Friday, November 18, 2011




ಕನಕ ಏಕಶಿಲಾ ವಿಗ್ರಹ, ಶ್ರೀ ಲಕ್ಷ್ಮೀದೇವಾಲಯ ನೂತನ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಶಂಕಸ್ಥಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ನ.18 : ಶ್ರೀ ಕನಕ ಏಕಶಿಲಾ ವಿಗ್ರಹ, ಶ್ರೀ ಲಕ್ಷ್ಮೀದೇವಾಲಯ ನೂತನ ಮಠ ಹಾಗೂ ಶಿಕ್ಷಣ ಸಂಸ್ಥೆಗಳ ಶಂಕಸ್ಥಾಪನಾ ಮಹೋತ್ಸವ ಸಮಾರಂಭವನ್ನು ಇದೇ 21ರ ಸೋಮವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ ಎಂದು ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿಸ್ವಾಮೀ ಹೇಳಿದರು.
ಪಟ್ಟಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲೇ ಅತ್ಯಂತ ಎತ್ತರವಾದ ಹಾಗೂ ಇದೇ ಮೊದಲ ಬಾರಿಗೆ ಕನಕದಾಸರ ಏಕಶಿಲಾ ಮೂತರ್ಿಯ ಕೆತ್ತನೆ ನಡೆಯುತ್ತಿದ್ದು 30ಜನ ಶಿಲ್ಪಿಗಳು ಕೆತ್ತನೆಯಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಕೆತ್ತನೆಯ ಶೇ.75ರಷ್ಟು ಕೆಲಸ ಮುಗಿದಿದೆ. ಏಕಶಿಲಾ ವಿಗ್ರಹವು 35ಅಡಿ ಎತ್ತರ ಇದ್ದು, 8ಅಡಿ ದಪ್ಪ, 14 ಅಡಿ ಅಗಲ ಇದೆ, 15 ಅಡಿ ಕಲ್ಲಿನ ಮೇಲೆ 35 ಅಡಿ ಎತ್ತರದಶಿಲೆ, 15 ಅಡಿ ಕೆಳಗೆ ವಿಶೇಷ ಪೀಠ ಜ್ಞಾನ ಇರುವುದು. ಈ ಏಕಶಿಲಾ ವಿಗ್ರಹಕ್ಕೆ 8ರಿಂದ 10ಕೋಟಿಯಷ್ಟು ವೆಚ್ಚ, ಲಕ್ಷ್ಮೀ ದೇವಸ್ಥಾನ ಹಾಗೂ ಶಿಕ್ಷಣ ಸಂಸ್ಥೆಗಳ ಶಾಲಾ ಕಟ್ಟಡದ ಶಂಕುಸ್ಥಾಪನೆ ನಡೆಯಲಿದೆ.
ಸಮಾರಂಭದಲ್ಲಿ ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿಸ್ವಾಮಿ, ಶಾಖಾಮಠದ ಶಿವಾನಂದಪುರಿಸ್ವಾಮಿ, ತಿಂಥಣಿ ಶಾಖಾಮಠದ ಸಿದ್ದರಾಮಾನಂದಪುರಿಸ್ವಾಮಿ,  ರಾಮಾನುಜ ಮಠದ ರಾಮಾಜುಜಜೀಯರ್ ಸ್ವಾಮಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಾಕ್ಷ  ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಬಂಡೆಪ್ಪ ಕಾಶಂಪೂರ,  ಹೆಚ್.ಎಂ.ರೇವಣ್ಣ, ಸಚಿವ ವತರ್ೂರು ಪ್ರಕಾಶ್, ಎಂ.ಎಲ್.ಸಿ ಜಿ.ಎಚ್.ತಿಪ್ಪಾರೆಡ್ಡಿ, ಸಂಸದರಾದ ಜನಾರ್ದನಸ್ವಾಮಿ, ಎಚ್.ವಿಶ್ವನಾಥ್, ಶಾಸಕ ಸಿ.ಬಿ.ಸುರೇಶ್ಬಾಬು, ವಿಧಾನ ಪರಿಷತ್ ಸದಸ್ಯರಾದ ಗಾಯಿತ್ರಿ ಶಾಂತೇಗೌಡ,  ಡಾ.ಹುಲಿನಾಯ್ಕರ್, ಪ್ರದೇಶ ಕುರುಬರ ಸಂಘದ ಅಧ್ಯಕ್ಷ ರಘುನಾಥರಾವ್ ಮಲ್ಕಾಪುರ, ಕಾರ್ಯದಶರ್ಿ ರಾಮಚಂದ್ರಪ್ಪ  ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕನಕ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಉದಯಶಂಕರ್ ಒಡೆಯರ್, ಕೃಷಿ ಬ್ಯಾಂಕ್ನ ಕೆ.ಜಗದೀಶ ಒಡೆಯರ್ ಉಪಸ್ಥಿತರಿದ್ದರು.