Wednesday, October 19, 2011ಗಣಿ ಪ್ರದೇಶದ ಗ್ರಾಮಸ್ಥರಿಂದ ತಲಸ್ಪಶರ್ಿ ಮಾಹಿತಿ ಪಡೆದ ಸಿ.ಇ.ಸಿ ತಂಡಚಿಕ್ಕನಾಯಕನಹಳ್ಳಿ,ಅ.19: ಗಣಿಗಾರಿಕೆ ನಡೆಯ ಬೇಕೋ, ಬೇಡವೋ ಎಂಬ ಪ್ರಶ್ನೆಗೆ ಹಲವರು ಬೇಡವೇ ಬೇಡ ಎಂದರೆ, ಕೆಲವು ಜನ ಗ್ರಾಮಸ್ಥರು ದೊಡ್ಡ ಗಾತ್ರದ ಯಂತ್ರಗಳನ್ನು ಬಳಸಿಕೊಂಡು ಗಣಿಗಾರಿಕೆ ನಡೆಸುವುದಾದರೇ ಬೇಡ. ಸ್ಥಳೀಯ ಜನರಿಗೆ ಉದ್ಯೋಗ ನೀಡುವುದು ಸೇರಿದಂತೆ ಗಣಿ ಪರವಾನಿಗೆ ನೀಡುವ ಸಂದರ್ಭದಲ್ಲಿ ವಿಧಿಸಿರುವ ನಿಯಮಗಳಂತೆ ನಡೆಯುವುದಾದರೆ ಗಣಿಗಾರಿಕೆ ಮುಂದುವರೆಯಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಗಣಿ ಪ್ರದೇಶಗಳಿಗೆ ಸುಪ್ರಿಂ ಕೋಟರ್್ನ ನಿದರ್ೇಶನದ ಮೇರಿಗೆ ನೇಮಕಕೊಂಡಿರುವ ಸಿ.ಇ.ಸಿ.ತಂಡದ ತಜ್ಞರಾದ ಡಾ.ಅರುಣ ಕುಮಾರ್, ಡಾ.ಸೋಮಶೇಖರ್ ಗ್ರಾಮಸ್ಥರೊಮದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಜನರು ವ್ಯಕ್ತಪಡಿಸದ ಮುಖ್ಯ ಅಭಿಪ್ರಾಯವಿದು. ಗಣಿ ಪ್ರದೇಶದ ಗ್ರಾಮವಾದ ಹೊನ್ನೆಬಾಗಿ, ಗೊಲ್ಲರಹಳ್ಳಿ ಹಾಗೂ ಬುಳ್ಳೇನಹಳ್ಳಿ ಗ್ರಾಮಸ್ಥರಗಳೊಂದಿಗೆ ಸಂವಾದ ನಡೆಸಿದ ಸಿ.ಇ.ಸಿ. ತಂಡ ಈ ಭಾಗದ ಜನರ ಸಮಾಜೋಆಥರ್ಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿತು. ಈ ಸಂದರ್ಭದಲ್ಲಿ ತಜ್ಞರು ಗ್ರಾಮಸ್ಥರಗಳೊಂದಿಗೆ ಮಾತನಾಡಿ, ಇಲ್ಲಿ ದೊಡ್ಡ ಮಟ್ಟದಲ್ಲಿ ಗಣಿಗಾರಿಕೆ ನಡೆಯುವ ಮೊದಲು ಇಲ್ಲಿನ ಹೊಲಗಳಲ್ಲಿ ಆಹಾರ ಧಾನ್ಯಗಳ ಇಳುವರಿ ಎಕರೆಗೆ ಎಷ್ಟಿತ್ತು, ಈಗ ಎಷ್ಟಿದೆ, ಒಂದು ಎಕರೆ ತೋಟದಲ್ಲಿ ಮೊದಲು ಬೀಳುತ್ತಿದ್ದ ತೆಂಗಿನ ಕಾಯಿಗಳೆಷ್ಟು, ಅಡಿಕೆ ಇಳುವರಿಗಳೆಷ್ಟು, ಈಗ ಎಷ್ಟಿದೆ, ಜನರ ಆರೋಗ್ಯದ ಮೇಲೆ ಗಣಿಗಾರಿಕೆ ಯಾವ ರೀತಿಯ ದುಷ್ಪರಿಣಾಮ ಬೀರಿದೆ, ಜಾನುವಾರಗಳ ಆರೋಗ್ಯದ ಮೇಲೆ ಯಾವ ಪ್ರಮಾಣದಲ್ಲಿ ಕೇಡುವುಂಟು ಮಾಡಿದೆ, ಅಂತರ್ಜಲ ಎಷ್ಟು ಕುಸಿದಿದೆ, ಬ್ಲಾಸ್ಟಿಂಗ್ನಿಂದ ಆಗಿರುವ ಅನಾಹುತಗಳೇನು ಎಂಬ ಹಲವು ರೀತಿಯ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲು ಗ್ರಾಮಸ್ಥರಿಗೆ ಪ್ರಶ್ನೆಗಳನ್ನು ಕೇಳಿ ತಲ ಸ್ಪಶರ್ಿ ವಿವರಗಳನ್ನು ಪಡೆದರು. ಈ ಸಂದರ್ಭದಲ್ಲಿ ಗೊಲ್ಲರಹಳ್ಳಿ ಗ್ರಾಮಸ್ಥರು ತಾವು ಕುಡಿಯುತ್ತಿರುವ ನೀರಿನ ಗುಣ ಮಟ್ಟವನ್ನು ತೋರಿಸಿದರಲ್ಲದೆ, ತಮಗಾಗಿರುವ ಚರ್ಮ ರೋಗದ ಬಗ್ಗೆ, ಹೃದ್ರೋಗ, ಉಬ್ಬಸ ಮುಂತಾದ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಜ್ಞರೊಂದಿಗೆ ತೋಟಗಾರಿಕೆ ಇಲಾಖೆಯ ಉಪ ನಿದೇರ್ಶಕ ಪ್ರಸಾದ್, ಸಹಾಯಕ ನಿದೇರ್ಶಕ ರೇಣುಕ ಪ್ರಸಾದ್, ತಹಶೀಲ್ದಾರ್ ಎನ್.ಆರ್. ಉಮೇಶ ಚಂದ್ರ, ಪಿ.ಎಸೈ. ಚಿದಾನಂದ ಮೂತರ್ಿ ಹಾಜರಿದ್ದರು.ಬಾಕ್ಸ್:1ಸಿ.ಇ.ಸಿ ತಂಡ ಗುರುವಾರ ಗಣಿ ಪ್ರದೇಶದ ಉಳಿದ ಗ್ರಾಮಗಳಾದ ಗೋಡೆಕೆರೆ, ಸೊಂಡೇನಹಳ್ಳಿ, ಸೋಮನಹಳ್ಳಿ, ನಡುವನಹಳ್ಳಿ, ಬಗ್ಗನಹಳ್ಳಿ ಭಾಗದ ಗ್ರಾಮಗಳಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.ಮಾಹಿತಿಯ ಕೊರತೆ: ಸಿ.ಇ.ಸಿ.ತಂಡ ಗಣಿ ಪ್ರದೇಶಗಳಿಗೆ ಆಗಮಿಸಿ ಜನರಿಂದ ಮಾಹಿತಿ ಪಡೆಯುತ್ತದೆ ಎಂಬು ವಿಷಯ ತಿಳಿದಿತ್ತು ಆದರೆ ಬುಧವಾರವೇ ಹೊನ್ನೆಬಾಗಿ ಭಾಗದ ಹಳ್ಳಿಗಳಿಗೆ ಆಗಮಿಸುತ್ತದೆ ಎಂಬ ಮಾಹಿತಿ ತಮಗೆ ತಿಳಿದಿರಲಿಲ್ಲವೆಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಲ್ಲಿ 36 ಪಂಪ್ ಸೆಟ್ ವಿತರಣೆಚಿಕ್ಕನಾಯಕನಹಳ್ಳಿ,ಅ.18:ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದ ವತಿಯಿಂದ ತಾಲೂಕಿನ ಫಲಾನುಭವಿಗಳಿಗೆ ಮಂಜೂರಾಗಿರುವ ವಿವಿಧ ಸವಲತ್ತುಗಳನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಿತರಿಸಿದರು. ಪರಿಶಿಷ್ಟ ಜಾತಿಯವರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 36 ಜನ ಫಲಾನುಭವಿಗಳಿಗೆ ಒಂದು ಲಕ್ಷ ರೂ ಮೌಲ್ಯದ ಪಂಪ್ ಸೆಟ್ಗಳನ್ನು ವಿತರಿಸಲಾಯಿತು, ಒಂದು ಲಕ್ಷ ರೂಗಳ ಪೈಕಿ 86 ಸಾವಿರ ಸಕರ್ಾರದ ಸಬ್ಸಿಡಿಯಾದರೆ ಉಳಿದ 14 ಸಾವಿರ ರೂಗಳನ್ನು ಫಲಾನುಭವಿಗಳು ಸಂಬಂಧಿಸಿದ ನಿಗಮಕ್ಕೆ ಮರುಪಾವತಿ ಮಾಡಬೇಕು. ದೊಡ್ಡ ಬಿದರೆಯ ಶ್ರೀ ರೇಣುಕಾಂಬ ಸುಜಲ ಜಲಾನಯನ ಸಂಘದ 14 ಮಹಿಳಾ ಸದಸ್ಯರಿಗೆ ತಲಾ 25 ಸಾವಿರ ರೂ ಗಳ ಸಾಲ ಸೌಲಭ್ಯ ನೀಡಲಾಯಿತು, ಇದರಲ್ಲಿ 10 ಸಾವಿರ ಸಬ್ಸಿಡಿ, ಉಳಿದ 15 ಸಾವಿರ ಹಣವನ್ನು ಮರು ಪಾವತಿ ಮಾಡುವ ಷರತ್ತಿಗೊಳಪಟ್ಟು ಈ ಸಾಲವನ್ನು ನೀಡಲಾಗಿದೆ. ಅದೇ ರೀತಿ ಒಂದು ಟಾಟಾ ಇಂಡಿಕಾ ಕಾರ್ಗೆ ಸಾಲ ಸೌಲಭ್ಯವನ್ನು ಒದಗಿಸಲಾಗಿದೆ. ಈ ಸಂದರ್ಭದಲ್ಲಿ ತಾ.ಪಂ. ಇ.ಓ. ದಯಾನಂದ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಅಭಿವೃದ್ದಿ ನಿಗಮದ ಮಧು ಉಪಸ್ಥಿತರಿದ್ದರು.(ಪೊಟೋ ಇದೆ. 18 ಸಿ.ಎನ್.ಎಚ್.ಪಿ1)ರೈತರಿಗೆ ಡೀಸೆಲ್ ದರದಲ್ಲಿ ರಿಯಾಯಿತಿ ನೀಡಲು ರೈತ ಮೋಚರ್ಾ ಒತ್ತಾಯಚಿಕ್ಕನಾಯಕನಹಳ್ಳಿ,ಸೆ.18: ಭಾರತೀಯ ಜನತಾ ಪಕ್ಷದ ರೈತ ಮೋಚರ್ಾ ಸಮಿತಿಯ ಕಾರ್ಯಗಾರಿ ಸಮಿತಿ ಸಭೆಯು ತಾ.ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ ಗುರುವಾಪುರ ಜಿ.ಎಸ್.ಶ್ರೀನಿವಾಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಜಿಲ್ಲಾ ರೈತ ಮೋಚರ್ಾ ಅಧ್ಯಕ್ಷರಾದ ರೇಣುಕಯ್ಯ, ಪ್ರಧಾನ ಕಾರ್ಯದಶರ್ಿ ಗರುಡಯ್ಯ, ತಾ.ಬಿಜೆಪಿ ಅಧ್ಯಕ್ಷ ಶಿವಣ್ಣನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ರೈತ ಮೊಚರ್ಾದಿಂದ ತಾಲ್ಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ರೈತ ಪ್ರಹರಿಗಳನ್ನು ನೇಮಿಸುವಂತೆಯೂ ತಾಲ್ಲೂಕಿನಲ್ಲಿ ವ್ಯವಸಾಯಕ್ಕೆ ಬಳಸುವ ಜನುವಾರುಗಳ ಸಂಖ್ಯೆ ಕಡಿಮೆ ಇರುವುದರಿಂದ ರೈತರು ಟ್ರಾಕ್ಟರ್ ಅವಲಂಬಿಸಿರುವುದರಿಂದ ರೈತರಿಗೆ ವ್ಯವಸಾಯಕ್ಕೆ ಉತ್ತೇಜನ ನೀಡುವ ಸಲುವಾಗಿ ರಿಯಾಯಿತಿ ದರದಲ್ಲಿ ಡೀಸೆಲ್ ಪೂರೈಸುವಂತೆ ಕೇಂದ್ರ ಸಕರ್ಾರವನ್ನು ಒತ್ತಾಯಿಸಲಾಯಿತು.ರಾಜ್ಯ ಸಕರ್ಾರದಿಂದ ಬಿಡುಗಡೆ ಮಾಡಿರುವ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸುವರ್ಣಬೂಮಿ ಯೋಜನೆಯ ಸಹಾಯ ಧನವನ್ನು ಅಧಿಕಾರಿಗಳು ವಿಳಂಬೆ ಮಾಡದೆ ತಕ್ಷಣ ರೈತರಿಗೆ ತಲುಪಿಸವುದು ಹಾಗೂ ರೈತರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಪಂದಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೈಗೊಳಲಾಗಿದೆ ಎಂದು ತಾಲೂಕು ರೈತ ಮೋಚರ್ಾದ ಪ್ರಧಾನ ಕಾರ್ಯದಶರ್ಿ ಕೆ.ಎಸ್.ಪರಮೇಶ್ವರಯ್ಯ ತಿಳಿಸಿದ್ದಾರೆ.ಸಭೆಯಲ್ಲಿ ಜಿಲ್ಲಾ ರೈತ ಮೋಚರ್ಾದ ಕಾರ್ಯದಶರ್ಿ ಎ.ಬಿ.ಶರತ್ ಕುಮಾರ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.ಮಹಿಳಾ ಜನಪ್ರತಿನಿಧಿಗಳಿಗೆ ರಾಜ್ಯಮಟ್ಟದ ವಿಚಾರ ಸಂಕೀರಣಚಿಕ್ಕನಾಯಕನಹಳ್ಳಿ.ಅ.17: ಮಹಿಳಾ ಜನಪ್ರತಿನಿಧಿಗಳ ರಾಜ್ಯಮಟ್ಟದ ವಿಚಾರ ಸಂಕೀರಣ ಮುಂಬರುವ ನವೆಂಬರ್ನಲ್ಲಿ ಸಿದ್ದಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ತಿಳಿಸಿದ್ದಾರೆ. ನವೆಂಬರ್ 17 ರಿಂದ 19ರವರೆಗೆ ನಡೆಯುವ ವಿಚಾರ ಸಂಕೀರಣದಲ್ಲಿ ಜನತಂತ್ರ ಮತ್ತು ಸಂವಿಧಾನ, ಮಾನವ ಹಕ್ಕುಗಳು, ಕೌನ್ಸಿಲರ್ಗಳ ಪಾತ್ರ ಹಾಗೂ ಸ್ಥಳೀಯ ಸಕರ್ಾರದಲ್ಲಿ ಮಹಿಳಾ ಜನಪ್ರತಿನಿಧಿಗಳು ಸಕ್ರೀಯವಾಗಿ ಭಾಗವಹಿಸಬೇಕಾದರೆ ಆಡಳಿತಾತ್ಮಕವಾಗಿ ತರಬೇಕಾದ ಬದಲಾವಣೆಗಳ ಬಗ್ಗೆ ಚಚರ್ಿಸಲಾಗುವುದು ಎಂದರು. ಈ ಸಭೆಯಲ್ಲಿ ನಗರ ಸಂಶೋಧನಾ ಕೇಂದ್ರದ ಮಂಗಳೂರು ವಿಭಾಗದ ಹರಿಣಿ, ಬೆಂಗಳೂರು ವಿಭಾಗದ ಗುರುರಾಜ್ ಬುಥ್ಯಾ ಉಪಸ್ಥಿತರಿದ್ದರು.