Monday, May 17, 2010

ಜೆ.ಡಿ.ಎಸ್. ಮುನ್ನಡೆ, ಎರಡನೇ ಸ್ಥಾನದಲ್ಲಿ ಬಿ.ಜೆ.ಪಿ, ಜೆ.ಡಿ.ಯು ಪಾಳೆಯದಲ್ಲಿ ಅಸಮಧಾನ, ಕಾಂಗ್ರೆಸ್ಗೆ ಗುಟುಕು ಜೀವ.


ಚಿಕ್ಕನಾಯಕನಹಳ್ಳಿ,ಮೇ.17: ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ಜೆ.ಡಿ.ಯು ಹಾಗೂ ಬಿ.ಜೆ.ಪಿ. ಕಾಲೆಳೆದಾಡಿ ಕೊಂಡಿದ್ದರಿಂದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ರವರಿಗೆ ಲಾಭವಾಗಿದೆ.


ತಾಲೂಕಿನ 28 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ರಾತ್ರಿ 10.30ರ ವೇಳೆಗೆ ದೊರೆತ ಮಾಹಿತಿಯಂತೆ ಒಟ್ಟು 464 ಸ್ಥಾನಗಳಲ್ಲಿ ಜೆ.ಡಿ.ಎಸ್. ಬೆಂಬಲಿತರು 194 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರೆ, ಬಿ.ಜೆ.ಪಿ. ಬೆಂಬಲಿತರು 120 ಸ್ಥಾನಗಳನ್ನು, ಜೆ.ಡಿ.ಯು. 55 ಸ್ಥಾನಗಳು, ಕಾಂಗ್ರೆಸ್ 35 ಹಾಗೂ ಸ್ವತಂತ್ರ ಅಬ್ಯಾಥರ್ಿಗಳೆಂದು ಹೇಳಿಕೊಳ್ಳುವವರ ಪೈಕಿ 60 ಜನರು ಆಯ್ಕೆಯಾಗಿದ್ದಾರೆ.


ಈ ಜಯ ಶಾಸಕರ ಗುಂಪಿಗೆ ಹರ್ಷ ತಂದುಕೊಟ್ಟಿದ್ದು, ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದ ಶಾಸಕರಿಗೆ ತಮ್ಮ ಜಯದ ಸುದ್ದಿ ತಿಳಿಸಲು ಗುಂಪು ಗುಂಪಾಗಿ ತೆರಳುತ್ತಿದ್ದು ಸಾಮಾನ್ಯ ದೃಶ್ಯವಾಗಿತ್ತು.


ಈ ಬಾರಿ ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಪೈಕಿ 484 ಸ್ಥಾನಗಳಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿಕೆ 470 ಸ್ಥಾನಗಳಿಗೆ 1527 ಮಂದಿ ಸ್ಪಧರ್ಿಸಿದ್ದರು


ಮತ ಎಣಿಕೆಯ ಸಂದರ್ಭದಲ್ಲಿ ಕಂಡ ವಿಶೇಷ ಅಂಶಗಳೆಂದರೆ, ಮತ ಎಣಿಕೆ ಆರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಲಕ್ಮೇನಹಳ್ಳಿ ಕ್ಷೇತ್ರದ ಜೆ.ಡಿ.ಯು.ಬೆಂಬಲಿತ ಅಬ್ಯಾಥರ್ಿ ಉಷಾ ಪ್ರಥಮ ವಿಜೇತೆ ಅನಿಸಿಕೊಂಡರು.


ಗೋಡೆಕೆರೆಯ ಬಸವಲಿಂಗಮೂತರ್ಿ ಹಾಗೂ ಜಿ.ಎಂ.ಮಲ್ಲಿಕಾರ್ಜನಯ್ಯ ಸಮವಾಗಿ 144 ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿ ಚೆನ್ನಿಗರಾಮಯ್ಯನವರು ಲಾಟರಿ ಎತ್ತುವ ಮೂಲಕ ಬಸವಲಿಂಗಮೂತರ್ಿ ಜಯಗಳಿಸಿದ್ದಾರೆ ಎಂದು ಘೋಷಿಸಿದರೆ, ಈ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದವರಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಎಂ.ಎಚ್.ಕಾವಲಿನ ವಿನೋದ ಬಾಯಿ(110) ತನ್ನ ಸಮೀಪ ಪ್ರತಿ ಸ್ಪಧರ್ಿ ನೇತ್ರಾವತಿ(109) ಗಿಂತ ಒಂದು ಮತ ಹೆಚ್ಚೆಗೆ ಪಡೆದು ಜಯಗಳಿಸಿದ್ದಾರೆ.


ತೀರ್ಥಪುರ ಗ್ರಾ.ಪಂ.ಯ ಕಾಮಾಕ್ಷಮ್ಮ(286), ಮಂಜುಳ(285) ಮತಗಳನ್ನು ಪಡೆದಿದ್ದರಿಂದ ಕಾಮಾಕ್ಷಮ್ಮನಿಗೆ ಅದೃಷ್ಟ ಒಲಿದಿದೆ. ಜೆ.ಸಿ.ಪುರ ಗ್ರಾ.ಪಂ.ಯ ಹಾಲುಗೊಣದಲ್ಲಿ ದೇವರಾಜು ಎರಡು ಮತಗಳಿಂದ ಜಯಗಳಿಸಿದ್ದಾರೆ, ಹೊನ್ನೆಬಾಗಿ ಗ್ರಾ.ಪಂ.ಯ ಬುಳ್ಳೇನಹಳ್ಳಿಯ ಉದಯಕುಮಾರ್ ಎರಡು ಮತಗಳ ಅಂತರದಿಂದ ಜಯಗಳಿಸಿದ್ದಾರೆ.


ಮತ ಎಣಿಕೆ ನಡೆಯುತ್ತಿದ್ದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಸಾವಿರಾರು ಜನರು ತಮ್ಮ ಪರವಾದ ವ್ಯಕ್ತಿಗಳ ಫಲಿತಾಂಶವನ್ನು ತಿಳಿಯಲು ತವಕದಿಂದ ಕಾದು ಕುಳಿದಿದ್ದರು, ನೂರಾರು ವಾಹನಹಳು ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ನಿಂತಿದ್ದು ಇಡೀ ದಿನ ಪಟ್ಟಣದ ಹೈಸ್ಕೂಲ್ ಆವರಣ ಹಾಗೂ ಕಾಲೇಜ್ ಆವರಣ ಜನ ಜಂಗುಳಿಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರು ಅದು ಜನರ ಜಯಘೋಷಣೆಗೆ ಹಾಗೂ ಮೆರವಣಿಗೆಗೆ ಯಾವುದೇ ಕೆಡಕನ್ನು ಉಂಟು ಮಾಡಿರಲಿಲ್ಲ.


ರಾತ್ರಿ 10.45 ಆದರೂ ಇನ್ನೂ ಯಳನಡು ಗ್ರಾ.ಪಂ.ಯ ತಮ್ಮಡಿಹಳ್ಳಿ ಕ್ಷೇತ್ರ ಮತ ಎಣಿಕೆ ನಡೆಯುತ್ತಲೇ ಇತ್ತು.


ಚುನಾವಣೆ ಶಾಂತ ರೀತಿಯಲ್ಲಿ ಸುವ್ಯವಸ್ಥಿತವಾಗಿ ನಡೆಯಿತು, ಚುನಾವಣೆಯ ನೇತೃತ್ವವನ್ನು ವಹಿಸಿದ್ದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಹಾಗೂ ಸಿ.ಪಿ.ಐ, ಪಿ.ರವಿ ಪ್ರಸಾದ್ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗ ಚುನಾವಣೆ ಯಶಸ್ವಿಯಾಗಲು ಸಾಕಷ್ಟು ಶ್ರಮಿಸಿದೆ.