Thursday, September 30, 2010

ಸವಿತ.ಟಿ
ವಿಜ್ಞಾನ ಶಿಕ್ಷಕರು
ರೋಟರಿ ಆಂಗ್ಲ ಪ್ರೌಡಶಾಲೆ
ಚಿಕ್ಕನಾಯಕನಹಳ್ಳಿ, ಸೆ.30:
ಓಜೋನ್ ಕ್ಷೀಣಿಸುವಿಕೆ:
ಭೂಮಿಯ ಸುತ್ತ ಆವರಿಸುತ್ತಿರುವ ವಾಯು ಮಂಡಲದಲ್ಲಿ ಸುಮಾರು 10ರಿಂದ 50 ಕಿ.ಮೀ.ವರೆವಿಗೂ ಸ್ಥಿರಗೋಲ ಎನ್ನುತ್ತಾರೆ. ಮೂರು ಆಮ್ಲಜನಕ ಅಣುಗಳ ಘನೀಕರಣದಿಂದ ಓಜೋನ್ ಅನಿಲ ಉಂಟಾಗಿದೆ ಇದು ಸೂರ್ಯನ ಕಿರಣಗಳ ಮತ್ತು ಆಮ್ಲಜನಕದ ನಿರಂತರ ಚಟುವಟಿಕೆಗಳಿಂದ ಉಂಟಾಗುತ್ತದೆ, ಓಜೋನ್ ಒಂದು ನೈಸಗರ್ಿಕ ಶೋಧಕವಾಗಿ ಕೆಲಸ ನಿರ್ವಹಿಸುತ್ತದೆ ಇದು ಸೂರ್ಯಗಳಿಂದ ಹೊಮ್ಮುವ ಜೀವಿಗಳಿಗೆ ಅಪಾಯಕಾರಿಯಾದ ನೇರಳಾತೀತ ಕಿರಣಗಳನ್ನು ತಡೆಯುತ್ತದೆ.
ನೈಸಗರ್ಿಕ ಕಾರಣಗಳಿಂದ ಮತ್ತು ಮಾನವರ ಚಟುವಟಿಕೆಗಳಿಂದ ಓಜೋನ್ ಅಣುಗಳು ಕಡಿಮೆಯಾಗಿ ಕ್ರಮೇಣ ಓಜೋನ್ ಪದರ ನಾಶವಾಗುತ್ತಿದೆ. ಇಂತಹ ರಾಸಾಯನಿಕಗಳನ್ನು ಓಜೋನ್ ನಾಶಕಗಳು ಎಂದು ಕರೆಯಲಾಗಿದೆ.
ಕಾರಣಗಳು
ಏರ್ಸಾಲ್, ಸಲ್ಫೇಟ್ಗಳು,ನೀರಾವಿ ತೇಲುಧೂಳಿನ ಕಣಗಳು ಜ್ವಾಲಮುಖಿಯಿಂದ ಉಂಟಾಗುವ ಇತರೆಅನಿಲಗಳು
ಪಳಯುಳಿಕೆ ಇಂಧನಗಳ ದಹನ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲಗಳು
ಕೈಗಾರಿಕೆಗಳ ರಾಸಾಯಿನಿಕಗಳು ಮತ್ತು ವಾಹನಗಳು ಉಗುಳುವ ಧೂಳು ಮತ್ತು ವಿಷಕಾರಕ ಅನಿಲಗಳು ನೈಟ್ರೋಜನ್ ಆಕ್ಸೈಡ್ಗಳು, ದ್ಯುತಿರಾಸಾಯಿನಿಕ ಕ್ರಿಯೆಗಳಿಂದ ಉಂಟಾಗುವ ರಾಸಾಯನಿಕ ಸ್ಮಾಗ್ಗಳು, ಸ್ಮಾಗ್ಗಳಿಂದ ಉಂಟಾಗುವ ಆಮ್ಲಮಳೆ, ಸಲ್ಫರ್ ಡೈ ಆಕ್ಸೈಡ್ಗಳು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ಹೊರಸೂಸುವ ವಿಷ ಅನಿಲಗಳು.
ಕ್ಲೋರೋ ಪ್ಲೋರೋ ಕಾರ್ಬನ್(ಸಿ.ಎಫ್.ಸಿ): ಅಂದರೆ ಸಂಶ್ಲೇಷಿತ ರಾಸಾಯನಿಕ ಅನಿಲ ರೂಪದಲ್ಲಿರುವ ಈ ರಾಸಾಯನಿಕಗಳಿಗೆ ವಾಸನೆ ಇಲ್ಲ ಕ್ಲೋರಿನ್ ಫ್ಲೋರಿನ್ ಮತ್ತು ಇಂಗಾಲಗಳ ಪರಮಾಣುಗಳಿಂದ ರಚಿತವಾದ ಸಂಯುಕ್ತಗಳಿವು. ಸಿ.ಎಪ್.ಸಿ ಯನ್ನು ಮೊಟ್ಟಮೊದಲು 1892ರಲ್ಲಿ ಸಂಶ್ಲೇಷಿಸಲಾಯಿತು ಆದರೆ 1920ವರೆಗೂ ಅದರಿಂದ ಯಾವ ಪ್ರಯೋಜನವನ್ನು ಪಡೆಯಲಾಗಲಿಲ್ಲ. ನಂತರ ಶೈತ್ಯಾಪೆಟಿಗೆಯಲ್ಲಿ (ರೆಫ್ರಿಜಿರೇಟರ್) ತಂಪುಕಾರಕ ರಾಸಾಯನಿಕವಾಗಿ ಬಳಕೆಯಾಗುತ್ತಿದೆ.
ಈ ಸಿ.ಎಪ್.ಸಿ ಮತ್ತು ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು-ಎರಡರ ಮಧ್ಯೆ ರಾಸಾಯನಿಕ ಕ್ರಿಯೆ ಉಂಟಾಗಿ ಕ್ಲೋರಿನ್ ಪ್ರತ್ಯೇಕಗೊಂಡು ಓಜೋನ್ ನಾಶವಾಗುತ್ತಾ ಬರುತ್ತದೆ. ಅಲ್ಲದೆ ಅಣುಸ್ಥಾವರ ಮತ್ತು ವಿದ್ಯುತ್ಸ್ಥಾವರಗಳು ಹೊರ ಸೂಸುವ ಅನಿಲಗಳು ಸಿ.ಎಪ್.ಸಿಯನ್ನು ಒಳಗೊಂಡಿರುತ್ತದೆ.
ಪರಿಣಾಮಗಳು
ಓಜೋನ್ ಕ್ಷೀಣಿಸುವುದರ ಪರಿಣಾಮವಾಗಿ ಸೌರಕಿರಣಗಳಿಂದ ಹೊರಬರುವ ನೇರಳಾತೀತ ಕಿರಣಗಳು ನೇರವಾಗಿ ಭೂಮಿಯನ್ನು ತಲುಪುತ್ತವೆ.
ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಕುಂಠಿತಗೊಳ್ಳುತ್ತದೆ.
ಕಲ್ಲು ಹೂ ಜಲಸಸ್ಯಗಳ ಬೆಳವಣಿಗೆಯನ್ನು ತಡೆಯುತ್ತದೆ.
ಮಾನವನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬ್ರಾಂಕೈಟಿಸ್, ಶ್ವಾಸಕೋಶದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್, ಕ್ಯಾಟರಾಕ್ಟ್ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ.
ಜಲಚರಗಳು ಉಭಯವಾಸಿ ಜೀವಿಗಳು ಇದರಿಂದ ಬಹಳ ತೊಂದರೆಯನ್ನು ಅನುಭವಿಸುತ್ತವೆ.
ಪರಿಸರ ತನ್ನ ಸಮತೋಲನವನ್ನು ಕಳೆದುಕೊಂಡು ಪರಿಸರ ನಾಶಕ್ಕೆ ಅನುವು ಮಾಡಿಕೊಡುತ್ತದೆ.
ತಡೆಗಟ್ಟುವ ಕ್ರಮಗಳು
ರೆಫ್ರಿಜರೇಟರ್ ಮತ್ತು ವಾಹನಗಳ ಮಿತಬಳಕೆ.
ಕೈಗಾರಿಕೆಗಳಲ್ಲಿ ಶೋಧಕ ಚಿಮಣಿಗಳ ಅಳವಡಿಕೆ.
ಪರಿಸರ ಸಂರಕ್ಷಣೆ.
ಓಜೋನ್ ನಾಶದ ವಿಷಯವನ್ನು ಪ್ರಪಂಚವು ಗಂಭೀರವಾಗಿ ಪರಿಗಣಿಸಿದ್ದು 1980ರ ಮಧ್ಯಭಾಗದಲ್ಲಿ 1985ರಲ್ಲಿ ಅಂಟಾಟರ್ಿಕಾ ಪ್ರದೇಶದಲ್ಲಿ ಮೊಟ್ಟಮೊದಲು ಓಜೋನ್ ಪದರ ತೆಳುವಾಗುತ್ತಿರುವುದನ್ನು ಗಮನಿಸಲಾಯಿತು ಇದರ ಪರಿಣಾಮವಾಗಿ 1985ರಲ್ಲಿ ವಿಯೆನ್ನಾ ದೇಶದಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಒಂದು ಸಮ್ಮೇಳನ ಜರುಗಿತು ಇಲ್ಲಿ ನಡೆದ ವಿಚಾರ ವಿನಿಮಯದಲ್ಲಿ ಮಾನವರಿಂದಾಗುತ್ತಿರುವ ಓಜೋನ್ ಪದರದ ನಾಶವನ್ನು ಅತ್ಯಂತ ಕಡಿಮೆ ಮಾಡಬೇಕೆಂದು ಮುಖ್ಯವಾಗಿ ಸಿ.ಎಫ್.ಸಿ ಗಳ ಉತ್ಪಾದನೆ ಬಳಕೆ ಮತ್ತು ಉತ್ಸರ್ಜಗಳನ್ನು ಕಡಿಮೆ ಮಾಡಬೇಕೆಂದು ನಿರ್ಧರಿಸಲಾಯಿತು. ಓಜೋನ್ ಪದರದ ರಕ್ಷಣೆಯನ್ನು ಕುರಿತು 1987ರ ಮಾಂಟ್ರಿಯಲ್ ಕೆನಡಾ ಒಪ್ಪಂದಕ್ಕೆ ಸುಮಾರು 150 ರಾಷ್ಟ್ರಗಳ ಸಹಿ ಹಾಕಿ ಸಿ.ಎಫ್.ಸಿ ಉತ್ಪಾದನೆಯನ್ನು 1986ರ ನಂತರ ಹೆಚ್ಚು ಮಾಡದೆ 1993ರ ವೇಳೆಗೆ ಶೇ.20ರಷ್ಟು ಉತ್ಪಾದನೆಯನ್ನು 1999ರ ವೇಳೆಗೆ ಶೇ.50ರಷ್ಟು ಉತ್ಪಾದನೆಯನ್ನು ಡಿಮೆ ಗೊಳಸಬೇಕೆಂಬುದೇ ಮಾಂಟ್ರಿಯಲ್ ಒಪ್ಪಂದದ ಉದ್ದೇಶ.
ಓಜೋನ್ ಪದರವನ್ನು ಪರಿಣಾಮಕಾರಿಯಾಗಿ ಸಂರಕ್ಷಿಸುವ ಈ ಒಪ್ಪಂದವನ್ನು ಅನೇಕ ರಾಷ್ಟ್ರಗಳು ಸ್ವಾಗತಿಸಿವೆ. ಭಾರತವು 1992ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದೆ ಇದು ಸಾಧ್ಯವಾಗಿ ಸಿ.ಎಫ್.ಸಿ ಬಳಕೆ ಸಂಪೂರ್ಣವಾಗಿ ನಿಂತರೂ ಓಜೋನ್ ಪದರವು ತನ್ನ ಹಿಂದಿನ ಸ್ಥಿತಿಗೆ ಮರಳಲು ಸುಮಾರು 50ವರ್ಷಗಳು ಬೇಕೆಂಬುದು ಅಂದಾಜು, ಇದರ ಅರಿವು ಮತ್ತು ಜಾಗೃತಿಗಾಗಿ ಪ್ರತಿ ವರ್ಷ ಸೆಪ್ಟಂಬರ್ 16ರಂದು ವಿಶ್ವ ಓಜೋನ್ ದಿನವನ್ನಾಗಿ ಆಚರಿಸಲಾಗುತ್ತದೆ.
ಗಣೇಶನ ಹೆಸರಿನಲ್ಲಿ ಗ್ರಾಮದ ಸ್ವಚ್ಚತೆ, ಆರೋಗ್ಯ ಶಿಬಿರಕ್ಕೆ ಮುಂದಾಗುವ 'ಗೆಳೆಯರ ಬಳಗ'
ಚಿಕ್ಕನಾಯಕನಹಳ್ಳಿ,ಸೆ.29: ಕುಪ್ಪೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಗಣೇಶನ ಮೂತರ್ಿ ಪ್ರತಿಷ್ಠಾಪನೆ ಕಾರ್ಯ ಸಾಂಗವಾಗಿ ನಡೆದುಕೊಂಡು ಬರುತ್ತಿರುವ ಧಾಮರ್ಿಕ ಆಚರಣೆ, ಈ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಗೆಳೆಯರ ಬಳಗ ಸಂಘಟನೆಯ ವಿಶೇಷವೆಂದರೆ, ಈ ಸಂದರ್ಭದಲ್ಲಿ ಗಣೇಶನ ಪೂಜೆಯ ಜೊತೆಗೆ ಗ್ರಾಮದ ಸ್ವಚ್ಚತೆ ಹಾಗೂ ಆರೋಗ್ಯ ಶಿಬಿರಕ್ಕೆ ಹೆಚ್ಚು ಒತ್ತುಕೊಟ್ಟು ಸಂಘದ ಎಲ್ಲರೂ ಈ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವುದು ಗಮನಾರ್ಹ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಹಾಗೂ ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜನ ಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಪ್ರತಿಷ್ಠಾಪನಾ ಕಾರ್ಯಕ್ಕೆ ಗ್ರಾಮದ ಹಿರಿಯರು, ಯುವಕರು, ಸ್ತ್ರೀಶಕ್ತಿ ಸಂಘದವರ ಮುತುವಜರ್ಿಯಲ್ಲಿ ನಡೆಯುವ ಈ ಕಾರ್ಯದಲ್ಲಿ ಪೂಜಾ ವಿಧಾನಗಳಿಗೆ ವಹಿಸುವಷ್ಟು ಶ್ರದ್ಧೆಯನ್ನೇ ಗ್ರಾಮದ ಸ್ವಚ್ಚತೆಯ ಕಡೆಗೂ ನಿಗಾ ವಹಿಸುವುದು ವಿಶೇಷ. ಗಣಪತಿ ವಿಸಜರ್ಿಸುವವರೆಗೆ ಯುವಕರೆಲ್ಲಾ ಸ್ವಯಂ ಪ್ರೇರಿತರಾಗಿ ಕೊಳಚೆ ಪ್ರದೇಶಗಳ ನಿಮರ್ೂಲನೆ ಹಾಗೂ ಕಸಕಡ್ಡಿಗಳ ನಿರ್ವಹಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ವಿದ್ಯಾಥರ್ಿಗಳಿಗೆ ಕ್ರೀಡಾ ತರಬೇತಿ, ರಾಜ್ಯಮಟ್ಟದ ಜಾನಪದ ಕಲಾವಿದರಿಗೆ ಸನ್ಮಾನ, ಆರೋಗ್ಯ ಶಿಬಿರಗಳನ್ನು ನಡೆಸುವ ಈ ಬಳಗ, ಗಣೇಶನ ಹೆಸರಿನಲ್ಲಿ ಸೃಜನಶೀಲ ಕಾರ್ಯಗಳನ್ನು ಮಾಡುತ್ತಿರುವುದು, ಧಾಮರ್ಿಕ ಕಾರ್ಯದಲ್ಲಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಮಹತ್ವಕೊಟ್ಟಿರುವುದು ಒಂದು ಹೊಸ ಆಯಾಮ.
ಈ ಗಣೇಶನ ಮೂತರ್ಿಯನ್ನು ಇದೇ ಅ.2ರ ಶನಿವಾರ ಸಂಜೆ 8ಕ್ಕೆ ವಿಸಜರ್ಿಸಲಿದ್ದು, ಈ ಸಂದರ್ಭದಲ್ಲಿ ವಿವಿಧ ಜಾನಪದ ಪ್ರಕಾರಗಳಾದ ವೀರಭದ್ರನ ಕುಣಿತ, ಕಂಸಾಳೆ, ಮ್ಯೂಸಿಕ್ ನಾಸಿಕ್ ಡೋಲ್ ಬ್ಯಾಂಡ್ ತಂಡ, ಜಾನಪದ ನೃತ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.