Monday, April 15, 2013


ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ್ದೇನೆ ಈ ಬಗ್ಗೆ ಯಾವುದೇ ವೇದಿಕೆಯಲ್ಲಿ ಚಚರ್ಿಸಲು ಸಿದ್ದ: ಸಿ.ಬಿ.ಎಸ್.ಸವಾಲ್

ಚಿಕ್ಕನಾಯಕನಹಳ್ಳಿ,ಏ.15 : ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ  ಏನೇನು ಅಭಿವೃದ್ದಿಯಾಗಿದೆ ಎನ್ನುವ ಬಗ್ಗೆ ದಾಖಲೆ ಸಮೇತ  ಪ್ರದಶರ್ಿಸುತ್ತೇನೆ ಈ ಬಗ್ಗೆ ಚಚರ್ಿಸಲು ಯಾವುದೇ  ವೇದಿಕೆಗೆ ಕರೆದರೂ ಬರುತ್ತೇನೆ ಎಂದು  ಜೆಡಿಎಸ್ ಅಭ್ಯಥರ್ಿ ಸಿ.ಬಿ.ಸುರೇಶ್ಬಾಬು ಸವಾಲು ಹಾಕಿದರು.
ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಮೆರವಣಿಗೆ ಹೊರಟು, ಚುನಾವಣಾಧಿಕಾರಿ ಇ.ಪ್ರಕಾಶ್ ರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಓಟಿಗಾಗಿ ಗಂಡ ಹೆಂಡತಿಯನ್ನು ಬೇರೆ ಮಾಡುವ ರಾಜಕಾರಣಿ, ಸೋತ ನಂತರ ತಮ್ಮ ತೋಟ ಮತ್ತು ಮನೆ ಬಿಟ್ಟು ಆಚೆ ಬರದೆ ಚುನಾವಣೆ ಆರು ತಿಂಗಳು ಇದೆ ಎನ್ನುವಾಗ ಜನರ ಬಳಿ ಬರುತ್ತಾರೆ  ಎಂದು ಆರೋಪಿಸಿದರಲ್ಲದೆ, ಹುಲಿವೇಷ ಹಾಕಿದಾದ ಹುಲಿ ಯಂತೆ ಕಾಣಿಸುತ್ತಾರೇನೊ ಹೊರತು ಅವರು. ಕಾಡಿನಿಂದ ಆಚೆ ಬರದ ಅವರನ್ನು ಮತ್ತೆ ಜನರೆ ಕಾಡಿಗೆ ಕಳಿಸುತ್ತಾರೆ ಎಂದರು.
ಅವರು  ಶಾಸಕರಾಗಿದ್ದ ಸಮಯದಲ್ಲಿ ಸದನದಲ್ಲಿ ನೈಸ್, ಕಾರಿಡಾರ್ ಬಗ್ಗೆ ಮಾತನಾಡಿದರೆ ಹೊರತು ತಾಲ್ಲೂಕಿನ ಬಡ ಜನತೆಯ ಪರವಾದ ವಿಷಯದ ಬಗ್ಗೆ ಚಚರ್ಿಸಲೇ ಇಲ್ಲ, ತಾಲ್ಲೂಕಿನ ರೈತರಿಗೆ  ಹೆಚ್ಚಿಗೆ ಅನುಕೂಲವಾಗುವ  ಕೊಬ್ಬರಿ ಬೆಲೆಯ ಬಗ್ಗೆ ಹಾಗೂ ನೀರಿನ ಸಮಸ್ಯೆ ಬಗ್ಗೆ ಚಚರ್ಿಸದೆ ನಿಷ್ಕ್ರೀಯರಾಗಿ ಈಗ ನೀರು ತರುವಲ್ಲಿ ನಮ್ಮ ಪಾತ್ರವೂ  ಇದೆ ಎಂದು ಹೇಳುತ್ತಾರೆ ಎಂದರು.
ತಮ್ಮ ವಿರುದ್ದ ಅಪಪ್ರಚಾರ ಮಾಡುತ್ತಾ ಮೊದಲಿನಂತೆ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ, ಅವರು ಶಾಸಕರಾಗಿದ್ದ ಸಮಯದಲ್ಲಿ ಯಾವ ಅಭಿವೃದ್ದಿ ಕೆಲಸ ಮಾಡದೆ  ಚುನಾವಣೆ ಸಮಯದಲ್ಲಿ ಜನಗಳ ಮುಂದೆ ತಮ್ಮ ವಿರುದ್ದ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು, 
ಎಲ್ಲಾ ಬಡವರ್ಗದ ಜನತೆ ನನ್ನ ಬೆಂಬಲಕ್ಕೆ ನಿಂತಿದೆ ಕೆಜೆಪಿ ಮತ್ತು ಬಿಜೆಪಿ ಇಬ್ಬರೂ ಜೋಬುಗಳ್ಳರು ಅನುಕಂಪದಿಂದ ಬಿ.ಜೆ.ಪಿ. ಅಧಿಕಾರಕ್ಕೆ ಬಂದರೂ ಆಡಳಿತ ಸುಧಾರಣೆ ಅವರಿಂದಾಗದು ಅದಕ್ಕಾಗಿ ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ನಮ್ಮ ತಂದೆಯವರು ಶಾಸಕರಾಗಿದ್ದಾಗ ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಹೋರಾಟ ಮಾಡಿದ್ದರು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನೀರಾವರಿ ಸಮಸ್ಯೆ ಬಗೆ ಹರಿಯುತ್ತದೆ ಎನ್ನುವ ಉದ್ದೇಶದಿಂದ ಕೆಸಿಪಿಯಿಂದ ಜೆಡಿಎಸ್ ಪಕ್ಷ ಸೇರಿದ್ದು, ಅಲ್ಲದೆ ತಾಲ್ಲೂಕಿನ ನೀರಿನ ಸಮಸ್ಯೆ ಬಗ್ಗೆ ನಾನೂ ಸದನದಲ್ಲಿ ಚಚರ್ಿಸಿದ್ದೇನೆ ಎಂದರು.
ಈಗಿನ ಚುನಾವಣೆಗೆ ನಾನು ನಾಮಪತ್ರ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ 20ಸಾವಿರ ಹೆಣ್ಣುಮಕ್ಕಳಿಗೆ ತಾಲ್ಲೂಕಿನಲ್ಲಿಯೇ ಕೆಲಸ ಸಿಗುವಂತೆ ಗಾಮರ್ೆಂಟ್ಸ್ನ್ನು ಆರಂಭಿಸಲಾಗುವುದು, ಎಂದಿನಂತೆ ತಾಲ್ಲೂಕಿನ ಅಭಿವೃದ್ದಿಯನ್ನು ಕೊಂಡೊಯ್ಯುವತ್ತ ಗಮನ ಹರಿಸಲಿದ್ದು ಕೋಮು ಸೌಹಾರ್ಧತೆ ಕಾಪಾಡುತ್ತೇನೆ ಎಂದರಲ್ಲದೆ ಹಿಂದಿನ ಬಾರಿ ಶಾಸಕನಾಗಿದ್ದ ಸಮಯದಲ್ಲಿ ತಾಲ್ಲೂಕಿಗೆ ಅಗ್ನಿಶಾಮಕ ಠಾಣೆಗೆ ಹಣ ಮಂಜೂರಾಗಿತ್ತು ಆದರೆ ನಂತರ ಬಂದ ಶಾಸಕರು ಯೋಜನೆಗೆ ಜಾಗವನ್ನೇ ನೀಡಲಿಲ್ಲ ಮತ್ತೊಮ್ಮೆ ನಾನು ಶಾಸಕನಾಗಿ ಆಯ್ಕೆಯಾದಾಗಲೇ ಠಾಣೆ ಆರಂಭಗೊಂಡಿದ್ದು ಎಂದು ಸಮಥರ್ಿಸಿಕೊಂಡರು.
ರಾಜ್ಯದ ಸಮಸ್ಯೆ ಬಗೆಹರಿಸುವತ್ತ ನನ್ನ ಚಿಂತನೆ ಇತ್ತು: ಜೆ.ಸಿ.ಎಂ.

ಚಿಕ್ಕನಾಯಕನಹಳ್ಳಿ,ಏ.15 : ನಮ್ಮ ಕ್ಷೇತ್ರದ ಸಮಸ್ಯೆ ಮಾತ್ರ ಬಗೆ ಹರಿಸಲು ಮುಂದಾದರೆ ರಾಜ್ಯ ಸಮಸ್ಯೆ ಬಗೆಹರಿಸುವವರು ಯಾರು, ಶಾಸನ ಸಭೆಗೆ ಆಯ್ಕೆಯಾಗುವುದು ಕನರ್ಾಟಕದ ಸಮಸ್ಯೆಯನ್ನು ಬಗೆಹರಿಸಲು, ಶಾಸಕರು ತಮ್ಮ ಕ್ಷೇತ್ರದ ಜೊತೆಗೆ ರಾಜ್ಯ ಸಮಸ್ಯೆಯ ಬಗೆಹರಿಸಲು ಮುಂದಾಗಬೇಕು ಅದಕ್ಕಾಗಿಯೇ ನಾನು ನೈಸ್, ಇಸ್ಕಾನ್ ನಂತಹ ರಾಜ್ಯ ಸಮಸ್ಯೆ ಬಗ್ಗೆ ಹೋರಾಟ ಮಾಡಿದೆ ಎಂದು ಕೆಜೆಪಿ ಅಭ್ಯಥರ್ಿ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಮೆರವಣಿಗೆ ಹೊರಟು, ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ತಮ್ಮ ನಾಮಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ಶಾಸನ ಸಭೆಗೆ ಆಯ್ಕೆಯಾಗುವುದು ಕನರ್ಾಟಕ ವಿಧಾನಸಭೆಗೆ ಅದಕ್ಕಾಗಿ ಕನರ್ಾಟಕದ ಪ್ರತಿಯೊಂದು ಸಮಸ್ಯೆಯನ್ನು ಚಚರ್ಿಸಿ ಆ ಸಮಸ್ಯೆಯನ್ನು ಪರಿಹರಿಸದಿದ್ದರೆ ಶಾಸನ ಸಭೆಗೆ ಗೌರವವಿರುವುದಿಲ್ಲ. ರಾಜ್ಯದಲ್ಲಿ ನೈಸ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಉಳಿದಿತ್ತು ಎಂದರಲ್ಲದೆ ನನ್ನ ಶಾಸಕತನದ ಅವಧಿಯಲ್ಲಿ ತಾಲ್ಲೂಕಿನ ಸಮಸ್ಯೆ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ತಿಳಿಸಿ ಸಮಸ್ಯೆ ಬಗೆ ಹರಿಸುತ್ತಿದ್ದೆ, ನಮಗೆ ಶಕ್ತಿ ಇದೆ ಅದಕ್ಕಾಗಿಯೇ ಅಧಿಕಾರಿಗಳಿಗೆ ಜನರ ಸಮಸ್ಯೆ ಬಗ್ಗೆ ಸ್ಥಳದಲ್ಲಿಯೇ ಬಗೆಹರಿಸುತ್ತಿದೆ ಎಂದರು.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ  ಜಾತಿ ಸಂಘರ್ಷಕ್ಕೆ ಹೇಡೆ ಮಾಡಿಕೊಡದೆ ಕ್ಷೇತ್ರದಲ್ಲಿ ನಾಯಕತ್ವದ ಕೊರತೆ ಇಲ್ಲದಂತೆ ನೋಡಿಕೊಂಡಿದ್ದೇನೆ, ಈಗಿನ ಶಾಸಕರ ಅವಧಿಯಲ್ಲಿ ಅಧಿಕಾರಿ ಶಾಹಿ ಆಡಳಿತವಿತ್ತು  ಎಂದರಲ್ಲದೆ ಸದನದಲ್ಲಿ ಗಣಿ ವಿಚಾರದ ಬಗ್ಗೆ ಚಚರ್ಿಸುತ್ತಿದ್ದೆ ಆದರೆ ಆ ಸಮಯದಲ್ಲಿ ಗಣಿ ಸಮಸ್ಯೆ ಇಷ್ಟು ದೊಡ್ಡದಾಗಿ ಇಲ್ಲದಿದ್ದರಿಂದ ಪ್ರಚಾರವಿರಲಿಲ್ಲ ಎಂದು ತಿಳಿಸಿದರು.

ಬಿ.ಎಸ್.ಪಿ.ರಾಜ್ಯ ಪ್ರಧಾನ ಕಾರ್ಯದಶರ್ಿಯಾಗಿ ಕ್ಯಾಪ್ಟನ್ ಸೋಮಶೇಖರ್ ನೇಮಕ


ಚಿಕ್ಕನಾಯಕನಹಳ್ಳಿ,ಏ.15: ಬಿ.ಎಸ್.ಪಿ. ಪಕ್ಷದ ರಾಜ್ಯ ಪ್ರಧಾನ ಕಾರ್ಯದಶರ್ಿಯಾಗಿ ನೇಮಕ ಮಾಡಿದ್ದು, ಬುಧವಾರ ಮಧ್ಯಾಹ್ನ ವಿಧಾನ ಸಭಾ ಚುನಾವಣೆಗೆ ಈ ಕ್ಷೇತ್ರದಿಂದ ನಾನು ನಾಮಪತ್ರ ಸಲ್ಲಿಸುತ್ತಿರುವುದಾಗಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಪಿ.ಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪನವರು ಹಾಗೂ ದ್ವಾರಕನಾಥ್ ನನ್ನನ್ನು ಪಕ್ಷಕ್ಕೆ ಬರಮಾಡಿಕೊಂಡು ರಾಜ್ಯ ಮಟ್ಟದ ಸ್ಥಾನಮಾನ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಕಡಿಮೆ ಅವಧಿಯಲ್ಲಿ ಉತ್ತಮ ಸಂಘಟನೆ ಮಾಡಿದ್ದೆ ಆದರೆ ಜಾತಿವಾರು ಪ್ರಾತಿನಿಧ್ಯದ ವಿಷಯ ಬಂದಾಗ ನನಗೆ ಹಿನ್ನಡೆಯಾಯಿತು ಎಂದರಲ್ಲದೆ, ಕಾಂಗ್ರೆಸ್ನಲ್ಲಿ ಪಕ್ಷದ ಬೆಳವಣಿಗೆಗಿಂತ ಜಾತಿಗಳ ತೃಪ್ತಿ ಪಡಿಸುವ ಅನಿವಾರ್ಯತೆ ಇದೆ ಎಂದರು.
ಸುದ್ದಿ:1


ಕಾಂಗ್ರೆಸ್ಗೆ ಕ್ಯಾಪ್ಟನ್ ಸೋಮಶೇಖರ್ ರಾಜೀನಾಮೆ


ಚಿಕ್ಕನಾಯಕನಹಳ್ಳಿ,ಏ.14: ಕಾಂಗ್ರೆಸ್ ಪಕ್ಷದ ಕ್ಯಾಪ್ಟನ್ ಸೋಮಶೇಖರ್ ಕ್ಷೇತ್ರದ ಸಂಘಟನಾ ಉಸ್ತುವಾರಿ ಹಾಗೂ ವೀಕ್ಷಕ ಸ್ಥಾನಕ್ಕೆ ಸೇರಿದಂತೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಜಿಲ್ಲಾ ಅಧ್ಯಕ್ಷ ಷಫಿ ಅಹಮದ್ ರವರಿಗೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.ತಾಲೂಕಿಗೆ ಹೇಮಾವತಿ ನೀರು ಹರಿಸುವ ಕಾಮಾಗಾರಿ ಆರಂಭ: ಕೆ.ಎಸ್.ಕಿರಣ್ಕುಮಾರ್.

  • ಬಿ.ಜೆ.ಪಿ ಸಕರ್ಾರದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಮೂನ್ನೂರು ಕೋಟಿ ರೂ ಅನುದಾನ:
  • ಸುಳ್ಳು, ಅಪಪ್ರಚಾರದಲ್ಲೇ ಕಾಲ ಕಳೆಯುವ ಮಾಜಿ ಶಾಸಕರು.
  • ಮೂರು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬರುವ ಶಾಸಕರು  

ಚಿಕ್ಕನಾಯಕನಹಳ್ಳಿ,ಏ.14 : ತಾಲ್ಲೂಕಿನ  27ಕೆರೆಗಳ ಕುಡಿಯುವ ನೀರಿನ 102ಕೋಟಿರೂಗಳ ಕಾಮಗಾರಿ ಆರಂಭಗೊಂಡಿದೆ ಇದರಿಂದಾಗಿ ತಾಲೂಕಿನ ಬಹು ದಿನಗಳ ಬಯಕೆ ಈಡೇರಿದಂತಾಗಿದೆ, ಬಿ.ಜೆ.ಪಿ. ಸಕರ್ಾರ ಕ್ಷೇತ್ರದ ಅಭಿವೃದ್ದಿಗಾಗಿ ಮೂರು ನೂರು ಕೋಟಿ ರೂಗಳಷ್ಟು ಅನುಧಾನ ನೀಡಿದೆ ಎಂದು ಬಿ.ಜೆ.ಪಿ.ಅಭ್ಯಥರ್ಿ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು.
ಪಟ್ಟಣದ ಭಾಜಪ ಕಛೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿಯ ಆಚರಣೆ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದೆ ಬುಕ್ಕಾಪಟ್ಟಣ, ಸಿಂಗದಹಳ್ಳಿ ಕೆರೆಗಳಿಗೂ ನೀರು ತರುವುದಾಗಿ ಭರವಸೆ ನೀಡಿದ ಅವರು, ಈ ಯೋಜನೆಯ ಬಗ್ಗೆ ಮೊದಲು ಕ್ರಮ ಕೈಗೊಂಡವರು, 2005ರಲ್ಲಿ ಕೆ.ಎಸ್.ಈಶ್ವರಪ್ಪನವರು, ಅವರು ಹೇಮಾವತಿ ನಾಲೆಯಿಂದ ಗುರುತ್ವಾಕರ್ಷಣ ಬಲದಲ್ಲಿ ನೀರು ಬರುತ್ತದೆಯೋ ಹೇಗೆಂಬ ಸವರ್ೆ ಕಾರ್ಯಕ್ಕೆ ಮೂರು ಲಕ್ಷ ರೂಗಳನ್ನು ಮಂಜೂರು ಮಾಡಿದ್ದರಿಂದಾಗಿ ಈ ಕಾರ್ಯ ಅರಂಭಗೊಂಡಿತು ಎಂದ ಅವರು, ಇಲ್ಲಿಗೆ ನೀರು ತರಲು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರೂ ತಮ್ಮ ಅವಧಿಯಲ್ಲಿ ಅಗತ್ಯವಾದ ಸಹಕಾರವನ್ನು ನೀಡಿದ್ದಾರೆ ಎಂದರು.
ಬಿಜೆಪಿ ಸಕರ್ಾರ ಅಧಿಕಾರಕ್ಕೆ ಬಂದ ನಂತರ ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೆತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು,  ಮೊರಾಜರ್ಿ ಶಾಲೆ, ಅಗ್ನಿಶಾಮಕ ಠಾಣೆ, ಬುಕ್ಕಾಪಟ್ಟಣ ಹಾಗೂ ಚಿ.ನಾ.ಹಳ್ಳಿಯ ಸಕರ್ಾರಿ  ಡಿಗ್ರಿ ಕಾಲೇಜುಗಳ ಕಟ್ಟಡಗಳಿಗೆ ಹಣ ಮಂಜೂರು ಮಾಡಿದ್ದು, 10 ಪ್ರೌಢಶಾಲೆಗಳಿಗೆ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಈ ಎಲ್ಲಾ ಕಾರ್ಯಗಳು ಬಿ.ಜೆ.ಪಿ. ಸಕರ್ಾರ ಈ ಕ್ಷೇತ್ರದ ಅಭಿವೃದ್ದಿಗಾಗಿ ಮಾಡಿದ ಸಹಕಾರ ಎಂದರು. 
ಮಾಜಿ ಶಾಸಕರು ಅಪಪ್ರಚಾರದ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು: ಈ ಕ್ಷೇತ್ರದಲ್ಲಿನ ಮಾಜಿ ಶಾಸಕರೊಬ್ಬರು ಜೆ.ಎಚ್.ಪಟೇಲ್ ರವರು ಸಿ.ಎಂ.ಆಗಿದ್ದಾಗ ಅವರು, ತುಂಬಾ ಹತ್ತಿರದವರಾಗಿದ್ದರು ಆಗ ಅವರಿಗೆ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಎಳ್ಳಷ್ಟೂ ಕಾಳಜಿ ತೋರಲಿಲ್ಲ, ಅವರು ಬಹಳ ಹಿಂದೆಯೇ ಇಂತಹ ಕೆಲಸವನ್ನು ಮಾಡಬಹುದಾಗಿತ್ತು ಆದರೆ ಅವರಿಗೆ ಆಗ ಇಚ್ಚಾಶಕ್ತಿ ಇರಲಿಲ್ಲವೇನೊ,  ಅವರಿಗೇನದ್ದರೂ ಕಣ್ಣಿಗೆ ಕಾಣುವುದು, ನೈಸ್, ಏಟ್ರಿಯಾ ಹೋಟೆಲ್, ಇಸ್ಕಾನ್ ನಂತಹ ಥೈಲಿ ತಂದು ಕೊಡುವವರ ಬಗ್ಗೆ ಮಾತನಾಡುತ್ತಾರೋ ಹೊರತು, ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಿಂಚಿತ್ತೂ ಯೋಚಿಸಲೂ ಇಲ್ಲ,  ವಿಶೇಷ ಅನುಧಾನಗಳನ್ನು ತರಲಿಲ್ಲವೆಂದರು. 
ಬಹಳ ಹಿಂದೆಯೇ ಹೇಮಾವತಿ ನೀರು ತರುವ ಪ್ರಯತ್ನ ಮಾಡಿದ್ದೆ ಅದಕ್ಕಾಗಿ ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗಲೇ ವಾಟರ್ ಅಲೋಕೇಶನ್ ಮಾಡಿಸಿಕೊಂಡಿದ್ದೆ ಎಂದು ಹೇಳುವ ಮಾಜಿ ಶಾಸಕರು, ಅದರ ಆದೇಶದ ಪ್ರತಿಯನ್ನು ಸಾರ್ವಜನಿಕವಾಗಿ ಪ್ರದಶರ್ಿಸಲಿ ಎಂದು ಸವಾಲ್ ಹಾಕಿದರು.
ಓಟು ಬ್ಯಾಂಕಿಗಾಗಿ ಯಡಿಯೂರಪ್ಪನವರ ಹಿಂದೆ ಹೋಗಿದ್ದಾರೆ ಹೊರತು, ಯಡಿಯೂರಪ್ಪನವರ ಮೇಲಿನ ನಿಜವಾದ ಕಾಳಜಿ ಇದ್ದಿದ್ದರೆ, ಅಂದು ಜೆ.ಡಿ.ಎಸ್.ನವರು ಯಡಿಯೂರಪ್ಪನವರಿಗೆ ಮೋಸ ಮಾಡಿದಾಗ, ಮಾಜಿ ಶಾಸಕರು ಯಡಿಯೂರಪ್ಪನವರನ್ನು ಕುರಿತು ಇನ್ನೂ ಏನು ಮುಖ ನೋಡುತ್ತಿದ್ದೀರಿ, ರಾಜೀನಾಮೆ ಬಿಸಾಕಿ ಎಂದು ಹೇಳಿದರೇ ಹೊರತು, ಸಹಾನೂಭೂತಿಗಾದರೂ ಯಡಿಯೂರಪ್ಪನವರ ಬೆಂಬಲಕ್ಕೆ ಮಾಜಿ ಶಾಸಕರು ನಿಲ್ಲಲಿಲ್ಲ, ಅಂದು ಒಂದು ಪಕ್ಷದ ಲೀಡರ್ ಆಗಿ ಅವರ ಬೆಂಬಲಕ್ಕೆ ನಿಲ್ಲುವ ಅವಕಾಶವಿದ್ದರೂ ಮುಖ ತಿರುಗಿಸಿಕೊಂಡ ಮಾಜಿ ಶಾಸಕರು, ಇಂದು ಯಡಿಯೂರಪ್ಪನವರನ್ನು ಹಾಡಿ ಹೊಗಳುತ್ತಿದ್ದಾರೆ ಎಂದು ಛೇಡಿಸಿದರು. 
ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬರುವ ಶಾಸಕ: ಇನ್ನೂ ಈಗಿನ ಶಾಸಕರು ಎಚ್.ಡಿ.ಕುಮಾರಸ್ವಾಮಿ ಸಿ.ಎಂ. ಆಗಿದ್ದಾಗ ಅವರಿಗೆ ತುಂಬಾ ಆಪ್ತರಾಗಿದ್ದವರು ಎಂದು ಹೇಳಿಕೊಳ್ಳುವ ಅವರು, ಕ್ಷೇತ್ರದ ಅಭಿವೃದ್ದಿಯನ್ನು ಮಾಡುವ ಕಿಂಚಿತ್ತೂ ದೂರದೃಷ್ಠಿ ಅವರಿಗಿಲ್ಲ, ಮೋಜು ಮೋಸ್ತಿಯಲ್ಲೇ ತಮ್ಮ ಶಾಸಕನ ಅಧಿಕಾರವನ್ನು ಪೂರೈಸಿದರು, ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬರುತ್ತಿದ್ದ ಅವರು ಕ್ರಮವಾಗಿ ಕೆ.ಡಿ.ಪಿ ಸಭೆ ನಡೆಸುತ್ತಿರಲಿಲ್ಲ, ಆಶ್ರಯ ನಿವೇಶನ ಹಂಚಲಿಲ್ಲ, ಬಗರ್ಹುಕ್ಕುಂ ಸಾಗುವಣಿ ಚೀಟಿ ನಿಡಲಿಲ್ಲ, ಬರದ ಸಂದರ್ಭದಲ್ಲಿ ರೈತರಿಗೆ ಸರಿಯಾಗಿ ಸ್ಪಂದಿಸಲಿಲ್ಲ. ಅವರ ಅವಧಿಯಲ್ಲಿ ಇಡೀ ಆಡಳಿತ ಸಂಪೂರ್ಣವಾಗಿ ವಿಫಲವಾಗಿತ್ತು ಎಂದರು.
  ಈ ಕ್ಷೇತ್ರದ ಜನತೆ ನನಗೆ ಆಶೀರ್ವದಿಸಿದರೆ ಕ್ಷೇತ್ರದಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಡಿಪ್ಲಮೊ ಕಾಲೇಜ್ ಮಂಜೂರು ಮಾಡುವುದು, ಗ್ರಾಮೀಣ ಜನರ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ತಾಲೂಕಿನ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯರನ್ನು ನೇಮಿಸುವುದು, ಇಲ್ಲೊಂದು ಸಿದ್ದ ಉಡುಪುಗಳ ಫ್ಯಾಕ್ಟರಿ ಮತ್ತು ಸ್ಪಾಂಜಸ್ ಕಬ್ಬಿಣದ ಅದಿರಿನ ಕಾಖರ್ಾನೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಯೊಂದು ರೂಪಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗಧೀಶ್, ಮಂಡಲ ಬಿ.ಜೆ.ಪಿ. ಅಧ್ಯಕ್ಷ ಮಿಲಿಟರಿ ಶಿವಣ್ಣ, ಹಿಂದುಳಿದ ವರ್ಗಗಳ ಘಟಕದ ಮಂಡಲ ಅಧ್ಯಕ್ಷ ಶ್ರೀನಿವಾಸಮೂತರ್ಿ, ದಲಿತ ಮುಖಂಡ ಸತೀಶ್ ಸೇರಿದಂತೆ ಹಲವರಿದ್ದರು.
( ಈ ವರದಿಗೆ ಪೊಟೊ ಇದೆ)
ಸುದ್ದಿ:2
ಫೈನಾನ್ಸ್ನವರ ಕಿರುಕುಳದಿಂದ ನೇಣಿಗೆ ಶರಣಾದ ರೈತ
ಚಿಕ್ಕನಾಯಕನಹಳ್ಳಿ,ಏ.14: ಖಾಸಗಿ ಫೈನಾನ್ಸ್ನವರ ಕಿರುಕುಳ ತಾಳಲಾರದೆ ರೈತನೊಬ್ಬನು ನೇಣಿಗೆ ಶರಣು ಹೋಗಿರುವ ಘಟನೆ ತೀರ್ಥಪುರದಲ್ಲಿ ನಡೆದಿದೆ.
ತಾಲೂಕಿನ ತೀರ್ಥಪುರದ ಹರೀಶ್(35) ಬಿನ್ ಸಣ್ಣರಂಗಯ್ಯ  ಮ್ಯಾಗಮಾ ಫೈನಾನ್ಸ್ನಿಂದ ಸಾಲ ತೆಗೆದು ಟ್ಯ್ರಾಕ್ಟರ್ನ್ನ ಕೊಂಡಿದ್ದರು, ಈ ಸಾಲದ ಪೈಕಿ ಶೇ.60ರಷ್ಟು ಹಣವನ್ನು ಹರೀಶ್ ತೀರಿಸಿದ್ದನು, ಉಳಿದ ಹಣವನ್ನು ಕಟ್ಟವಂತೆ  ಫೈನಾನ್ಸ್ನವರು ಪದೇ ಪದೇ ಕಿರುಕುಳ ನೀಡುತ್ತಿದ್ದರು, ಇವರ ಒತ್ತಡ ಹೆಚ್ಚಾಗಿ, ಗ್ರಾಮದವರ ಮುಂದೆಲ್ಲಾ ಸಾಲ ಕಟ್ಟುವಂತೆ ಒತ್ತಡತಂದು ಅಪಮಾನಿಸಿದರು ಎಂಬ ಕಾರಣಕ್ಕಾಗಿ ಹರೀಶ್ ನೇಣಿಗೆ ಶರಣಾಗಿದ್ದಾನೆ.
ಸುದ್ದಿ:3
ಯುಗಾದಿ ಸಂಭ್ರಮದ ಪ್ರಯುಕ್ತ ಪುಸ್ತಕ ಬಿಡುಗಡೆ. ಕವಿಗೋಷ್ಠಿ
ಚಿಕ್ಕನಾಯಕನಹಳ್ಳಿ,ಏ.14 : ರೋಟರಿ ಜನಕ ಪಾಲ್ ಪಿ.ಹ್ಯಾರಿಸ್ರ 146ನೇ ಜನ್ಮ ವಷರ್ೋತ್ಸವ ಮತ್ತು ಯುಗಾದಿ ಸಂಭ್ರಮಮವನ್ನು ಇದೇ 17ರ ಬುಧವಾರ ಸಂಜೆ 6.15ಕ್ಕೆ ಏರ್ಪಡಿಸಲಾಗಿದೆ.
ರೋಟರಿ ಕ್ಲಬ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರೋಟರಿ ಬಾಲಭವನದಲ್ಲಿ ಸಮಾರಂಭವನ್ನು ಹಮ್ಮಿಕೊಂಡಿದ್ದು ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್ ತಾ.ಕಸಾಪ ಅಧ್ಯಕ್ಷ ರವಿಕುಮಾರ್ ಯುಗಾದಿ ಶುಭಾಷಯ ಕೋರಲಿದ್ದು ರಂಗಕಮರ್ಿ ನಟರಾಜ್ಹೊನ್ನವಳ್ಳಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜಿಲ್ಲಾ 3190ರ ಸಹಾಯಕ ಗವರ್ನರ್ ಬಿಳಿಗೆರೆ ಶಿವಕುಮಾರ್ ಪಾಲ್ ಪಿ.ಹ್ಯಾರಿಸ್ಗೆ ನಮನ ಕಾರ್ಯಕ್ರಮ ನೆರವೇರಿಸಲಿದ್ದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ರೊ.ಎಂ.ವಿ.ನಾಗರಾಜ್ರಾವ್ರವರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕೋಶ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ 2012ರ ಪೋಲಿಸ್ ಚಿನ್ನದ ಪದಕ ಪುರಸ್ಕೃತ ಪಿ.ಐ.ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಸಿ.ಆರ್.ರವೀಶ್ವರಿಗೆ ಹಾಗೂ ಕವಿ ಪ್ರೊ.ಸಿ.ಎಚ್.ಮರಿದೇವರುರವರಿಗೆ ಗೌರವಾಭಿನಂದನೆ ಸಲ್ಲಿಸಲಾಗುವುದು.
ಸುದ್ದಿ:3
ಚುನಾವಣಾ ನೀತಿ ಸಂಹಿತೆ ಕಟ್ಟು ನಿಟ್ಟಾದ ಜಾರಿಗೆ ಸಹಕರಿಸುವಂತೆ ಆರ್.ಓ. ಮನವಿ

ಚಿಕ್ಕನಾಯಕನಹಳ್ಳಿ,ಏ.14 : ತಾಲ್ಲೂಕು ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 258 ಮತಗಟ್ಟೆಯಿವೆ, ಅದರಲ್ಲಿ 38 ಅತಿ ಸೂಕ್ಷ್ಮ, 44 ಸೂಕ್ಷ್ಮ ಮತಗಟ್ಟೆ, 176 ಸಾಮಾನ್ಯ ಮತಗಟ್ಟೆಗಳಿವೆ ಎಂದು ಚುನಾವಣಾಧಿಕಾರಿ ಇ.ಪ್ರಕಾಶ್ ತಿಳಿಸಿದರು.
ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಜನವರಿ 16ಕ್ಕೆ 1,92,008 ಮತದಾರರಿದ್ದು ಅದರಲ್ಲಿ 97121 ಪುರುಷ ಮತದಾರರು, 94887 ಮಹಿಳಾ ಮತದಾರರಿರುವರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ತಾಲ್ಲೂಕಿನ 5 ಹೋಬಳಿಗಳು ಹಾಗೂ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿ ಸೇರಿದ್ದು ಕ್ಷೇತ್ರದಲ್ಲಿ 3 ಜನ ಪ್ಲೆಯಿಂಗ್ ಸ್ಕ್ವಾಡ್ಗಳನ್ನು ನೇಮಕ ಮಾಡಲಾಗಿದೆ ಹಾಗೂ 12 ರಿಂದ 13 ಮತಗಟ್ಟೆಗಳಿಗೆ ಒಬ್ಬರಂತೆ 22 ಜನ ಸೆಕ್ಟರಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿಯ ಶೆಟ್ಟಿಕೆರೆ ಗೇಟ್, ಹುಳಿಯಾರು ಪ್ರವಾಸಿ ಮಂದಿರದ ಎದುರು, ದೊಡ್ಡ ಎಣ್ಣೆಗೆರೆ ವೃತ್ತ, ಬುಕ್ಕಾಪಟ್ಟಣ ಹೋಬಳಿಯ ಬೆಂಚೆ ಗೇಟ್ ಬಳಿಯ ಒಟ್ಟು 4 ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದರಲ್ಲದೆ ಈ ಚೆಕ್ಪೋಸ್ಟ್ಗಳಲ್ಲಿ ರೆವಿನ್ಯೂ, ಪೋಲಿಸ್, ಅಬಕಾರಿ ಇಲಾಖೆಯ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಬೆಂಚೆ ಗೇಟ್ ಚೆಕ್ ಪೋಸ್ಟ್ ಹೊರತುಪಡಿಸಿ ಉಳಿದ ಮೂರು ಚೆಕ್ ಪೋಸ್ಟ್ಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದೆ. ತಾಲ್ಲೂಕು ಕಛೇರಿಯಲ್ಲಿ ಸಹಾಯವಾಣಿ ತೆರೆದಿದ್ದು ಸಹಾಯವಾಣಿ ನಂಬರ್ 08133-267242 ನಂ.ಗೆ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
( ಈ ವರದಿಗೆ ಪೊಟೊ ಇದೆ) 
ಸುದ್ದಿ:4
ಆರೋಗ್ಯ ಆಸ್ಪತ್ರೆಯಲಿಲ್ಲ ಆಹಾರದಲ್ಲಿದೆ: ಡಾ.ಖಾದರ್

ಚಿಕ್ಕನಾಯಕನಹಳ್ಳಿ,ಏ.14: ನಮ್ಮ ಆಹಾರ ಸರಳವಾದರೆ ಆರೋಗ್ಯ ತಂತಾನೆ ವೃದ್ಧಿಸುತ್ತದೆ,  ಆರೋಗ್ಯ ಆಸ್ಪತ್ರೆಯಲ್ಲಿದೆ ಎಂಬ ಭ್ರಮೆಯನ್ನು ಬಿಟ್ಟು ಸಿರಿಧಾನ್ಯಗಳನ್ನು ಊಟದಲ್ಲಿ ಯತೇಚ್ಚವಾಗಿ ಬಳಸಿ ರೋಗಮುಕ್ತರಾಗಿ ಎಂದು ಡಾ.ಖಾದರ್ ಅಭಿಪ್ರಾಯ ಪಟ್ಟರು. 
   ತಾಲ್ಲೂಕಿನ ಪ್ರಗತಿಪರ ರೈತ ಅಣೆಕಟ್ಟೆ ವಿಶ್ವನಾಥ್ ತೋಟದಲ್ಲಿ ಭಾನುವಾರ ಬಳಗ ಆಯೋಜಿಸಿದ್ದ `ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ' ಎಂಬ ವಿಷಯದಬಗ್ಗೆ ಏರ್ಪಡಿಸಿದ್ದ ಒಂದುದಿನದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.   ಮಕ್ಕಳೇ ಕ್ಷಮಿಸಿ ನಾವು ನಿಮಗೆ ಆರೋಗ್ಯಕರ ಆಹಾರ ನೀಡುತ್ತಿಲ್ಲ,ಆಹಾರ ಬೆಳೆಯುವ,ಸೇವಿಸುವ ಜ್ಞಾನವನ್ನ ನೀಡುತ್ತಿಲ್ಲ.ಕುಜಗ್ರಹದಲ್ಲಿ ಬದುಕುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುವ ನಮ್ಮ ವಿಜ್ಞಾನಿಗಳು ಭೂಮಿಯಮೇಲೆ ಆರೋಗ್ಯವಾಗಿ ಬದುಕುವುದು ಹೇಗೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಆದ್ದರಿಂದ ಜ್ಞಾನಿಗಳು,ವಿಜ್ಞಾನಿಗಳು ಮತ್ತು ದೊಡ್ಡವರೆನಿಸಿಕೊಂಡ ನಾವು  ಮಕ್ಕಳ ಕ್ಷಮೆ ಕೇಳಬೇಕು ಎಂದರು
  ಯತೇಚ್ಚವಾಗಿ ನಾರಿನ ಅಂಶವುಳ್ಳ  ಸಿರಿಧಾನ್ಯಗಳಲ್ಲಿ ಮದುಮೇಹ, ರಕ್ತಹೀನತೆಯಂತಹ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತವೆ.ಸಾವಯವ ಪದ್ದತಿಯಲ್ಲಿ ಹಾರ್ಕ, ಸಾಮೆ,ನವಣೆ,ರಾಗಿ ಸೊಪ್ಪು ತರಕಾರಿಗಳನ್ನು ಬೆಳೆಸಿ ಬಳಸುವ ಏಕೈಕ ಮಾರ್ಗವೇ ಆರೋಗ್ಯ ಭಾರತ ನಿಮರ್ಾಣಕ್ಕೆ ನಾಂದಿಯಾಗುತ್ತದೆ ಆಗ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.
   ಸಿರಿಧಾನ್ಯಗಳನ್ನು ತೃಣಧಾನ್ಯ ಕಿರುಧಾನ್ಯ ಎಂದು ಹೆಸರಿಸುವಲ್ಲೇ ಕೃಷಿಯ ವೈವಿದ್ಯತೆಯನ್ನು ಕೊಂದು ಕೇವಲ 40ವರ್ಷಗಳಲ್ಲಿ ಬಂದಂತಹ ಅಕ್ಕಿ ಸೋಯಾಬೀನ್ಸ್ ಮತ್ತು ಗೋಧಿ ರೀತಿಯ ಏಕರೂಪದ ಬೆಳೆಗಳನ್ನ ಸ್ಥಾಪಿಸುತ್ತ ಫಿಜಾ,್ಜ ಬರ್ಗರ್,ಬಿಸ್ಕೆಟ್,ಕೇಕ್,ನೂಡಲ್ಸ್ಗಳನ್ನು ಜಾಹಿರಾತುಗಳ ಮೂಲಕ ನಮ್ಮ ಅಡಿಗೆಕೋಣೆಗೆ ನುಗ್ಗಿಸಿ ಕೃಷಿ,ಆಹಾರ ಪದ್ಧತಿ ಇದರೂಟ್ಟಿಗಿನ ಜೀವನಕ್ರಮ ಎಲ್ಲವನ್ನೂ ಇಲ್ಲವಾಗಿಸುವ ಹುನ್ನಾರ ಎಂದರಲ್ಲದೆ ಈರೀತಯ ಆಹಾರ ಕ್ರಮದಿಂದ ಐದುವರ್ಷದ ಕಂದಮ್ಮಗಳನ್ನು ಡಯಾಬಿಟಿಸ್ ಮತ್ತು ಬೀಪಿಯಂತಹ ಮಾರಣಾಂತಿಕ ಕಾಯಿಲೆಗಳಿಗೆ ಬಲಿಕೊಡಲಾಗುತ್ತಿದೆ ಎಂದರು.
   ಪಾಲೀಷ್ ಅಕ್ಕಿ ಗೋಧಿ ಓಟ್ಸ್ಗಳ ಮೈದಾ,ಡಾಲ್ಡಾದಿಂದ ತಯಾರಿಸುವ ಬೇಕರಿ ತಿನಿಸುಗಳು ಸಕ್ಕರೆ ಅಂಶವನ್ನು ಕೇವಲ 40ನಿಮಿಷಗಳಲ್ಲಿ ರಕ್ತಕ್ಕೆ ಸೇರಿಸಿ ಬೀಟಾ ಸೆಲ್ಗಳನ್ನು ಕೊಲ್ಲುತ್ತದೆ.ಇದರಿಂದಾಗಿ ಶೇ.60 ಮಕ್ಕಳಲ್ಲಿ ಅಟೆಂಕ್ಷನ್ ಡಿಫಿಷಿಯನ್ಸಿ ಸಿಂಡ್ರೋಮ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಹಾಗು ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಮುಂದಿನ 20ವರ್ಷಗಳಲ್ಲಿ 700ಮಿಲಿಯನ್ ಮದುಮೇಹ ರೋಗಿಗಳು ಕಂಡುಬರುತ್ತಾರೆ ಆಹಾರವನ್ನು ಹೇಗೆ ಬೆಳೆಯಬೇಕು ಮತ್ತು ಹೇಗೆ ತಿನ್ನಬೇಕು ಎನ್ನುವ ಪಾರಂಪರಿಕ ಜ್ಞಾನವನ್ನು ಮರೆಸಿದ್ದರಿಂದ ಇಂತಹ ದುಸ್ತಿತಿಗೆ ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
  ಮೊಸರಿಲ್ಲದ ಊಟ ಊಟವೇ ಅಲ್ಲ ಎನ್ನುವ ಅಜ್ಜಿಯ ಮಾತು ದೊಡ್ಡ ಆಹಾರಜ್ಞಾನವನ್ನ ಅನಾವರಣ ಗೊಳಿಸುತ್ತದೆ ಬಾಳೆ ದಿಂಡಿನರಸ ಅಲಸಿನ ಎಲೆ ರಸ ಹುಣುಸೆ ಚಿಗುರು ಹೀಗೆ ಸುತ್ತಮುತ್ತಲಿನ ಎಲ್ಲಾ ಸೊಪ್ಪು ಸೆದೆಗಳು ಯಾವ ಐಟೆಕ್ ಆಸ್ಪತ್ರೆ ಮೆಡಿಸಿನ್ಗಳು ಕೊಡಲಗದ ಆರೋಗ್ಯವನ್ನು ಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.
   ಕಾರ್ಯಕ್ರಮದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ಸಿ.ಯತಿರಾಜ್, ರಾಮಕೃಷ್ಣಪ್ಪ, ಗ್ರೀನ್ ಫಾಮರ್್ ಇನೋವೆಟರ್ಸ್ ಫೌಂಡೇಷನ್ನ ಚಂದ್ರಶೇಖರ್ ಬಾಳೆ, ರವೀಂದ್ರ ದೇಸಾಯಿ, ಕೃಷ್ಣಮೂತರ್ಿ ಬಿಳಿಗೆರೆ,ಗೋಪಾಲನಹಳ್ಳಿ ರಘು.ಭೈರಪ್ಪ ಮುಂತದವರಿದ್ದರು. ಕುಮಾರಿ ಸುಕೃತಿ,ರಾಜೇಶ್ವರಿ ಮತ್ತು ದಶರ್ಿನಿ ಹಾಡಿದ ಪರಂಪರೆಯ ಹಾಡುಗಳು ಆಕರ್ಷಣೀಯವಾಗಿದ್ದವು.
(ಈ ವರದಿಗೆ ಪೊಟೊ ಇದೆ)
ಸುದ್ದಿ:5