Tuesday, August 5, 2014

ಗೆಲ್ಲುವ ಗುರಿ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ : ಬಿ.ಇ.ಓ ಸಾ.ಚಿ.ನಾಗೇಶ್


 ಚಿಕ್ಕನಾಯಕನಹಳ್ಳಿ : ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ಗುರಿ ಇದ್ದರೆ ಮಾತ್ರ ಜೀವನದಲ್ಲಿ ಮುಂದೆ ಬರಬಹುದು ಎಂದು ಬಿ.ಇ.ಒ. ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಗಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ತೀಪರ್ುಗಾರರು ತೀಪರ್ು ನೀಡುವಾಗ ತಾರತಮ್ಯ ಮಾಡದೇ ಸರಿಯಾದ ತೀಪರ್ು ನೀಡಿದರೆ ಮಾತ್ರ ಮಕ್ಕಳು ಕ್ರೀಡೆಯ ಬಗ್ಗೆ ಅಸಕ್ತಿ ತೋರಿಸುವರು ಎಂದರು. 
  ಪುರಸಭಾ ಅದ್ಯಕ್ಷೆ ಪುಷ್ವ.ಟಿ.ರಾಮಯ್ಯ ಮಾತಾನಾಡಿ, ಮಕ್ಕಳು ವಿದ್ಯೆಯ ಜೊತೆಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಒತ್ತು ನೀಡಿ, ಕ್ರೀಡೆ ಹಾಗೂ ವಿದ್ಯೆಯಲ್ಲಿ ಹೆಚ್ಚು   ತೊಡಗಿಸಿಕೊಳ್ಳಲು ಪೊಷಕರು ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದರು.
ಪುರಸಭಾ ಸ್ಥಾಯಿ ಸಮಿತಿ ಅದ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, 2010ರ ಕಾಮಾನ್ವೆಲ್ತ್ ಕ್ರೀಡಾಕೂಟದಲ್ಲಿ 101 ಪದಕಗಳನ್ನು ಭಾರತದ ಕ್ರೀಡಾಪಟುಗಳು ಗಳಿಸಿದ್ದರು,  ಈ ಬಾರಿಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ದೇಶ 64 ಪದಕ ಗಳಿಸಿರುವುದನ್ನು ನೋಡಿದರೆ ದೇಶದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ದೊರಕುತ್ತಿಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ ಎಂದು ವಿಷಾಧಿಸಿದರು.
  2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಶೂಟಿಂಗ್ನಲ್ಲೇ 14 ಚಿನ್ನಗಳಿಸಿದ್ದರು ಆದರೆ ಈ ಬಾರಿ ಒಟ್ಟಾರೆ 15 ಚಿನ್ನಗಳಿಸಿರುವುದನ್ನು ನೋಡಿದರೆ ಕ್ರೀಡೆಗೆ ಸಕರ್ಾರ ಹೆಚ್ಚು ಪ್ರೋತ್ಸಾಹ ನೀಡುತ್ತಿಲ್ಲ ಎಂದ ಅವರು ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ನಾವು ಗೆಲುವು ಸಾಧಿಸಬೇಕೆಂಬ ಛಲವಿರಬೇಕು ಹೋರೆತು ಬೇರೆಯವರನ್ನು ಸೋಲಿಸಬೇಕು ಎಂಬ ಮನೋಭಾವವಿರಬಾರದು, ಕ್ರೀಡೆ ದೇಶ-ದೇಶಗಳ ಹಾಗೂ ವ್ಯಕ್ತಿ ವ್ಯಕ್ತಿಗಳಲ್ಲಿ ಸಾಮರಸ್ಯ  ಬೆಸೆಯುತ್ತದೆ ಎಂದರು. 
       ದೇಶೀಯ ವಿದ್ಯಾಪೀಠ ಪ್ರೌಢಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ 2014-15ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಗುವುದು ಎಂದರು.
ಡಿವಿಪಿ ಶಿಕ್ಷಣ ಸಂಸ್ಥೆಯ  ನಿದರ್ೇಶಕ ಸಿ.ಬಿ.ರೇಣುಕಸ್ವಾಮಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಿ.ಇ.ಓ ಸಾ.ಚಿ.ನಾಗೇಶ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ರೂಪಾ ಶಿವಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿ.ನಾ.ಪುರುಷೋತ್ತಮ್, ನರಸಿಂಹಮೂತರ್ಿ, ಸಿ.ಎಸ್.ಕುಮಾರಸ್ವಾಮಿ, ಉಪಸ್ಥಿತರಿದ್ದರು. ಸಹನಾ ತಂಡದವರು ಪ್ರಾಥರ್ಿಸಿದರೆ, ಶಿಕ್ಷಕ ಎಂ.ಎಲ್.ಮಲ್ಲಿಕಾಜರ್ುನಯ್ಯ ಸ್ವಾಗತಿಸಿದರು. ವೇಣುಗೋಪಾಲ್ ನಿರೂಪಿಸಿದರು. ಬಿ.ಆರ್.ರಾಮಸ್ವಾಮಿ ವಂದಿಸಿದರು.