Friday, July 22, 2011ಸ್ತ್ರೀಶಕ್ತಿ ಹಾಗೂ ಸ್ವಸಹಾಯಗಳಿಗೆ 50 ಕೋಟಿ ಸಾಲ ವಿತರಣೆ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.22 : ಜಿಲ್ಲೆಯಾದ್ಯಂತ ಹಲವು ಸ್ತ್ರೀ ಶಕ್ತಿ ಸಂಘಗಳಿಗೆ, ಸ್ವಸಹಾಯ ಸಂಘಗಳಿಗೆ ಸುಮಾರು 40ರಿಂದ 50ಕೋಟಿವರೆಗೆ ಡಿ.ಸಿ.ಸಿ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡಿರುವುದಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘಗಳ, ಗ್ರಾಮೀಣ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುತ್ತಿದ್ದೇವೆ, ಬ್ಯಾಂಕ್ ಹೆಚ್ಚಾಗಿ ಮಹಿಳೆಯರ ಮೇಲಿನ ನಂಬಿಕೆಯಿಂದ ಸಾಲ ನೀಡುತ್ತಿದೆ, ಮಹಿಳೆಯರ ಆಥರ್ಿಕ ಅಭಿವೃದ್ದಿಗೋಸ್ಕರ ಬ್ಯಾಂಕ್ ಶೇ.4ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದು ಸಾಲ ಪಡೆದವರು ಉಳಿತಾಯದ ಮನೋಭಾವನೆಯನ್ನು ಹೊಂದುವುದರ ಜೊತೆಗೆ ಅದೇ ರೀತಿ ಸಾಲ ಮರುಪಾವತಿ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರದ ನಬಾಡರ್್ನ ನಿಯಮದಂತೆ ಪ್ರಥಮ ಬಾರಿಗೆ ಸಾಲ ಪಡೆದ ವ್ಯಕ್ತಿಯು ಶೀಘ್ರವಾಗಿ ಸಾಲ ಮರುಪಾವತಿ ಮಾಡಿದರೆ ಎರಡನೇ ಬಾರಿ ದುಪ್ಪಟ್ಟು, ಮೂರನೇ ಬಾರಿ ಮೂರರಷ್ಟು ಸಾಲವನ್ನು ನೀಡವ ನಿಯಮವಿದ್ದು ಸಾಲ ಪಡೆದ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಅಂತಹವರಿಗೆ ಈ ನಿಯಮ ಅಳವಡಿಕೆಯಾಗಲಿದೆ ಎಂದರಲ್ಲದೆ ಮಧುಗಿರಿ ತಾಲ್ಲೂಕಿಗೆ ಸಾಲ ಸೌಲಭ್ಯದಲ್ಲಿ ಪ್ರೋತ್ಸಾಹಿಸಿದಂತೆ ಚಿ.ನಾ.ಹಳ್ಳಿ ತಾಲ್ಲೂಕಿಗೆ ಜೆ.ಸಿ.ಮಾಧುಸ್ವಾಮಿಯವರಿಗೋಸ್ಕರವಾದರೂ ಸಾಲವನ್ನು ಹೆಚ್ಚಾಗಿ ನೀಡುತ್ತಾ ಬಡವರ ಆಥರ್ಿಕ ನೆರವಿಗ ಆಂದೋಲನ ಕೈಗೊಳ್ಳಲಿದ್ದೇವೆ ಎಂದರು.
ತಾವು ಸದೃಡವಾಗಲು ಮತ್ತೊಬ್ಬರ ಬಳಿ ಹಣಕ್ಕಾಗಿ ಪರದಾಡುವ ಬಡವರಿಗೆ ಬ್ಯಾಂಕ್ ಸಾಲ ಸೌಲಭ್ಯ ನೀಡಿ ನೆರವಾಗಲಿದೆ, ಅಲ್ಲದೆ ವ್ಯವಸಾಯೇತರ ಕಾರ್ಯಗಳಿಗೂ ಬ್ಯಾಂಕ್ ಸಾಲ ನೀಡುತ್ತಿದ್ದು ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ಹೆಚ್ಚು ಅವಕಾಶವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಸಂಘ ಸಂಸ್ಥೆಗಳ ಸದಸ್ಯರು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಅಭಿವೃದ್ದಿ ಸಾಧ್ಯವಾಗುವುದು ಎಂದರಲ್ಲದೆ, ಈಗಿನ ಕಾಲಮಾನಕ್ಕೆ ತಕ್ಕಂತೆ ಮಹಿಳೆಯರು ಮುಂದೆ ಬಂದು ಆಥರ್ಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಬಲೀಕರಣ ಹೊಂದಬೇಕಾಗಿದೆ ಎಂದರು. ಜಿಲ್ಲಾ ಬ್ಯಾಂಕಿನಿಂದ ಸಾಲ ಪಡೆದವರು ತಮ್ಮ ಹಲವು ಸಮಸ್ಯೆಗಳನ್ನು ನಿವಾರಿಸಿ ನೆರವು ಪಡೆದುಕೊಂಡಿದ್ದಾರೆ ತಮ್ಮ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿ ಸಂಘ ಸಂಸ್ಥೆಗಳಿಗೆ ಜಿಲ್ಲಾ ಬ್ಯಾಂಕ್ ನೀಡುವ ಸಾಲವನ್ನು ಪಡೆದು ಉತ್ತಮ ಕಾರ್ಯಗಳಿಗೆ ಬಳಸಿಕೊಂಡು ಸಾಲವನ್ನು ಮರುಪಾವತಿ ಮಾಡಬೇಕು ಹಾಗೂ ಮಹಿಳೆಯರು ಚೀಟಿ ಮಾಡುವುದನ್ನು ಬಿಡಬೇಕು ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜಿಲ್ಲಾ ಬ್ಯಾಂಕ್ ತಾಲ್ಲೂಕಿನ ಎಲ್ಲಾ ಕೃಷಿ ಅವಲಂಬಿತ ಸಂಘ ಸಂಸ್ಥೆಗಳಿಗೆ ಸಾಲ ನೀಡಿದ್ದು ಕನಿಷ್ಠ 5 ಲಕ್ಷದ ವರೆಗೆ ಸಂಘಗಳಿಗೆ ಸಾಲ ವಿತರಣೆ ಮಾಡಿದೆ, ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಸಾಲ ವಿತರಣೆ ಮಾಡಲಿದ್ದೇವೆ ಎಂದ ಅವರು ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎನ್.ರಾಜಣ್ಣನವರ ಆಲೋಚನೆಗಳು ಒಂದೇ ಅವರಿಂದ ಜಿಲ್ಲೆ ಉತ್ತಮ ಅಭಿವೃದ್ದಿಯಾಗಲಿದೆ ಎಂದರು.
ಸಮಾರಂಭದಲ್ಲಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಪಿ.ರವಿಶಂಕರ್, ಕಾಂತರಾಜು, ದಯಾನಂದ್ , ಪಾರ್ವತಮ್ಮ, ಜಿ.ಎಸ್.ಕುಶಲ ಮುಂತಾದವರಿದ್ದರು.
ಹೇಮೆ ಹರಿಯಲು ಹೋರಾಡಿದ ಸಂಘ ಸಂಸ್ಥೆಗಳಿಗೆ ಅಭಿನಂದನೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜು.22: ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ 26 ಕೆರೆಗಳ ನೀರು ಹಾಯಿಸಲು ಸಕರ್ಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಹಲವು ಸಂಘ ಸಂಸ್ಥೆಗಳು, ಹೋರಾಟಗಾರರು ಹಾಗೂ ಮಠಾಧೀಶರ ಪರವಾಗಿ ಸಕರ್ಾರದ ನೀರಾವರಿ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘ, ಕ.ರ.ವೇ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಮಾತನಾಡಿ, ಸಕರ್ಾರ ಹೇಮಾವತಿ ನಾಲೆಯಿಂದ 0.80 ಟಿ.ಎಂ.ಸಿ.ನೀರನ್ನು ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತೀಮರ್ಾನಿಸಿದ್ದು, ಈ ಕಾಮಗಾರಿ ಕೈಗೆತ್ತಿಕೊಳ್ಳಲು 102 ಕೋಟಿ ರೂಗಳ ಮಂಜೂರಾತಿ ಆದೇಶವನ್ನು ನೀಡಿದೆ. ಇದರಿಂದಾಗಿ ತಾಲೂಕಿನ 22 ಕೆರೆಗಳಿಗೆ ಗುರುತ್ವಾಕರ್ಷಣ ಬಲದಲ್ಲಿ ನೀರು ಹರಿಯಲಿದ್ದು, ಉಳಿದ ನಾಲ್ಕು ಕೆರೆಗಳಾದ ನಡುವನಹಳ್ಳಿ, ಜೆ.ಸಿ.ಪುರ, ಗೋಡೆಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದ ಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸಲು ತೀಮರ್ಾನಿಸಿರುವುದು ಸಂತೋಷದಾಯಕ ಕಾರ್ಯ ಎಂದರಲ್ಲದೆ ತಾಲೂಕಿನ ಜನತೆಯ ಬಹು ದಿನಗಳ ಆಸೆ ಈಡೇರಿದಂತಾಗಿದೆ ಎಂದರು. ಕುಡಿಯುವ ನೀರಿಗಾಗಿ ತಾಲೂಕಿನಲ್ಲಿ ಕಳೆದ 2006ರಿಂದ ವಿವಿಧ ರೀತಿಯ ಹೋರಾಟಗಳು ಹಾಗೂ ಈ ಭಾಗದ ಮಠಾಧೀಶ್ವರರ ನೈತಿಕ ಬೆಂಬಲದ ಫಲವಾಗಿ ಈ ಯೋಜನೆಗೆ ಸಕರ್ಾರ ಅನುಮೋದನೆ ನೀಡಿದೆ ಎಂದರು.
ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ಬೋರನ ಕಣಿವೆ ಜಲಾಶಯ ಹೊರತುಪಡಿಸಿ 22 ಕೆರೆಗಳಿಗೆ ಮಾತ್ರ ಸಕರ್ಾರ ನೀರು ಹರಿಸಲು ಒಪ್ಪಿಗೆ ನೀಡಿದೆ, ಇದರಿಂದಾಗಿ ನಮ್ಮ ಹೋರಾಟ ಇನ್ನು ಮುಂದೆ ಸಾಗಬೇಕಾಗಿದೆ, ನಮ್ಮ ಹೋರಾಟವಿರುವುದು ಬೋರನಕಣಿವೆ ಜಲಾಶಯಕ್ಕೆ ನೀರು ತರುವುದೇ ನಮ್ಮ ಅಂತಿಮ ಗುರಿ ಎಂದರು.
ಹುಳಿಯಾರಿನಲ್ಲಿ ಸುಮಾರು 2 ತಿಂಗಳ ಕಾಲ ನಡೆಸಿದ ಧರಣಿಗೆ ಬೆಂಬಲಿಸಿದ 63 ಸಂಘಟನೆಗಳಿಗೆ ಹಾಗೂ ತುಮಕೂರಿನ ಹೃದ್ರೋಗ ತಜ್ಞ ಜಿ.ಪರಮೇಶ್ವರಪ್ಪ ನವರ ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ನಾವು ಹುಳಿಯಾರಿನಲ್ಲಿ ನಡೆಸಿದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ರವರು ಅಂದು ನೀಡಿ ಹೋದ ಭರವಸೆಯನ್ನು ಭಾಗಶಃ ಪೂರೈಸಿದ್ದಾರೆ ಎಂದರು.
ಈ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಈಗಿನ ಉಸ್ತುವಾರಿ ಸಚಿವ ವಿ.ಸೋಮಣ್ಣನವರನ್ನು ತಾಲೂಕಿನ ಜನತೆಯ ಪರವಾಗಿ ಅಭಿನಂದಿಸಿದರು.
ಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತಿಮಾ, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್).ತಾ.ಪಂ. ಸದಸ್ಯರುಗಳಾದ ಲತಾ ವಿಶ್ವನಾಥ್, ಚೇತನ ಗಂಗಾಧರಯ್ಯ, ಹೇಮಾವತಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಪುರಸಭಾ ಸದಸ್ಯರುಗಳಾದ ಸಿ.ಎಸ್.ರಮೇಶ್, ರಾಜಣ್ಣ, ಸಿ.ಟಿ.ವರದರಾಜು, ಕೃಷ್ಣಮೂತರ್ಿ, ಎಂ.ಎನ್.ಸುರೇಶ್, ಜೆ.ಡಿ.ಎಸ್. ಕಾರ್ಯಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಕ.ರ.ವೇ. ಅಧ್ಯಕ್ಷ ಸಿ.ಟಿ.ಗುರುಮೂತರ್ಿ ರುದ್ರೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.