Sunday, December 26, 2010


ಕೃಷಿ ಅಭಿವೃದ್ದಿಗೆ ಬ್ಯಾಂಕ್ಗಳು ಹೆಚ್ಚು ಆಥರ್ಿಕ ಸೌಲಭ್ಯ ನೀಡಲು ಬದ್ದ
ಚಿಕ್ಕನಾಯಕನಹಳ್ಳಿ,ಡಿ.26: ಕೃಷಿಯನ್ನು ಕೇವಲ ಉದ್ಯೋಗವೆಂದು ಪರಿಗಣಿಸದೆ ಒಂದು ಉದ್ಯಮವೆಂದು ತಿಳಿದು ಉಳುಮೆ ಮಾಡಿದರೆ ಉತ್ತಮ ಫಸಲು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಕೆನರಾ ಬ್ಯಾಂಕ್ ಉಪಪ್ರಬಂಧಕ ರವೀಂದ್ರ ಭಂಡಾರಿ ಹೇಳಿದರು.
ತಾಲೂಕಿನ ಅಣೇಕಟ್ಟೆಯಲ್ಲಿ ನಡೆದ ಧರಿತ್ರಿ ಕೃಷಿಕರ ಕೂಟ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಾಹಿತಿ ಸಂಗ್ರಹಣೆ, ತರಬೇತಿ, ಮಾರುಕಟ್ಟೆಯು ಬ್ಯಾಂಕ್ನೊಂದಿಗಿನ ಸಂಬಂಧವಾಗಿದ್ದು, ಕೃಷಿಕರ ಒಕ್ಕೂಟ, ಕೇಂದ್ರವಾಗಿ ಪರಿವರ್ತನೆಯಾಗಿ ಸಂಘಟನೆಯ ಮುಖೇನ ಕೆಲಸ ನಿರ್ವಹಿಸಿದರ ಯಶಸ್ವಿಯಾಗುತ್ತದೆ ಎಂದ ಅವರು ಜನಪರ ಕಾರ್ಯಗಳಿಗೆ ಕೆನರಾ ಬ್ಯಾಂಕ್ ಸದಾ ಸಹಕಾರ ನೀಡುವುದೆಂದು ತಿಳಿಸಿದರು.
ನಬಾಡರ್್ ಸಹಾಯಕ ಪ್ರಬಂಧಕ ಅನಂತಕೃಷ್ಣ ಮಾತನಾಡಿ ಕೃಷಿಕರ ಕೂಟಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು, ಮಾಸಿಕ ಸಭೆಗಳನ್ನು ನಡೆಸಲು, ನಬಾಡರ್್ನಿಂದ ಹತ್ತು ಸಾವಿರ ರೂಗಳನ್ನು ಪ್ರತಿವರ್ಷ ನೀಡಲಾಗುವುದು ಮತ್ತು ನಬಾಡರ್್ ಸಂಸ್ಥೆಯು ರೈತರ ಏಳ್ಗೆಗಾಗಿಯೇ ಇರುವ ಒಂದು ಸಕರ್ಾರಿ ಸಂಸ್ಥೆಯಾಗಿದ್ದು ಯಾವುದೇ ಸಹಾಯ ಬೇಕಾದಲ್ಲಿ ತಮ್ಮನ್ನು ಸಂಪಕರ್ಿಸಲು ಕೋರಿದರು.
ಅಕ್ಷಯ ಕಲ್ಪ ಸಂಸ್ಥೆ ನಿದರ್ೇಶಕ ಡಾ.ಜಿ.ಎನ್.ಎಸ್.ರೆಡ್ಡಿ ಮಾತನಾಡಿ ರೈತರು ಮಾರುಕಟ್ಟೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ನಬಾಡರ್್ನಿಂದ ದೊರಕುವ ಉಗ್ರಾಣ ಸಹಾಯಧನವನ್ನು ಉಪಯೋಗಿಸಿಕೊಳ್ಳಬೇಕು ಎಂದ ಅವರು ಕೇವಲ ಸೆಮಿನಾರ್ ರೈತರಾಗದೆ ಕ್ರಿಯೆಯ ರೈತರಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಧರಿತ್ರಿ ಕೃಷಿಕರ ಕೂಟದ ಮುಖ್ಯ ಸಂಚಾಲಕ ನಂಜಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಸತೀಶ್, ವೀರಣ್ಣ ಉಪಸ್ಥಿತರಿದ್ದರು.
ಕೃಷಿ ವಿಸ್ತರಣಾಧಿಕಾರಿ ಮನೋಜ್ನಾಯಕ್ ಸ್ವಾಗತಿಸಿದರೆ, ಸಂಚಾಲಕ ರಘುರಾಂ ನಿರೂಪಿಸಿ, ನವಿಲೆರಘು ವಂದಿಸಿದರು.

ವಿಕಲಚೇತನಿರಿಗೆ ಉಚಿತ ಕೃತಕ ಉಪಕರಣಗಳ ಜೊಡಣೆ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.26: ಮುಂಗೈ ಮತ್ತು ಕಾಲಿಲ್ಲದವರಿಗಾಗಿ ಕೃತಕವಾಗಿ ಕಾಲುಗಳು, ಪೋಲಿಯೋ ಪೀಡಿತರಿಗೆ ಕ್ಯಾಲಿಪರ್ಸಗಳನ್ನು ರೋಟರಿ ಸಂಸ್ಥೆ ಉಚಿತವಾಗಿ ಇದೇ ಜನವರಿ 3 ರಿಂದ 9ರವರಗೆ ನೀಡುವುದು ಎಂದು ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ತಿಳಿಸಿದ್ದಾರೆ.
ರೋಟರಿ ಬೆಂಗಳೂರು ಪೀಣ್ಯಾ ಮತ್ತು ಜೈಪುರ ಭಗವಾನ್ ಮಹಾವೀರ ವಿಕಲಾಂಗ ಸಹಾಯ ಸಮಿತಿವತಿಯಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿ ಪೋಲಿಯೋ ಕರೆಕ್ಟಿವ್ ಸರ್ಜರಿಗೆ ನೋಂದಾವಣೆ ಮಾಡಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ 9886732338ಗೆ ಸಂಪಕರ್ಿಸಲು ಕೋರಿದ್ದಾರೆ.