Thursday, July 31, 2014


ಗಣಿಭಾದಿತ ಪ್ರದೇಶಗಳ ಪುನರ್ವಸತಿ ಹಾಗೂ ಪುನಶ್ಚೇತನಕ್ಕಾಗಿ ಒತ್ತಾಯಿಸಿ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ 

ಚಿಕ್ಕನಾಯಕನಹಳ್ಳಿ : ಜಿಲ್ಲೆಯ ಗಣಿಭಾದಿತ ಪ್ರದೇಶಗಳ ಪುನರ್ವಸತಿ ಹಾಗೂ ಪುನಶ್ಚೇತನಕ್ಕಾಗಿ ಒತ್ತಾಯಿಸಿ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ. ಯತಿರಾಜು ತಿಳಿಸಿದರು.
ಪಟ್ಟಣದಲ್ಲಿನ ನಿವೃತ್ತ ನೌಕರರ ನೌಕರರ ಸಂಘದಲ್ಲಿ,  ಜಿಲ್ಲಾ ವಿಜ್ಞಾನ ಕೇಂದ್ರ, ತಾಲ್ಲೂಕು ವಿಜ್ಞಾನ ಕೇಂದ್ರ, ರಾಷ್ಟ್ರೀಯ ನೈಸಗರ್ಿಕ ಸಂಪನ್ಮೂಲ ಸಂರಕ್ಷಣಾ ಸಮಿತಿ ತುಮಕೂರು, ಗುಬ್ಬಿ ರಾಷ್ಟ್ರೀಯ ನೈಸಗರ್ಿಕ ಸಂಪನ್ಮೂಲ ಕ್ರಿಯಾ ಸಮಿತಿ, ಆಮ್ ಆದ್ಮಿ ಪಕ್ಷದವರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಗಣಿಭಾದಿತ ಪ್ರದೇಶಗಳಾದ ಗುಬ್ಬಿ, ತಿಪಟೂರು, ಚಿ.ನಾ.ಹಳ್ಳಿ ಗಣಿ ಭಾಗದ ಜನತೆ ಈ ಧರಣಿ ಸತ್ಯಾಗ್ರಹ ಕಾರ್ಯಕ್ರಮಕ್ಕೆ ಹೆಚ್ಚಿನದಾಗಿ ಆಗಮಿಸಲು ಕೋರಿದ ಅವರು, ಗಣಿ ಪ್ರದೇಶಗಳ ಸಮಸ್ಯೆಗಳ ಕುರಿತ ಅಧಿಕಾರಿಗಳು ನಡೆಸಿದ ವರದಿಯು ಗಣಿ ಮಾಲೀಕರು, ಬೇರೆ ಬೇರೆ ಮಂಡಳಿಗಳವರ ಅಭಿಪ್ರಾಯ ಪಡೆದು ವರದಿ ನೀಡಲಾಗಿದೆ, ಬಾಧಿತರ ಅಭಿಪ್ರಾಯ ಕೇಳಿಲ್ಲ ಎಂದ ಅವರು,  ಈ ಬಗ್ಗೆ ಗಣಿಭಾಗದ ಜನರ ಅಭಿಪ್ರಾಯ ಪಡಯುವಂತೆ ಒತ್ತಾಯಿಸಿದರು, ಹಳ್ಳಿಗಳಲ್ಲಿನ ಪುನರ್ವಸತಿ, ಪುನರ್ಶ್ಚೇತನಕ್ಕಾಗಿ  ಈ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ ಎಂದರಲ್ಲದೆ, ಗಣಿ ಭಾಗದಲ್ಲಿ ಬಗರ್ಹುಕುಂ ಸಾಗುವಳಿ ಮಾಡಿರುವ ರೈತರಿಗೆ ಜಮೀನು ಮಂಜೂರು ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಅಧ್ಯಕ್ಷ ರಾಮಕೃಷ್ಣಪ್ಪ, ತಾ.ವಿಜ್ಞಾನ ಕೇಂದ್ರದ ಅಧ್ಯಕ್ಷೆ ಎನ್.ಇಂದಿರಮ್ಮ, ಸಮಾಜ ಪರಿವರ್ತನ ಮುಖಂಡ ನಂಜುಂಡಪ್ಪ, ಗುಬ್ಬಿ ನಾಗರತ್ನಮ್ಮ, ಮರಿಸ್ವಾಮಿ, ಗೋ.ನಿ.ವಸಂತ್ಕುಮಾರ್, ತಿಮ್ಮೇಗೌಡ, ಬಸವರಾಜು, ಪುಟ್ಟರಾಜು, ಚಂದನ್ ಆಮ್ ಆದ್ಮಿ ಪಕ್ಷದ ಪ್ರತಿಮಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈಜ್ಞಾಕ ಯುಗದಲ್ಲಿ ಧರ್ಮವು ದೂರ ಹೋದಂತಾಗಿದೆ  : ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ 

                                              
ಚಿಕ್ಕನಾಯಕನಹಳ್ಳಿ,ಜು.31:  ವೈಜ್ಞಾಕ ಯುಗದಲ್ಲಿ ಧರ್ಮವು ದೂರ ಹೋದಂತಾಗಿದೆ. ಅರಿವಿಲ್ಲದ ವ್ಯಕ್ತಿಗಳಿಗೆ ಜ್ಞಾನದ ಮಾರ್ಗವನ್ನು ಸೂಚಿಸುವ ಗುರು ದೇವರಿಗೆ ಸಮಾನ ಎಂದು ಮಾಜಿಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಕುಪ್ಪೂರು ಗದ್ದಿಗೆ ಶ್ರೀ ಮರಳಸಿದ್ದೇಶ್ವರ ಪೀಠಾಧ್ಯಕ್ಷ  ಡಾ.ಯತೀಶ್ವ ಶಿವಾಚಾರ್ಯಸ್ವಾಮೀಜಿ ಯವರ 41ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಸಮಾಜ ಪೂರ್ವದ ಕಾಲದಿಂದಲೂ ಜ್ಞಾನದಲ್ಲಿ ಬುದ್ದಿ ಎಂದು ಕರೆಸಿಕೊಳ್ಳುವ ಗುರುವಿನ ಶಕ್ತಿ ಅಪಾರ.ಅಧಿಕಾರ, ನಡವಳಿಕೆ, ಮತ್ತು ಸಮಾನತೆಯಲ್ಲಿ ಏರುಪೇರು ಉಂಟಾದಾಗ ಗುರು ಸಾಂದಭರ್ಿಕ ವ್ಯಕ್ತಿಗಳನ್ನು ತಿದ್ದಿ ಉತ್ತಮ ದಾರಿ ಕಡೆಗೆ ನೆಡೆಸುತ್ತಾನೆ. ರಾಜರ ಕಾಲದಿಂದಲೂ ವೀರಶೈವ ಪರಂಪರೆಯಲ್ಲಿ ದಾಸೋಹ, ವಿಧ್ಯೆ, ಧರ್ಮಗಳನ್ನು, ಮಠಗಳು ಒಳಗೊಂಡಿವೆ. ನಾನು ನನ್ನದೆಂಬ ಅಹಂಕಾರವನ್ನು ಬಿಟ್ಟು ಧರ್ಮದ ಕಾರ್ಯದಲ್ಲಿ ತೋಡಗಿದರೆ ಸಮಾಜದಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದರು.
ಡಾ.ಯತೀಶ್ವ ಶಿವಾಚಾರ್ಯಸ್ವಾಮೀಜಿ ಮಾತನಾಡಿ ಬಾಳಿನಲ್ಲಿ ಪರೋಪಕಾರವನ್ನು ಅಳವಡಿಸಿ ಕೋಳ್ಳಬೇಕು.  ದೀನ ದಲಿತರ ಸೇವೆ ಮಾಡುವುದು ನಿಜವಾದ ಧರ್ಮವಾಗುತ್ತದೆ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಯವರ ಸಾಧನೆಪ್ರತಿ ನಿತ್ಯ  ಅಲ್ಲಿನ ಸಾವಿರಾರು ಮಕ್ಕಳಿಗೆ ದಾಸೋಹ, ವಿದ್ಯೆ ನೀಡುತ್ತಿದೆ. ಈ ನಿಟ್ಟಿನಲ್ಲಿ ದೇಶಕ್ಕೆ ಉತ್ತಮ ಕೊಡುಗೆಯಾಗಿದೆ. ನಮ್ಮ ಪಟ್ಟಧಿಕಾರದಿಂದಲೂ ಮುಡುಕುತೋರೆಯ ಮಹಾಲಿಂಗ ಸ್ವಾಮೀಜಿ ಯವರ ಮಾರ್ಗದರ್ಶನದ ಅನುಗುಣವಾಗಿ ಮಠಾಧಿ ಪತಿಯಾಗಿ ಸೇವೆ ಮಾಡಿದ್ದೇನೆ ಎಂದರು.
 ಕುಪ್ಪುರೂ ಗದ್ದಿಗೆ ಮಠದ ಪೀಠಾಧ್ಯಕ್ಷರಾಗಿ 25ನೇ ವರ್ಷ ತುಂಬಿದ್ದು,  ಪಟ್ಟಾಧಿಕಾರದ ರಜತ ಮಹೋತ್ಸವವು ರಾಜ್ಯ ಮಟ್ಟದಲ್ಲಿ ನೆಡೆಸ ಬೇಕೆಂಬ ಭಕ್ತಾದಿಗಳ ಕನಸಾಗಿದೆ, ಈ ಸಂದರ್ಭದಲ್ಲಿ 800ಪುಟವುಳ್ಳ ಗ್ರಂಥವನ್ನು ಲೋಕಾರ್ಪಣೆ ಮಾಡುವ ಸಿದ್ದತೆ ಮಾಡಲಾಗುತ್ತಿದೆ. ಆ.10ರಂದು ಪೂರ್ವ ಭಾವಿ ಸಭೆಯನ್ನು ಕರೆಯಾಲಾಗಿದೆ ಎಂದರು.
ಕೇಕ್ ಕತ್ತರಿಸಿ ಪೂವರ್ಾಶ್ರಮದ ತಾಯಿ ದೇವಿರಮ್ಮರವರಿಗೆ ಮೊದಲು ಕೇಕ್ ನೀಡಿದರು.ಹಿರೇಮಠದ ಉಮಾಶಂಕರ, ಅಂಬಲದೇವರಳ್ಳಿ ಉಜ್ಜನೀಶ್ವರ ಸ್ವಾಮೀಜಿ,ಶಿವಲಿಂಗಪ್ಪ, ವಾಣಿಚಂದ್ರಯ್ಯ, ಸತೀಶ್, ಪುಟ್ಟಸ್ವಾಮಿ, ಹಾಗು ಮಠದ ಭಕ್ತರು ಪಾಲ್ಗೋಂಡಿದ್ದರು.            


ಸೇವೆ ಮಾಡುವ ಸೇವಾ ಮನೋಭಾವ : ಮಾಳವೀಕಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಜು.30 : ಒಂದು ಹಣತೆಯಿಂದ ನೂರಾರು ದೀಪಗಳನ್ನು ಬೆಳಗಿಸುವಂತೆ ಅಭಿವೃದ್ದಿ ಹೊಂದಿರುವ ವ್ಯಕ್ತಿಯು ಇತರರ ಬಾಳಿನ ಬೆಳಕಾಗಿ ಸೇವೆ ಮಾಡುವ ಸೇವಾ ಮನೋಭಾವ ಬೆಳಸಿಕೊಳ್ಳಬೇಕು ಎಂದು ಇನ್ನರ್ವೀಲ್ ಕ್ಲಬ್ನ ಡಿಸ್ಟ್ರಿಕ್ಟ್ ಇಡಬ್ಯೂ 319ರ ಛೇರಮನ್ ಮಾಳವೀಕಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ರೋಟರಿ ಭಾಲಭವನದಲ್ಲಿ ಇನ್ನರ್ವೀಲ್ ಕ್ಲಬ್ನ 2014-15ನೇ ಸಾಲಿನ ನೂತನ ಅಧ್ಯಕ್ಷರಾದ ಡಿ.ಸಿ.ಶಶಿಕಲಾ ಜಯದೇವ್ ಹಾಗೂ ಕಾರ್ಯದಶರ್ಿ ಹೆಚ್.ಎಸ್.ಚಂದ್ರಿಕಾಮೂತರ್ಿರವರಿಗೆ ಅಭಿನಂದಿಸಿ ಮಾತನಾಡಿದ ಅವರು ಆಥರ್ಿಕವಾಗಿ, ಸಾಮಾಜಿಕವಾಗಿ ಸದೃಢರಾಗಿರುವ ವ್ಯಕ್ತಿಗಳು ಬಡವರಿಗೆ, ಅಶಕ್ತರಿಗೆ ನೆರವಾಗಿ ಅವರ ಜೀವನವನ್ನೂ ಉತ್ತಮಗೊಳಿಸಿ, ಮಹಿಳೆಯರಿಗೆ ತಮ್ಮ ಕಾಲ ಮೇಲೆ ನಿಂತುಕೊಳ್ಳುವಂತೆ ಧೈರ್ಯ ತುಂಬಿ, ಮನೆಯಲ್ಲಿಯೇ ಉದ್ಯೋಗ ಸಿಗುವಂತಹ ಕೆಲಸಗಳಿಗೆ ಸಹಾಯ ಮಾಡಿ ಅವರ ಆಥರ್ಿಕತೆಯನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ ಅವರು ಸಮಾಜದಲ್ಲಿ ಪರಿಸರ ಹೆಚ್ಚು ಹದಗೆಡುತ್ತಿದೆ, ನಮ್ಮ ಮುಂದಿನ ಜನಾಂಗಕ್ಕೆ ಅನುಕೂಲವಾಗುಂತೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಅದಕ್ಕಾಗಿ ಪರಿಸರ ಸಂರಕ್ಷಿಸುವ, ಗಿಡ-ಮರಗಳನ್ನು ಬೆಳೆಸುವ ಹವ್ಯಾಸವನ್ನು ತಾವೂ ಬೆಳೆಸಿಕೊಂಡು ಇತರರಿಗೆ ಮಾರ್ಗದರ್ಶನ ನೀಡಬೇಕು, ಭಾರತದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿದ್ಯಾವಂತನಾಗಬೇಕು ಸಂಘ-ಸಂಸ್ಥೆಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಅಗತ್ಯ ಅಂತಹ ನಿಟ್ಟಿನಲ್ಲಿ ತಾಲ್ಲೂಕಿನ ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಕ್ಲಬ್ನ ಕಾರ್ಯ ಶ್ಲಾಘನೀಯವಾದುದು ಎಂದರು.
ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ತಾಲ್ಲೂಕಿನಲ್ಲಿ ಇನ್ನರ್ವೀಲ್ ಕ್ಲಬ್ ಆರಂಭವಾಗಿ ಮೂರು ದಶಕಗಳೇ ಉರುಳಿವೆ, ಅಂದು ಕ್ಲಬ್ ಆರಂಭವಾದ ಸದಸ್ಯರುಗಳು ಇಂದೂ ಸಹ ತಮ್ಮ ಕಾರ್ಯಗಳನ್ನು ಮುಂದುವರೆಸಿಕೊಂಡು ಬರುವುದರ ಜೊತೆಗೆ ನೂತನ ಅಧ್ಯಕ್ಷರು, ಸದಸ್ಯರುಗಳು ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ತಾಲ್ಲೂಕಿನ ಜನತೆಗೆ ಅನುಕೂಲ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ನೂತನ ಅಧ್ಯಕ್ಷೆ ಡಿ.ಸಿ.ಶಶಿಕಲಾ ಜಯದೇವ್ ಮಾತನಾಡಿ ಇನ್ನರ್ವೀಲ್ ಸದಸ್ಯರುಗಳು ತಮ್ಮ ಮೇಲೆ ವಿಶ್ವಾಸವಿಟ್ಟು ಇಟ್ಟು ಅಧ್ಯಕ್ಷ ಸ್ಥಾನ ನೀಡಿದ್ದಾರೆ, ಅವರ ನಿರೀಕ್ಷೆಯಂತೆ ತಾಲ್ಲೂಕಿನ ಜನತೆಗೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ನೂತನ ಕಾರ್ಯದಶರ್ಿ ಹೆಚ್.ಎಸ್.ಚಂದ್ರಿಕಾಮೂತರ್ಿ ಮಾತನಾಡಿ ಇನ್ನರ್ವೀಲ್ ಕ್ಲಬ್ನಿಂದ ಅಂಗವಿಕಲ ಮಕ್ಕಳಿಗೆ ತಟ್ಟೆ-ಲೋಟ ವಿತರಣೆ, ಶಾಲಾ ಮಕ್ಕಳಿಗೆ ಪುಸ್ತಕ, ಬಡವಿದ್ಯಾಥರ್ಿಗಳಿಗೆ ಶಿಕ್ಷಣಕ್ಕೆ ನೆರವು, ಪರಿಸರ ಉಳಿಸಲು ಸಸಿ ನೆಡವುದು ಸೇರಿದಂತೆ ಉತ್ತಮ ಚಿತಾಗಾರ ವ್ಯವಸ್ಥೆಯನ್ನು ನಿಮರ್ಿಸುವುದು ಕ್ಲಬ್ನ ಯೋಜನೆಯಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೋಹಿತಾಕ್ಷ, ರೋಟರಿ ಕ್ಲಬ್ನ ಚಾಂದ್ಪಾಷ, ಇನ್ನರ್ವೀಲ್ ಕ್ಲಬ್ನ ತೇಜಾವತಿ ನರೇಂದ್ರಬಾಬು, ಶಾರದಶಾಸ್ತ್ರಿ, ಪುಷ್ಪವಾಸುದೇವ್ ಉಪಸ್ಥಿತರಿದ್ದರು.