ ತರಬೇತಿ ಶಿಬಿರದಲ್ಲಿ ಸಮಯಕ್ಕೆ ಸರಿಯಾಗಿ ಪಾಲ್ಗೊಂಡು ಅಭ್ಯಸಿಸಿದರೆ ಮುಂದಿನ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು, ಸಿಇಟಿ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾಥರ್ಿಗಳಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದರು.
ಉಪನ್ಯಾಸಕ ವಸಂತ್ಕುಮಾರ್ ಮಾತನಾಡಿ, ಸಿಇಟಿ ಪರೀಕ್ಷೆಗೆ ಹಾಜರಾಗುವ ವಿದ್ಯಾಥರ್ಿಗಳಿಗೆ ಒಂದು ಅಂಕ ಕೂಡ ಮುಖ್ಯವಾಗಿರುತ್ತದೆ, ಮೆಡಿಕಲ್ ಅಭ್ಯಸಿಸಲು ಬರೆಯುವ ವಿದ್ಯಾಥರ್ಿಗಳು ಪಿಸಿಬಿ ಸೇರಿ ತಮ್ಮ ಪಕ್ಕದ ವಿದ್ಯಾಥರ್ಿಗಿಂತ ಒಂದು ಅಂಕ ಕಡಿಮೆ ಪಡೆದರೆ ಎಂಟನೂರು ವಿದ್ಯಾಥರ್ಿಗಳ ಹಿಂದೆ ಬೀಳುತ್ತಾರೆ,  ಅದೇ ರೀತಿ ಇಂಜನಿಯರಿಂಗ್ ಅಭ್ಯಷಿಸಲು ಪಡೆಯುವ ವಿದ್ಯಾಥರ್ಿಗಳು ಒಂದು ಅಂಕ ಕಡಿಮೆ ಪಡೆದರೆ 400ರಿಂದ 500 ಅಂಕ ಕಡಿಮೆ ಪಡೆದು ಮೆರಿಟ್ ಲಿಸ್ಟ್ನಲ್ಲಿ ಹಿಂದೆ ಉಳಿಯುತ್ತಾರೆ ಆದ್ದರಿಂದ ವಿದ್ಯಾಥರ್ಿಗಳು ಹೆಚ್ಚು ಕಾಳಜಿ ವಹಿಸಿ ತರಬೇತಿ ಶಿಬಿರಕ್ಕೆ ಸಮಯಕ್ಕೆ ಸರಿಯಾಗಿ ಭಾಗವಹಿಸಿ ಯೋಜನೆಯ ಉಪಯೋಗ ಪಡೆಯಿರಿ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ಪಡೆಯುವ ತಾಂತ್ರಿಕ ಶಿಕ್ಷಣದ ಬಗ್ಗೆ ನೀಡುವ ಸಾಲಸೌಲಭ್ಯದ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಭಕ್ತಕುಚೇಲ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಅಬುಬ್ಕಲಾಂರವರಿಂದ ಮಾಹಿತಿ ನೀಡಲಾಯಿತು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಪ್ರಾಂಶುಪಾಲ ಎಂ.ವಿ.ಸಿದ್ದಗಂಗಯ್ಯ, ಉಪನ್ಯಾಸಕ ಡಾ.ಪಿ.ಪರಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.


ಕಂಟಲಗೆರೆಯಲ್ಲಿ ಕಳಪೆ ರಸ್ತೆ ಕಾಮಗಾರಿ : ಗ್ರಾಮಸ್ಥರ ಆರೋಪ
                                     
ಚಿಕ್ಕನಾಯಕನಹಳ್ಳಿ,ಏ.1: ಕಳಪೆ ಕಾಮಗಾರಿಗೆ ರಸ್ತೆ ಬಲಿಯಾಗಿದೆ, ತಕ್ಷಣ ಕಾಮಗಾರಿ ನಿಲ್ಲಿಸಿ ಗುಣಮಟ್ಟ ಪರೀಕ್ಷೆಯಾಗಬೇಕು ಎಂದು ಒತ್ತಾಯಿಸಿ ತಾಲ್ಲೂಕು ಜೆ.ಸಿ.ಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಟಲಗೆರೆ ಗ್ರಾಮಸ್ಥರು ಶುಕ್ರವಾರ ರಸ್ತೆಗೆ ದಿಮ್ಮಿ ಎಳೆದು ಪ್ರತಿಭಟಿಸಿದರು. 
  ಊರಿಗೆ ರಸ್ತೆ ಬೇಕು ಎಂಬುದು 15ವರ್ಷಗಳ ಬೇಡಿಕೆಯಾಗಿತ್ತು.ಊರ ರಸ್ತೆಗೆ ಡಾಂಬಾರ್ ಹಾಕಿಸಿಕೊಡಿ ಎಂದು ಶಾಸಕರು,ಜಿಪಂ-ತಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಮಾಡುತ್ತ ಬಂದಿದ್ದೆವು. ಊರಿಗೆ ಟಾರ್ ರೋಡ್ ಮುಂಜೂರಾದಾಗ ಸಹಜವಾಗೇ ಖುಷಿಗೊಂಡಿದ್ದೆವು ಆದರೆ ಕಳಪೆ ಕಾಮಗಾರಿ ನುಂಗಿ ಹಾಕಿದೆ. ಗುಣಮಟ್ಟ ನೋಡಿದರೆ ರಸ್ತೆ ಮೂರು ತಿಂಗಳು ಬಾಳಿಕೆ ಬರುವ ಭರವಸೆ ಇಲ್ಲ ಎಂದು ಪ್ರತಿಭಟನಾ ನಿರತ ಗ್ರಾಮಸ್ಥರು ದೂರಿದ್ದಾರೆ.
   ಮಾಜಿ ಗ್ರಾಪಂ ಸದಸ್ಯೆ ಸಿದ್ದಮ್ಮ ಮಾತನಾಡಿ,ಕಳೆದ ನಾಲ್ಕು ದಿನಗಳಿಂದ ರಸ್ತೆಗೆ ಜೆಲ್ಲಿ ಹರಡಲಾಗುತ್ತಿದೆ. ಸೇತುವೆ ನಿಮರ್ಾಣ ಕಳೆದ 3 ತಿಂಗಳಿನಿಂದ ನಡೆದಿದೆ.ಕಳೆದ 4 ದಿನಗಳಿಂದ ರಸ್ತೆಗೆ ಮಣ್ಣು ಹಾಗೂ ಜೆಲ್ಲಿ ಹಾಕುವ ಕೆಲಸ ಪ್ರಗತಿಯಲ್ಲಿದೆ.ಇದುವರೆಗೆ ಇಂಜಿನಿಯರ್ ಆಗಲಿ,ಗುತ್ತಿಗೆದಾರರಾಗಲಿ ಕಾಮಗಾರಿ ನಡೆಯುವಸ್ಥಳಕ್ಕೆ ಬೇಟಿ ನೀಡಿ ಪ್ರಮಾಣ ಹಾಗೂ ಗುಣಮಟ್ಟವನ್ನು ಪರೀಕ್ಷಿಸಿಲ್ಲ. ಮೊದಲ ದಿನವೇ ಗುಣಮಟ್ಟದ ರಸ್ತೆ ಕಾಮಗಾರಿಗೆ ಆಗ್ರಹಿಸಿ ಕಾಮಗಾರಿಗೆ ತಡೆ ಮಾಡಿದೆವು.ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಗುಣಮಟ್ಟ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ.ಆದರೆ ಯಾವೊಬ್ಬ ಅಧಿಕಾರಿಯೂ ಬೇಟಿ ನೀಡಿ ಪರಿಶಿಲಿಸಿಲ್ಲ ಎಂದು ದೂರಿದರು.
ಪ್ರಶ್ನೆ ಮಾಡಿದವರಿಗೆ ಹಣದ ಆಮಿಷ:ಕಳಪೆ ಕಾಮಗಾರಿ ನಡೆಯುತ್ತಿದೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳ ಪರಿಶೀಲನೆ ನಡೆಸಿಲ್ಲ.ಕಳಪೆ ಪ್ರಶ್ನಿಸಿದವರಿಗೆ  ಗುತ್ತಿಗೆದಾರರು ಮಧ್ಯವತರ್ಿಗಳ ಮೂಲಕ ಹಣದ ಆಮಿಷ ಒಡ್ಡುತ್ತಿದ್ದಾರೆ.ಕಳಪೆ ಪ್ರಶ್ನಿಸಬೇಡಿ ಸುಮ್ಮನಿರಿ ಎಂದು ನನಗೂ ರೂ.3000ಹಣ ನೀಡಲು ಮುಂದಾಗಿದ್ದರು ಎಂದು ಕಟ್ಟೆಮನೆ ರಂಗಸ್ವಾಮಿ ಆರೋಪಿಸಿದರು.
   1.5 ಕಿಮೀ ಉದ್ದದ ರಸ್ತೆಗೆ ಡಾಂಬಾರ್ ಹಾಕಲು ರೂ.25ಲಕ್ಷ ಮುಂಜೂರಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.ನಿಯಮದಂತೆ ಒಂದು ಪದರ ಜೆಲ್ಲಿ ಹಾಗೂ ಒಂದ ಪದರ ಟಾರ್ ಹಾಕಬೇಕಿದೆ.ಒಟ್ಟು 3 ಇಂಚು ದಪ್ಪ ಹಾಗೂ 3.75 ಮೀ ಹಗಲ ರಸ್ತೆ ನಿಮರ್ಾಣವಾಗಬೇಕಿದೆ.ನಿಯಮದಂತೆ ಕಾಮಗಾರಿ ನಡೆಯುತ್ತಿದೆ ಶುಕ್ರವಾರವೂ ಸ್ಥಳಕ್ಕೆ ಬೇಟಿ ನೀಡಿ ಪರಿಶಿಲಿಸಿದ್ದೇನೆ ಎಂದು ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಾರುತಿ ತಿಳಿಸಿದರು.
  ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಲಿಂಗದೇವರು, ಬಸವಲಿಂಗಯ್ಯ, ನಾಗರಾಜು, ಅರುಣ್, ಪ್ರದೀಪ್, ಪ್ರಮೋದ್, ನಾಗೇಶ್, ಪೂವರ್ಿ, ಚನ್ನಮ್ಮ, ಸರೋಜಮ್ಮ, ಯಶೋಧಮ್ಮ, ಸಿದ್ದಗಂಗಮ್ಮ, ಕದುರಮ್ಮ, ಗಂಗಮ್ಮ ಮುಂತಾದವರು ಹಾಜರಿದ್ದರು.

ತಾತಯ್ಯನಗೋರಿಗೆ ತುಮಕೂರು ವಿ.ವಿ. ಉಪಕುಲಪತಿ ಪ್ರೊ.ಎಂ.ಹೆಚ್.ರಾಜಾಸಾಬ್ಚಿಕ್ಕನಾಯಕನಹಳ್ಳಿ,ಏ.01 :ಭಾರತದಲ್ಲಿ ಸೂಫಿ ಸಂತತಿ ಇನ್ನೂ ಆಚರಣೆಯಲಿದ್ದು,  ದೇಶದಲ್ಲಿರುವ ದಗರ್ಾದ ಸಂತರಾಗಲಿ, ಧರ್ಮಗುರುಗಳಾಗಲಿ ಸಾಮರಸ್ಯದ ಪ್ರತೀಕವಾಗಿದೆ ಎಂದು ತುಮಕುರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಎಂ. ಹೆಚ್. ರಾಜಾಸಾಬ್ ಹೇಳಿದರು.
ಪಟ್ಟಣದಲ್ಲಿರುವ ಹಿಂದೂ ಮುಸ್ಲಿಂಮರ ಬಾವೈಕ್ಯತೆಯ ಕೇಂದ್ರವಾದ ತಾತಯ್ಯನವರ ಗೋರಿಗೆ ಭೇಟಿ ನೀಡಿದ ಸಂದರ್ಭದಲ್ಲಿ  ಭಕ್ತಿ ಸಮಪರ್ಿಸಿ ಮಾತನಾಡಿದರು.  ಕೆಲವರು ಜಾತಿಯ ಹೆಸರಿನಲ್ಲಿ ಸಮಾಜಕ್ಕೆ ಕೆಡುಕು ಮಾಡುತ್ತಿದ್ದಾರೆ,  ಅವರಿಂದ ಸಮಾಜ ಎಚ್ಛರದಿಂದಿರಬೇಕು. ಭಾರತದಲ್ಲಿ ಸೂಫಿ ಸಂತತಿ ಆಚರಣೆಯಿದ್ದು ಎಲ್ಲಾ ಜಾತಿಯ ಧರ್ಮಗುರುಗಳ ಮನಸ್ಥಿತಿ ಕೂಡ ಐಕ್ಯತೆಯ ಸಂಕೇತಗಳಾಗಿವೆ ದೇಶದಲ್ಲಿ ಧಾಮರ್ಿಕವಾಗಿ ಶೈಕ್ಷಣಿಕವಾಗಿ ಸಾಹಿತ್ಯಕವಾಗಿ ಪರಸ್ಪರ ಶ್ರಮಿಸುವ ಆಚರಣೆಯು ಮುಸಲ್ಮಾನರ ಸೂಫಿ ಸಂತತಿಯಲ್ಲಿದೆ,  ಇದೊಂದು ಸಂಸ್ಕೃತಿಯ ಭಾಗವಾಗಿದ್ದು ಪರಸ್ಪರ ಪ್ರೀತಿಯಿಂದ ಎಲ್ಲರನ್ನು ಸಮಾನರು ಎಂದು ನೋಡುವ ಉದ್ದೇಶ ಎಲ್ಲಾ ಜಾತಿಗಳ ಧರ್ಮವಾಗಿದೆ.
 ಭಾರತ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು,  ಇದು ಹಳ್ಳಿಗಳ ನಾಡಾಗಿದ್ದು ಶೈಕ್ಷಣಿಕ ಪ್ರಗತಿ ಆಗಬೇಕಿದೆ,  ಅದರಲ್ಲೂ ಹೆಣ್ಣು ಮಕ್ಕಳು ಶೈಕ್ಷಣಿಕ ಪ್ರಗತಿ ಜೊತೆಗೆ ಇನ್ನು ಹಲವು ಅಭಿವೃದ್ಧಿ ಕೆಲಸದಿಂದ ಮಾತ್ರ ಭಾರತ ಬಲಿಷ್ಠ ರಾಷ್ಟ್ರವಾಗುವುದು  ಎಂದರು.
ವಿಶ್ವವಿದ್ಯಾನಿಲಯ ಸ್ಥಾಪಿಸಲು ಬಿದರೆಕಟ್ಟೆ ಭಾಗದಲ್ಲಿ 250 ಎಕರೆ ಭೂಮಿ ಖರೀದಿಸಿದ್ದು ಆ ಸ್ಥಳದಲ್ಲಿ ನಿಮರ್ಾಣವಾಗುವ ಕಟ್ಟಡಗಳಿಗೆ ತೀ.ನಂ.ಶ್ರೀಕಠಯ್ಯ ಮತ್ತು ಸಾ.ಶಿ. ಮರುಳಯ್ಯ ನವರಂತಹ ಸಾಹಿತ್ಯ ಸಾಧಕರ ಹೆಸರಿಡಲು ಒತ್ತಡ ಬಂದಿದೆ ಎಂದರು.
ವಕೀಲ ಎಂ.ಬಿ.ನಾಗರಾಜು ಮಾತನಾಡಿ,  ಇದು ಸಾಧಕರ ನಾಡಾಗಿದ್ದು ಇಲ್ಲಿ ಹುಟ್ಟಿದವರಲ್ಲಿ ತೀ.ನಂ.ಶ್ರೀಕಠಂಯ್ಯ ಸಾ.ಶಿ.ಮರುಳಯ್ಯ ತೀ.ನಂ.ಶಂಕರನಾರಾಯಣ್, ಸಿ.ಬಿ.ಮಲ್ಲಪ್ಪ ಸೇರಿದಂತೆ ವಿವಿಧ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿರುವವರು ಈ ನೆಲದವರು ಎಂದರು.  
ನಮ್ಮ ತಾಲೂಕು  ಶೈಕ್ಷಣಿಕವಾಗಿ ಅತಿ ಹಿಂದುಳಿದಿರುವ ಕ್ಷೇತ್ರವಾಗಿದ್ದು ಈ ಊರಿಗೆ ಸ್ನಾತಕೋತ್ತರ ಕೇಂದ್ರವನ್ನು ಸಕರ್ಾರಿ ಕಾಲೇಜಿನಲ್ಲಿ ತೆರೆಯುವಂತೆ ಮನವಿ ಮಾಡಿಕೊಂಡ ಅವರು ಇಲ್ಲಿ ಗಳ್ಳಿಗಾಡಿನ ಮಕ್ಕಳು ಅನುಕ್ಕೂಲಕ್ಕಾಗಿ ತಾಂತ್ರಿಕ ತರಗತಿಗಳ ಅನುಮತಿಗೆ ಸಂಬಂಧಪಟ್ಟ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾತಯ್ಯನವರ ಸಮಾದಿಗೆ ವಸ್ತ್ರ ಹೊದಿಸಿ ಪೂಜೆ ಅಪರ್ಿಸಿದರು,  ಜೊತೆಯಲ್ಲಿ ಗೋರಿ ಕಮಿಟಿ ಅಧ್ಯಕ್ಷ ಟಿ.ರಾಮಯ್ಯ, ಪುರಸಭಾ ಅಧ್ಯಕ್ಷ ಸಿ.ಟಿ.ದಯಾನಂದ್, ಸಿ.ಡಿ.ಚಂದ್ರಶೇಖರ್, ಸಿ.ಹೆಚ್.ಪ್ರಕಾಶ್, ಜಾವಿದ್, ಸಿ.ಎಸ್.ನಟರಾಜ್, ಮತ್ತಿತರರು ಉಪಸ್ಥಿತರಿದ್ದರು.