Wednesday, December 21, 2011


ಹಿಂದು, ಮುಸ್ಲಿಂರ ಭಾವೈಕತೆಯು ಟಿಪ್ಪು ಅಭಿಮಾನಿ ಸಂಘ 
ಚಿಕ್ಕನಾಯಕನಹಳ್ಳಿ,ಡಿ.21 : ಹಿಂದು, ಮುಸ್ಲಿಂರ ಭಾವೈಕತೆಯು ಪ್ರತಿ ಗ್ರಾಮಗಳಲ್ಲೂ ಉತ್ತಮವಾಗಿರಬೇಕು, ಅದಕ್ಕಾಗಿ ಟಿಪ್ಪು ಅಭಿಮಾನಿ ಸಂಘ ಸ್ಥಾಪಿಸಿದ್ದು ಸಂಘ ಈಗಾಗಲೇ ರಾಜ್ಯದ್ಯಾಂತ 15 ಜಿಲ್ಲೆಗಳಲ್ಲಿ ರಚಿತವಾಗಿದ್ದು ಅಲ್ಲೆಲ್ಲ ಹಿಂದು, ಮುಸ್ಲಿಂರು ಪ್ರತಿ ಸಕರ್ಾರಿ ಕಾರ್ಯಕ್ರಮವನ್ನು ಒಗ್ಗಟ್ಟಾಗಿ ಆಚರಿಸುತ್ತಿದ್ದಾರೆ ಎಂದು ರಾಜ್ಯ ಟಿಪ್ಪು ಅಭಿಮಾನಿ ಸಂಘದ ಅಧ್ಯಕ್ಷ ಟಿಪ್ಪು ಖಾಸಿಂ ಆಲಿಸಾಬ್ ಹೇಳಿದರು.
ಪಟ್ಟಣದ ಕನಕ ಭವನದಿಂದ, ತಾತಯ್ಯನಗೋರಿಯವರೆಗೆ ಪ್ರಮುಖ ಬೀದಿಯಲ್ಲಿ ಕನ್ನಡ ಬಾವುಟ, ಟಿಪ್ಪು ಬಾವುಟಗಳೊಂದಿಗೆ ಮೆರವಣಿಗೆ ನಡೆಯಿತು.
ತಾತಯ್ಯನಗೋರಿ ಆವರಣದಲ್ಲಿ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಟಿಪ್ಪುಸುಲ್ತಾನ್ ಸ್ಮರಣೀಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಟಿಪ್ಪು ಭಾವೈಕತೆಗೆ ಹಾಗೂ ಸ್ವಾತಂತ್ರಕ್ಕಾಗಿ ಹೋರಾಡಿದವರು ಅವರ ಹೆಸರಿನಲ್ಲಿ ನಾವು ಹಿಂದು, ಮುಸ್ಲಿಂರನ್ನು ಒಟ್ಟಾಗಿ ಸೇರಿಸುವ ಕಾರ್ಯ ಈ ಮೂಲಕ ನಡೆದಿದೆ ಎಂದ ಅವರು ಟಿಪ್ಪುಸುಲ್ತಾನ್ ದೇಶಕ್ಕಾಗಿ ಹೋರಾಡಿದ ವೀರ ಅವರ ಹೆಸರಿನಲ್ಲಿ  ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಟಿಪ್ಪು ಹೆಸರಿನಿಂದ ನಾಮಕರಣವಾಗಬೇಕು, ಟಿಪ್ಪು ನವಂಬರ್ ತಿಂಗಳನಿಲ್ಲಿ ಜನಿಸಿದ್ದರಿಂದ ಕನ್ನಡ ರಾಜ್ಯೋತ್ಸವದ ಜೊತೆಗೆ  ಟಿಪ್ಪು ಜಯಂತಿಯನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿ ಮಾಡಬೇಕು ಹಾಗೂ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾನಿಲಯ, ಪ್ರಾಧಿಕಾರಗಳು ಆರಂಭವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ನಾವು ಮನವಿ ಅಪರ್ಿಸಿದ್ದೇವೆಂದು ತಿಳಿಸಿದರು.
ಕುಪ್ಪೂರು ಮಠದ  ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ಜಾತಿ ರಾಜಕೀಯ ಮಾಡುವವರಿಗೆ ಮಾರ್ಗದರ್ಶನವಾಗಿದೆ ಟಿಪ್ಪುಸುಲ್ತಾನ್ ಅಭಿಮಾನಿ ಬಳಗ, ಹಿಂದು ಮುಸ್ಲಿಂ ಬೆಸೆಯುವ ಕಾರ್ಯ ಸಂಘದಿಂದ ನಡೆಯಲಿ, ನಾವು ಇಂತಹ ಧರ್ಮದಲ್ಲೇ ಹುಟ್ಟಬೇಕೆಂದು ನಿರ್ಧರಿಸೇ ಹುಟ್ಟುವುದಿಲ್ಲ, ದೇವರು ನಿರ್ಧರಿಸಿದ್ದಲ್ಲಿ ಜನಿಸುತ್ತೇವೆ. ನಾವು ದಾರ್ಶನಿಕರ ಮಾತಿನಂತೆ ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಗಾಂಧೀ, ಸುಭಾಷ್ಚಂದ್ರಬೋಸ್ ಮುಂತಾದ ಸ್ವತಂತ್ರ ಹೋರಾಟಗಾರರನ್ನು ಸ್ಮರಿಸುವಂತೆಯೇ ಟಿಪ್ಪುವಿನ ಸ್ಮರಣೆ ದಿನಾಚರಣೆಯನ್ನು ಸಕರ್ಾರದ ವತಿಯಿಂದ ಮಾಡಬೇಕು ಎಂದ ಅವರು  ಟಿಪ್ಪು ಸಂಘಟನೆ ಶುರು ಮಾಡುವ ಮುಖಾಂತರ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿರುವುದು ಹಿಂದು, ಮುಸ್ಲಿಂ ಭಾವೈಕತೆಗೆ ಎತ್ತಿಹಿಡಿಯುವ ವಿಷಯವಾಗಿದೆ. ಟಿಪ್ಪು ಜಯಂತಿಯನ್ನು ಸಕರ್ಾರ ಆಚರಣೆ ಮಾಡುತ್ತಾ ಟಿಪ್ಪುವಿನ ಬಗ್ಗೆ ಮಕ್ಕಳಿಗೂ ತಿಳಿಸಲಿ ಎಂದರಲ್ಲದೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಾತಯ್ಯನಗೋರಿ ಮುಂದೆ ಹೋದರೆ ಅಧಿಕಾರವುಳ್ಳ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಕಳೆದುಕೊಳ್ಳುವೆವು ಎಂಬ ತಪ್ಪು ತಿಳುವಳಿಕೆಯನ್ನು ಬಿಡಬೇಕು  ಎಂದರು.
ಗೋಡೆಕೆರೆ ಮಠದ ಮೃಂತ್ಯುಂಜಯ ದೇಶೀಕೇಂದ್ರ ಸ್ವಾಮಿ ಮಾತನಾಡಿ ಕನ್ನಡ ಸಾಹಿತಿಗಳು ಆಂಗ್ಲ ಭಾಷಾ ವ್ಯಾಮೋಹಕ್ಕೆ ಸಿಲುಕಿದ್ದಾರೆ, ತಮ್ಮ ಮಕ್ಕಳನ್ನೇ ಆಂಗ್ಲ ಶಾಲೆಗಳಲ್ಲಿ ಓದಿಸುತ್ತಿದ್ದಾರೆ, ಕೇವಲ ಬಾಯಿಮಾತಿಗಾಗಿ ಭಾಷಣಗಳಲ್ಲಿ ಕನ್ನಡ ಕಡ್ಡಾಯದ ಬಗ್ಗೆ ಮಾತನಾಡುತ್ತಾರೆ ಎಂದ ಅವರು ಭಾರತ ಸಾಂಸ್ಕೃತಿಕ ಕೇಂದ್ರ, ಹಿಂದು ಮುಸ್ಲಿಂ ಬಾಂಧವರು ರಾಷ್ಟ್ರ ಪ್ರೇಮ ಬೆಳಸಿಕೊಳ್ಳುವಲ್ಲಿ ಮುಂದಾಗಬೇಕು ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತ್ಯಾತೀತವಾಗಿ ಒಟ್ಟಾಗಿ ಬಾಳುತ್ತಿರುವ ನಾವು ಕನರ್ಾಟಕ ಮಾತೆಯ ಮಕ್ಕಳು ಎಂಬ ಭಾವನೆಯಿಂದ ಬಾಳಬೇಕು, ಉತ್ತಮ ರೀತಿಯ ಬಾಂಧವ್ಯ ಬೆಸೆಯುತ್ತಿರುವ ಈ ಸಂಘದ ಕಾರ್ಯ ಪ್ರಶಂಸನೀಯವಾದುದು, ನಾಡಿನ ಬಗ್ಗೆ ಟಿಪ್ಪುವಿಗೆ ಇದ್ದ ಪ್ರೇಮ ಮುಸಲ್ಮಾನರಾದರೂ ಶ್ರೀರಂಗನಾಥ ದೈವಭಕ್ತರಾಗಿದ್ದರೆಂಬುದು ಧಾಮರ್ಿಕ ಭಾವೈಕತೆಗೆ ಟಿಪ್ಪುಸುಲ್ತಾನ್ ಸಾಕ್ಷಿಯಾಗಿದ್ದಾರೆ ಎಂದ ಅವರು ಅವರ 49ನೇ ವರ್ಷದ ಅವಧಿಯಲ್ಲಿ ಕ್ಷಣ ಕ್ಷಣಕ್ಕೂ ದೇಶಪ್ರೇಮ ಬೆಳಸಿಕೊಂಡಿದ್ದರು, ನಾಡಿನಾದ್ಯಂತ ಟಿಪ್ಪು ದಿನಾಚರಣೆ ಆಚರಿಸುವಂತೆ ಸಕರ್ಾರವನ್ನು ಒತ್ತಾಯಿಸುತ್ತೇನೆ ಎಂದರು.
ಸಮಾರಂಭದಲ್ಲಿ ಟಿಪ್ಪುವಿನ ಇತಿಹಾಸದ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಮಾಸ್ಟರ್ ಅರ್ಫತ್ ಆಲಂನನ್ನು ಗಣ್ಯರು ಶ್ಲಾಘಿಸಿದರು.
ಸಮಾರಂಭದಲ್ಲಿ ರಾಜ್ಯ ಅಹಿಂದ ಮುಖಂಡ ಮುರುಗರಾಜೇಂದ್ರ ಒಡೆಯರ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಯ್ಯ, ತಾ.ಪಂ.ಉಪಾಧ್ಯಕ್ಷೆ ಬಿ.ಬಿ.ಪಾತೀಮ, ತಹಶೀಲ್ದಾರ್ ಉಮೇಶ್ಚಂದ್ರ, ಜಾಮಿಯಾ ಮಸೀದಿ ಮಹಮದ್ಖಲಂದರ್ಸಾಬ್, ಕ್ಯಾಪ್ಟನ್ಸೋಮಶೇಖರ್, ಮಿಲ್ಟ್ರಿಶಿವಣ್ಣ, ಸಿ.ಬಸವರಾಜು, ಪುರಸಬಾ ಸದಸ್ಯ ಸಿ.ಡಿ.ಚಂದ್ರಶೇಖರ್, ಇ.ಓ ಎನ್.ಎಂ.ದಯಾನಂದ್, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಜಿಲ್ಲಾ ಉಪಾಧ್ಯಕ್ಷ ಜಾವಿದ್, ತಾಲ್ಲೂಕು ಟಿಪ್ಪುಸುಲ್ತಾನ್ ಅಭಿಮಾನಿ ಸಂಘದ ಅಧ್ಯಕ್ಷ ಮಹಮದ್ಅಸ್ಲಮ್, ಉಪಾಧ್ಯಕ್ಷ ಫಝಲ್, ಸಂಘಟನಾ ಕಾರ್ಯದಶರ್ಿ ಪವರ್ಿಜ್, ಇಮ್ರೋಜ್  ಮುಂತಾದವರು ಉಪಸ್ಥಿತರಿದ್ದರು.
  ಸಮಾರಂಭದಲ್ಲಿ ಪಲ್ಲಕ್ಕಿ ಬಸವರಾಜು ಸ್ವಾಗತಿಸಿ, ಸಿ.ಬಿ.ರೇಣುಕಸ್ವಾಮಿ ನಿರೂಪಿಸಿದರು.