Wednesday, August 25, 2010


ಕ.ಸಾ.ಪ.ವತಿಯಿಂದ ನವೋದಯ ಕಾಲೇಜ್ನಲ್ಲಿ ಎಂ.ವಿ.ಸೀ.ಜನ್ಮಶತಮಾನೋತ್ಸವ
ಚಿಕ್ಕನಾಯಕನಹಳ್ಳಿ,ಆ.25: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿ.ಎಂ.ಶ್ರೀ ಪ್ರತಿಷ್ಟಾನ ಸಹಯೋಗ ವತಿಯಿಂದ ಎಂ.ವಿ.ಸೀ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಇದೇ 27ರ ಶುಕ್ರವಾರ ಏರ್ಪಡಿಸಲಾಗಿದೆ ಎಂದು ತಾ.ಕ.ಸಾ.ಪ ಅಧ್ಯಕ್ಷ ಎಂ.ವಿ.ನಾಗರಾಜರಾವ್ ತಿಳಿಸಿದ್ದಾರೆ.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೇಖಕ ಎಸ್.ವಿ ಶ್ರೀನಿವಾಸರಾವ್ , ಬಿ.ಎಂ.ಶ್ರೀ ಪ್ರತಿಷ್ಠಾನ ಕಾರ್ಯದಶರ್ಿ ಡಾ.ನಾ.ಗೀತಾಚಾರ್ಯ, ಕನ್ನಡದ ಪ್ರಗತಿಪರ ಚಿಂತಕ ರಾ.ನಂ.ಚಂದ್ರಶೇಖರ್, ಬಿ.ಎಂ.ಶ್ರೀ ಪ್ರತಿಷ್ಠಾನ ಖಜಾಂಚಿ ಎಸ್.ಟಿ.ರಾಧಕೃಷ್ಣ ಎಂ.ವಿ.ಸೀ. ಬದುಕು ಬರಹ ಕುರಿತು ಮಾತನಾಡಲಿದ್ದಾರೆ ಎಂದು ತಾ.ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದ್ದಾರೆ.

ಚಿಕ್ಕನಾಯಕನಹಳ್ಳಿ,ಆ.25: ಮಕ್ಕಳಲ್ಲಿ ಸಹಕಾರ, ಸದೃಡಮನಸ್ಸು, ಸೃಜನಾಶೀಲತೆ ಸದೃಡದೇಹ ಉತ್ತಮ ತೀಮರ್ಾನದ ಮನೋಭಾವ ಬೆಳೆಸುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ತಾಲೂಕಿನ ಹಂದನಕೆರೆ ಹೋಬಳಿ ಪ್ರಾಥಮಿಕ ಪಾಠಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಥರ್ಿಗಳನ್ನು ಕುರಿತು ಪ್ರತಿಜ್ಞಾವಿಧಿ ಬೋದಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಶಿಕ್ಷಕರು ಆತ್ಮಸ್ಥೈರ್ಯ ತುಂಬಿ ಕ್ರೀಡೆಗೆ ಪ್ರೋತ್ಸಾಹಿಸಿದರೆ ಅವರ ಪ್ರತಿಭೆ ಹೊರಗೆ ಬಂದು ಉತ್ತಮ ಕ್ರೀಡಾಪಟುವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಾರೆ ಎಂದರು.
ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಬಸವರಾಜು, ಉಷಾ ಕೃಷ್ಣಮೂತರ್ಿ, ಮಹೇಶ್, ಸದಸ್ಯರಾದ ಉದಯ್ಕುಮಾರ್, ಶಿವಕುಮಾರ್, ಮುಖ್ಯ ಶಿಕ್ಷಕ ಮಹಾಲಿಂಗಯ್ಯ, ನೇಮಿಚಂದ್ರ, ಎಚ್.ಬಸವರಾಜು, ನರಸಿಂಹಮೂತರ್ಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಿ.ಎಮ್.ದೇವರಾಜಯ್ಯ ಸ್ವಾಗತಿಸಿದರೆ, ಬಿ.ಎಸ್.ಶಿವಕುಮಾರ್ ನಿರೂಪಿಸಿ, ಕೆ.ಬಿ.ಶಿವಣ್ಣ ವಂದಿಸಿದರು.

ಸಂಘದ ಬೆಳವಣಿಗೆಗೆ ಸಹಕಾರ ಮುಖ್ಯವೇ ಹೊರತು ಪ್ರತಿಷ್ಠೆಯಲ್ಲ
ಚಿಕ್ಕನಾಯಕನಹಳ್ಳಿ,ಆ.25: ಸಣ್ಣ ಪುಟ್ಟ ವಿಚಾರಗಳಿಗೆ ಕಚ್ಚಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಕನಕ ಯುವ ಕ್ಷೇಮಾಭಿವೃದ್ದಿ ಸಂಘವನ್ನು ಸಂಘಟಿಸಿಕೊಂಡು ಮತ್ತು ಅಭಿವೃದ್ದಿಪಡಿಸಿಕೊಂಡು ಹೋಗಬೇಕೆಂದು ಮಸಾಲ್ತಿಗುಡ್ಲು ಗ್ರಾಮದ ಹಿರಿಯರಾದ ಲಕ್ಷ್ಮಜ್ಜಿ ಹೇಳಿದರು.
ಪಟ್ಟಣದ ಮಸಾಲ್ತಿಗುಡ್ಲು ಗ್ರಾಮದಲ್ಲಿ ನಡೆದ ಕನಕ ಯುವ ಕ್ಷೇಮಾಭಿವೃದ್ದಿ ನೂತನ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂಘದಲ್ಲಿ ನನ್ನಿಂದಲೇ ಎಲ್ಲಾ ಎಂಬ ಮನೋಭಾವವನ್ನು ಬಿಟ್ಟು ನಮ್ಮಿಂದ ಎಂಬ ಮನಭಾವವನ್ನು ಬೆಳಸಿಕೊಳ್ಳಬೇಕೆಂದರು.
ಹಿರಿಯರಾದ ಯೋಗಲಿಂಗಯ್ಯ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಒಗ್ಗೂಡಿದರೆ ಸಂಘ ಅಭಿವೃದ್ದಿಯಾಗುತ್ತದೆ ಮತ್ತು ನಮ್ಮ ಗ್ರಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡು ಗ್ರಾಮವನ್ನು ಅಭಿವೃದ್ದಿಗೊಳಿಸಿ ಬಡವಿದ್ಯಾಥರ್ಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯಮಾಡಬೇಕು ಎಂದರು.
ಸಮಾರಂಭದಲ್ಲಿ 75ವರ್ಷಕ್ಕೂ ಮೇಲ್ಪಟ್ಟ ನಾಗರೀಕರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬೆಟ್ಟಯ್ಯ, ಶಿವಪ್ಪ, ಲಕ್ಷ್ಮಯ್ಯ, ಯೋಗಲಿಂಗಸ್ವಾಮಿ, ಹನುಮಂತಪ್ಪ, ತೇರಪ್ಪ ಕರಿಯಪ್ಪ, ನಿಂಗಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶಶಿಧರಮೂತರ್ಿ ಪ್ರಾಥರ್ಿಸಿದರೆ, ಮೋಹನ್ಕುಮಾರ್ ಸ್ವಾಗತಿಸಿ, ಸಿ.ಬಿ.ಲೋಕೇಶ್ ನಿರೂಪಿಸಿ, ರಂಗನಾಥ್ ವಂದಿಸಿದರು.
ಕಳ್ಳತನದ ಆರೋಪಿಗೆ ಶಿಕ್ಷೆ
ಚಿಕ್ಕನಾಯಕನಹಳ್ಳಿ,ಆ.25: ಕಳ್ಳತನದ ಆರೋಪಿತರು ಎಸಗಿರುವ ಅಪರಾಧವು ಸಾಬೀತಾಗಿದ್ದು ನ್ಯಾಯಾಧೀಶಾರದ ಶೀಲಾ ಆರೋಪಿಗೆ ಒಂದು ತಿಂಗಳು ಸಾಧಾರಣ ಕಾರಾಗೃಹ ವಾಸ ಹಾಗೂ 1000ರೂ. ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ 7ದಿನ ಸಾಧಾರಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ತೀಪರ್ು ನೀಡಿದ್ದಾರೆ.
2006ರ ಏಪ್ರಿಲ್ 16ರಂದು ವಿದ್ಯಾನಗರದ 2ನೇ ಕ್ರಾಸ್ನಲ್ಲಿರುವ ಸಣ್ಣನಿಂಗಯ್ಯರ ಮನೆಗೆ ಹಾಕಿದ್ದ ಬೀಗವನ್ನು ಆರೋಪಿಗಳಾದ ಕುಮಾರ ಮತ್ತು ವರದರಾಜು ಎಂಬುವರು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯರಲ್ಲಿನ ಸುಮಾರು 20ಸಾವಿರ ಬೆಲೆಯ ಚಿನ್ನದ ವಡವೆಗಳು ಹಾಗೂ ಕ್ಯಾಮರ ಕಳವು ಮಾಡಿಕೊಂಡು ಹೋಗಿದ್ದರೆಂದು ಎಂಬ ಆರೋಪ ಸಾಬೀತಾಗಿರುತ್ತದೆ. ಸಕರ್ಾರದ ಪರವಾಗಿ ಆರ್.ಟಿ.ಆಶಾ ವಾದ ಮಂಡಿಸಿದ್ದರು.