Friday, August 26, 2011


ಇಂದು ಮೊರಾಜರ್ಿ ದೇಸಾಯಿ ಶಾಲೆಯ ನೂತನ ಕಟ್ಟಡದ ಉದ್ಘಾಟನೆ
  • ನಾಲ್ಕುವರೆ ಎಕರೆ ಪ್ರದೇಶದಲ್ಲಿ 4.60 ಕೋಟಿ ರೂಗಳ ಕಟ್ಟಡ
  • ಶೌಚಾಲಯದ ನೀರು ಪುನರ್ ಬಳಕೆಯ ತಂತ್ರಜ್ಞಾನ
  • ಸಮಾಜ ಕಲ್ಯಾಣ ಇಲಾಖೆಯ ಸಚಿವರಿಂದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಆ.26 : ಆರರಿಂದ ಎಸ್.ಎಸ್.ಎಲ್.ಸಿ ವರೆಗಿನ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಸತಿ ಸಹಿತ ಶಾಲೆಯಾಗಿ ರೂಪುಗೊಂಡಿರುವ ಮೊರಾಜರ್ಿ ದೇಸಾಯಿ ವಸತಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೊಸ ಭರವಸೆಯನ್ನು ಮೂಡಿಸುತ್ತಿದೆ
ಈ ನಿಟ್ಟಿನಲ್ಲಿ ಸಕರ್ಾರ ತಾಲ್ಲೂಕಿಗೆ ಒಂದರಂತೆ ಇಂತಹ ಶಾಲೆಗಳನ್ನು ಆರಂಭಿಸಿದೆ, ಈ ಪೈಕಿ ಚಿಕ್ಕನಾಯಕನಹಳ್ಳಿ ಪಟ್ಟಣದ ಹೊರವಲಯದ ಮೇಲನಹಳ್ಳಿ ಬಳಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನರ್ಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಿಮರ್ಿಸಿರುವ ಮೊರಾಜರ್ಿದೇಸಾಯಿ ವಸತಿ ಶಾಲೆ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ.
ಸಮಾಜ ಕಲ್ಯಾಣ ಹಾಗೂ ಬಂಧಿಖಾನೆ ಸಚಿವ ಎ.ನಾರಾಯಣಸ್ವಾಮಿ ಈ ಕಟ್ಟಡವನ್ನು ಇದೇ 27ರಂದು (ಇಂದು) ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಸುಮಾರು 250 ವಿದ್ಯಾಥರ್ಿಗಳ ವಾಸ್ತವ್ಯಕ್ಕೆ ಹಾಗೂ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ನಿಮರ್ಿಸಿರುವ ಸುಸಜ್ಜಿತ ಈ ಕಟ್ಟಡ ನಾಲ್ಕುವರೆ ಎಕರ ಪ್ರದೇಶದಲ್ಲಿ ಹರಡಿಕೊಂಡಿದೆ. ಒಂದುವರೆ ಎಕರೆ ಪ್ರದೇಶದಲ್ಲಿ 6 ಬ್ಲಾಕ್ಗಳಲ್ಲಿ ಕಟ್ಟಡ ರೂಪುಗೊಂಡಿದ್ದರೆ 3 ಎಕರೆ ಪ್ರದೇಶದಲ್ಲಿ ಆಟದ ಮೈದಾನ ಸಿದ್ದವಾಗಿದೆ.
ನಾಲ್ಕು ಕೋಟಿ ಅರವತ್ತು ಲಕ್ಷ ರೂಗಳ ವೆಚ್ಚದಲ್ಲಿ ಕಟ್ಟಿರುವ ಈ ಶಾಲೆ ಆರು ಬ್ಲಾಕ್ಗಳನ್ನು ಹೊಂದಿದೆ. ಶಾಲಾ ಸಂಕಿರ್ಣ, ಬಾಲಕರ ವಸತಿ ಗೃಹ, ಅಡುಗೆ ಮತ್ತು ಭೋಜನ ಶಾಲೆ, ಬಾಲಕಿಯರ ಗೃಹ, ಬೋಧಕ ವಸತಿ ಗೃಹ, ಬೋಧಕೇತರ ವಸತಿ ಗೃಹಗಳೆಂದು ವಿಂಗಡಿಸಲಾಗಿದೆ.
ಶಾಲಾ ಸಂಕಿರ್ಣವು ಒಂದು ನೂರು ಚದುರದ ವಿಶಾಲ ಕಟ್ಟಡದಲ್ಲಿ ಹರಡಿಕೊಂಡಿದ್ದು 12 ವಿಶಾಲ ಕೊಠಡಿಗಳಿವೆ. 4 ದೊಡ್ಡ ಕ್ಲಾಸ್ ರೂಂಗಳಿವೆ ಒಂದು ಪ್ರಯೋಗಾಲಯ, ಒಂದು ಗ್ರಂಥಾಲಯ ಒಂದು ಕಂಪ್ಯೂಟರ್ ಹಾಲ್, ಒಂದು ಯೋಗ ಕೊಠಡಿ, ಪ್ರಿನ್ಸಿ ಆಫೀಸ್, ಸ್ಟಾಪ್ ರೂಂ, ಸ್ಟೋರ್ ರೂಂಗಳನ್ನು ಒಳಗೊಂಡಿದೆ.
ಬಾಲಕರ ವಸತಿ ಗೃಹವು 80 ಚದುರ ಕಟ್ಟಡವೊಂದಿದ್ದು 12 ರೂಂಗಳನ್ನು ಹೊಂದಿದೆ, ಬಾಲಕರು ಓದಲು ಹಾಗೂ ಮಲಗಲು ವಿಶಾಲವಾದ ಪ್ರದೇಶ ಇದಾಗಿದೆ. ಅಡುಗೆ ತಯಾರಿಸಲು ಹಾಗೂ ಊಟ ಮಾಡಲು 35 ಚದುರದಲ್ಲಿ ಕಟ್ಟಲಾಗಿರುವ ಈ ಕಟ್ಟಡದಲ್ಲಿ 250ಕ್ಕೂ ಹೆಚ್ಚು ಮಕ್ಕಳು ಕುಳಿತು, ಊಟ ಮಾಡುವ ವ್ವವಸ್ಥೆ ಇದೆ.
ಬಾಲಕಿಯರ ವಸತಿ ಗೃಹವು 80 ಚದುರ ಇದ್ದು 12 ಕೊಠಡಿಗಳಿವೆ, ಇದರ ಪಕ್ಕ ಬೋಧಕರ ವಸತಿ ಗೃಹಗಳಿವೆ ಡಬಲ್ ಬೆಡ್ ರೂಂನ 4 ಮನೆಗಳ 28 ಚದುರ ವಿಶಾಲತೆಯನ್ನು ಹೊಂದಿದೆ. ಬೋಧಕೇತರರ ವಸತಿಗಾಗಿ ಸಿಂಗಲ್ ಬೆಡ್ರೂಂನ 4 ಮನೆಗಳು 15 ಚದುರದಲ್ಲಿದೆ.
ಶೌಚದ ನೀರು ಪುನರ್ ಬಳಕೆ : ಈ ಕಟ್ಟಡದ ಮತ್ತೊಂದು ವಿಶೇಷವೆಂದರೆ ಶೌಚಾಲಯಕ್ಕೆ ಬಳಸುವ ನೀರನ್ನು ಪುನ: ಬಳಸಲು ಯೋಗ್ಯವಾಗುವಂತೆ ಮಾಡುವ ಡಿವ್ಯಾಟ್ ತಂತ್ರಜ್ಞಾನವನ್ನು ಬಳಸಿದ್ದು ಈ ತಂತ್ರಜ್ಞಾನವನ್ನು ಅಳವಡಿಸಲು ನ್ಯೂಜಿಲೆಂಡ್ನ ಇಂಜನಿಯರ್ರವರನ್ನು ಇಲ್ಲಿಗೆ ಕರೆಯಿಸಿ ಈ ವ್ಯವಸ್ಥೆಯನ್ನು ಅಳವಡಿಸಿರುವುದು ಈ ಕಟ್ಟಡದ ವಿಶೇಷವಾಗಿದೆ. ಮೊರಾಜರ್ಿ ಶಾಲೆಗಳ ಕಟ್ಟಡಗಳ ಪೈಕಿ ರಾಜ್ಯದ ಯಾವುದೇ ಭಾಗದಲ್ಲಿ ಈ ತರಹದ ತಂತ್ರಜ್ಞಾನವನ್ನು ಅಳವಡಿಸಿಲ್ಲ, ಇದೇ ಮೊದಲು ಮೇಲನಹಳ್ಳಿ ಶಾಲೆಗೆ ಅಳವಡಿಸಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾಧಿಕಾರಿ ಸಿ.ಟಿಮುದ್ದುಕುಮಾರ್ ತಿಳಿಸಿದ್ದಾರೆ.
ಮಳೆ ನೀರು ಜಲ ಮರು ಪೂರ್ಣ, ಸೋಲಾರ್ ಅಳವಡಿಕೆಯಂತಹ ಪರಿಸರ ಸ್ನೇಹಿ ಕ್ರಮಗಳನ್ನು ಈ ಕಟ್ಟಡ ಹೊಂದಿದೆ.
ಇಷ್ಟು ಚೆಂದದ ಕಟ್ಟಡವನ್ನು ಇದೇ 27ರಂದು ಮಧ್ಯಾಹ್ನ 3ಕ್ಕೆ ಮಕ್ಕಳ ಉಪಯೋಗಕ್ಕೆ ಸಚಿವ ಎ.ನಾರಾಯಣಸ್ವಾಮಿ ವಿನಿಯೋಗಿಸಲು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ಬಾಬು ವಹಿಸಲಿದ್ದು, ಜಿ.ಪಂ.ಅಧ್ಯಕ್ಷ ಡಾ.ಬಿ.ಎನ್.ರವಿನಾಗರಾಜಯ್ಯ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯರುಗಳು ಜಿ.ಪಂ, ತಾ.ಪಂ. ಹಾಗೂ ಗ್ರಾ.ಪಂ. ಜನಪ್ರತಿನಿಧಿಗಳು ಈ ಶಾಲೆಗೆ ಸಂಬಂಧಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.