Wednesday, August 20, 2014


ದೇವರಾಜೇಅರಸ್ರವರನ್ನು ಬಡವರು, ಕೂಲಿಕಾಮರ್ಿಕರು ಪೂಜಿಸುತ್ತಿದ್ದಾರೆ
ಚಿಕ್ಕನಾಯಕನಹಳ್ಳಿ,ಆ.20 : ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗಲೂ ರೈತಾಪಿ ಕೆಲಸ ಮಾಡುತ್ತಿದ್ದ ಡಿ.ದೇವರಾಜು ಅರಸ್ರವರು ಜಾರಿಗೆ ತಂದಂತಹ ಯೋಜನೆಗಳಿಂದ ಶ್ರೀಮಂತರು ತೆಗಳಿದರು, ಲಕ್ಷಾಂತರ ಬಡವರು, ಕೂಲಿ ಕಾಮರ್ಿಕರು, ಹಿಂದುಳಿದ ವರ್ಗದವರು ರಾಜ್ಯದಲ್ಲಿ ಬದಲಾವಣೆ ತಂದ ಪರಿವರ್ತನೆಯ ರೂವಾರಿ ಎಂದು ಪೂಜಿಸುತ್ತಿದ್ದಾರೆ ಎಂದು ಮೈಸೂರು ಇತಿಹಾಸ ತಜ್ಞ ಪಿ.ವಿ.ನಂಜರಾಜೇ ಅರಸ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಡಿ.ದೇವರಾಜ ಅರಸುರವರ 99ನೇ ಜನ್ಮದಿನಾಚಾರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್ ಭೂಸ್ವಾದೀನಾ ಕಾಯೆಯಂತಹ ಕಾರ್ಯಕ್ರಮವನ್ನು ಜಾರಿಗೆ ತರುವ ಮೂಲಕ ಲಕ್ಷಾಂತರ ಬಡ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ಅರಸರು ಬಡವರ ಕೆಲಸ ಮಾಡಬೇಕೆಂದು ತೀಮರ್ಾನಿಸಿದರೆ ಅದನ್ನು ಜಾರಿಗೆ ತರುವವರೆಗೂ ಬಿಡುತ್ತಿರಲಿಲ್ಲ, ದೀನ ದಲಿತ ಹಿಂದುಳಿದ ಜನಾಂಗಗಳ ಬಡಬಗ್ಗರಿಗೆ ಆಶಾಕಿರಣವಾಗಿದ್ದರು, ಹಿಂದುಳಿದವರು ದೀರ್ಘ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದ್ದವರನ್ನು ಬಡಿದೆಬ್ಬಿಸಿ ಅವರಲ್ಲಿ ಜಾಗೃತಿ ಮೂಡಿಸಿದರು, ಇಂದಿರಾಗಾಂಧಿ ಜಾರಿಗೆ ತಂದ 20ಅಂಶಗಳ ಕಾರ್ಯಕ್ರಮವನ್ನು ಕನರ್ಾಟಕದಲ್ಲಿ ಅರಸ್ರವರು ಮಾತ್ರ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದರೆ ಹೊರತು ಬೇರೆ ಯಾವ ರಾಜ್ಯದಲ್ಲೂ ಜಾರಿಗೆ ತರಲಿಲ್ಲ ಎಂದರಲ್ಲದೆ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ಆಡಳಿತಾವಧಿಯ 1918ರಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಶ್ರಮಿಸಿದ್ದರು, ಹೆಣ್ಣು ಮಕ್ಕಳಿಗೆ ಶಾಲೆ ಹಾಗೂ ಹಿಂದುಳಿದ ವರ್ಗದವರ ಮಕ್ಕಳಿಗೆ ಹಾಸ್ಟಲ್ ಸೌಲಭ್ಯವನ್ನು ಒದಗಿಸಿದರು.
ದೇವರಾಜ ಅರಸ್ರವರ ಆಡಳಿತದ ಅವಧಿಯಲ್ಲಿ ಸಾಮಾಜಿಕ ಅನಿಷ್ಠಗಳಾದ ಮಲಹೊರುವ ಪದ್ದತಿ ರದ್ದು ಮಾಡಿದರು, ಅರಸ್ರು ಮುಖ್ಯಮಂತ್ರಿಯಾಗಿದ್ದರೂ ತಮ್ಮ ಊರಿನಲ್ಲಿ ಜನರ ಜೊತೆಯಲ್ಲಿ ಹರಟೆ ಹೊಡೆಯುವುದರ ಜೊತೆಯಲ್ಲಿ ಕೃಷಿಕರಾಗಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು, ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಾಗ ಭೂ ಮಾಲೀಕರು ನ್ಯಾಯಾಲಯಕ್ಕೆ ಮೊರೆ ಹೋಗುತ್ತಾರೆಂಬ ಕಾರಣದಿಂದ ಭೂ ನ್ಯಾಯ ಮಂಡಳಿಗಳನ್ನು ರಚಿಸಿದ್ದರಿಂದ ಅಲ್ಲೇ ತೀಪರ್ು ನೀಡುತ್ತಿದ್ದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ  ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಚಚರ್ಿಸಲಾಗುವುದಲ್ಲದೆ, ಮುಷ್ಕರ ಮಾಡುವುದರಿಂದ ನೀರು ಬರುವುದಿಲ್ಲ, ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚಚರ್ಿಸಿ ನೀರು ತರಬೇಕು,  ತಾಲೂಕಿನ ಎಲ್ಲಾ ಭಾಗಗಳಿಗೆ ನೀರು ತರಲು ನಿರಂತರವಾಗಿ ಪ್ರಯತ್ನಿಸಲಾಗುವುದು ಎಂದರು. 
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ದೇಶದಲ್ಲಿ ಕನರ್ಾಟಕ ರಾಜ್ಯವನ್ನು ಗಟ್ಟಿಗೊಳಿಸಿದ ಕೀತರ್ಿ ದೇವರಾಜುಅರಸುರವರಿಗೆ ಸಲ್ಲುತ್ತದೆ, ಹಿಂದುಳಿದವರ ಪರವಾಗಿ ದುಡಿದ ದೇವರಾಜು ಅರಸುರವರು ಜೀತಪದ್ದತಿ, ಜಾತಿಪದ್ದತಿಯನ್ನು ಹೋಗಲಾಡಿಸಲು ಶ್ರಮಿಸಿದವರು, ಶಿಕ್ಷಣದಿಂದಲೇ ಬಡವರ ಏಳಿಗೆಯೆಂದು ತಿಳಿದು ಅನೇಕ ಬಡಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ನಾವು ಮಾಡುವ ಜಯಂತಿಗಳು ಜಾತಿಗೆ ಸೀಮಿತವಾಗದೆ ಅವರು ಬಿಟ್ಟುಹೋದ ಆದರ್ಶಗಳನ್ನು ಅನುಸರಿಸುವಂತಾಗಬೇಕು ಎಂದರು.
ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ, ಉಪಾಧ್ಯಕ್ಷೆ ನೇತ್ರಾವತಿ, ಪುರಸಭಾ ಸದಸ್ಯರಾದ ಮಲ್ಲೇಶ್, ಇಂದಿರಾ ಪ್ರಕಾಶ್, ರೇಣುಕಮ್ಮ, ರಂಗಸ್ವಾಮಯ್ಯ, ಇ.ಓ.ಕೃಷ್ಣಮೂತರ್ಿ, ಜಿಲ್ಲಾ ಅರಸು ಸಂಘದ ಅಧ್ಯಕ್ಷ ಶ್ರೀನಿವಾಸರಾಜ ಅರಸು, ತಾಲ್ಲೂಕು ಅಧ್ಯಕ್ಷ ನಾಗರಾಜ್ ಅರಸು, ಗೋಪಾಲರಾಜ್ಅರಸ್, ವಿಜಯರಾಜ್ಅರಸ್, ಉಪತಹಶೀಲ್ದಾರ್ ದೊಡ್ಡಮಾರಯ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜಯ್ಯನ ಪಾಳ್ಯದ ನಿವೃತ್ತ ಪ್ರಾಧ್ಯಾಪಕ ಎಸ್.ಆರ್.ಚಂದ್ರರಾಜೇಅರಸ್, ಮಹಮದ್ಗೌಸ್(ಬಾಬುಬೋರ್ವೆಲ್), ವಿದ್ಯಾಥರ್ಿನಿ ಲೇಖನರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ನಿರೂಪಿಸಿದರು. ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರು. ಸಮಾರಂಭದಲ್ಲಿ ಶಾಲಾ ವಿದ್ಯಾಥರ್ಿಗಳಿಗೆ ನೋಟ್ಬುಕ್ ಹಾಗೂ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಮೊರಾಜರ್ಿ ಶಾಲಾ ವಿದ್ಯಾಥರ್ಿಗಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು.
ತಾಲ್ಲೂಕು ಕಛೇರಿಯಿಂದ ಡಿ.ದೇವರಾಜು ಅರಸ್ರವರ ಭಾವಚಿತ್ರ ಬಿ.ಹೆಚ್.ರಸ್ತೆ, ನೆಹರು ಸರ್ಕಲ್, ಹೊಸ ಬಸ್ನಿಲ್ದಾಣದ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ವೀರಗಾಸೆ, ಡೊಳ್ಳುಕುಣಿತ, ಮುಂತಾದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಬಾಕ್ಸ್-1
ಪಾರಂಪರಿಕ ಐತಿಹಾಸಿಕ ಸ್ಥಳಗಳನ್ನು ಉಳಿಸುವ ದೃಷ್ಠಿಯಿಂದ ಪಟ್ಟಣದಲ್ಲಿನ ತೀ.ನಂ.ಶ್ರೀ ಗ್ರಂಥಾಲಯದ ಹಿಂಭಾಗದಲ್ಲಿರುವ ಮೈಸೂರು ಒಡೆಯರ್ ವಂಶಸ್ಥರಾದ 13ನೇ ದೊಡ್ಡ ದೇವರಾಜ ಒಡೆಯರ್ರವರ ಸಮಾಧಿಯಿದ್ದು ಇದನ್ನು ಅರಸು ಸಂಘದವರಿಗೆ ವಹಿಸಿ ಜೀಣರ್ೋದ್ದಾರಕ್ಕೆ ಸಹಾಯ ಮಾಡಬೇಕೆಂದು ಶಾಸಕ ಸಿ.ಬಿ.ಸುರೇಶ್ಬಾಬುರವರಲ್ಲಿ ಮನವಿ.
ನಂಜರಾಜೇಅರಸ್, ಮೈಸೂರು ಇತಿಹಾಸ ತಜ್ಞ
ಬಾಕ್ಸ್-2
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಅರಸು ಭವನ ನಿಮರ್ಾಣಕ್ಕಾಗಿ ಸಿ.ಎಂ.ಸಿದ್ದರಾಮಯ್ಯನವರು ಒಂದು ಕೋಟಿ ರೂ ಬಿಡುಗಡೆ ಮಾಡಲು ಒಪ್ಪಿದ್ದಾರೆ,  ಭವನ ನಿಮರ್ಾಣಕ್ಕೆ ಶೀಘ್ರ ಸ್ಥಳ ಗುತರ್ಿಸಲಾಗುವುದು.
ಾಸಕ ಸಿ.ಬಿ.ಸುರೇಶ್ಬಾಬು, ಶಾಸಕ

ಅರಸು ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪಧರ್ೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ.

ಚಿಕ್ಕನಾಯಕನಹಳ್ಳಿ : ಡಿ.ದೇವರಾಜ್ಅರಸ್ರವರ 99ನೇ ಜನ್ಮದಿನಾಚಾರಣೆ ಅಂಗವಾಗಿ ತಾಲ್ಲೂಕಿನ ವಿದ್ಯಾಥರ್ಿ ನಿಲಯಗಳಲ್ಲಿ ಮಕ್ಕಳಿಗೆ ನಡೆದ ವಿವಿಧ ಸ್ಪಧರ್ೆಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಪ್ರಬಂಧ ಸ್ಪಧರ್ೆಯಲ್ಲಿ ಹುಳಿಯಾರು ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯದ ಎನ್.ಆರ್.ಯುವರಾಜ, ತಿಮ್ಮನಹಳ್ಳಿಯ ಎಸ್.ಎನ್.ರಾಜೇಶ್, ಚಚರ್ಾಸ್ಪದರ್ೆಯಲ್ಲಿ ಹೊಯ್ಸಳಕಟ್ಟೆ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯದ ಕೆ.ಜೆ.ಶ್ರೀಧರ ಹಾಗೂ ತಿಮ್ಮನಹಳ್ಳಿ ವಿದ್ಯಾಥರ್ಿ ನಿಲಯದ ಎನ್.ಅಜಯ್ಕುಮಾರ್, ಭಾವಗೀತೆ/ಜಾನಪದ ಗೀತೆ ಸ್ಪಧರ್ೆಯಲ್ಲಿ ಹುಳಿಯಾರಿನ ಮೆಟ್ರಿಕ್ ಪೂರ್ವಬಾಲಕರ ವಿದ್ಯಾಥರ್ಿ ನಿಲಯದ ಎನ್.ಜಿ.ಬಸವರಾಜು, ಚಿಕ್ಕನಾಯಕನಹಳ್ಳಿಯ ಎಸ್.ಎನ್.ಮುರಳಿ, ಪ್ರಬಂಧ ಸ್ಪದರ್ೆಯಲ್ಲಿ ಚಿಕ್ಕನಾಯಕನಹಳ್ಳಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯದ ಕೆ.ವಿ.ಅನಿತ ಹಾಗೂ ಬಿ.ಆರ್.ಭವ್ಯ, ಚಚರ್ಾ ಸ್ಪದರ್ೆಯಲ್ಲಿ ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯದ ಆರ್.ಎಂ.ಅಮೃತ, ಭಾವಗೀತೆ, ಜಾನಪದ ಗೀತೆ ಸ್ಪದರ್ೆಯಲ್ಲಿ ಪಟ್ಟಣದ ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯದ ಆರ್.ಆರ್.ಸೌಮ್ಯ ಹಾಗೂ ಎಂ.ಜಿ.ತುಂಗ, ಪ್ರಬಂಧ ಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದ ಎಸ್.ಜೆ.ಯಶೋಧ, ಆರ್.ಎನ್.ಸಹನ, ಚಚರ್ಾಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾಥರ್ಿನಿಲಯದ ಸ್ವಾತಿ ಹಾಗೂ ಮಮತ, ಭಾವಗೀತೆ ಹಾಗೂ ಜಾನಪದ ಗೀತೆ ಸ್ಪಧರ್ೆಯಲ್ಲಿ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾಥರ್ಿ ನಿಲಯದ ಜೆ.ಕೆ.ಕುಸುಮ ಹಾಗೂ ವೈ.ಜ್ಯೋತಿ, ಪ್ರಬಂಧ ಸ್ಪಧರ್ೆಯಲ್ಲಿ ಮೊರಾಜರ್ಿ ದೇಸಾಯಿ ಶಾಲೆಯ ಎಂ.ಆರ್.ಧೃವಿಕ ಹಾಗೂ ಪ್ರೀತಿ ಚಿದಾನಂದ, ಚಚರ್ಾಸ್ಪಧರ್ೆಯಲ್ಲಿ ಮೊರಾಜರ್ಿ ಶಾಲೆಯ ಪ್ರೀತಿಚಿದಾನಂದ, ಹಾಗೂ ಎಂ.ಆರ್.ಧೃವಿಕ ಭಾವಗೀತೆ ಸ್ಪಧರ್ೆಯಲ್ಲಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಆರ್.ಕಾವ್ಯ ಹಾಗೂ ಆರ್.ಕುಸುಮ ವಿಜೇತರಾಗಿದ್ದಾರೆ.