Saturday, October 22, 2011



ಪ್ಯಾಕೇಜ್ ಗುತ್ತಿಗೆ ನಿಲ್ಲಿಸಿ ಸ್ಥಳೀಯ ಗುತ್ತಿಗೆದಾರರನ್ನು ಉಳಿಸಿ
ಚಿಕ್ಕನಾಯಕನಹಳ್ಳಿ.ಅ.21 : ದೊಡ್ಡ ದೊಡ್ಡ ಕಂಪನಿಯವರು ತಾಲ್ಲೂಕಿನ ಹಲವು ಗುತ್ತಿಗೆಗಳನ್ನು ಪಡೆದು ತಾಲ್ಲೂಕಿನ ಗುತ್ತಿಗೆದಾರರನ್ನು ತಮ್ಮ ಮೇಸ್ತ್ರಿಗಳನ್ನಾಗಿ ಮಾಡಿಕೊಳ್ಳುತ್ತಾ ಗುತ್ತಿಗೆದಾರರಿಗೆ ಆಥರ್ಿಕವಾಗಿ ತೊಂದರೆ ಪಡಿಸುತ್ತಿದ್ದಾರೆ, ಅದಕ್ಕಾಗಿ ಸ್ಥಳೀಯ ಗುತ್ತಿಗೆದಾರರೆಲ್ಲರೂ ಸಂಘಟನೆಯ ಮೂಲಕ ಒಂದಾಗಬೇಕು ಎಂದು ಗುತ್ತಿಗೆದಾರ ನಂದಿಹಳ್ಳಿ ಶಿವಣ್ಣ ಹೇಳಿದರು.
ಪಟ್ಟಣದ ಜಿ.ಪಂ ಇಂಜನಿಯರಿಂಗ್ನ ಎ.ಇ.ಇ.ಕಛೇರಿಯ ಬಳಿ ನೂತನವಾಗಿ ಆರಂಭಗೊಂಡ ತಾಲ್ಲೂಕು ಗುತ್ತಿಗೆದಾರರ ಸಂಘವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುತ್ತಿಗೆದಾರಿಗೆ ಇನ್ನೊಬ್ಬ ಗುತ್ತಿಗೆದಾರರಿಂದ ವ್ಯವಹಾರಕ್ಕೆ ಪೈಪೋಟಿ ಇದ್ದರೂ ಗುತ್ತಿಗೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಬೇರೆ ತಾಲ್ಲೂಕಿನಿಂದ ಬಂದಂತಹ ಗುತ್ತಿಗೆದಾರಿಗೆ ಗುತ್ತಿಗೆ ನೀಡುವುದನ್ನು ಇಲ್ಲಿನವರು ವಿರೋಧಿಸಿ, ಸ್ಥಳೀಯರಿಗೆ ಗುತ್ತಿಗೆ ಕೆಲಸಗಳಲ್ಲಿ ಮೊದಲ ಆದ್ಯತೆ ನೀಡಬೇಕು ಎಂದ ಅವರು, ಬೇರೆ ಕಡೆಯಿಂದ ಬಂದಂತಹ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೆಲಸ ನೀಡುವುದು ಅಷ್ಟಕಷ್ಟೆಯಾಗಿದೆ, ಸ್ಥಳೀಯರಿಗೆ ನೀಡಿದರೆ ಕೆಲಸ ಮುಗಿಯುವವರೆಗೆ ಅದೇ ಸ್ಥಳದಲ್ಲಿದ್ದು ಉತ್ತಮ ಗುಣಮಟ್ಟ ಕಾಯ್ದುಕೊಳ್ಳುತ್ತಾರೆ ಎಂದರು. ಈತ ಅಸ್ತ್ರಿತ್ವಕ್ಕೆ ಬಂದಿರುವ ನಮ್ಮ ಸಂಘದ ಗುತ್ತಿಗೆದಾರರು ಒಬ್ಬರಿಗೊಬ್ಬರು ಸಹಕರಿಯಾಗಿ ಸಂಘದ ಮಾತುಗಳಿಗೆ ಸ್ಪಂದಿಸಬೇಕು ಎಂದರು.
ತಾ.ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರುಣ್ಕುಮಾರ್ ಮಾತನಾಡಿ ಕೋಟಿಗಟ್ಟಲೆ ಕಾಮಗಾರಿ ಗುತ್ತಿಗೆಯನ್ನು ಕೇವಲ ಕೆಲವೇ ಮಂದಿಗೆ ಸಕರ್ಾರ ನೀಡುತ್ತಿರುವುದು ವಿಪಯರ್ಾಸ ಇದನ್ನು ಹಲವರಿಗೆ ನೀಡಲು ಒತ್ತಾಯಸಿದರಲ್ಲದೆ, 1 ಮತ್ತು 2ನೇ ದಜರ್ೆ ಗುತ್ತಿಗೆದಾರರು 3 ಮತ್ತು .4ನೇ ದಜರ್ೆ ಗುತ್ತಿಗೆದಾರರ ಕೆಲಸಗಳಿಗೆ ತೊಂದರೆ ಪಡಿಸದಂತೆ ಕೆಲಸ ನಿರ್ವಹಿಸಬೇಕು ಹಾಗೂ ತಾಲ್ಲೂಕಿನ ಸಂಘದಲ್ಲಿ ಈಗಾಗಲೇ 60ಜನ ಗುತ್ತಿಗೆದಾರರಿದ್ದು ಒಬ್ಬರು ಇನ್ನೊಬ್ಬರಿಗೆ ಪ್ರೋತ್ಸಾಹ ನೀಡಬೇಕು ಮತ್ತು ನೂತನವಾಗಿ ಉದ್ಘಾಟನೆಗೊಂಡಿರುವ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಸಮಾರಂಭದಲ್ಲಿ ಗುತ್ತಿಗೆದಾರರಾದ ಆಲದಕಟ್ಟೆ ತಿಮ್ಮಯ್ಯ, ಜಲಾಲ್ಸಾಬ್, ಮಾತನಾಡಿದರು.
ಸಮಾರಂಭದಲ್ಲಿ ಎ.ಡಬ್ಲ್ಯೂ,ಇ ಚಿಕ್ಕದಾಸಪ್ಪ, ಗುತ್ತಿಗೆದಾರರಾದ ಚಿದಂಬರಶಾಸ್ತ್ರಿ, ಕೆ.ಗಂಗಣ್ಣ, ಕೃಷ್ಣಪ್ಪ, ಎಂ.ಎನ್.ಶಿವರಾಜು, ಶಿವಣ್ಣ, ನಾಗಣ್ಣ ಮುಂತಾದವರಿದ್ದರು.


ಪುರಸಭೆಯವರ ನಿರ್ಲಕ್ಷ್ಯದಿಂದ ನಿವಾಸಿಗಳಿಗೆ ಅಲಜರ್ಿ
ಚಿಕ್ಕನಾಯಕಯಕನಹಳ್ಳಿ,ಅ.22: ಪಟ್ಟಣದ ಹ್ಲದಯಭಾಗವಾಗದ ಬಸ್ಸ್ಟಾಂಡ್ ಪಕ್ಕದಲ್ಲೇ ಕೋಳಿ ಅಂಗಡಿಗಳು ಇರುವುದರಿಂದ ಕೋಳಿಯ ತ್ಯಾಜ್ಯವಸ್ತುಗಳಾದ ಪುಕ್ಕ, ಸೇರಿದಂತೆ ಇತರ ತ್ಯಾಜ್ಯ ಮಾಂಸ ಪದಾರ್ಥಗಳನ್ನು ಅಂಗಡಿಗಳ ಹಿಂಭಾಗದಲ್ಲೇ ಹಾಕುವುದರಿಂದ ಈ ಭಾಗದ ನಿವಾಸಿಗಳಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ
ಈ ಪ್ರದೇಶ ವಾಣಿಜ್ಯ ಪ್ರದೇಶವಾಗಿರುವುದರಿಂದ ಈ ಭಾಗಕ್ಕೆ ಬರುವ ಗ್ರಾಹಕರಿಗೂ ತೊಂದರೆಯಾಗಿದೆ ಎಂದು ಹಲವು ವರ್ಷಗಳಿಂದ ಪುರಸಭೆಗೆ ದೂರು ನೀಡಿದರು ಅವರು, ದಿವ್ಯ ನಿರ್ಲಕ್ಷವಹಿಸುವುದರಿಂದ ನಾವಿಲ್ಲಿ ಬದುಕುವುದೇ ದುಸ್ಥರವಾಗಿದೆ ಎಂದು ಈ ಭಾಗದ ನಿವಾಸಿ ಚನ್ನಬಸವಯ್ಯ ಪತ್ರಿಕೆಗೆ ಅಲವತ್ತುಕೊಂಡಿದ್ದಾರೆ.
ಅಂಗಡಿಯವರು ಕೋಳಿಗಳನ್ನು ಕ್ಲೀನ್ ಮಾಡಿದ ನಂತರ ಅದರ ಪುಕ್ಕ, ಕರಳು, ಮಾಂಸ ಇತ್ಯಾಧಿ ತ್ಯಾಜ್ಯವಸ್ತುಗಳನ್ನು ಮನೆಗಳ ಸಮೀಪದಲ್ಲೇ ಹಾಕುವುದರಿಂದ ಅವುಗಳು ಕೊಳೆತು ನಿವಾಸಿಗಳಿಗೆ ದುವರ್ಾಸನೆ ಬರುವುದಲ್ಲದೆ, ಹಂದಿ ನಾಯಿಗಳ ಕಾಟ ಜಾಸ್ತಿಯಾಗಿ ಮಕ್ಕಳು ಹಾಗು ವೃದ್ದರಿಗೆ ಇವುಗಳಿಂದ ಅಲಜರ್ಿ ಹೆಚ್ಚಾಗಿದೆ ಎಂದಿದ್ದಾರೆ.
ಈ ತ್ಯಾಜ್ಯವಸ್ತುಗಳಿಂದ ಸಾಂಕ್ರಾಮಿಕ ರೋಗಗಳು ಉಂಟಾಗುತ್ತಿದೆ ಇವರು ಈ ಬಗ್ಗೆ ಇಲ್ಲಿನ ಅಂಗಡಿ ಮಾಲೀಕರು, ಆಟೋಚಾಲಕರು, ಹಾಗೂ ಮನೆಗಳ ನಿವಾಸಿಗಳು ಈಗಾಗಲೇ ಜಿಲ್ಲಾಧಿಕಾರಿಗಳು, ತಿಪಟೂರು ವಿಭಾಗದ ಅಸಿಸ್ಟೆಂಟ್ ಕಮಿಷನರ್, ಪುರಸಭೆ ಮುಖ್ಯಾಧಿಕಾರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನೀಡಿದ್ದರೂ ಇತ್ತ ಯಾರೊಬ್ಬರೂ ಗಮನ ಹರಿಸಿಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೋಳಿ ಅಂಗಡಿ ಮಾಲೀಕರ ಅಳಲು: ಕೋಳಿ ಅಂಗಡಿಯ ಮಾಲೀಕ ಪುಟ್ಟಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಈ ಮೊದಲು ನಾವು ಬಸ್ಟಾಂಡ್ ಬಳಿ ಕೋಳಿಅಂಗಡಿಗಳನ್ನು ನಡೆಸುತ್ತಿದ್ದಾಗ ಪುರಸಭೆಯವರು ಈ ಜಾಗದಿಂದ ತೆರವುಗೊಳಿಸಿದರು, ನಂತರ ಕೋಳಿಅಂಗಡಿಯವರೆಲ್ಲ ಸೇರಿ ಖಾಸಗಿ ಜಮೀನಲ್ಲಿ ಕೋಳಿ ಅಂಗಡಿ ಇಡುವುದೆಂದು ತೀಮರ್ಾನಿಸಿ ಕೋಳಿ ಅಂಗಡಿಗಳನ್ನು ಇಲ್ಲಿ ಇಟ್ಟುಕೊಂಡಿದ್ದೇವೆ.
ಕೋಳಿ ಕ್ಲೀನ್ ಮಾಡುವ ಈ ಪ್ರದೇಶಕ್ಕೆ ಪುರಸಭೆಯವರು ಕಂಟೈನರ್(ಕಸದ ತೊಟ್ಟಿ) ಒದಿಸಿಲು ಹಾಗೂ ನೀರಿನ ವ್ಯವಸ್ಥೆ ನೀಡಬೇಕೆಂದು ಕೇಳಿಕೊಂಡಿದ್ದೆವು ಅವರು ಈವೆರೆಗೆ ನೀಡಿಲ್ಲ ಎಂದರಲ್ಲದೆ, ನಮಗೆ ಪುರಸಭೆಯವರೇ ಒಳ್ಳೆ ಜಾಗವನ್ನು ತೋರಿಸಿದರೆ ನಾವು ಅಲ್ಲಿಗೆ ನಮ್ಮ ಅಂಗಡಿಗಳನ್ನು ಸ್ಥಳಾಂತರಿಸಿಕೊಳ್ಳುತ್ತೇವೆ ಎನ್ನುತ್ತಾರೆ.