Friday, November 11, 2011ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ಗೀತಗಾಯನ ಹಾಗೂ ಚಿತ್ರಕಲಾ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ನ.11 : ಭಕ್ತ ಕನಕ ಜಯಂತ್ಯೋತ್ಸವದ ಅಂಗವಾಗಿ ಶ್ರೀ ಕನಕದಾಸರ ಗೀತಗಾಯನ ಸ್ಪಧರ್ೆ ಹಾಗೂ ಕನಕದಾಸರ ಚಿತ್ರಕಲಾ ಸ್ಪದರ್ೆಯನ್ನು ಇದೇ 13ರ ಭಾನುವಾರ ಬೆಳಗ್ಗೆ 9ಗಂಟೆಗೆ ಏರ್ಪಡಿಸಲಾಗಿದೆ.
ಸ್ಫದರ್ೆಯನ್ನು ಕನಕ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಹೊಯ್ಸಳ ಶಿಲ್ಪ ಕೇಂದ್ರ ಮತ್ತು ಜಕಣ ಶಿಲ್ಪ ಗುರುಕುಲ ಇವರ ಸಹಯೋಗದೊಂದಿಗೆ ಪಟ್ಟಣದ ಹೊಸಬಾಗಿಲು ಮೂಲೆಯ ಶ್ರೀ ಗುರುಸಿದ್ದರಾಮೇಶ್ವರ ಮಠದಲ್ಲಿ ಹಮ್ಮಿಕೊಂಡಿದ್ದು ಸ್ಫದರ್ೆಯಲ್ಲಿ ಪ್ರಾಥಮಿಕ, ಪ್ರೌಡಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಲಾಗಿದೆ. 
 ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಎನ್.ಆರ್.ಉಮೇಶ್ಚಂದ್ರ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಬಿಜೆಪಿ ಮಹಿಳಾ ಮುಖಂಡರಾದ ಮಂಜುಳನಾಗರಾಜು, ಲೇಖಕ ಎಂ.ದೇವಾಜರ್ುನ, ಪ್ರಾಂಶುಪಾಲರಾದ ಎ.ಎನ್.ವಿಶ್ವೇಶ್ವರಯ್ಯ, ಜಿ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.