Thursday, March 26, 2015



ಪುರಸಭೆಯಲ್ಲಿ ಟ್ರಾಕ್ಟರ್ ಹಾಗೂ ಜೆಸಿಬಿಗೆ ಹಾಕಿಸುವ ಆಯಿಲ್, ಗ್ರೀಸ್ನಲ್ಲಿ ಅವ್ಯವಹಾರ ನಡೆದಿದೆ ಪುರಸಭಾ ಸದಸ್ಯರು, :  ತನಿಖೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಮಾ.26 : ಪುರಸಭೆಯಲ್ಲಿನ ಟ್ರಾಕ್ಟರ್ ಹಾಗೂ ಜೆ.ಸಿ.ಬಿಗೆ ಹಾಕಿಸುವ ಡೀಸೆಲ್, ಆಯಿಲ್ ಹಾಗೂ ಗ್ರೀಸ್ನಲ್ಲಿ ಅವ್ಯವಹಾರ ನಡೆದಿದೆ ಇದರ ಬಗ್ಗೆ ತನಿಖೆ ನಡೆಸುವಂತೆ ಪುರಸಭಾ ಸದಸ್ಯರು ಅಧಿಕಾರಿಗಳನ್ನು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ರೇಣುಕಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಪ್ರತಿ ತಿಂಗಳು ಮಾಡಬೇಕಾದ ಜಮಾಖಚರ್ಿನ ಸಭೆಯನ್ನು ಐದು ತಿಂಗಳ ನಂತರ ಮಾಡುತ್ತಿರುವುದು ಸರಿಯಲ್ಲ ಆದ್ದರಿಂದ ಆಯವ್ಯಯ ಮಂಡಣೆ ಮಾಡುವ ಮೊದಲು ಜಮಾಖರ್ಚನ್ನು ಮಂಡಿಸಿ  ನಂತರ ವಾಷರ್ಿಕ ಆಯವ್ಯಯ ಮಂಡಿಸುವಂತೆ ಸದಸ್ಯರು ಪುರಸಭಾ ಅಧ್ಯಕ್ಷರಿಗೆ ಹೇಳಿದರು.
ಪುರಸಭೆಯ ವಾಹನಗಳಿಗೆ ಹಾಕಿಸುವ ಡೀಸೆಲ್ನಲ್ಲಿ ಐದು ತಿಂಗಳಿನಲ್ಲೂ ಅವ್ಯವಹಾರ ನಡೆದಿದೆ ಎಂದು ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಭೆ ನಿರ್ಧರಿಸಿತು.
ಡೀಸೆಲ್ ಅವ್ಯವಹಾರದಲ್ಲಿ ಹೆಲ್ತ್ ಇನ್ಸ್ಪೆಕ್ಟರ್ ರವರಿಂದ ಲೋಪವಾಗಿದ್ದು ಅವರ ಸಂಬಳದಲ್ಲಿ ವಸೂಲು ಮಾಡುವಂತೆ ಸದಸ್ಯ ಮಹಮದ್ ಖಲಂದರ್, ಸಿ.ಪಿ.ಮಹೇಶ್ ಆಗ್ರಹಿಸಿದರು.
ಆರೋಗ್ಯ ನಿರೀಕ್ಷಕರು ಈ ಹುದ್ದೆಯಲ್ಲಿ ಇರಲು ನಾಲಾಯ್ಕ ಇವರನ್ನು ಬೇರೆ ಕಡೆ ವಗರ್ಾಯಿಸಿ ಇಲ್ಲದೆ ಹೋದರೆ ಪುರಸಭೆಯ ಮುಂದೆ ಧರಣಿ ನಡೆಸುವುದಾಗಿ ಸದಸ್ಯ ಮಹಮದ್ ಖಲಂದರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿ ತಿಂಗಳು 35 ರಿಂದ 40 ಸಾವಿರ ರೂಪಾಯಿ ಡೀಸೆಲ್ಗೆಂದು ಖಚರ್ು ಹಾಕುತ್ತೀರಿ, ಜೆ.ಸಿ.ಬಿ, ಆಟೋ ಟಿಪ್ಪರ್, ಸಕ್ಕಿಂಗ್ಯಂತ್ರ ಕಳದೆ ಆರು ತಿಂಗಳಿಂದ ಮೂಲೆ ಸೇರಿವೆ, ಇರುವ ಒಂದೇ ಟ್ರಾಕ್ಟರ್ ಹಾಗೂ ಆಟೋ ಟಿಪ್ಪರ್ಗೆ ಎಷ್ಟು  ಡೀಸೆಲ್ ಬೇಕು, ನಿತ್ಯ ಟ್ರಾಕ್ಟರ್ ಎಷ್ಟು ಕಿಲೋಮೀಟರ್ ಓಡಿದೆ ಇದರ ಬಗ್ಗೆ ಮಾಹಿತಿ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.
ಲಾರಿ ರಿಪೇರಿಗೆ 15ರಿಂದ 20 ಸಾವಿರ ರೂ ಖಚರ್ು ಬರುವುದಿಲ್ಲ, ಟ್ರಾಕ್ಟರ್ ರಿಪೇರಿಗೆ 15 ಸಾವಿರ ರೂ ಎಂದು ಜಮಾ ಖಚರ್ಿನಲ್ಲಿ ನಮೂದು ಮಾಡಿದ್ದೀರಿ ಇಷ್ಟು ಹಣ ಖಚರ್ು ಹೇಗೆ ಬರುತ್ತದೆ ಎಂದು ಮಹಮದ್ ಖಲಂದರ್ ಪ್ರಶ್ನಿಸಿದರು, ಒಂದು ತಿಂಗಳಿಗೆ ಖಾಸಗಿ ಟ್ರಾಕ್ಟರ್ನವರು 10 ರಿಂದ 12 ಸಾವಿರ ರೂಗೆ ಬಾಡಿಗೆಗೆ ಬರುತ್ತಾರೆ, ಆದರೆ ಪುರಸಭೆ ಟ್ರಾಕ್ಟರ್ ರಿಪೇರಿ ಹಾಗೂ ಡೀಸೆಲ್ ಖಚರ್ು ಸೇರಿ 50 ರಿಂದ 60 ಸಾವಿರ ಖಚರ್ು ಬರುತ್ತಿದೆ ಹೀಗಾದರೆ ಹೇಗೆ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಶೆಟ್ಟಿಕೆರೆ ರಸ್ತೆಯಲ್ಲಿರುವ ವೆಂಕಣ್ಣನಕಟ್ಟೆ ಪಾಕರ್್ ಮಾಡಲು ಹಣ ನೀಡಿದ್ದೀರಿ ಇಲ್ಲಿ ಒಂದು ಭಾಗದಲ್ಲಿ ಪುಟ್ಪಾತ್ ಮಾಡಿ ಅರ್ಧಕ್ಕೆ ನಿಂತಿದೆ, ವೆಂಕಣ್ಣನ ಕಟ್ಟೆಯ ತಗ್ಗು ಪ್ರದೇಶವಿರುವುದರಿಂದ ಅಲ್ಲೇ ಊರಿನ ಕಸ ಹಾಕಿ ಬೆಂಕಿ ಹಚ್ಚುತ್ತಿದ್ದಾರೆ ಇದರಿಂದ ಸುತ್ತಮುತ್ತಲ ಮನೆಗಳಿಗೆ ಪ್ಲಾಸ್ಟಿಕ್ ವಾಸನೆ ಹರಡಿ ಅನಾರೋಗ್ಯದಿಂದ ಬಳಲುವಂತಾಗಿದೆ, ಈ ಜಾಗದಲ್ಲಿ ಕಸ ಹಾಕುವಂತೆ ಯಾರು ಹೇಳಿದ್ದೀರಿ ಎಂದು ಅಧಿಕಾರಿಗಳನ್ನು ಸದಸ್ಯ ಎಂ.ಕೆ.ರವಿಚಂದ್ರ ಹೆಲ್ತ್ ಇನ್ಸ್ಪೆಕ್ಟರ್ ಜಯರಾಂರವರನ್ನು ಪ್ರಶ್ನಿಸಿದರು.
ಹೆಲ್ತ್ ಇನ್ಸ್ಪೆಕ್ಟರ್ ಮಾತನಾಡಿ ಯಾರು ವೆಂಕಣ್ಣನ ಕಟ್ಟೆಗೆ ಕಸ ಹಾಕುವಂತೆ ಹೇಳಿಲ್ಲ ಇನ್ನು ಮುಂದೆ ಕಸ ಹಾಕದಂತೆ ನೋಡಿಕೊಳ್ಳುತ್ತೇವೆ ಎಂದರು.
ಪಟ್ಟಣದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ ಸರಿಯಾಗಿ ಕುಡಿಯುವ ನೀರಿ ಬಿಡುತ್ತಿಲ್ಲ, ಚರಂಡಿಗಳಿಗೆ ಬ್ಲಿಚಿಂಗ್ ಪೌಡರ್, ಫೆನಾಯಿಲ್ ಹಾಕುತ್ತಿಲ್ಲ ಇದರಿಂದ ಊರು ಸ್ವಚ್ಛವಾಗಿರಲು ಸಾಧ್ಯವೇ ಎಂದು ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಚರಂಡಿ ಹಾಗೂ ರಸ್ತೆ ಪಕ್ಕದಲ್ಲಿ ಕೊಳಚೆ ಜಾಗಗಳಲ್ಲಿ ಫೆನಾಯಿಲ್ ಹಾಗೂ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದೇವೆ ಎಂದು ಹೆಲ್ತ್ ಇನ್ಸ್ಪೆಕ್ಟರ್ರವರೇ ಪ್ರತಿ ವಾಡರ್್ಗಳಿಗೆ ಭೇಟಿ ನೀಡೋಣ ತೋರಿಸುತ್ತೀರಾ ಎಂದು ಸದಸ್ಯರು ಪ್ರಶ್ನಿಸಿದರು. ಹೆಲ್ತ್ ಇನ್ಸ್ಪೆಕ್ಟರ್ ಮೌನವಾಗಿದ್ದರು.
ಪಟ್ಟಣದ ಕೋಳಿ ಘನತ್ಯಾಜ್ಯ ವಿಲೇವಾರಿ ಮಾಡಲು ಘನತ್ಯಾಜ್ಯ ವಿಲೇವಾರಿ ಕೇಂದ್ರವಿದೆ, ಆದರೆ ಕೋಳಿ ಅಂಗಡಿಯವರು ಕೋಳಿ ತ್ಯಾಜ್ಯವನ್ನು ಭಾವನಹಳ್ಳಿ ಹತ್ತಿರ ಹಾಕುತ್ತಿದ್ದಾರೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸದಸ್ಯ ಮಲ್ಲೇಶಯ್ಯ ಒತ್ತಾಯಿಸಿದರು.
ಪುರಸಭೆಯಲ್ಲಿ ಸಕ್ಕಿಂಗ್ಯಂತ್ರ, ಜೆ.ಸಿ.ಬಿ ಎರಡೂ  ಕೆಟ್ಟು ಹೋಗಿ ಆರು ತಿಂಗಳಾಗಿದೆ,  ಕೆಟ್ಟು ನಿಂತ ಸ್ಥಳದಲ್ಲಿಯೇ ನಿಂತಿದೆ ಇದುವರೆಗೆ ರಿಪೇರಿ ಮಾಡಿಸಲಾಗಿಲ್ಲ, ಬೇರೆ ಬೇರೆ ಬಾಬ್ತುಗಳಿಗೆ ಹಣ ಖಚರ್ು ಮಾಡುತ್ತೀರಿ ರಿಪೇರಿಗೆ ಏಕೆ ಹಣ ಖಚರ್ು ಮಾಡಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಪ್ರಶ್ನಿಸಿದರು.
ಸಭೆಯಲ್ಲಿ ಪುರಸಭಾಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಬಿ.ಪ್ರಕಾಶ್, ಸದಸ್ಯರುಗಳಾದ ಸಿ.ಎಸ್.ರಮೇಶ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ರಾಜಶೇಖರ್, ಅಶೋಕ್, ಇಂದಿರಾಪ್ರಕಾಶ್, ಧರಣಿಲಕ್ಕಪ್ಪ, ರೇಣುಕಾಗುರುಮತರ್ಿ, ಪ್ರೇಮದೇವರಾಜು, ಗೀತಾರಮೇಶ್, ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



 ಕೇಂದ್ರ ಸಕರ್ಾರದ ಭೂಸ್ವಾಧೀನ ಕಾಯ್ದೆಗೆ ರೈತರ ವಿರೋಧ
ಚಿಕ್ಕನಾಯಕನಹಳ್ಳಿ, : ಕೇಂದ್ರ ಸರ್ಕರ ಭೂಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದ ನೀತಿಯು  ಸಾರ್ವಜನಿಕ ಮತ್ತು ದೇಶದ ರೈತರ ಹಿತರಕ್ಷಣೆಗೆ ಕಾಳಜಿ ಇಲ್ಲದ ಸಕರ್ಾರದ ಪ್ರಯೋಗವಾಗಿದೆ ಎಂದು ರಾಜ್ಯ ಹಸಿರು ಸೇನೆಯ ರಾಜ್ಯ ಕಾರ್ಯದಶರ್ಿ  ಸತೀಶ್ಕೆಂಕೆರೆ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕೇಂದ್ರ ಸಕರ್ಾರ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಕೆಂಕೆರೆ,  ಬ್ರಿಟೀಷರ ಕಾಲದ 1894ರ ಭೂಸ್ವಾಧೀನ ಕಾಯ್ದೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸಿ ದೇಶಾದ್ಯಂತ ಹಲವು ದಶಕಗಳ ಕಾಲ ಎಷ್ಟೋ ಚಳುವಳಿಗಳು ನಡೆದ ಫಲವಾಗಿ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬೇಕಾದರೆ ರೈತರ ಒಪ್ಪಿಗೆ, ಸಂತ್ರಸ್ಥರಾದ ರೈತರಿಗೆ ಪುನಶ್ಚೇತನ ಮತ್ತು ಪುನರ್ ವಸತಿ ನ್ಯಾಯಯುತ ಪರಿಹಾರ ಮತ್ತು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕೆಂದು 2013ರಲ್ಲಿ ಜಾರಿಗೆ ತರಲಾಯಿತು,  ಈ  ಭೂಸ್ವಾಧೀನ ಕಾಯ್ದೆಗೆ ಕೇಂದ್ರದಲ್ಲಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸಕರ್ಾರವು ತಿದ್ದುಪಡಿಯನ್ನು  ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವುದು ದೇಶದ ರೈತರಿಗೆ ಬಗೆದ ದ್ರೋಹವಾಗಿದೆ, ಹೀಗಾಗಿ ಈ ಸುಗ್ರೀವಾಜ್ಞೆಯನ್ನು ಕೇವಲ ತಿದ್ದುಪಡಿಯೆಂದು ಕರೆಯಲಾಗುವುದು ಎಂದ ಅವರು, ಈ ತಿದ್ದುಪಡಿ  2013ರ ಮೂಲ ಆಶಯ ಮತ್ತು ಉದ್ದೇಶವನ್ನು ನಿರಾರ್ಥಕಗೊಳಿಸುತ್ತದೆ ಎಂದರು.
1894ರ ಕಾಯ್ದೆಯಲ್ಲಿ ಸಂತ್ರಸ್ಥ ಭೂಪಾಲಕರಿಗೆ ಆಕ್ಷೇಪಣೆ ಸಲ್ಲಿಸಲು, ತಮ್ಮ ಕಷ್ಠ ಹೇಳಿಕೊಳ್ಳುವ ಅವಕಾಶವಾದರು ಇತ್ತು,  ಆದರೆ ಈಗ ಸುಗ್ರಿವಾಜ್ಞೆಯಲ್ಲಿ ವಿಧಿ ವಿಧಾನದ ಅಗತ್ಯೆತಗಳನ್ನು ಬೈಪಾಸ್ ಮಾಡಿರುವುದರಿಂದ ಜಮೀನು ಮಾಲೀಕರಿಗೆ ಕನಿಷ್ಠ ರಕ್ಷಣೆ ಇಲ್ಲದಂತೆ ಆಗಿದೆ, ಒಟ್ಟಾರೆ ಇದು ರಿಯಲ್ ಏಸ್ಟೇಟ್ನವರು,  ಉದ್ದಿಮೆದಾರರು,  ಕಾಪರ್ೋರೇಟ್ಗಳ ಹಿತರಕ್ಷಣೆಗಾಗಿ ನಡೆಯುತ್ತಿರುವ ಪೈಪೋಟಿ ಆಗಿದೆ, ಈ ಪೈಪೋಟಿಯ ಹಿಂದೆ ಒಂದೆಡೆ ಪ್ರಭಾವಿಗಳು ಇದ್ದಾರೆ,  ಯಾವುದೇ ಪ್ರಭಾವ ಇಲ್ಲದ ರೈತ ಸಮುದಾಯದ ಪರವಾಗಿ ಕನರ್ಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇರುತ್ತದೆ ಎಂದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರುಗಳಾದ ಶಿವಕುಮಾರ್, ಲೋಕಣ್ಣ ತಿಮ್ಮನಹಳ್ಳಿ, ವಿರೂಪಾಕ್ಷಯ್ಯ, ಮನು, ಉಮೇಶ್ಗೌಡ, ದಬ್ಬೆಘಟ್ಟ ಬಸವರಾಜು, ಮತ್ತಿತರರು ಉಪಸ್ಥಿತರಿದ್ದರು.


ಎಲ್.ಜಿ.ಹಾವನೂರುರವರ ಜನ್ಮದಿನಾಚಾರಣೆ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಮಾ.26: ಪ್ರತಿಯೊಬ್ಬರಿಗೂ ಮೀಸಲಾತಿ ದೊರಕಬೇಕೆಂಬ ಎಲ್.ಜಿ.ಹಾವನೂರುರವರ ಸಿದ್ದಾಂತಗಳು ಹಾಗೂ  ಹೋರಾಟಗಳ  ಬಗ್ಗೆ ನಾಡಿನ ಪ್ರತಿಯೊಬ್ಬರಿಗೂ ತಿಳಿಸುವುದು ಅವಶ್ಯಕ ಎಂದು ಕನರ್ಾಟಕ ವಾಲ್ಮಿಕಿ ಸೇನೆಯ ರಾಜ್ಯಾಧ್ಯಕ್ಷ ಪ್ರತಾಪ್ಮದಕರಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕನರ್ಾಟಕ ವಾಲ್ಮೀಕಿ ಸೇನೆಯ ವತಿಯಿಂದ ಏರ್ಪಡಿಸಿದ್ದ ಎಲ್.ಜಿ.ಹಾವನೂರುರವರ ಜನ್ಮದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್.ಜಿ.ಹಾವನೂರುರವರು ದಕ್ಷಿಣ ಭಾರತದ ಜನತೆಗೆ ಅನುಕೂಲವಾಗಲು ಸಿದ್ದಾಂತಗಳನ್ನು ರಚಿಸಿದರು, ಪ್ರತಿಯೊಬ್ಬರಿಗೂ ಮೀಸಲಾತಿ ದೊರಕಬೇಕೆಂಬುದೇ ಅವರ ಆಶಯವಾಗಿತ್ತು ಎಂದರು.
 ಕನರ್ಾಟಕ ವಾಲ್ಮೀಕಿ ಸೇನೆಯ ಮಹಿಳಾ ಪತ್ತಿನ ಸಹಕಾರ ಸಂಘ ಅಸ್ಥಿತ್ವಕ್ಕೆ ಬರಬೇಕು, ಈ ಘಟಕ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಆರಂಭವಾಗಬೇಕು, ಮಹಿಳೆಯರ ಸಂಘಟನೆಯ ಶಕ್ತಿ ಏನೆಂಬುದು ಜನತೆಗೆ ತಿಳಿದಿದ್ದು ವಾಲ್ಮೀಕಿ ಸೇನೆಯ ಮಹಿಳಾ ಸಂಘಟನೆಗಳೇ ಒಗ್ಗಟ್ಟಿನಿಂದ ಸಂಘ ರಚಿಸಿ ವ್ಯವಹಾರ ನಡೆಸಬೇಕು,  ಕನರ್ಾಟಕ ವಾಲ್ಮೀಕಿ ಸೇನೆ ಸಂಘಟನೆಯಿಂದ ಹಳ್ಳಿಗಳ ಮೂಲಕ ರಾಜ್ಯವ್ಯಾಪಿ ಹರಡಬೇಕು ಎಂದರು.
ಈ ಸಂಧರ್ಭದಲ್ಲಿ ಕನರ್ಾಟಕ ವಾಲ್ಮೀಕಿ ಸೇನೆಯ ಮಲ್ಲೇಶಣ್ಣ, ನಾಗಣ್ಣ, ಶಿವಣ್ಣ, ನಾಗರಾಜ್, ಶಿವಮ್ಮಕೊಡಿಹಳ್ಳಿ, ಪುಷ್ಪಾವತಿ ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ: ಜಾತಿಗಣತಿ ತರಬೇತಿ ಸ್ಥಳಾಂತರ
ಚಿಕ್ಕನಾಯಕನಹಳ್ಳಿ: ಜಾತಿ ಗಣತಿಯ ಎರಡನೇ ಹಂತದ ತರಬೇತಿಯು ಇದೇ 28 ಮತ್ತು 29 ರಂದು ನಡೆಯಲಿದ್ದು, ತರಬೇತಿಯು ಪಟ್ಟಣದ ಶ್ರೀ ನಿವರ್ಾಣೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದರು.
ಈ ಮೊದಲು ತರಬೇತಿಯು ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಎಂದು ನಿಗಧಿಪಡಿಸಲಾಗಿತ್ತು, ಆದರೆ ಅಲ್ಲಿ ಪರೀಕ್ಷೆ ನಡೆಯುತ್ತಿರುವುದರಿಂದ ಈ ಸ್ಥಳದ ಬದಲಾಗಿ, ಶ್ರೀ ನಿವರ್ಾಣೇಶ್ವರ ಪ್ರೌಢಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.